Tag: shakeela kannada film

  • ಮದುವೆ ಸಂಭ್ರಮದಲ್ಲಿ ಕನ್ನಡದ `ಶಕೀಲಾ’ ನಟಿ ರಿಚಾ ಚಡ್ಡಾ: ಫೋಟೋ ವೈರಲ್

    ಮದುವೆ ಸಂಭ್ರಮದಲ್ಲಿ ಕನ್ನಡದ `ಶಕೀಲಾ’ ನಟಿ ರಿಚಾ ಚಡ್ಡಾ: ಫೋಟೋ ವೈರಲ್

    ಬಾಲಿವುಡ್‌ನಲ್ಲಿ(Bollywood) ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿರುವ ನಟಿ ರಿಚಾ ಚಡ್ಡಾ(Richa Chaddha) ಮತ್ತು ಆಲಿ ಫಜಲ್ (Ali Fazal) ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಮದುವೆಯ ಶಾಸ್ತ್ರಗಳು ಕೂಡ ಭರದಿಂದ ಸಾಗುತ್ತಿದ್ದು, ಮದುವೆಯ ಪ್ರಿ ಶೂಟ್ ಫೋಟೋ ಕೂಡ ವೈರಲ್ ಆಗುತ್ತಿದೆ. ಮದುವೆ ಶಾಸ್ತ್ರದ  ಮೊದಲ ಫೋಟೋ ಕೂಡ ರಿವೀಲ್ ಮಾಡಿದ್ದಾರೆ.

    ಬಿಟೌನ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಿಚಾ ಚಡ್ಡಾ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ `ಶಕೀಲಾ’ ಬಯೋಪಿಕ್‌ನಲ್ಲಿ ಶಕೀಲಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸದ್ಯ ರಿಚಾ ಮತ್ತು ಅಲಿ ಫಜಲ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಮದುವೆಯ ತಯಾರಿ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ತಮ್ಮ ಮದುವೆಯ ಮೊದಲ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಇದೀಗ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಐಶ್ವರ್ಯ ಪಿಸ್ಸೆಗೆ ಐ ಲವ್‌ ಯೂ ಎಂದ ಸೈಕ್‌ ನವಾಜ್

     

    View this post on Instagram

     

    A post shared by Richa Chadha (@therichachadha)

    2020ರಲ್ಲಿ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಜೋಡಿ ಮದುವೆ ಆಗುವುದಾಗಿ ಅಧಿಕೃತವಾಗಿ ಹೇಳಿದ್ದರು. ಆದರೆ ಕೊರೋನಾ ಎಂಬ ಮಹಾಮಾರಿಯಿಂದ ಮದುವೆ ಕೂಡ ಮುಂದೂಡಲಾಗಿತ್ತು. ಇದೀಗ ದೆಹಲಿಯಲ್ಲಿ (ಸೆ.30) ಇಂದಿನ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದೆ. ಅಕ್ಟೋಬರ್ 4ರಂದು ರಿಚಾ ಮತ್ತು ಆಲಿ ಫಾಜಲ್ ಹಸೆಮಣೆ ಏರಲಿದ್ದಾರೆ.

     

    View this post on Instagram

     

    A post shared by ali fazal (@alifazal9)

    ಇಬ್ಬರು ಕಲಾವಿದರಾಗಿರುವ ಕಾರಣ, ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನ ಕಂಪ್ಲೀಟ್ ಮಾಡಿ ಕೊಟ್ಟಿದ್ದಾರೆ. ಸದ್ಯ ಮದುವೆಯ ತಯಾರಿಯಲ್ಲಿ ರಿಚಾ ಮತ್ತು ಆಲಿ ಫಜಲ್ ಬ್ಯುಸಿಯಾಗಿದ್ದಾರೆ. ಒಂದು ವಾರ, ಮದುವೆಯ ಶಾಸ್ತ್ರಗಳು ನಡೆಯಲಿದೆ. ಅದ್ದೂರಿಯಾಗಿ ಗುರು ಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಲಿ ಫಜಲ್ ಜೊತೆ ಮದುವೆಗೆ ಸಜ್ಜಾದ ಕನ್ನಡದ `ಶಕೀಲಾ’ ನಟಿ ರಿಚಾ ಚಡ್ಡಾ

    ಆಲಿ ಫಜಲ್ ಜೊತೆ ಮದುವೆಗೆ ಸಜ್ಜಾದ ಕನ್ನಡದ `ಶಕೀಲಾ’ ನಟಿ ರಿಚಾ ಚಡ್ಡಾ

    ಬಾಲಿವುಡ್‌ನ ಮತ್ತೊಂದು ಸಲೆಬ್ರಿಟಿ ಜೋಡಿ ರಿಚಾ ಚಡ್ಡಾ(Richa Chaddha) ಮತ್ತು ಆಲಿ ಫಜಲ್(Ali Fazal) ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.110 ವರ್ಷಗಳ ಹಿಂದಿನ ಕಟ್ಟಡದಲ್ಲಿ ಈ ಜೋಡಿ ಮದುವೆಯಾಗಲಿದ್ದಾರೆ.

    ಹಿಂದಿ ಚಿತ್ರರಂಗಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಿಚಾ ಚಡ್ಡಾ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ `ಶಕೀಲಾ’ (Shakeela) ಬಯೋಪಿಕ್‌ನಲ್ಲಿ ಶಕೀಲಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸದ್ಯ ರಿಚಾ ಮತ್ತು ಅಲಿ ಫಜಲ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತೆರೆಮರೆಯಲ್ಲಿ ಮದುವೆಗಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.

    2020ರಲ್ಲಿ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಜೋಡಿ ಮದುವೆ ಆಗುವುದಾಗಿ ಅಧಿಕೃತವಾಗಿ ಹೇಳಿದ್ದರು. ಆದರೆ ಕೊರೋನಾ ಎಂಬ ಮಹಾಮಾರಿಯಿಂದ ಮದುವೆ ಕೂಡ ಮುಂದೂಡಲಾಗಿತ್ತು. ಇದೀಗ ಸೂಕ್ತ ಸಮಯ ಎಂದೆನಿಸಿ, ಈ ಜೋಡಿ ಹಸೆಮಣೆ ಏರಲು ಸಜ್ಜಾಗಿದೆ. ಇದೇ ಸೆ.30ರಂದು ದೆಹಲಿಯ ಹಳೆಯ ಕ್ಲಬ್‌ನಲ್ಲಿ ಈ ಜೋಡಿ ಮದುವೆಯಾಗುತ್ತಿದ್ದಾರೆ. ಸೆಪ್ಟೆಂಬರ್ 30ರಂದು ಪ್ರಾರಂಭವಾಗಿ ಮುಂಬೈನಲ್ಲಿ ಅಕ್ಟೋಬರ್ 7ರಂದು ಮದುವೆಯ ಶಾಸ್ತ್ರಗಳು ಮುಗಿಯಲಿದೆ. ಇದನ್ನೂ ಓದಿ:ಕ್ರಿಕೆಟಿಗ ರಿಷಭ್ ಪಂತ್ ಗೆ ನಾನು ಕ್ಷಮೆ ಕೇಳಿಲ್ಲ, ಕೇಳೋದು ಇಲ್ಲ: ನಟಿ ಊರ್ವಶಿ ರೌಟೇಲಾ

    ಇಬ್ಬರು ಕಲಾವಿದರಾಗಿರುವ ಕಾರಣ, ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನ ಕಂಪ್ಲೀಟ್ ಮಾಡಿ ಕೊಟ್ಟಿದ್ದಾರೆ. ಸದ್ಯ ಮದುವೆಯ ತಯಾರಿಯಲ್ಲಿ ರಿಚಾ ಮತ್ತು ಆಲಿ ಫಜಲ್ ಬ್ಯುಸಿಯಾಗಿದ್ದಾರೆ. 1 ವಾರ ಮದುವೆಯ ಶಾಸ್ತ್ರಗಳು ನಡೆಯಲಿದೆ. ಅದ್ದೂರಿಯಾಗಿ ಗುರು ಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]