Tag: Shakeela

  • Bigg Boss: ದೊಡ್ಮನೆಗೆ ಕಾಲಿಡಲು ಸಜ್ಜಾದ ಶಕೀಲಾ

    Bigg Boss: ದೊಡ್ಮನೆಗೆ ಕಾಲಿಡಲು ಸಜ್ಜಾದ ಶಕೀಲಾ

    ಲ್ಲಾ ಭಾಷೆಯಲ್ಲೂ ದೊಡ್ಮನೆ ಆಟಕ್ಕೆ ತಯಾರಿ ನಡೆಯುತ್ತಿದೆ. ಬಿಗ್ ಬಾಸ್ ತೆಲುಗು ಸೀಸನ್ 7 (Bigg Boss Telugu 7) ಇದೇ ಸೆಪ್ಟೆಂಬರ್‌ನಿಂದ ಶೋ ಶುರುವಾಗಲಿದೆ. ಬಿಗ್ ಬಾಸ್ ಶೋಗಾಗಿ ಕಾದು ಕೂರುವ ಫ್ಯಾನ್ಸ್ ಗುಡ್ ನ್ಯೂಸ್ ಸಿಕ್ಕಿದೆ. ಇದೀಗ ಬಿಗ್ ಬಾಸ್ ಮನೆಗೆ ಮಲಯಾಳಂ ನಟಿ ಶಕೀಲಾ(Shakeela) ಕಾಲಿಡುತ್ತಿದ್ದಾರೆ.

    ನಾಗರ್ಜುನ ಅಕ್ಕಿನೇನಿ(Nagarjuna Akkineni) ನಿರೂಪಣೆಯ ಬಿಗ್ ಬಾಸ್ (Bigg Boss) ಪ್ರೋಮೋ ಈಗಾಗಲೇ ರಿವೀಲ್ ಆಗಿದೆ. ಸಾಕಷ್ಟು ಫನ್ ಈ ಸೀಸನ್‌ನಲ್ಲಿ ಇರಲಿದೆ ಕಾದುನೋಡಿ ಎಂದು ಫ್ಯಾನ್ಸ್‌ಗೆ ತಲೆಗೆ ಹುಳಬಿಟ್ಟಿದ್ದಾರೆ. ಇದೆಲ್ಲದರ ನಡುವೆ ದೊಡ್ಮನೆಗೆ ಹಾಟ್ ನಟಿ ಶಕೀಲಾ ಕಾಲಿಡಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಕನ್ನಡತಿ ಶ್ರೀಲೀಲಾಗೆ ಸರಸ್ವತಿ ವರಪ್ರಸಾದ ಎಂದು ಹೊಗಳಿದ ಬಾಲಯ್ಯ

    1994ರಲ್ಲಿ ತಮಿಳಿನ ಪ್ಲೇಗರ್ಲ್ಸ್ ಅವರ ಮೊದಲ ಸಿನಿಮಾ. ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಬಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಿ ಅವರು ಜನಪ್ರಿಯತೆ ಪಡೆದರು. ಈ ಸಿನಿಮಾಗಳು ಡಬ್ ಆಗಿ ಪರಭಾಷೆಗಳಲ್ಲಿ ರಿಲೀಸ್ ಆಯಿತು. ಶಕೀಲಾ: ಆತ್ಮಕಥಾ ಹೆಸರಿನ ಆಟೋಬಯೋಗ್ರಫಿಯನ್ನು 2013ರಲ್ಲಿ ಬಿಡಗಡೆ ಮಾಡಲಾಯಿತು. ಇದು ಮಲಯಾಳಂ ಭಾಷೆಯಲ್ಲಿದೆ. ಈ ಪುಸ್ತಕದಲ್ಲಿ ಅವರು ಕುಟುಂಬ, ಸಿನಿಮಾ ಜಗತ್ತು- ರಾಜಕೀಯದ ಬಗ್ಗೆ ಹೇಳಿದ್ದಾರೆ.

    ಸದ್ಯ ಶಕೀಲಾ ಬಿಗ್ ಬಾಸ್‌ಗೆ ಕಾಲಿಡೋಕೆ ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅವರ ಜೀವನದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಈ ಶೋ ಮೂಲಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹೇಶ್, ಅಲ್ಲು ಫಾನ್ಸ್ ನಡುವೆ ಕಿಡಿ ಹಚ್ಚಿದ ಶಕೀಲಾ

    ಮಹೇಶ್, ಅಲ್ಲು ಫಾನ್ಸ್ ನಡುವೆ ಕಿಡಿ ಹಚ್ಚಿದ ಶಕೀಲಾ

    ಬೆಂಗಳೂರು: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ನಟಿ ಶಕೀಲಾ ಪ್ರಿನ್ಸ್ ಮಹೇಶ್ ಬಾಬು ಮತ್ತು ಅಲ್ಲು ಅರ್ಜನ್ ಫಾನ್ಸ್ ನಡುವೆ ಬೆಂಕಿ ಹಚ್ಚಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸ್ಟಾರ್ ವಾರ್ ಎಂಬುದು ಎಲ್ಲಾ ಚಿತ್ರರಂಗದಲ್ಲೂ ಕಾಮನ್. ಈ ವಿಚಾರಕ್ಕೆ ಈಗ ತೆಲುಗು ಚಿತ್ರರಂಗದಲ್ಲಿ ಅಲ್ಲು ಮತ್ತು ಮಹೇಶ್ ಅಭಿಮಾನಿಗಳು ಸಖತ್ ಸದ್ದು ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಅಲಾ ವೈಕುಂಠಪುರಮುಲೋ ಮತ್ತು ಮಹೇಶ್ ಬಾಬು ಅಭಿನಯದ ಸರಿಲೇರು ನಿಕೇವ್ವರು ಸಿನಿಮಾ ಒಂದೇ ಬಾರಿ ರಿಲೀಸ್ ಆಗಿ ಸ್ಟಾರ್ ವಾರ್ ಗೆ ಕಾರಣವಾಗಿದೆ.

    ಬಿನ್ನಿ ಮತ್ತು ಪ್ರಿನ್ಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಮ್ಮ ಹೀರೋಗಳನ್ನು ಹೊಗಳಿ, ಅಲ್ಲು ಮತ್ತು ಮಹೇಶ್‍ರನ್ನು ಸಖತ್ ಅಗಿ ಟ್ರೋಲ್ ಮಾಡಿದ್ದರು. ಈ ವಿಚಾರ ಸಿನಿಮಾ ಸಂಪಾದನೆಯವರೆಗೂ ಹೋಗಿ ದೊಡ್ಡ ಮಟ್ಟದಲ್ಲಿ ಸ್ಟಾರ್ ನಟರನ್ನು ಮುಜುಗರಕ್ಕೀಡಾಗುವಂತೆ ಮಾಡಿತ್ತು. ಈಗ ನಟಿ ಶಕೀಲಾ ಕೊಟ್ಟಿರುವ ಹೇಳಿಕೆಯೊಂದು ಮತ್ತೆ ಈ ಸ್ಟಾರ್ ವಾರ್ ಗೆ ಪುಷ್ಟಿಕೊಟ್ಟಂತೆ ಆಗಿದೆ.

    ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ್ದ ಶಕೀಲಾ, ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನನಗೆ ಮಹೇಶ್ ಬಾಬು ಸಹೋದರನಂತೆ, ಜೂನಿಯರ್ ಎನ್‍ಟಿಆರ್ ಸೂಪರ್ ಅಗಿ ಡ್ಯಾನ್ಸ್ ಮಾಡುತ್ತಾರೆ. ಆದರೆ ಅಲ್ಲು ಅರ್ಜುನ್ ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಶಕೀಲಾ ಅವರ ಹೇಳಿಕೆಯಿಂದ ಟಾಲಿವುಡ್‍ನಲ್ಲಿ ಸ್ವಲ್ಪ ಕಮ್ಮಿ ಆಗಿದ್ದ ಸ್ಟಾರ್ ವಾರ್ ಮತ್ತೆ ಶುರುವಾಗಿದ್ದು, ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕೆಸರೆರಚಾಟ ಮಾಡುತ್ತಿದ್ದಾರೆ.

    ಶಕೀಲಾ ಅವರ ಈ ಹೇಳಿಕೆಯಿಂದ ಕಾದ ಕೆಂಡದಂತಾಗಿರುವ ಅರ್ಜುನ್ ಫಾನ್ಸ್, ಅಲ್ಲು ಅರ್ಜನ್ ಅವರಿಗೆ ನಮ್ಮ ದೇಶದಲ್ಲಿ ಅಲ್ಲದೇ ಹೊರದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಆದರೆ ಇಲ್ಲಿಯವರೇ ಆದ ಶಕೀಲಾ ಅವರಿಗೆ ಅಲ್ಲು ಗೊತ್ತಿಲ್ವಾ? ಅವರು ಬೇಕಂತಲೇ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಜೊತೆಗೆ ಶಕೀಲಾ ಅವರ ಸಹೋದರ ಮಹೇಶ್ ಬಾಬು ಎಂದು ಟ್ರೋಲ್ ಕೂಡ ಮಾಡುತ್ತಿದ್ದಾರೆ.