Tag: shakuntalam

  • ಮತ್ತೆ ಮದುವೆಗೆ ರೆಡಿಯಾದ್ರಾ ನಟಿ ಸಮಂತಾ- ಹುಡುಗ ಯಾರು?

    ಮತ್ತೆ ಮದುವೆಗೆ ರೆಡಿಯಾದ್ರಾ ನಟಿ ಸಮಂತಾ- ಹುಡುಗ ಯಾರು?

    ಸೌತ್ ಬ್ಯೂಟಿ ಸಮಂತಾ (Samantha) ಅವರು ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ (Bollywood Films) ಬ್ಯುಸಿಯಾಗಿದ್ದಾರೆ. ಡಿವೋರ್ಸ್ (Divorce) ಬಳಿಕ ಭಾರೀ ಸುದ್ದಿಯಲ್ಲಿರುವ ನಟಿ ಸಮಂತಾ ಮತ್ತೆ ಮದುವೆಯಾಗುತ್ತಿದ್ದಾರೆ (Wedding) ಎಂಬ ಹರಿದಾಡುತ್ತಿದೆ. ಎರಡನೇ ಮದುವೆಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಮಂತಾ- ನಾಗಚೈತನ್ಯ (Nagachaitanya) ಜೋಡಿ ಟಾಲಿವುಡ್ ಅಂಗಳದ ಬೆಸ್ಟ್ ಕಪಲ್ ಆಗಿದ್ದರು. ಅದ್ಯಾರ ದೃಷ್ಟಿ ಬಿತ್ತೋ ಏನೋ ಹಲವು ವರ್ಷಗಳ ಪ್ರೀತಿಯ ದಾಂಪತ್ಯಕ್ಕೆ ಅಂತ್ಯ ಹಾಡಿ ದೂರ ದೂರ ಆಗಿದ್ದಾರೆ. ಡಿವೋರ್ಸ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ. ಒಂದ್ ಕಡೆ ನಾಗಚೈತನ್ಯ ಹೆಸರು ಶೋಭಿತಾ ಜೊತೆ ತಳಕು ಹಾಕಿಕೊಂಡರೆ, ಇನ್ನೊಂದ್ ಕಡೆ ಸಮಂತಾ ಮದುವೆ ಸುದ್ದಿ ಸೌಂಡ್ ಮಾಡುತ್ತಿದೆ. ಇದನ್ನೂ ಓದಿ:ಪ್ರೀತಿಯ ಬಂಟಿ ಕಳೆದುಕೊಂಡ ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ

    ಹೀಗೆ ಸಮಂತಾ ಮದುವೆ ಸುದ್ದಿ ಚರ್ಚೆ ಆಗಲು ಕಾರಣ ಇತ್ತೀಚಿಗೆ ನಟಿ ಹಂಚಿಕೊಂಡಿದ್ದ ಹುಡುಗನ ಪೋಸ್ಟ್. ಸಮಂತಾ ತನ್ನ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ ಒಬ್ಬ ವ್ಯಕ್ತಿಯ ವಿವರಗಳನ್ನು ಹಾಕಿದ್ದು, ನಾನು ಸೂಕ್ತವಾದ ಹೊಂದಾಣಿಕೆಯನ್ನು ಹುಡುಕುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆ ವ್ಯಕ್ತಿಯೇ ಬಾಲಿವುಡ್ ಸೆಲೆಬ್ರಿಟಿ ಡಾ.ಜ್ಯುವೆಲ್ ಗಮಾಡಿಯಾ. ತನಗೆ ಸರಿಯಾದ ಜೋಡಿ ಬೇಕು ಎಂದಿದ್ದಾರೆ.

    ಬಾಲಿವುಡ್ ನಾಯಕಿಯರಾದ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್, ಅಜಯ್ ದೇವಗನ್ ಸೇರಿದಂತೆ ಅನೇಕ ಬಿಟೌನ್ ಸೆಲೆಬ್ರಿಟಿಗಳಿಗೆ ಡಾ. ಜ್ಯುವೆಲ್ ಗಮಾಡಿಯಾ ಫ್ಯಾಮಿಲಿ ಡಾಕ್ಟರ್ ಆಗಿದ್ದಾರೆ. ಡಾ.ಜ್ಯುವೆಲ್ ಜೊತೆ ಸಮಂತಾ ಮದುವೆಯಾಗೋದು ನಿಜಾನಾ.? ಇದಕ್ಕೆ ನಟಿಯೇ ಉತ್ತರಿಸಬೇಕಿದೆ.

  • ಸಮಂತಾಗೆ ಗರ್ಭಗುಡಿ ಕಟ್ಟಿಸಿದ ಅಭಿಮಾನಿ

    ಸಮಂತಾಗೆ ಗರ್ಭಗುಡಿ ಕಟ್ಟಿಸಿದ ಅಭಿಮಾನಿ

    ಸೌತ್ ಬ್ಯೂಟಿ ಸಮಂತಾ (Samantha) ಅವರು ಕಳೆದ 13 ವರ್ಷಗಳಿಂದ ಸಿನಿಮಾ ರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಬಗೆ ಬಗೆಯ ಪಾತ್ರಗಳ ಮೂಲಕ ಸ್ಯಾಮ್ ರಂಜಿಸಿದ್ದಾರೆ. ಇದೀಗ ನೆಚ್ಚಿನ ನಟಿ ಸಮಂತಾಗಾಗಿ ತನ್ನ ಮನೆಯಲ್ಲಿಯೇ ದೇವಸ್ಥಾನ (Temple) ಕಟ್ಟಿಸಿ ಹರಕೆ ಹೊತ್ತು ಅಭಿಮಾನಿಯೊಬ್ಬ (Fan) ಯಾತ್ರೆಗೆ ಹೊರಟಿದ್ದಾರೆ. ಇದನ್ನೂ ಓದಿ:ಪತಿ ಜೊತೆ ವಿದೇಶಕ್ಕೆ ಹಾರಿದ ‘ಬಿಗ್ ಬಾಸ್’ ಬೆಡಗಿ ಅಕ್ಷತಾ ಕುಕಿ

    ಸ್ಟಾರ್‌ಗಳು ಅಂದಮೇಲೆ ನಾನಾ ರೀತಿಯಲ್ಲಿ ತಮ್ಮ ಅಭಿಮಾನವನ್ನ ಅಭಿಮಾನಿಗಳು ತೋರಿಸುತ್ತಾರೆ. ಟ್ಯಾಟೂ ಹಾಕಿಸಿಕೊಳ್ಳುವುದು, ಗಿಫ್ಟ್ ನೀಡುವುದು, ಹೀಗೆ ಇನ್ನಿತರ ಕೆಲಸಗಳ ಮೂಲಕ ತಮ್ಮ ಪ್ರೀತಿಯನ್ನ ವ್ಯಕ್ತಪಡಿಸುತ್ತಾರೆ. ಇದೀಗ ನಟಿ ಸಮಂತಾ(Samantha) ದೇವಸ್ಥಾನ ನಿರ್ಮಾಣವಾಗ್ತಿದೆ. ಆಂಧ್ರದ ಅಭಿಮಾನಿಯೊಬ್ಬರು ತಮ್ಮ ಮನೆಯಲ್ಲಿ ನೆಚ್ಚಿನ ನಟಿಗಾಗಿ ದೇವಸ್ಥಾನ ಕಟ್ಟಿಸುತ್ತಿದ್ಧಾರೆ. ಈಗಾಗಲೇ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲು ಸ್ಯಾಮ್ ಮೂರ್ತಿ ಕೂಡ ಸಿದ್ದವಾಗಿದೆ. ಇದೇ ಶುಕ್ರವಾರ ದೇವಸ್ಥಾನ ಉದ್ಘಾಟನೆ ಕಾರ್ಯ ನಡೆಯಲಿದೆ. ಏಪ್ರಿಲ್ 28ರಂದು ಸಮಂತಾ ಹುಟ್ಟುಹಬ್ಬ. ಹಾಗಾಗಿ ನೆಚ್ಚಿನ ನಟಿಗೆ ಈ ಮೂಲಕ ವಿಶೇಷ ಉಡುಗೊರೆ ನೀಡಲು ಅಭಿಮಾನಿ ಮುಂದಾಗಿದ್ದಾನೆ. ಅಷ್ಟೇ ಅಲ್ಲ ಸದ್ಯ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಸ್ಯಾಮ್ ಬೇಗ ಚೇತರಿಸಿಕೊಳ್ಳಲಿ ಎಂದು ತೀರ್ಥಕ್ಷೇತ್ರಗಳಿಗೆ ಯಾತ್ರೆ ಕೈಗೊಂಡಿದ್ದಾನೆ.

    ಆಂಧ್ರ ಪ್ರದೇಶದ (Andra Pradesh) ಬಾಪಟ್ಟಿ ಜಿಲ್ಲೆಯ ಆಲಪಾಡಿ ಮೂಲದ ಸಂದೀಪ್ ನಟಿ ಸಮಂತಾ ಅಪ್ಪಟ ಅಭಿಮಾನಿ. ಈ ವರ್ಷ ಸಮಂತಾ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಗಿಫ್ಟ್ ನೀಡಬೇಕು ಎಂದು ತಮ್ಮ ಮನೆಯ ಕಾಂಪೌಂಡ್‌ನಲ್ಲೇ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಈ ಹಿಂದೆ ಕೂಡ ನಟ ನಟಿಯರಿಗೆ ಅಭಿಮಾನಿಗಳು ದೇವಸ್ಥಾನಗಳನ್ನು ಕಟ್ಟಿ ಆರಾಧಿಸಿದ್ದರು.

    ಸದ್ಯ ಅಭಿಮಾನಿ ಸಂದೀಪ್, ಸಮಂತಾಗಾಗಿ ದೇವಸ್ಥಾನ ಕಟ್ಟಿಸುತ್ತಿರುವ ವೀಡಿಯೋ ಏಲ್ಲೆಡೆ ಸದ್ದು ಮಾಡ್ತಿದೆ. ಆದರೆ ಸಮಂತಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಮಂತಾ ರಿಯಾಕ್ಷನ್ ಹೇಗಿರಲಿದೆ ಎಂಬುದನ್ನ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ ಎಂದು ಕುಟುಕಿದ ನಿರ್ಮಾಪಕನಿಗೆ ಸಮಂತಾ ತಿರುಗೇಟು

    ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ ಎಂದು ಕುಟುಕಿದ ನಿರ್ಮಾಪಕನಿಗೆ ಸಮಂತಾ ತಿರುಗೇಟು

    ಪ್ರತಿಭಾನ್ವಿತ ನಟಿ ಸಮಂತಾ (Samantha) ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಚಿತ್ರರಂಗದಲ್ಲಿ ಗಾಢ್ ಫಾದರ್ ಇಲ್ಲದೇ ತನ್ನ ಪ್ರತಿಭೆಯಿಂದ ಅಪಾರ ಅಭಿಮಾನಿಗಳ ಮನಗೆದ್ದಿರುವ ನಟಿಗೆ ಕೆಲ ದಿನಗಳ ಹಿಂದೆ ನಿರ್ಮಾಪಕ ಚಿಟ್ಟಿಬಾಬು (Chittibabu)  ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಸಮಂತಾ ಮುಖ ಕಿತ್ತು ಹೋಗಿದೆ. ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ ಎಂದು ಕಾಮೆಂಟ್ ಮಾಡಿದ್ದರು. ಇದೀಗ ಸಮಂತಾ ತಮ್ಮದೇ ಸ್ಟೈಲಿನಲ್ಲಿ ನಿರ್ಮಾಪಕನಿಗೆ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ ನಿರ್ಮಾಪಕ ಹೇಳಿದ್ದೇನು?

    ಸಮಂತಾಗೆ (Samantha) ಇದೀಗ ನಾಯಕಿಯಾಗಿ ನಟಿಸಲು ಆಫರ್ ಬರುತ್ತಿಲ್ಲ. ಅದಕ್ಕೆ ಅವರು ಲೇಡಿ ಓರಿಯೆಂಟೆಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆಕೆಯ ಮುಖ ಅಜ್ಜಿ ಮುಖದಂತೆ ಆಗಿದೆ. ಟಾಪ್ ಹೀರೋಯಿನ್ ಪಟ್ಟದಿಂದ ಸಮಂತಾ ಕೆಳಗೆ ಬಿದ್ದು ಬಹಳ ಸಮಯವಾಗಿದೆ. ಅದಕ್ಕೆ ‘ಪುಷ್ಪ’ (Pushpa) ಸಿನಿಮಾದಲ್ಲಿ ಊ ಅಂಟಾವ ಹಾಡಿನಲ್ಲಿ ಅರೆಬೆತ್ತಲೆಯಾಗಿ ಕುಣಿದಿದ್ದಾಳೆ. ಹಣ ಮಾಡಲು, ಚಿತ್ರರಂಗದಲ್ಲಿ ನಿಲ್ಲಲು ಹೀಗೆ ಮಾಡ್ತಿದ್ದಾಳೆ ಎಂದಿದ್ದಾರೆ ಚಿಟ್ಟಿಬಾಬು. ಆಕೆಯ ವೃತ್ತಿ ಬದುಕು ಮುಗಿದಿದೆ. ಒಂದು ಸಮಯದಲ್ಲಿ ಒಳ್ಳೆಯ ಸ್ಟಾರ್ ಪಟ್ಟ ಅನುಭವಿಸಿದ್ದಾಳೆ. ಈಗ ಪ್ರತಿ ಸಿನಿಮಾಕ್ಕೂ ಏನೋ ಒಂದು ಡ್ರಾಮಾ ಮಾಡಿಕೊಂಡು, ನಾನು ಸತ್ತುಹೋಗುತ್ತೇನೆ ಎಂದು ಅದು ಇದು ಹೇಳಿ ಡ್ರಾಮಾ ಮಾಡಿಕೊಂಡು ಸಿನಿಮಾ ಗೆಲ್ಲಿಸಿಕೊಳ್ಳಲು ನೋಡುತ್ತಿದ್ದಾಳೆ. ಆದರೆ ಅದೆಲ್ಲ ವರ್ಕೌಟ್ ಆಗುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ಜನ ನೋಡುತ್ತಾರೆ ಇಲ್ಲವಾದರೆ ಇಲ್ಲ. ‘ಶಾಕುಂತಲಂʼ (Shakuntalam) ಸಿನಿಮಾದ ಕತೆಯೂ ಅಷ್ಟೆ. ಆದರೆ ನನಗಿರುವ ಪ್ರಶ್ನೆ ಎಂದರೆ, ಎಲ್ಲಾ ಚಾರ್ಮ್ ಕಳೆದುಕೊಂಡಿರುವ ನಟಿ ಶಾಕುಂತಲೆ ಅಂತಹ ಅಂದಗಾತಿಯ ಪಾತ್ರಕ್ಕೆ ಹೇಗೆ ಸೂಟ್ ಆಗುತ್ತಾಳೆ ಎಂದು ಚಿಟ್ಟಿಬಾಬು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ:ರಾಡ್ ನಿಂದ ಹೊಡೆದು ಪವನ್ ಕಲ್ಯಾಣ್ ಅಭಿಮಾನಿ ಕೊಂದ ಪ್ರಭಾಸ್ ಫ್ಯಾನ್

    ಆದರೀಗ ಸಮಂತಾ, ಆ ನಿರ್ಮಾಪಕನಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಒಂದು ಸ್ಕ್ರೀನ್ ಶಾಟ್ ಹಂಚಿಕೊಳ್ಳುವ ಮೂಲಕ ಅವರು ವ್ಯಂಗ್ಯ ಮಾಡಿದ್ದಾರೆ. ನೇರವಾಗಿ ಚಿಟ್ಟಿಬಾಬು ಹೆಸರನ್ನು ಸಮಂತಾ ಪ್ರಸ್ತಾಪ ಮಾಡದಿದ್ದರೂ ಕೂಡ ನೆಟ್ಟಿಗರಿಗೆ ಅರ್ಥವಾಗಿದೆ. ಚಿಟ್ಟಿಬಾಬು ಅವರ ಕಿವಿಯಲ್ಲಿ ಸಿಕ್ಕಾಪಟ್ಟೆ ಕೂದಲು ಇದೆ. ಅದರ ರಹಸ್ಯವನ್ನು ಬಹಿರಂಗಪಡಿಸುವ ಮೂಲಕ ಸಮಂತಾ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಗೂಗಲ್ ಮಾಡಿದ್ದು ಅದರ ಸ್ಕ್ರಿನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಸಮಂತಾ ಶೇರ್ ಮಾಡಿರುವ ಪೋಸ್ಟ್‌ನಲ್ಲಿ ‘ಮನುಷ್ಯರ ಕಿವಿ ಮೇಲೆ ಕೂದಲು ಯಾಕೆ ಬೆಳೆಯುತ್ತದೆ’ ಎಂದು ಸಮಂತಾ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಅದಕ್ಕೆ ಗೂಗಲ್ ತೋರಿಸಿದ ಉತ್ತರವನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಲೈಂಗಿಕ ಆಸಕ್ತಿಗೆ ಹೆಚ್ಚಿಸುವ ಟೆಸ್ಟಾಸ್ಟಿರಾನ್ ಹಾರ್ಮೋನ್ ಜಾಸ್ತಿ ಇರುವ ಪುರುಷರ ಕಿವಿಯಲ್ಲಿ ಕೂದಲು ಬೆಳೆಯುತ್ತದೆ’ ಎಂಬ ಮಾಹಿತಿ ಈ ಸ್ಕ್ರಿನ್ ಶಾಟ್‌ನಲ್ಲಿದೆ. ಇದು ನಿರ್ಮಾಪಕ ಚಿಟ್ಟಿಬಾಬು ಕುರಿತಾಗಿಯೇ ಸಮಂತಾ ಹೇಳಿದ್ದು, ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಮಂತಾ ಅವರ ಈ ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಪರ ನಿಂತಿದ್ದಾರೆ.

  • ನಟಿ ಸಮಂತಾ ಆರೋಗ್ಯದಲ್ಲಿ ಏರುಪೇರು

    ನಟಿ ಸಮಂತಾ ಆರೋಗ್ಯದಲ್ಲಿ ಏರುಪೇರು

    ಸೌತ್ ನಟಿ ಸಮಂತಾ (Samantha) ಅವರ ನಟನೆಯ ‘ಶಾಕುಂತಲಂ’ ಸಿನಿಮಾ ರಿಲೀಸ್ ಕೇವಲ ಎರಡೇ ದಿನ ಬಾಕಿಯಿದೆ. ಸಿನಿಮಾ ರಿಲೀಸ್ ತಯಾರಿಯ ನಡುವೆ ಈಗ ಸಮಂತಾ ಆರೋಗ್ಯ ಕೈಕೊಟ್ಟಿದೆ. ಈ ಬಗ್ಗೆ ನಟಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:‘ಅನ್ಲಾಕ್ ರಾಘವ’ನಿಗೆ ಡಬ್ಬಿಂಗ್ ಮಾಡುತ್ತಿದ್ದಾರೆ ರೇಚಲ್ ಡೇವಿಡ್

    ‘ಯಶೋದ’ (Yashoda) ಸೂಪರ್ ಸಕ್ಸಸ್ ನಂತರ ಶಾಕುಂತಲೆಯಾಗಿ ತೆರೆಯ ಮೇಲೆ ರಾರಾಜಿಸಲು ರೆಡಿಯಾಗಿದ್ದಾರೆ. ಪುಷ್ಪ ಚಿತ್ರದಲ್ಲಿ ಸೊಂಟ ಬಳುಕಿಸಿದ್ದು, ಆಯ್ತು. ಬಳಿಕ ‘ಯಶೋದ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾಯ್ತು. ಈಗ ಶಾಕುಂತಲೆಯ ಪರ್ವ ಶುರುವಾಗುತ್ತಿದೆ.

    ನಟಿ ಸಮಂತಾ ಅವರಿಗೆ ಜ್ವರ ಬಂದಿದ್ದು, ನಾನು ಧ್ವನಿಯನ್ನೂ ಕಳೆದುಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ತಮ್ಮ ಆರೋಗ್ಯ ಚೆನ್ನಾಗಿಲ್ಲ ಎಂದು ತಿಳಿಸಿದ್ದಾರೆ. ಅನಾರೋಗ್ಯ ಕಾರಣದಿಂದಾಗಿಯೇ ಹೈದರಾಬಾದ್ ಕಾಲೇಜ್‌ನಲ್ಲಿ ನಿಗದಿಯಾಗಿರುವ ಪ್ರಮೋಷನ್ ಇವೆಂಟ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ನಟಿ ತಿಳಿಸಿದ್ದಾರೆ.

    ನಾನು ನನ್ನ ಸಿನಿಮಾವನ್ನು ಪ್ರಮೋಷನ್ ಮಾಡಿ ನಿಮ್ಮ ಪ್ರೀತಿಯಲ್ಲಿ ಮಿಂದೇಳುವ ಖುಷಿಯಲ್ಲಿದ್ದೆ. ಆದರೆ ವಿಪರೀತವಾದ ಶೆಡ್ಯೂಲ್ ಹಾಗೂ ಕೆಲಸಗಳಿಂದಾಗಿ ನಾನು ಬ್ರೇಕ್ ತೆಗೆದುಕೊಳ್ಳುವಂತಾಗಿದೆ. ನಾನು ಜ್ವರದಿಂದ ಮಲಗಿದ್ದೇನೆ. ನನ್ನ ಧ್ವನಿಯನ್ನು ಕಳೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ನಿಮ್ಮೆಲ್ಲರನ್ನೂ ಮಿಸ್‌ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಈ ಸುದ್ದಿ ಕೇಳ್ತಿದ್ದಂತೆ ಸ್ಯಾಮ್‌ಗೆ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

  • ಯಾರನ್ನಾದರೂ ಡೇಟ್ ಮಾಡಿ ಎಂದ ಅಭಿಮಾನಿಗೆ ಸಮಂತಾ ಹೇಳಿದ್ದೇನು?

    ಯಾರನ್ನಾದರೂ ಡೇಟ್ ಮಾಡಿ ಎಂದ ಅಭಿಮಾನಿಗೆ ಸಮಂತಾ ಹೇಳಿದ್ದೇನು?

    ಸೌತ್ ನಟಿ ಸಮಂತಾ (Samantha)  `ಶಾಕುಂತಲಂ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. `ಯಶೋದ’ (Yashoda) ಚಿತ್ರದ ಸಕ್ಸಸ್ ಬಳಿಕ ಶಾಕುಂತಲೆಯಾಗಿ ಮಿಂಚಲು ಸ್ಯಾಮ್ ಸಜ್ಜಾಗಿದ್ದಾರೆ. ಈ ನಡುವೆ ನಟಿ ಸಮಂತಾಗೆ ಯಾರನ್ನಾದರೂ ಡೇಟ್ ಮಾಡುವಂತೆ ಅಭಿಮಾನಿಯೊಬ್ಬರು ಬೇಡಿಕೆಯಿಟ್ಟಿದ್ದಾರೆ. ಇದನ್ನೂ ಓದಿ: ಜೀವನವನ್ನ ಕೊನೆ ಮಾಡ್ಕೋಬೇಕು ಅಂದ್ಕೊಂಡಿದ್ದೆ ಅವ್ರು ಉಳಿಸಿದ್ರು: ರಮ್ಯಾ

    ನಾಗಚೈತನ್ಯ (Nagachaitanya) ಜೊತೆಗಿನ ಸಂಬಂಧಕ್ಕೆ ಫುಲ್ ಸ್ಟಾಪ್ ಇಟ್ಟ ಮೇಲೆ ಸಮಂತಾ ತಮ್ಮ ಸಿನಿಮಾ- ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಸದ್ಯ ʻಶಾಕುಂತಲಂʼ (Shakuntalam) ಸಿನಿಮಾ ಇದೇ ಏ.14ಕ್ಕೆ ತೆರೆಗೆ ಬರುತ್ತಿದೆ. ಈ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಸಮಂತಾಗೆ ಅಭಿಮಾನಿಯೊಬ್ಬರು ವಿಶೇಷ ಮನವಿ ಮಾಡಿದ್ದಾರೆ.

    ನನಗೆ ಗೊತ್ತು ನಾನು ಹೇಳುವ ಜಾಗದಲ್ಲಿಲ್ಲ ಎಂದು. ಆದರೆ, ಯಾರ ಜೊತೆಗಾದರೂ ಡೇಟ್ ಮಾಡಿ ಎಂದು ಶ್ರಾವಂತಿ ಹೆಸರಿನ ಅಭಿಮಾಯೊಬ್ಬರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸಮಂತಾ, `ನೀವು ಪ್ರೀತಿಸಿದಂತೆ ನನ್ನನ್ನು ಮತ್ಯಾರು ಪ್ರೀತಿ ಮಾಡುತ್ತಾರೆ’ ಎಂದು ಸಮಂತಾ ಅಭಿಮಾನಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಸಮಂತಾ ಈ ಉತ್ತರ ಅಭಿಮಾನಿಗಳ ದಿಲ್ ಗೆದ್ದಿದೆ. ಅನಾರೋಗ್ಯದ ನಡುವೆಯೂ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುತ್ತಿರುವ ನಟಿಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ.

  • ದುಬಾರಿ ಸೀರೆಯುಟ್ಟು `ಶಾಕುಂತಲಂ’ ಪ್ರಚಾರದಲ್ಲಿ ಭಾಗಿಯಾದ ಸಮಂತಾ

    ದುಬಾರಿ ಸೀರೆಯುಟ್ಟು `ಶಾಕುಂತಲಂ’ ಪ್ರಚಾರದಲ್ಲಿ ಭಾಗಿಯಾದ ಸಮಂತಾ

    ಸೌತ್ ನಟಿ ಸಮಂತಾ (Samantha) ಮಹಿಳಾ ಪ್ರಧಾನ ಪಾತ್ರಗಳನ್ನ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಎಂತಹದ್ದೇ ಪಾತ್ರ ಕೊಟ್ಟರು ಅದ್ಭುತವಾಗಿ ನಟಿಸುವ ನಟಿ ಸ್ಯಾಮ್ ಸದ್ಯ `ಶಾಕುಂತಲಂ’ ಚಿತ್ರ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಪ್ರಮೋಷನ್‌ಗೆ ದುಬಾರಿ ಸೀರೆಯುಟ್ಟು ಮಿಂಚಿದ್ದಾರೆ.

    `ಯಶೋದ’ (Yashoda) ಸಿನಿಮಾದ ಸೂಪರ್ ಸಕ್ಸಸ್ ನಂತರ ಶಾಕುಂತಲೆಯಾಗಿ ಸಮಂತಾ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ ಲುಕ್, ಟ್ರೈಲರ್‌ನಿಂದ ಅಪಾರ ನಿರೀಕ್ಷೆ ಹುಟ್ಟು ಹಾಕಿದೆ. ಏಪ್ರಿಲ್ 14ಕ್ಕೆ ತೆರೆಗೆ ಅಬ್ಬರಿಸುತ್ತಿರುವ `ಶಾಕುಂತಲಂ’ ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ಸಿನಿಮಾ ಪ್ರಚಾರಕ್ಕೆ ಸಮಂತಾ ಧರಿಸಿದ ದುಬಾರಿ ಬೆಲೆ ಸೀರೆ ಇದೀಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಸೀರೆ ಅಸಲಿ ಬೆಲೆ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ.‌ ಬಿಳಿ ಬಣ್ಣದ ಸೀರೆಯಲ್ಲಿ ಸಮಂತಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ತೆಳುವಾದ ಸೀರೆಯ ಮೇಲೆ ಹೂವುಗಳ ಪ್ರಿಂಟ್ ಕಾಣಬಹುದಾಗಿದೆ. 92,000 ರೂಪಾಯಿ ದುಬಾರಿ ಮೊತ್ತದ ಸೀರೆಯನ್ನು ನಟಿ ಧರಿಸಿದ್ದಾರೆ.

  • `ಮೈಯೋಸಿಟಿಸ್’ ಕಾಯಿಲೆಯಿಂದ ಹೊರಬರಲು ಮತ್ತೆ ವರ್ಕೌಟ್ ಶುರು ಮಾಡಿದ ಸಮಂತಾ

    `ಮೈಯೋಸಿಟಿಸ್’ ಕಾಯಿಲೆಯಿಂದ ಹೊರಬರಲು ಮತ್ತೆ ವರ್ಕೌಟ್ ಶುರು ಮಾಡಿದ ಸಮಂತಾ

    ಸೌತ್ ನಟಿ ಸಮಂತಾ (Samantha) ಇದೀಗ ಆರೋಗ್ಯದಲ್ಲಿ ಕೊಂಚ ಚೇತರಿಸಿಕೊಂಡಿದ್ದಾರೆ. ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಈಗ ಮತ್ತೆ ಅವರು ಜಿಮ್‌ಗೆ ಮರಳಿದ್ದಾರೆ. ಜಿಮ್‌ನಲ್ಲಿ (Gym) ಮತ್ತೆ ಸ್ಯಾಮ್ ಬೆವರಿಳಿಸುತ್ತಿದ್ದಾರೆ.

    `ಯಶೋದ’ ಸಿನಿಮಾದ ಸಕ್ಸಸ್ ನಂತರ `ಶಾಕುಂತಲಂ’ ರಿಲೀಸ್‌ಗೆ ಸಮಂತಾ ಕಾಯ್ತಿದ್ದಾರೆ. ಆರೋಗ್ಯದಲ್ಲಿ ಕೊಂಚ ಚೇತರಿಕೊಂಡಿರುವ ಬೆನ್ನಲ್ಲೇ ಸಿನಿಮಾ ಶೂಟಿಂಗ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ನಟ ಭಯಂಕರ: ಮೊದಲು ಟ್ರೈಲರ್ ನೋಡಿ, ಆನಂತರ ಸಿನಿಮಾ ನೋಡ್ಬೇಕೋ ಬೇಡ್ವೊ ಡಿಸೈಡ್ ಮಾಡಿ

    ಈ ಹಿಂದೆ ಸಮಂತಾ ಕೂಡ ಸಾಕಷ್ಟು ಸಮಯ ಜಿಮ್‌ನಲ್ಲಿ ಕಳೆದಿದ್ದರು. ಅನಾರೋಗ್ಯದ ನಿಮಿತ್ತ ಅವರು ಸಂಪೂರ್ಣವಾಗಿ ಜಿಮ್ ತೊರೆದಿದ್ದರು. ಈಗ ಅವರು ವರ್ಕೌಟ್ ಮಾಡಲು ಮರಳಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೈಯೋಸಿಟಿಸ್ (Myosities) ಕಾಯಿಲೆಯಿಂದ ಹೊರ ಬರಲು ಜಿಮ್‌ನತ್ತ ನಟಿ ಮುಖ ಮಾಡಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ಸಮಂತಾ ಅವರು ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ವಿಚಿತ್ರ ಕಾಯಿಲೆ ಕಾಣಿಸಿಕೊಂಡ ನಂತರದಲ್ಲಿ ಅನಿವಾರ್ಯವಾಗಿ ದಿನಚರಿಯಲ್ಲಿ ಹಲವು ಬದಲಾವಣೆ ಮಾಡಿಕೊಳ್ಳಬೇಕಾಯಿತು. ಈಗ ಮತ್ತಷ್ಟು ಫಿಟ್ ಆಗಲು ಸಮಂತಾ ಜಿಮ್‌ನಲ್ಲಿ ಸಖತ್ ವರ್ಕೌಟ್ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಷ್ಟೇ ಕಷ್ಟ ಬಂದರೂ ಸಿನಿಮಾ ಮೇಲಿನ ಪ್ರೀತಿ ಕಳೆದುಕೊಂಡಿಲ್ಲ: ಗಳಗಳನೇ ಅತ್ತ ಸಮಂತಾ

    ಎಷ್ಟೇ ಕಷ್ಟ ಬಂದರೂ ಸಿನಿಮಾ ಮೇಲಿನ ಪ್ರೀತಿ ಕಳೆದುಕೊಂಡಿಲ್ಲ: ಗಳಗಳನೇ ಅತ್ತ ಸಮಂತಾ

    ಟಾಲಿವುಡ್ (Tollywood) ಬ್ಯೂಟಿ ಸಮಂತಾ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಸೂಕ್ತ ಚಿಕಿತ್ಸೆಯ ಬಳಿಕ ಭಾರತಕ್ಕೆ ಸಮಂತಾ ವಾಪಸಾಗಿದ್ದಾರೆ. ಮತ್ತೆ ಸಿನಿಮಾ ಕಾರ್ಯಗಳಲ್ಲಿ ಆಕ್ಟೀವ್ ಆಗಿದ್ದಾರೆ. ಈ ವೇಳೆ `ಶಾಕುಂತಲಂ’ (Shaakuntalam) ಟ್ರೈಲರ್ ಲಾಂಚ್ ನಟಿ ಕಣ್ಣೀರಿಟ್ಟಿದ್ದಾರೆ. ಸಿನಿಮಾ ಮೇಲಿನ ಪ್ರೀತಿ ಇಲ್ಲಿಯವೆರೆಗೂ ತಂದು ನಿಲ್ಲಿಸಿದೆ ಎಂದು ಸಮಂತಾ (Samantha) ಭಾವುಕರಾಗಿದ್ದಾರೆ.

    ಸಮಂತಾ (Samantha) ನಟನೆಯ ʻಶಾಕುಂತಲಂʼ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಕೂಡ ಪಡೆದಿದೆ. ಟ್ರೈಲರ್‌ನಲ್ಲಿ ಸಮಂತಾ ನಟನೆ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ಈ ಟ್ರೈಲರ್  ಲಾಂಚ್ ಇವೆಂಟ್‌ನಲ್ಲಿ ಸಮಂತಾ ಕೂಡ ಭಾಗಿಯಾಗಿದ್ದು, ವೇದಿಕೆಯಲ್ಲಿ ಸಮಂತಾ ಗಳಗಳನೇ ಅತ್ತಿದ್ದಾರೆ.

    ಸಮಂತಾ ಮಾತನಾಡಿ, ಈ ಕ್ಷಣಕ್ಕಾಗಿ ನಾನು ಬಹಳ ದಿನಗಳಿಂದ ಕಾಯುತ್ತಿದ್ದ. ನಿರೀಕ್ಷೆಯಂತೆ ಚಿತ್ರ ಬಿಡುಗಡೆಯಾಗಲಿ ಎಂಬುದು ಎಲ್ಲರ ಆಶಯ. ಆದರೆ ಕೆಲವೊಮ್ಮೆ ಕೆಲವು ಮ್ಯಾಜಿಕ್ ನಡೆಯುತ್ತದೆ. `ಶಾಕುಂತಲಂ’ ವಿಷಯದಲ್ಲೂ ಅದೇ ಆಯಿತು. ಎಷ್ಟೇ ಕಷ್ಟಗಳು ಬಂದರೂ ಸಿನಿಮಾ ಮೇಲಿನ ಪ್ರೀತಿಯನ್ನು ಕಳೆದುಕೊಂಡಿಲ್ಲ. ಸಿನಿಮಾ ನನ್ನನ್ನು ಪ್ರೀತಿಸುತ್ತಿದೆ ಎಂದು ಸಮಂತಾ ಹೇಳಿದರು. ಇದನ್ನೂ ಓದಿ: ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಚಂದನ್ ಶೆಟ್ಟಿ -ನಿವೇದಿತಾ

    ಇನ್ನೂ ಗುಣಶೇಖರ್‌ ನಿರ್ದೇಶನದ ಈ ಸಿನಿಮಾ ಇದೇ ಫೆ.17ರಂದು ತೆರೆಗೆ ಅಪ್ಪಳಿಸುತ್ತಿದೆ. ಬಹುಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಶಾಕುಂತಲಂ’ ಚಿತ್ರತಂಡದ ಮೇಲೆ ಮುನಿಸಿಕೊಂಡ್ರಾ ಸಮಂತಾ!

    `ಶಾಕುಂತಲಂ’ ಚಿತ್ರತಂಡದ ಮೇಲೆ ಮುನಿಸಿಕೊಂಡ್ರಾ ಸಮಂತಾ!

    ಟಾಲಿವುಡ್‌ನ ನಿರೀಕ್ಷಿತ ಸಿನಿಮಾಗಳಲ್ಲಿ ಸಮಂತಾ ನಟನೆಯ `ಶಾಕುಂತಲಂ’ ಸಿನಿಮಾ ಕೂಡ ಒಂದು. ಇದೀಗ `ಶಾಕುಂತಲಂ’ ಚಿತ್ರದ ಮೇಲೆ ಸಮಂತಾ ಮುನಿಸಿಕೊಂಡಿದ್ದಾರಂತೆ. ಹಾಗಂತ ಟಿಟೌನ್ ಅಡ್ಡಾದಲ್ಲಿ ಈ ವಿಚಾರ ಸಖತ್ ಸುದ್ದಿಯಾಗುತ್ತಿದೆ.

    ಆ್ಯಪಲ್ ಬ್ಯೂಟಿ ಸಮಂತಾ ಕೈಯಲ್ಲಿ ದಕ್ಷಿಣದ ಚಿತ್ರದ ಜೊತೆ ಹಾಲಿವುಡ್ ಚಿತ್ರಗಳಿವೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದೀಗ ಸಮಂತಾ `ಶಾಕುಂತಲಂ’ ಚಿತ್ರತಂಡದ ಮೇಲೆ ಮುನಿಸಿಕೊಂಡಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ನಿರ್ಮಾಪಕಿ ನೀಲಿಮಾ ಕೂಡ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಸಿಂಪಲ್ ಸುನಿ `ಗತವೈಭವ’ದಲ್ಲಿ ದೇವಕನ್ಯೆಯಾಗಿ ಆಶಿಕಾ ರಂಗನಾಥ್‌

    ಕಳೆದ ವರ್ಷವೇ `ಶಾಕುಂತಲಂ’ ಚಿತ್ರ ಕಂಪ್ಲೀಟ್ ಆಗಿದೆ. ಇದುವರೆಗೂ ಈ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಕೂಡ ಹೊರಬಿದ್ದಿಲ್ಲ. ಹಾಗಾಗಿ ತಡವಾಗುತ್ತಿರುವ ಚಿತ್ರದ ಕೆಲಸದ ಬಗ್ಗೆ ಸಮಂತಾ ಬೇಸರಿಸಿಕೊಂಡಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಗಾಸಿಪ್ ಬೆನ್ನಲ್ಲೇ ಎಲ್ಲಾ ವದಂತಿಗೂ ನಿರ್ಮಾಪಕಿ ನೀಲಿಮಾ ಟ್ವಿಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

    `ಶಾಕುಂತಲಂ’ ಚಿತ್ರಕ್ಕಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ, ಚಿತ್ರ ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಚಿತ್ರದ ಸಿಜಿ ವರ್ಕ್ ನಡೆಯುತ್ತಿದೆ. ಒಂದು ಸಿನಿಮಾ ಉತ್ತಮವಾಗಿ ಔಟ್‌ಪುಟ್ ಕೊಡಲು ಸಮಯ ಬೇಕಿದೆ. ಸದ್ಯದಲ್ಲೇ ಚಿತ್ರದ ಮತ್ತಷ್ಟು ಅಪ್‌ಡೇಟ್ ನೀಡಲಿದೆ. ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]