Tag: Shalin Bhanot

  • 40ನೇ ವಯಸ್ಸಿಗೆ 2ನೇ ಮದುವೆಗೆ ಸಜ್ಜಾದ ಬಿಗ್ ಬಾಸ್ ಸ್ಪರ್ಧಿ ದಲ್ಜೀತ್ ಕೌರ್

    40ನೇ ವಯಸ್ಸಿಗೆ 2ನೇ ಮದುವೆಗೆ ಸಜ್ಜಾದ ಬಿಗ್ ಬಾಸ್ ಸ್ಪರ್ಧಿ ದಲ್ಜೀತ್ ಕೌರ್

    ಕಿರುತೆರೆಯ ಹಲವು ಸೀರಿಯಲ್ ಮತ್ತು ಬಿಗ್ ಬಾಸ್ ಸೀಸನ್ 13ರ ಸ್ಪರ್ಧಿಯಾಗಿದ್ದ ದಲ್ಜೀತ್ ಕೌರ್ (Dalljiet Kaur) ಇದೀಗ ಎರಡನೇ ಮದುವೆ (2nd Wedding) ಸಿದ್ಧತೆ ನಡೆಸಿದ್ದಾರೆ. ಉದ್ಯಮಿ ನಿಖಿಲ್ ಪಟೇಲ್ (Nikhil Patel)ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.

     

    View this post on Instagram

     

    A post shared by DALLJIET KAUR ੴ (@kaurdalljiet)

    ಸಲ್ಮಾನ್ ಖಾನ್ (Salman Khan) ನಿರೂಪಣೆಯ ಬಿಗ್ ಬಾಸ್ ಸೀಸನ್ 13ರಲ್ಲಿ (Bigg Boss Hindi 13) ನಟಿ ದಲ್ಜೀತ್ ಕೌರ್ ಗಮನ ಸೆಳೆದಿದ್ದರು. ಹಿಂದಿ ನಟ ಶಾಲಿನ್ ಭಾನೋಟ್ (Shalin Bhanot) ಜೊತೆ 2019ರಲ್ಲಿ ಹಸೆಮಣೆ ಏರಿದ್ದರು. 2015ರಲ್ಲಿ ಈ ಜೋಡಿ ಡಿವೋರ್ಸ್ (Divorce) ಪಡೆದು ದೂರಾವಾದರು.

     

    View this post on Instagram

     

    A post shared by DALLJIET KAUR ੴ (@kaurdalljiet)

    ಇದೀಗ ಉದ್ಯಮಿ ನಿಖಿಲ್ ಪಟೇಲ್ ಜೊತೆ ನಟಿ ದಲ್ಜೀತ್ ಕೌರ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇಬ್ಬರಿಗೂ ಇದು 2ನೇ ಮದುವೆಯಾಗಿದ್ದು, ಗುರುಹಿರಿಯರ ಸಮ್ಮುಖದಲ್ಲಿ ಮಾರ್ಚ್ 18ರಂದು ಈ ಜೋಡಿ ಮದುವೆಯಾಗುತ್ತಿದ್ದಾರೆ. ಸದ್ಯ ಹಳದಿ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by DALLJIET KAUR ੴ (@kaurdalljiet)

    ನಿಖಿಲ್‌ಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಲ್ಜೀತ್ ಕೌರ್‌ಗೆ ಈಗಾಗಲೇ ಒಬ್ಬ ಮಗನಿದ್ದು, ಪೋಷಕರ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.