Tag: Shailendra Beldale

  • ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ವಿತರಿಸಿದ ಶೈಲೇಂದ್ರ ಬೆಲ್ದಾಳೆ

    ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ವಿತರಿಸಿದ ಶೈಲೇಂದ್ರ ಬೆಲ್ದಾಳೆ

    ಬೀದರ್: ಜಿಲ್ಲೆಯ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ (Shailendra Beldale) ಅವರು ಆತ್ಮಹತ್ಯೆ ಮಾಡಿಕೊಂಡ 6 ರೈತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಿಸಿದರು.

    ತಮ್ಮ ಕಚೇರಿಯಲ್ಲಿ ಪರಿಹಾರ ಧನ ವಿತರಿಸಿ ಮಾತನಾಡಿದ ಅವರು, ರೈತರ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ, ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಹೊಂದಬೇಕು ಎನ್ನುವುದು ನನ್ನ ಕಳಕಳಿ. ನನ್ನ ಕ್ಷೇತ್ರದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಬಹಳ ದುಃಖಕರ ಸಂಗತಿ ಎಂದರು.ಇದನ್ನೂ ಓದಿ: ದೃಶ್ಯಂ-3 ರಿಲೀಸ್ ಡೇಟ್ ಫಿಕ್ಸ್ – ಮೋಹನ್‌ಲಾಲ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್

    ಬೀದರ್ ದಕ್ಷಿಣ ಕ್ಷೇತ್ರದ ಕಪಲಾಪುರ, ಹೊನ್ನಡ್ಡಿ, ಅಷ್ಟೂರ, ಮರ್ಜಾಪುರ, ಜಮಿಸ್ತಾಪುರ, ಘೋಡಂಪಳ್ಳಿ, ಸಂಗೋಳಗಿ ತಾಂಡಾ ಗ್ರಾಮ ಸೇರಿ ಒಟ್ಟು ಆರು ಜನ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು ಹಾಗೂ ಓರ್ವ ರೈತ ಹಾವು ಕಚ್ಚಿ ಮೃತಪಟ್ಟಿದ್ದರು.

    ಆಗ ಕುಟುಂಬಸ್ಥರಿಗೆ ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದೆ. ಭರವಸೆಯಂತೆ ಇದೀಗ ರೈತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಹಾಗೂ ಹಾವು ಕಡಿತದಿಂದ ಮೃತಪಟ್ಟ ರೈತರ ಕುಟುಂಬಕ್ಕೆ ಎರಡು ಲಕ್ಷ ರೂ. ನೀಡಿದ್ದೇವೆ ಎಂದರು.ಇದನ್ನೂ ಓದಿ: ತಾಂತ್ರಿಕ ದೋಷ – ಜಮ್ಮುವಿಗೆ ಹೊರಟಿದ್ದ ಏರ್‌ಇಂಡಿಯಾ ವಿಮಾನ ದೆಹಲಿಗೆ ವಾಪಸ್

  • ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಗುರಿ: ಶೈಲೇಂದ್ರ ಬೆಲ್ದಾಳೆ

    ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಗುರಿ: ಶೈಲೇಂದ್ರ ಬೆಲ್ದಾಳೆ

    ಬೀದರ್: ಕ್ಷೇತ್ರದ ಅಭಿವೃದ್ಧಿಗಾಗಿ ರಸ್ತೆ, ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಶಿಕ್ಷಣ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಒದಗಿಸುವುದು ನನ್ನ ಕರ್ತವ್ಯ ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಬೀದರ್ (Bidar) ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ (Shailendra Beldale) ಅವರು ಹೇಳಿದರು.

    ಬೀದರ್ ದಕ್ಷಿಣ ಕ್ಷೇತ್ರದ ನಿರ್ಣಾ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಮತ್ತು ಶ್ರೀ ಗುತ್ತಿ ಬಸವೇಶ್ವರ ದೇವಸ್ಥಾನದ ಬಳಿ 25 ಲಕ್ಷ ರೂ. ವೆಚ್ಚದ ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.ಇದನ್ನೂ ಓದಿ: ಇಂಡಿಯಾ ಒಕ್ಕೂಟದಲ್ಲಿ ಬಿರುಕು – ನಾಯಕತ್ವ ಬದಲಾವಣೆಗೆ ಆಂತರಿಕ ಕಲಹ

    ಚಾಲನೆ ನೀಡಿ ಮಾತನಾಡಿದ ಅವರು, ಬೀದರ್ ದಕ್ಷಿಣ ಕ್ಷೇತ್ರದ ಪರಿಪೂರ್ಣ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ಕಣ್ಣಲ್ಲಿ ಸಂತೋಷ ಮತ್ತು ಸಂತೃಪ್ತಿ ಕಾಣಬೇಕೆನ್ನುವುದೇ ನನ್ನ ಗುರಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಾರಿಗೆ ಬರುವ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.

    ನನ್ನ ಬಳಿ ಬರುವ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ನಾನೇ ಖುದ್ದಾಗಿ ಜನರ ಬಳಿ ಹೋಗಿ ಕಾನೂನಿನ ಚೌಕಟ್ಟಿನಲ್ಲಿ ಯಾವ ಕೆಲಸ ಆಗಬೇಕಾಗಿದೆಯೋ ಅವುಗಳನ್ನು ಮಾಡುತ್ತಿದ್ದೇನೆ. ಇಲ್ಲಿಯವರೆಗೆ ಮಾಡಿದಂತಹ ಅಭಿವೃದ್ಧಿ ಕೆಲಸದ ವರದಿಯನ್ನು ತರಿಸಿಕೊಂಡು ಪರಿಶೀಲಿಸಲಾಗುತ್ತಿದೆ. ಕಾಮಗಾರಿಗಳನ್ನು ಉತ್ತಮವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.ಇದನ್ನೂ ಓದಿ: Pink Ball Test | ಭಾರತಕ್ಕೆ ಮತ್ತೆ ಟ್ರಾವಿಸ್‌ ʻಹೆಡ್ಡೇಕ್‌ʼ – ಆಸೀಸ್‌ಗೆ 29 ರನ್‌ಗಳ ಮುನ್ನಡೆ

  • ಶಾಸಕರೊಂದಿಗೆ ಅನುಚಿತ ವರ್ತನೆ – ಆರ್‌ಟಿಓ ಇನ್ಸ್‌ಪೆಕ್ಟರ್ ಅಮಾನತು

    ಶಾಸಕರೊಂದಿಗೆ ಅನುಚಿತ ವರ್ತನೆ – ಆರ್‌ಟಿಓ ಇನ್ಸ್‌ಪೆಕ್ಟರ್ ಅಮಾನತು

    ಬೀದರ್: ಬಿಜೆಪಿ (BJP) ಶಾಸಕ ಶೈಲೇಂದ್ರ ಬೆಲ್ದಾಳೆ (Shailendra Beldale) ಅವರೊಂದಿಗೆ ಅನುಚಿತ ವರ್ತನೆ ತೋರಿ, ಏಕವಚನದಲ್ಲಿ ಮಾತಾನಾಡಿದ್ದ ಆರೋಪದ ಮೇಲೆ ಆರ್‌ಟಿಓ ಇನ್ಸ್‌ಪೆಕ್ಟರ್ ಒಬ್ಬರನ್ನ ಅಮಾನತುಗೊಳಿಸಲಾಗಿದೆ.

    ಸಾರಿಗೆ ಇಲಾಖೆಯಲ್ಲಿ ಆರ್‌ಟಿಓ ಇನ್ಸ್‌ಪೆಕ್ಟರ್ (RTO Inspector) ಆಗಿದ್ದ ಮಂಜುನಾಥ ಕೊರವಿಯವರನ್ನು ಅಮಾನತು ಮಾಡಲಾಗಿದೆ. ಬೀದರ್ ಸಾರಿಗೆ ಮತ್ತು ರಸ್ತೆ ಸುರಕ್ಷಿತ ಆಯುಕ್ತರು ಅಮಾನತು ಮಾಡುವಂತೆ ಆದೇಶಿಸಿದ್ದಾರೆ.ಇದನ್ನೂ ಓದಿ: ಶಬರಿಮಲೆಯಲ್ಲಿ ನಟ ದಿಲೀಪ್‌ಗೆ VIP ದರ್ಶನ – ಪೊಲೀಸ್, TDB ನಡೆಗೆ ಹೈಕೋರ್ಟ್ ಕ್ಲಾಸ್

    ಜಿಲ್ಲೆಯ ಹೊರವಲಯದ ನೌಬಾದ್ ಬಳಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆಗೆ ಆರ್‌ಟಿಓ ಇನ್ಸ್‌ಪೆಕ್ಟರ್ ಏಕವಚನದಲ್ಲಿ ಮಾತಾನಾಡಿದ್ದರು. ಈ ಹಿನ್ನೆಲೆ ಅವರನ್ನು ಬೀದರ್‌ನಿಂದ ರಾಯಚೂರಿಗೆ ವರ್ಗಾವಣೆ ಮಾಡಲಾಗಿತ್ತು. ಜೊತೆಗೆ ಏಕವಚನದಲ್ಲಿ ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಸಂಬಂಧ ಬೆಲ್ದಾಳೆ ಅವರು ಸರ್ಕಾರಕ್ಕೆ ಹಕ್ಕುಚ್ಯುತಿ ಸಲ್ಲಿದರು. ಹಕ್ಕುಚ್ಯುತಿ ಸಲ್ಲಿಸಿದ್ದ ಹಿನ್ನೆಲೆ ಸಾರಿಗೆ ಆಯುಕ್ತರು ಪರಿಶೀಲನೆ ನಡೆಸಿ, ಆರ್‌ಟಿಓ ಇನ್ಸ್ಪೆಕ್ಟರ್‌ನನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.

    ಇದಕ್ಕೂ ಮುನ್ನ ಉಸ್ತುವಾರಿ ಸಚಿವ ಖಂಡ್ರೆ, ಸಚಿವ ರಹೀಂಖಾನ್, ಶೈಲೇಂದ್ರ ಬೆಲ್ದಾಳೆ ಅವರು, ಆರ್‌ಟಿಓ ಇನ್ಸ್ಪೆಕ್ಟರ್ ಕೊರವಿ ಜಿಲ್ಲೆಯ ಮರಳು ಮಾಫಿಯಾ ಸೇರಿದಂತೆ ಹಲವು ಮಾಫಿಯಾಗಳಿಗೆ ಕೈಜೋಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.ಇದನ್ನೂ ಓದಿ: ಚಿತ್ರದುರ್ಗ | ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರಿಗೆ ವಿಮಾನಯಾನ ಭಾಗ್ಯ