Tag: Shahrukh Khan

  • ನನ್ನನ್ನು ಮದುವೆ ಆಗ್ತೀರಾ?: ಸಲ್ಮಾನ್ ಗೆ ಡೈರೆಕ್ಟ್ ಆಗಿ ಕೇಳಿದ ಪತ್ರಕರ್ತೆ

    ನನ್ನನ್ನು ಮದುವೆ ಆಗ್ತೀರಾ?: ಸಲ್ಮಾನ್ ಗೆ ಡೈರೆಕ್ಟ್ ಆಗಿ ಕೇಳಿದ ಪತ್ರಕರ್ತೆ

    ಬಾಲಿವುಡ್ (Bollywood) ಬ್ಯಾಡ್ ಬಾಯ್ ಸಲ್ಮಾನ್ ಖಾನ್ (Salman Khan) ಮದುವೆ ಮೇಲೆಯೇ ಎಲ್ಲರದ್ದೂ ಕಣ್ಣು. ವಯಸ್ಸು ಐವತ್ತಾದರೂ ಇನ್ನೂ ಮದುವೆ (Marriage) ಬಗ್ಗೆ ಪ್ರಶ್ನೆ ಮಾಡುವುದನ್ನು ಮತ್ತು ಪ್ರಪೋಸ್ ಮಾಡುವುದನ್ನು ಬಿಟ್ಟಿಲ್ಲ. ಸಲ್ಲು ಎದುರಾದಾಗೊಮ್ಮೆ ಮದುವೆ ವಿಚಾರ ಪ್ರಸ್ತಾಪವಾಗುತ್ತದೆ. ಯಾರು ಅತೀ ಹೆಚ್ಚು ಬಾರಿ ಸಲ್ಲುವನ್ನು ‘ಮದುವೆ ಯಾವಾಗ?’ ಎಂದು ಕೇಳುತ್ತಿದ್ದರೋ, ಅವರೇ ಇಂದು ಮದುವೆ ಆಗುತ್ತೀಯಾ? ಎಂದು ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    salman

    ಇತ್ತೀಚೆಗಷ್ಟೇ ಸಿನಿಮಾವೊಂದರ ಪ್ರಚಾರದಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖಾನ್ ಅವರನ್ನು ಹಾಲಿವುಡ್ ಪತ್ರಕರ್ತೆಯೊಬ್ಬರು (Journalist) ನೇರವಾಗಿ ಮದುವೆ ವಿಷಯ ಪ್ರಸ್ತಾಪ ಮಾಡಿದ್ದಾರೆ. ‘ನಾನು ಹಾಲಿವುಡ್ (Hollywood) ನಿಂದ ಬಂದಿದ್ದೇನೆ. ನಿಮ್ಮನ್ನು ನೋಡಿದ ತಕ್ಷಣ ಫಿದಾ ಆದೆ. ನನ್ನನ್ನು ಮದುವೆ ಆಗುತ್ತೀರಾ? ಎಂದು ಕೇಳಿದ್ದಾರೆ. ಇದನ್ನೂ ಓದಿ:ಮಗಳ ವಯಸ್ಸಿನ ಫಾತಿಮಾ ಜೊತೆ ಮತ್ತೆ ಮದುವೆಗೆ ಸಜ್ಜಾದ ಆಮೀರ್‌ ಖಾನ್

    ಪತ್ರಕರ್ತೆಯ ಮಾತಿಗೆ ನಗುತ್ತಲೇ ಉತ್ತರಿಸಿರುವ ಸಲ್ಮಾನ್ ಖಾನ್, ‘ನೀವು ಶಾರುಖ್ ಖಾನ್ (Shahrukh Khan) ಬಗ್ಗೆ ಹೇಳ್ತಾ ಇದ್ದೀರಿ. ಕನ್ಫ್ಯೂಸ್ ಮಾಡಿಕೊಂಡಿದ್ದೀರಿ’ ಎಂದು ಉತ್ತರಿಸುತ್ತಾರೆ. ‘ಇಲ್ಲ ನಾನು ನಿಮ್ಮನ್ನೇ ಕೇಳ್ತಾ ಇರೋದು. ಸಖತ್ ಹ್ಯಾಂಡ್ ಸಮ್ ಆಗಿದ್ದೀರಿ. ನೀವು ಒಪ್ಪಿದರೆ ನಾನು ಮದುವೆ ಆಗಲು ತಯಾರು’ ಎಂದು ಮತ್ತೆ ಪತ್ರಕರ್ತೆ ಮರು ಪ್ರಶ್ನೆ ಮಾಡುತ್ತಾರೆ.

    ಪತ್ರಕರ್ತೆಯ ಮಾತಿಗೆ ಮತ್ತೆ ಉತ್ತರಿಸುವ ಸಲ್ಮಾನ್, ‘ನೀವು ಇಪ್ಪತ್ತು ವರ್ಷಗಳ ಹಿಂದೆ ಬಂದು ಕೇಳಿದ್ದರೆ ಒಪ್ಪಬಹುದಿತ್ತು. ನನಗೀಗ ಮದುವೆ ಕಾಲ ಮುಗಿದಿದೆ. ತಡವಾಗಿದೆ’ ಎಂದು ಮತ್ತೆ ತಮಾಷೆ ಮಾಡುತ್ತಲೇ ಉತ್ತರಿಸುತ್ತಾರೆ. ಒಂದು ರೀತಿಯಲ್ಲಿ ಇಬ್ಬರ ಮಾತು ಪ್ರತಿಮಾತುಗಳು ಸಖತ್ ತಮಾಷೆಯನ್ನು  ನೀಡಿವೆ.

  • ರಿಲೀಸ್ ಗೂ ಮುನ್ನವೇ ಜವಾನ ದೃಶ್ಯ ಲೀಕ್ : ಹೈಕೋರ್ಟ್ ಮೆಟ್ಟಿಲೇರಿದ ಶಾರುಖ್ ಖಾನ್

    ರಿಲೀಸ್ ಗೂ ಮುನ್ನವೇ ಜವಾನ ದೃಶ್ಯ ಲೀಕ್ : ಹೈಕೋರ್ಟ್ ಮೆಟ್ಟಿಲೇರಿದ ಶಾರುಖ್ ಖಾನ್

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shahrukh Khan) ನಟನೆಯ ‘ಜವಾನ’ (Jawan) ಸಿನಿಮಾ ಜೂನ್ ನಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಈ ಚಿತ್ರದ ಮಹತ್ವದ ದೃಶ್ಯಗಳು ಮತ್ತು ಫೋಟೋಗಳು ಲೀಕ್ (Leake) ಆಗಿವೆ. ಈ ಕುರಿತು ಸ್ವತಃ ಶಾರುಖ್ ಖಾನ್ ಗರಂ ಆಗಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಬಳಸಿಕೊಳ್ಳಬೇಕಾದ ದೃಶ್ಯ ಮತ್ತು ಫೋಟೋಗಳು ಲೀಕ್ ಆಗುತ್ತಿರುವುದಕ್ಕೆ ಮತ್ತು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಈ ಸಿನಿಮಾವನ್ನು ತಮ್ಮದೇ ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಶಾರುಖ್ ಖಾನ್, ದೃಶ್ಯಗಳು ಸೋರಿಕೆಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಲಿದೆ. ಹೀಗಾಗಿ ಲೀಕ್ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಶಾರುಖ್ ಖಾನ್ ಮನವಿಯನ್ನು ಪುರಸ್ಕರಿಸಿರುವ ದೆಹಲಿ ಹೈಕೋರ್ಟ್ (High Court) , ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿರುವ ದೃಶ್ಯಗಳನ್ನು ಕೂಡಲೇ ಡಿಲಿಟ್ ಮಾಡಬೇಕು ಎಂದು ಆದೇಶ ನೀಡಿದೆ. ಯುಟ್ಯೂಬ್, ವೆಬ್ ಸೈಟ್ ಸೇರಿದಂತೆ ಜವಾನ ದೃಶ್ಯಗಳನ್ನು ಅಪ್ ಲೋಡ್ ಮಾಡಿದವರು ಕೂಡಲೇ ಡಿಲಿಟ್ ಮಾಡಬೇಕು ಎಂದು ಹೈಕೋರ್ಟ್ ಆದೇಶ ಮಾಡಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

    ಜವಾನ ಬಹುತಾರಾಗಣ ಹೊಂದಿರುವ ಸಿನಿಮಾ. ಶಾರುಖ್ ಜೊತೆ ದೀಪಿಕಾ ಪಡುಕೋಣೆ (Deepika Padukone) ಹಾಗೂ ನಯನತಾರಾ ನಟಿಸಿದ್ದಾರೆ. ಈ ಮೂವರ ಸಂಗಮದ ಮೊದಲ ಸಿನಿಮಾ ಇದಾಗಿದೆ. ಇವರ ಜೊತೆ ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮೂಡಿಸಿದೆ.

  • ಅಮಿತಾಭ್ ಮನೆಗೆ ಸೊಸೆಯಾಗಲಿದ್ದಾರಾ ಶಾರುಖ್ ಖಾನ್ ಮಗಳು

    ಅಮಿತಾಭ್ ಮನೆಗೆ ಸೊಸೆಯಾಗಲಿದ್ದಾರಾ ಶಾರುಖ್ ಖಾನ್ ಮಗಳು

    ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಮನೆಗೆ ಶಾರುಖ್ ಖಾನ್ (Shahrukh Khan) ಪುತ್ರಿ ಸುಹಾನಾ (Suhana) ಸೊಸೆಯಾಗಿ ಬರುತ್ತಾರೆ ಎನ್ನುವ ಮಾತು ಹರಿದಾಡುತ್ತಿದೆ. ಇದು ನಂಬಲು ಅಸಾಧ್ಯವೆನಿಸಿದರೂ, ಸಾಧ್ಯವಾಗುವಂತಹ ವಿಚಾರಗಳನ್ನು ಬಿಟೌನ್ ತನ್ನ ಒಡಲಿಲ್ಲ ಇಟ್ಟುಕೊಂಡಿರುವುದಂತೂ ಸತ್ಯ. ಹಾಗಾಗಿ ಇಂಥದ್ದೊಂದು ಸುದ್ದಿಗೆ ರೆಕ್ಕೆಪುಕ್ಕಗಳು ಬಂದಿವೆ.

    ಅಮಿತಾಭ್ ಮೊಮ್ಮಗ ಅಗಸ್ತ್ಯ (Agastya) ಹಾಗೂ ಶಾರುಖ್ ಖಾನ್ ಮಗಳು ಸುಹಾನಾ ಡೇಟಿಂಗ್ (Dating) ವಿಚಾರ ಗುಟ್ಟಾಗೇನೂ ಉಳಿದಿಲ್ಲ. ಆದರೆ, ಅವರ ಪ್ರೇಮ ಮದುವೆಯವರೆಗೂ ಹೋಗಿದೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಪರಸ್ಪರ ಗೌರವ ಕೊಟ್ಟುಕೊಂಡು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದೊಂದು ಗಟ್ಟಿ ಪ್ರೇಮವಾದ್ದರಿಂದ ಮದುವೆಯಾದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಿದೆ ಬಾಲಿವುಡ್. ಇದನ್ನೂ ಓದಿ: 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ

    ಸುಹಾನಾ ಮತ್ತು ಅಗಸ್ತ್ಯ ಅನೇಕ ಬಾರಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅನೇಕ ಸಮಾರಂಭಗಳಿಗೆ ಒಟ್ಟಿಗೆ ಹೋಗಿದ್ದಾರೆ. ಅಲ್ಲದೇ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗಾಗಿ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬೆಳೆಯುತ್ತಿದ್ದಾರೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಹಾಗಂತ ಇಬ್ಬರೂ ತಾವು ಡೇಟಿಂಗ್ ಮಾಡುತ್ತಿರುವ ವಿಚಾರವನ್ನೂ ಈವರೆಗೂ ಯಾವತ್ತೂ ಬಹಿರಂಗವಾಗಿ ಮಾತನಾಡಿಲ್ಲ.

    ಈ ವಯಸ್ಸಿನ ಡೇಟಿಂಗ್ ತುಂಬಾ ದಿನ ಉಳಿಯುವುದಿಲ್ಲ ಎನ್ನುವ ಮಾತಿದೆ. ಹಲವಾರು ಪ್ರೇಮಿಗಳು ಅರ್ಧಕ್ಕೆ ಬಾಂಧವ್ಯವನ್ನು ತುಂಡರಿಸಿಕೊಂಡು ಹೋಗಿದ್ದಾರೆ. ಇವರಿಬ್ಬರ ಪ್ರೇಮವೂ ಹಾಗೆಯೇ ಆಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಏನೇ ಆಗಲಿ, ಅವರ ಪ್ರೇಮ ಗಟ್ಟಿಯಾಗಿ ಉಳಿದುಕೊಳ್ಳಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.

  • ಹುಲ್ಲು ಹಸಿರಾಗಿತ್ತು, ನೀರು ನೀಲಿಯಾಗಿತ್ತು ಅದಕ್ಕೆ ಕೇಸರಿ ಬಿಕಿನಿ ಹಾಕಿಸಿದೆ : ಸಿದ್ಧಾರ್ಥ್

    ಹುಲ್ಲು ಹಸಿರಾಗಿತ್ತು, ನೀರು ನೀಲಿಯಾಗಿತ್ತು ಅದಕ್ಕೆ ಕೇಸರಿ ಬಿಕಿನಿ ಹಾಕಿಸಿದೆ : ಸಿದ್ಧಾರ್ಥ್

    ಶಾರುಖ್ ಖಾನ್ (Shahrukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ನ ‘ಪಠಾಣ್’ (Pathan) ಸಿನಿಮಾದ ಕೇಸರಿ ಬಿಕಿನಿ (Kesari Bikini) ವಿವಾದದ ಬಗ್ಗೆ ಈಗ ನಿರ್ದೇಶಕ ಸಿದ್ದಾರ್ಥ್ ಆನಂದ್ (Siddharth Anand) ಮೌನ ಮುರಿದಿದ್ದಾರೆ. ಆ ಹಾಡಿನಲ್ಲಿ ದೀಪಿಕಾ ಪಡುಕೋಣೆಗೆ ಯಾಕೆ ಕೇಸರಿ ಬಿಕಿನಿ ಹಾಕಿಸಿದೆ ಎನ್ನುವ ಕುರಿತು ಅವರು ಮಾತನಾಡಿದ್ದಾರೆ. ಅದಕ್ಕೆ ಬಲವಾದ ಕಾರಣವನ್ನೂ ಕೊಟ್ಟಿದ್ದಾರೆ.

    ಈ ಹಾಡಿನ ಶೂಟಿಂಗ್ ನಡೆದದ್ದು ಸ್ಪೇನ್ ನಲ್ಲಿ. ಆಗ ಅಲ್ಲಿನ ವಾತಾವರಣಕ್ಕೆ ಹೊಂದುವಂತಹ ಬಣ್ಣ ಆಯ್ಕೆ ಮಾಡಿಕೊಳ್ಳಬೇಕಿತ್ತು. ಬಿಸಿಲಿತ್ತು. ಹುಲ್ಲು ಹಸಿರಾಗಿತ್ತು. ನೀರು ನೀಲಿಯಾಗಿತ್ತು. ಕೇಸರಿ ಬಣ್ಣ ಎದ್ದು ಕಾಣುತ್ತದೆ ಎನ್ನುವ ಕಾರಣಕ್ಕಾಗಿ ಕೇಸರಿ ಬಣ್ಣವನ್ನು ಆಯ್ಕೆ ಮಾಡಿಕೊಂಡರಂತೆ. ಅದರ ಹೊರತಾಗಿ ಬೇರೆ ಯಾವ ಆಲೋಚನೆಯೂ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ

    ಕೇಸರಿ ಬಿಕಿನಿ ಆರಿಸುವ ಧಾರ್ಮಿಕ ಭಾವನೆ, ಬೇರೆಯವರಿಗೆ ನೋವಾಗತ್ತೆ ಏನೂ ಯೋಚಿಸಲಿಲ್ಲ. ಒಬ್ಬ ನಿರ್ದೇಶಕನಾಗಿ ಯಾವ ಬಣ್ಣ ಹೈಲೈಟ್ ಆಗತ್ತೆ ಅಂತ ಮಾತ್ರ ಯೋಚನೆ ಮಾಡಿದೆ. ಆದರೆ, ಕೇಸರಿ ಬಿಕಿನಿ ಈ ರೀತಿಯಲ್ಲಿ ವಿವಾದ ಎಬ್ಬಿಸುತ್ತೆ ಎನ್ನುವ ಸಣ್ಣ ಅಂದಾಜು ಕೂಡ ನನಗೆ ಇರಲಿಲ್ಲ. ಸಿನಿಮಾದಲ್ಲಿ ಯಾರ ಭಾವನೆಯನ್ನೂ ಕೆರಳಿಸುವ ಕಥೆಯೂ ಇಲ್ಲ. ಆದರೂ, ವಿವಾದ ಮಾಡಲಾಯಿತು.

    ಸಿನಿಮಾ ಚೆನ್ನಾಗಿದ್ದರೆ, ಯಾರ ಮನಸ್ಸಿಗೂ ನೋವು ಮಾಡದೇ ಇದ್ದರೆ ಸಿನಿಮಾವನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ ಎನ್ನುವುದಕ್ಕೆ ಪಠಾಣ್ ಸಿನಿಮಾ ಸಾಕ್ಷಿ. ಸಿನಿಮಾ ಬಗ್ಗೆ ನನಗೆ ನಂಬಿಕೆಯಿತ್ತು. ಬಾಯ್ಕಾಟ್ ನಡೆಯಲ್ಲ ಅನ್ನುವ ವಿಶ್ವಾಸವಿತ್ತು. ಕೊನೆಗೂ ಪ್ರೇಕ್ಷಕ ಗೆಲ್ಲಿಸಿದ ಎಂದು ಅವರು ಮಾತನಾಡಿದ್ದಾರೆ.

  • 50 ದಿನ ಪೂರೈಸಿದ ಪಠಾಣ್: 20 ದೇಶ, 135 ಚಿತ್ರಮಂದಿರ, 800 ಸ್ಕ್ರೀನ್ ಏನಿದು ಲೆಕ್ಕಾಚಾರ

    50 ದಿನ ಪೂರೈಸಿದ ಪಠಾಣ್: 20 ದೇಶ, 135 ಚಿತ್ರಮಂದಿರ, 800 ಸ್ಕ್ರೀನ್ ಏನಿದು ಲೆಕ್ಕಾಚಾರ

    ಶಾರುಖ್ ಖಾನ್ (Shahrukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ನ ಪಠಾಣ್ (Pathan) ಸಿನಿಮಾ ಇಂದಿಗೆ ಐವತ್ತು ದಿನಗಳನ್ನು ಪೂರೈಸಿದೆ. ಬೈಕಾಟ್, ವಿರೋಧ, ಹೋರಾಟ, ಕಾನೂನು ಸಮರ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಎಲ್ಲ ವಿರೋಧಗಳ ಮಧ್ಯಯೇ ಭರ್ಜರಿ ಯಶಸ್ಸು ಸಾಧಿಸಿದೆ. ಅಲ್ಲದೇ ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ.

    50 ದಿನಗಳನ್ನೂ ಪಠಾಣ್ ಸಿನಿಮಾ ಪೂರೈಸಿದ್ದರೂ, ಇನ್ನೂ 20 ದೇಶಗಳಲ್ಲಿ ಈ ಸಿನಿಮಾ ತನ್ನ ಪ್ರದರ್ಶನವನ್ನು ಮುಂದುವರೆಸಿದೆ. ಭಾರತದಲ್ಲೇ 135 ಚಿತ್ರಮಂದಿರಗಳಲ್ಲಿ 800 ಸ್ಕ್ರೀನ್ ಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಎರಡ್ಮೂರು ವರ್ಷಗಳಲ್ಲಿ ಈ ಪ್ರಮಾಣದಲ್ಲಿ ಗೆದ್ದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಠಾಣ್ ಪಾತ್ರವಾಗಿದೆ. ಐಸಿಯುವಿನಲ್ಲಿದ್ದ ಬಾಲಿವುಡ್ ಗೆ ಈ ಸಿನಿಮಾದಿಂದ ಮರುಜೀವ ಬಂದಿದೆ. ಇದನ್ನೂ ಓದಿ:  ಕ್ರಿಕೆಟರ್ ಶುಭಮನ್ ಗಿಲ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ರಶ್ಮಿಕಾ ಮಂದಣ್ಣ

    ಬಾಕ್ಸ್ ಆಫೀಸಿನ ಅನೇಕ ದಾಖಲೆಗಳನ್ನು ಪಠಾಣ್ ಮುರಿದಿದೆ. ಅತೀ ಕಡಿಮೆ ಸಮಯದಲ್ಲೇ ಸಾವಿರ ಕೋಟಿ ಸಂಪಾದನೆ ಮಾಡಿದ ಬಾಲಿವುಡ್ ಸಿನಿಮಾ ಎನ್ನುವ ಖ್ಯಾತಿಯೂ ಅದು ಪಾತ್ರವಾಗಿದೆ. ಅಲ್ಲದೇ, ಸಾವಿರಾರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ಮೂಲಕ ಏಕಕಾಲದಲ್ಲಿ ದೇಶ ವಿದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಬಿಡುಗಡೆಯಾದ ಅಷ್ಟೂ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಚಿತ್ರಕಂಡಿದೆ.

    ಸಿನಿಮಾ ಬಿಡುಗಡೆಗೂ ಮುನ್ನ ಭಾರೀ ಟೀಕೆಗೆ ಪಠಾಣ್ ಗುರಿ ಆಯಿತು. ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದರು ಎನ್ನುವ ಕಾರಣಕ್ಕಾಗಿ ಪ್ರತಿಭಟನೆ ಕೂಡ ನಡೆಯಿತು. ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆ ಸಿನಿಮಾವನ್ನು ಬ್ಯಾನ್ ಮಾಡುವ ವಿಚಾರ ಮುನ್ನೆಲೆಗೆ ಬಂತು. ಈ ಸಿನಿಮಾದ ಬಗ್ಗೆ ಏನೂ ಮಾತನಾಡಬಾರದು ಎಂದು ಸ್ವತಃ ಪ್ರಧಾನಿ ಮೋದಿ ಅವರೇ ಕರೆಕೊಟ್ಟಿದ್ದರು. ಆದರೂ, ಪ್ರತಿಭಟನೆ ನಿಲ್ಲಲಿಲ್ಲ. ಸಿನಿಮಾ ಗೆಲ್ಲುವುದು ಮಾತ್ರ ಬಿಡಲಿಲ್ಲ.

  • ‘ಪಠಾಣ್’ ಗಳಿಕೆ 901 ಕೋಟಿ : ಚಿತ್ರತಂಡದಿಂದ ಅಧಿಕೃತ ಘೋಷಣೆ

    ‘ಪಠಾಣ್’ ಗಳಿಕೆ 901 ಕೋಟಿ : ಚಿತ್ರತಂಡದಿಂದ ಅಧಿಕೃತ ಘೋಷಣೆ

    ಶಾರುಖ್ ಖಾನ್ (Shahrukh Khan) ನಟನೆಯ ‘ಪಠಾಣ್’ (Pathan) ಸಿನಿಮಾ ಅಚ್ಚರಿ ಎನ್ನುವಂತೆ ಬಾಕ್ಸ್ ಆಫೀಸಿನಲ್ಲಿ ಗೆಲುವು ದಾಖಲಿಸುತ್ತಿದೆ. ಜನವರಿ 25ರಂದು ವಿಶ್ವದಾದ್ಯಂತ ಬಿಡುಗಡೆ ಆಗಿರುವ ಸಿನಿಮಾ, ಈವರೆಗೂ 901 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಭಾರತವೊಂದರಲ್ಲೇ 558.40  ಕೋಟಿ ಹಣ ಬಾಚಿದ್ದರೆ, ವಿದೇಶಗಳಲ್ಲಿ 342.60 ಕೋಟಿ ಲಾಭ ಮಾಡಿದೆಯಂತೆ. ಈ ಮಾಹಿತಿಯನ್ನು ಸ್ವತಃ ನಿರ್ಮಾಣ ಸಂಸ್ಥೆಯೇ ನೀಡಿದೆ. ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

    ನಾನಾ ಕಾರಣಗಳಿಂದ ಈ ಸಿನಿಮಾ ಬಾ‍ಕ್ಸ್ ಆಫೀಸಿನಲ್ಲಿ ಸೋಲಲಿದೆ ಎಂದು ವಿಶ್ಲೇಷಣೆ ಮಾಡಲಾಗಿತ್ತು. ಈ ಸಿನಿಮಾದ ಹಾಡೊಂದರಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಹಿಂದೂಪರ ಸಂಘಟನೆಗಳು ‘ಬಾಯ್ಕಾಟ್ ಪಠಾಣ್’ ಅಭಿಯಾನ ಶುರು ಮಾಡಿದ್ದವು. ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರ ಜೊತೆ ದೀಪಿಕಾ ಪಡುಕೋಣೆ  (Deepika Padukone) ಕಾಣಿಸಿಕೊಂಡಿದ್ದರು ಎನ್ನುವ ಕಾರಣಕ್ಕೂ ಸಿನಿಮಾವನ್ನು ವಿರೋಧಿಸಲಾಯಿತು. ಶಾರುಖ್ ವಿರುದ್ಧವೂ ಪ್ರತಿಭಟನೆಗಳು ನಡೆದಿದ್ದವು. ಈ ಎಲ್ಲ ಕಾರಣದಿಂದಾಗಿ ಸಿನಿಮಾ ಮಕಾಡೆ ಮಲಗಲಿದೆ ಎಂದು ಹೇಳಲಾಗಿತ್ತು. ಇದನ್ನೂ ಓದಿ:`ಕಾಂತಾರ’ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಗೆಲ್ಲಲು ಅಸಲಿ ಕಾರಣ ಬಿಚ್ಚಿಟ್ಟ ರಿಷಬ್ ಶೆಟ್ಟಿ

    ಆದರೆ, ಎಲ್ಲರ ನಿರೀಕ್ಷೆಯನ್ನೂ ಮೀರಿ ಈ ಸಿನಿಮಾ ಗೆದ್ದಿದೆ. ಬಿಡುಗಡೆಯಾದ ಬಹುತೇಕ ಚಿತ್ರಮಂದಿರಗಳಲ್ಲಿ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣದಲ್ಲಿ  ಹಣ ಗಳಿಕೆ ಮಾಡಿದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಯೂ ಇದರದ್ದು. ಈ ಕುರಿತು ಶಾರುಖ್ ಕೂಡ ಮಾತನಾಡಿದ್ದು, ಒಳ್ಳೆಯ ಸಿನಿಮಾಗಳಿಗೆ ಜಯ ಇದ್ದೆ ಇರುತ್ತದೆ ಎಂದಿದ್ದಾರೆ. ಸಿನಿಮಾ ಗೆಲ್ಲಿಸಿದವರಿಗೆ ಧನ್ಯವಾದ ಕೂಡ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಿತ್ರಮಂದಿರ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ದಾಳಿ – ಪಠಾಣ್ ಚಿತ್ರದ ಬ್ಯಾನರ್ ಹರಿದು ಆಕ್ರೋಶ

    ಚಿತ್ರಮಂದಿರ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ದಾಳಿ – ಪಠಾಣ್ ಚಿತ್ರದ ಬ್ಯಾನರ್ ಹರಿದು ಆಕ್ರೋಶ

    ಬೆಳಗಾವಿ: ನಗರದ ಚಿತ್ರಮಂದಿರದಲ್ಲಿ ಶಾರುಖ್ ಖಾನ್ (Shahrukh Khan) ಅಭಿನಯದ ಪಠಾಣ್ (Pathan) ಚಿತ್ರ ಪ್ರದರ್ಶನ ಮಾಡದಂತೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳು (Pro Hindu Organizations) ಪಠಾಣ್ ಚಿತ್ರದ ಬ್ಯಾನರ್ ಹರಿದು ಆಕ್ರೋಶ ಹೊರಹಾಕಿದರು.

    ಬೆಳಗಾವಿಯ (Belagavi) ಸ್ವರೂಪ ಚಿತ್ರಮಂದಿರ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ದಾಳಿ ಮಾಡಿದ್ದು, ಸ್ವರೂಪ ಚಿತ್ರಮಂದಿರ ಬಳಿ ಹಾಕಿದ್ದ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು (Police) ಹಿಂದೂಪರ ಸಂಘಟನೆ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಇದನ್ನೂ ಓದಿ: Oscars 2023: `ಆರ್‌ಆರ್‌ಆರ್’ ಸಿನಿಮಾದ `ನಾಟು ನಾಟು’ ಸಾಂಗ್ ನಾಮಿನೇಟ್

    ಬೆಳಗಾವಿಯ ಸ್ವರೂಪ ಚಿತ್ರಮಂದಿರ ಬಳಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿತ್ರಮಂದಿರದ ಎದುರು ಬಿಗಿ ಭದ್ರತೆ ಒದಗಿಸಲಾಗಿದೆ. ಓರ್ವ ಸಿಪಿಐ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಚಿತ್ರಮಂದಿರ ಬಳಿ ಒಂದು ಕೆಎಸ್‍ಆರ್‌ಪಿ ತುಕಡಿ ಇರಿಸಲಾಗಿದೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರಾತ್ರಿ 2 ಗಂಟೆಗೆ ಅಸ್ಸಾಂ ಸಿಎಂಗೆ ಶಾರುಖ್‌ ಖಾನ್‌ ಫೋನ್‌ ಕಾಲ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಾರುಖ್ ಖಾನ್ ಗೆ ಅಂತಿಮ ಸಂಸ್ಕಾರ ಮಾಡಿದ ಅಯೋಧ್ಯೆಯ ಸಾಧು

    ಶಾರುಖ್ ಖಾನ್ ಗೆ ಅಂತಿಮ ಸಂಸ್ಕಾರ ಮಾಡಿದ ಅಯೋಧ್ಯೆಯ ಸಾಧು

    ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ಅವರ 13ನೇ ದಿನದ ಕರ್ಮಗಳನ್ನು ರಸ್ತೆ ಮಧ್ಯೆದಲ್ಲೇ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ ಅಯೋಧ್ಯೆಯ (Ayodhya) ತಪಸ್ವಿ ಜಗದ್ಗುರು ಪರಮಹಂಸ ಆಚಾರ್ಯರು (Paramahansa Acharya). ಪಠಾಣ್ ಸಿನಿಮಾದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರಿಗೆ ಕೇಸರಿ ಬಿಕಿನಿ ಹಾಕಿಸಿದ್ದಲ್ಲದೇ, ಹಿಂದೂಗಳಿಗೆ ಅವಮಾನ ಮಾಡುವಂತಹ ಸಾಲುಗಳನ್ನು ಈ ಹಾಡಿನಲ್ಲಿ ಬಳಸಿದ್ದಾರೆ ಎನ್ನುವ ಕಾರಣಕ್ಕಾಗಿ ಹಿಂದೂ ಸಂಪ್ರದಾಯದಂತೆ ಶಾರುಖ್ ತಿಥಿ ಮಾಡಲಾಗಿದೆ.

    ಈ ಹಿಂದೆ ಪಠಾಣ್ (Pathan) ಸಿನಿಮಾವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿ ಇದೇ ಅಯೋಧ್ಯೆಯ ತಪಸ್ವಿ ಶಿಬಿರದ ಜಗದ್ಗುರುಗಳು ಪ್ರತಿಭಟನೆ ಕೂಡ ಮಾಡಿದ್ದಾರೆ. ಈ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡದಂತೆ ಒತ್ತಡ ಹೇರಿದ್ದರು. ಇಂದು ಮಡಿಕೆಗೆ ಶಾರುಖ್ ಖಾನ್ ಫೋಟೋ ಅಂಟಿಸಿ, ಅದನ್ನು ರಸ್ತೆಯಲ್ಲೇ ಇಟ್ಟು 13 ದಿನದ ಕರ್ಮಗಳನ್ನು ಮಾಡಿ ತಮ್ಮ ಪ್ರತಿಭಟನೆಯನ್ನು ವ್ಯಕ್ತ ಪಡಿಸಿದ್ದಾರೆ. ಸಂಸ್ಕಾರದ ವೇಳೆ ಹಿಂದೂ ಮಂತ್ರಗಳನ್ನೂ ಪಠಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಯುವಜನೋತ್ಸವಕ್ಕೆ ಮೋದಿ ಜೊತೆ ಅಕ್ಷಯ್ ಕುಮಾರ್‌ಗೆ ಆಹ್ವಾನ

    ಅಯೋಧ್ಯೆ ಸಾಧುಗಳು ಈ ಕ್ರಿಯೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಡೆಯ ಬಗ್ಗೆ ಪರ ವಿರೋಧದ ಚರ್ಚೆಗಳು ಕೂಡ ಶುರುವಾಗಿದೆ. ಜೀವಂತವಾಗಿರುವಾಗ ತಿಥಿ ಮಾಡುವಂತಹ ಸಂಪ್ರದಾಯ ಹಿಂದೂಗಳಲ್ಲಿ ಇಲ್ಲ. ಹೀಗಾಗಿ ಗೊತ್ತಿರುವ ಸಾಧುಗಳೇ ಹೀಗೆ ಮಾಡಬಾರದಿತ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ನಮ್ಮ ಪಾಲಿಗೆ ಶಾರುಖ್ ಸತ್ತಿದ್ದಾನೆ ಎಂದು ಇನ್ನೂ ಕೆಲವರು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಾರುಖ್ ಖಾನ್ ಸಿಕ್ಕರೆ ಜೀವಂತ ಸುಡುವೆ: ಅಯೋಧ್ಯೆಯ ಸಾಧು ಕಿಡಿಕಿಡಿ

    ಶಾರುಖ್ ಖಾನ್ ಸಿಕ್ಕರೆ ಜೀವಂತ ಸುಡುವೆ: ಅಯೋಧ್ಯೆಯ ಸಾಧು ಕಿಡಿಕಿಡಿ

    ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ನಟನೆಯ ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಹಾಡನ್ನು ವಿರೋಧಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್ ಅಯೋಧ್ಯೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಯೋಧ್ಯೆಯ (Ayodhya) ತಪಸ್ವಿ ಚಾವ್ನಿ ಮಠದ ಪರಮಹಂಸ ಆಚಾರ್ಯ (Paramahamsa Acharya) ಅವರು ಮಾತನಾಡಿ, ಶಾರುಖ್ ಖಾನ್ ನನ್ನ ಎದುರಿಗೆ ಸಿಕ್ಕರೆ ಜೀವಂತವಾಗಿ ಸುಟ್ಟು ಬಿಡುವೆ ಎಂದು ಗುಡುಗಿದ್ದಾರೆ. ಇಂತಹ ಹೇಳಿಕೆಯು ಆಘಾತಕಾರಿ ಆದಂಥದ್ದು ಎಂದು ಹಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

    ಪ್ರತಿಭಟನೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಾಧು, ‘ಪಠಾಣ್ (Pathan) ಸಿನಿಮಾ ಸನಾತನ ಧರ್ಮಕ್ಕೆ ಅವಮಾನ ಮಾಡಿದೆ. ಸದ್ಯಕ್ಕೆ ಶಾರುಖ್ ಖಾನ್ ಅವರ ಪೋಸ್ಟರ್ ಗಳಿಗೆ ಬೆಂಕಿ ಹಚ್ಚಿದ್ದೇವೆ. ಒಂದು ವೇಳೆ ಅವರು ಏನಾದರೂ ನನ್ನ ಎದುರಿಗೆ ಬಂದರೆ ಜೀವಂತವಾಗಿ ಸುಡಲು ಹಿಂದುಮುಂದು ನೋಡುವುದಿಲ್ಲ. ಈ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಲು ಬಿಡುವುದಿಲ್ಲ’ ಎಂದು ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಡೇಂಜರ್ ಝೋನ್‌ನಲ್ಲಿ 8 ಸ್ಪರ್ಧಿಗಳು, ಯಾರ ಆಟಕ್ಕೆ ಬ್ರೇಕ್ ಹಾಕಲಿದ್ದಾರೆ ಬಿಗ್ ಬಾಸ್

    ಏನೇ ಪ್ರತಿಭಟನೆ ಮಾಡಿದರೂ, ಸಿನಿಮಾ ತಂಡವಂತೂ ಸುಮ್ಮನೆ ಕೂತಿಲ್ಲ. ಸಿನಿಮಾದ ಎರಡನೇ ಹಾಡು ನಾಳೆ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಈ ಹಾಡಿನ ಒಂದೇ ಒಂದು ಫೋಟೋವನ್ನು ರಿಲೀಸ್ ಮಾಡಲಾಗಿದ್ದು, ದೀಪಿಕಾ ಪಡುಕೋಣೆ ಈ ಹಾಡಿನಲ್ಲೂ ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲೂ ಅವರು ಗ್ಲಾಮರ್ ಗೆ ಯಾವುದೇ ಕೊರತೆಯನ್ನು ಮಾಡಿಲ್ಲ. ಹಾಗಾಗಿ ಈ ಹಾಡಿನ ಬಗ್ಗೆಯೂ ಅಷ್ಟೇ ನಿರೀಕ್ಷೆಯನ್ನು ಹೊಂದಲಾಗಿದೆ. ಈ ಹಾಡು ಯಾವ ರೀತಿಯಲ್ಲಿ ಮೂಡಿ ಬಂದಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

    ಪಠಾಣ್ ಸಿನಿಮಾದ ಎರಡನೇ ಹಾಡಾದ ‘ಜೂಮೇ ಜೋ ಪಠಾಣ್’ ನಾಳೆ ರಿಲೀಸ್ ಮಾಡುತ್ತಿರುವ ಕುರಿತು ನಿರ್ಮಾಣ ಸಂಸ್ಥೆಯು ವಿಷಯವನ್ನು ಹಂಚಿಕೊಂಡಿದ್ದು, ಈ ಹಾಡು ಕೂಡ ಸಖತ್ ಆಗಿಯೇ ಚರ್ಚೆ ಆಗಲಿದೆ ಎಂದು ಮೊದಲೇ ಹೇಳಿಕೊಂಡಿದೆ. ಹಾಗಾಗಿ ಮತ್ತೇನಾದರೂ ವಿವಾದಕ್ಕೆ ಕಾರಣವಾಗಿರುವ ಅಂಶಗಳು ಇರಬಹುದಾ ಎನ್ನುವ ಚರ್ಚೆ ಕೂಡ ನಡೆದಿದೆ. ಮೊದಲ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ಹಾಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೂ, ಚಿತ್ರತಂಡ ಈ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ.

    Live Tv
    [brid partner=56869869 player=32851 video=960834 autoplay=true]

  • ದೀಪಿಕಾ ಹಾಕಿದ ಬಿಕಿನಿ ಪ್ರಚೋದನಕಾರಿ, ಅಶ್ಲೀಲಕಷ್ಟೇ ಸೀಮಿತ ಮಾಡಬೇಡಿ : ಶಕ್ತಿಮಾನ್ ಹೊಸ ಬಾಂಬ್

    ದೀಪಿಕಾ ಹಾಕಿದ ಬಿಕಿನಿ ಪ್ರಚೋದನಕಾರಿ, ಅಶ್ಲೀಲಕಷ್ಟೇ ಸೀಮಿತ ಮಾಡಬೇಡಿ : ಶಕ್ತಿಮಾನ್ ಹೊಸ ಬಾಂಬ್

    ಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಕಿರುವ ಬಿಕಿನಿ ಕೇವಲ ಅಶ್ಲೀಲವಷ್ಟೇ ಅಲ್ಲ, ಅದು ಪ್ರಚೋದನಕಾರಿ ಕೂಡ ಆಗಿದೆ ಎಂದು ಶಕ್ತಿಮಾನ್ ಪಾತ್ರಧಾರಿ ಮುಕೇಶ್ ಖನ್ನಾ ಪ್ರತಿಕ್ರಿಯೆ ನೀಡಿದ್ದಾರೆ. ಬೇಷರಂ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿದ್ದಾರೆ ಎನ್ನುವುದು ಪ್ರಶ್ನೆಯಲ್ಲ. ಅದು ಚರ್ಚೆಯ ವಿಷಯ ಕೂಡ ಆಗಬಾರದು. ಚರ್ಚೆ ಮಾಡಬೇಕಾಗಿದ್ದು ಪ್ರಚೋದನಕಾರಿ ಆಗುವಂತಹ ಬಟ್ಟೆಗಳನ್ನು ಹಾಕಿದ್ದಾರೆ ಎನ್ನುವುದು ಎಂದಿದ್ದಾರೆ ಖನ್ನಾ.

    ನಟಿಯೊಬ್ಬಳು ಪ್ರಚೋದನಕಾರಿ ಆಗುವಂತಹ ಬಟ್ಟೆ ಮತ್ತು ಭಂಗಿಯಲ್ಲಿ ಇದ್ದಾರೆ ಎನ್ನುವ ಅಂಶವನ್ನು ಸೆನ್ಸಾರ್ ಮಂಡಳಿಯು ಗಮನಿಸದೇ ಇರುವುದು ಅಚ್ಚರಿ ತಂದಿದೆ ಎಂದಿರುವ ಖನ್ನಾ. ವಿವೇಚನೆ ಇಲ್ಲದೇ ಈ ಹಾಡನ್ನು ಸೆನ್ಸಾರ್ ಮಾಡಲಾಯಿತಾ ಎಂದು ಪ್ರಶ್ನೆ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯಲ್ಲಿ ಇರುವವರು ವಿವೇಚನೆ ಬಳಸಿಕೊಂಡು ಸೆನ್ಸಾರ್ ಮಾಡಬೇಕು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ

    ಬಾಲಿವುಡ್ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದ ವಿಚಾರ, ಇದೀಗ ದೇಶಭಕ್ತಿಯನ್ನು ಪ್ರಶ್ನಿಸುವಲ್ಲಿಗೆ ಹೋಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿಯೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ನಟ ಶಾರುಖ್ ಖಾನ್ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ. ಈ ಕುರಿತು ಶಾರುಖ್ ಖಾನ್ ಮತ್ತೊಂದು ಟ್ವಿಟ್ ಮಾಡಿದ್ದು, ‘ಪಠಾಣ್ ಸಿನಿಮಾ ಕೂಡ ದೇಶಭಕ್ತಿಯನ್ನು ಸಾರುತ್ತದೆ’ ಎಂದು ಬರೆದುಕೊಂಡಿದ್ದಾರೆ. ಸಿನಿಮಾವನ್ನು ಬಾಯ್ಕಾಟ್ ಮಾಡುವುದರಲ್ಲಿ ಅರ್ಥವೇ ಇಲ್ಲವೆಂದಿದ್ದಾರೆ.

    ಪಠಾಣ್ ಸಿನಿಮಾ ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಈ ಬಿಕಿನಿ ತೊಟ್ಟ ಸಂದರ್ಭದಲ್ಲಿ ಬರುವ ಹಾಡೊಂದರ ಸಾಹಿತ್ಯ ‘ನಾಚಿಕೆ ಇಲ್ಲದ ಬಣ್ಣ’ ಎನ್ನುವುದಾಗಿದೆ. ಇದು ಹಿಂದೂಗಳನ್ನು ಹೀಯಾಳಿಸುವ ಉದ್ದೇಶದಿಂದಲೇ ಮಾಡಿದ ಕೃತ್ಯ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಧ್ವನಿ ಜೋರಾಗಿದೆ.

    Live Tv
    [brid partner=56869869 player=32851 video=960834 autoplay=true]