Tag: Shakuntala

  • ಮಿಸ್ಟರ್ ಅಂಡ್ ಮಿಸಸ್ ಮನ್ಮಥ ಸಿನಿಮಾದ ಟ್ರೈಲರ್ ರಿಲೀಸ್

    ಮಿಸ್ಟರ್ ಅಂಡ್ ಮಿಸಸ್ ಮನ್ಮಥ ಸಿನಿಮಾದ ಟ್ರೈಲರ್ ರಿಲೀಸ್

    ಅಂದು ಹಾಸ್ಯನಟ ಕಾಶೀನಾಥ್ ಅವರು ಮನ್ಮಥನ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು, ಈಗ ‘ಮಿ.ಅಂಡ್ ಮಿಸಸ್ ಮನ್ಮಥ’ (Mr and Miss Manmatha) ಹೆಸರಿನಲ್ಲಿ ಚಿತ್ರವೊಂದು ತಯಾರಾಗಿದ್ದು, ಅದರಲ್ಲಿ ಸುಬ್ರಮಣಿ ಅವರು  ಮನ್ಮಥನಾಗಿ ಕಾಣಿಸಿಕೊಂಡಿದ್ದಾರೆ.  ಸುಬ್ರಮಣಿ ಅವರೇ  ನಿರ್ದೇಶನ ಮಾಡಿರುವ ‘ಮಿಸ್ಟರ್ ಅಂಡ್ ಮಿಸ್ ಮನ್ಮಥ’ ಚಿತ್ರದ ಟ್ರೈಲರ್ (Trailer) ಮತ್ತು ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು, ಇದೊಂದು ಕಾಮಿಡಿ ಹಾಗೂ ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರ ಇರುವ ಚಿತ್ರವಾಗಿದ್ದು, ಮೂರು ದಶಕಗಳಿಂದ ಸೀರಿಯಲ್, ಸಿನಿಮಾ, ನಾಟಕ ಅಂತ ಅಭಿನಯದಲ್ಲಿ ತೊಡಗಿಕೊಂಡಿರುವ ಎ.ಸುಬ್ರಮಣಿ ರಾಮಗೊಂಡನಹಳ್ಳಿ (Subramani) ಅವರು ಈ ಚಿತ್ರದ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತು ನಿಭಾಯಿಸಿದ್ದಾರೆ. ಜೊತೆಗೆ ಚಿತ್ರದ ನಾಯಕನಾಗೂ ಸಹ ಅಭಿನಯಿಸಿದ್ದಾರೆ,‌ ರೈತ ಕುಟುಂಬದಿಂದ ಬಂದ ಸುಬ್ರಮಣಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ಪಳಗಿ ಈಗ ಚಿತ್ರ ನಿರ್ಮಾಪಕನಾಗಿದ್ದಾರೆ,  ಓರ್ವ ಶ್ರೀಮಂತ ಹಾಗೂ ಆಧುನಿಕ ಮನ್ಮಥನ ಕಥೆಯಿದಾಗಿದ್ದು, ಚಿತ್ರದಲ್ಲಿ ಶಕುಂತಲಾ, ಚಂದನಾ ಹಾಗೂ ವೈಶಾಲಿ(ಮಂಗಳಮುಖಿ) ಎಂಬ ಮೂವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ, ನಾಯಕ ಸುಬ್ರಮಣಿ ಕಳೆದ 94ರಿಂದಲೂ ಒಬ್ಬ ಹೀರೋ ಆಗಬೇಕೆಂದು  ಪ್ರಯತ್ನಿಸಿದೆ, ಐದಾರು ಸೀರಿಯಲ್ ಹಾಗೂ ಅರಬ್ಬೀ ಕಡಲತೀರದಲ್ಲಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆರಂಭದಲ್ಲಿ ಮನ್ಮಥ ಒಬ್ಬ ಮೂಗನಾಗಿದ್ದು, ಶ್ರೀಮಂತನಾದ ಆತನಲ್ಲಿರುವ  ಹಣವನ್ನು ಲಪಟಾಯಿಸಲು ಜಾಕ್ ಅಂಡ್ ಜಿಲ್ ಎಂಬ ಇಬ್ಬರು ವ್ಯಕ್ತಿಗಳು ಆತನ ಹಿಂದೆ  ಮೂವರು ಹುಡುಗಿಯರನ್ನು ಛೂ ಬಿಡುತ್ತಾರೆ, ಆದರೆ ಆತ ಯಾವುದೇ ಆಮಿಷಕ್ಕೂ ಬಗ್ಗಲ್ಲ, ಹೀಗೆ ಮನರಂಜನಾತ್ಮಕವಾಗಿ  ಕಥೆಯನ್ನು ಹೇಳಿಕೊಂಡು ಹೋಗಿದ್ದೇವೆ. ಚಿತ್ರಕ್ಕೆ ಬೆಂಗಳೂರು, ಅರಸೀಕೆರೆ, ಮಂಗಳೂರು ಮತ್ತು ಉಡುಪಿ ಸುತ್ತಮತ್ತ ಚಿತ್ರೀಕರಣ ನಡೆಸಲಾಗಿದೆ. ಅಲ್ಲದೆ ಚಿತ್ರವನ್ನು ಅ.6ಕ್ಕೆ ರಿಲೀಸ್ ಮಾಡುವ ಯೋಜನೆಯಿದೆ ಎಂದರು.

     

    ನಂತರ ನಾಯಕಿ ವೈಶಾಲಿ ಮಾತನಾಡಿ ಸಿನಿಮಾದಲ್ಲಿ ಅಭಿನಯಿಸಬೇಕೆಂದು ತುಂಬಾ ಆಸೆಯಿತ್ತು, ನಮಗಾರೂ ಅವಕಾಶ ನೀಡಿರಲಿಲ್ಲ, ಸುಬ್ರಮಣಿ ಅವರು ಅವಕಾಶ ನೀಡಿದ್ದಾರೆ, ಚಿತ್ರದಲ್ಲಿ ರಮ್ಯ ಎಂಬ ಯುವತಿಯ ಪಾತ್ರವನ್ನು ಮಾಡಿದ್ದೇನೆ ಎಂದರು, ಮತ್ತೊಬ್ಬ ನಟಿ ಚಂದನಾ ಮಾತನಾಡಿ ನನ್ನದು ಒಬ್ಬ ಲವರ್ ಪಾತ್ರ, ನಾನು ಸಕಲೇಶಪುರದವಳು ಎಂದು ಹೇಳಿದರು, ಸಂಗೀತ ನಿರ್ದೇಶಕ ಕೆವಿನ್ ಎಂ. ಮಾತನಾಡಿ ಇದು ನನ್ನ ಸಂಗೀತ ನಿರ್ದೇಶನದ 8ನೇ ಚಿತ್ರ, ಚಿತ್ರದಲ್ಲಿ 4 ಹಾಡುಗಳಿದ್ದು, ಎಲ್ಲವೂ ವಿಭಿನ್ನವಾಗಿವೆ ಎಂದರು. ಮಜಾಭಾರತದಲ್ಲಿ ಅಭಿನಯಿಸಿದ ಬಸವರಾಜ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ, ಮತ್ತೊಬ್ಬ ಸ್ನೇಹಿತನಾಗಿ ರವಿ ಕುಂದಾಪುರ ನಟಿಸಿದ್ದಾರೆ, ಮಾನ್ಯ ಶ್ರೇಯಶ್ರೀ ಕ್ರಿಯೇಶನ್ಸ್  ನಿರ್ಮಾಣದ ಈ ಚಿತ್ರಕ್ಕೆ ವಿಜಯರಾಜ್ ಅವರ ಕಥೆ-ಸಂಕಲನ, ರವಿಶ್ರೀ ಮಾರುತಿ ಅವರ ಸಹನಿರ್ದೇಶನ ಮತ್ತು ಸಂಭಾಷಣೆ, ರವಿ ಅವರ ಛಾಯಾಗ್ರಹಣ, ಜೈಪ್ರಕಾಶ್ ಅವರ ನೃತ್ಯ ನಿರ್ದೇಶನ, ಶಿವು ಅವರ ಸಾಹಸ ನಿರ್ದೇಶನವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಂತಾ ನಟನೆಯ ಶಾಕುಂತಲಂ ಗಳಿಗೆ ಶಾಕ್ ನೀಡುವಂಥದ್ದು: ನಾಲ್ಕು ದಿನಕ್ಕೆ ಗಳಿಸಿದ್ದೆಷ್ಟು?

    ಸಮಂತಾ ನಟನೆಯ ಶಾಕುಂತಲಂ ಗಳಿಗೆ ಶಾಕ್ ನೀಡುವಂಥದ್ದು: ನಾಲ್ಕು ದಿನಕ್ಕೆ ಗಳಿಸಿದ್ದೆಷ್ಟು?

    ಮಂತಾ ನಟನೆಯ ಶಾಕುಂತಲಂ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಇದೊಂದು ಭಾರೀ ಬಜೆಟ್ ಸಿನಿಮಾವಾಗಿದ್ದರಿಂದ ಇದನ್ನು ಸಮಂತಾ ಹೇಗೆ ನಿಭಾಯಿಸಿಕೊಂಡು ಹೋಗಲಿದ್ದಾರೆ ಎನ್ನುವ ಕುತೂಹಲವೂ ಇತ್ತು. ಆದರೆ, ಅಂದುಕೊಂಡಂತೆ ಯಾವುದೂ ನಡೆದಿಲ್ಲ. ಬಾಕ್ಸ್ ಆಫೀಸಿನಲ್ಲಿ ಶಾಕುಂತಲಂ ಮಕಾಡೆ ಮಲಗಿದೆ. ನಿರ್ಮಾಪಕರಿಗೆ ಭಾರೀ ನಷ್ಟವನ್ನೇ ಮಾಡಲಿದೆ. ನಾಲ್ಕು ದಿನಗಳ ಗಳಿಕೆ ಕೇವಲ 8 ಕೋಟಿ ಎಂದು ಅಂದಾಜಿಸಲಾಗಿದೆ.

    ನಾಲ್ಕನೇ ದಿನದ ಗಳಿಕೆ ಕೇವಲ 60 ಲಕ್ಷ ರೂಪಾಯಿಗಳು ಆಗಿರುವುದರಿಂದ ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನೂ ಕಡಿಮೆ ಆಗುತ್ತಾ ಹೋಗುತ್ತದೆ. ಹಾಗಾಗಿ ಹಾಕಿದ ಬಂಡವಾಳವೂ ನಿರ್ಮಾಪಕರಿಗೆ ಬರುವುದು ಅನುಮಾನ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಬೆನ್ನಲ್ಲೆ ಸಮಂತಾ ಬಗ್ಗೆ ಸಾಕಷ್ಟು ಟೀಕೆಗಳು ಕೂಡ ಕೇಳಿ ಬರುತ್ತಿವೆ.

    ಶಾಕುಂತಲಂ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸುತ್ತಿದ್ದಂತೆ ಸಮಂತಾ ಮೇಲೆ ಹಲವರು ಮುಗಿಬಿದ್ದಿದ್ದಾರೆ. ನೆಗೆಟಿವ್ ಕಾಮೆಂಟ್ ಗಳನ್ನು ಮಾಡುವ ಮೂಲಕ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಸಮಂತಾ ನಟಿಸಿದರೆ ಆ ಸಿನಿಮಾಗಳು ಸೋಲುತ್ತವೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಈ ಎಲ್ಲದಕ್ಕೂ ಉತ್ತರ ಎನ್ನುವಂತೆ ಸಮಂತಾ ಭಗವದ್ಗೀತೆಯ (BhagavadGita) ಸಾಲುಗಳನ್ನು ಹಾಕಿದ್ದಾರೆ.

    ಕಾರಿನಲ್ಲಿ ಕುಳಿತಿರುವ ಸುಂದರವಾದ ಫೋಟೋವೊಂದನ್ನು ಶೇರ್ ಮಾಡಿರುವ ಸಮಂತಾ, ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ. ಮಾ ಕರ್ಮಫಲಹೇತುರ್ಭೂರ್ಮಾತೇ ಸಂಗೋಸ್ತ್ವ ಕರ್ಮಣಿ’ ಎಂದು ಬರೆಯುವ ಮೂಲಕ ಟೀಕೆ ಮಾಡುವವರಿಗೆ ಉತ್ತರ ನೀಡಿದ್ದಾರೆ. ಅದರಲ್ಲೂ ಈ ಪೋಸ್ಟ್ ಹಾಕಿದ್ದು, ತೆಲುಗಿನ ನಿರ್ಮಾಪಕ ಚಿಟ್ಟಿಬಾಬುಗೆ ಎಂದು ಹೇಳಲಾಗುತ್ತಿದೆ. ಶಾಕುಂತಲಂ ಸಿನಿಮಾ ನೋಡಿದ್ದ ಚಿಟ್ಟಿಬಾಬು, ‘ಸಮಂತಾ ಅಧ್ಯಾಯ ಮುಗೀತು’ ಎಂದು ಟೀಕಿಸಿದ್ದರು.

    ಸಮಂತಾ (Samantha) ನಟನೆಯ ‘ಶಾಕುಂತಲಂ’ (Shakunthalam) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಕಮಾಲ್ ಮಾಡಲಿಲ್ಲ. ಐವತ್ತು ಕೋಟಿ ವೆಚ್ಚದಲ್ಲಿ ತಯಾರಾದ ಈ  ಸಿನಿಮಾ  ನಿರ್ಮಾಪಕರಿಗೆ ಹಣ ತಂದುಕೊಡಲಿಲ್ಲ. ಹಾಗಾಗಿ ಮತ್ತೆ ಸಮಂತಾ ವಿರುದ್ಧ ಟ್ರೋಲ್ ಹಾವಳಿ ಹೆಚ್ಚಾಗಿದೆ. ಸಮಂತಾ ವಿರುದ್ಧ ನೆಗೆಟಿವ್ ಕಾಮೆಂಟ್ ಕೂಡ ಬರೆಯುತ್ತಿದ್ದಾರೆ. ಇದೆಲ್ಲದನ್ನೂ ತಲೆ ಕೆಡಿಸಿಕೊಳ್ಳದೇ ಸಮಂತಾ ಮುಂದಿನ ಪ್ರಾಜೆಕ್ಟ್ ಬಗ್ಗೆ ಗಮನ ಕೊಟ್ಟಿದ್ದಾರೆ.

    ಸಮಂತಾ ಕನಸಿನ ಪ್ರಾಜೆಕ್ಟ್ ಸಿಟಾಡೆಲ್ (Citadel) ವೆಬ್ ಸೀರಿಸ್ (Web Series) ಶೂಟಿಂಗ್ ಇನ್ನೇನು ಶುರುವಾಗಲಿದೆ. ಈ ವೆಬ್ ಸರಣಿಯ ಚಿತ್ರೀಕರಣಕ್ಕೆ ವಿದೇಶದಲ್ಲಿ ನಡೆಯಲಿದೆ. ಹಾಗಾಗಿ ಅವರು ವಿಮಾನ ಏರಿದ್ದಾರೆ. ತಾವು ವಿದೇಶ ಪ್ರಯಾಣವನ್ನು ಮಾಡುತ್ತಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸಿಟಾಡೆಲ್ ರಾಜ್ ಮತ್ತು ಡಿಕೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವೆಬ್ ಸಿರೀಸ್. ವರುಣ್ ಧವನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸರಣಿಯಲ್ಲಿ ಸಮಂತಾ ವಿಶೇಷ ಪಾತ್ರವನ್ನು ಮಾಡಲಿದ್ದಾರೆ. ಈ ಪಾತ್ರಕ್ಕಾಗಿ ಅವರು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಭಾರೀ ಬಜೆಟ್ ನಲ್ಲಿ ಈ ವೆಬ್ ಸಿರೀಸ್ ಮೂಡಿ ಬರಲಿದೆ. ಈ ನಡುವೆ ಮತ್ತೊಂದು ಹೊಸ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದರು. ಅದರ ಮಾಹಿತಿಯನ್ನು ಸದ್ಯದಲ್ಲೇ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ನಟಿ ಸಮಂತಾ ಆರೋಗ್ಯದ ಬಗ್ಗೆ ಮತ್ತೆ ಆತಂಕ: ‘ಶಾಕುಂತಲಾ’ ಸಿನಿಮಾ ರಿಲೀಸ್ ಮುಂದಕ್ಕೆ

    ನಟಿ ಸಮಂತಾ ಆರೋಗ್ಯದ ಬಗ್ಗೆ ಮತ್ತೆ ಆತಂಕ: ‘ಶಾಕುಂತಲಾ’ ಸಿನಿಮಾ ರಿಲೀಸ್ ಮುಂದಕ್ಕೆ

    ಕ್ಷಿಣದ ಖ್ಯಾತ ನಟಿ ಸಮಂತಾ (Samantha) ಅವರ ಆರೋಗ್ಯದ ಬಗ್ಗೆ ಹಲವು ದಿನಗಳಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಸಮಂತಾ ಅವರ ಮ್ಯಾನೇಜರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸಮಂತಾ ಅವರ ಆರೋಗ್ಯ ಚೆನ್ನಾಗಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದೂ ತಿಳಿಸಿದ್ದಾರೆ. ಆದರೂ, ಸಮಂತಾ ಅವರ ಆರೋಗ್ಯದ (Health) ಬಗ್ಗೆ ಅನುಮಾನ ಮೂಡುವುದು ನಿಂತಿಲ್ಲ. ಕಾರಣ, ಸಮಂತಾ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತು ಅವರ ಸಿನಿಮಾಗಳ ಕೆಲಸಗಳು ಅಲ್ಲಲ್ಲೇ ನಿಂತಿವೆ.

    ಸಮಂತಾ ನಟನೆಯ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಎರಡೂ ಸಿನಿಮಾಗಳಲ್ಲೂ ಇವರೇ ಹೀರೋ, ಇವರೇ ಹಿರೋಯಿನ್. ಶಾಕುಂತಲಾ (Shakuntala) ಮತ್ತು ಯಶೋಧಾ (Yashodha) ಚಿತ್ರಗಳನ್ನು ಮುಗಿಸಿರುವ ಸಮಂತಾ, ಅದರ ಬಿಡುಗಡೆಗಾಗಿ ಕಾಯುತ್ತಿದ್ದರು. ಆದರೆ, ಎರಡೂ ಚಿತ್ರಗಳ ರಿಲೀಸ್ ಮುಂದಕ್ಕೆ ಹೋಗುತ್ತಿವೆ. ಈಗಾಗಲೇ ಚಿತ್ರದ ಪೋಸ್ಟರ್, ಫಸ್ಟ್ ಲುಕ್ ಹೀಗೆ ಏನೆಲ್ಲ ರಿಲೀಸ್ ಆಗುತ್ತಿವೆ. ಒಂದಕ್ಕೂ ಸಮಂತಾ ರಿಯ್ಯಾಕ್ಟ್ ಮಾಡಿಲ್ಲ. ಆಯಾ ಪೋಸ್ಟರ್ ಅನ್ನು  ಅವರು ಹಂಚಿಕೊಂಡಿಲ್ಲ.

    ಅಂದುಕೊಂಡಂತೆ ಆಗಿದ್ದರೆ, ಶಾಕುಂತಲಾ ಸಿನಿಮಾ ರಿಲೀಸ್ ಇನ್ನಷ್ಟೇ ಆಗಬೇಕಿತ್ತು. ಆದರೆ, ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಮುಂದಕ್ಕೆ ಹಾಕಿದ್ದಾರೆ. ಕಾರಣವನ್ನು ಮಾತ್ರ  ಅವರು ನೀಡಿಲ್ಲ. ಹಾಗಾಗಿ ಸಮಂತಾ ಅವರ ಅನಾರೋಗ್ಯವೇ ಚಿತ್ರ ಮುಂದೂಡಲು ಕಾರಣ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳಲ್ಲಿ (Fans) ಆತಂಕವೂ ಹೆಚ್ಚಾಗಿದೆ. ಈ ಕುರಿತು ಸ್ಪಷ್ಟನೆ ಸಿಗಬೇಕಿದೆ ಎನ್ನುತ್ತಿದ್ದಾರೆ ಫ್ಯಾನ್ಸ್. ಇದನ್ನೂ ಓದಿ:ರಿಷಬ್ ಶೆಟ್ಟರ ‘ಕಾಂತಾರ’ ಸಿನಿಮಾ ಹೇಗಿದೆ? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರೆದ ಸುದೀರ್ಘ ರಿವ್ಯೂ

    ಸಮಂತಾ ಚರ್ಮರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಅಮೆರಿಕಾಗೆ (America) ತೆರಳಿದ್ದು, ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಹೀಗಾಗಿಯೇ ಅವರು ಯಾವುದೇ ಶೂಟಿಂಗ್ ಮತ್ತು ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಎಲ್ಲದಕ್ಕೂ ಸಮಂತಾ ಅವರು ಉತ್ತರ ಕೊಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸಮಂತಾಗೆ ಗಂಭೀರ ಆರೋಗ್ಯ ಸಮಸ್ಯೆಯಾ? ಆತಂಕಗೊಂಡ ಫ್ಯಾನ್ಸ್

    ಸಮಂತಾಗೆ ಗಂಭೀರ ಆರೋಗ್ಯ ಸಮಸ್ಯೆಯಾ? ಆತಂಕಗೊಂಡ ಫ್ಯಾನ್ಸ್

    ಕ್ಷಿಣದ ಖ್ಯಾತ ನಟಿ ಸಮಂತಾ (Samantha) ಹಲವು ದಿನಗಳಿಂದ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಅವರ ನಟನೆಯ ಶಾಕುಂತಲಾ ಮತ್ತು ಯಶೋಧಾ (Yashodha) ಸಿನಿಮಾಗಳ ಹಲವು ಕಾರ್ಯಕ್ರಮಗಳು ಜರುಗಿದ್ದರೂ, ಅವರು ಒಂದಕ್ಕೂ ಪ್ರತಿಕ್ರಿಯಿಸಿಲ್ಲ. ಅಲ್ಲದೇ ಹಲವು ದಿನಗಳಿಂದ ಯಾವುದೇ ಶೂಟಿಂಗ್ ನಲ್ಲೂ ಅವರು ಪಾಲ್ಗೊಳ್ಳದೇ ಇರುವ ಕಾರಣಕ್ಕಾಗಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸಮಂತಾ ಈಗ ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದಾರೆ.

    ತಮಿಳು ಮಾಧ್ಯಮಗಳು ವರದಿ ಮಾಡಿದಂತೆ ಸಮಂತಾ ಅವರು ಗಂಭೀರ (Serious) ಆರೋಗ್ಯ (Health) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅತೀ ಶೀಘ್ರದಲ್ಲೇ ಅವರು ವಿದೇಶಕ್ಕೂ ಹಾರಿ, ಅಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ವರದಿ ಮಾಡಿವೆ. ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯುವಂತಹ ಸಮಸ್ಯೆ ಏನಾಗಿದೆ ಎನ್ನುವ ಕುರಿತು ಸರಿಯಾದ ಮಾಹಿತಿ ಹಂಚಿಕೊಳ್ಳದೇ ಇದ್ದರೂ, ಅವರು ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಕೆಲ ಮಾಧ್ಯಮಗಳು ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿದರೆ, ಕೆಲವರು ಬೇರೆ ಸಮಸ್ಯೆಗಳ ಕುರಿತು  ಬರೆದಿದ್ದಾರೆ. ಹಾಗಾಗಿ ಸಮಂತಾಗೆ ಇಂಥದ್ದೆ ಸಮಸ್ಯೆ ಇದೆ ಎಂದು ಗೊತ್ತಾಗಿಲ್ಲ. ಅವರು ಕೂಡ ಈ ಕುರಿತು ಎಲ್ಲಿಯೂ ಹೇಳಿಕೊಂಡಿಲ್ಲ. ಸಮಂತಾ ಆಪ್ತರ ಪ್ರಕಾರ, ನಟಿಗೆ ಆರೋಗ್ಯ ಸಮಸ್ಯೆ ಎದುರಾಗಿದ್ದು ನಿಜ. ಚಿಕಿತ್ಸೆಗಾಗಿ (Treatment) ವಿದೇಶಕ್ಕೂ (Abroad) ಹೋಗುತ್ತಾರೆ ಎನ್ನುವುದೂ ಅಷ್ಟೇ ಸತ್ಯ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ.

    ಸಮಂತಾ ನಟನೆಯ ಯಶೋಧಾ ಮತ್ತು ಶಾಂಕುತಲಾ (Shakuntala) ಸಿನಿಮಾಗಳು ಬಹುತೇಕ ಶೂಟಿಂಗ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಮೊನ್ನೆಯಷ್ಟೇ ಎರಡು ಸಿನಿಮಾಗಳ ಲುಕ್ ರಿಲೀಸ್ ಆಗಿದೆ. ಟ್ರೈಲರ್ ಕೂಡ ಬಿಡುಗಡೆ ಮಾಡಿದ್ದಾರೆ. ಈ ಎರಡೂ ಚಿತ್ರಗಳು ಸಮಂತಾ ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಲಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಚೊಚ್ಚಲ ಸಿನಿಮಾಕ್ಕಾಗಿ ಬಣ್ಣ ಹಚ್ಚುತ್ತಿರುವ ಅಲ್ಲು ಅರ್ಹಾ – ಫೋಟೋ ವೈರಲ್

    ಚೊಚ್ಚಲ ಸಿನಿಮಾಕ್ಕಾಗಿ ಬಣ್ಣ ಹಚ್ಚುತ್ತಿರುವ ಅಲ್ಲು ಅರ್ಹಾ – ಫೋಟೋ ವೈರಲ್

    ಹೈದರಾಬಾದ್: ಟಾಲಿವುಡ್ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುತ್ರಿ ಅರ್ಹಾ, ಸಮಂತಾ ಅಕ್ಕಿನೇನಿ ಜೊತೆ ಶಾಕುಂತಲಂ ಚಿತ್ರದಲ್ಲಿ ಅಭಿನಯಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಸದ್ಯ ಅಲ್ಲು ಅರ್ಹಾ ತಮ್ಮ ಚೊಚ್ಚಲ ಸಿನಿಮಾಕ್ಕಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿಕೊಳ್ಳುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಅಲ್ಲು ಅರ್ಹಾ, ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನವರಾಗಿದ್ದಾರೆ. ಸದ್ಯ ಶೂಟಿಂಗ್ ಸೆಟ್‍ನಲ್ಲಿ ರಾಜಕುಮಾರಿಯಂತೆ ಅತಿಥ್ಯ ಪಡೆಯುತ್ತಿರುವ ಅರ್ಹಾ ಚಿತ್ರೀಕರಣಕ್ಕಾಗಿ ಕಾರವಾನ್‍ನಲ್ಲಿ ಕುಳಿತು ಮೇಕಪ್ ಮಾಡಿಕೊಳ್ಳುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಅಲ್ಲು ಅರ್ಜುನ್ ಪತ್ನಿ ಸ್ನೇಹ, ಅರ್ಹಾ ಮೇಕಪ್ ಮಾಡಿಸಿಕೊಳ್ಳುತ್ತಿರುವ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅರ್ಹಾ ಮುದ್ದಾಗಿ ಕಾಣಿಸುತ್ತಿದ್ದು, ಅವಳಿಗಾಗಿಯೇ ಕಾರವಾನ್ ನೀಡಲಾಗಿದೆ. ಅರ್ಹಾ ಜೊತೆ ಅವರ ತಾಯಿ ಸ್ನೇಹ ಕೂಡ ಇದ್ದು, ಆಕೆಯ ಸುರಕ್ಷತೆಯನ್ನು ನೋಡಿಕೊಳ್ಳುತ್ತಿದ್ದಾರೆ.

    ಕೆಲವು ದಿನಗಳ ಹಿಂದೆಯಷ್ಟೇ ಅಲ್ಲು ಅರ್ಜುನ್, ಶಾಕುಂತಲಂ ಸಿನಿಮಾ ಮೂಲಕ ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಅಲ್ಲು ಅರ್ಹಾ ಚಿತ್ರಕ್ಕೆ ಕಾಲಿಡುತ್ತಿರುವುದು ನಮಗೆ ಹೆಮ್ಮೆಯ ಕ್ಷಣ. ಇಂಥ ಸುಂದರ ಸಿನಿಮಾದಲ್ಲಿ ನನ್ನ ಮಗಳಿಗೆ ಚೊಚ್ಚಲ ಅವಕಾಶ ನೀಡಿರುವುದಕ್ಕೆ ನಿರ್ದೇಶಕ ಗುಣಶೇಖರ್ ಅವರಿಗೆ ಧನ್ಯವಾದಗಳು. ನನ್ನ ಮಗಳು ಮೊದಲ ಸಿನಿಮಾದಲ್ಲೇ ಸಮಂತಾ ಅಕ್ಕಿನೇನಿ ಜೊತೆ ಅಭಿನಯಿಸಿದ್ದನ್ನು ನೋಡಲು ಖುಷಿ ಆಗುತ್ತದೆ. ಶಾಕುಂತಲಂ ತಂಡದ ಎಲ್ಲ ಕಲಾವಿದರು ಮತ್ತು ತಾಂತ್ರಿಕ ವರ್ಗಕ್ಕೆ ನನ್ನ ಶುಭ ಹಾರೈಕೆಗಳು ಎಂದು ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ:ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ ಸ್ಟಾರ್ ನಟನ ಮಗಳು

     

    View this post on Instagram

     

    A post shared by Allu Arjun (@alluarjunonline)

  • ಶಾಕುಂತಲೆಗಾಗಿ ಹಂಸಲೇಖಾ ಹುಡುಕಾಟ!

    ಶಾಕುಂತಲೆಗಾಗಿ ಹಂಸಲೇಖಾ ಹುಡುಕಾಟ!

    ಬೆಂಗಳೂರು: ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಕ್ಕೆ ನವ ಮಾಧುರ್ಯ ತುಂಬಿದವರು ನಾದಬ್ರಹ್ಮ ಹಂಸಲೇಖಾ. ಅವರೀಗ ಶಾಕುಂತಲೆ ಎಂಬ ಚಿತ್ರವನ್ನು ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ವರ್ಷದ ಹಿಂದೆಯೇ ಈ ಚಿತ್ರದ ಬಗ್ಗೆ ಸುದ್ದಿ ಶುರುವಾಗಿತ್ತಾದರೂ ಇದೀಗ ತಾನೇ ಎಲ್ಲ ಚಟುವಟಿಕೆಗಳೂ ಆರಂಭವಾಗಿವೆ.

    ಭಾರತೀಯ ಚಿತ್ರರಂಗದಲ್ಲಿಯೇ ಮೈಲಿಗಲ್ಲಾಗಿ ದಾಖಲಾಗಬಲ್ಲಂಥಾ ಕಥಾನಕವನ್ನು ಶಾಕುಂತಲೆ ಚಿತ್ರ ಹೊಂದಿದೆ ಅಂತ ಹಂಸಲೇಖ ಈ ಹಿಂದೆಯೇ ಹೇಳಿಕೊಂಡಿದ್ದಾರೆ. ಇಡೀ ಚಿತ್ರ ಶಾಕುಂತಲೆಯ ಪಾತ್ರದ ಸುತ್ತಲೇ ಸುತ್ತೋದರಿಂದ ಅದಿಲ್ಲಿ ಬಹು ಮುಖ್ಯ. ಈ ಪಾತ್ರ ನಿರ್ವಹಿಸೋದು ಕೂಡಾ ಸವಾಲಿನ ಕೆಲಸವೇ. ಇದಕ್ಕೆ ಸೂಕ್ತವಾದ ಹುಡುಗಿಯನ್ನು ಆರಂಭದಿಂದಲೂ ಹಂಸಲೇಖಾ ಹುಡುಕುತ್ತಿದ್ದರು. ಇದೀಗ ಶಾಕುಂತಲೆ ಸಿಗೋ ಸಮಯ ಹತ್ತಿರಾಗಿದೆ. ಡಿಸೆಂಬರ್ ಒಂಬತ್ತರ ಹೊತ್ತಿಗೆಲ್ಲಾ ಶಾಕುಂತಲೆ ಯಾರಾಗಲಿದ್ದಾರೆಂಬುದು ಪಕ್ಕಾ ಆಗಲಿದೆಯಂತೆ!

    ಸಂಗೀತ ಮತ್ತು ಗ್ರಾಫಿಕ್ಸ್ ಕೂಡಾ ಈ ಚಿತ್ರದ ಪ್ರಧಾನ ಅಂಶ. ಈ ಕಾರಣದಿಂದಲೇ ಚಿತ್ರ ಶುರುವಾಗೋದು ಕೊಂಚ ತಡವಾಗಿದೆಯಂತೆ. ಈ ವರ್ಷದ ಕಡೆಯ ಹೊತ್ತಿಗೆಲ್ಲ ಶಾಕುಂತಲೆಯ ಚಿತ್ರೀಕರಣ ಶುರುವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews