Tag: Shamanoor Shivashankarappa

  • ಶಾಮನೂರು ಶಿವಶಂಕರಪ್ಪ ಆಸ್ಪತ್ರೆಗೆ ದಾಖಲು

    ಶಾಮನೂರು ಶಿವಶಂಕರಪ್ಪ ಆಸ್ಪತ್ರೆಗೆ ದಾಖಲು

    ದಾವಣಗೆರೆ: ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ (Shamanur Shivashankarappa) ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹಾಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ 94 ವರ್ಷದ ಶಾಮನೂರು ಶಿವಶಂಕರಪ್ಪ ಅವರು ಕಫದ ಸಮಸ್ಯೆಯಿಂದಾಗಿ ಅಸ್ವಸ್ಥರಾಗಿದ್ದರು. ಹೀಗಾಗಿ ಅವರನ್ನು ಇಂದು ದಾವಣಗೆರೆ ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಚಿಕಿತ್ಸೆ ಬಳಿಕ ಶಿವಶಂಕರಪ್ಪ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಶತ್ರು ಸಂಹಾರ ಯಾಗ ನಡೆದಿಲ್ಲ – ದೇವಸ್ಥಾನದ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಡಿಕೆಶಿ

  • ಲಿಂಗಾಯತರ ಕಡೆಗಣನೆ ಬಗ್ಗೆ ಶಾಮನೂರು ಮಾತು ಸತ್ಯ: ಪಂಚಮಸಾಲಿ ಶ್ರೀ

    ಲಿಂಗಾಯತರ ಕಡೆಗಣನೆ ಬಗ್ಗೆ ಶಾಮನೂರು ಮಾತು ಸತ್ಯ: ಪಂಚಮಸಾಲಿ ಶ್ರೀ

    ಕೊಪ್ಪಳ: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ಶಾಮನೂರು ಶಿವಶಂಕರಪ್ಪ ಅವರ ಮಾತಿನಲ್ಲಿ ನಿಜ ಇದೆ. ಈ ವಿಚಾರ ನಮ್ಮ ಗಮನಕ್ಕೂ ಬಂದಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಹೇಳಿದರು.

    ಕೊಪ್ಪಳದ (Koppala) ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಗ್ರಾಮದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸಮುದಾಯಕ್ಕೆ ಸರ್ಕಾರದಲ್ಲಿ ಮನ್ನಣೆ ಸಿಗುತ್ತಿಲ್ಲ ಎಂಬ ಶಾಮನೂರು ಶಿವಶಂಕರಪ್ಪ (Shamanoor Shivashankarappa) ಹೇಳಿಕೆ ಸತ್ಯವಿದೆ ಎಂದರು. ಇದನ್ನೂ ಓದಿ: ಡಿಸಿಎಂ ತಗೊಂಡು ಏನ್ ಮಾಡ್ಬೇಕು, ಆದ್ರೆ ಲಿಂಗಾಯತರು ಸಿಎಂ ಆಗ್ಬೇಕು: ಶಾಮನೂರು ಕಿಡಿ

    ನನಗೂ ಹಲವು ಐಎಎಸ್-ಐಪಿಎಸ್ ಅಧಿಕಾರಿಗಳು ಫೋನ್ ಮಾಡಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಅಧಿಕಾರಿಗಳ ವರ್ಗಾವಣೆ ಹಾಗೂ ಆಡಳಿತ ವಿಚಾರದಲ್ಲಿ ತಲೆ ಹಾಕಲ್ಲ.‌ ನಮಗೆ 2ಎ ಮೀಸಲಾತಿ ನೀಡಿದರೆ ಸಾಕು. ಇಂಥ ನೂರು ಅಧಿಕಾರಿಗಳನ್ನ ತಯಾರು ಮಾಡುತ್ತೇವೆ. ಈ ಕಾರಣಕ್ಕೆ ಸಾಕಷ್ಟು ನೋವಿದ್ದರೂ ಬಹಿರಂಗವಾಗಿ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದರು.

    ಎಲ್ಲ ಲಿಂಗಾಯತ ಶಾಸಕರ ಧ್ವನಿಯಾಗಿ ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿದ್ದಾರೆ. ಆ ಧ್ವನಿ ನಿಭಾಯಿಸುವ ಕೆಲಸವನ್ನ ಸರ್ಕಾರ ಮಾಡಬೇಕಿದೆ. ಶಾಮನೂರ ಮಾತನಾಡಿದ ಮಾದರಿಯಲ್ಲೇ ನಮ್ಮ ಇನ್ನುಳಿದ ಸಚಿವರು ಮತ್ತು ಶಾಸಕರು ಮಾತನಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಶೆಟ್ಟರ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ; ವೀರಶೈವ ಮಹಾಸಭಾದಿಂದ ಸಿಎಂಗೆ ಪತ್ರ

    ಆಗ ಮಾತ್ರ ವ್ಯವಸ್ಥೆ ಸರಿ ಆಗುತ್ತದೆ. ಲಿಂಗಾಯತ ಸಮುದಾಯದ ಪ್ರಾಮಾಣಿಕ ಅಧಿಕಾರಿಗಳಿಗೆ ಸರ್ಕಾರ ಒಳ್ಳೆಯ ಸ್ಥಾನ ನೀಡಲಿ. ನಿಷ್ಕ್ರಿಯ ಅಧಿಕಾರಿಗಳ ವಿರುದ್ಧ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಲಿ.‌ ನನ್ನ ಸಮಾಜದ ನೋವು ನನ್ನ ನೋವೂ ಹೌದು. ಆದರೆ ನಾನು ಹೇಳಿಕೊಂಡಿರಲಿಲ್ಲ. ನಮಗೆ 2ಎ ಬೇಕಾಗಿದೆ. ಅದಕ್ಕೆ ಎಲ್ಲ ಸಹಿಸಿಕೊಂಡಿದ್ದೇವೆ ಎಂದು ತಿಳಿಸಿದರು..

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮ್ಮಿಶ್ರ ಸರ್ಕಾರದ ವಿರುದ್ಧವೇ ಗುಡುಗಿದ ಕೈ ಶಾಸಕ ಶಾಮನೂರು ಶಿವಶಂಕರಪ್ಪ

    ಸಮ್ಮಿಶ್ರ ಸರ್ಕಾರದ ವಿರುದ್ಧವೇ ಗುಡುಗಿದ ಕೈ ಶಾಸಕ ಶಾಮನೂರು ಶಿವಶಂಕರಪ್ಪ

    ದಾವಣಗೆರೆ: ಕೈ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಈಗ ದೋಸ್ತಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರ ವೀರಶೈವ ಲಿಂಗಾಯತ ಸಮಾಜವನ್ನು ಹತ್ತಿಕ್ಕುವ ಕೆಲಸ ಮಾಡಿದೆ. 2 ಕೋಟಿ ಜನರಿದ್ದ ಸಮಾಜ, ಈಗ ಜಾತಿಗಣತಿಯಿಂದ 85 ಸಾವಿರಕ್ಕೆ ಇಳಿಮುಖವಾಗಿದೆ ಎಂದು ಕಿಡಿಕಾರಿದ್ದಾರೆ.

    ಹರಿಹರ ಹೊರವಲಯದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಆಯೋಜಿಸಿದ್ದ ಡಾ.ಮಹಾಂತ ಸ್ವಾಮೀಜಿ ಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ವೀರಶೈವ ಸಮಾಜವನ್ನು ತುಳಿಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ನಾನು ಸಚಿವನಾಗಿದ್ದಾಗಲೂ ಸರ್ಕಾರದ ಕ್ರಮ ಖಂಡಿಸಿದ್ದೇನೆ. ನಮ್ಮ ಸಮಾಜವನ್ನು ತುಳಿಯುವ ಯತ್ನಿಸುವ ಯಾವುದೇ ಸರ್ಕಾರವಾದರೂ ಸರಿ, ನಾನು ತರಾಟೆಗೆ ತಗೆದುಕೊಳ್ಳುತ್ತೇನೆ ಎಂದು ಕಿಡಿಕಾರಿದರು.

    ಇತ್ತ ಸಮ್ಮಿಶ್ರ ಸರ್ಕಾರದಲ್ಲಿ ವೀರಶೈವ ಲಿಂಗಾಯತರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವ ಅಸಮಾಧಾನ ಹೆಚ್ಚಾಗುತ್ತಿದೆ. ಜೊತೆಗೆ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಡಿಸಿಎಂ ಹುದ್ದೆ ಕೊಡಲಿಲ್ಲ ಎನ್ನುವ ಹೊಗೆ ಇನ್ನೂ ವೀರಶೈವ ಲಿಂಗಾಯತ ಸಮಾಜದಲ್ಲಿ ಜೀವಂತವಾಗಿದೆ. ಹೀಗಾಗಿ ದೋಸ್ತಿ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಶಾಮನೂರು ಶಿವಶಂಕರಪ್ಪ ಅವರು ವಾಗ್ದಾಳಿ ನಡೆಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿಯವರು ಸುಳ್ಳಿನ ಸರದಾರರು, ಅದ್ರಲ್ಲೂ ಬಿಎಸ್‍ವೈ ಸುಳ್ಳಿನ ಸರದಾರ: ಶಾಮನೂರು ಶಿವಶಂಕರಪ್ಪ

    ಬಿಜೆಪಿಯವರು ಸುಳ್ಳಿನ ಸರದಾರರು, ಅದ್ರಲ್ಲೂ ಬಿಎಸ್‍ವೈ ಸುಳ್ಳಿನ ಸರದಾರ: ಶಾಮನೂರು ಶಿವಶಂಕರಪ್ಪ

    ದಾವಣಗೆರೆ: ಬಿಜೆಪಿಯವರು ಸುಳ್ಳಿನ ಸರದಾರರು, ಅದರಲ್ಲೂ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸುಳ್ಳಿನ ಸರದಾರ ಎಂದು ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು 13 ಮಂದಿ ಶಾಸಕರು ಬಿಜೆಪಿಗೆ ಹೋಗುತ್ತಾರೆ ಎನ್ನುವುದು ಶುದ್ಧ ಸುಳ್ಳು. ಯಾರೂ ಕೂಡ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಅಷ್ಟೇ ಅಲ್ಲದೇ ನಾನು ಸಹ ಬಿಜೆಪಿ ಸೇರುತ್ತಾರೆ ಎನ್ನುವ ಹೇಳಿಕೆ ನೀಡುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ಬಿಜೆಪಿಯವರು ಸುಳ್ಳಿನ ಸರದಾರರು, ಅದರಲ್ಲೂ ಯಡಿಯೂರಪ್ಪ ಸುಳ್ಳಿನ ಸರದಾರ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    ಬೆಳಗಾವಿ ಗೊಂದಲವನ್ನು ಕೂಡಲೇ ಸರಿಪಡಿಸಲಾಗುತ್ತದೆ. ಬಿಬಿಎಂಪಿ ಮೇಯರ್ ಸ್ಥಾನಕ್ಕೆ ಎರಡು ಬಣಗಳ ಬಗ್ಗೆ ಮಾತನಾಡಿ, ಬಿಬಿಎಂಪಿ ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿದಿದ್ದು ನಿಜ. ಒಮ್ಮೆಯಾದರೂ ನಮ್ಮ ವೀರಶೈವರು ಮೇಯರ್ ಆಗಲಿ ಎನ್ನುವುದು ನಮ್ಮ ಆಸೆಯಾಗಿತ್ತು. ಆದರೆ ಮೇಯರ್ ಪಟ್ಟ ಕೊಡಲು ಮೀನಾಮೇಷ ಎಣಿಸುತ್ತಿದ್ದಾರೆ. ಮುಂದೆ ಏನಾಗುತ್ತೆ ಎಂಬುದನ್ನು ಕಾದು ನೋಡುತ್ತೇನೆ. ಈ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಬಣವಿಲ್ಲ ಎಂದು ಸ್ಪಷ್ಟಪಡಿಸಿದರು.

    ಈ ವೇಳೆ ಸಚಿವ ಸ್ಥಾನದ ಆಸೆಯನ್ನು ಹೊರ ಹಾಕಿದ ಅವರು, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಗಿರಿ ಕೊಟ್ಟರೆ ಕೆಲಸ ಮಾಡುತ್ತೇನೆ. ಇಲ್ಲವಾದರೇ ಶಾಸಕನಾಗಿಯೇ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಳ್ಳೆಯ ಕೆಲಸ ಮಾಡಿದ ಉದಾಹರಣೆ ನೀಡಲಿ: ಜಾಮದಾರಗೆ ಶಾಮನೂರು ಟಾಂಗ್

    ಒಳ್ಳೆಯ ಕೆಲಸ ಮಾಡಿದ ಉದಾಹರಣೆ ನೀಡಲಿ: ಜಾಮದಾರಗೆ ಶಾಮನೂರು ಟಾಂಗ್

    ದಾವಣಗೆರೆ: ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಯಾವುದೇ ಅಧಿಕಾರಕ್ಕಾಗಿ ನಾನು ಪ್ರಯತ್ನಿಸಿಲ್ಲ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾವು ಲಾಬಿ ನಡೆಸಿಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

    ದಾವಣಗೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಪಕ್ಷದಲ್ಲಿ ನಾನು ಯಾವತ್ತು ನನ್ನ ಮಗನ ಪರವಾಗಿ ನಿಂತಿಲ್ಲ. ಅಲ್ಲದೇ ಸಚಿವ ಸ್ಥಾನಕ್ಕಾಗಿ ತಲೆ ಕೆಡಿಸಿಕೊಂಡಿಲ್ಲ. ಈಗ ಕ್ಷೇತ್ರದ ಅಭಿವೃದ್ಧಿ ಮೇಲಷ್ಟೇ ನನ್ನ ಗಮನ ಎಂದು ತಿಳಿಸಿದರು.

    ನಿವೃತ್ತ ಐಎಎಸ್ ಅಧಿಕಾರಿ ಶಿವಾನಂದ ಜಾಮದಾರ್ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕರು, ಜಾಮದಾರ ಅಧಿಕಾರದಲ್ಲಿದ್ದಾಗ ಯಾರಿಗೆ ತಾನೇ ಒಳ್ಳೆಯ ಕೆಲಸ ಮಾಡಿದ್ದಾರೆ. ಜೆ.ಎಚ್.ಪಟೇಲ್ ಅವರು ಪೂರ್ಣ ಅಧಿಕಾರ ನೀಡಿದ್ದಾಗ ರೈತರಿಗೆ ಏನು ಅನುಕೂಲ ಮಾಡಿಕೊಟ್ಟಿದ್ದಾರೆ. ಹಾಗೊಂದು ವೇಳೆ ಒಳ್ಳೆಯ ಕೆಲಸ ಮಾಡಿದ್ದರೆ ಒಂದೆರೆಡು ಉದಾಹರಣೆ ನೀಡಲಿ ಎಂದು ಟಾಂಗ್ ನೀಡಿದರು.

  • ಶಾಮನೂರು ಶಿವಶಂಕರಪ್ಪರಿಗೆ ತಪ್ಪಿದ ಸಚಿವ ಸ್ಥಾನ- ಕೈ ಕಾರ್ಪೊರೇಟರ್ ರಾಜೀನಾಮೆ

    ಶಾಮನೂರು ಶಿವಶಂಕರಪ್ಪರಿಗೆ ತಪ್ಪಿದ ಸಚಿವ ಸ್ಥಾನ- ಕೈ ಕಾರ್ಪೊರೇಟರ್ ರಾಜೀನಾಮೆ

    ದಾವಣಗೆರೆ: ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪನವರಿಗೆ ಮಂತ್ರಿ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಶಿವಗಂಗಾ ಬಸವರಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಕೆಟಿಜೆ ನಗರ ಕಾರ್ಪೋರೇಟರ್ ಆಗಿರುವ ಶಿವಗಂಗಾ ಬಸವರಾಜ್ ಮಹಾನಗರ ಪಾಲಿಕೆ ಆಯುಕ್ತರನ್ನ ಭೇಟಿ ಮಾಡಿ ತಮ್ಮ ಕಾರ್ಪೋರೇಟರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು.

    ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಶಿವಗಂಗಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

    ಬಳಿಕ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ಕಳೆದ 45 ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು, ಆದ್ರೆ ಅಂತ ಒಬ್ಬ ನಾಯಕನಿಗೆ ಸಚಿವ ಸ್ಥಾನ ನೀಡದೇ ವೀರಶೈವ ಲಿಂಗಾಯತರಿಗೆ ಅನ್ಯಾಯವಾಗಿದೆ. ಈ ಕುರಿತು ಬೆಂಬಲಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜೆಯ ಒಳಗಡೆ ಸಚಿವ ಸ್ಥಾನ ನೀಡದಿದ್ದರೆ ಮಹಾನಗರ ಪಾಲಿಕೆಯ 39 ಸದಸ್ಯರು ಕೂಡ ರಾಜೀನಾಮೆ ನೀಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

  • ಸಿಎಂ ಹಿಂದೂ ಧರ್ಮ ಒಡೆದ್ರೋ ಇಲ್ವಾ ಅಂತ ಹೇಳಲ್ಲ, ಬುದ್ಧಿವಂತಿಕೆಯಿಂದ ಏನ್ ಮಾಡ್ಬೇಕು ಅದನ್ನ ಮಾಡಿದ್ದಾರೆ: ಬಿಎಸ್‍ವೈ

    ಸಿಎಂ ಹಿಂದೂ ಧರ್ಮ ಒಡೆದ್ರೋ ಇಲ್ವಾ ಅಂತ ಹೇಳಲ್ಲ, ಬುದ್ಧಿವಂತಿಕೆಯಿಂದ ಏನ್ ಮಾಡ್ಬೇಕು ಅದನ್ನ ಮಾಡಿದ್ದಾರೆ: ಬಿಎಸ್‍ವೈ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಿಂದೂ ಧರ್ಮವನ್ನು ಒಡೆದಿದ್ದಾರೆ ಅಂತಾನೂ ಹೇಳಲ್ಲ. ಒಡೆದಿದ್ದಾರೆ ಅಂತಾನೂ ಹೇಳಲ್ಲ. ಸಿಎಂ ಏನು ಮಾಡ್ಬೇಕು ಎಂಬುದನ್ನು ಬುದ್ದಿವಂತಿಕೆಯಿಂದ ಮಾಡಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರೋ ತಮ್ಮ ಮನೆಯಲ್ಲಿ ನಡೆದ ಸಭೆ ಬಳಿಕ ಮಾತಾಡಿದ ಯಡಿಯೂರಪ್ಪವರು, ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತುರ್ತಾಗಿ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳಬೇಕು. ಸಭೆಯಲ್ಲಿ ಎಲ್ಲ ಹಿರಿಯರನ್ನು ಮತ್ತು ಸ್ವಾಮೀಜಿಗಳನ್ನು ಕರೆದು ಸರ್ಕಾರದ ನಿರ್ಧಾರದ ಬಗೆಗಿನ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಶಾಮನೂರು ಶಿವಶಂಕರಪ್ಪ ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಅಂತಾ ಅಂದ್ರು.

    ಶಾಮನೂರು ಶಿವಶಂಕರಪ್ಪವರು ನೀಡುವ ಹೇಳಿಕೆಗಳು ವೈಯಕ್ತಿಕ ಅಲ್ಲ. ವೀರಶೈವ ಮಹಾಸಭೆ ಮುಂದಿನ ಭವಿಷ್ಯಕ್ಕಾಗಿ ಸೂಕ್ತ ತೀರ್ಮಾಣ ತೆಗದುಕೊಳ್ಳಬೇಕಿದೆ. ವೀರಶೈವ ಮಹಾಸಭೆಯ ನಿರ್ಣಯದ ನಂತರ ಬಿಜೆಪಿ ತನ್ನ ನಿಲುವನ್ನು ಪ್ರಕಟಿಸಲಿದೆ ಅಂತಾ ಬಿ.ಎಸ್.ಯಡಿಯೂರಪ್ಪ ಹೇಳಿದರು.