Tag: Shahid Kapoor

  • ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಲಿದ್ದಾರೆ ಶಾಹಿದ್-ಕತ್ರೀನಾ!

    ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಲಿದ್ದಾರೆ ಶಾಹಿದ್-ಕತ್ರೀನಾ!

    ಮುಂಬೈ: ಶಾಹಿದ್ ಕಪೂರ್ ಹಾಗೂ ಕತ್ರೀನಾ ಕೈಫ್ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಶ್ರೀ ನಾರಾಯಣ್ ಸಿಂಗ್ ನಿರ್ದೇಶಿಸುತ್ತಿರುವ ಮುಂದಿನ ಚಿತ್ರದಲ್ಲಿ ಈ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

    ವರದಿಯೊಂದರ ಪ್ರಕಾರ ಶಾಹಿದ್ ಹಾಗೂ ಕತ್ರಿನಾ ‘ಅಂಕೇನ್’ ಚಿತ್ರದ ಸಿಕ್ವೇಲ್ ನಲ್ಲಿ ನಟಿಸುತ್ತಿದ್ದಾರೆ. ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಚಿತ್ರದ ನಿರ್ದೇಶಕ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಾಮಾನ್ಯ ಜನರು ವಿದ್ಯುತ್ ಗಾಗಿ ಭಾರೀ ಬಿಲ್ ಕಟ್ಟುವುದ್ದಕ್ಕೆ ದೇಶದ ವಿದ್ಯುತ್ ವಿತರಣಾ ಕಂಪೆನಿಗಳ ಜೊತೆ ಜಗಳವಾಡುವ ಕಥೆಯನ್ನು ಸಿನಿಮಾ ಹೊಂದಿದೆ.

    ವಿಪುಲ್ ಕೆ. ರಾವಲ್ ಚಿತ್ರದ ಕಥೆ ಬರೆಯುತ್ತಿದ್ದಾರೆ. ಕತ್ರಿನಾ ಲಾಸ್ ಎಂಜಲೀಸ್ ಗೆ ಹೋಗುವ ಮೊದಲು ನಿರ್ದೇಶಕ ಚಿತ್ರದ ಕಥೆಯನ್ನು ಕತ್ರಿನಾಗೆ ಹೇಳಿದ್ದರು. ಕತ್ರಿನಾಗೆ ಚಿತ್ರದ ಕಥೆ ಇಷ್ಟ ಆಗಿದ್ದು, ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಹಾಗೂ ಈ ಚಿತ್ರದ ಕಥೆ ಇನ್ನಷ್ಟು ಅದ್ಭುತವಾಗಿ ಮಾಡಲು ಹೇಳಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

    ಶಾಹಿದ್ ಯಾವ ನಾಯಕಿಯರ ಜೊತೆ ನಟಿಸಿಲ್ಲವೋ, ಆ ನಟಿಯನ್ನು ಚಿತ್ರದ ನಾಯಕಿಯನ್ನಾಗಿ ಮಾಡಲು ನಿರ್ದೇಶಕ ಯೋಚಿಸಿದ್ದರು. ಸದ್ಯ ಕತ್ರಿನಾ ತಮ್ಮ ಹಾಲಿವುಡ್ ನಲ್ಲಿ ಅಭಿನಯಿಸಲಿರುವ ಮೊದಲ ಚಿತ್ರದ ಶೂಟಿಂಗ್ ಗಾಗಿ ಅಮೆರಿಕದ ಲಾಸ್ ಎಂಜಲೀಸ್ ಗೆ ಹೋಗಿದ್ದಾರೆ. ಅಲ್ಲಿಂದ ಕತ್ರಿನಾ ಹಿಂತಿರುಗಿದ ಮೇಲೆ ಈ ಚಿತ್ರಕ್ಕೆ ಸಹಿ ಮಾಡಲಿದ್ದಾರೆ.

    ಸದ್ಯ ಕತ್ರಿನಾ ಈಗ ಟೈಗರ್ ಜಿಂದಾ ಹೈ, ಥಗ್ಸ್ ಆಫ್ ಹಿಂದೋಸ್ತಾನ್, ಶಾರೂಖ್ ಜೊತೆ ನಟಿಸುತ್ತಿರುವ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಹಾಲಿವುಡ್ ಸಿನಿಮಾದಲ್ಲೂ ಕೂಡ ನಟಿಸುತ್ತಿದ್ದಾರೆ. ಅವರ ಡೇಟ್ಸ್ ಗಳು ಬಿಡುವಾದಾಗ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

  • ಭಯ ಹುಟ್ಟಿಸುತ್ತಿದೆ ಅಲ್ಲಾವುದ್ದೀನ್ ಖಿಲ್ಜಿಯ ಫಸ್ಟ್ ಲುಕ್!

    ಭಯ ಹುಟ್ಟಿಸುತ್ತಿದೆ ಅಲ್ಲಾವುದ್ದೀನ್ ಖಿಲ್ಜಿಯ ಫಸ್ಟ್ ಲುಕ್!

    ಮುಂಬೈ: ಬಾಲಿವುಡ್ ನ ಬಹು ನಿರೀಕ್ಷಿತ `ಪದ್ಮಾವತಿ’ ಸಿನಿಮಾದ ರಣ್‍ವೀರ್ ಸಿಂಗ್ ಅವರ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರದ ಫಸ್ಟ್ ಲುಕ್ ಔಟ್ ಆಗಿದೆ. ಈ ಮೊದಲು ದೀಪಿಕಾ ಮತ್ತು ಶಾಹಿದ್ ಫಸ್ಟ್ ಲುಕ್ ಮಾತ್ರ ಬಿಡುಗಡೆಗೊಂಡಿತ್ತು.

    ಸಿನಿಮಾದಲ್ಲಿ ಭಗ್ನ ಪ್ರೇಮಿಯಾಗಿ ರಣ್‍ವೀರ್ ಕಾಣಿಸಿಕೊಳ್ಳುತ್ತಿದ್ದಾರೆ. ರಣ್‍ವೀರ್ ಸಿನಿಮಾಗಾಗಿ ಸಂಪೂರ್ಣವಾಗಿ ಅಲ್ಲಾವುದ್ದೀನ್ ಖಲ್ಜಿಯಾಗಿ ಬದಲಾಗಿದ್ದಾರೆ. ಒಟ್ಟು ಎರಡು ಫೋಟೋಗಳು ಚಿತ್ರತಂಡ ಹೊರತಂದಿದೆ. ಒಂದರಲ್ಲಿ ಕಿರೀಟ, ಆಭರಣಗಳನ್ನು ಧರಿಸಿರುವ ರಣ್‍ವೀರ್ ತುಂಬಾ ವಿಭಿನ್ನ ಲುಕ್ ನಲ್ಲಿ ಕಾಣಸಿಗುತ್ತಾರೆ. ಫೋಟೋ ಮುಖಾಂತರವೇ ರಣ್‍ವೀರ್ ಎಷ್ಟೂ ಭಯಬೀಳಸಲಿದ್ದಾರೆ ಎಂದು ಹೇಳಬಹುದಾಗಿದೆ.

    ಇನ್ನೂ ಎರಡನೇ ಫೋಟೋದಲ್ಲಿ ಕೊಳವೊಂದರಲ್ಲಿ ಸ್ನಾನ ಮಾಡುತ್ತಿರುವ ಅಲ್ಲಾವುದ್ದೀನ್ ಖಿಲ್ಜಿಯನ್ನು ನೋಡಬಹುದು. ಈ ಫೋಟೋದಲ್ಲಿ ರಣ್‍ವೀರ್ ಕಣ್ಣುಗಳು ನಿಜಕ್ಕೂ ಒಂದು ಸಾರಿ ಭಯ ಬೀೀಳುವಂತೆ ಮಾಡುತ್ತದೆ.

    ಡಿಸೆಂಬರ್ 1ರಿಂದು ಸಿನಿಮಾ ದೇಶಾದ್ಯಂತ ತೆರೆಕಾಣಲಿದೆ. ಸಿನಿಮಾದಲ್ಲಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ಮಹಾ ರಾವಲ್ ರತನ್‍ಸಿಂಗ್ ರಾಜನ ಪಾತ್ರದಲ್ಲಿ ಶಾಹಿದ್ ಕಪೂರ್ ಮತ್ತು ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣ್‍ವೀರ್ ಕಾಣಿಸಿಕೊಂಡಿದ್ದಾರೆ.

    https://twitter.com/deepikapadukone/status/910673498376364033

    https://twitter.com/deepikapadukone/status/910668862336544768

  • ‘ಪದ್ಮಾವತಿ’ ಚಿತ್ರದ ನಂತರ ತನ್ನ ಹೆಸರನ್ನೇ ಬದಲಿಸಿಕೊಂಡ ಶಾಹಿದ್!

    ‘ಪದ್ಮಾವತಿ’ ಚಿತ್ರದ ನಂತರ ತನ್ನ ಹೆಸರನ್ನೇ ಬದಲಿಸಿಕೊಂಡ ಶಾಹಿದ್!

    ಮುಂಬೈ: ಶಾಹಿದ್ ಕಪೂರ್ ಪದ್ಮಾವತಿ ಸಿನಿಮಾ ಬಳಿಕ ತಮ್ಮ ಹೆಸರನ್ನೇ ಬದಲಿಸಿಕೊಂಡಿದ್ದಾರೆ. ಈಗ ಅವರು ತಮ್ಮ ಹೆಸರನ್ನು ಮಹಾರಾವಲ್ ರತನ್ ಸಿಂಗ್ ಎಂದು ಬದಲಾಯಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಕೂಡ ಮಹಾರಾವಲ್ ರತನ್ ಸಿಂಗ್ ಎಂದು ಹಾಕಿಕೊಂಡಿದ್ದಾರೆ.

    ಪದ್ಮಾವತಿ ಚಿತ್ರದಲ್ಲಿ ಶಾಹಿದ್ ಕಪೂರ್ ರಾಣಿ ಪದ್ಮಾವತಿಯ ಪತಿ ರಾಜಾ ಮಹಾರಾವಲ್ ರತನ್ ಸಿಂಗ್ ಪಾತ್ರದಲ್ಲಿ ನಟಿಸುತ್ತಿದ್ದು ಈ ಪಾತ್ರ ಅವರಿಗೆ ತುಂಬಾ ಇಷ್ಟವಾಗಿರೋ ಕಾರಣ ತಮ್ಮ ಟ್ವಿಟ್ಟರ್ ನಲ್ಲಿನ ಹೆಸರನ್ನೇ ಚೇಂಜ್ ಮಾಡಿದ್ದಾರೆ.

    ಪದ್ಮಾವತಿ ಚಿತ್ರದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ರಾಜಾ ಮಹಾರಾವಲ್ ರತನ್ ಸಿಂಗ್ ಆಗಿ ಶಾಹಿದ್ ಕಪೂರ್ ಕಾಣಿಸಿಕೊಂಡರೆ, ಅಲ್ಲಾವುದ್ದಿನ್ ಖಲ್ಜಿಯಾಗಿ ರಣ್‍ವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸ್ಟಾರ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿದ್ದು ಡಿಸೆಂಬರ್ 1 ರಂದು ದೇಶಾದ್ಯಾಂತ ಬಿಡುಗಡೆಯಾಗಲಿದೆ.

    https://twitter.com/deepikapadukone/status/910668862336544768

    https://twitter.com/deepikapadukone/status/910673498376364033

    https://twitter.com/deepikapadukone/status/912123492979564544

    https://twitter.com/deepikapadukone/status/912118818012512256

  • ಪದ್ಮಾವತಿ ಚಿತ್ರಕ್ಕೆ ಶಾಹಿದ್ ಕಪೂರ್ ರಾಯಲ್ ಕಾಸ್ಟ್ಯೂಮ್ ತಯಾರಾಗಿದ್ದು ಹೀಗೆ

    ಪದ್ಮಾವತಿ ಚಿತ್ರಕ್ಕೆ ಶಾಹಿದ್ ಕಪೂರ್ ರಾಯಲ್ ಕಾಸ್ಟ್ಯೂಮ್ ತಯಾರಾಗಿದ್ದು ಹೀಗೆ

    ಮುಂಬೈ: ಪದ್ಮಾವತಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರ ಫಸ್ಟ್ ಲುಕ್ ನೋಡಿ ಎಲ್ಲರೂ ಹುಬ್ಬೇರಿಸಿದ್ದರು. ಸೋಮವಾರ ಬಿಡುಗಡೆಯಾದ ಶಾಹಿದ್ ಕಪೂರ್ ಅವರ ಮಹಾರಾವಲ್ ರತನ್ ಸಿಂಗ್ ಫಸ್ಟ್ ಲುಕ್ ಕೂಡ ಜನರು ಸಾಕಷ್ಟು ಇಷ್ಟಪಟ್ಟಿದ್ದಾರೆ. ಈ ಚಿತ್ರಕ್ಕೆ ಶಾಹಿದ್ ಕಪೂರ್ ಅವರ ಕಾಸ್ಟ್ಯೂಮ್ ವಿನ್ಯಾಸಕ್ಕಾಗಿಯೇ 4 ತಿಂಗಳು ಹಿಡಿದಿದೆ ಹಾಗೂ 22 ಕಲಾವಿದರು ಡಿಸೈನ್ ಮಾಡಿದ್ದಾರೆ.

    ಪದ್ಮಾವತಿ ಚಿತ್ರದಲ್ಲಿ ಶಾಹಿದ್ ಕಪೂರ್ ಅವರ ಕಾಸ್ಟ್ಯೂಮ್ ವಿನ್ಯಾಸ ಮಾಡುವುದೇ ನಮಗೆ ಚಾಲೆಂಜಿಂಗ್ ಆಗಿತ್ತು. ಚಿತ್ರದಲ್ಲಿ ಶಾಹಿದ್ ಹಾಕುವ ಪ್ರತಿಯೊಂದು ಕಾಸ್ಟ್ಯೂಮ್ ಹಿಂದೆಯೂ ಸಾಕಷ್ಟು ಸಂಶೋಧನೆ ನಡೆದಿದೆ ಎಂದು ಡಿಸೈನರ್ ರಿಂಪಲ್ ಹಾಗೂ ಹರ್‍ಪ್ರೀತ್ ನರುಲಾ ಹೇಳಿದ್ದಾರೆ.

    ಚಿತ್ರದಲ್ಲಿ ನೈಜತೆ ಕಾಪಾಡಿಕೊಳ್ಳುವ ಸಲುವಾಗಿ 14ನೇ ಶತಮಾನದ ಉಡುಗೆಯ ಸ್ಟೈಲ್ ಹಾಗೂ ಚಿತ್ತೂರ್‍ನ ಹವಾಮಾನ ಎಲ್ಲವನ್ನೂ ಪರಿಗಣಿಸಿ ನಂತರ ಕಾಸ್ಟ್ಯೂಮ್ ಅಂತಿಮಗೊಳಿಸಲಾಯ್ತು. ರಾಜಸ್ಥಾನದಿಂದ ಸಾವಯುವ ಬಟ್ಟೆಗಳನ್ನು ತರಿಸಲಾಗಿತ್ತು ಹಾಗೂ 22 ಸ್ಥಳೀಯ ಕಲಾವಿದರು ಕಸೂತಿ ಮಾಡಿದ್ರು. ಮಸ್ಲಿನ್ ಬಟ್ಟೆಯನ್ನೇ ಇಟ್ಟುಕೊಂಡು ಅದಕ್ಕೆ ತರಕಾರಿಯ ಡೈ ಹಾಗೂ ಹ್ಯಾಂಡ್ ಡೈ ಬಳಸಲಾಗಿದೆ ಅಂತ ಹೇಳಿದ್ರು

    4 ತಿಂಗಳ ಈ ಸುದೀರ್ಘ ಪ್ರಕ್ರಿಯೆಯಲ್ಲಿ ಸಂಶೋಧನೆಗಾಗಿಯೇ ಜೈಪುರ್ ಹಾಗೂ ಅಹಮ್ಮದಬಾದ್‍ನ ಮ್ಯೂಸಿಯಂಗಳನ್ನ ಭೇಟಿ ಮಾಡಿದ್ದೇವೆ. ಆಗಿನ ಕಾಲದ ಬಟ್ಟೆಗಳು ಹಾಗೂ ಪುರಾತನ ವಸ್ತ್ರಗಳ ಸ್ಯಾಂಪಲ್‍ಗಳನ್ನ ಜಗತ್ತಿನಾದ್ಯಂತ ಹಲವಾರು ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕೆ ಇಟ್ಟಿರುತ್ತಾರೆ. ಈ ಎಲ್ಲಾ ಮ್ಯೂಸಿಯಂಗಳಿಗೆ ಭೇಟಿ ನೀಡುವ ನಮ್ಮ ಕನಸು ಈಡೇರಿತು. ಕ್ಯಾಲಿಕೋ ಮ್ಯೂಸಿಯಂ ಮತ್ತು ಜೈಪುರ್‍ನ ಕೆಲವು ಮ್ಯೂಸಿಯಂಗಳಿಗೆ ನಾವು ಭೇಟಿ ನೀಡಿದೆವು. ಸಾಮಾನ್ಯವಾಗಿ ಮಾರ್ಕೆಟ್‍ಗಳಲ್ಲಿ ಪುರಾತನ ಶೈಲಿಯ ಆಭರಣಗಳನ್ನ ಸಂಗ್ರಹಿಸೋ ಅಭ್ಯಾಸವಿತ್ತು. ಅದನ್ನೆಲ್ಲಾ ಇಲ್ಲಿ ಬಳಸಿಕೊಂಡೆವು ಎಂದು ರಿಂಪಲ್ ತಿಳಿಸಿದ್ರು.

    https://twitter.com/deepikapadukone/status/912123492979564544

    https://twitter.com/deepikapadukone/status/912118818012512256

    https://twitter.com/deepikapadukone/status/910673498376364033

    https://twitter.com/deepikapadukone/status/910668862336544768

  • ಪದ್ಮಾವತಿಯ ಪತಿ ಮಹಾರಾವಲ್ ರತನ್ ಸಿಂಗ್ ಫಸ್ಟ್ ಲುಕ್ ಔಟ್!

    ಪದ್ಮಾವತಿಯ ಪತಿ ಮಹಾರಾವಲ್ ರತನ್ ಸಿಂಗ್ ಫಸ್ಟ್ ಲುಕ್ ಔಟ್!

    ಮುಂಬೈ: ಬಾಲಿವುಡ್‍ನ ಭಾರತೀಯ ಐತಿಹಾಸಿಕ ಕಥಾ ಹಂದರವುಳ್ಳ `ಪದ್ಮಾವತಿ’ ಸಿನಿಮಾದ ಒಂದೊಂದೆ ಲುಕ್‍ಗಳು ಬಿಡುಗಡೆಯಾಗುತ್ತಿವೆ. ಗುರುವಾರ ರಾಣಿ ಪದ್ಮಾವತಿ ಪಾತ್ರದಲ್ಲಿ ಅಭಿನಯಿಸುತ್ತಿರುವ ದೀಪಿಕಾ ಪಡುಕೋಣೆ ಅವರ ಪದ್ಮಾವತಿಯ ಫಸ್ಟ್ ಲುಕ್ ಅನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿತ್ತು.

    ಇಂದು ಪದ್ಮಾವತಿಯ ಪತಿಯಾಗಿ ಮಹಾರಾವಲ್ ರತನ್ ಸಿಂಗ್‍ನ ಪಾತ್ರದಲ್ಲಿ ನಟಿಸುತ್ತಿರುವ ಶಾಹಿದ್ ಕಪೂರ್ ಅವರ ಫಸ್ಟ್ ಲುಕ್ ಬಿಡುಗೊಡೆಗೊಂಡಿದೆ. ಈ ಪೋಸ್ಟ್ ನಲ್ಲಿ ರಣರಂಗದಲ್ಲಿ ರಕ್ತದ ಮಡುವಿನಲ್ಲಿ ಕತ್ತಿ ಹಿಡಿದು ಯುದ್ಧ ಮಾಡುತ್ತಿರುವ ಲುಕ್‍ನಲ್ಲಿ ಶಾಹಿದ್ ಕಾಣಿಸಿಕೊಂಡಿದ್ದಾರೆ.

    ಬನ್ಸಾಲಿ ನಿರ್ದೇಶನದ ಮೂಲಕ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರದಲ್ಲಿ ರಣ್‍ವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರ ಡಿಸೆಂಬರ್ 1 ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.

    https://www.instagram.com/p/BZcgO2XAAd2/?taken-by=shahidkapoor

    https://www.instagram.com/p/BZcdGQDgFFY/?taken-by=shahidkapoor

    https://www.instagram.com/p/BZSLlrhAhxt/?taken-by=shahidkapoor

    https://www.instagram.com/p/BZSKO_bAWCB/?taken-by=shahidkapoor

  • ಮಹಾರಾಣಿ ಪದ್ಮಾವತಿಯ ಫಸ್ಟ್ ಲುಕ್ ಔಟ್-ಒಂದಿಷ್ಟು ನಿರಾಸೆ!

    ಮಹಾರಾಣಿ ಪದ್ಮಾವತಿಯ ಫಸ್ಟ್ ಲುಕ್ ಔಟ್-ಒಂದಿಷ್ಟು ನಿರಾಸೆ!

    ಮುಂಬೈ: ಬಾಲಿವುಡ್‍ನ ಬಹುನಿರೀಕ್ಷಿತ ಪದ್ಮಾವತಿ ಚಿತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಚಿತ್ರದ ಮೊದಲ ಲುಕ್ ನ್ನು ನೋಡಲು ಅಭಿಮಾನಿಗಳು ತುಂಬಾ ಕುತೂಹಲದಿಂದ ಕಾಯುತ್ತಿದ್ದರು.

    ರಾಣಿ ಪದ್ಮಾವತಿಯಾಗಿ ದೀಪಿಕಾ ಕಾಣಿಸುತ್ತಿದ್ದು, ರಾಜಸ್ಥಾನ ಶೈಲಿಯ ಉಡುಪಿನಲ್ಲಿ ಕಾಣಿಸಿದ್ದಾರೆ. ದೇವಸ್ಥಾನದ ಗರ್ಭಗುಡಿಯಲ್ಲಿ ತದೇಕ ಚಿತ್ತದ ನೋಟವನ್ನು ಪೋಸ್ಟರ್ ನಲ್ಲಿ ಕಾಣಬಹುದಾಗಿದೆ. ಇನ್ನೊಂದು ಕಡೆ ಕೈ ಮುಗಿದು ನಿಂತಿರುವ ಫೋಟೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

    ಒಂದಿಷ್ಟು ನಿರಾಸೆ: ಅಭಿಮಾನಿಗಳು ಕೂತುಹಲದಿಂದ ಫಸ್ಟ್ ಲುಕ್ ಗಾಗಿ ಕಾದಿದ್ದರು. ಇಂದು ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ರಣ್‍ವೀರ್ ಮತ್ತು ಶಾಹಿದ್ ಅಭಿಮಾನಿಗಳಲ್ಲಿ ಕೊಂಚ ನಿರಾಸೆಯನ್ನುಂಟು ಮಾಡಿದೆ. ಕಾರಣ ಪೋಸ್ಟರ್ ನಲ್ಲಿ ರಣ್‍ವೀರ್ ಮತ್ತು ಶಾಹಿದ್ ಕಾಣಿಸಿಕೊಂಡಿಲ್ಲ.

    ದೀಪಿಕಾ ಪಡುಕೋಣೆ, ರಣ್‍ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ತಮ್ಮ ಟ್ವಿಟರ್ ನಲ್ಲಿ ಪದ್ಮಾವತಿ ಆಗಮಿಸಲಿದ್ದಾಳೆ ಎಂದು ಬರೆದುಕೊಂಡಿದ್ದರು. ಪದ್ಮಾವತಿ ಚಿತ್ರದ ಲೋಗೋವನ್ನು ಹಾಕಿ, ನಾಳೆ ಸೂರ್ಯೋದಯದ ಜೊತೆ ಪದ್ಮಾವತಿ ಬರುತ್ತಿದ್ದಾಳೆ ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದರು.

    ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾಹಿದ್ ಕಪೂರ್ ರಾಣಿ ಪದ್ಮಾವತಿಯ ಪತಿಯಾಗಿ ಕಾಣಿಸಿಕೊಳ್ಳಲಿದ್ದು, ಅಲ್ಲಾವುದ್ದಿನ್ ಖಿಲ್ಜಿಯಾಗಿ ರಣ್‍ವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರವು ಡಿಸೆಂಬರ್ 1ರಂದು ಬಿಡುಗಡೆಯಾಗಲಿದೆ.

    https://twitter.com/deepikapadukone/status/910673498376364033

    https://twitter.com/deepikapadukone/status/910668862336544768

    https://twitter.com/deepikapadukone/status/910436613272072192

    https://twitter.com/deepikapadukone/status/910427579575758848

  • ನಾಳೆ ಸೂರ್ಯೋದಯದೊಂದಿಗೆ ಬರಲಿದ್ದಾಳೆ ಪದ್ಮಾವತಿ!

    ನಾಳೆ ಸೂರ್ಯೋದಯದೊಂದಿಗೆ ಬರಲಿದ್ದಾಳೆ ಪದ್ಮಾವತಿ!

    ಮುಂಬೈ: ಬಾಲಿವುಡ್‍ನ ಬಹುನಿರೀಕ್ಷಿತ ಪದ್ಮಾವತಿ ಚಿತ್ರದ ಫಸ್ಟ್ ಲುಕ್ ಗುರುವಾರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

    ಕೊನೆಗೂ ಚಿತ್ರದ ಮೊದಲ ಲುಕ್ ನ್ನು ನೋಡಲು ಅಭಿಮಾನಿಗಳು ತುಂಬಾ ಕುತೂಹಲದಿಂದ ಕಾಯುತ್ತಿದ್ದಾರೆ. ದೀಪಿಕಾ ಪಡುಕೋಣೆ ಕೂಡ ತಮ್ಮ ಸಂತೋಷವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಪದ್ಮಾವತಿ ಚಿತ್ರದ ಲೋಗೋವನ್ನು ಹಾಕಿ, ನಾಳೆ ಸೂರ್ಯೋದಯದ ಜೊತೆ ಪದ್ಮಾವತಿ ಬರುತ್ತಿದ್ದಾಳೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಪೋಸ್ಟ್ ಮಾಡಿ ಒಂದು ಗಂಟೆಯೊಳಗೆ 159 ರಿಪ್ಲೈ, 338 ರೀ-ಟ್ವೀಟ್ ಮತ್ತು 1,500 ಲೈಕ್‍ಗಳು ಬಂದಿವೆ. ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾಹಿದ್ ಕಪೂರ್ ರಾಣಿ ಪದ್ಮಾವತಿಯ ಪತಿಯಾಗಿ ಕಾಣಿಸಿಕೊಳ್ಳಲಿದ್ದು, ಅಲ್ಲಾವುದ್ದಿನ್ ಖಿಲ್ಜಿಯಾಗಿ ರಣ್‍ವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಇದೇ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

    https://twitter.com/deepikapadukone/status/910436613272072192

    https://twitter.com/deepikapadukone/status/910427579575758848

  • ದಿಢೀರ್ ಅಂತಾ `ಪದ್ಮಾವತಿ’ ರಿಲೀಸ್ ಡೇಟ್ ಈ ಕಾರಣಕ್ಕೆ ಬದಲಾಯ್ತು!

    ದಿಢೀರ್ ಅಂತಾ `ಪದ್ಮಾವತಿ’ ರಿಲೀಸ್ ಡೇಟ್ ಈ ಕಾರಣಕ್ಕೆ ಬದಲಾಯ್ತು!

    ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಪದ್ಮಾವತಿ ಚಿತ್ರದ ಬಿಡುಗಡೆಯ ದಿನಾಂಕವನ್ನು ದಿಢೀರ್ ಅಂತಾ ಬದಲಾಯಿಸಿದ್ದು, ನವೆಂಬರ್ ನಿಂದ ಏಪ್ರಿಲ್ ಗೆ ಪೋಸ್ಟ್ ಪೋನ್ ಮಾಡಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.

    ಧಾರ್ಮಿಕ ಸಂಘಟನೆಯೊಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆ ಮಾಡಿ ಸಿನಿಮಾ ಸೆಟ್‍ಗಳಿಗೆ ಬೆಂಕಿ ಹಚ್ಚಿದ್ದರು. ಈಗ ಶೇ.95ರಷ್ಟು ಭಾಗದಷ್ಟು ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಇನ್ನೂ ಕೇವಲ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳು ಬಾಕಿ ಉಳಿದುಕೊಂಡಿವೆ. ಈ ನಡುವೆ ಶಾಹೀದ್ ಹಾಗೂ ದೀಪಿಕಾ ಫ್ಯಾಮಿಲಿ ವೇಕೆಷನ್ ಅಂತಾ ಹೋಗಿದ್ದರು. ಕೆಲವು ದಿನಗಳಿಂದ ಪದ್ಮಾವತಿ ಚಿತ್ರ 2018 ಏಪ್ರಿಲ್ ನಲ್ಲಿ ಬಿಡುಗೆಡೆಯಾಗಲಿದೆ ಎನ್ನುವುದಾಗಿ ವರದಿಯಾಗುತ್ತಿದೆ.

    ಇದನ್ನೂ ಓದಿ: ಪದ್ಮಾವತಿ ಸಿನಿಮಾದಿಂದ ಹಿಂದೆ ಸರಿದ ಸಲ್ಮಾನ್ ಖಾನ್!

    ಏಪ್ರಿಲ್‍ನಲ್ಲೇ ಯಾಕೆ?: ಏಪ್ರಿಲ್ ತಿಂಗಳಿನಲ್ಲಿ ಬಾಹುಬಲಿ ಬಿಡುಗಡೆಯಾಗಿತ್ತು. ಆ ವೇಳೆ ಶಾಲಾ ರಜೆಗಳು ಪ್ರಾರಂಭಗೊಳ್ಳುತ್ತವೆ. ಆದರೆ ನವೆಂಬರ್ ತಿಂಗಳಿನಲ್ಲಿ ಯಾವುದೇ ರಜೆಗಳಿಲ್ಲದ ಕಾರಣ ಚಿತ್ರವನ್ನು ಏಪ್ರಿಲ್‍ನಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಸಮಯದಲ್ಲಿ ಬಿಡುಗಡೆಯಾದರೆ ಸುಮಾರು 150 ಕೋಟಿ ರೂ. ಹಣವನ್ನು ಪದ್ಮಾವತಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ.

    ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ಕೆಲವು ತಿಂಗಳು ನಡೆಯಲಿದೆ. ಚಿತ್ರದಲ್ಲಿ ಹಲವು ಯುದ್ಧದ ಶೂಟಿಂಗ್ ನಡೆಯಲಿರುವುದರಿಂದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ ಎನ್ನಲಾಗಿದೆ. ಸಿನಿಮಾದಲ್ಲಿ ಶಾಹೀದ್, ರಣ್‍ವೀರ್ ಮತ್ತು ದೀಪಿಕಾರ ಮುಖ್ಯ ಸನ್ನಿವೇಶಗಳು ಚಿತ್ರೀಕರಣ ನಡೆಯಬೇಕಿದೆ.

    ಪದ್ಮಾವತಿ ಬಿಡುಗಡೆ ಯಾವಾಗ ಆಗಲಿದೆ ಎನ್ನುವ ಬಗ್ಗೆ ತ್ರತಂಡ ಇದೂವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ.

    ಇದನ್ನೂ ಓದಿ: ರಣ್‍ವೀರ್, ಶಾಹೀದ್‍ಗಿಂತ ಇಷ್ಟು ಹೆಚ್ಚು ಸಂಭಾವನೆ ಪಡೆದ ದೀಪಿಕಾ!

  • ರಣ್‍ವೀರ್, ಶಾಹೀದ್‍ಗಿಂತ ಇಷ್ಟು ಹೆಚ್ಚು ಸಂಭಾವನೆ ಪಡೆದ ದೀಪಿಕಾ!

    ರಣ್‍ವೀರ್, ಶಾಹೀದ್‍ಗಿಂತ ಇಷ್ಟು ಹೆಚ್ಚು ಸಂಭಾವನೆ ಪಡೆದ ದೀಪಿಕಾ!

    ಮುಂಬೈ: ಭಾರತೀಯ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕರಿಗಿಂತಲೂ ಹೆಚ್ಚು ಸಂಭಾವನೆಯನ್ನು ದೀಪಿಕಾ ಪಡುಕೋಣೆ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಪದ್ಮಾವತಿಯಲ್ಲಿ ತನ್ನ ಜೊತೆ ನಟಿಸುವ ನಟರಿಬ್ಬರಿಗಿಂತಲೂ ಹೆಚ್ಚಿನ ಸಂಭಾವನೆಯನ್ನು ದೀಪಿಕಾ ಪಡೆದುಕೊಂಡಿದ್ದಾರೆ.

    ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಪಡುಕೊಣೆ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ಈ ಸಿನಿಮಾ ಭಾರತೀಯ ಸಿನಿಮಾದಲ್ಲಿ ಒಂದು ಹೊಸ ದಾಖಲೆ ಬರೆಯಲಿದೆ ಎಂದು ಹೇಳಲಾಗುತ್ತಿದೆ. ಬೇರೆ ಸಿನಿಮಾಗಳಲ್ಲಿ ನಾಯಕರು ನಟಿಯರಿಗಿಂತ ಹೆಚ್ಚು ಸಂಭಾವನೆ ಪಡೆದುಕೊಳುತ್ತಿದ್ದರು. ಆದರೆ ಪದ್ಮಾವತಿಯಾಗಿ ದೀಪಿಕಾ ಹೆಚ್ಚು ಸಂಭಾವನೆ ಮನೆಗೆ ತಗೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ.

    ಮೂಲಗಳ ಪ್ರಕಾರ ಪದ್ಮಾವತಿ ಸಿನಿಮಾದ ಸಂಭಾವನೆ ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿ ಬರುತ್ತಿದ್ದವು. ಈ ಸಿನಿಮಾ ದೀಪಿಕಾಗೆ ಸೇರಿದ್ದು ಎಂದು ಬನ್ಸಲಿ ಸ್ಪಷ್ಟಪಡಿಸಿದ್ದಾರೆ. ಸಂಭಾವನೆ ವಿಷಯಕ್ಕೆ ಬಂದರೆ ದೀಪಿಕಾ 13 ಕೋಟಿ ರೂ. ಪಡೆದಿದ್ದರೆ, ರಣ್‍ವೀರ್ ಹಾಗೂ ಶಾಹೀದ್ 10 ಕೋಟಿ ರೂ. ಪಡೆದುಕೊಂಡಿದ್ದಾರೆ.

    ಪದ್ಮಾವತಿ ಚಿತ್ರಕ್ಕಾಗಿ ಹೆಚ್ಚು ಸಂಭಾವನೆ ಪಡೆದ ದೀಪಿಕಾ ಬಾಲಿವುಡ್‍ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಅವರ ಪಾತ್ರ ಮತ್ತು ಪಾತ್ರದ ಪ್ರಾಮುಖ್ಯತೆಯಿಂದಾಗಿ ಜನಪ್ರಿಯವಾಗಿದ್ದಾರೆ. ಪದ್ಮಾವತಿ ಸಿನಿಮಾ ನವೆಂಬರ್ 2017ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

     

  • ಶಾಹಿದ್ ಕಪೂರ್ ಹಾಟ್ ಫೋಟೋಗೆ ಪತ್ನಿ ಕಮೆಂಟ್ ಮಾಡಿದ್ದು ಹೀಗೆ

    ಶಾಹಿದ್ ಕಪೂರ್ ಹಾಟ್ ಫೋಟೋಗೆ ಪತ್ನಿ ಕಮೆಂಟ್ ಮಾಡಿದ್ದು ಹೀಗೆ

    ಮುಂಬೈ: ಬಾಲಿವುಡ್‍ನ ಕ್ಯೂಟ್ ಸ್ಟಾರ್ ಶಾಹಿದ್ ಕಪೂರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಸಖತ್ ಹಾಟ್ ಆಗಿರೋ ಫೋಟೋವನ್ನು ಅಪ್ಲೋಡ್ ಮಾಡಿದ್ದು, ಫೋಟೋ ನೋಡಿದ ಪತ್ನಿ ಮೀರಾ ಇದಕ್ಕೆ ಕಮೆಂಟ್ ಮಾಡಿದ್ದಾರೆ.

    https://www.instagram.com/p/BWO6emLAfbM/?taken-by=shahidkapoor

    ಶುಕ್ರವಾರದಂದು ಮೀರಾ- ಶಾಹಿದ್ ದಂಪತಿ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದು, ಬಹುಶಃ ಇಬ್ಬರ ಲವ್ವಿ ಡವ್ವಿ ಫೋಟೋ ಬರಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ರು. ಆದ್ರೆ ಶಾಹಿದ್ ತನ್ನ ಜಿಮ್ ಬಾಡಿ ತೋರಿಸುವಂತಹ ಶರ್ಟ್‍ಲೆಸ್ ಫೋಟೋವನ್ನ ಹಾಕಿ `ಬೆಳಗ್ಗೆ ಬೆಳಗ್ಗೆ ಕೆಲಸ ಆರಂಭ’ ಎಂದು ಬರೆದು ಪೋಸ್ಟ್ ಮಾಡಿದ್ರು. ಈ ಫೋಟೋಗೆ ಪತ್ನಿ ಮೀರಾ ಕೂಡ ಮನಸೋತು ಮೂರು ಫೈರ್ ಎಮೋಜಿ ಜೊತೆಗೆ ಪ್ರೀತಿಯಲ್ಲಿ ಬಿದ್ದಿರೋದನ್ನ ಸೂಚಿಸೋ ಎಮೋಜಿ ಹಾಕಿ ಕಮೆಂಟ್ ಮಡಿದ್ದಾರೆ.

    ಯುವ ದಂಪತಿಯಾದ ಶಾಹಿದ್ ಮತ್ತು ಮೀರಾ ಜುಲೈ 7, 2015 ರಂದು ಸಂಪ್ರದಾಯಬದ್ದವಾಗಿ ವಿವಾಹವಾಗಿದ್ದರು. ಈ ಕ್ಯೂಟ್ ಜೋಡಿಗೆ ಅಗಸ್ಟ್ 26, 2016ರಂದು ಮುದ್ದಾದ ಹೆಣ್ಣು ಮಗು ಹುಟ್ಟಿದ್ದು, ತಾರಾ ಜೋಡಿ ತಮ್ಮ ಹೆಸರುಗಳ ಮೊದಲ ಅಕ್ಷರ ಸೇರಿಸಿ ಮಗುವಿಗೆ `ಮಿಶಾ’ ಎಂದು ಹೆಸರಿಟ್ಟಿದ್ದಾರೆ.

    ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ಪದ್ಮಾವತಿ’ ಸಿನಿಮಾದಲ್ಲಿ ಶಾಹಿದ್ ನಟಿಸುತ್ತಿದ್ದು, ರಾಣಿ ಪದ್ಮಾವತಿ ಪಾತ್ರದಲ್ಲಿ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಬಣ್ಣ ಹಚ್ಚಿದ್ದಾರೆ. ಇಲ್ಲಿ ಪದ್ಮಾವತಿಯ ಪತಿ ರಾಣಾ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಾಣಿಸಿಕೊಂಡಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಬಣ್ಣ ಹಚ್ಚಿದ್ದಾರೆ.

     

    https://www.instagram.com/p/BU2HgEIAxPL/?taken-by=shahidkapoor

    https://www.instagram.com/p/BRLqRxIggeE/?taken-by=shahidkapoor

    https://www.instagram.com/p/BUwKiQjgFO0/?taken-by=shahidkapoor

    https://www.instagram.com/p/BTViH4ogfZN/?taken-by=shahidkapoor

    https://www.instagram.com/p/BTvZXJsgLXG/?taken-by=shahidkapoor

    https://www.instagram.com/p/BTiesQHApfC/?taken-by=shahidkapoor