Tag: Shamant

  • ವೈಷ್ಣವಿಗೆ ಚಿನ್ನ ಎಂದ ಶಮಂತ್ !

    ವೈಷ್ಣವಿಗೆ ಚಿನ್ನ ಎಂದ ಶಮಂತ್ !

    ಬಿಗ್‍ಬಾಸ್ ಮನೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಶಮಂತ್ ಇದೀಗ ವೈಷ್ಣವಿಗೆ ಚಿನ್ನ ಎಂದು ಕರೆಯುವ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

    ನಿಧಿ ಹಾಗೂ ವೈಷ್ಣವಿ ಬಾತ್ ರೂಮ್ ಏರಿಯಾದಲ್ಲಿ ನಿಂತು ಮುಖಕ್ಕೆ ಫೇಸ್ ಪ್ಯಾಕ್ ಹಾಗೂ ಕ್ರೀಮ್ ಹಚ್ಚಿಕೊಳ್ಳುತ್ತಿದ್ದ ವೇಳೆ ಶಮಂತ್ ಇಬ್ಬರ ಮಧ್ಯೆ ನಿಂತು ಕುಡಿದವರಂತೆ ನಟಿಸಿದ್ದಾರೆ. ಅಲ್ಲದೇ ನಿಧಿ ಸುಬ್ಬಯ್ಯಗೆ ಫೇಸ್ ಪ್ಯಾಕ್ ಹಾಕಿಕೊಳ್ಳಬೇಕಾದರೆ ಚಿನ್ನ ಹುಷಾರು ಕಣ್ಣಿಗೆ ಹೋಗಿ ಬಿಟ್ಟತ್ತು ಎನ್ನುತ್ತಾರೆ. ಆಗ ವೈಷ್ಣವಿ ಎಷ್ಟು ಕಾಳಜಿ ಎಂದು ಹೇಳಿದಾಗ ಶಮಂತ್ ಚಿನ್ನ ನೀನು ಹಾಗೇ ಮಾತನಾಡಬೇಡ ಎಂದು ಹೇಳುತ್ತಾರೆ.

    ಆಗ ನಿಧಿ ಎಷ್ಟು ಚಿನ್ನ ನಿನಗೆ ಎಂದು ಶಮಂತ್ ಕೇಳುತ್ತಾರೆ. ಆಗ ಶಮಂತ್ ನಿಧಿಗೆ ನೀನು ನನ್ನ ಚಿನ್ನ, ವೈಷ್ಣವಿ ನನ್ನ ರನ್ನ ಎಂದು ಹೇಳುತ್ತಾರೆ. ಈ ವೇಳೆ ವೈಷ್ಣವಿ ನೀನು ಯಾರು ಹಾಗಾದ್ರೆ ಅಂದಾಗ, ನಾನು ಮುನ್ನ. ನೀನು ಹೀಗೆ ಹೆಚ್ಚಿಗೆ ಮಾತನಾಡುತ್ತಿದ್ದರೆ ನಿನಗೆ ಗುನ್ನ ಇಟ್ಟು ಬಿಡುತ್ತೇನೆ ಎಂದು ವೈಷ್ಣವಿಗೆ ಹೇಳುತ್ತಾರೆ.

    ನೀನು 6 ವರ್ಷ ವಿಲನ್‍ನನ್ನು ಮನೆಯಲ್ಲಿಯೇ ಇಟ್ಟುಕೊಂಡು ಕಣ್ಣಾ ಮುಚ್ಚಾಲೆ ಆಟ ಆಡಿದ್ಯಾ? ತಾಕತ್ತು ಇರಬೇಕು ಯಾವಾಗಲೂ, ಒಂದೇ ಒಂದು ಸುಳಿವು ನೀನು ಸಿದ್ದಾರ್ಥ್‍ಗೆ ಕೊಟ್ಟಿದ್ದರೆ ನೀನು ಎಲ್ಲೋ ಹೋಗಿ ಬಿಡುತ್ತಿದ್ದೆ ಎಂದು ವಾಲಾಡುತ್ತಾ ಶಮಂತ್ ವೈಷ್ಣವಿಗೆ ಅಗ್ನಿ ಸಾಕ್ಷಿ ಸಿರಿಯಲ್ ಬಗ್ಗೆ ಮಾತನಾಡುತ್ತಾರೆ.

    ಚಿನ್ನ ಆರುವರೆ ವರ್ಷ ನನ್ನ ಲೈಫ್‍ನಲ್ಲಿ ಅರ್ಧಗಂಟೆ 8 ರಿಂದ 8.30ವರೆಗೂ ನಿನಗೋಸ್ಕರ ಎತ್ತಿಟ್ಟು ಬಿಟ್ಟಿದ್ದೆ. ನಂತರ ಬಾರ್ ಕಡೆಗೆ ಹೋಗುತ್ತಿದ್ದೆ ಎಂದು ಹಾಸ್ಯ ಮಾಡಿದ್ದಾರೆ.

  • ವೈಷ್ಣವಿ ಧ್ಯಾನ ನೋಡಿ ಕೈ ಮುಗಿದು ನಕ್ಕ ಮನೆಮಂದಿ!

    ವೈಷ್ಣವಿ ಧ್ಯಾನ ನೋಡಿ ಕೈ ಮುಗಿದು ನಕ್ಕ ಮನೆಮಂದಿ!

    – ವೈಶು ಕಾಲಿಗೆ ನಮಸ್ಕರಿಸಿದ ರಾಜೀವ್

    ಬೆಂಗಳೂರು: ಪ್ರತಿದಿನ ಬೆಳಗ್ಗೆ ಆಗುತ್ತಿದ್ದಂತೆಯೇ ದೊಡ್ಮನೆ ಮಂದಿ ವಾಕಿಂಗ್, ಜಾಗಿಂಗ್ ಅಂತಾ ಬ್ಯುಸಿಯಾಗುತ್ತಾರೆ. ಅದರಲ್ಲೂ ವೈಷ್ಣವಿ ಡಿಫರೆಂಟ್ ಆಗಿ ಯೋಗ, ಧ್ಯಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    ಆದ್ರೆ ಇಷ್ಟು ದಿನ ವೈಷ್ಣವಿ ಪ್ರತಿನಿತ್ಯ ಧ್ಯಾನ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದ ಮನೆಮಂದಿಗೆ ವೈಷ್ಣವಿಯ ಕಳ್ಳಾಟ ಬಹಿರಂಗಗೊಂಡಿದೆ.

    ಹೌದು ನಿನ್ನೆ ಲಿವಿಂಗ್ ಏರಿಯಾದ ಬಳಿ ಕುಳಿತುಕೊಂಡಿದ್ದ ವೈಷ್ಣವಿ ಇದ್ದಕ್ಕಿದಂತೆ ಧ್ಯಾನ ಮಾಡಲು ಶುರುಮಾಡುತ್ತಾರೆ. ಇದನ್ನು ನೋಡಿ ಪ್ರಿಯಾಂಕ, ಶಮಂತ್‍ಗೆ ಈ ರೀತಿಯ ಜಗಳ, ಗದ್ದಲದ ಮಧ್ಯೆ ಇವರು ಹೇಗೆ ಧ್ಯಾನ ಮಾಡುತ್ತಾರೆ ಎಂದು ಕೇಳುತ್ತಾರೆ. ಆಗ ಶಮಂತ್ ಮೊದಲಿಗೆ ಅವರು ಎಷ್ಟೇ ಗಲಾಟೆ ಇದ್ದರೂ ಏಕಾಗ್ರತೆ ಹೊಂದಿರುತ್ತಾರೆ. ಆದ್ರೆ ನಿಜವಾಗಿಯೂ ಅವರು ನಿದ್ದೆಯೇ ಮಾಡುತ್ತಾರೋ ಧ್ಯಾನವೇ ಮಾಡುತ್ತಾರೋ ಗೊತ್ತಿಲ್ಲ. ಮುಖ ಯಾವಗಲೂ ಹಸನ್ಮುಖಿಯಾಗಿಯೇ ಇರುತ್ತದೆ ಎನ್ನುತ್ತಾರೆ.

    ಬಳಿಕ ಬಿಗ್‍ಬಾಸ್ ಈ ವೈಷ್ಣವಿಯವರು ಧ್ಯಾನದ ಹೆಸರಿನಲ್ಲಿ ನಿದ್ದೆ ಮಾಡುತ್ತಿದ್ದಾರೆ. ಬೇಕಾದರೆ ಅವರ ಮುಖದ ಹಾವ-ಭಾವ ನೋಡಿ ಬಿಗ್‍ಬಾಸ್, ತೂಗಡಿಸುತ್ತಿದ್ದಾರೆ ಎಂದು ಹೇಳುತ್ತಾರೆ.

    ನಂತರ ವೈಷ್ಣವಿ ನಿದ್ದೆ ಮಾಡುತ್ತಿರುವುದನ್ನು ಕಂಡು ಎಂತಾ ನಾಟಕ ಎಂದು ಮನೆಮಂದಿಯೆಲ್ಲಾ ರೇಗಿಸುತ್ತಾರೆ. ಈ ವೇಳೆ ಶಮಂತ್, ರಾಜೀವ್ ಎದ್ದು ಬಂದು ವೈಷ್ಣವಿಗೆ ನಮಸ್ಕಾರ ಮಾಡಿ, ನಮಗೂ ಹೇಳಿದ್ದರೆ ಇಷ್ಟು ದಿನ ನಾವು ಹೀಗೆ ಮಾಡುತ್ತಿದ್ವಿ ಎಂದರೆ, ರಾಜೀವ್ ದೇವರೇ ಈ ರೀತಿಯ ಮೆಡಿಟೇಷನ್ ನಮಗೂ ಕಲಿಸಪ್ಪಾ ಎಂದಿದ್ದಾರೆ.

    ಈ ವೇಳೆ ಮಂಜು ಬಿಗ್‍ಬಾಸ್ ಈ ಯಮ್ಮ ಮೋಸ ಮಾಡ್ತಿದ್ದಾಳೆ. ರಾತ್ರಿಯೆಲ್ಲಾ ಈ ಯಮ್ಮಾ ಅದೇ ಮಾಡುವುದು, ಬೆಳಗ್ಗೆ ಎದ್ದು ಯೋಗದ ಹೆಸರಿನಲ್ಲಿ ಮತ್ತೆ ನಿದ್ದೆ ಮಾಡಿ ನಿಮಗೆ ಯಾಮಾರಿಸುತ್ತಿದ್ದಾಳೆ ನೋಡಿಕೊಳ್ಳಿ ಅಂತಾರೆ. ಈ ವೇಳೆ ವೈಷ್ಣವಿ ಮನೆಯವರ ಮಾತನ್ನು ಕೇಳಿ ನಗುತ್ತಾರೆ.

  • ಶಮಂತ್ ಅನ್ವೇಷಣೆಗೆ ಶುಭಾ ಪೂಂಜಾ ರಿವ್ಯೂವ್

    ಶಮಂತ್ ಅನ್ವೇಷಣೆಗೆ ಶುಭಾ ಪೂಂಜಾ ರಿವ್ಯೂವ್

    ಬಿಗ್‍ಬಾಸ್ ತನ್ನ ಮನೆಯ ಸದಸ್ಯರಿಗೆ ಎಲ್ಲ ರೀತಿಯ ಅನುಭವಗಳನ್ನು ನೀಡುತ್ತದೆ. ಇದೀಗ ಮನೆಯ ಎಲ್ಲ ವಸ್ತುಗಳನ್ನ ಬಿಗ್‍ಬಾಸ್ ತೆಗೆದುಕೊಂಡಿದೆ. ಹೋದ ವಸ್ತುಗಳು ಮರಳಿ ಪಡೆಯಬೇಕಾದ್ರೆ ಟಾಸ್ಕ್ ನಲ್ಲಿ ಸದಸ್ಯರು ಗೆಲ್ಲಲಬೇಕು. ನಿನ್ನೆ ಇಡೀ ರಾತ್ರಿ ಗಾರ್ಡನ್ ಏರಿಯಾದಲ್ಲಿ ಹಾಸಿಗೆ, ದಿಂಬು ಇಲ್ಲದೇ ನಿದ್ದೆ ಮಾಡಿದ್ದರು. ಬೆಳಗ್ಗೆ ಹಲ್ಲುಜ್ಜಲು ಬ್ರಷ್ ಗೆ ಪರ್ಯಾಯವಾಗಿ ಹೊಸ ವಸ್ತುವನ್ನ ಶಮಂತ್ ಅನ್ವೇಷಣೆ ಮಾಡಿದ್ದಾರೆ. ಹೊಸ ಅನ್ವಷಣೆಯ ಬ್ರಷ್ ಬಳಸಿರುವ ಶೂಭಾ ಪೂಂಜಾ ಒಳ್ಳೆಯ ರಿವ್ಯೂವ್ ಕೊಟ್ಟಿದ್ದಾರೆ.

    ಮನೆಯಲ್ಲಿ ಹಲ್ಲುಜ್ಜಲು ಬ್ರಷ್ ಇಲ್ಲದ ಕಾರಣ ಬಹುತೇಕರು ಬೆರಳಿಗೆ ಪೇಸ್ಟ್ ಹಾಕಿಕೊಂಡು ಹಲ್ಲುಜ್ಜಿದರು. ಆದ್ರೆ ಶಮಂತ್ ಪಾತ್ರೆ ತೊಳೆಯುವ ತಂತಿ ಬಾರ್ ನಿಂದ ಬ್ರಷ್ ತಯಾರಿಸಿದರು. ತಂತಿಯನ್ನ ಬೆರಳಿಗೆ ಸುತ್ತಿಕೊಂಡು ಅದಕ್ಕೆ ಪೇಸ್ಟ್ ಹಾಕಿ ಹಲ್ಲು ಉಜ್ಜಿದರು. ಈ ವೇಳೆ ಶಮಂತ್ ಆ ರೀತಿ ಹಲ್ಲು ಉಜ್ಜುಬೇಡ ಅಂತ ಕೆಲವರು ಸಲಹೆ ನೀಡಿದರು.

    ಇತ್ತ ಬಿಗ್‍ಬಾಸ್ ಮೇಲೆ ಮುನಿಸಿಗೊಂಡಿದ್ದ ಶುಭಾ, ಪದೇ ಪದೇ ವಸ್ತುಗಳನ್ನ ಹಿಂದಿರುಗಿಸುವಂತೆ ಕೇಳಿ ಕೊಳ್ಳುತ್ತಿದ್ದರು. ಈ ವೇಳೆ ಶಮಂತ್ ಹೇಳಿದಂತೆ ಆತನ ಹೊಸ ಅನ್ವೇಷಣೆಯ ಬ್ರಷ್ ಬಳಸಿ ಹಲ್ಲು ಉಜ್ಜಿದರು. ಹಲ್ಲು ಉಜ್ಜಿದ ಬಳಿಕ ಖುಷಿಯಾಗಿ ಕ್ಯಾಮೆರಾ ಬಂದ ಶುಭಾ, ನನ್ನ ಹಲ್ಲಿನ ಹೊಳಪಿಗೆ ಶಮಂತ್ ಟೂಥ್ ಬ್ರಷ್ ಕಾರಣ ಅಂತ ಒಳ್ಳೆಯ ರಿವ್ಯೂ ನೀಡಿದ್ರು.

  • ಬಿಗ್‍ಬಾಸ್ ಮನೆಯಲ್ಲಿ ಸದ್ದು ಮಾಡ್ತಿದೆ ಶಮಂತ್ ಸಾಂಗ್!

    ಬಿಗ್‍ಬಾಸ್ ಮನೆಯಲ್ಲಿ ಸದ್ದು ಮಾಡ್ತಿದೆ ಶಮಂತ್ ಸಾಂಗ್!

    ಬಿಗ್‍ಬಾಸ್ ಮನೆಯಲ್ಲಿ ಶಮಂತ್ ವೀಕ್ ಕಂಟೆಸ್ಟೆಂಟ್ ಎಂದು ಹೇಳುತ್ತಿದ್ದ ಸ್ಪರ್ಧಿಗಳಿಗೆ ಬ್ರೋಗೌಡ ಇದೀಗ ಮನರಂಜನೆ ನೀಡುವ ಮೂಲಕ ಉತ್ತರ ನೀಡುತ್ತಿದ್ದಾರೆ. ಹಲವು ಟ್ಯಾಲೆಂಟ್ ಹೊಂದಿದ್ದರೂ ಇಷ್ಟು ದಿನ ಮೌನವಾಗಿದ್ದ ಶಮಂತ್ ಸದ್ಯ ಬಿಗ್ ಮನೆಯಲ್ಲಿ ಕಳೆದ ವಾರದಿಂದ ತಮ್ಮ ಆಟ ಶುರುಮಾಡಿದ್ದಾರೆ.

    ಹೌದು, ನಿನ್ನೆ ಶಮಂತ್ ಈಜುಕೊಳದ ಬಳಿ ಮನೆ ಸದಸ್ಯರ ಮುಂದೆ ‘ನಾಳೆ ಏನು ಆಯ್ತಾದೆ ಅಂತ ಯಾರಿಗ್ ಗೊತ್ತಾಣ್ಣ,…’ ಎಂದು ಸಾಂಗ್‍ವೊಂದನ್ನು ಹಾಡಿದ್ದಾರೆ. ವಿಶೇಷವೇನಪ್ಪಾ ಅಂದರೆ ಈ ಸಾಂಗ್‍ನ ಮಧ್ಯದಲ್ಲಿ ಅರವಿಂದ್ ಅಂದ್ರೆ ಕ್ಲಾಸೂ, ಪ್ರಶಾಂತ್ ಬಂದ್ರೆ ಕೇಸು, ರಘು ಹಾರ್ಟ್ ಸಿಕ್ಸಟಿನೂ, ರಾಜೀವ್ ಖಾಲಿ ಪ್ರೋಟಿನ್, ದಿವ್ಯಾ ಯೆಸೂ ಬೇಕು, ದಿವ್ಯಾ ಯೂ ಸೇಫು, ಶುಭ ಅಂದ್ರೆ ಜಂಪು, ನಿಧಿ ಬಣ್ಣ ಕೆಂಪು, ಮಂಜು ಎಂರ್ಟಟೈನರೂ, ವಿಶ್ವ ಒಬ್ಬ ಸಿಂಗರ್, ವೈಷು ಅಡುಗೆ ಸೂಪರೂ, ಚಕ್ರಿ ಒಬ್ಬ ರೈಟರೂ ಎಂದು ಮನೆಯ ಎಲ್ಲಾ ಸ್ಪರ್ಧಿಗಳನ್ನು ಬಣ್ಣಿಸಿದ್ದಾರೆ.

    ಅಷ್ಟೇ ಅಲ್ಲದೇ ಸಾಂಗ್‍ನ ಕೊನೆಯ ಸಾಲಿನಲ್ಲಿ ‘ವಿನ್ನರೂ ಯಾರು ಅಂತ ಡಿಸೈಡ್ ಆಗ್ಬೇಡಿ ಪಕ್ಕದಲ್ಲೇ ಕೂತಿರಬಹುದು ಹುಷಾರಾಗಿ..’ ಎಂದು ಚಮಕ್ ಕೂಡುವಂತೆ ಸಾಂಗ್ ಹಾಡಿದ್ದಾರೆ. ಈ ವೇಳೆ ಕೊನೆಯ ಸಾಲನ್ನು ಕೇಳಿ ಅಚ್ಚರಿಯಿಂದ ಮನೆಮಂದಿಯೆಲ್ಲಾ ಜೋರಾಗಿ ಕಿರುಚುತ್ತಾ ಚಪ್ಪಾಳೆಯನ್ನು ತಟ್ಟುತ್ತಾರೆ.

    ಒಟ್ಟಾರೆ ಇಷ್ಟು ದಿನ ಶಮಂತ್ ಆ್ಯಕ್ಟಿವ್ ಆಗಿಲ್ಲ ಎಂದು ಹೇಳಿದವರು ನಿನ್ನೆ ಶಮಂತ್ ಸಾಂಗ್ ಕೇಳಿ ಸೂಪರ್, ಲವ್ಲಿ, ಫೆಂಟಾಸ್ಟಿಕ್ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮನೆಮಂದಿಗಷ್ಟೇ ಅಲ್ಲದೇ ಇಷ್ಟು ದಿನ ಕಾಯುತ್ತಿದ್ದ ವೀಕ್ಷಕರಿಗೂ ಶಮಂತ್ ಮನರಂಜನೆಯ ಕಚಗುಳಿ ನೀಡಿದ್ದಾರೆ ಎಂದೇ ಹೇಳಬಹುದು.

  • ದಿವ್ಯಾ-ಅರವಿಂದ್ ಲವ್ ಸ್ಟೋರಿಗೆ ಶಮಂತ್ ಬಳಿಯಲ್ಲಿದೆ ಸಾಕ್ಷಿ!

    ದಿವ್ಯಾ-ಅರವಿಂದ್ ಲವ್ ಸ್ಟೋರಿಗೆ ಶಮಂತ್ ಬಳಿಯಲ್ಲಿದೆ ಸಾಕ್ಷಿ!

    ಬಿಗ್‍ಬಾಸ್ ಮನೆಯಲ್ಲಿ ಅರವಿಂದ್, ದಿವ್ಯಾ ಲವ್ ಸ್ಟೋರಿ ನಡೆಯುತ್ತಿದೆ ಎಂಬುವುದಕ್ಕೆ ಶಮಂತ್ ಸಾಕ್ಷಿ ಸಮೇತವಾಗಿ ಕಿಚ್ಚ ಸುದೀಪ್ ಎದುರಿಗೆ ಸಾಬೀತು ಪಡಿಸಿದ್ದಾರೆ.

    ಪ್ರತಿವಾರದಂತೆ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ನಿನ್ನೆ ಯೆಸ್ ಆರ್ ನೋ ರೌಂಡ್ಸ್ ನಡೆಯಿತು ಈ ವೇಳೆ ಕಿಚ್ಚ ಸುದೀಪ್ ದಿವ್ಯಾ ಯು ಅವರಿಗೆ ಇತ್ತೀಚೆಗೆ ರಾತ್ರಿ ಹೊತ್ತು ನಿದ್ದೆಯೇ ಬರುತ್ತಿಲ್ಲ ಎಂದು ಪ್ರಶ್ನೆ ಕೇಳುತ್ತಾರೆ.

    ಆಗ ಮನೆಮಂದಿಯೆಲ್ಲಾ ಯೆಸ್ ಎಂದು ಬೋರ್ಡ್ ತೋರಿಸುತ್ತಾರೆ. ಈ ವೇಳೆ ಶಮಂತ್ ಅರವಿಂದ್ ಮಲಗುವವರೆಗೂ ದಿವ್ಯಾ ಮಲಗುವುದಿಲ್ಲ. ಎಂಬುದಕ್ಕೆ ನನ್ನ ಕತ್ತು ಹಿಡಿದುಕೊಂಡಿರುವುದೇ ಸಾಕ್ಷಿ. ನಿನ್ನೆ ಸರಿಯಾಗಿರುವ ಬಟ್ಟೆಗಳನ್ನು ಮತ್ತೆ ಮತ್ತೆ ಮಡಚಿಡುತ್ತಿದ್ದರು. ಅರವಿಂದ್ ಅವರು ಎಲ್ಲಿಯವರೆಗೂ ಮಲಗಲ್ಲವೋ ಅಲ್ಲಿಯವರೆಗೂ ಬಟ್ಟೆ ಮಡಚುತ್ತಲೇ ಇರುತ್ತಿದ್ದರು. ನಾನು ನೋಡುವವರೆಗೂ ನೋಡಿದೆ. ಕೊನೆಗೆ ಕತ್ತು ನೋವು ಬಂತು. ಹಾಗಾಗಿ ಈ ಕಡೆ ತಿರುಗಿಕೊಂಡು ಮಲಗಿಕೊಂಡೆ. ಆದರೆ ಬೆಳಗ್ಗೆ ನೋಡಿದರೆ ಕತ್ತು ಹಿಡಿದುಕೊಂಡಿದೆ ಎಂದು ಹೇಳಿದ್ದಾರೆ.

    ಇನ್ನೂ ಈ ವೇಳೆ ನಿಧಿ ಸುಬ್ಬಯ್ಯ, ಅವನು ನಿದ್ದೆ ಮಾಡಿಕೊಂಡು ಗೊರಕೆ ಹೊಡೆಯುವಾಗ, ದಿವ್ಯಾ ಕೈನಲ್ಲಿ ಹಾರ್ಟ್ ಚಿಹ್ನೆ ಮಾಡಿ ತೋರಿಸುತ್ತಿರುತ್ತಾರೆ. ಆದಾದ ಮೇಲೆ ಬೆಳಗ್ಗೆ ಎದ್ದಿದ ಕೂಡಲೇ ಇಬ್ಬರು ಎಂದು ಒಬ್ಬರಿಗೊಬ್ಬರು ತಬ್ಬಿಕೊಳ್ಳುತ್ತಾರೆ. ಆಗ ದಿವ್ಯಾ ಅರವಿಂದ್‍ನನ್ನು ಫುಲ್ ತಬ್ಬಿಕೊಂಡಿದ್ದರೆ, ಅರವಿಂದ್ ಒಂದು ಕೈನಲ್ಲಿ ತಬ್ಬಿಕೊಂಡು ಮತ್ತೊಂದು ಕೈನಲ್ಲಿ ಮೂಗಿಗೆ ಕೈ ಹಾಕಿಕೊಂಡು ಗೊಣ್ಣೆ ತೆಗೆಯುತ್ತಿರುತ್ತಾನೆ ಎಂದು ಹೇಳುತ್ತಾರೆ.

    ಒಟ್ಟಾರೆ ನಿಧಿ ಶಮಂತ್ ಹಾಗೂ ನಿಧಿ ಸುಬ್ಬಯ್ಯ ಮಾತು ಕೇಳಿ ಮನೆ ಮಂದಿ ಜೊತೆ ಕಿಚ್ಚ ಕೂಡ ಜೋರಾಗಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ.

  • ಬಿಗ್‍ಬಾಸ್ ಮನೆಯಲ್ಲಿ ಶೈನ್ ಆಗುತ್ತಿರುವ ಶಮಂತ್!

    ಬಿಗ್‍ಬಾಸ್ ಮನೆಯಲ್ಲಿ ಶೈನ್ ಆಗುತ್ತಿರುವ ಶಮಂತ್!

    ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಬಂದ ಎಲ್ಲ ಸದಸ್ಯರು ಒಂದೊಂದು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಎಲ್ಲರ ಮಧ್ಯೆ ಡಿಫರೆಂಟ್ ಆಗಿ ‘ಬಾ ಗುರು’ ಡೈಲಾಗ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್ ಆಗಿದ್ದ ಶಮಂತ್ ಕೂಡ ಒಬ್ಬರು.

    ಹಲವಾರು ಪ್ರತಿಭೆ ಹೊಂದಿರುವ ‘ಬ್ರೋ ಗೌಡ’ ಶಮಂತ್ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಲಿಂದಲೂ ಆದ್ಯಾಕೋ ಸೈಲೆಂಟ್ ಆಗಿದ್ದರು. ಹೀಗಾಗಿ ಮನೆಯ ಎಲ್ಲ ಸ್ಪರ್ಧಿಗಳು ಶಮಂತ್ ಮಾತನಾಡುವುದಿಲ್ಲ, ಸೈಲೆಂಟ್, ಬೆರೆಯುವುದು ಕಡಿಮೆ ಹೀಗೆ ಹಲವಾರು ರೀಸನ್ ಹೇಳುತ್ತಿದ್ದರು. ಆದ್ರೆ ಇದೀಗ ಮನೆಯ ಎಲ್ಲಾ ಸದಸ್ಯರ ಆರೋಪಗಳಿಗೆ ಸೆಡ್ಡು ಹೊಡೆಯುವಂತೆ ಶಮಂತ್ ಈ ವಾರ ಬಿಗ್‍ಬಾಸ್ ಮನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

    ಯೆಸ್, ಇಷ್ಟು ದಿನ ಸೈಲೆಂಟ್ ಆಗಿದ್ದ ಶಮಂತ್ ಇದೀಗ ರೊಚ್ಚಿಗೆದ್ದು ನಾನು ಯಾರಿಗೂ ಕಡಿಮೆ ಇಲ್ಲ ಎಂಬುವಂತೆ ಎಂರ್ಟಟೈನ್ ಮೆಂಟ್ ನೀಡಲು ಸ್ಟಾರ್ಟ್ ಮಾಡಿದ್ದಾರೆ. ನಿನ್ನೆ ಶಮಂತ್ ಬೆಡ್ ರೂಮ್ ಏರಿಯಾದಲ್ಲಿ ಮನೆಯ ಕೆಲವು ಮಂದಿ ಹೇಗೆ ನಡೆಯುತ್ತಾರೆ ಎಂಬುವುದನ್ನು ಅಭಿನಯ ಮಾಡಿ ತೋರಿಸಿದ್ದಾರೆ.

    ಮೊದಲಿಗೆ ವೈಷ್ಣವಿ ನಡಿಗೆ ತೋರಿಸಿದ ಶಮಂತ್, ಬಳಿಕ ನಿಧಿ ಕೈ ಕಟ್ಟಿ ನಡೆದುಕೊಂಡು ಹೋಗುವಂತೆ ನಡೆಯುತ್ತಾರೆ. ನಂತರ ಚಕ್ರವರ್ತಿ ಜೇಬಿನಲ್ಲಿ ಕೈ ಹಿಡಿದುಕೊಂಡು ನಡೆದುಕೊಂಡು ಹೋಗುವಂತೆ ಹೋಗುತ್ತಾರೆ. ಇದಾದ ಬಳಿಕ ಅರವಿಂದ್, ಪ್ರಶಾಂತ್ ಸಂಬರ್ಗಿ, ಮಂಜು, ವಿಶ್ವನಾಥ್, ಶುಭ ಪೂಂಜಾ ನಡೆಯುವುದನ್ನು ತೋರಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಎಕೋ ವಾಯ್ಸ್‍ನಲ್ಲಿ ಮಾತನಾಡುವ ಮೂಲಕ ಮನೆಯ ಸದಸ್ಯರ ಮನಗೆದ್ದಿದ್ದರು.

    ಒಟ್ಟಾರೆ ಎಲೆಮರಿ ಕಾಯಿಯಂತೆ ಪ್ರತಿಭೆಗಳನ್ನು ತಮ್ಮಳೊಗೆ ಅಡವಿಸಿಕೊಂಡಿದ್ದ ಶಮಂತ್ ಇದೀಗ ಗರಿಗೆದರಿದ ನವಿಲಿನಂತೆ ಮಿಂಚುತ್ತಿದ್ದಾರೆ ಎಂದರೆ ತಪ್ಪಾಗಲಾರದು.

  • ಪ್ರಿಯಾಂಕ ಎಂಟ್ರಿಯಾಗ್ತಿದ್ದಂತೆ ಪಂಚಿಂಗ್ ಡೈಲಾಗ್ ಹೊಡೆದ ಶಮಂತ್!

    ಪ್ರಿಯಾಂಕ ಎಂಟ್ರಿಯಾಗ್ತಿದ್ದಂತೆ ಪಂಚಿಂಗ್ ಡೈಲಾಗ್ ಹೊಡೆದ ಶಮಂತ್!

    ಬಿಗ್‍ಬಾಸ್ ಶೋನಲ್ಲಿ ದಿನೇ ದಿನೆ ಕಾಂಪಿಟೇಷನ್ ಹೆಚ್ಚಾಗುತ್ತಿದೆ. ಕಳೆದ ವಾರ ಬಿಗ್‍ಬಾಸ್ ಮನೆಗೆ ವೈಲ್ಡ್‍ಕಾರ್ಡ್ ಮೂಲಕ ಚಕ್ರವರ್ತಿ ಚಂದ್ರಚೂಡರವರು ಆಗಮಿಸಿದ್ದರು. ಇದೀಗ ದೊಡ್ಮನೆ ಸ್ಪರ್ಧಿಗಳಿಗೆ ಕಾಂಪಿಟೇಷನ್ ನೀಡಲು ಮತ್ತೋರ್ವ ಹೊಸ ಸ್ಪರ್ಧಿ ಎಂಟ್ರಿ ಕೊಟ್ಟಿದ್ದಾರೆ.

    ಇಷ್ಟು ದಿನ ಎಷ್ಟೇ ಟ್ರೈ ಮಾಡಿದರೂ ಒಂದು ಹುಡುಗಿಯೂ ಬೀಳದ ಶಮಂತ್ ಇನ್ನೂ ಸೈಲೆಂಟ್ ಆಗಿದ್ದರೆ ನಡೆಯುವುದಿಲ್ಲ ಎಂದು ನಿನ್ನೆ ಪಂಚಿಂಗ್ ಡೈಲಾಗ್ ಹೊಡೆಯುವ ಮೂಲಕ ವಾಯ್ಸ್ ರೈಸ್ ಮಾಡಿದ್ದಾರೆ. ಹೌದು ಶಮಂತ್, ನಿನ್ನೆ ಮನೆಗೆ ಬಂದ ಪ್ರಿಯಾಂಕಗೆ ಎಲ್ಲರ ಮುಂದೆ ನಿಮ್ಮ ಊಟ ಆಯಿತಾ? ಎಂದು ಕೇಳುತ್ತಾರೆ. ಆಗ ಇಲ್ಲ ಎಂದು ಪ್ರಿಯಾಂಕ ಹೇಳಿದಾಗ, ಡಿಫರೆಂಟ್ ಅಂದರೆ ‘ಚಿಕ್ಕು ಚಿಕನ್’ ಎರಡು ಮನೆಗೆ ಬಂದಿದ್ದಾರೆ ಎಂದು ಡೈಲಾಗ್ ಹೊಡೆದಿದ್ದಾರೆ.

    ಆನ್ ದಿ ಸ್ಪಾರ್ಟ್ ಶಮಂತ್ ಹೊಡೆದ ಪಂಚಿಂಗ್ ಡೈಲಾಗ್ ಕೇಳಿ ಅಚ್ಚರಿಗೊಂಡ ಮನೆಯ ಮಂದಿ ಕಮಾನ್ ಶಮಂತ್, ಕಮಾನ್ ಶಮಂತ್ ಎಂದು ಎದ್ದು ನಿಂತು ಜೋರಾಗಿ ಚಪ್ಪಾಳೆ ಹೊಡೆಯುತ್ತಾ ಹಾಸ್ಯ ಮಾಡಿದ್ದಾರೆ.

    ನಿನ್ನೆ ಬಿಗ್‍ಬಾಸ್ ಮನೆಗೆ ಚಿಕನ್ ಹಿಡಿದುಕೊಂಡು ವೈಲ್ಡ್ ಕಾರ್ಡ್ ಮೂಲಕ ಪ್ರಿಯಾಂಕ ತಿಮ್ಮೇಶ್ ಎಂಟ್ರಿ ನೀಡಿದ್ದಾರೆ. ಮೊದಲಿಗೆ ಬಂದ ಕೂಡಲೇ, ನನ್ನ ಹೆಸರು ಪ್ರಿಯಾಂಕ ತಿಮ್ಮೇಶ್, ನಾನು ಭದ್ರಾವತಿ ಹುಡುಗಿ. ನನ್ನ ವೃತ್ತಿ ಜೀವನ ಆರಂಭವಾಗಿದ್ದು ಪ್ರೀತಿಯಿಂದ ಸಿರಿಯಲ್‍ನಿಂದ ಬಳಿಕ ನಾನು ಮೊದಲ ಬಾರಿಗೆ ಗಣಪ ಸಿನಿಮಾದಲ್ಲಿ ಅಭಿನಯಿಸಿದೆ. ನಂತರ ಪಟಾಕಿ, ಭೀಮ ಸೇನಾ ನಳ ಮಹಾರಾಜ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಶುಗರ್ ಲೇಸ್ ಹಾಗೂ ಅರ್ಜುನ್ ಗೌಡ ನನ್ನ ಮುಂದಿನ ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದೆ ಎಂದು ಮನೆಯ ಸದಸ್ಯರೊಂದಿಗೆ ತಮ್ಮ ಪರಿಚಯ ಮಾಡಿಕೊಂಡರು.

    ನಿಮ್ಮೆಲ್ಲರನ್ನು ಇಷ್ಟು ದಿನ ನಾನು ಟಿವಿಯಲ್ಲಿ ನೋಡುತ್ತಿದ್ದೆ. ಇದೀಗ ಏಕ್ಸೈಟ್ ಆಗಿದ್ದೇನೆ. ಮುಂದೆ ಏನು ಎಂಬುವುದು ನನಗೆ ಗೊತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     

  • ದಿವ್ಯಾ ಸುರೇಶ್‍ರನ್ನೇ ಟಾರ್ಗೆಟ್ ಮಾಡ್ತಿರೋದ್ಯಾಕೆ ಪ್ರಶಾಂತ್?

    ದಿವ್ಯಾ ಸುರೇಶ್‍ರನ್ನೇ ಟಾರ್ಗೆಟ್ ಮಾಡ್ತಿರೋದ್ಯಾಕೆ ಪ್ರಶಾಂತ್?

    ಬಿಗ್‍ಬಾಸ್ ಮನೆಯಲ್ಲಿ ದಿನೇ ದಿನೆ ಕಾಂಪಿಟೇಷನ್ ಹೆಚ್ಚಾಗುತ್ತದೆ. ಸದ್ಯ ನಿನ್ನೆ ಎಲಿಮೀನೆಷನ್ ನಂತರ ಪ್ರಶಾಂತ್ ಸಂಬರ್ಗಿ ಮೈಂಡ್ ಗೇಮ್ ಆಡಲು ಸ್ಟಾರ್ಟ್ ಮಾಡಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ತಾವು ಉಳಿಯಬೇಕಾದರೆ ತಮಗೆ ಕಾಂಪಿಟೇಷನ್ ನೀಡುತ್ತಿರುವ ಸ್ಪರ್ಧಿ ದಿವ್ಯಾ ಸುರೇಶ್‍ರನ್ನು ಸೋಲಿಸಬೇಕೆಂದು ಪ್ರಶಾಂತ್ ನಿನ್ನೆ ಶಮಂತ್ ಜೊತೆ ಕುಳಿತು ಚರ್ಚೆ ನಡೆಸಿದ್ದಾರೆ.

    ಈ ಮನೆಯಲ್ಲಿ ಕಾಂಪಿಟೇಷನ್ ಇರುವುದೆಂದರೆ ನನಗೆ, ನಿನಗೆ, ದಿವ್ಯಾ ಸುರೇಶ್, ಶುಭಾ ಪೂಂಜಾ, ನಿಧಿ, ಅರವಿಂದ್ ಎಂದು ಪ್ರಶಾಂತ್ ಹೇಳುತ್ತಾರೆ. ಆಗ ಶಮಂತ್ ಶುಭ, ನಿಧಿ ಫಿಲ್ಮ್ ಸ್ಟಾರ್ಸ್ ಹಾಗೂ ಅರವಿಂದ್ ಒಳ್ಳೆ ಆಟಗಾರ ಹಾಗಾಗಿ ಈ ವಾರ ಮನೆಯಿಂದ ಈ ಮೂವರು ಹೋಗುವುದಿಲ್ಲ ಅನಿಸುತ್ತದೆ. ಆದರೆ ಮಿಕ್ಕಿರುವ ಡಮ್ಮಿ ಪೀಸ್‍ಗಳೆಂದರೆ ನಾವೇ ಎಂದು ಶಮಂತ್, ಪ್ರಶಾಂತ್‍ಗೆ ಹೇಳುತ್ತಾ ನಗುತ್ತಾರೆ.

    ಆಗ ಪ್ರಶಾಂತ್ ಹೌದು, ಉಳಿದ ಮೂವರಲ್ಲಿ ನಾನು, ನೀನು, ದಿವ್ಯಾ ಸುರೇಶ್ ಬರುತ್ತೇವೆ. ಹಾಗಾಗಿ ಟಾರ್ಗೆಟ್ ಮಾಡಿ ಎಲ್ಲ ಗೇಮ್ ಕೂಡ ಆಡಿ ಅವಳನ್ನೇ ಹೊಡೆಯಬೇಕು. ಇವತ್ತಿಗೆ ಲೈಫ್ ಮುಗಿಯುತ್ತಿದೆ ಇನ್ನೂ ಸಾಯುತ್ತಿದ್ದೇವೆ ಅಂದುಕೊಂಡು ಆಟ ಆಡಬೇಕು. ದಿವ್ಯಾ ಸುರೇಶ್, ಕ್ಯಾಪ್ಟನ್ ಮಂಜು ಅವಳ ಪರವಾಗಿರುತ್ತಾನೆ ಎಂಬ ವಿಶ್ವಾಸ ಹೊಂದಿದ್ದಾಳೆ. ದಿವ್ಯಾ ನಾನು ಡಿಫರೆಂಟ್, ಸ್ಟ್ರಾಂಗ್, ನಾನು ಟಾಸ್ಕ್‍ನಲ್ಲಿ ಪಂಟ್ರು ಎಂದು ಅವಳಿಗೆ ಅವಳೇ ಹೇಳಿಕೊಳ್ಳುತ್ತಾಳೆ. ಹೇಳಬೇಕೆಂದರೆ ಅವಳು ನೋಡುವುದಕ್ಕೆ ಚೆನ್ನಾಗಿದ್ದಾಳೆ, ಸೂಪರ್ ಆಗಿರುವ ಮೇಕಪ್ ಹಾಕುತ್ತಾಳೆ ಅಷ್ಟೇ. ಹಾಗಾಗಿ ನೀನು ಮೊಟಿವೇಟ್ ಮಾಡಿಕೊಂಡು ಈ ವಾರ ಗೇಮ್ ಚೆನ್ನಾಗಿ ಆಡಿದರೆ ಮುಂದಕ್ಕೆ ಹೋಗುತ್ತೇವೆ. ನಾನು ನೀನು ಸೇವ್ ಆಗಬೇಕೆಂದರೆ ನಮ್ಮ ಟಾರ್ಗೆಟ್ ದಿವ್ಯಾ ಸುರೇಶ್‍ರನ್ನು ಮಾಡಿಕೊಳ್ಳಬೇಕು.

    ಡಿಎಸ್ ಗಿಂತ ನಾನು, ಸುಪಿರೀಯರ್, ಟ್ಯಾಲೆಂಟೆಡ್, ಡಿಎಸ್‍ಗಿಂತ ಚೆನ್ನಾಗಿ ಆಟ ಆಡುತ್ತೇನೆ ಅನ್ನುವುದನ್ನು ತಲೆಯಲ್ಲಿ ಇಟ್ಟುಕೊಂಡು ಆಟ ಆಡಬೇಕು ಎನ್ನುತ್ತಾರೆ. ಸದ್ಯ 5 ಜನದಲ್ಲಿರೀಗ ಅವಳೇ ವೀಕೆಸ್ಟ್ ಕಂಟೆಸ್ಟೆಂಟ್. ದಿವ್ಯಾ ಸುರೇಶ್ ಜೊತೆ ಫ್ರೆಂಡ್ ಶಿಪ್ ಮಾಡುವುದನ್ನು ಹೇಳಿಕೊಟ್ಟೆ, ಈಗ ದಿವ್ಯಾ ಸುರೇಶ್‍ನ ಹೊಡೀಬೇಕು ನೀನು ಎಂದು ಪ್ರಶಾಂತ್ ಶಮಂತ್‍ಗೆ ಹೇಳಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ರಿಸರ್ವೇಶನ್ ಇದೆ ಅಂದಿದ್ಯಾಕೆ ಶಮಂತ್!

    ಬಿಗ್‍ಬಾಸ್ ಮನೆಯಲ್ಲಿ ರಿಸರ್ವೇಶನ್ ಇದೆ ಅಂದಿದ್ಯಾಕೆ ಶಮಂತ್!

    ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ಬ್ಯಾಚುಲರ್ ಹುಡುಗರಲ್ಲಿ ಬ್ರೋ ಗೌಡ ಶಮಂತ್ ಕೂಡ ಒಬ್ಬರು. ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಾಗಿನಿಂದಲೂ ತಮ್ಮ ಜೋಡಿಹಕ್ಕಿಗಾಗಿ ಹುಡುಕಾಟ ನಡೆಸುತ್ತಿರುವ ಶಮಂತ್‍ಗೆ ಇಲ್ಲಿಯವರೆಗೂ ಒಂದು ಹುಡುಗಿಯೂ ಬೀಳಲಿಲ್ಲ. ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ಶಮಂತ್ ಬಿಗ್‍ಬಾಸ್ ಮನೆಯಲ್ಲಿ ಎಲ್ಲರೂ ರಿಸರ್ವಡ್ ಆಗಿದ್ದಾರೆ ಎಂಬ ಸತ್ಯವನ್ನು ಬಾಯಿಬಿಟ್ಟಿದ್ದಾರೆ.

    ಹೌದು, ನಿನ್ನೆ ಶಮಂತ್ ಬಿಗ್‍ಬಾಸ್ ಮನೆಯಲ್ಲಿ ಎಲ್ಲ ಹುಡುಗಿಯರು ಬುಕ್ಡ್ ಆಗಿದ್ದಾರೆ ಎಂದು ಶಮಂತ್ ಹೇಳಿದ್ದಾರೆ. ಆಗ ಸುದೀಪ್ ರಿಸರ್ವೇಶನ್‍ನಲ್ಲಿ ಎರಡು ರೀತಿಯ ರಿಸರ್ವೇಶನ್ ಇದೆ. ಒಂದು ಹಿಂದಿನ ಕಾಲದಲ್ಲಿ ಬಸ್ ಹತ್ತುವುದಕ್ಕಿಂತ ಮುನ್ನ ಕಿಟಕಿ ಮೂಲಕ ಕರ್ಚೀಫ್ ಹಾಕುತ್ತಿದ್ದರು. ಅಂದರೆ ಅವರು ಹೋಗುವುದರ ಒಳಗಡೆ ಬೇರೆ ಯಾರಾದರೂ ಹೋದರೆ ಕರ್ಚೀಫ್ ತೆಗೆದು ಮತ್ತೊಬ್ಬರು ಕುಳಿತುಕೊಳ್ಳಬಹುದಿತ್ತು. ಮತ್ತೊಂದು ಇಂದಿನ ಕಾಲದ ಆನ್‍ಲೈನ್ ಬುಕ್ಕಿಂಗ್ ಅದು ಪಕ್ಕಾ ರಿಸರ್ವೇಶನ್ ಎಂದು ಹೇಳುತ್ತಾರೆ.

    ಬಳಿಕ ಬಿಗ್‍ಬಾಸ್ ಮನೆಯಲ್ಲಿ ಬುಕ್ಕಿಂಗ್ ಮಾಡಿರುವವರು ಯಾರು ಎಂದು ಕಿಚ್ಚ ಕೇಳಿದಾಗ, ಅರವಿಂದ್ ಹಾಗೂ ಮಂಜು ರಿಸರ್ವ್ ಮಾಡಿದ್ದಾರೆ ಅಂತ ಹೇಳುವ ಮೂಲಕ ಬುಕ್ಕಿಂಗ್ ವಿಚಾರವನ್ನು ಶಮಂತ್ ರಿವೀಲ್ ಮಾಡಿದ್ದಾರೆ. ಅಲ್ಲದೇ ಪ್ರಶಾಂತ್ ಬಳಿ ಟಿಷ್ಯೂ ರಿಸರ್ವೇಶನ್ ಇದೆ ಎಂದು ಕೂಡ ಹೇಳುತ್ತಾರೆ. ಈ ವೇಳೆ ಶಮಂತ್ ಆನ್ ದಿ ಸ್ಪಾಟ್ ಡೈಲಾಂಗ್ ಕೇಳಿದ ಮನೆ ಮಂದಿಯೆಲ್ಲಾ ಹೊಟ್ಟೆ ಹುಣ್ಣಾಗವಂತೆ ನಗುತ್ತಾರೆ.

    ನಂತರ ಸುದೀಪ್ ಯಾವುದಾದರೂ ಒಂದು ಕರ್ಚೀಫ್ ಎತ್ತಿ ಕುರುವ ಯೋಚನೆ ಇದ್ಯಾ ಎಂದಾಗ, ಶಮಂತ್ ಇಲ್ಲಿ ಎಲ್ಲರೂ ಬುಕ್ ಮಾಡಿರುವ ಕಾರಣ ನಾನಿನ್ನು ಯಾವ ಕರ್ಚೀಫ್ ಎತ್ತಿ ಕೂರುವ ಯೋಚನೆ ಇಲ್ಲ. ಪಾಪ ಹುಡುಗರು ಹೇಗೋ ಬದುಕಿಕೊಳ್ಳಲಿ ಎನ್ನುವಂತೆ ಹೇಳುತ್ತಾರೆ.

  • ಹುಡುಗೀರನ್ನು ಪಟಾಯಿಸಲು ಶಮಂತ್‍ಗೆ ಪ್ರಶಾಂತ್ ಕೊಟ್ಟ ಟಿಪ್ಸ್ ಏನು ಗೊತ್ತಾ?

    ಹುಡುಗೀರನ್ನು ಪಟಾಯಿಸಲು ಶಮಂತ್‍ಗೆ ಪ್ರಶಾಂತ್ ಕೊಟ್ಟ ಟಿಪ್ಸ್ ಏನು ಗೊತ್ತಾ?

    ಪ್ರತಿವಾರದಂತೆ ಈ ವಾರ ಕೂಡ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಕಾರ್ಯಕ್ರಮ ನಡೆಯಿತು. ಈ ವೇಳೆ ಬಿಗ್‍ಬಾಸ್ ಮನೆಯಲ್ಲಿ ಹುಡುಗಿಯರನ್ನು ಪಟಾಯಿಸಲು ಏನು ಮಾಡಬೇಕು ಎಂಬ ಟಾಪಿಕ್ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿದೆ.

    ಹೌದು.. ಕಳೆದ ವಾರ ಪ್ರಶಾಂತ್ ಸಂಬರ್ಗಿ ಹುಡುಗಿಯನ್ನು ಪಟಾಯಿಸುವುದು ಹೇಗೆ ಎಂದು ನೀಡಿದ ಕೆಲವು ಟಿಪ್ಸ್‍ಗಳನ್ನು ಶಮಂತ್ ಕಿಚ್ಚನ ಮುಂದೆ ರಿವೀಲ್ ಮಾಡಿದ್ದಾರೆ. ಮೊದಲಿಗೆ ಹುಡುಗಿಯರು ಸಾಫ್ಟ್ ಕಾರ್ನರ್ ಇರುವ ವಿಚಾರವನ್ನು ಪ್ರಸ್ತಾಪಿಸಿ ಅವರ ಮನಸ್ಸನ್ನು ಗೆಲ್ಲಬೇಕು. ಆಗ ಅವರನ್ನು ಹ್ಯಾಂಡಲ್ ಮಾಡಲು ಸುಲಭವಾಗುತ್ತದೆ ಎಂದು ಹೇಳಿದ್ದರು ಎನ್ನುತ್ತಾರೆ.

    ಬಳಿಕ ಪ್ರಶಾಂತ್, ಶಮಂತ್ ಒಮ್ಮೆ ಬಂದು ನನ್ನ ಬಳಿ ದಿವ್ಯಾ ಸುರೇಶ್ ಯಾವಾಗಲೂ ನನ್ನನ್ನು ಕೆಟ್ಟ ದೃಷ್ಟಿಯಲ್ಲಿಯೇ ನೋಡುತ್ತಾಳೆ, ಕೋಪ ಮಾಡಿಕೊಂಡಿರುತ್ತಾಳೆ. ನಾನು ಫ್ರೆಂಡ್ ಆಗ ಬೇಕು ಏನಾದರೂ ಐಡಿಯಾ ಕೊಡು ಎಂದು ಕೇಳಿದ್ದ. ಹಾಗಾಗಿ ದಿವ್ಯಾ ಸುರೇಶ್ ಕ್ವಾಲಿಟಿ ನೋಡಿಕೊಂಡು ಹೇಗೆ ಮಾತನಾಡಬೇಕು, ಹಾಗೇ ಮಾತನಾಡು, ಇರಿಟೆಟ್ ಮಾಡಬೇಡ ಎಂದು ಗೈಡೆನ್ಸ್ ನೀಡಿದ್ದೇನೆ. ಶಮಂತ್ ಫಸ್ಟ್ ಜೋರಾಗಿ ಮಾತನಾಡುವುದನ್ನು ಕಲಿಯಬೇಕು ಹಾಗೂ ಪೀಠಿಕೆ ಹಾಕಿ ಮಾತನಾಡುವುದನ್ನು ಬಿಡಬೇಕು ಎಂದು ಹೇಳಿದ್ದೇನೆ ಅಷ್ಟೇ. ಅದು ಬಿಟ್ಟರೆ ಬೇರೆನೂ ಇಲ್ಲ ಎಂದು ಹೇಳುತ್ತಾರೆ.

    ಆಗ ಶಮಂತ್ ಇಷ್ಟೇ ಹೇಳಿಲ್ಲ. ಮೊದಲಿಗೆ ಟಾರ್ಗೆಟ್ ಇಂಪಾರ್ಟೆಟ್. ಫಸ್ಟ್ ಒಳ್ಳೆಯವರು ಅನಿಸಿಕೊಳ್ಳಬೇಕು ನಂತರ ಫ್ರೆಂಡ್ ಶಿಪ್ ಬೆಳೆಸಿಕೊಳ್ಳಬೇಕು. ನೆಕ್ಸ್ಟ್ ಏನು ಮಾಡಬೇಕೆಂದು ಹೇಳುತ್ತೇನೆ ಎಂದು ಹೇಳಿದ್ದರು ಎನ್ನುತ್ತಾರೆ.

    ನಂತರ ಸುದೀಪ್ ಪ್ರಶಾಂತ್‍ರವರೆ ವಾಟ್ ನೆಕ್ಸ್ಟ್ ಎಂದು ಕೇಳಿದಾಗ, ಕಾಮನ್ ಟಾಪಿಕ್ ಹುಡುಕಿಕೊಂಡು ಮಾತನಾಡಬೇಕು. ಮೊದಲಿಗೆ ಎಜುಕೇಷನ್ ಬ್ಯಾಗ್‍ರೌಂಡ್ ಅಥವಾ ಫ್ಯಾಮಿಲಿ ಬ್ಯಾಗ್ ರೌಂಡ್ ವಿಚಾರವಾಗಿ ಮಾತನಾಡಬೇಕು. ಉದಾಹರಣೆಗೆ ದಿವ್ಯಾ ಸುರೇಶ್‍ಗೆ ಮ್ಯೂಸಿಕ್ ಹಾಗೂ ಸ್ಪೋರ್ಸ್ ಇಷ್ಟ ಹಾಗಾಗಿ ಈ ಟಾಪಿಕ್ ಬಗ್ಗೆ ಮಾತನಾಡು ಇದರಿಂದ ಅವಳಿಗೆ ಹತ್ತಿರವಾಗುತ್ತಿಯಾ ಎಂದು ಶಮಂತ್‍ಗೆ ಹೇಳಿದ್ದೆ ಎಂದು ಹೇಳುತ್ತಾರೆ.

     

    ಒಟ್ಟಾರೆ ಪ್ರಶಾಂತ್ ಶಮಂತ್‍ಗೆ ನೀಡಿದ್ದ ಟಿಪ್ಸ್ ಕೇಳಿ ಮನೆಮಂದಿಯೆಲ್ಲಾ ಅಚ್ಚರಿಯಿಂದ ಎದ್ದು-ಬಿದ್ದು ನಕ್ಕಿದ್ದಾರೆ.