Tag: Shahrukh Khan

  • ಶಾರೂಕ್ ಖಾನ್‍ನಿಂದಾಗಿ ನನ್ನ ಜೀವನ ಹಾಳಾಯ್ತು: ಮುಂಬೈ ಯುವತಿ

    ಶಾರೂಕ್ ಖಾನ್‍ನಿಂದಾಗಿ ನನ್ನ ಜೀವನ ಹಾಳಾಯ್ತು: ಮುಂಬೈ ಯುವತಿ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ನನ್ನ ಜೀವನ ಹಾಳು ಮಾಡಿದ್ದಾರೆ ಎಂದು ಮುಂಬೈನ ಯುವತಿಯೊಬ್ಬಳು ತನ್ನ ಇನ್‍ಸ್ಟಾಗ್ರಾಂನಲ್ಲಿ ಬರೆದು ಪೋಸ್ಟ್ ಮಾಡಿದ್ದು, ಈಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆಯಾಗುತ್ತಿದೆ.

    ಮುಂಬೈ ಮೂಲದ ಯುವತಿಯೊಬ್ಬಳ ‘ಹ್ಯುಮನ್ಸ್ ಆಫ್ ಬಾಂಬೆ’ ಎಂಬ ಪೇಜ್‍ನಲ್ಲಿ ಆಕೆಯ ಪ್ರೇಮಕಥೆಯನ್ನು ಪೋಸ್ಟ್ ಮಾಡಲಾಗಿತ್ತು. ಅದರಲ್ಲಿ ಶಾರೂಕ್ ಖಾನ್ ನನ್ನ ಜೀವನವನ್ನು ಹಾಳು ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾಳೆ. ಶಾರೂಖ್ ಖಾನ್

    ಶಾರೂಕ್ ಖಾನ್ ನನ್ನ ಜೀವನವನ್ನು ಹಾಳು ಮಾಡಿದ್ದಾರೆ. ನಾನು ಚಿಕ್ಕವಳಿದ್ದಾಗಿಂದಲೂ ಒಂದು ಒಳ್ಳೆಯ ವ್ಯಕ್ತಿಯಿಂದ ಅದ್ಭುತ ಲವ್ ಪ್ರಪೋಸಲ್ ಪಡೆಯುವ ಕನಸು ಕಂಡಿದ್ದೆ. ನಮ್ಮ ಬ್ಯಾಕ್‍ಗ್ರೌಂಡ್‍ನಲ್ಲಿ ವಯಲಿನ್ ನುಡಿಯುತ್ತಿರಬೇಕು. ಆಗ ನಿಧಾನವಾಗಿ ಆತ ನನ್ನ ಹತ್ತಿರ ಬರುವಾಗ ನನ್ನ ಕೂದಲು ಗಾಳಿಯಲ್ಲಿ ಹಾರಾಡುತ್ತಿರಬೇಕು. ಆಗ ಆತ ನನ್ನ ಮುಂದೆ ಮಂಡಿಯೂರಿ, ನನ್ನ ಬೆರಳಿಗೆ ಉಂಗುರ ತೊಡಿಸಬೇಕು ಎಂಬ ಕನಸನ್ನು ಕಂಡಿದ್ದೆ. ಆದರೆ ಅದು ಸಾಧ್ಯವಾಗಲೇ ಇಲ್ಲ.

    “Shahrukh Khan ruined my life! Since I was a little girl, I always dreamed of having the ‘perfect proposal’ from the perfect man. Violins would start playing in the background, he would walk up to me slowly, while the wind blew in my hair, fall to his knees and hand me the ring. But that never happened. In fact, we found ourselves in the middle of this mess where I was trying to convince my Bengali parents to let me marry a Punjabi Baniya! We’d been dating for 3 years, but the majority of that time was spent on bringing our families together. At one point in our relationship, we were sure that we were going to get married –so he never even tried to ‘surprise’ me with a proposal. Amidst all this drama of a big, fat Indian wedding, I realised– I never had my filmy moment! So, on his birthday, I decided to take the matter into my own hands. I planned a surprise party at the restaurant where we had our first date, and as soon as he walked in– I asked the DJ to play “Marry Me” by Bruno Mars and fell to my knees when he walked in. I said ‘Ashish Aggrawal– I want to spend the rest of my life laughing, crying and fighting with you– will you marry me?’ He looked at me, smirked, pulled me in for a hug and whispered – ‘let’s hope our kids aren’t as filmy!’ And just like that, I created the moment I’d been waiting for..why do women have to wait for the guy to propose? It’s a new day, new age– if you like him, then maybe you should put a ring on it!”

    A post shared by Humans of Bombay (@officialhumansofbombay) on

    ನಾವು ನಮ್ಮ ಕುಟುಂಬದವರ ಮಧ್ಯೆ ಸಿಲುಕಿಗೊಂಡಿದ್ದೆವು. ನಾನು ನನ್ನ ಬೆಂಗಾಲಿ ಪೋಷಕರಿಗೆ ಪಂಜಾಬಿ ಯುವಕನ ಜೊತೆ ಮದುವೆಯಾಗಲೂ ಒಪ್ಪಿಸುತ್ತಿದ್ದೆ. ನಾವಿಬ್ಬರು 3 ವರ್ಷದಿಂದ ಡೇಟಿಂಗ್ ನಡಿಸುತ್ತಿದ್ದೆವು, ಅದರಲ್ಲಿ ನಮ್ಮ ಕುಟುಂಬದವರನ್ನು ಒಪ್ಪಿಸುವುದರಲ್ಲೇ ಸ್ವಲ್ಪ ಕಾಲ ಕಳೆಯಿತು. ಆದರೆ ನಮ್ಮ ಪ್ರೀತಿಯನ್ನು ನೋಡಿದ್ದಾಗ ನಮ್ಮ ಮದುವೆಯಾಗುತ್ತದೆ ಎಂಬ ನಂಬಿಕೆ ಇತ್ತು. ಹಾಗಾಗಿ ಆತ ನನಗೆ ಯಾವುದೇ ‘ಸರ್ಪ್ರೈಸ್’ ಪ್ರಪೋಸ್ ಮಾಡಿಲ್ಲ ಎಂದು ಯುವತಿ ಹೇಳಿದ್ದಾಳೆ.

    ಈ ಭಾರತದ ದೊಡ್ಡ ಸಂಪ್ರದಾಯದ ಮದುವೆಯಲ್ಲಿ ನನ್ನ ಫಿಲ್ಮಿ ಕನಸು ನನಸಾಗಿಲ್ಲ ಎಂಬುದು ತಿಳಿಯಿತು. ಆಗ ನಾನು ಆತನ ಹುಟ್ಟುಹಬ್ಬಕ್ಕೆ ನಾನೇ ಸರ್ಪ್ರೈಸ್ ನೀಡಲು ನಿರ್ಧರಿಸಿದೆ. ಆಗ ನಾನು ಒಂದು ರೆಸ್ಟೊರೆಂಟ್‍ನಲ್ಲಿ ಆತನಿಗೆ ಸರ್ಪ್ರೈಸ್ ಪಾರ್ಟಿ ನೀಡಿದೆ. ಅಲ್ಲಿಗೆ ಹೋಗುತ್ತಿದ್ದ ಹಾಗೆ ನಮ್ಮ ಮೊದಲ ಡೇಟ್ ನಡೀತು. ಆಗ ನಾನು ಡಿಜೆ ‘ಮ್ಯಾರಿ ಮೀ’ ಹಾಡನ್ನು ಹಾಕಲು ಹೇಳಿದೆ. ನಂತರ ಆತ ಒಳಗೆ ಬರುತ್ತಿದ್ದ ಹಾಗೇ ನಾನೇ ಮಂಡಿಯೂರಿದೆ ಎಂದು ಯುವತಿ ಪೋಸ್ಟ್ ನಲ್ಲಿ ತಿಳಿಸಿದ್ದಾಳೆ.

    ಆತನ ಮುಂದೆ ಮಂಡಿಯೂರಿ ಆಶೀಶ್ ಅಗರ್‍ವಾಲ್ ನಾನು ನನ್ನ ಮುಂದಿನ ಜೀವನವನ್ನು ನಿನ್ನ ಜೊತೆ ನಗುತ್ತಾ, ಅಳುತ್ತಾ ಹಾಗೂ ಜಗಳವಾಡುತ್ತಾ ಬದುಕಲು ಇಷ್ಟಪಡುತ್ತೇನೆ. ನನ್ನನ್ನು ಮದುವೆಯಾಗುತ್ತೀಯ? ಎಂದು ಕೇಳಿದೆ. ಆಗ ಆತ ನನ್ನನ್ನು ನೋಡಿ ಮೇಲೆತ್ತಿ ಅಪ್ಪಿಕೊಂಡು, ನಮ್ಮ ಮಕ್ಕಳು ಫಿಲ್ಮಿ ರೀತಿ ಇರಲ್ಲ ಎಂದು ಆಶಿಸುತ್ತೇನೆ ಎಂದು ಹೇಳಿದನು. ನಾನು ಯಾವುದ್ದಕ್ಕೆ ಕಾಯುತ್ತಿದ್ದನೋ ಅದನ್ನು ನಾನೇ ಮಾಡಿದೆ. ಆಗ ನನಗೆ ತಿಳಿಯಿತು ಯುವತಿಯರು ಯಾಕೆ ಹುಡುಗರ ಪ್ರಪ್ರೋಸಲ್‍ಗಾಗಿ ಕಾಯುತ್ತಾರೆ? ಇದು ಹೊಸ ದಿನ, ಹೊಸ ಯುಗ. ನಿಮಗೆ ಆ ಯುವಕ ಇಷ್ಟವಾದರೆ, ಆತನ ಬೆರಳಿಗೆ ಉಂಗುರ ಹಾಕಿ ಎಂದು ಬರೆದು ಆಕೆ ಪೋಸ್ಟ್ ಮಾಡಿದ್ದಾಳೆ.

  • ಕೊಹ್ಲಿಯ ಒಂದು ದಿನದ ಬ್ರಾಂಡ್ ವಾಲ್ಯೂ 4.5-5 ಕೋಟಿ ರೂ.!

    ಕೊಹ್ಲಿಯ ಒಂದು ದಿನದ ಬ್ರಾಂಡ್ ವಾಲ್ಯೂ 4.5-5 ಕೋಟಿ ರೂ.!

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್‍ನ ಮೂರು ಮಾದರಿಯ ನಾಯಕರಾದ ಬಳಿಕ ಅವರ ಬ್ರಾಂಡ್ ವಾಲ್ಯೂ ದಿನಕ್ಕೆ 4.5-5 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

    ಪ್ರಸ್ತುತ ಕೊಹ್ಲಿ 16 ಕಂಪೆನಿಗಳ ರಾಯಭಾರಿ ಆಗಿದ್ದು, ಇತ್ತೀಚೆಗೆ ಭಾರತದಲ್ಲಿ ಉಬರ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ. ಇದರೊಂದಿಗೆ ಕೊಹ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಹಿಂದಿಕ್ಕಿ ಟಾಪ್ ಸೆಲೆಬ್ರಿಟಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

    ಈ ಹಿಂದೆ ಪ್ರತಿದಿನ ಕೊಹ್ಲಿಯ ಬ್ರಾಂಡ್ ವಾಲ್ಯೂ ದಿನಕ್ಕೆ ನಾಲ್ಕು ಕೋಟಿ ರೂ. ಇದ್ದರೆ ಉಬರ್ ಜೊತೆಗಿನ ಒಪ್ಪಂದ ಬಳಿಕ ಈ ಮೊತ್ತ 4.5 -5 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕಳೆದ ವರ್ಷದ ಆಕ್ಟೋಬರ್ ನಲ್ಲಿ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ವಿಶ್ವದ ಮೌಲ್ಯಯುತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ 7 ನೇ ಸ್ಥಾನ ಪಡೆದಿದ್ದರು. ಪ್ರಸ್ತುತ ಕೊಹ್ಲಿ ಭಾರತದ ಟಾಪ್ ಸೆಲೆಬ್ರಿಟಿಯಾಗಿ ಹೊರ ಹೊಮ್ಮಿದ್ದು, ಈಗ ಅವರ ವೇತನ, ಬೋನಸ್, ವಿವಿಧ ಮೂಲಗಳಿಂದ ಬರುತ್ತಿರುವ ಆದಾಯವನ್ನು ಲೆಕ್ಕ ಹಾಕಿದರೆ ಸುಮಾರು 144 ದಶಲಕ್ಷ ಅಮೆರಿಕನ್ ಡಾಲರ್(ಅಂದಾಜು 936 ಕೋಟಿ ರೂ.) ಬ್ರಾಂಡ್ ವಾಲ್ಯೂ ಹೊಂದಿದ್ದಾರೆ.

    2017ರ ಭಾರತದ ಸ್ಟಾರ್ ಸೆಲೆಬ್ರಿಟಿ ಪಟ್ಟಿಯಲ್ಲಿ ವಿರಾಟ್ (936 ಕೋಟಿ ರೂ.) ಮೊದಲ ಸ್ಥಾನವನ್ನು ಪಡೆದಿದ್ದಾರೆ. ನಂತರದಲ್ಲಿ ಶಾರೂಖ್ ಖಾನ್ (689 ಕೋಟಿ ರೂ.), ದೀಪಿಕಾ ಪಡುಕೋಣೆ (604 ಕೋಟಿ ರೂ.), ಅಕ್ಷಯ್ ಕುಮಾರ್ (305 ಕೋಟಿ ರೂ.), ರಣವೀರ್ ಸಿಂಗ್ (273 ಕೋಟಿ ರೂ.) ಕಾಣಿಸಿಕೊಂಡಿದ್ದಾರೆ.

    ಭಾರತವು ಉಬರ್ ಸಂಸ್ಥೆಯ ಅತ್ಯಂತ ಪ್ರಮುಖ ಮಾರುಕಟ್ಟೆ ಕ್ಷೇತ್ರವಾಗಿದ್ದು, ಕೊಹ್ಲಿ ಅವರನ್ನು ತಮ್ಮ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಮತ್ತಷ್ಟು ವ್ಯಾಪಾರವನ್ನು ವೃದ್ಧಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ.

  • ಶಾರೂಕ್ ಮನೆಗೆ ನುಗ್ಗಿ ಸ್ವಿಮ್ಮಿಂಗ್ ಪೂಲ್‍ನಲ್ಲಿ ಬಿದ್ದ ಹುಚ್ಚು ಅಭಿಮಾನಿ

    ಶಾರೂಕ್ ಮನೆಗೆ ನುಗ್ಗಿ ಸ್ವಿಮ್ಮಿಂಗ್ ಪೂಲ್‍ನಲ್ಲಿ ಬಿದ್ದ ಹುಚ್ಚು ಅಭಿಮಾನಿ

    ಮುಂಬೈ: ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಶಾರೂಕ್ ಖಾನ್ ತನ್ನ ಮನೆಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದ್ದ ಅಭಿಮಾನಿಯೊಬ್ಬನ ಹುಚ್ಚಿನ ಕಥೆಯನ್ನು ತಿಳಿಸಿದ್ದಾರೆ.

    ನನ್ನ ಬದುಕಿನಲ್ಲಿ ಎಲ್ಲ ರೀತಿಯ ಅಭಿಮಾನಿಯನ್ನು ನೋಡಿದ್ದೇನೆ. ಆದರೆ ಕೆಲ ದಿನಗಳ ಹಿಂದೆ ಅಭಿಮಾನಿಯೊಬ್ಬ ನೇರವಾಗಿ ನನ್ನ ಮನ್ನತ್ ಮನೆಗೆ ನುಗ್ಗಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿದ್ದಿದ್ದ. ಆಟೋಗ್ರಾಫ್, ಫೋಟೋಗ್ರಾಫ್ ಪಡೆಯದೇ ಬಟ್ಟೆ ಬಿಚ್ಚಿ ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದಿದ್ದು ಯಾಕೆ ಎಂದು ಕೇಳಿದ್ದಕ್ಕೆ ಶಾರೂಕ್ ಸ್ನಾನ ಮಾಡಿದ್ದ ನೀರಿನಲ್ಲಿ ಸ್ನಾನ ಮಾಡಬೇಕೆಂದು ನಾನು ಬಯಸಿದ್ದೆ. ಹೀಗಾಗಿ ನಾನು ಪೂಲ್‍ನಲ್ಲಿ ಬಿದ್ದೆ ಎಂದು ಉತ್ತರಿಸಿದ್ದ ಎನ್ನುವ ವಿಚಾರವನ್ನು ಹೇಳಿಕೊಂಡಿದ್ದಾರೆ.

    ಆ ವ್ಯಕ್ತಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಬೀಳುತ್ತಿದ್ದ ಹಾಗೇ ಸೆಕ್ಯೂರಿಟಿ ಪ್ರಶ್ನಿಸಿದ್ದಾಗ ಆತನ ಉತ್ತರ ಕೇಳಿ ಸ್ವತಃ ನನಗೆ ಶಾಕ್ ಆಯ್ತು ಎಂದು ಹುಚ್ಚು ಅಭಿಮಾನಿಯ ಕಥೆಯನ್ನು ಕಿಂಗ್ ಖಾನ್ ಬಿಚ್ಚಿಟ್ಟರು.

  • ಫೋರ್ಬ್ಸ್ ಇಂಡಿಯಾ ಟಾಪ್ 100 ಸೆಲೆಬ್ರಿಟಿ ಪಟ್ಟಿ ರಿಲೀಸ್: ಯಾರ ಆದಾಯ ಎಷ್ಟು ಕೋಟಿ ಇದೆ ಗೊತ್ತಾ?

    ಫೋರ್ಬ್ಸ್ ಇಂಡಿಯಾ ಟಾಪ್ 100 ಸೆಲೆಬ್ರಿಟಿ ಪಟ್ಟಿ ರಿಲೀಸ್: ಯಾರ ಆದಾಯ ಎಷ್ಟು ಕೋಟಿ ಇದೆ ಗೊತ್ತಾ?

    ನವದೆಹಲಿ: ಫೋರ್ಬ್ಸ್ ಇಂಡಿಯಾ 2017ರ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಬಾಲಿವುಡ್‍ನ ಸಲ್ಮಾನ್ ಖಾನ್ ಸತತ ಎರಡನೇ ಬಾರಿಗೆ 232.83 ಕೋಟಿ ರೂ. ಆದಾಯ ಹೊಂದುವ ಮೂಲಕ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

    ಸತತ ಎರಡು ವರ್ಷಗಳಿಂದ ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಮೊದಲ ಸ್ಥಾನ ಪಡೆದಿದ್ದು, ನಂತರದ ಸ್ಥಾನದಲ್ಲಿ ಶಾರೂಖ್ ಖಾನ್ 170.50 ಕೋಟಿ ರೂ. ಆದಾಯ ಗಳಿಸುವುದರೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

    ಭಾರತದ ಟಾಪ್ 10 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಲ್ಮಾನ್, ಶಾರೂಖ್ ನಂತರದ ಸ್ಥಾನವನ್ನು 100.72 ಕೋಟಿ ರೂ. ಆದಾಯದೊಂದಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಟಾಪ್ ಮೂರು ಸ್ಥಾನಗಳನ್ನು ಪಡೆದಿರುವ ಮೂವರ ಒಟ್ಟು ಆದಾಯ ಕಳೆದ ವರ್ಷದ ಆದಾಯಕ್ಕಿಂತ ಶೇ.20 ರಷ್ಟು ಕಡಿಮೆಯಾಗಿದೆ ಎಂಬುವುದು ಗಮನಾರ್ಹ ವಿಷಯವಾಗಿದ್ದು, ಕಳೆದ ವರ್ಷದಲ್ಲಿ ಟಾಪ್ ಮೂವರು ಸೆಲೆಬ್ರಿಟಿಗಳ ಒಟ್ಟು ಆದಾಯ 626.52 ಕೋಟಿ ರೂ. ಇತ್ತು, ಆದರೆ ಈ ಬಾರಿ 504.05 ಕೋಟಿ ರೂ. ಒಟ್ಟು ಆದಾಯಕ್ಕೆ ಇಳಿಕೆಯಾಗಿದೆ.

    ನಂತರದ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಅಕ್ಷಯ್ ಕುಮಾರ್ 98.25 ಕೋಟಿ ರೂ. ಹಾಗೂ ಭಾರತ ರತ್ನ ಸಚಿನ್ ತೆಂಡೂಲ್ಕರ್ 82.50 ಕೋಟಿ ರೂ. ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಬಾಲಿವುಡ್ ಮಿಸ್ಟರ್ ಫರ್ಪೆಕ್ಟ್ ಅಮಿರ್ ಖಾನ್ 68.75 ಕೋಟಿ ರೂ. ಗಳಿಸಿ ಆರನೇ ಸ್ಥಾನದಲ್ಲಿದ್ದರೆ ಹಾಗೂ ತಮ್ಮ ನಟನೆಯ ಮೂಲಕ ಹಾಲಿವುಡ್ ನಲ್ಲಿ ಮಿಂಚು ಹರಿಸಿರುವ ಬೆಡಗಿ ಪ್ರಿಯಾಂಕ ಚೋಪ್ರಾ 68 ಕೋಟಿ ರೂ. ಗಳಿಸುವ ಮೂಲಕ ಏಳನೇ ಸ್ಥಾನ ಪಡೆದಿದ್ದಾರೆ.

    ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ 63.77 ಕೋಟಿ ರೂ. ಗಳಿಸಿ ಎಂಟನೇ ಸ್ಥಾನ ಪಡೆದಿದ್ದಾರೆ. ಹೃತಿಕ್ ರೋಷನ್ 63.12 ಕೋಟಿ ರೂ. ಗಳಿಸಿ 9ನೇ ಸ್ಥಾನ ಹಾಗೂ ರಣವೀರ್ ಸಿಂಗ್ ಗೆ 62.63 ಕೋಟಿ ರೂ. ಆದಾಯದೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ.

    ಈ ವರ್ಷ ಶೇಕಡಾವಾರು ಆದಾಯ ಪ್ರಮಾಣ ಏರಿಕೆಯಾದ ಸೆಲೆಬ್ರಿಟಿಗಳ ಪೈಕಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಮೊದಲ ಸ್ಥಾನ ಸಿಕ್ಕಿದ್ದು, 57.25 ಕೋಟಿ. ರೂ ಆದಾಯ ಹೊಂದುವ ಮೂಲಕ ಪಟ್ಟಿಯಲ್ಲಿ 13 ಸ್ಥಾನ ಪಡೆದಿದ್ದಾರೆ. 2016 ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಪಡೆದ ನಂತರ ಹಲವು ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿರುವ ಸಿಂಧು ಆದಾಯ ಈ ವರ್ಷ 17 ಪಟ್ಟು ಏರಿಕೆಯಾಗಿದೆ.

    ಟಾಪ್ ಟೆನ್ ಸೆಲೆಬ್ರಿಟಿಗಳು
    ಸಲ್ಮಾನ್ ಖಾನ್ – 232.83 ಕೋಟಿ. ರೂ., ವಯಸ್ಸು 51

    ಶಾರುಕ್ ಖಾನ್ – 170.50 ಕೋಟಿ. ರೂ., ವಯಸ್ಸು 52

    ವಿರಾಟ್ ಕೊಹ್ಲಿ _ 100.72 ಕೋಟಿ. ರೂ., ವಯಸ್ಸು 29

    ಅಕ್ಷಯ್ ಕುಮಾರ್ – 98.25 ಕೋಟಿ. ರೂ., ವಯಸ್ಸು 50

    ಸಚಿನ್ ತೆಂಡೂಲ್ಕರ್ – 82.50 ಕೋಟಿ. ರೂ., ವಯಸ್ಸು 44

    ಅಮೀರ್ ಖಾನ್ – 68.75 ಕೋಟಿ. ರೂ., ವಯಸ್ಸು 52

    ಪ್ರಿಯಾಂಕ ಚೋಪ್ರಾ – 68 ಕೋಟಿ. ರೂ., ವಯಸ್ಸು 35

    ಎಂ.ಎಸ್. ಧೋನಿ – 63.77 ಕೋಟಿ. ರೂ., ವಯಸ್ಸು 36

    ಹೃತಿಕ್ ರೋಷನ್ – 63.12 ಕೋಟಿ. ರೂ., ವಯಸ್ಸು 43

    ರಣವೀರ್ ಸಿಂಗ್ – 62.63 ಕೋಟಿ. ರೂ., ವಯಸ್ಸು 32

     

  • ಬಾಲಿವುಡ್ ಗೆ ಎಂಟ್ರಿ ಕೊಡಲು ತಯಾರಾದ್ರಾ ಶಾರೂಖ್ ಖಾನ್ ಪುತ್ರಿ!

    ಬಾಲಿವುಡ್ ಗೆ ಎಂಟ್ರಿ ಕೊಡಲು ತಯಾರಾದ್ರಾ ಶಾರೂಖ್ ಖಾನ್ ಪುತ್ರಿ!

    ಮುಂಬೈ: ಬಾಲಿವುಡ್‍ ನಲ್ಲಿ ಸ್ಟಾರ್ ನಟರ ಮಕ್ಕಳು ಬಣ್ಣ ಹಚ್ಚಿ ಕ್ಯಾಮೆರಾಗೆ ಕಣ್ಣು ಹೊಡೆಯೊದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಹಾಗೆಯೇ ಈಗ ಬಿ-ಟೌನ್ ಬಿಗ್ ಸ್ಟಾರ್ ನಟನ ಪುತ್ರಿಯೊಬ್ಬರು ಬಣ್ಣದ ಬದುಕೆಗೆ ಬಲಗಾಲಿಟ್ಟು ಬರಲು ಜೆಮ್‍ ನಲ್ಲಿ ಬೆವರಿಳಿಸುತ್ತಿದ್ದಾರೆ.

    ಹೌದು. ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಪುತ್ರಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ, ತಂದೆಯ ಜೊತೆಗೆ ಫಂಕ್ಷನ್‍ ಗಳಿಗೆ ಬರುತ್ತಿದ್ದ ಸುಹಾನಾ ಖಾನ್ ಬಾಳೆ ಮರದ ರೀತಿ ಬೆಳಿದು ನಿಂತಿದ್ದಾರೆ. ಮನೆಯಿಂದ ಹೊರ ಬರುತ್ತಿದ್ದಂತೆ ಫೋಟೋಗ್ರಾಫರ್‍ ಗಳು ಮುತ್ತಿಕೊಂಡು ಕ್ಯಾಮೆರಾ ಪಟ್ಟಪಟನೇ ಕ್ಲಿಕಿಸುವಂತೆ ಮಾಡುವ ಚೆಂದುಳಿ ಚೆಲುವೆಯಾಗಿದ್ದಾರೆ.

    ಶಾರುಖ್ ಪುತ್ರಿಯ ಬೆಡಗು ಬಿನ್ನಾಣಕ್ಕೀಗ ಬಾಲಿವುಡ್‍ ನಿಂದ ಬೇಜಾನ್ ಆಫರ್‍ ಗಳು ಬರುತ್ತಿವೆ. ನಮ್ಮ ಬ್ಯಾನರ್‍ನಲ್ಲಿ ನಿಮ್ಮ ಮಗಳನ್ನ ಗ್ರ್ಯಾಂಡ್ ಆಗಿ ಇಂಟ್ರೊಡ್ಯೂಸ್ ಮಾಡುತ್ತೇವೆ ಎಂದು ಪ್ರೋಡ್ಯೂಸರ್‍ಗಳು ಕ್ಯೂ ನಿಂತಿದ್ದಾರೆ. ಅಷ್ಟರ ಮಟ್ಟಿಗೆ ಸುಹಾನಾ ಮೋಡಿ ಮಾಡಿದ್ದಾರೆ.

    ಇನ್ನು ಸುಹಾನಾಗೆ ಕೇವಲ 17ರ ಹರೆಯ. ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿ ಪಿಯುಸಿ ಒದುತ್ತಿದ್ದಾರೆ ಅಷ್ಟೇ. ಅಷ್ಟರಲ್ಲಿ ಬಾಲಿವುಡ್‍ ನ ದೊಡ್ಡ ದೊಡ್ಡ ಬ್ಯಾನರ್‍ ಗಳಿಂದ ಆಫರ್ ಬರಲು ಕಾರಣವೇನು? ಎಂದು ದುರ್ಬಿನ್ ಹಾಕಿ ನೋಡಿದಾಗ ಸಿಕ್ಕ ಉತ್ತರವೇ ಈ ವಿಡಿಯೋ.

    ಸುಹಾನಾ ಖಾನ್ ಜಿಮ್‍ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಟಾಪ್ ಹೀರೋಯಿನ್ ಗಳಾದ ಕತ್ರಿನಾ ಕೈಫ್, ಅಲಿಯಾ ಭಟ್, ಜಾಕ್ವೆಲಿನ್ ಫರ್ನಾಂಡಿಸ್ ರೀತಿ ವರ್ಕೌಟ್ ಮಾಡುತ್ತಿದ್ದಾರೆ.

    ಸದ್ಯ ಬಾಲಿವುಡ್‍ನಲ್ಲಿ ಶಾರೂಖ್ ಪುತ್ರಿ ಸುಹಾನಾಗೆ ಭರ್ಜರಿ ಆಫರ್‍ಗಳು ಬರುತ್ತಿವೆ. ಅವಕಾಶಕ್ಕೆ ತಕ್ಕ ಹಾಗೇ ಸುಹಾನಾ ಜಿಮ್‍ನಲ್ಲಿ ಭರ್ಜರಿ ಕಸರತ್ತು ಮಾಡುವ ಮೂಲಕ ಬೇವರಿಳಿಸುತ್ತಿದ್ದಾರೆ. ಎಲ್ಲಾ ಕಸರತ್ತು ನೋಡಿದ ಬಾಲಿವುಡ್ ಸಿನಿಪಂಡಿತರು, ಓಹೋ ಶಾರೂಖ್ ಪುತ್ರಿ ಸಿನ್ಮಾ-ಗಿನ್ಮಾ ಮಾಡ್ತಿರಬೇಕು, ಅದಕ್ಕೆ ಇಷ್ಟೆಲ್ಲಾ ಬೆವರು ಸುರಿಸುತ್ತಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

    https://www.youtube.com/watch?v=G-qY8dEYATo

  • ಕಾರ್ಯಕ್ರಮದಲ್ಲಿ ದೀಪಿಕಾ ಕಣ್ಣೀರು ಒರೆಸಿದ ಬಾದ್ ಶಾ

    ಕಾರ್ಯಕ್ರಮದಲ್ಲಿ ದೀಪಿಕಾ ಕಣ್ಣೀರು ಒರೆಸಿದ ಬಾದ್ ಶಾ

    ಮುಂಬೈ: ಬಾಲಿವುಡ್ ಬಾದ್‍ ಶಾ ಶಾರೂಖ್ ಖಾನ್ ರನ್ನ ಜೆಂಟಲ್‍ ಮ್ಯಾನ್ ಅಂತ ಸುಮ್ಮನೆ ಕರೆಯಲ್ಲ. ತಮ್ಮ ಜೊತೆಯಲ್ಲಿರುವ ಮಹಿಳೆಯರನ್ನ ಆರಾಮಾಗಿ ಆಗಿ ಇರುವಂತೆ ನೋಡಿಕೊಳ್ಳೋದು ಶಾರೂಖ್‍ ಗೆ ಗೊತ್ತು. ತಮ್ಮ ಸಹ-ನಟರಿಗೆ ಅವರು ಒಳ್ಳೆಯ ಮಾರ್ಗದರ್ಶಕರಾಗಿತ್ತಾರೆ ಅನ್ನೋದನ್ನ ನಿರೂಪಿಸಿದ್ದಾರೆ.

    ಲಕ್ಸ್ ಗೋಲ್ಡನ್ ದೀವಾಸ್ ಅರ್ಪಿಸುವ ಬಾತೇ ವಿತ್ ಬಾದ್‍ಶಾ ರಿಯಾಲಿಟಿ ಶೋನಲ್ಲಿ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದ್ದಾರೆ. ತನ್ನ ತಾಯಿ ಉಜಾಲಾ ಬಗ್ಗೆ ಮಾತಾಡುವ ವೇಳೆ ಪದ್ಮಾವತಿ ಚಿತ್ರದ ನಾಯಕಿಯ ಕಣ್ಣಂಚಲ್ಲಿ ನೀರು ಬಂದಿದ್ದು, ಶೋ ನಡೆಸಿಕೊಡ್ತಿದ್ದ ಶಾರುಖ್ ಖಾನ್ ಎದ್ದು ಬಂದು ಡಿಪ್ಪಿಗೆ ಕಣ್ಣೀರು ಒರೆಸಿದ್ರು.

    ದೀಪಿಕಾ ಪಡುಕೋಣೆ ಅವರ ತಾಯಿ ಉಜಾಲಾ ಪಡುಕೋಣೆ ದೀಪಿಕಾ ಅವರ ಯಶಿಸ್ಸಿನ ಕುರಿತು ಪತ್ರ ಬರೆದಿದ್ದರು. ಶಾರೂಖ್ ಆ ಪತ್ರವನ್ನು ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ಓದಿದ್ದರು. ನೀನು ನಿನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೀಯ. ನಿನ್ನ ಬಗ್ಗೆ ನನಗೆ ತುಂಬ ಹೆಮ್ಮೆಯಾಗುತ್ತೆ. ನೀನು ನಿನ್ನ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಸರಿಯಾಗಿ ನಡೆಸಿಕೊಂಡು ಹೋಗುತ್ತಿದ್ದೀಯ ಎಂದು ದೀಪಿಕಾ ಅವರ ತಾಯಿ ಪತ್ರದಲ್ಲಿ ಬರೆದಿದ್ದರು. ಇದನ್ನು ಕೇಳಿದ ದೀಪಿಕಾ ಅಳಲಾರಂಭಿಸಿದ್ದರು. ಅವರು ಕಣ್ಣಿನಿಂದ ನೀರು ಬಂದ ತಕ್ಷಣ ಶಾರೂಖ್ ಅವರ ಕಣ್ಣಿರನ್ನು ಒರೆಸಿ ಆಕೆಯನ್ನು ಸಮಾಧಾನ ಮಾಡಿದ್ರು.

    * ^^ OMG!! ????❤️ . #DeepikaPadukone

    A post shared by Deepika Padukone ♡ (@deepikaworldwide) on

    ದೀಪಿಕಾ ಬಾಲಿವುಡ್‍ ನಲ್ಲಿ ತಮ್ಮ ವೃತ್ತಿ ಜೀವನವನ್ನು ಶಾರೂಖ್ ಜೊತೆ ಆರಂಭಿಸಿದ್ದರು. 2007 ರಲ್ಲಿ ತೆರೆಕಂಡ ಓಂ ಶಾಂತಿ ಓಂ ಚಿತ್ರದಲ್ಲಿ ಮೊದಲ ಬಾರಿಗೆ ಶಾರೂಖ್ ಗೆ ನಾಯಕಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದರು. ನಂತರ ಚನ್ನೈ ಎಕ್ಸ್ ಪ್ರೆಸ್ ಹಾಗೂ ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ಶಾರೂಖ್ ಜೊತೆ ನಟಿಸಿದ್ದರು.

    ಸದ್ಯ ದೀಪಿಕಾ ಪಡುಕೋಣೆ ಪದ್ಮಾವತಿ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ರಾಣಿ ಪದ್ಮಾವತಿಯಾಗಿ ಕಾಣಿಸಿಕೊಂಡಿದ್ದು, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ನಟಿಸಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿ ಆಗಿ ನಟ ರಣ್‍ವೀರ್ ಸಿಂಗ್ ನಟಿಸಿದ್ದಾರೆ.

    * ^^ ????❤️ . #DeepikaPadukone

    A post shared by Deepika Padukone ♡ (@deepikaworldwide) on

    * ^^ 2/2 @iamsrk reads a letter from @deepikapadukone’s mother ❤️????????

    A post shared by Deepika Padukone ♡ (@deepikaworldwide) on

    * ^^ 2/2 @iamsrk reads a letter from @deepikapadukone’s mother ❤️????

    A post shared by Deepika Padukone ♡ (@deepikaworldwide) on

    * ^^ ????❤️ . #DeepikaPadukone

    A post shared by Deepika Padukone ♡ (@deepikaworldwide) on

    * ^^ 2/2 @iamsrk reads a letter from @deepikapadukone’s mother ❤️????

    A post shared by Deepika Padukone ♡ (@deepikaworldwide) on

    * ^^ 2/2 @iamsrk reads a letter from @deepikapadukone’s mother ❤️????????

    A post shared by Deepika Padukone ♡ (@deepikaworldwide) on

    * ^^ Video: teamdeepikamySanjay Leela Bhansali’s letter to @deepikapadukone ❤️????

    A post shared by Deepika Padukone ♡ (@deepikaworldwide) on

    * ^^ ShahRukh Khan reads a letter from Deepika’s mother ????❤️???????? . Deepika’s mother says that Deepika was a tomboy when she was a kid. She used to beat boys and spill food in restaurants but she was determined that she will play badminton since she was a child. Her parents supported her dream of becoming an actress and was wdecision about settling in Mumbai but was sure that she will definitely succeed in this. Deepika has a pure heart and if by mistake she hurts someone she won’t sleep until and unless she apologised to that person. Her mother also mentions that whatever she did, she did it on her own and single- handedly succeeded in her career and fulfilled her dreams of becoming an inspiration. She has also build up her own house along with her career and she was, is and will always be determined . #DeepikaPadukone

    A post shared by Deepika Padukone ♡ (@deepikaworldwide) on

  • ಬಾದ್‍ ಶಾ ಹುಟ್ಟಹಬ್ಬ ದಿನದಂದು ಎದುರಾದ ವೈರಿಗಳು, ಜೊತೆಯಾದ ಮಾಜಿ ಪ್ರೇಮಿಗಳು!

    ಬಾದ್‍ ಶಾ ಹುಟ್ಟಹಬ್ಬ ದಿನದಂದು ಎದುರಾದ ವೈರಿಗಳು, ಜೊತೆಯಾದ ಮಾಜಿ ಪ್ರೇಮಿಗಳು!

    ಮುಂಬೈ: ಬಾಲಿವುಡ್ ಬಾದ್‍ ಶಾ ಶಾರೂಖ್ ಖಾನ್ ತಮ್ಮ 52 ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿ 12 ಗಂಟೆಯಿಂದಲೇ ಬಿ-ಟೌನ್ ನ ನಟರು ಅಲಿಬಗ್ ನಲ್ಲಿರುವ ಶಾರೂಖ್ ಫಾರ್ಮ್ ಹೌಸ್ ಗೆ ತೆರಳಿ ಕೇಕ್ ಕತ್ತರಿಸಿ ಶಾರೂಖ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

    ಶಾರೂಖ್ ಹುಟ್ಟುಹಬ್ಬದಂದು ದೀಪಿಕಾ ಪಡುಕೋಣೆ ಬರುತ್ತಿದ್ದಂತೆ ಕತ್ರಿನಾ ಕೈಫ್ ಪಾರ್ಟಿಯನ್ನು ಅರ್ಧದಲ್ಲೇ ಬಿಟ್ಟು ಹೊರ ಹೋಗಿದ್ದಾರೆ. ದೀಪಿಕಾ ಪಡುಕೋಣೆ ಬರುವ ಮುಂಚೆ ಕತ್ರಿನಾ ಅವರು ಶಾರೂಖ್ ಜೊತೆ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು.

    ಅಲಿಬಗ್ ನಿಂದ ಹೊರಟ ಕತ್ರಿನಾ ಕೆಲವೇ ಸಮಯದಲ್ಲಿ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದ ಸಲುವಾಗಿ ಕತ್ರಿನಾ ಪಾರ್ಟಿಯನ್ನು ಮಧ್ಯದಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಈಗ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

    ಶಾರೂಖ್ ಹುಟ್ಟುಹಬ್ಬದಂದು ದೀಪಿಕಾ ಪಡುಕೋಣೆ ಆಗಮಿಸಿದ್ದು, ಬಾದ್ ಶಾ ಜೊತೆ ಕೆಲ ಸಂತೋಷದ ಕ್ಷಣಗಳನ್ನು ಕಳೆದರು. ಈ ಪಾರ್ಟಿಯಲ್ಲಿ ಮಾಜಿ ಪ್ರೇಮಿಗಳಾದ ಅಲಿಯಾ ಭಟ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಕೂಡ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪಾರ್ಟಿಯಲ್ಲಿ ಅಲಿಯಾ ಭಟ್ ಹಾಗೂ ದೀಪಿಕಾ ಪಡುಕೋಣೆ ಜೊತೆಯಾಗಿ ಫೋಟೋದಲ್ಲಿ ಪೋಸ್ ಕೊಟ್ಟಿದ್ದಾರೆ.

    ಶಾರೂಖ್ ಹುಟ್ಟುಹಬ್ಬದ ದಿನದಂದು ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಮಲೈಕಾ ಆರೋರಾ, ಸೂಸೈನ್ ರೋಶನ್, ಅಲಿಯಾ ಭಟ್, ಕರಣ್ ಜೋಹರ್, ಫರ್ಹ ಖಾನ್, ಫರಾನ್ ಅಕ್ತರ್, ಸೇರಿದಂತೆ ಹಲವು ನಟರು ಭಾಗವಹಿಸಿದ್ದರು.

    ಶಾರೂಖ್ ಅವರ ಹುಟ್ಟುಹಬ್ಬದ ಕೆಲವು ಫೋಟೋಗಳನ್ನು ನಿರ್ದೇಶಕ ಕರಣ್ ಜೋಹರ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಗಣ್ಯರು ಶಾರೂಖ್ ಖಾನ್ ಅವರಿಗೆ ಟ್ವಿಟ್ಟರ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.

    https://twitter.com/itsSSR/status/925993386586259456

    You go girls!!!!! #alibaugdiaries

    A post shared by Karan Johar (@karanjohar) on

    Happy campers! #alibaugdiaries

    A post shared by Karan Johar (@karanjohar) on

    Poser alert! @nehadhupia

    A post shared by Karan Johar (@karanjohar) on

    My fave @malaikaarorakhanofficial

    A post shared by Karan Johar (@karanjohar) on

    Love you farah!!!!! Watch out for the most talented photo bombers!

    A post shared by Karan Johar (@karanjohar) on

    Girl zone! #alibaugdiaries @deepikapadukone @aliaabhatt

    A post shared by Karan Johar (@karanjohar) on

    Photobombed by Abram! Girls just wanna have fun!!!

    A post shared by Karan Johar (@karanjohar) on

    Eve of the birthday! @iamsrk #alibaugdiaries

    A post shared by Karan Johar (@karanjohar) on

    happy birthday SR ????????

    A post shared by Alia ✨⭐️ (@aliaabhatt) on

  • ಕರಣ್ ಜೋಹರ್ ಜೊತೆ ಇರುವ ತನ್ನ ಸಂಬಂಧದ ರಹಸ್ಯ ಬಿಚ್ಚಿಟ್ಟ ಶಾರೂಖ್ ಖಾನ್!

    ಕರಣ್ ಜೋಹರ್ ಜೊತೆ ಇರುವ ತನ್ನ ಸಂಬಂಧದ ರಹಸ್ಯ ಬಿಚ್ಚಿಟ್ಟ ಶಾರೂಖ್ ಖಾನ್!

    ಮುಂಬೈ: ನಿರ್ದೇಶಕ ಕರಣ್ ಜೋಹರ್ ನಟ ಶಾರೂಖ್ ಖಾನ್ ಅವರ ಜೊತೆ ಮಾಡಿರುವ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದೆ. ಆದರೆ ಈಗ ಈ ಇಬ್ಬರು ಜೊತೆಯಾಗಿ ಸಿನಿಮಾ ಮಾಡಿ ಹಲವು ವರ್ಷಗಳು ಆಗಿದೆ. ಈ ಹಿಂದೆ 2010ರಲ್ಲಿ ಕರಣ್ ಅವರ ನಿರ್ದೇಶನದಲ್ಲಿ ಬಿಡುಗಡೆಯಾದ ‘ಮೈ ನೇಮ್ ಈಸ್ ಖಾನ್’ ಚಿತ್ರದಲ್ಲಿ ಶಾರೂಖ್ ನಟಿಸಿದ್ದರು.

    ಇತ್ತೀಚಿಗೆ ನಡೆದ ‘ಇಫ್ತೆಫಾಕ್’ ಚಿತ್ರದ ಪ್ರೆಸ್ ಮೀಟ್ ನಲ್ಲಿ ಶಾರೂಖ್ ಖಾನ್ ಆಗಮಿಸಿದ್ದರು. ಆಗ ಅಲ್ಲಿದ ಮಾಧ್ಯಮದವರು ನಿಮ್ಮ ಹಾಗೂ ಕರಣ್ ಅವರ ಸಿನಿಮಾ ಯಾವಾಗ ಬರಲಿದೆ ಎಂದು ಶಾರೂಖ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ನಾವು ಸಾಕಷ್ಟು ಚಿತ್ರದ ಕಥೆ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಆದರೆ ಯಾವುದು ಈಗ ಫೈನಲ್ ಆಗಿಲ್ಲ ಎಂದು ಶಾರೂಖ್ ಉತ್ತರಿಸಿದ್ದಾರೆ.

    ತಮ್ಮ ಪ್ರೊಡಕ್ಷನ್ ವೆಂಚರ್ ಬಗ್ಗೆ ಮಾತನಾಡುತ್ತಾ ಕರಣ್, “ನಾನು ಹಾಗೂ ಶಾರೂಖ್ ಕೇವಲ ಒಳ್ಳೆಯ ಸ್ನೇಹಿತರು ಅಥವಾ ಒಳ್ಳೆ ಕುಟುಂಬದವರು ಅಷ್ಟೇ ಅಲ್ಲ ಒಳ್ಳೆಯ ಸಹದ್ಯೋಗಿ ಕೂಡ” ಎಂದು ಮಾಧ್ಯಮದವರಿಗೆ ತಿಳಿಸಿದರು.

    ಕರಣ್ ಹಾಗೂ ಶಾರೂಖ್ ನಡುವೆ ಜಗಳ ನಡೆದಿದೆ. ಅವರ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂದು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತಿತ್ತು. ಈಗ ಇವರಿಬ್ಬರು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವ ಮೂಲಕ ಇಬ್ಬರ ಸಂಬಂಧದ ಬಗ್ಗೆ ಹರಡಿದ್ದ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

    ಕರಣ್ ಅವರಿಂದ ನನಗೆ ಯಾವುದೇ ತೊಂದರೆ ಇಲ್ಲ. ನಾನು ಯಾವಾಗಲೂ ಅವರನ್ನು ಪ್ರೀತಿಯಿಂದ ನೋಡುತ್ತೇನೆ. ಅವರ ಪ್ರೀತಿಯ ಹಲವು ಮುಖಗಳನ್ನು ನಾನು ನೋಡಿದ್ದೇನೆ. ನನಗೆ ಸ್ನೇಹಿತನಿಂದ ಒಬ್ಬ ಸಹೋದರನ ರೀತಿಯಲ್ಲಿ ಅವರು ನನಗೆ ನೋಡುತ್ತಾರೆ ಎಂದು ಶಾರೂಖ್ ಖಾನ್ ಕರಣ್ ಅವರನ್ನು ಹೊಗಳಿದರು.

  • ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಧರಿಸ್ತಾರೆ 69 ಸಾವಿರ ರೂ. ಬೆಲೆಯ ಶೂ!

    ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಧರಿಸ್ತಾರೆ 69 ಸಾವಿರ ರೂ. ಬೆಲೆಯ ಶೂ!

    ಮುಂಬೈ: ಬಾಲಿವುಡ್ ನಲ್ಲಿ ಈಗ ಸ್ಟಾರ್ ಗಳಿಗಿಂತ ಅವರ ಮಕ್ಕಳು ಹೆಚ್ಚಾಗಿ ಕಾಣಿಸಿಕೊಳ್ಳುವುದರ ಮೂಲಕ ಹೆಚ್ಚು ಪ್ರಚಾರ ಪಡೆಯುತ್ತಿದ್ದಾರೆ. ಸದ್ಯ ಬಾಲಿವುಡ್ ನಲ್ಲಿ ಸ್ಟಾರ್ ಮಕ್ಕಳು ಸಿನಿಮಾಗೆ ಎಂಟ್ರಿ ಕೊಡುವ ಟ್ರೆಂಡ್ ಹುಟ್ಟಿಕೊಂಡಿವೆ. ಹಾಗಾಗಿ ಸ್ಟಾರ್ ಮಕ್ಕಳು ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವುದು ಮತ್ತು ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.

    ಬಾಲಿವುಡ್ ಕಿಂಗ್ ಖಾನ್ ಎಂದು ಕರೆಸಿಕೊಳ್ಳುವ ಶಾರೂಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಕೂಡ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಸಿಗುತ್ತಿದ್ದಾರೆ. ಇತ್ತೀಚೆಗೆ ಗೆಳತಿಯರೊಂದಿಗೆ ಕಾಣಿಸಿಕೊಂಡಿದ್ದ ಸುಹಾನಾ ಬರೋಬ್ಬರಿ 69,574 ರೂ. ಬೆಲೆಯ ಶೂ ಧರಿಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಕೇವಲ ಸಿನಿಮಾ ನಟ-ನಟಿಯರು ಹೆಚ್ಚು ಬೆಲೆ ಬಾಳುವ ಶೂ ಮತ್ತು ಬಟ್ಟೆಗಳನ್ನು ಧರಿಸುತ್ತಾರೆ ಎಂಬ ಮಾತನ್ನು ಸುಹಾನ ಸುಳ್ಳು ಮಾಡಿದ್ದಾರೆ.

    ಸುಹನಾ ತನ್ನ ಗೆಳತಿಯರಾದ ಶನಯಾ ಕಪೂರ್ ಮತ್ತು ಅಹನಾ ಪಾಂಡ್ಯೆ ರೊಂದಿಗೆ ಕಾಣಿಸಿಕೊಳ್ಳುವ ಮೂಲಕ ಎಲ್ಲರನ್ನು ಆಕರ್ಷಿಸಿದ್ದರು. ನೀಲಿ ಬಣ್ಣದ ಟೋನ್ ಜೀನ್ಸ್ ಜೊತೆಗೆ ಬಿಳಿ ಬಣ್ಣದ ಕ್ರಾಪ್ ಟಾಪ್ ಧರಿಸಿದ್ದ ಸುಹನಾ ಕ್ಲಾಸಿ ಲುಕ್ ನಲ್ಲಿ ಕಾಣಿಸಿದ್ದರು.

     

    https://www.instagram.com/p/Baltol2g2o8/?hl=en&taken-by=suhana_khan_officiall

    https://www.instagram.com/p/BZxqKSigfXj/?hl=en&taken-by=suhana_khan_officiall

    https://www.instagram.com/p/BYiWyBNAMxS/?hl=en&taken-by=suhana_khan_officiall

    https://www.instagram.com/p/BVmJ_9ig5qp/?hl=en&taken-by=suhana_khan_officiall

    https://www.instagram.com/p/BYsrGk7Axa8/?hl=en&taken-by=suhana_khan_officiall

  • ಬಾಲಿವುಡ್‍ನ ಟಾಪ್ ಐವರು ನಟಿಯರೊಂದಿಗೆ ನಟಿಸಲಿದ್ದಾರೆ ಕಿಂಗ್ ಖಾನ್

    ಬಾಲಿವುಡ್‍ನ ಟಾಪ್ ಐವರು ನಟಿಯರೊಂದಿಗೆ ನಟಿಸಲಿದ್ದಾರೆ ಕಿಂಗ್ ಖಾನ್

    ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ತಮ್ಮ ಮುಂದಿನ ಚಿತ್ರದಲ್ಲಿ ಕಾಜೋಲ್, ಕರಿಶ್ಮಾ ಕಪೂರ್, ಶ್ರೀದೇವಿ, ರಾಣಿ ಮುಖರ್ಜಿ ಮತ್ತು ಆಲಿಯಾ ಭಟ್ ರೊಂದಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ.

    ಈಗಾಗಲೇ ಎಲ್ಲ ನಟಿಯರೊಂದಿಗೆ ನಟಿಸಿರುವ ಶಾರುಖ್ ಮೊದಲ ಬಾರಿಗೆ ಎಲ್ಲರೊಂದಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆನಂದ್ ಎಲ್ ರೈ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಕತ್ರೀನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದ ಪಾರ್ಟಿ ದೃಶ್ಯವೊಂದರಲ್ಲಿ ಈ ಎಲ್ಲ ನಟಿಯರು ಆಗಮಿಸಿರುತ್ತಾರೆ.

    ಪಾರ್ಟಿ ನಂತರ ಶಾರುಖ್ ಖಾನ್ ಎಲ್ಲ ನಟಿಯರೊಂದಿಗೆ ಕ್ಲಿಕಿಸಿಕೊಂಡಿರುವ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಒಟ್ಟು ಎರಡು ಫೋಟೋಗಳನ್ನು ಅಪ್ಲೋಡ್ ಮಾಡಿರುವ ಶಾರುಖ್ ಒಂದರಲ್ಲಿ ಶ್ರೀದೇವಿ, ಕರಿಶ್ಮಾ ಕಪೂರ್ ಮತ್ತು ಆಲಿಯಾ ಭಟ್ ಇದ್ದಾರೆ. ಮತ್ತೊಂದು ಫೋಟೋದಲ್ಲಿ ರಾಣಿ ಮತ್ತು ಕಾಜೋಲ್ ಜೊತೆಯಾಗಿದ್ದಾರೆ. ಸಿನಿಮಾದಲ್ಲಿ ರಾಣಿ ಮತ್ತು ಕಾಜೋಲ್ ಸಹೋದರಿಯಾಗಿದ್ದರಿಂದ ಬೇರೆ ಶೂಟಿಂಗ್ ಟೈಮ್‍ನಲ್ಲಿ ಬಂದಿದ್ದರಿಂದ ಬೇರೆ ಫೋಟೋ ತೆಗೆಯಲಾಗಿದೆ.

    ವಿಶೇಷ ಅತಿಥಿ ಪಾತ್ರದಲ್ಲಿ ನಟಿಸಲು ಐವರು ನಟಿಯರು ಯಾವುದೇ ಸಂಭಾವನೆಯನ್ನು ಪಡೆದಿಲ್ಲ. ಕೇವಲ ಶಾರುಖ್ ಸ್ನೇಹಕ್ಕಾಗಿ ಬಂದು ನಟಿಸಿದ್ದಾರೆ. ಶೂಟಿಂಗ್ ಬಂದಿದ್ದ ನಟಿಯರಿಗೆ ಶಾರುಖ್ ವೈಯಕ್ತಿಕವಾಗಿ ಬೆಲೆ ಬಾಳುವ ಗಿಫ್ಟ್‍ಗಳನ್ನು ನೀಡಿದ್ದಾರೆ.

    ಈ ಹಿಂದೆ ಶಾರುಖ್ ಖಾನ್ `ಓಂ ಶಾಂತಿ ಓಂ’ ಸಿನಿಮಾದ ಹಾಡೊಂದರಲ್ಲಿ ಇದೇ ರೀತಿಯಾಗಿ ಬಾಲಿವುಡ್‍ನ ಅನೇಕ ಗಣ್ಯ ನಟ-ನಟಿಯರೊಂದಿಗೆ ನಟಿಸಿದ್ದರು. ಓಂ ಶಾಂತಿ ಓಂ ಸಿನಿಮಾದ ಟೈಟಲ್ ಸಾಂಗ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು.

    https://www.instagram.com/p/BZujV6-jmEJ/?taken-by=iamsrk