Tag: shahjahanpur

  • ನಿಂತಿದ್ದ ಬಸ್‌ಗೆ ಟ್ರಕ್ ಡಿಕ್ಕಿ – 11 ಭಕ್ತರು ದುರ್ಮರಣ, 10 ಜನರಿಗೆ ಗಾಯ

    ನಿಂತಿದ್ದ ಬಸ್‌ಗೆ ಟ್ರಕ್ ಡಿಕ್ಕಿ – 11 ಭಕ್ತರು ದುರ್ಮರಣ, 10 ಜನರಿಗೆ ಗಾಯ

    ಲಕ್ನೋ: ಕಲ್ಲು ಬಂಡೆ ತುಂಬಿದ್ದ ಟ್ರಕ್ಕೊಂದು (Truck) ನಿಂತಿದ್ದ ಬಸ್‌ಗೆ (Bus) ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttara Pradesh) ಶಹಜಹಾನ್‌ಪುರದಲ್ಲಿ (Shahjahanpur) ನಡೆದಿದೆ.

    ಖುತಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋಲಾ ಬೈಪಾಸ್ ರಸ್ತೆಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಸೀತಾಪುರದಿಂದ ಪೂರ್ಣಗಿರಿಗೆ ತೆರಳುತ್ತಿದ್ದ ಖಾಸಗಿ ಬಸ್ ಶಹಜಾನ್‌ಪುರದ ಧಾಬಾದಲ್ಲಿ ನಿಂತಿತ್ತು. ಕಲ್ಲು ಬಂಡೆ ತುಂಬಿದ್ದ ಟ್ರಕ್ ಬಸ್‌ಗೆ ಡಿಕ್ಕಿ ಹೊಡೆದು ಅದರ ಮೇಲೆ ಪಲ್ಟಿಯಾದ ಪರಿಣಾಮ ಬಸ್‌ನಲ್ಲಿದ್ದ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೇ 31ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ – ಹವಾಮಾನ ಇಲಾಖೆ ಮುನ್ಸೂಚನೆ

    ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ ನಂತರ, ಟ್ರಕ್ ಅಡಿಯಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಯಿತು. ಕ್ರೇನ್ ಮೂಲಕ ರಕ್ಷಣಾ ತಂಡ ಟ್ರಕ್ ಅಡಿಯಲ್ಲಿ ಸಿಲುಕಿದ್ದ ಯಾತ್ರಿಕರನ್ನು ಹೊರತೆಗೆದು ಅವಶೇಷಗಳನ್ನು ಸ್ಥಳಾಂತರಿಸಿತು. ಇದನ್ನೂ ಓದಿ: 27 ಮಂದಿ ಬಲಿಯಾದ ರಾಜ್‌ಕೋಟ್‌ ಗೇಮಿಂಗ್‌ ಸೆಂಟರ್‌ಗೆ ಇರಲಿಲ್ಲ Fire NOC

    ರಾತ್ರಿ 11:30ರ ಸುಮಾರಿಗೆ ಗೋಲಾ ಬೈಪಾಸ್ ರಸ್ತೆಯಲ್ಲಿ ಕಲ್ಲು ತುಂಬಿದ ಟ್ರಕ್ ಡಾಬಾ ಬಳಿ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಅದರ ಮೇಲೆ ಪಲ್ಟಿಯಾಗಿದೆ ಎಂದು ನಮಗೆ ಮಾಹಿತಿ ಸಿಕ್ಕಿತು. ಕೆಲವರು ಡಾಬಾದಲ್ಲಿ ಆಹಾರ ಸೇವಿಸುತ್ತಿದ್ದರು ಮತ್ತು ಇತರರು ಬಸ್‌ನೊಳಗೆ ಕುಳಿತಿದ್ದರು. ಘಟನೆಯಲ್ಲಿ 11 ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ. ನಾವು ಎಲ್ಲಾ ದೇಹಗಳನ್ನು ಹೊರತೆಗೆದಿದ್ದೇವೆ ಮತ್ತು ಅವರ ಕುಟುಂಬಗಳಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಶಹಜಹಾನ್‌ಪುರ ಪೊಲೀಸ್ ಅಧೀಕ್ಷಕ ಅಶೋಕ್ ಕುಮಾರ್ ಮೀನಾ ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಕಾರು, ಟ್ರಕ್ ನಡುವೆ ಭೀಕರ ಅಪಘಾತ – ಚಿಕ್ಕಬಳ್ಳಾಪುರ ಮೂಲದ 6 ಮಂದಿ ದಾರುಣ ಸಾವು

    ಗಾಯಾಳುಗಳನ್ನು ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದೆಹಲಿ ಮಕ್ಕಳ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ದುರಂತ -6 ನವಜಾತ ಶಿಶುಗಳು ಬಲಿ

  • ಮಹಿಳೆಯೊಬ್ಬರ ಮಗುವನ್ನು ಮುಸ್ಲಿಂ ದಂಪತಿಗೆ ನೀಡಿದ್ದಕ್ಕೆ ಹಿಂದೂ ಸಂಘಟನೆಯಿಂದ ಪ್ರತಿಭಟನೆ – ಆಸ್ಪತ್ರೆ ಸೀಲ್

    ಮಹಿಳೆಯೊಬ್ಬರ ಮಗುವನ್ನು ಮುಸ್ಲಿಂ ದಂಪತಿಗೆ ನೀಡಿದ್ದಕ್ಕೆ ಹಿಂದೂ ಸಂಘಟನೆಯಿಂದ ಪ್ರತಿಭಟನೆ – ಆಸ್ಪತ್ರೆ ಸೀಲ್

    ಲಕ್ನೋ: ಮಹಿಳೆಯೊಬ್ಬರು ಜನ್ಮ ನೀಡಿದ ನವಜಾತ ಶಿಶುವನ್ನು ಮತ್ತೊಂದು ದಂಪತಿಗೆ ಹಸ್ತಾಂತರಿಸಿದ ಆರೋಪದ ಮೇಲೆ ಶಹಜಹಾನ್‌ಪುರದ ಖಾಸಗಿ ಆಸ್ಪತ್ರೆಯನ್ನು ಸ್ಥಳೀಯ ಅಧಿಕಾರಿಗಳು ಸೀಲ್ ಮಾಡಿದ್ದಾರೆ.

    ಮಹಿಳೆಯೊಬ್ಬರ ಶಿಶುವನ್ನು ಮುಸ್ಲಿಂ ದಂಪತಿಗೆ ನೀಡಲಾಗಿತ್ತು. ಇದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್‌ (Vishwa Hindu Parishad) ಪ್ರತಿಭಟನೆ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ನೋಂದಣಿಯಾಗದ ಕಾರಣ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಡಾ.ಆರ್.ಕೆ.ಗೌತಮ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹಿಮಾಂತ ಬಿಸ್ವಾ ಶರ್ಮಾ ರ‍್ಯಾಲಿಯಲ್ಲಿ ಮೈಕ್ ಕಿತ್ತುಕೊಂಡ ಅಪರಿಚಿತ ವ್ಯಕ್ತಿ – ವೀಡಿಯೋ ವೈರಲ್

    ನಿಗೋಹಿ ಪೊಲೀಸ್ ಠಾಣೆ ವ್ಯಾಪ್ತಿಯ ಟ್ರಾಲೋಕ್‌ಪುರ ಗ್ರಾಮದ ನಿವಾಸಿ ಸಂಗೀತಾ ಬುಧವಾರ ರಾತ್ರಿ ಹೆರಿಗೆ ನೋವಿನಿಂದ ಶಹಜಹಾನ್‌ಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಸಂಜಯ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.

    ಇಲ್ಲಿ ಸಂಗೀತಾ ಎಂಬ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಂಗೀತಾ ಅವರಿಗೆ ಈಗಾಗಲೇ ಐದು ಹೆಣ್ಣು ಮಕ್ಕಳಿರುವುದರಿಂದ ಆರನೆಯ ಮಗುವನ್ನು ನೋಡಿಕೊಳ್ಳಲು ಅಥವಾ ಆಸ್ಪತ್ರೆಯ ಶುಲ್ಕವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಆ ಮಗುವನ್ನು ಮುಸ್ಲಿಂ ದಂಪತಿಗೆ ಹಸ್ತಾಂತರಿಸಲಾಗಿತ್ತು ಎಂದು ಆಸ್ಪತ್ರೆಯ ಮಾಲೀಕ ಡಾ. ಅಶೋಕ್ ರಾಥೋಡ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಧರಿಸಿದ್ದ 41 ಸಾವಿರ ರೂ.ನ ಟೀಶರ್ಟ್ ಕುರಿತು ಬಿಜೆಪಿ ವ್ಯಂಗ್ಯ

    ವಿಷಯ ತಿಳಿದ ನಂತರ ಹಿಂದೂ ಸಂಘಟನೆಯ ಮುಖಂಡ ರಾಜೇಶ್ ಅವಸ್ತಿ ಗುರುವಾರ ಸಂಜೆ ನಿಗೋಹಿ ಪೊಲೀಸ್ ಠಾಣೆಗೆ ಆಗಮಿಸಿ ಆಸ್ಪತ್ರೆ ಮಾಲೀಕನ ಪ್ರತಿಕೃತಿಯನ್ನು ಸುಟ್ಟುಹಾಕಿದ್ದರು. ಘಟನೆಯ ಬಗ್ಗೆ ತಿಳಿದ ತಕ್ಷಣ ನಿಗೋಹಿಯ ಖಾಸಗಿ ಆಸ್ಪತ್ರೆಗೆ ಹೆಚ್ಚುವರಿ ಸಿಎಂಒ ಡಾ.ರೋಹ್ತಾಸ್ ನೇತೃತ್ವದ ತಂಡವನ್ನು ಕಳುಹಿಸಿದ್ದೇವೆ ಎಂದು ಸಿಎಂಒ ಗೌತಮ್ ಹೇಳಿದ್ದಾರೆ. ಆದರೆ ಅಷ್ಟರಲ್ಲಿ ಆಸ್ಪತ್ರೆಯ ಮಾಲೀಕ ಪರಾರಿಯಾಗಿದ್ದ.

    ದಾಖಲಾತಿ ಇಲ್ಲದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ. ಹೆಚ್ಚುವರಿಯಾಗಿ ಪ್ರಕರಣದ ತನಿಖೆಗೆ ತಂಡವನ್ನು ರಚಿಸಲಾಗಿದೆ. ಗುರುವಾರ ಆಸ್ಪತ್ರೆ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಕನ ಮರ್ಮಾಂಗಕ್ಕೆ ಇಟ್ಟಿಗೆ ಕಟ್ಟಿ ನೇತಾಡಿಸಿ ಶಿಕ್ಷೆ!

    ಬಾಲಕನ ಮರ್ಮಾಂಗಕ್ಕೆ ಇಟ್ಟಿಗೆ ಕಟ್ಟಿ ನೇತಾಡಿಸಿ ಶಿಕ್ಷೆ!

    ಲಕ್ನೋ: 16 ವರ್ಷದ ಮಾನಸಿಕ ಅಸ್ವಸ್ಥ ಬಾಲಕನ ಮರ್ಮಾಂಗಕ್ಕೆ ಇಟ್ಟಿಗೆ ಕಟ್ಟಿ ನೇತಾಡಿಸುವ ಮೂಲಕ ಆತನ ಸಂಬಂಧಿಕರು ಶಿಕ್ಷೆ ನೀಡಿದ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ ಶಹಜಾನ್‍ಪುರದಲ್ಲಿ ನಡೆದಿದೆ.

    ಈ ಘಟನೆ ಮೇ 26ರಂದು ನಡೆದಿದ್ದು, ಈ ಬಗ್ಗೆ ದೂರು ನೀಡಲು ತೆರಳಿದಾಗ ಬಳಿಕ ಬಾಲಕನ ಸಹೋದರಿ ಹಾಗೂ ಆತನ ಕುಟುಂಬಸ್ಥರ ಮೇಲೆ ದಾಳಿ ನಡೆದಿದೆ.

    ಘಟನೆ ಕುರಿತು ಬಾಲಕ ತಂದೆ ಹರಿ ರಾಮ್ ಮಾತನಾಡಿ, ನನ್ನ ಮಗ ಸಂದೀಪ್(ಹೆಸರು ಬದಲಾಯಿಸಲಾಗಿದೆ) ಮಾನಸಿಕ ಅಸ್ವಸ್ಥನಾಗಿದ್ದು, ಗ್ರಾಮದ ಕೆಲ ಬಾಲಕರೊಂದಿಗೆ ಕೂಡಿ ಆಟವಾಡುತ್ತಿದ್ದನು. ಈ ವೇಳೆ ಗಲಾಟೆ ನಡೆದಿದೆ. ಪರಿಣಾಮ ಮಗನ ಮೇಲೆ ಸಿಟ್ಟುಗೊಂಡ ನನ್ನ ಕೆಲ ಸಂಬಂಧಿಕರು ಆತನ ಮರ್ಮಾಂಗಕ್ಕೆ ಇಟ್ಟಿಗೆಯನ್ನು ಕಟ್ಟಿ ನೇತಾಡಿಸಿದ್ದಾರೆ. ಅಲ್ಲದೆ ನಂತರ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಈ ವಿಚಾರ ಹರಿದಾಡುತ್ತಿದ್ದಂತೆಯೇ ನಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ದೂರು ದಾಖಲಿಸಲು ಪೊಲೀಸ್ ಠಾಣೆಯತ್ತ ತೆರಳುತ್ತಿದ್ದೆವು. ಈ ವೇಳೆ ಸಂಬಂಧಿಕರು ದೂರು ದಾಖಲಿಸಿದಂತೆ ನಮ್ಮನ್ನು ತಡೆದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಬಾಲಕನ ಸಹೋದರಿ ಧ್ವನಿ ಮಾತನಾಡಿ, ಘಟನೆ ನಡೆದ ಬಳಿಕ ನಾನು ಹಾಗೂ ನಮ್ಮ ತಾಯಿ ಜೊತೆ ಸಂಬಂಧಿಕರ ಬಳಿ ಯಾಕೆ ಹೀಗೆ ಮಾಡಿದ್ರಿ ಎಂದು ಕೇಲಲು ಹೋದೆವು. ಈ ವೇಳೆ ನಮಗೆ ಹಾಗೂ ಸಂಬಂಧಿಕರ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಅಲ್ಲದೆ ನಮ್ಮ ತಾಯಿ ಮೇಲೆ ಅವರು ಹಲ್ಲೆ ಮಾಡಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ನಾನು ತಾಯಿಯನ್ನು ರಕ್ಷಿಸಲು ಹೋದೆ. ಆಗ ಹಿಂಬಂದಿಯಿಂದ ಬಂದು ಸಂಬಂಧಿಕರು ನನ್ನ ಹಾಗೂ ತಾಯಿಯ ತಲೆಗೆ ಕೋಲಿನಿಂದ ಹೊಡೆದರು ಎಂದು ಕಣ್ಣೀರು ಹಾಕಿದ್ದಾಳೆ.

    ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತೇವೆ. ಅಲ್ಲದೆ ಘಟನೆಯ ಬಗ್ಗೆ ಸತ್ಯಾಸತ್ಯತೆ ಅರಿತುಕೊಂಡು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ಯಾದವ್ ಭರವಸೆ ನೀಡಿದ್ದಾರೆ.

    ಸದ್ಯ ವೈರಲ್ ಆದ ವಿಡಿಯೋವನ್ನು ನೋಡಿದ್ದೇವೆ. ಹೀಗಾಗಿ ಅದರ ಸತ್ಯಾಸತ್ಯತೆಯನ್ನು ಅರಿತು ತನಿಖೆ ಮುಂದುವರಿಸುತ್ತೇವೆ. ಒಂದು ವೇಳೆ ವಿಡಿಯೋದಲ್ಲಿ ನಡೆದ ಘಟನೆ ಸತ್ಯವಾಗಿದ್ದರೆ ಆರೋಪಿಗಳ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಯಾದವ್ ತಿಳಿಸಿದ್ದಾರೆ.

    ವೈರಲಾದ ವಿಡಿಯೋ ಕುರಿತು ಮೇ 26ರಂದು ಬಂದಾ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.