Tag: shakuntalaam

  • ಸ್ಯಾಮ್ ಈಸ್ ಬ್ಯಾಕ್, ಹೊಸ ಫೋಟೋಶೂಟ್‌ನಲ್ಲಿ ಸಮಂತಾ ಮಿಂಚಿಂಗ್

    ಸ್ಯಾಮ್ ಈಸ್ ಬ್ಯಾಕ್, ಹೊಸ ಫೋಟೋಶೂಟ್‌ನಲ್ಲಿ ಸಮಂತಾ ಮಿಂಚಿಂಗ್

    ಸೌತ್ ಬ್ಯೂಟಿ ಕ್ವೀನ್ ಸಮಂತಾ (Samantha) ಇದೀಗ ಪಡ್ಡೆಹುಡುಗರ ನಿದ್ದೆಕಡಿಸುವ ಅವತಾರದಲ್ಲಿ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. `ಶಾಕುಂತಲಂ’ (Shakuntalam) ಸಿನಿಮಾ ಪ್ರಚಾರ ಕಾರ್ಯದ ಮಧ್ಯೆ ಸ್ಯಾಮ್ ನಯಾ ಲುಕ್ ಈಗ ಸದ್ದು ಮಾಡ್ತಿದೆ.

    ಮೈಯೋಸಿಟಿಸ್ ಕಾಯಿಲೆ ಬಳಲುತ್ತಿರುವ ನಟಿ ಸಮಂತಾಗೆ ಬ್ಯೂಟಿ ಮಾಸಿದೆ ಎಂದೆಲ್ಲಾ ಇತ್ತೀಚಿಗೆ ಕಿಡಿಗೇಡಿಗಳು ಕಾಮೆಂಟ್ ಮಾಡಿದ್ದರು. ನೆಗೆಟಿವ್ ಮಾತನಾಡುವವರಿಗೆ ಸಮಂತಾ ತನ್ನ ಹೊಸ ಫೋಟೋಶೂಟ್‌ನಿಂದ (Photoshoot) ತಿರುಗೇಟು ನೀಡಿದ್ದಾರೆ. ಮೊದಲಿನಂತೆ ಸೂಪರ್ ಕೂಲ್ ಆಗಿ ಕ್ಯಾಮೆರಾ ಕಣ್ಣಿಗೆ ಸಮಂತಾ ಪೋಸ್ ನೀಡಿದ್ದಾರೆ.

    ಮಾಡ್ರನ್ ಡ್ರೆಸ್‌ನಲ್ಲಿ ಸಮಂತಾ ಚೆಂದದೊಂದು ಫೋಟೋಶೂಟ್ ಮಾಡಿಸಿದ್ದಾರೆ. ಮಸ್ತ್ ಆಗಿ ಕ್ಯಾಮೆರಾಗೆ ಕಣ್ಣಿಗೆ ಪೋಸ್ ನೀಡಿದ್ದಾರೆ. ಬ್ಲ್ಯಾಕ್ ಆ್ಯಂಡ್ ವೈಟ್ ಶೇಡ್‌ನಲ್ಲಿರುವ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ಇನ್ನೂ ಸಮಂತಾ (Samantha) `ಯಶೋದ’ (Yashoda) ಸಕ್ಸಸ್ ನಂತರ `ಶಾಕುಂತಲಂ’ ಸಿನಿಮಾ ಮೂಲಕ ಬರುತ್ತಿದ್ದಾರೆ. ಏಪ್ರಿಲ್ 14ಕ್ಕೆ ಸಿನಿಮಾ ತೆರೆಗೆ ಅಪ್ಪಳಿಸುತ್ತಿದೆ.

  • ಅಬ್ಬಬ್ಬಾ ಎನಿಸುವಷ್ಟಿದೆ ಸಮಂತಾ ಧರಿಸಿದ್ದ ಈ ಸೀರೆಯ ಬೆಲೆ?

    ಅಬ್ಬಬ್ಬಾ ಎನಿಸುವಷ್ಟಿದೆ ಸಮಂತಾ ಧರಿಸಿದ್ದ ಈ ಸೀರೆಯ ಬೆಲೆ?

    ಟಾಲಿವುಡ್ (Tollywood) ಬ್ಯೂಟಿ ಸಮಂತಾ (Samantha) ಸದ್ಯ ಶಾಕುಂತಲೆಯಾಗಿ ಮಿಂಚೋಕೆ ರೆಡಿಯಾಗಿದ್ದಾರೆ. ಇತ್ತೀಚೆಗೆ ʻಶಾಕುಂತಲಂʼ ಟ್ರೈಲರ್ ಲಾಂಚ್‌ಗೆ ಸಿಂಪಲ್ ಆಗಿ ನಟಿ ಸಮಂತಾ ಎಂಟ್ರಿ ಕೊಟ್ಟಿದ್ದರು. ಸ್ಯಾಮ್‌ ಧರಿಸಿದ್ದ ಸಿಂಪಲ್‌ ಸೀರೆ ಈಗ ನೆಟ್ಟಿಗರ ತಲೆ ಕೆಡಿಸಿದೆ. ಆ ಸೀರೆಯ ಅಸಲಿ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ.

    ಇತ್ತೀಚೆಗೆ ತೆರೆಕಂಡ `ಯಶೋದ’ (Yashoda Film) ಸಿನಿಮಾ ಭರ್ಜರಿ ಸಕ್ಸಸ್ ಕಂಡಿತ್ತು. ಅದರಲ್ಲೂ ಸಮಂತಾ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಅನಾರೋಗ್ಯದ ಮಧ್ಯೆ ಶಾಕುಂತಲೆ ಗೆಲ್ಲಲು ಸಮಂತಾ ಹೊರಟಿದ್ದಾರೆ. ಮೊನ್ನೆಯಷ್ಟೇ ಚಿತ್ರದ ಟ್ರೈಲರ್ ಲಾಂಚ್‌ನಲ್ಲಿ ಸಿಂಪಲ್ ಎಂಟ್ರಿ ಕೊಟ್ಟು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಬೆನ್ನಲ್ಲೇ ಇವೆಂಟ್‌ನಲ್ಲಿ ನಟಿ ಧರಿಸಿದ್ದ ಸೀರೆಯ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಸಿಕ್ಕಿದೆ.

     

    View this post on Instagram

     

    A post shared by Samantha (@samantharuthprabhuoffl)

    ತೋಳಿಲ್ಲದ ಸ್ಲೀವ್‌ಲೆಸ್ ಬ್ಲೋಸ್‌ಗೆ ಡಿಸೈನರ್ ವರ್ಕ್ ಇಲ್ಲದ ಸೀರೆ ಬಿಳಿ ಬಣ್ಣದ ಸೀರೆಯನ್ನ ಸಮಂತಾ ಉಟ್ಟಿದ್ದರು. ಕಣ್ಣಿಗೆ ತುಸು ದೊಡ್ಡದಾದ ಗ್ಲಾಸ್ ಧರಿಸಿ, ಸರಳವಾಗಿ ಮತ್ತು ಸುಂದರವಾಗಿ ಸಮಂತಾ ಕಾಣಿಸಿಕೊಂಡರು. ಇದನ್ನೂ ಓದಿ: ಶ್ರೀಜಾ 3ನೇ ಮದುವೆ ವದಂತಿ ನಡುವೆ ದುಬಾರಿ ಬಂಗಲೆಯನ್ನ ಮಗಳಿಗೆ ಉಡುಗೊರೆ ನೀಡಿದ ಮೆಗಾಸ್ಟಾರ್

     

    View this post on Instagram

     

    A post shared by Samantha (@samantharuthprabhuoffl)

    ಈ ಸರಳವಾದ ಸೀರೆಗೆ ನಟಿ ಸಮಂತಾ 50,000 ರೂ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಸೀರೆ ಡಿಸೈನ್ ಮಾಡಿರುವುದು ದೇವನಗರಿಯಲ್ಲಿ. ಸೀರೆಯ ಜೊತೆ ಕನ್ನಡಕ, ಪಾದರಕ್ಷೆ ಎಲ್ಲಾ ಸೇರಿದರೆ ಬರೋಬ್ಬರಿ 70,000 ರೂ ಮೌಲ್ಯವಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿವೋರ್ಸ್ ನಂತರ ಆಧ್ಯಾತ್ಮದತ್ತ ಹೊರಳಿದ್ರಾ ನಟಿ ಸಮಂತಾ

    ಡಿವೋರ್ಸ್ ನಂತರ ಆಧ್ಯಾತ್ಮದತ್ತ ಹೊರಳಿದ್ರಾ ನಟಿ ಸಮಂತಾ

    `ಪುಷ್ಪ’ (Pushpa) ಬ್ಯೂಟಿ ಸಮಂತಾ (Samantha) ಈಗ ಶಾಕುಂತಲೆ ಆಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಮಯೋಸೈಟಿಸ್ ಕಾಯಿಲೆ ಜೊತೆ ಹೊರಾಡುತ್ತಲೇ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಟಿ ಸಮಂತಾ ಭಾಗಿಯಾಗುತ್ತಿದ್ದಾರೆ. ತಾವು ಹೋದಲೆಲ್ಲ ಕಡೆ ಸಮಂತಾ ಜಪಮಾಲೆ (Japa Mala) ಹಿಡಿದು ಎಂಟ್ರಿ ಕೊಡ್ತಿದ್ದಾರೆ. ನಟಿಯ ಈ ನಡೆ ನೋಡಿ ಡಿವೋರ್ಸ್ ನಂತರ ಆಧ್ಯಾತ್ಮದತ್ತ ವಾಲಿದ್ರಾ ಅಂತಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

    ಇತ್ತೀಚೆಗಷ್ಟೇ ಸಮಂತಾ ನಟನೆಯ `ಶಾಕುಂತಲಂ’ (Shakuntalam) ಚಿತ್ರದ ಟ್ರೈಲರ್ ರಿಲೀಸ್ ಆಯ್ತು. ಟ್ರೈಲರ್ ಝಲಕ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಿರುವಾಗ ಈ ಚಿತ್ರದ ಇವೆಂಟ್‌ನಲ್ಲಿ ಸಮಂತಾ ಕೈಯಲ್ಲಿದ್ದ ಜಪಮಾಲೆ ಎಲ್ಲರ ಗಮನ ಸೆಳೆದಿತ್ತು. ಸಮಂತಾ ಮೈಕ್ ಹಿಡಿದು ವೇದಿಕೆಯಲ್ಲಿ ಮಾತನಾಡುವಾಗ ಕೂಡ ಮತ್ತೊಂದು ಕೈಯಲ್ಲಿ ಜಪಮಾಲೆ ಹಿಡಿದುಕೊಂಡಿದ್ದರು. ಹಾಗಾಗಿ ಸಹಜವಾಗಿಯೇ ಯಾಕೀ ಜಪಮಾಲೆ? ಸಮಂತಾ (Samantha) ಆಧ್ಯಾತ್ಮದತ್ತ ವಾಲುತ್ತಿದ್ದಾರಾ? ಡಿವೋರ್ಸ್ (Divorce) ಬಳಿಕ ಮಯೋಸೈಟಿಸ್ ಚಿಕಿತ್ಸೆಯ ಭಾಗವಾಗಿ ಈ ರೀತಿ ಮಾಲೆ ಹಿಡಿದುಕೊಂಡಿದ್ದಾರಾ? ಹೀಗೆ ಹಲವು ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ. ಇದನ್ನೂ ಓದಿ:ಎಷ್ಟೇ ಕಷ್ಟ ಬಂದರೂ ಸಿನಿಮಾ ಮೇಲಿನ ಪ್ರೀತಿ ಕಳೆದುಕೊಂಡಿಲ್ಲ: ಗಳಗಳನೇ ಅತ್ತ ಸಮಂತಾ

    ಸಾಕಷ್ಟು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಮಂತಾ ಉತ್ತಮ ಆರೋಗ್ಯ, ಶಾಂತಿಗಾಗಿ ಪ್ರತಿ ದಿನ 10,0008 ಶ್ಲೋಕಗಳ ಜಪ ಮಾಡುತ್ತಿದ್ದಾರಂತೆ. ಇನ್ನೂ ಸ್ಯಾಮ್ ಕೆಲವು ವರ್ಷಗಳ ಹಿಂದೆಯೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇತ್ತೀಚೆಗೆ ಮಂತ್ರಗಳನ್ನು ಪಠಣ ಮಾಡುತ್ತಿದ್ದಾರೆ. ಹಾಗಾಗಿ ಹೋದಲ್ಲಿ ಬಂದಲ್ಲಿ ಅದನ್ನು ಕೊಂಡೊಯ್ಯುತ್ತಿದ್ದಾರೆ. ಅಪರೂಪದ ಕಾಯಿಲೆಯ ಬಗ್ಗೆ ತಿಳಿಯುತ್ತಿದ್ದಂತೆ ಸಮಂತಾ ಕುಗ್ಗಿ ಹೋಗಿದ್ದರು. ಆದರೆ ಅಷ್ಟೇ ಬಲವಾದ ಆತ್ಮವಿಶ್ವಾಸದೊಂದಿಗೆ ತನ್ನ ಸಮಸ್ಯೆಯನ್ನು ಎದುರಿಸಲು ಹೋರಾಡುತ್ತಿದ್ದಾರೆ.

    ಇನ್ನೂ ಈ ಕಾರ್ಯಕ್ರಮದಲ್ಲಿ ನಟಿ ಮಾತನಾಡುವಾಗ, ಎಷ್ಟೇ ಕಷ್ಟ ಬಂದರೂ ಸಿನಿಮಾ ಮೇಲಿನ ಪ್ರೀತಿ ಕಳೆದುಕೊಂಡಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಈಗ ಸಮಂತಾ ನಡೆ ಮತ್ತು ನುಡಿಗೆ ಅಭಿಮಾನಿಗಳಿಗೆ ಹಲವು ಪ್ರಶ್ನೆಗಳು ಕಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k