ಬೆಂಗಳೂರು: ಶಕ್ತಿ ಯೋಜನೆ (Shakti Scheme) ಪ್ರಶ್ನಿಸಿ ಅರ್ಜಿ ಸಲ್ಲಿಸಿದವರಿಗೆ ಹೈಕೋರ್ಟ್ (HighCourt) ತರಾಟೆಗೆ ತೆಗೆದುಕೊಂಡಿದೆ.
ಶಕ್ತಿಯೋಜನೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅಲ್ಲದೇ ಆರ್ಥಿಕ ಹೊರೆಯಿಂದ ಇತರರಿಗೆ ತೊಂದರೆ ಆಗುತ್ತೆ ಎಂದು ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ರು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಪೀಠ ಅರ್ಜಿದಾರರಿಗೆ ಬುದ್ಧಿವಾದ ಹೇಳಿದೆ.
ಅರ್ಜಿ ವಿಚಾರಣೆ ವೇಳೆ ಸಾಕಷ್ಟು ಪ್ರಶ್ನೆಗಳನ್ನು ಅರ್ಜಿದಾರರಿಗೆ ಕೇಳಿದೆ. ಶಕ್ತಿ ಯೋಜನೆಯ ಬಗ್ಗೆ ಅಧ್ಯಯನ ಮಾಡಿ ಅರ್ಜಿ ಸಲ್ಲಿಸಿದ್ದೀರಾ…? ಯೋಜನೆ ಆರ್ಥಿಕ ದರ್ಬಲ ವರ್ಗಕ್ಕೆ ಸೌಲಭ್ಯ ನೀಡಿದೆ ಅಲ್ವಾ…? ಶಕ್ತಿ ಯೋಜನೆ ಜಾರಿಗೆ ಮುನ್ನ ಸಂಚಾರ ಸುಗಮವಾಗಿತ್ತಾ? ಈ ಯೋಜನೆ ಬಸ್ ನಲ್ಲಿ ದಟ್ಟಣೆ ಉಂಟಾಗಿದೆಯೇ? ಎಲ್ಲೆಲ್ಲಿ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಭಾರೀ ಮಳೆ; ಧರೆಗುರುಳಿದ ಮರ
ಯಾವ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಇದೆ? ಸಾರ್ವಜನಿಕ ಸಾರಿಗೆಯಲ್ಲಿ ಇಷ್ಟೇ ಜನ ಪ್ರಯಾಣಿಸಬೇಕು ಎಂದು ರೂಲ್ಸ್ ಇದ್ಯಾ? ಮುಂಬೈ ಲೋಕಲ್ ರೈಲುಗಳ ದಟ್ಟಣೆಯ ಬಗ್ಗೆ ನಿಮಗೆ ಅರಿವಿದಿದ್ದಿದ್ರೆ ಅರ್ಜಿ ಸಲ್ಲಿಕೆ ಮಾಡುತ್ತಿರಲಿಲ್ಲ. ಅಧ್ಯಯನ ಮಾಡದೇ ಅರ್ಜಿ ಸಲ್ಲಿಸಿದ್ದೀರಿ ಹೀಗೆ ಹಲವು ಪ್ರಶ್ನೆಗಳನ್ನು ಮಾಡಿ ಅರ್ಜಿಯನ್ನು ಹಿಂಪಡೆಯಲು ನಿಮಗೆ ಅನುಮತಿ ನೀಡ್ತೀನಿ ಅಂತ ಹೈಕೋರ್ಟ್ ಅವಕಾಶವನ್ನು ನೀಡಿದೆ.
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ಬಂದಿರುವುದು ಶಕ್ತಿ ಯೋಜನೆ. ಈ ಯೋಜನೆಗೆ ಅಭೂತಪೂರ್ವ ಮಹಿಳಾ ಬೆಂಬಲ ದೊರೆತಿದ್ದು ಉಚಿತ ಪ್ರಯಾಣದ ಕಾರಣದಿಂದ ದೇವಾಲಯಗಳ (Temple) ಆದಾಯವೂ ಹೆಚ್ಚಾಗಿದೆ. ಪ್ರವಾಸಿ ತಾಣಗಳು ಸಹ ರಶ್ ಆಗುತ್ತಿವೆ. ಶಕ್ತಿ ಯೋಜನೆಯಿಂದ (Shakti Scheme) ದೇವಾಲಯಗಳಿಗೆ ಹರಿದು ಬರುತ್ತಿರುವ ಆದಾಯ ದ್ವಿಗುಣಗೊಂಡಿದೆ.
ರಾಜ್ಯ ಸರ್ಕಾರದ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿಗೆ ಬಂದು ಮೂರು ತಿಂಗಳಾಗಿದೆ. ಸಾರಿಗೆ ನಿಗಮಗಳ ಬಸ್‌ನಲ್ಲಿ ಉಚಿತ ಪ್ರಯಾಣದ ಲಾಭವನ್ನ ಮಹಿಳೆಯರು ಬಹಳ ಸಂತೋಷದಿಂದ ಅನುಭವಿಸುತ್ತಿದ್ದಾರೆ. ಉಚಿತ ಪ್ರಯಾಣದಿಂದಾಗಿ ಸಾರಿಗೆ ನಿಗಮಕ್ಕೆ ಮಾತ್ರವಲ್ಲ ಪ್ರವಾಸಿ ತಾಣಗಳಿಗೂ ಲಾಭ ಶುರುವಾಗಿದೆ. ಇದನ್ನೂ ಓದಿ: ಹಾವೇರಿಯಲ್ಲಿ ಮಕ್ಕಳ ಬಿಸಿಯೂಟಕ್ಕೆ ರೇಷನ್ ವ್ಯತ್ಯಯ – ಸ್ವಂತ ಹಣ ಬಳಸಿ ಶಿಕ್ಷಕರಿಂದ ರೇಷನ್ ಖರೀದಿ
ಶಕ್ತಿ ಯೋಜನೆಯಿಂದ ಭಗವಂತನ ಖಜಾನೆಗೆ ಕೋಟಿ ಕೋಟಿ ಕಾಸು ಹರಿದು ಬಂದಿದೆ. ಶಕ್ತಿ ಯೋಜನೆ ಜಾರಿಯಾಗಿ ಇದೇ ಮೊದಲ ಬಾರಿಗೆ ಹುಂಡಿ ಹಣ ಲೆಕ್ಕ ಹಾಕಲಾಗಿದೆ. ಅಲ್ಲದೆ ಜೂನ್ 11 ರಿಂದ ಜುಲೈ 15ರ ವರೆಗಿನ ತಮ್ಮ ವ್ಯಾಪ್ತಿಯ ದೇವಾಲಯಗಳ ಹುಂಡಿ ಹಣ ತುಲನೆ ಮಾಡಿದೆ ಮುಜರಾಯಿ ಇಲಾಖೆ. ಈ ವೇಳೆ 2022ರ ಇದೇ ಅವಧಿಗಿಂತ ಈ ಬಾರಿಯ ಅವಧಿಯಲ್ಲಿ ಹೆಚ್ಚು ಗಳಿಕೆಯಾಗಿರುವ ಮಾಹಿತಿ ಗೊತ್ತಾಗಿದೆ. 2022ರ ಜೂನ್ 11 – ಜುಲೈ 15ರ ಅವಧಿಯಲ್ಲಿ 29.68 (29,68,97,550) ಕೋಟಿ ರೂಪಾಯಿ ಆದಾಯ ಬಂದಿತ್ತು. ಆದರೆ ಈ ಬಾರಿಯ ಜೂನ್ 11 – ಜುಲೈ 15ರ ಅವಧಿಯಲ್ಲಿ 39.43 (39,43,60,764) ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹತ್ತು ಕೋಟಿ ಹೆಚ್ಚಿನ ಆದಾಯ ಸಂಗ್ರಹ ದೇವಾಲಯಗಳಲ್ಲಾಗಿದೆ.
ಜೊತೆಗೆ ಈ ಅವಧಿಯಲ್ಲಿ ಜನರ ಭೇಟಿ ಕೂಡ ಹೆಚ್ಚಳವಾಗಿದ್ದು, ಕಳೆದ ಬಾರಿಗಿಂತ 30% ಜನರ ಸಂಖ್ಯೆ ಏರಿಕೆ ಕಂಡಿದೆ. 2022 ಜೂನ್ 11 ರಿಂದ ಜುಲೈ 15ರ ವರೆಗೆ ರಾಜ್ಯದ ಮುಜರಾಯಿ ದೇವಸ್ಥಾನಗಳಿಗೆ 81.26 ಲಕ್ಷ ಭಕ್ತರು ಭೇಟಿ ಮಾಡಿದ್ದರೆ, 2023 ಜೂನ್ 11 ರಿಂದ ಜುಲೈ 15ರ ವರೆಗೆ 1.42 ಕೋಟಿ ಮಂದಿ ರಾಜ್ಯದ ಮುಜರಾಯಿ ವ್ಯಾಪ್ತಿಗೆ ಸೇರಿದ ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆದಿದ್ದಾರೆ. ಈ ಮೂಲಕ ಕೋಟ್ಯಂತರ ಆದಾಯ ಹರಿದು ಬಂದಿದೆ. ಇದನ್ನೂ ಓದಿ: ಮೈಸೂರಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ – ನಾಲ್ವರ ವಿರುದ್ಧ ಎಫ್‌ಐಆರ್
ಯಾವ ದೇವಾಲಯಕ್ಕೆ ಎಷ್ಟು ಆದಾಯ?
ಶ್ರೀ ಭಗಂಡೇಶ್ವರ & ತಲಕಾವೇರಿ ದೇವಾಲಯ, ಭಾಗಮಂಡಲ, ಕೊಡಗು:
2022, ಜೂನ್ 11 ರಿಂದ ಜುಲೈ 15 – 6,13,94,492 ರೂ. ಆದಾಯ – 37,94,022 ಭಕ್ತರು.
2023, ಜೂನ್ 11 ರಿಂದ ಜುಲೈ 15 – 7,79,24,065 ರೂ. – 51,40,857 ಭಕ್ತರು.
ಚಾಮುಂಡೇಶ್ವರಿ ದೇವಾಲಯ, ಮೈಸೂರು:
2022, ಜೂನ್ 11 ರಿಂದ ಜುಲೈ 15 – 48,01,914 ರೂ. – 4,93,530 ಭಕ್ತರು.
2023, ಜೂನ್ 11 ರಿಂದ ಜುಲೈ 15 – 3,63,05,672 ರೂ. – 5,97,370 ಭಕ್ತರು.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ದಕ್ಷಿಣ ಕನ್ನಡ:
2022, ಜೂನ್ 11 ರಿಂದ ಜುಲೈ 15 – 11,13,92,705 ರೂ. – 6,95,800 ಭಕ್ತರು.
2023, ಜೂನ್ 11 ರಿಂದ ಜುಲೈ 15 – 11,66,40,265 ರೂ. – 9,68,450 ಭಕ್ತರು.
ಕಟ್ಟ ಬಸವೇಶ್ವರ ದೇವಸ್ಥಾನ, ಎತ್ತಿನಬೂದಿಹಾಳ, ಬಳ್ಳಾರಿ ಜಿಲ್ಲೆ:
2022, ಜೂನ್ 11 ರಿಂದ ಜುಲೈ 15 – 1,02,75,761 ರೂ. – 4,58,330 ಭಕ್ತರು.
2023, ಜೂನ್ 11 ರಿಂದ ಜುಲೈ 15 – 1,41,00,163 ರೂ. – 4,90,830 ಭಕ್ತರು.
ಘಾಟಿ ಸುಬ್ರಮಣ್ಯ ದೇವಾಲಯ, ದೊಡ್ಡಬಳ್ಳಾಪುರ:
2022, ಜೂನ್ 11 ರಿಂದ ಜುಲೈ 15 – 1,18,18,433 ರೂ. – 66,000 ಭಕ್ತರು.
2023, ಜೂನ್ 11 ರಿಂದ ಜುಲೈ 15 – 93,48,186 ರೂ. – 81,000 ಭಕ್ತರು.
ಬಪ್ಪನಾಡು ದೇವಸ್ಥಾನ, ಮುಲ್ಕಿ, ದಕ್ಷಿಣ ಕನ್ನಡ:
2022, ಜೂನ್ 11 ರಿಂದ ಜುಲೈ 15 – 1,62,07,103 ರೂ. – 25,000 ಭಕ್ತರು.
2023, ಜೂನ್ 11 ರಿಂದ ಜುಲೈ 15 – 1,86,06,514 ರೂ. – 30,000 ಭಕ್ತರು.
ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು, ಮೈಸೂರು:
2022, ಜೂನ್ 11 ರಿಂದ ಜುಲೈ 15 – 1,05,82,075 ರೂ. – 15,650 ಭಕ್ತರು.
2023, ಜೂನ್ 11 ರಿಂದ ಜುಲೈ 15 – 1,12,70,814 ರೂ. – 20,110 ಭಕ್ತರು.
ಶ್ರೀಬನಶಂಕರಿ ದೇವಾಲಯ ಬೆಂಗಳೂರು:
2022, ಜೂನ್ 11 ರಿಂದ ಜುಲೈ 15 – 65,28,526 ರೂ. – 75,000 ಭಕ್ತರು.
2023, ಜೂನ್ 11 ರಿಂದ ಜುಲೈ 15 – 83,64,052 ರೂ. – 1,00,000 ಭಕ್ತರು.
ಬೆಂಗಳೂರು: ಶಕ್ತಿ ಯೋಜನೆಗೆ (Shakthi Scheme) ಸ್ಮಾರ್ಟ್ ಕಾರ್ಡ್ (Smart Card) ವಿತರಣೆ ಮಾಡೋವಾಗ ಫಲಾನುಭವಿಗಳ ಜಾತಿಯನ್ನು ಕೂಡಾ ಕೇಳ್ತೀವಿ ಅಂತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
SC-ST ಸಮುದಾಯದ SCP-TSP ಅನುದಾನವನ್ನ ಗ್ಯಾರಂಟಿ ಯೋಜನೆ ಬಳಕೆ ಮಾಡಿಕೊಳ್ತಿರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, SCP-TSP ಬಗ್ಗೆ ಸರಿಯಾಗಿ ಬಿಜೆಪಿ ಅವರು ಅರ್ಥ ಮಾಡಿಕೊಂಡಿಲ್ಲ. ಬಿಜೆಪಿ ಅವಧಿಯಲ್ಲಿ 10 ಸಾವಿರ ಕೋಟಿ SCP-TSP ಹಣ ಬಳಕೆ ಮಾಡಿದ್ರು. ನಾವು ಗ್ಯಾರಂಟಿ ಯೋಜನೆಗೆ ಅದನ್ನ ಬಳಸಿಕೊಳ್ತಿದ್ದೇವೆ. ಬಿಜೆಪಿ ನೆಲ ಕಚ್ಚುತ್ತೆ ಅಂತ ಇದಕ್ಕೆ ವಿರೋಧ ಮಾಡುತ್ತಿದೆ. SC-ST ಹಣ ದುರುಪಯೋಗ ಆಗುತ್ತಿಲ್ಲ. ಕಾನೂನು ಬಿಟ್ಟು ನಾವೇನು ಮಾಡುತ್ತಿಲ್ಲ. ಕಾನೂನು ಉಲ್ಲಂಘನೆಯೂ ಆಗಿಲ್ಲ ಎಂದರು. ಇದನ್ನೂ ಓದಿ: 70 ಸಾವಿರಕ್ಕೆ ಖರೀದಿಸಿದ ಪತ್ನಿಯನ್ನು ಕೊಂದು ಶವವನ್ನು ಕಾಡಲ್ಲಿ ಎಸೆದ ಪತಿ
ಶಕ್ತಿ ಯೋಜನೆಯಲ್ಲಿ SC-ST ಜನರನ್ನ ಹೇಗೆ ಗುರುತು ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಕೊಡೋವಾಗ ಜಾತಿ ಮಾಹಿತಿ ಪಡೆಯುತ್ತೇವೆ. ಸ್ಟಾರ್ಟ್ ಕಾರ್ಡ್ ಕೊಡೋ ಸಮಯದಲ್ಲಿ ಎಲ್ಲಾ ಮಾಹಿತಿ ಪಡೆಯುತ್ತೇವೆ. ಜಾತಿ ಬಗ್ಗೆಯೂ ಮಾಹಿತಿ ಪಡೆಯುತ್ತೇವೆ. ಬಂದ ಅಂಕಿಅಂಶಗಳ ಮೇಲೆ ಆಗ ಅದಕ್ಕೆ ಹಣ ಬಿಡುಗಡೆ ಮಾಡುತ್ತೇವೆ. ಆಧಾರ್, ಓಟರ್ ಐಡಿಗೆ ಮಾಡೋವಾಗ ತೆಗೆದುಕೊಂಡಿರೋ ಮಾಹಿತಿಯನ್ನ ಶಕ್ತಿ ಯೋಜನೆ ಸ್ಮಾರ್ಟ್ ಕೊಡೋ ವೇಳೆ ಪಡೆಯುತ್ತೇವೆ ಅಂತ ತಿಳಿಸಿದರು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು (Dr. D.Veerendra Heggade) ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಂಡಿಸಿದ 14ನೇ ಬಜೆಟ್ (Budget) ನ ಫಲಶೃತಿಯನ್ನು ಶ್ಲಾಘಿಸಿ ಹಾಗೂ ಶಕ್ತಿ ಯೋಜನೆಗೆ ಸಿಕ್ಕಿರುವ ಜನ ಮನ್ನಣೆಗೆ ಮೆಚ್ಚುಗೆ ಸೂಚಿಸಿ ಹೆಗ್ಡೆಯವರು ಪತ್ರವನ್ನು ಬರೆದಿದ್ದಾರೆ.
ಪತ್ರದಲ್ಲೇನಿದೆ..?: ಅನೇಕ ಯೋಜನೆಗಳ ಮೂಲಕ ಜನರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ನೀಡಿದ್ದೀರಿ. ಧರ್ಮಸ್ಥಳ (Dharmasthala) ಕ್ಷೇತ್ರಕ್ಕೆ ಬರುತ್ತಿರುವ ಭಕ್ತರು, ವಿಶೇಷವಾಗಿ ಮಹಿಳೆಯರು ನಿಮ್ಮ ಹೆಸರಿನಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಕೆಂಪು ಸುಂದರಿ ಜಾಗಕ್ಕೆ ಹುಣಸೆ ಹಣ್ಣು ಎಂಟ್ರಿ- ಡಿಮ್ಯಾಂಡ್ ಬೆನ್ನಲ್ಲೇ ದರ ಏರಿಕೆ
ಜೈನ ಸಮುದಾಯಕ್ಕೆ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಿರುವ ವಿಚಾರ ತಿಳಿದು ಇಡೀ ಸಮಾಜಕ್ಕೆ ಸಂತೋಷವಾಗಿದೆ. ಹೀಗಾಗಿ ಎಲ್ಲರ ಪರವಾಗಿ ಅಭಿನಂದನೆಗಳು. ಅವಕಾಶ ಇದ್ದಾಗ ಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡು ಹೋಗುವಂತೆ ಹೆಗ್ಡೆಯವರು ಪತ್ರದಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಶಕ್ತಿ ಯೋಜನೆ (Shakthi Scheme) ಜಾರಿಯಾಗಿ ಇಂದಿಗೆ 22 ದಿನ. ಇಲ್ಲಿಯವರೆಗೂ ಉಚಿತವಾಗಿ 10 ಕೋಟಿಗೂ ಅಧಿಕ ಮಹಿಳೆಯರು ಉಚಿತ ಓಡಾಟ ಮಾಡಿದ್ದಾರೆ. ಈ ನಡುವೆ ಮಹಿಳೆಯರಿಗೆ ಉಚಿತ ನೀಡಿದ ಕಾರಣ ಪುರಷ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು ಅನ್ನೋ ಮಾತುಗಳಿದ್ದವು. ಆದರೆ ದೈನಂದಿನ ಓಡಾಟ ಮಾಡುತ್ತಿದ್ದ ಪುರುಷರ ಸಂಖ್ಯೆಗಿಂತಲೂ ಹೆಚ್ಚು ಪುರುಷರು ಪ್ರಯಾಣ ಮಾಡ್ತಿದ್ದಾರೆ. ಇಷ್ಟೇ ಅಲ್ಲದೆ ಸಾರಿಗೆ ಬಸ್ ನಲ್ಲಿ ಪುರುಷರ ಓಡಾಟದಿಂದ ಬರ್ತಿರುವ ಆದಾಯವೂ ಡಬಲ್ ಆಗಿರೋದು ಮತ್ತೊಂದು ವಿಶೇಷ.
ಶಕ್ತಿಯೋಜನೆ ಜಾರಿಗೂ ಮುನ್ನ ನಿತ್ಯ 42 ಲಕ್ಷ ಪುರುಷರು ಸಾರಿಗೆ ಬಸ್‍ನಲ್ಲಿ (Male Passengers In Govt Bus) ಸಂಚರಿಸುತ್ತಿದ್ದರು. ಆದರೆ ಶಕ್ತಿ ಯೋಜನೆ ಜಾರಿ ಬಳಿಕ ನಿತ್ಯ ಸರಾಸರಿ 55 ಲಕ್ಷ ಪುರುಷರ ಓಡಾಟ ಜಾಸ್ತಿಯಾಗಿದೆ. ಅಂದರೆ ದಿನಕ್ಕೆ ಸರಾಸರಿ 13 ಲಕ್ಷ ಹೆಚ್ಚಳವಾಗಿದ್ದು, ಗಮನಾರ್ಹ ಬೆಳವಣಿಕೆ. ಇದಕ್ಕೆ ಕಾರಣ ಕುಟುಂಬದವರು ಒಟ್ಟಾಗಿ ಪ್ರಯಾಣ ಮಾಡುವಾಗ ಮಹಿಳೆಯರಿಗೆ ಹೇಗೂ ಉಚಿತ ಅಂತ ಸಾರಿಗೆ ಬಸ್‍ನಲ್ಲಿ ಹೋಗ್ತಿದ್ದಾರೆ. ರಶ್ ಆದ್ರೂ ಏನು ಮಾಡೋಕೆ ಆಗದೇ ಅಡ್ಜೆಸ್ಟ್ ಮಾಡಿಕೊಂಡು ಅದೇ ಬಸ್ ನಲ್ಲಿ ಓಡಾಟ ಮಾಡ್ತಿದ್ದಾರೆ. ಇನ್ನೂ ಕೆಲವರು ಕಷ್ಟವಾದ್ರು ಸಾಮಾನ್ಯವಾಗಿ ದಿನನಿತ್ಯದಂತೆ ಸರ್ಕಾರಿ ಬಸ್‍ಗಳನ್ನೆ ಬಳಕೆ ಮಾಡುವವರು ಅದನ್ನೆ ಮುಂದುವರಿಸಿದ್ದಾರೆ. ಈ ಎಲ್ಲಾ ಕಾರಣಕ್ಕೆ ಸದ್ಯ ಪುರುಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ.
ಪುರುಷ ಪ್ರಯಾಣಿಕರ ಓಡಾಟ ಸಂಖ್ಯೆ ಹೆಚ್ಚಾದಂತೆ ಆದಾಯ ಕೂಡ ಹೆಚ್ಚಾಗಿದೆ. ಸಾರಿಗೆ ಸಂಸ್ಥೆಗೆ ಕಳೆದ 19 ದಿನದಲ್ಲಿ ಪುರುಷರ ಪ್ರಯಾಣದಿಂದ 302 ಕೋಟಿ ಆದಾಯ ಹರಿದು ಬಂದಿದೆ. ಶಕ್ತಿ ಯೋಜನೆ ಜಾರಿಗೂ ಮುನ್ನ ನಿತ್ಯ 24.48 ಕೋಟಿ ಆದಾಯ ಬರುತ್ತಿತ್ತು. ಆಗ ಪುರುಷರ ಓಡಾಟದಿಂದ ಸಾರಿಗೆ ಸಂಸ್ಥೆಗೆ 12 ಕೋಟಿ ಆದಾಯ ಬರುತ್ತಿತ್ತು. ಈಗ 16.87 ಕೋಟಿ ಗೆ ಗಂಡಸರ ಸಂಚಾರದ ಆದಾಯ ಹೆಚ್ಚಾಗಿದೆ. ಒಟ್ಟಾರೆ ಒತ್ತಡ, ರಶ್, ಗಲಾಟೆ ಗದ್ದಲ ನಡುವೆಯೂ ಹೆಚ್ಚಿನ ಪುರುಷರು ಸಾರಿಗೆ ಬಸ್ ನಲ್ಲಿ ಓಡಾಡಿ, ನಿಗಮಗಳಿಗೆ ಇನ್ನಷ್ಟು ಲಾಭ ಹೆಚ್ಚಿಸಿರೋದು ನಿಜಕ್ಕೂ ವಿಶೇಷವೇ ಸರಿ.
ಚಾಮರಾಜನಗರ: ಶಕ್ತಿ ಯೋಜನೆಯನ್ನು (Shakthi Scheme) ಸರ್ಕಾರ ಜಾರಿಗೆ ತಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗ್ತಾನೇ ಇದೆ. ಸಾರಿಗೆ ಬಸ್‍ಗಳಲ್ಲಿ ಈಗ ಮಹಿಳೆಯರದ್ದೇ ಹವಾ ಎಂಬಂತಾಗಿದೆ. ಇದೀಗ ಮಹಿಳೆಯರು ಟಿಕೆಟ್ (Free Bus Ticket For Women) ಪಡೆದು ಪ್ರಯಾಣಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಾಮರಾಜನಗರ (Chamarajanagar) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮಹಿಳೆಯರು ಚೌಡಹಳ್ಳಿಯಿಂದ ಗುಂಡ್ಲುಪೇಟೆಗೆ ಹಣ ನೀಡಿ ಟಿಕೆಟ್ ಕೇಳಿದ್ದಾರೆ. ಈ ವೇಳೆ ನಿಮಗೆ ಉಚಿತ ಪಯಣದ ಅವಕಾಶವಿದೆ ಹಣ ಕೊಡಬೇಕಿಲ್ಲ ಎಂದರೂ ಮಹಿಳೆಯರು ಕೇಳಲಿಲ್ಲ. ಕೊನೆಗೆ ಮಹಿಳೆಯರ ಒತ್ತಾಯಕ್ಕೆ ಮಣಿದು ನಿರ್ವಾಹಕ ಹಣ ಪಡೆದು ಟಿಕೆಟ್ ನೀಡಿದ್ದಾರೆ.
ಗುರುವಾರವಷ್ಟೇ ಹೊಸಕೋಟೆಯಲ್ಲಿ ಕುಡುಕ ಪತಿಮಹಾಶಯನೊಬ್ಬ ದಯವಿಟ್ಟು ಶಕ್ತಿ ಯೋಜನೆಯನ್ನು ರದ್ದುಗೊಳಿಸಿ. ನನ್ನ ಪತ್ನಿ ಟ್ರಿಪ್‍ಗೆ ಅಂತ ಹೋದವಳು ಇನ್ನೂ ಮನೆಗೆ ವಾಪ್ ಬಂದಿಲ್ಲ. ಇದ್ದರಾಮಯ್ಯ ಸರಿಯಲ್ಲ ಎಂದು ಗೋಗರೆಯುತ್ತಾ ಬಸ್ ಚಕ್ರದಡಿ ತಲೆಯಿಟ್ಟು ರದ್ದಾಂತ ಮಾಡಿದ್ದನು. ಇದನ್ನೂ ಓದಿ: ಮೃತ ಸನ್ಯಾಸಿ ಮನೆಯಲ್ಲಿ ಸಿಕ್ತು 30 ಲಕ್ಷಕ್ಕೂ ಅಧಿಕ ಹಣ!
ಬೆಂಗಳೂರು: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಗೆ ಎಷ್ಟೇ ಕಷ್ಟ ಬರಲಿ ನಾವು ಪ್ರಣಾಳಿಕೆಯಲ್ಲಿ ಘೋಷಿಸಿರುವ 5 ಗ್ಯಾರಂಟಿಗಳನ್ನು ಈಡೇರಿಸಿಯೇ ಈಡೇರಿಸುತ್ತೇವೆ ಎಂದು ಶಪಥ ಮಾಡಿದರು.
ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ 600 ಭರವಸೆ ಕೊಟ್ಟಿತ್ತು. 60 ಭರವಸೆ ಕೂಡ ಕೊಟ್ಟಿಲ್ಲ. ಅದರ ಬಗ್ಗೆ ಚರ್ಚೆ ಮಾಡಿಲ್ಲ. ನಮ್ಮ ಗ್ಯಾರಂಟಿ ಬಗ್ಗೆ ಚರ್ಚೆ ಮಾಡುತ್ತಾರೆ. ಅದಕ್ಕೆ ಕೆಲವು ಮಾಧ್ಯಮಗಳು ಕೈ ಜೋಡಿಸಿವೆ. ನಮಗೆ ಯಾವುದೇ ಜಾತಿ, ಧರ್ಮದ ಎಲ್ಲೆ ಇಲ್ಲ. ಎಲ್ಲಾ ಜಾತಿ-ಧರ್ಮದ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕ ಶಕ್ತಿ ತುಂಬೋ ಕೆಲಸ ಮಾಡುತ್ತೆ. ಗೇಲಿ ಮಾತುಗಳಿಂದ ವಿಚಲಿತರಾಗಿಲ್ಲ. ಹಿಂದೆ ನುಡಿದಂತೆ ನಡೆದಿದೆ ಎಂದರು.
2013-2018 ರಲ್ಲಿ 168 ಭರವಸೆಯಲ್ಲಿ 158 ಭರವಸೆ ಈಡೇರಿಸಿ ಕೊಟ್ಟ ಮಾತು ಈಡೇರಿಸಿದ್ದೇವೆ. ಕೊಟ್ಟ ಮಾತಂತೆ ನಡೆದುಕೊಳಲ್ಲ ಅಂದ್ರು. ಕೆಲವರು ದಿವಾಳಿ ಆಗುತ್ತೆ ಅಂದರು. ಆದರೆ ನಮಗೆ ಎಷ್ಟೇ ಕಷ್ಟ ಬರಲಿ 5 ಗ್ಯಾರಂಟಿ ಈಡೇರಿಸುತ್ತೇವೆ. ನಾನು ಸಿಎಂ ಆಗಿ ಹೇಳ್ತಿದ್ದೇನೆ. ಕೊಟ್ಟ ಮಾತು ಈಡೇರಿಸುತ್ತೇವೆ. 59 ಸಾವಿರ ಕೋಟಿ 5 ಯೋಜನೆ ಜಾರಿಗೆ ಬೇಕು. ಈಗಾಗಲೇ ಬಜೆಟ್ ಮಂಡನೆ ಆಗಿದೆ. ಹಣಕಾಸು ಹೊಂದಿಸುವ ಕೆಲಸ ಮಾಡ್ತೀವಿ ಎಂದು ಸಿಎಂ ಭರವಸೆ ನೀಡಿದರು. ಇದನ್ನೂ ಓದಿ: ‘ಶಕ್ತಿ’ ಯೋಜನೆ ಹೆಸರಿನ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಸಿಎಂ!
ಗೃಹಜ್ಯೋತಿ ಜುಲೈ 1 ರಿಂದ ಜಾರಿ ಆಗುತ್ತದೆ. ಗೃಹಲಕ್ಷ್ಮಿ ಯೋಜನೆ ಆಗಸ್ಟ್ 16 ಕ್ಕೆ ಜಾರಿ ಆಗುತ್ತೆ. ಸದ್ಯ 40 ಸಾವಿರ ಕೋಟಿ ಹಣ ಬೇಕು. ಎಷ್ಟು ಹಣ ಖರ್ಚು ಮಾಡ್ತೀವಿ ಅನ್ನೋದು ಮುಖ್ಯ ಅಲ್ಲ. ಯಾರಿಗೆ ಯೋಜನೆ ಕೊಡ್ತೀವಿ ಅನ್ನೋದು ಮುಖ್ಯ. 7 ಕೆ.ಜಿ ಅಕ್ಕಿ ಕೊಡ್ತಿದ್ದೆವು, 5 ಕೆಜಿಗೆ ಇಳಿಸಿದ್ರು. ಯಾಕೆ ಅಂದ್ರೆ ಹಣ ಇಲ್ಲ ಅಂದ್ರು. ಅದಕ್ಕೆ ಅಧಿಕಾರ ಬಿಟ್ಟು ಹೋಗಿ ಅಂದ್ವಿ. ನಾವು 10 ಕೆ.ಜಿ ಆಹಾರ ಧಾನ್ಯ ಕೊಡ್ತೀವಿ. ಇದಕ್ಕೆ 10 ಸಾವಿರ ಕೋಟಿ ಬೇಕು. ಬಡವರು ಎರಡು ಹೊತ್ತು ಊಟ ಮಾಡಬೇಕು. ಯಾರೂ ಹಸಿವಿನಿಂದ ಬಳಲಬಾರದು. ಹಸಿವಿನ ನೋವು ಗೊತ್ತಿರೋರಿಗೆ ಅದರ ಕಷ್ಟ ಗೊತ್ತು. ಹೊಟ್ಟೆ ತುಂಬಿಸಿಕೊಂಡು ಅಜೀರ್ಣ ಮಾಡಿಕೊಳ್ಳೋರಿಗೆ ಅ ಬೆಲೆ ಗೊತ್ತಾಗಲ್ಲ ಎಂದು ಟೀಕಾಕಾರರಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕ್ಲಿಲ್ಲ; ಬಿಜೆಪಿ ವಿರುದ್ಧ ನಾವು ಅಭಿಯಾನ ಮಾಡ್ಬೇಕಾಗುತ್ತೆ – ಡಿಕೆಶಿ
ಇವತ್ತಿಂದ ಉಚಿತವಾಗಿ ಬಸ್ ನಲ್ಲಿ ಓಡಾಡಬಹುದು. ಸ್ಮಾರ್ಟ್ ಕಾರ್ಡ್ ಕೂಡಾ ಫ್ರೀಯಾಗಿ ಕೊಡ್ತೀವಿ. ವಿದ್ಯಾರ್ಥಿನಿಯರಿಗೂ ಫ್ರೀ ಕೊಡ್ತೀವಿ. ಅದಕ್ಕೆ ಕೊಂಕು ಮಾತಾಡ್ತಾರೆ. ಈ ಯೋಜನೆಗಳಿಗೆ ಮಧ್ಯವರ್ತಿಗಳಿಲ್ಲ. ನೇರವಾಗಿ ಫಲಾನುಭವಿಗಳಿಗೆ ಹೋಗುತ್ತದೆ. ರೈತರ ಸಾಲಮನ್ನಾ ಮಾಡದೇ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಿದವರು ನಮ್ಮ ವಿರುದ್ಧ ಮಾತಾಡ್ತಾರೆ ಎಂದರು.
ಶ್ರೀಮಂತರ ಜೇಬಿನಲ್ಲಿ ಹಣ ಇದ್ದರೆ ಉಪಯೋಗ ಆಗಲ್ಲ. ಬಡವರ ಜೇಬಿನಲ್ಲಿ ಹಣ ಇದ್ದರೆ ಉಪಯೋಗ ಆಗುತ್ತೆ. ಬಡವರ ಜೇಬಿಗೆ ದುಡ್ಡು ಇಡೋದು ಕಾಂಗ್ರೆಸ್ ಕೆಲಸ. ಶ್ರೀಮಂತರ ಜೇಬಿಗೆ ಇಡೋದು ನಮ್ಮ ಕೆಲಸ ಅಲ್ಲ. 5 ಗ್ಯಾರಂಟಿ ಜಾರಿಗೆ ಕೊಡೋದು ನೂರಕ್ಕೆ ನೂರು ಗ್ಯಾರಂಟಿ ಎಂದರು.