ಬಾಲಿವುಡ್ ಅಂಗಳದಲ್ಲಿ ಶಕ್ತಿಮಾನ್ (Shaktiman) ಕುರಿತಂತೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಹಿಂದೆ ಶಕ್ತಿಮಾನ್ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಮಕ್ಕಳಿಗೆ ನೆಚ್ಚಿನ ಸೀರಿಸ್ ಅದಾಗಿತ್ತು. ಈಗ ಮತ್ತೆ ಶಕ್ತಿಮಾನ್ ತೆರೆಗೆ ತರಲು ಯೋಚಿಸಲಾಗುತ್ತಿದೆ. ಶಕ್ತಿಮಾನ್ ಪಾತ್ರ ಮಾಡಿದ್ದ ಮುಖೇಶ್ ಖನ್ನಾ ಅವರ ಜಾಗವನ್ನು ಯಾರು ತುಂಬ ಬಲ್ಲರು ಎನ್ನುವ ಹುಡುಕಾಟ ಕೂಡ ನಡೆದಿದೆ.

ಶಕ್ತಿಮಾನ್ ಪಾತ್ರಕ್ಕೆ ಜೀವ ತುಂಬಬಲ್ಲ ಶಕ್ತಿ ರಣವೀರ್ ಸಿಂಗ್ (Ranveer Singh) ಅವರಿಗೆ ಇದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಶಕ್ತಿಮಾನ್ ಪಾತ್ರ ಮಾಡಿದ್ದ ಮುಖೇಶ್ ಖನ್ನಾ ಅವರು ಅದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಅಂತಹ ಪಾತ್ರವನ್ನು ಮಾಡುವಂತಹ ಯೋಗ್ಯತೆ ಮತ್ತು ಅರ್ಹತೆ ರಣವೀರ್ ಸಿಂಗ್ ಗೆ ಇಲ್ಲವೆಂದು ಅವರು ಹೇಳಿದ್ದಾರೆ.

ರಣವೀರ್ ಸಿಂಗ್ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಳ್ಳುವುದಕ್ಕೆ ಲಾಯಕ್. ಶಕ್ತಿಮಾನ್ ಅಂತಹ ಧೈತ್ಯ ಪಾತ್ರವನ್ನು ಅವರು ಮಾಡುವುದಕ್ಕೆ ಆಗುವುದಿಲ್ಲ. ಮತ್ತೆ ಯೋಗ್ಯತೆ ಕೂಡ ಅವರಿಗೆ ಇಲ್ಲ ಎಂದು ಕಿಡಿಕಾರಿದ್ದಾರೆ. ಬೇರೆ ನಟನನ್ನು ಹುಡುಕುವುದು ಸೂಕ್ತ ಎನ್ನುವ ಸಲಹೆಯನ್ನೂ ಅವರು ನೀಡಿದ್ದಾರೆ.
ತಮ್ಮ ಬಗ್ಗೆ ಖನ್ನಾ ಹಾಗೆ ಮಾತನಾಡಿದ್ದಕ್ಕೆ ರಣವೀರ್ ಸಿಂಗ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಷಯ ಅವರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಬಂದಿದ್ದರೆ, ಯಾವ ರೀತಿಯಲ್ಲಿ ಅವರು ರಿಯ್ಯಾಕ್ಟ್ ಮಾಡ್ತಾರೆ ಎನ್ನುವುದನ್ನು ಕಾದು ನೋಡಬೇಕು.










ಮುಸ್ಲಿಂ ಧರ್ಮದ ಸಾಮಾನ್ಯ ಹುಡುಗಿಯೊಬ್ಬಳು ಮಧುಬಾಲಾ ಆಗಿ ಮಿಂಚಿದ ಕಥೆ, ಚಿತ್ರರಂಗದಲ್ಲಿ 70ಕ್ಕೂ ಹೆಚ್ಚು ಚಿತ್ರದಲ್ಲಿ ನಾನಾ ಬಗೆಯ ಪಾತ್ರದ ಮೂಲಕ ಮಧುಬಾಲಾ ರಂಜಿಸಿದ್ದಾರೆ. ತೆರೆಯ ಮೇಲಿನ ಕಥೆಯ ಜತೆ ತೆರೆಯ ಹಿಂದಿನ ಅಸಲಿತ್ತು ಎನಿತ್ತು ಎಂಬುದನ್ನ ಈ ಬಯೋಪಿಕ್ ಮೂಲಕ ತೋರಿಸಲಿದ್ದಾರೆ. ಮಧುಬಾಲಾ ಪಾತ್ರಕ್ಕಾಗಿ ಬಾಲಿವುಡ್ ಸೂಕ್ತ ನಾಯಕಿಯನ್ನೇ ಚಿತ್ರತಂಡ ಆಯ್ಕೆ ಮಾಡಲಿದೆ. ಇನ್ನು ಮಧುಬಾಲಾ ಪಾತ್ರದಲ್ಲಿ ಯಾವ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.