Tag: Shahrukh Khan

  • ಮಗನಿಗೆ ಬೇಲ್ ಸಿಕ್ಕ ಖುಷಿಗೆ ವಕೀಲರ ತಂಡದೊಂದಿಗೆ ಫೋಟೋಗೆ ಪೋಸ್ ಕೊಟ್ಟ ಶಾರೂಖ್ ಖಾನ್

    ಮಗನಿಗೆ ಬೇಲ್ ಸಿಕ್ಕ ಖುಷಿಗೆ ವಕೀಲರ ತಂಡದೊಂದಿಗೆ ಫೋಟೋಗೆ ಪೋಸ್ ಕೊಟ್ಟ ಶಾರೂಖ್ ಖಾನ್

    ಮುಂಬೈ: ಡ್ರಗ್ಸ್ ಕೇಸ್ ಸಂಬಂಧಿಸಿದಂತೆ ಬಂಧನಕಕ್ಕೊಳಗಾಗಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ 22 ದಿನಗಳ ಜೈಲುವಾಸದ ಬಳಿಕ ಇಂದು ಜಾಮೀನು ಮಂಜೂರಾಗಿದೆ. ಆರ್ಯನ್ ಖಾನ್ ಬಿಡುಗಡೆಗಾಗಿ ಕೋರ್ಟ್‍ನಲ್ಲಿ ವಾದ ಮಂಡಿಸಿದ ವಕೀಲರ ತಂಡೊಂದಿಗೆ ಶಾರೂಖ್ ಖಾನ್ ಫೋಟೋಗೆ ಪೋಸ್ ನೀಡುವ ಮೂಲಕ ಸಂಭ್ರಮಿಸಿದ್ದಾರೆ.

    ಡ್ರಗ್ಸ್ ಕೇಸ್‍ನಲ್ಲಿ ಎನ್‍ಸಿಬಿ ಬಲೆಗೆ ಬಿದ್ದಿದ್ದ ಆರ್ಯನ್ ಖಾನ್‍ಗೆ ಮುಂಬೈನ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿತ್ತು. ಬಳಿಕ ಆರ್ಯನ್ ಖಾನ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನಲ್ಲಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ಆರ್ಯನ್ ಪರ ವಾದ ಮಂಡಿಸಿದ್ದರು. ಈ ವಾದವನ್ನು ಆಲಿಸಿದ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಜಾಮೀನು ಮಂಜೂರು

    ಆರ್ಥರ್ ಜೈಲಿನಲ್ಲಿ ಕಂಬಿ ಎಣಿಸಿದ್ದ ಆರ್ಯನ್ ಖಾನ್‍ಗೆ 13 ಷರತ್ತು ವಿಧಿಸಿ ಬಾಂಬೆ ಹೈಕೋರ್ಟ್ ಬೇಲ್ ನೀಡಿದೆ. ನವೆಂಬರ್ 2ಕ್ಕೆ ಆರ್ಯನ್ ಖಾನ್ ಬರ್ತ್‍ಡೇ ಇದ್ದು, ಜಾಮೀನು ಸಿಗೋ ಮುನ್ನ ದೀಪಾವಳಿ ಗಿಫ್ಟ್ ಸಿಕ್ಕಿದ್ದು, ನಾಳೆ ಅಥವಾ ನಾಡಿದ್ದು ರಿಲೀಸ್ ಆಗಲಿದ್ದಾರೆ. ಆರ್ಯನ್‍ಗೆ ಇಂಟರ್ನ್ಯಾಷನಲ್ ಡ್ರಗ್ಸ್ ಪೆಡ್ಲರ್‍ ಗಳ ನಂಟಿದೆ. ಬೇಲ್ ಕೊಡಬಾರದು ಎಂದು ಎನ್‍ಸಿಬಿ ವಾದ ಮಾಡಿತ್ತು. ಆದರೆ, ಆರ್ಯನ್ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಎರಡು ದಿನಗಳ ಕಾಲ ಪ್ರಬಲ ವಾದ ಮಂಡಿಸಿದ್ದರು. ಆರ್ಯನ್ ಬಳಿ ಡ್ರಗ್ಸ್ ಸಿಕ್ಕಿಲ್ಲ, ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿಲ್ಲ, ವಾಟ್ಸಪ್ ಚಾಟ್ ಒಂದರ ಆಧಾರದ ಮೇಲೆ ಅರೆಸ್ಟ್ ಮಾಡುವ ಅವಕಾಶ ಇರಲಿಲ್ಲ ಅಂತ ವಾದಿಸಿದ್ದರು.

    ಕೋರ್ಟ್‍ನಲ್ಲಿ ಜಾಮೀನು ಮಂಜೂರಾದ ಬಳಿಕ ವಕೀಲರ ತಂಡದೊಂದಿಗೆ ನಿಂತು ಫೋಟೋ ತೆಗೆಸಿಕೊಳ್ಳುವ ಮೂಲಕ ಶಾರೂಖ್ ಖಾನ್ ಸಂಭ್ರಮಾಚರಣೆ ಮಾಡಿಕೊಂಡರೆ, ಶಾರೂಖ್ ಅಭಿಮಾನಿಗಳು ಪಟಾಕಿ ಸಿಡಿಸಿ ಆರ್ಯನ್ ಬಿಡುಗಡೆ ಸುದ್ದಿಯನ್ನು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ರಾಗಿಣಿ ಕೇಸ್ ಉಲ್ಲೇಖ, ಆರ್ಯನ್‍ಗೆ ಜಾಮೀನು ನೀಡಿ – ಮುಕುಲ್ ರೊಹ್ಟಗಿ ವಾದ

  • ಸಮೀರ್ ವಾಂಖೆಡೆ ವಿರುದ್ಧ ಲಂಚದ ಆರೋಪ – ತನಿಖೆಗೆ ಸೂಚನೆ

    ಸಮೀರ್ ವಾಂಖೆಡೆ ವಿರುದ್ಧ ಲಂಚದ ಆರೋಪ – ತನಿಖೆಗೆ ಸೂಚನೆ

    ಮುಂಬೈ: ಮುಂಬೈನಲ್ಲಿ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ ಪಾರ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ತನಿಖಾಧಿಕಾರಿ ಸಮೀರ್ ವಾಂಖೆಡೆ ವಿರುದ್ಧವೇ ಈಗ ತನಿಖೆಗೆ ಸೂಚಿಸಲಾಗಿದೆ.

    ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ 25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನಲೆಯಲ್ಲಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ವಿಜಿಲೆನ್ಸ್ (ವಿಚಕ್ಷಣ ದಳ) ತನಿಖೆಗೆ ಆದೇಶಿಸಿದೆ. ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ – NCB ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪ

    ಎನ್‍ಸಿಬಿ ಪ್ರಧಾನ ಕಛೇರಿಯಲ್ಲಿ ಈ ವಿಚಾರಣೆ ನಡೆಯಲಿದ್ದು ಉತ್ತರ ಪ್ರದೇಶದ ಎನ್‍ಸಿಬಿ ಉಪ ಮಹಾನಿರ್ದೇಶಕ (ಡಿಡಿಜಿ) ಜ್ಞಾನೇಶ್ವರ್ ಸಿಂಗ್ ಸಮೀರ್ ವಾಖೆಂಡೆ ವಿಚಾರಣೆ ನಡೆಸಲಿದ್ದಾರೆ. ಜ್ಞಾನೇಶ್ವರ್ ಸಿಂಗ್ ಮಾದಕದ್ರವ್ಯ ವಿರೋಧಿ ಏಜೆನ್ಸಿಯ ಮುಖ್ಯ ಜಾಗೃತ ಅಧಿಕಾರಿ (ಸಿವಿಒ) ಕೂಡ ಆಗಿದ್ದಾರೆ ಎಂದು ವರದಿಯಾಗಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜ್ಞಾನೇಶ್ವರ್ ಸಿಂಗ್, ನಮ್ಮದು ವೃತ್ತಿಪರ ಸಂಸ್ಥೆ, ನಮ್ಮ ಸಿಬ್ಬಂದಿ ವಿರುದ್ಧ ಯಾವುದೇ ಆರೋಪಗಳು ಕೇಳಿ ಬಂದರು ನಾವು ವಿಚಾರಣೆಗೆ ಮುಕ್ತರಾಗಿದ್ದೇವೆ. ವಿಚಾರಣೆ ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿರುತ್ತದೆ ಎಂದಿದ್ದಾರೆ. ಸಮೀರ್ ವಾಂಖೆಡೆ ಪ್ರಕರಣ ತನಿಖೆ ಮುಂದುವರಿಸಿವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಇದು ಅಕಾಲಿಕ ಪ್ರಶ್ನೆ ಎಂದಷ್ಟೇ ಹೇಳಿದ್ದಾರೆ. ಇದನ್ನೂ ಓದಿ: ಸಿಗದ ಜಾಮೀನು – ಜೈಲಿನಲ್ಲಿ ರಾಮನ ಮೊರೆ ಹೋದ ಆರ್ಯನ್ ಖಾನ್

    ಡ್ರಗ್ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್, ಆರ್ಯನ್ ಖಾನ್ ಬಿಡುಗಡೆಗೆ 25 ಕೋಟಿ ರೂ ಬಿಡುಗಡೆ ಡಿಮ್ಯಾಂಡ್ ಮಾಡಲಾಗಿದೆ. ಕನಿಷ್ಠ 18 ಕೋಟಿ ನೀಡಿದರೆ ಆರ್ಯನ್ ಖಾನ್ ಬಿಡುಗಡೆ ಮಾಡಲಾಗುವುದು, ಇದರಲ್ಲಿ 8 ಕೋಟಿ ಹಣ ತನಿಖಾಧಿಕಾರಿ ಸಮೀರ್ ವಾಂಖೆಡೆ ನೀಡಬೇಕಿದೆ ಎಂದು ಆರೋಪಿಸಿದ್ದರು. ಹಣಕ್ಕಾಗಿ ಸಮೀರ್ ವಾಂಖೆಡೆ ಕೆಪಿ ಗೋಸಾವಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.

    ಇಂದು ಮುಂಬೈ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದ ಪ್ರಭಾಕರ್ ಸೈಲ್, ಜೀವ ಭಯವಿದ್ದು ರಕ್ಷಣೆ ನೀಡುವಂತೆ ದೂರು ನೀಡಿದ್ದರು. ಇದಾದ ಬೆನ್ನಲೆ ಸಮೀರ್ ವಾಂಖೆಡೆ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್

  • ಆರ್ಯನ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ – NCB ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪ

    ಆರ್ಯನ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ – NCB ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪ

    ಮುಂಬೈ: ಬಾಲಿವುಡ್ ನಟ ಶಾರೂಕ್ ಖಾನ್ ಮಗ ಶಾರೂಖ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ ಸಿಕ್ಕಿದೆ. ಎನ್‍ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ವಿರುದ್ಧ ಬಿಜೆಪಿಯ ಕೆಪಿ ಗೋಸಾವಿ ಆಪ್ತ ಪ್ರಭಾಕರ್ ಸೈಲ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

    ಆರ್ಯನ್ ಬಿಡುಗಡೆ ಮಾಡೋಕೆ 25 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. 18 ಕೋಟಿಗೆ ಡೀಲ್ ಆಗುವಂತೆ ಕಾಣುತ್ತಿದೆ. ಇದರಲ್ಲಿ ಸಮೀರ್ ವಾಂಖೆಡೆಗೆ 8 ಕೋಟಿ ಹೋಗ್ಬೇಕು ಅಂತಾ ಎನ್‍ಸಿಬಿ ಕಚೇರಿಯಲ್ಲಿಯೇ ಕೆಪಿ ಗೋಸಾವಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಕ್ರೂಸ್ ರೇಡ್‍ಗೆ ಸಂಬಂಧಿಸಿದಂತೆ ಖಾಲಿ ಪುಟುಗಳ ಪಂಚನಾಮೆ ಪತ್ರಕ್ಕೆ ಸಮೀರ್ ವಾಂಖೆಡೆ ತಮ್ಮಿಂದ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಪ್ರಭಾಕರ್ ಸೈಲ್ ಕೂಡ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಶಾರೂಖ್ ಖಾನ್ ಬಿಜೆಪಿ ಸೇರಿದ್ರೆ ಡ್ರಗ್ಸ್ ಸಕ್ಕರೆ ಪುಡಿಯಾಗುತ್ತೆ: ಛಗನ್ ಭುಜ್‍ಬಲ್

    ಇದಕ್ಕೆ ಸಂಬಂಧಿಸಿ ವೀಡಿಯೋ ರಿಲೀಸ್ ಮಾಡಿರುವ ಸಂಜಯ್ ರೌತ್, ಇದೆಲ್ಲ ಸುಳ್ಳು ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಸೈಲ್‍ನ್ನು ಬಂಧಿಸಬೇಕು ಎಂದು ಸಮೀರ್ ಒತ್ತಾಯಿಸಿದ್ದಾರೆ. ಜೊತೆಗೆ ಈ ಆರೋಪಗಳೆಲ್ಲ ಸುಳ್ಳು. ಶೀಘ್ರ ಸ್ಪಷ್ಟನೆ ಕೊಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಎನ್‍ಸಿಬಿ ಕೂಡ ಸಮೀರ್ ಬೆಂಬಲಕ್ಕೆ ಧಾವಿಸಿದೆ. ಸದ್ಯ ಕೆಪಿ ಗೋಸಾವಿ ನಾಪತ್ತೆಯಾಗಿದ್ದಾರೆ. ತಮ್ಮ ಜೀವಕ್ಕೆ ಸಮೀರ್‍ರಿಂದ ಅಪಾಯವಿದೆ ಎಂಬ ಆತಂಕವನ್ನು ಸೈಲ್ ಹೊರಹಾಕಿದ್ದಾರೆ. ಇದನ್ನೂ ಓದಿ: ಶಾರೂಖ್ ಖಾನ್ ಪುತ್ರನಾಗಿದ್ದರಿಂದ ಆರ್ಯನ್ ಖಾನ್ ಬಲಿಪಶು: ದಿಗ್ವಿಜಯ್ ಸಿಂಗ್

  • ಶಾರೂಖ್‌ ಪುತ್ರನ ಲೆನ್ಸ್‌ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!

    ಶಾರೂಖ್‌ ಪುತ್ರನ ಲೆನ್ಸ್‌ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!

    ಮುಂಬೈ: ರೋಚಕ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಸಿಕ್ಕಿದ್ದು ಹೇಗೆ, ಯಾವ ರೂಪದಲ್ಲಿ ಡ್ರಗ್ಸ್‌ ಸಾಗಿಸುತ್ತಿದ್ದರು ಎಂಬ ವಿಚಾರ ಈಗ ಬಹಿರಂಗವಾಗಿದೆ. ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಶಾರೂಖ್‌ ಖಾನ್‌ ಪುತ್ರನ ಲೆನ್ಸ್‌ ಕೇಸ್‌ನಲ್ಲಿ ಡ್ರಗ್ಸ್‌ ಪತ್ತೆಯಾಗಿತ್ತು. ಅಲ್ಲದೆ ಇದೇ ಪ್ರಕರಣದಲ್ಲಿ ಬಂಧನದಲ್ಲಿರುವ ಇನ್ನೊಂದು ಆರೋಪಿಯ ಬ್ಯಾಗ್‌ನಲ್ಲಿದ್ದ ಸ್ಯಾನಿಟರಿ ಪ್ಯಾಡ್‌ ಹಾಗೂ ಮೆಡಿಸಿನ್‌ ಬಾಕ್ಸ್‌ನಲ್ಲಿ ಮಾದಕ ದ್ರವ್ಯಗಳು ಪತ್ತೆಯಾಗಿತ್ತು ಎಂದು ಎನ್‌ಸಿಬಿ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

    ಹಡಗಿನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ ವೇಳೆ ಆರ್ಯನ್‌ ಖಾನ್‌ ಲೆನ್ಸ್‌ ಬಾಕ್ಸ್‌ನಲ್ಲಿ ಡ್ರಗ್ಸ್‌ ಪತ್ತೆಯಾಗಿದೆ. ಆತನನ್ನು 4 ಕಾಯ್ದೆಗಳ ಅಡಿ ಬಂಧಿಸಲಾಗಿದೆ ಎಂದು ಎನ್‌ಸಿಬಿ ಮೂಲಗಳು ಹೇಳಿವೆ.

    ಇದಲ್ಲದೆ ಈ ಪ್ರಕರಣದಲ್ಲಿ ಬಂಧಿತಳಾಗಿರುವ ಯುವತಿಯ ಸ್ಯಾನಿಟರಿ ಪ್ಯಾಡ್‌ ಹಾಗೂ ಮೆಡಿಸಿನ್‌ ಬಾಕ್ಸ್‌ನಲ್ಲಿ ಮಾದಕದ್ರವ್ಯಗಳು ಪತ್ತೆಯಾಗಿದೆ. ಈ ಪಾರ್ಟಿಗೂ ಮುನ್ನ ಆರ್ಯನ್‌ ಖಾನ್‌ ಹಾಗೂ ಆತನ ಗೆಳೆಯರು ನಿಷೇಧಿತ ಮಾದಕ ವಸ್ತುಗಳ ಬಗ್ಗೆ ವಾಟ್ಸಪ್‌ನಲ್ಲಿ ಚಾಟ್‌ ಮಾಡಿದ್ದರು ಎಂಬ ಮಾಹಿತಿಯೂ ತನಿಖೆ ವೇಳೆ ಬಯಲಾಗಿದೆ. ಇದನ್ನೂ ಓದಿ: ಡ್ರಗ್ಸ್ ಪಾರ್ಟಿ ಪ್ರಕರಣ – ಇಂದು ಆರ್ಯನ್ ಖಾನ್ ಜಾಮೀನು ಅರ್ಜಿ ಸಲ್ಲಿಕೆ

    ದಾಳಿ ವೇಳೆ ಅಧಿಕಾರಿಗಳು ಚರಸ್‌, ಎಂಡಿಎಂಎ, ಕೊಕೇನ್‌ ಮುಂತಾದ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಮುದ್ರ ಮಧ್ಯದಲ್ಲಿ ಹಡಗಲ್ಲಿ ಕಿಕ್‌ ಪಾರ್ಟಿ ನಡೆಸುತ್ತಿದ್ದ ಒಟ್ಟು 8 ಮಂದಿಯನ್ನು ಭಾನುವಾರ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಇವರಲ್ಲಿ ಆರ್ಯನ್‌ ಖಾನ್‌ ಹಾಗೂ ಇನ್ನಿಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಇನ್ನುಳಿದ ಐವರನ್ನು ಇಂದು ವೈದ್ಯಕೀಯ ಪರೀಕ್ಷೆ ನಡೆಸಿ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

    ಅಲ್ಲದೇ ಪ್ರಕರಣದಲ್ಲಿ ಬಂಧಿತರೆಲ್ಲರನ್ನೂ ಹೆಚ್ಚಿನ ವಿಚಾರಣೆಗೆ ವಶಕ್ಕೆ ಕೇಳು ಎನ್‌ಸಿಬಿ ಮುಂದಾಗಿದೆ ಎನ್ನಲಾಗಿದ್ದು, ಈ ಮೂಲಕ ಇನ್ನಷ್ಟ್ರು ಡ್ರಗ್‌ ಪೆಡ್ಲರ್‌ಗಳನ್ನು ಪತ್ತೆಹಚ್ಚಬಹುದು ಎನ್ನುವುದು ತನಿಖಾ ತಂಡದ ಲೆಕ್ಕಾಚಾರ. ಇದನ್ನೂ ಓದಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದೇವೆ: ಎನ್‍ಸಿಬಿ ಮುಖ್ಯಸ್ಥ ಪ್ರಧಾನ್

    ಶನಿವಾರ ಮಧ್ಯರಾತ್ರಿ ಖಚಿತ ಮಾಹಿತಿ ಆಧರಿಸಿ ಎನ್‌ಸಿಬಿ ಅಧಿಕಾರಿಗಳು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಶಾರೂಖ್‌ ಪುತ್ರ ಸೇರಿ 8 ಮಂದಿಯನ್ನು ವಶಕ್ಕೆ ಪಡೆದಿದ್ದ ಎನ್‌ಸಿಬಿ ಹೆಚ್ಚಿನ ವಿಚಾರಣೆ ನಡೆಸಿ ಬಂಧಿಸಿತ್ತು. ಬಳಿಕ ಶಾರೂಖ್‌ ಪುತ್ರ ಹಾಗೂ ಇನ್ನಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಈ ಮೂವರನ್ನು ಒಂದು ದಿನಕ್ಕೆ ಎನ್‌ಸಿಬಿ ವಶಕ್ಕೆ ನೀಡಿತ್ತು. ಇಂದು ಆರ್ಯನ್‌ ಖಾನ್‌ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ.

  • ಡ್ರಗ್ಸ್ ಪಾರ್ಟಿ ಪ್ರಕರಣ – ಇಂದು ಆರ್ಯನ್ ಖಾನ್ ಜಾಮೀನು ಅರ್ಜಿ ಸಲ್ಲಿಕೆ

    ಡ್ರಗ್ಸ್ ಪಾರ್ಟಿ ಪ್ರಕರಣ – ಇಂದು ಆರ್ಯನ್ ಖಾನ್ ಜಾಮೀನು ಅರ್ಜಿ ಸಲ್ಲಿಕೆ

    – ಇತ್ತ ಶಾರೂಖ್ ಭೇಟಿಯಾದ ಸಲ್ಮಾನ್ ಖಾನ್

    ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡ್ತಿದ್ದ ಆರೋಪದಡಿ ರಾಷ್ಟ್ರೀಯ ಮಾದಕ ದ್ರವ್ಯ ತಡೆ ದಳ (ಎನ್‍ಸಿಬಿ) ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಒಳಗೊಂಡು 3 ಮಂದಿಯನ್ನು ಬಂಧಿಸಿದೆ. ಆತನನ್ನ ನಿನ್ನೆ ಎನ್‍ಸಿಬಿ ಕೋರ್ಟ್ ಒಂದು ದಿನದ ಮಟ್ಟಿಗೆ ಎನ್‍ಸಿಬಿ ಕಸ್ಟಡಿಗೆ ಒಪ್ಪಿಸಿದೆ. ಇದನ್ನೂ ಓದಿ: ಶಾರುಖ್ ಪುತ್ರ ಆರ್ಯನ್ ಇನ್ನೂ ಮಗು, ಉಸಿರಾಡಲು ಬಿಡಿ: ನಟ ಸುನೀಲ್ ಶೆಟ್ಟಿ

    aryan

    ಆರ್ಯನ್ ಖಾನ್ ಇವತ್ತು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದು, ಎನ್‍ಸಿಬಿ ಮತ್ತೆ ಆತನ ಕಸ್ಟಡಿ ಕೇಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಶೀಘ್ರವೇ ಶಾರೂಖ್ ಖಾನ್ ಮಗ ಜಾಮೀನಿನಡಿ ಬಿಡುಗಡೆಯಾದರೂ ಅಚ್ಚರಿ ಇಲ್ಲ. ದಾಳಿ ವೇಳೆ ಆರ್ಯನ್ ಖಾನ್ ಬಳಿ ಮಾದಕ ದ್ರವ್ಯ ಪತ್ತೆ ಆಗಿಲ್ಲ. ಆದರೆ ಆತ ದಾಳಿಗೂ ಮೊದಲು ಮಾದಕ ದ್ರವ್ಯ ಸೇವಿಸಿರಬಹುದು ಮತ್ತು ಡ್ರಗ್ಸ್ ಪಾರ್ಟಿಗಾಗಿ ವಾಟ್ಸಾಪ್ ಚ್ಯಾಟ್, ಫೋನ್ ಮೂಲಕ ಸಂಪರ್ಕ ಮಾಡಿರಬಹುದು ಎಂದು ಎನ್‍ಸಿಬಿ ಅನುಮಾನಿಸಿದೆ.  ಇದನ್ನೂ ಓದಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದೇವೆ: ಎನ್‍ಸಿಬಿ ಮುಖ್ಯಸ್ಥ ಪ್ರಧಾನ್

    ದಾಳಿ ವೇಳೆ 13 ಗ್ರಾಂ ಕೊಕೇನ್, 21 ಎನ್‍ಡಿಎಂಎ ಮಾತ್ರೆ, 21 ಗ್ರಾಂ ಚರಸ್ ಮತ್ತು 1.33 ಲಕ್ಷ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ದ್ರವ್ಯ ಹೊಂದಿರುವ, ಮಾದಕ ದ್ರವ್ಯ ಖರೀದಿ, ಸಾಗಾಟ ಆರೋಪದಡಿ ಶಾರೂಖ್ ಪುತ್ರನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಇತ್ತ ಶಾರೂಖ್ ಮನೆಗೆ ನಿನ್ನೆ ತಡ ರಾತ್ರಿ ಸಲ್ಮಾನ್ ಖಾನ್ ಭೇಟಿ ನೀಡಿದ್ದಾರೆ. ಇದನ್ನೂ ಓದಿ:  ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ

  • ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅರೆಸ್ಟ್

    ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅರೆಸ್ಟ್

    ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‍ನನ್ನು ಎನ್‍ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

    ಐಷಾರಾಮಿ ಹಡಗಿನಲ್ಲಿ ಡ್ರಕ್ಸ್ ಪಾರ್ಟಿ ಮಾಡುತ್ತಿದ್ದಾಗ ಆರ್ಯನ್ ಖಾನ್ ಸಹಿತ 8 ಜನ ಎನ್‍ಸಿಬಿ ಬಲೆಗೆ ಬಿದ್ದಿದ್ದರು. ಇದೀಗ ಆರ್ಯನ್ ಖಾನ್ ಸಹಿತ 8 ಮಂದಿ ಆರೋಪಿಗಳನ್ನು ಎನ್‍ಸಿಬಿ ಅರೆಸ್ಟ್ ಮಾಡಿದೆ. ಆರ್ಯನ್ ಮಾದಕ ವಸ್ತು ಸೇವೆ ಮಾಡಿರೋದು ದೃಢಪಟ್ಟಿದ್ದು, ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದೇವೆ: ಎನ್‍ಸಿಬಿ ಮುಖ್ಯಸ್ಥ ಪ್ರಧಾನ್

    ಈ ಕುರಿತು ಮಾಹಿತಿ ನೀಡಿರುವ ಎನ್‍ಸಿಬಿ ಮುಖ್ಯಸ್ಥ ಎಸ್.ಎನ್.ಪ್ರಧಾನ್, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್‍ಸಿಬಿ ರೋಚಕ ಕಾರ್ಯಾಚರಣೆ

    ಸಮುದ್ರದಲ್ಲಿ ಹಡಗಿನಲ್ಲಿ ತೇಲುತ್ತ ಬಾಲಿವುಡ್ ನಟರು, ಉದ್ಯಮಿಗಳ ಮಕ್ಕಳು ಡ್ರಗ್ಸ್ ಪಾರ್ಟಿ ಮಾಡಿದ್ದರು. ಐಷಾರಾಮಿ ಹಡಗಿನಲ್ಲಿ ಎನ್‍ಸಿಬಿ ಕಾರ್ಯಾಚರಣೆಯೇ ರೋಚಕವಾಗಿತ್ತು. ಎನ್‍ಸಿಬಿ ಸಮೀರ್ ವಾಂಖೆಡೆ ಟೀಮ್ ಮಾರುವೇಷದಲ್ಲಿ ಹಡಗಿನಲ್ಲಿ ಪ್ರಯಾಣಿಸಿ ಆಪರೇಷನ್ ನಡೆಸಿತ್ತು. ಕಾರ್ಯಾಚರಣೆಯಲ್ಲಿ ಯಶಸ್ವಿ ಸಹ ಆಗಿದ್ದು, ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಸೇರಿದಂತೆ ಹಲವು ಪ್ರತಿಷ್ಟಿತರ ಮಕ್ಕಳನ್ನು ವಶಕ್ಕೆ ಪಡೆಯಲಾಗಿತ್ತು.

    ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಐಷಾರಾಮಿ ಹಡಗಿನಲ್ಲಿ ಸಮುದ್ರದ ಮಧ್ಯದಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಎನ್‍ಸಿಬಿ ಅಧಿಕಾರಿಗಳು ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೊಕೇನ್, ಎನ್‍ಡಿಎಂ, ಹಾಶಿಶ್ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ

  • ಕೆಕೆಆರ್ ಸೋಲು ನಿರಾಸೆ ಮೂಡಿಸಿದೆ- ಶಾರುಖ್ ಖಾನ್

    ಕೆಕೆಆರ್ ಸೋಲು ನಿರಾಸೆ ಮೂಡಿಸಿದೆ- ಶಾರುಖ್ ಖಾನ್

    -ಅಭಿಮಾನಿಗಳಲ್ಲಿ ಕ್ಷಮೆ ಯಾಚನೆ

    ಚೆನ್ನೈ: 14ನೇ ಆವೃತ್ತಿಯ ಐಪಿಎಲ್‍ನ ಐದನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಬಹುದಾದ ಪಂದ್ಯವನ್ನು ಸೋತ ಬಳಿಕ ಕೆಕೆಆರ್ ಮಾಲೀಕರಾಗಿರುವ ಶಾರುಖ್ ಖಾನ್ ತಂಡದ ನಿರ್ವಾಹಣೆ ನಿರಾಸೆ ಮೂಡಿಸಿದೆ ಎಂದಿದ್ದಾರೆ.

    ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮೊರ್ಗನ್ ಸಾರಥ್ಯದ ಕೆಕೆಆರ್ ತಂಡ ಮುಂಬೈ ನೀಡಿದ 153 ರನ್‍ಗಳ ಟಾರ್ಗೆಟ್‍ನ್ನು ಸುಲಭವಾಗಿ ಗುರಿಮುಟ್ಟಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಆರಂಭದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಕೆಕೆಆರ್ ತಂಡ ಕೊನೆಯಲ್ಲಿ ಮುಂಬೈ ಬೌಲರ್‍ ಗಳ ದಾಳಿಗೆ ಕುಸಿತ ಕಂಡು ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 142 ರನ್‍ಗಳಿಸಿ 10ರನ್ ಗಳ ಅಂತರದಿಂದ ಸೋಲು ಕಂಡಿತು.

    ಈ ಸೋಲಿನ ಬಳಿಕ ಕೆಕೆಆರ್ ತಂಡದ ಮಾಲೀಕರಾದ ಶಾರುಖ್ ಖಾನ್, ಕೆಕೆಆರ್ ತಂಡದ ಸೋಲಿನಿಂದ ಬಾರಿ ನಿರಾಸೆಯಾಗಿದ್ದು, ಎಲ್ಲ ಅಭಿಮಾನಿಗಳಲ್ಲಿ ನಾನು ಕ್ಷಮೆಯಾಚಿಸುತ್ತೇನೆಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ಈ ಮೊದಲು ಪಂದ್ಯಾಟದ ಪ್ರಶಸ್ತಿ ಸಮಾರಂಭದಲ್ಲಿ ಕೆಕೆಆರ್ ತಂಡದ ನಾಯಕ ಮಾರ್ಗನ್ ಈ ಸೋಲು ನಿರಾಸೆಯಾಗಿದೆ. ಕೆಲವು ತಪ್ಪುಗಳಿಂದ ಸೋತಿದ್ದೇವೆ ಮುಂದಿನ ಪಂದ್ಯದಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮೈದಾನಕ್ಕಿಳಿಯುತ್ತೇವೆ ಎಂದಿದ್ದಾರೆ.

  • ಪೌರ ಕಾರ್ಮಿಕ ಸಹೋದರರ ಕಂಠಕ್ಕೆ ಆನಂದ್ ಮಹೀಂದ್ರಾ ಫಿದಾ

    ಪೌರ ಕಾರ್ಮಿಕ ಸಹೋದರರ ಕಂಠಕ್ಕೆ ಆನಂದ್ ಮಹೀಂದ್ರಾ ಫಿದಾ

    ನವದೆಹಲಿ: ಪೌರ ಕಾರ್ಮಿಕ ಸಹೋದರಿಬ್ಬರು ತಮ್ಮ ಮಧುರ ಕಂಠದಿಂದ ಹಾಡಿರುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿರುವ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಇವರಿಬ್ಬರ ಹಾಡಿಗೆ ಫಿದಾ ಆಗಿದ್ದಾರೆ.

    ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೊನಿಯ ಇಬ್ಬರು ಸಹೋದರರಾದ ಹಫೀಜ್ ಮತ್ತು ಹಬೀಬರ್ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತ ಹಾಡುಗಳನ್ನು ಹಾಡುವ ಹವ್ಯಾಸ ಬೆಳೆಸಿಕೊಂಡಿದ್ದರು. ಹಫೀಜ್ ಮತ್ತು ಹಬೀಬರ್ ಮಧುರವಾಗಿ ಹಾಡುವುದನ್ನು ವೀಡಿಯೋ ಮಾಡಿ ರೋಹಿತ್ ಖಟ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಇದನ್ನು ಗಮನಿಸಿರುವ ಆನಂದ್ ಮಹೀಂದ್ರಾ ಈ ಇಬ್ಬರು ಯುವಕರ ಧ್ವನಿಗೆ ಮಾರುಹೋಗಿ ಮುಂದಿನ ಸಂಗೀತ ಶಿಕ್ಷಣಕ್ಕೆ ಸಹಕರಿಸುವುದಾಗಿ ಹೇಳಿಕೊಂಡಿದ್ದಾರೆ.

    ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಫೀಜ್ ಮತ್ತು ಹಬೀಬರ್ ಅಣ್ಣ ತಮ್ಮಂದಿರಿಬ್ಬರೂ ಹಾಡುವ ಹಾಡನ್ನು ಟ್ವೀಟ್ ಮಾಡಿ ನನ್ನ ಸ್ನೇಹಿತರಾದ ರೋಹಿತ್ ಖಟ್ಟರ್ ಟ್ವಿಟ್ಟರ್ ನಲ್ಲಿ ಈ ಯುವಕರಿಬ್ಬರ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಇದನ್ನು ಗಮನಿಸಿದಾಗ ಹಫೀಜ್ ಮತ್ತು ಹಬೀಬರ್ ಕಸ ಸಂಗ್ರಹ ಮಾಡುವ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಅವರ ಪ್ರತಿಭೆಗೆ ಯಾವುದೇ ಮಿತಿಯಿಲ್ಲ ಎಂದು ಬರೆದುಕೊಂಡಿದ್ದಾರೆ.

    ಇದರೊಂದಿಗೆ ಇನ್ನೊಂದು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, ಸಹೋದರಿಬ್ಬರ ಪ್ರತಿಭೆ ಅಮೋಘವಾಗಿದ್ದು, ರೋಹಿತ್ ಮತ್ತು ನಾನು ಇವರಿಬ್ಬರಿಗೆ ಸಹಾಯ ಮಾಡುತ್ತೇವೆ. ದೆಹಲಿಯ ಆಸುಪಾಸಿನಲ್ಲಿರುವ ಉತ್ತಮವಾದ ಸಂಗೀತ ಶಿಕ್ಷಕರು ಅಥವಾ ಧ್ವನಿ ತರಬೇತುದಾರರು ಹಫೀಜ್ ಮತ್ತು ಹಬೀಬರ್ ಅವರ ದಿನದ ಕೆಲಸ ಮುಗಿದ ಮೇಲೆ ಸಂಜೆ ಹೊತ್ತು ತರಬೇತಿ ಕೊಟ್ಟಿದ್ದರೆ ಅವರ ಮುಂದಿನ ಸಂಗೀತ ಸಾಧನೆಗೆ ಸಹಾಯವಾಗುತ್ತಿತ್ತು ಎಂದಿದ್ದಾರೆ.

    ವೀಡಿಯೋದಲ್ಲಿ ಹಫೀಜ್ ಮತ್ತು ಹಬೀಬರ್ 1969ರಲ್ಲಿ ಬಿಡುಗಡೆಯಾದ ಅನ್ಮೋಲ್ ಮೋತಿ ಮತ್ತು 2010ರಲ್ಲಿ ಬಿಡುಗಡೆಗೊಂಡ ಶಾರುಖ್ ಖಾನ್ ಅವರ ಮೈ ನೇಮ್ ಇಸ್ ಖಾನ್ ಚಿತ್ರದ ‘ಸಜ್ದಾ’ ಹಾಡನ್ನು ಹಾಡುತ್ತಿದ್ದಾರೆ.

  • ಡ್ರಗ್ಸ್ ವ್ಯೂಹದಲ್ಲಿ ಶಾರೂಖ್, ಅರ್ಜುನ್, ರಣ್‍ಬೀರ್, ಡಿನೋ ಮೊರಿಯಾ

    ಡ್ರಗ್ಸ್ ವ್ಯೂಹದಲ್ಲಿ ಶಾರೂಖ್, ಅರ್ಜುನ್, ರಣ್‍ಬೀರ್, ಡಿನೋ ಮೊರಿಯಾ

    ಮುಂಬೈ: ಬಾಲಿವುಡ್ ನಟರಾದ ಶಾರೂಖ್ ಖಾನ್, ಅರ್ಜುನ್ ರಾಂಪಾಲ್, ರಣ್‍ಬೀರ್ ಕಪೂರ್ ಮತ್ತು ಡಿನೋ ಮೊರಿಯಾ ಹೆಸರು ಡ್ರಗ್ಸ್ ಜಾಲದಲ್ಲಿ ಕೇಳಿ ಬಂದಿದೆ. ಇಷ್ಟು ದಿನ ಡ್ರಗ್ಸ್ ಜಾಲದಲ್ಲಿ ನಟಿಯರ ಹೆಸರು ಕೇಳಿ ಬಂದಿತ್ತು. ಇದೀಗ ಮೊದಲ ಬಾರಿಗೆ ನಾಲ್ವರು ಹೆಸರಗಳು ಡ್ರಗ್ಸ್ ಜಾಲದ ಅಂಗಳದಲ್ಲಿ ಗಿರಕಿ ಹೊಡೆಯುತ್ತಿವೆ. ಖಾಸಗಿ ವಾಹಿನಿಯೊಂದು ನಾಲ್ವರ ಹೆಸರುಗಳನ್ನು ಖಚಿತಪಡಿಸಿ ವರದಿ ಬಿತ್ತರಿಸಿದೆ.

     

    ಹೆಸರು ಹೇಳಲು ಇಚ್ಛಿಸದ ಎನ್‍ಸಿಬಿ ಅಧಿಕಾರಿಯೊಬ್ಬರು ಈ ನಾಲ್ವರ ಹೆಸರನ್ನ ರಿವೀಲ್ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ರಾಷ್ಟ್ರೀಯ ಖಾಸಗಿ ಮಾಧ್ಯಮಗಳು ಎಸ್, ಎ, ಆರ್ ಮತ್ತು ಡಿ ಹೆಸರಿನ ಸ್ಟಾರ್ ಗಳು ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ ಎಂದು ಪ್ರಕಟಿಸಿದ್ದವು. ಇದೀಗ ಮತ್ತೊಂದು ವಾಹಿನಿ ಎನ್‍ಸಿಬಿ ಹೇಳಿಕೆಯನ್ನಾಧರಿಸಿಯೇ ಈ ನಾಲ್ವರ ಹೆಸರನ್ನು ಬಹಿರಂಗಪಡಿಸಿದ್ದೇವೆ ಎಂದು ತಿಳಿಸಿದೆ.

    ಎನ್‍ಸಿಬಿ ಅಧಿಕಾರಿ ಜೊತೆ ನಡೆಸಿದ ಫೋನ್ ಸಂಭಾಷಣೆಯ ಆಡಿಯೋ ಕ್ಲಿಪ್ ತಮ್ಮ ಬಳಿಯಲ್ಲಿದೆ ಎಂದು ಖಾಸಗಿ ವಾಹಿನಿ ಹೇಳಿದೆ. ಈ ನಾಲ್ವರ ಹೆಸರನ್ನು ಬಂಧಿತ ಡ್ರಗ್ಸ್ ಪೆಡ್ಲರ್ ಹೇಳಿದ್ದಾನೆ. ಆದ್ರೆ ಡಿನೋ ಮೋರಿಯಾ ಡ್ರಗ್ಸ್ ಸೇವನೆ ಮಾಡ್ತೀದ್ದೀರಾ ಅಥವಾ ಪೂರೈಕೆದಾರರಾಗಿದ್ದಾರೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ ಎನ್ನಲಾಗಿದೆ.

    ಸದ್ಯ ಶಾರೂಖ್ ಖಾನ್ ದುಬೈನಲ್ಲಿ ಐಪಿಎಲ್ ಪಂದ್ಯಗಳಲ್ಲಿ ತಂಡದ ಜೊತೆಯಲ್ಲಿದ್ದಾರೆ. ಅರ್ಜುನ್ ರಾಂಪಾಲ್ ಮುಂಬೈನಲ್ಲಿಯೇ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಣ್‍ಬೀರ್ ಕಪೂರ್ ಕೆಲ ದಿನಗಳ ಹಿಂದೆ ಕುಟುಂಬಸ್ಥರ ಜೊತೆ ಬರ್ತ್ ಡೇ ಆಚರಿಸಿಕೊಂಡಿದ್ದರು. ಡಿನೋ ಮೊರಿಯಾ ಸಹ ಮುಂಬೈನಲ್ಲಿದ್ದಾರೆ.

    ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತ್ ಸಿಂಗ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

  • ‘ಮೂರು ಮದುವೆ’ಯಾಗಿದ್ದರ ಕುರಿತು ಕಿಂಗ್ ಖಾನ್ ಮಾತು

    ‘ಮೂರು ಮದುವೆ’ಯಾಗಿದ್ದರ ಕುರಿತು ಕಿಂಗ್ ಖಾನ್ ಮಾತು

    ನವದೆಹಲಿ: ಹಲವರಿಗೆ ತಮ್ಮ ನೆಚ್ಚಿನ ನಟ, ನಟಿಯರ ಮದುವೆ ಕುರಿತು ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಅದರಲ್ಲೂ ಬಾಲಿವುಡ್ ಕಿಂಗ್ ಖಾನ್ ಅವರ ವಿವಾಹ ವಿಭಿನ್ನ ಇತರರಿಗೆ ಮಾದರಿ ಎಂಬುದು ತಿಳಿದೇ ಇದೆ. ಆದರೆ ಅವರ ವಿವಾಹದ ಕುರಿತು ಶಾರುಖ್ ಖಾನ್ ಇನ್ನೂ ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

    ಶಾರುಖ್ ಖಾನ್ ಅವರ ವೈಯಕ್ತಿಕ ಜೀವನ ಹಲವರಿಗೆ ಮಾದರಿ ಎಂಬುದರಲ್ಲಿ ಅನುಮಾನವಿಲ್ಲ. ಅವರು ಸಮಾಜ ಹಾಗೂ ಧರ್ಮವನ್ನು ಮೀರಿ ಪ್ರೇಮ ವಿವಾಹವಾಗಿದ್ದು, ಅದೇ ರೀತಿ ಇತರರಿಗೆ ಮಾದರಿ ಎಂಬಂತೆ ತಮ್ಮ ಸಂಸಾರ ನೌಕೆಯನ್ನು ನಡೆಸುತ್ತಿದ್ದಾರೆ. ಅಂತರ್ ಧರ್ಮೀಯ ವಿವಾಹವಾದ ಕಾರಣ ಕಿಂಗ್ ಖಾನ್ ವಿವಾಹದ ಕುರಿತು ಈ ಹಿಂದೆ ಸಾಕಷ್ಟು ಚರ್ಚೆಗಳಾಗುತ್ತಿದ್ದವು. ಹೀಗಾಗಿ ಅವರ ಪ್ರೀತಿ ಹಾಗೂ ಮದುವೆ ಬಗ್ಗೆ ತಿಳಿಯಲು ಅಭಿಮಾನಿಗಳಲ್ಲಿ ಕುತೂಹಲವಿತ್ತು. ಈಗಲೂ ಸಮಯ ಸಿಕ್ಕಾಗಲೆಲ್ಲ ಈ ಕರಿತು ಪ್ರಶ್ನಿಸುತ್ತಲೇ ಇರುತ್ತಾರೆ.

    ಅದರಂತೆ ಇದೀಗ ಸಂದರ್ಶನವೊಂದರಲ್ಲಿ ಕಿಂಗ್ ಖಾನ್ ಅವರ ವಿವಾಹದ ಕುರಿತು ಪ್ರಶ್ನೆ ಎದ್ದಿದ್ದು, ಈ ವೇಳೆ ಅವರು ತಾವು ಮೂರು ಬಾರಿ ವಿವಾಹವಾಗಿರುವುದರ ಕುರಿತು ವಿವರಿಸಿದ್ದಾರೆ. ಶಾರುಖ್ ಖಾನ್ ಹಾಗೂ ಗೌರಿ ಖಾನ್ ಜೋಡಿ 1991ರಲ್ಲಿ ಪ್ರೇಮ ವಿವಾಹವಾದರು. ಈ ಜೋಡಿ ಮದುವೆಯಾಗಿ 29 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳಾದರೂ ಯಾವುದೇ ಕಲಹವಿಲ್ಲದೆ ಸೊಗಸಾಗಿ ಜೀವನ ಸಾಗಿಸುತ್ತಿದ್ದಾರೆ.

    ಇದೀಗ ಶಾರುಖ್ ಮೂರು ಬಾರಿ ಮದುವೆಯಾಗಿರುವ ಕುರಿತು ವಿವರಿಸಿದ್ದಾರೆ. ಬಹುತೇಕರಿಗೆ ಕಿಂಗ್ ಖಾನ್-ಗೌರಿ ಜೋಡಿ ಮೂರು ಬಾರಿ ವಿವಾಹವಾಗಿರುವುದು ತಿಳಿದಿಲ್ಲ. ಇದೀಗ ಈ ವಿಚಾರವನ್ನು ಅವರೇ ತಿಳಿಸಿದ್ದಾರೆ. ಶಾರುಖ್ ಖಾನ್ ಅವರು ದೆಹಲಿಯಲ್ಲಿದ್ದಾಗ ಗೌರಿ ಖಾನ್ ಅವರೊಂದಿಗೆ ಸ್ನೇಹವಾಯಿತು. ನಂತರದ ದಿನಗಳಲ್ಲಿ ಅವರಿಬ್ಬರ ಸ್ನೇಹ ಪ್ರೇಮವಾಗಿ ಬದಲಾಯಿತು. ಬಳಿಕ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಅದೇ ರೀತಿ ಮೂರು ಬಾರಿ ಮದುವೆಯಾದರು.

    ಅದ್ಹೇಗೆ ಅಂತೀರಾ ಇಲ್ಲಿದೆ ನೋಡಿ, 25 ಅಕ್ಟೋಬರ್ 1991ರಂದು ಮೊದಲು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಇದಾದ ಬಳಿಕ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ನಂತರ ಕೊನೆಯದಾಗಿ ಸಾಂಪ್ರದಾಯಿಕ ಹಿಂದೂ ಪದ್ಧತಿಯಲ್ಲಿ ವಿವಾಹವಾದರು. ಶಾರುಖ್ ಖಾನ್ ಮುಸ್ಲಿಂ, ಅವರ ಪತ್ನಿ ಗೌರಿ ಖಾನ್ ಪಂಜಾಬಿ ಹಿಂದೂ. ಹೀಗಾಗಿ ಎರಡೂ ಧರ್ಮಗಳ ಶಾಸ್ತ್ರದ ಪ್ರಕಾರ ಮದುವೆಯಾಗಬೇಕೆಂದು 3 ಬಾರಿ ವಿವಾಹವಾದರಂತೆ.

    ಗೌರಿ ಖಾನ್ ಅವರ ಮೂಲ ಹೆಸರು ಗೌರಿ ಚಿಬ್ಬರ್. ಗೌರಿಯವರು ಮದುವೆಯ ನಂತರವೂ ಹಿಂದೂ ಮತ್ತು ಮುಸ್ಲಿಂ ಧರ್ಮಗಳನ್ನು ಅನುಸರಿಸುತ್ತಿದ್ದಾರೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರು ಮೂವರು ಮಕ್ಕಳ ಪೋಷಕರಾಗಿದ್ದು, ಹಿರಿಯ ಮಗ ಆರ್ಯನ್ ಖಾನ್, ಮಗಳು ಸುಹಾನಾ ಖಾನ್ ಮತ್ತು ನಂತರ 2013 ರಲ್ಲಿ ಇಬ್ಬರೂ ಬಾಡಿಗೆ ತಾಯಿಯ ಮೂಲಕ ಮಗ ಅಬ್ರಾಮ್‍ಗೆ ಜನ್ಮ ನೀಡಿದ್ದಾರೆ. ಈಗಲೂ ಎರಡೂ ಧರ್ಮದ ಸಂಪ್ರದಾಯವನ್ನು ಈ ಕುಟುಂಬ ಪಾಲಿಸುತ್ತೆ.