ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಇತ್ತೀಚಿಗೆ ಒಬೇರಾಯ್ ರಿಯೇಟರ್ಸ್‍ನ ತ್ರೀ ಸಿಕ್ಸ್ ಟಿ ವೆಸ್ಟ್ ಪ್ರಾಜೆಕ್ಟ್ ನಲ್ಲಿ 55.60 ಕೋಟಿ ರೂ. ಹಣ ನೀಡಿ ಡ್ಯೂಪ್ಲೆಕ್ಸ್ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ.
ಮುಂಬೈನ ವೊರ್ಲಿ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ತ್ರೀ ಸಿಕ್ಸ್ ಟಿ ವೆಸ್ಟ್ ಅಪಾರ್ಟ್ ಮೆಂಟ್‍ನಲ್ಲಿ ಶಾಹಿದ್ ಡ್ಯೂಪ್ಲೆಕ್ಸ್ ಹೌಸ್ ಖರೀದಿಸಿದ್ದಾರೆ. ಸಮುದ್ರ ಮುಂದೆಯಿರುವ ಈ ಅಪಾರ್ಟ್‍ಮೆಂಟ್‍ಗೆ ಶಾಹಿದ್ 55.60 ಕೋಟಿ ರೂ. ನೀಡಿದ್ದಾರೆ. ಅಲ್ಲದೇ 3 ಕೋಟಿ ರೂ. ಅನ್ನು ಸ್ಟಾಂಪ್ ಡ್ಯೂಟಿ ಆಗಿ ನೀಡಿ ರಿಜಿಸ್ಟ್ರೇಶನ್ ಮಾಡಿಕೊಂಡಿದ್ದಾರೆ.
ಶಾಹಿದ್ ಹಾಗೂ ಅವರ ಪತ್ನಿ ಮೀರಾ ರಜ್‍ಪೂತ್ ಅವರ ಹೆಸರಿನಲ್ಲಿ ಈ ಅಪಾರ್ಟ್ ಮೆಂಟ್ ರಿಜಿಸ್ಟರ್ ಆಗಿದೆ. ವರದಿಗಳ ಪ್ರಕಾರ ಈ ಅಪಾರ್ಟ್ ಮೆಂಟ್ 8,625 ಚದರ ಅಡಿ ಹೊಂದಿದ್ದು, 6 ಪಾರ್ಕಿಂಗ್ ಸ್ಥಳ ಸಿಗಲಿದೆ.
ಈಗಾಗಲೇ ಈ ವೋರ್ಲಿ ಅಪಾರ್ಟ್‍ಮೆಂಟ್‍ನಲ್ಲಿ ನಟ ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ, ಅಭಿಷೇಕ್ ಹಾಗೂ ಐಶ್ವರ್ಯ ರೈ ಬಚ್ಚನ್ ವಾಸಿಸುತ್ತಿದ್ದಾರೆ. ಈಗ ಶಾಹಿದ್ ಕೂಡ ಇದೇ ಅಪಾರ್ಟ್ ಮೆಂಟ್‍ನಲ್ಲಿ ವಾಸಿಸಲಿದ್ದಾರೆ.
ಸದ್ಯ ಜುಹು ಪ್ರದೇಶದಲ್ಲಿ ತನ್ನ ಕುಟುಂಬದವರ ಜೊತೆ ವಾಸಿಸುತ್ತಿರುವ ಶಾಹಿದ್ ತಮ್ಮ ಮನೆಯ ಫೊಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮ ಮಗಳ ಜೊತೆ ಜುಹು ಮನೆಯಲ್ಲಿ ಸಮಯ ಕಳೆಯುತ್ತಿರುವ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮುಂಬೈ: ಬಿ-ಟೌನ್‍ನ ಕ್ಯೂಟ್ ಜೋಡಿಗಳಾದ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ದಂಪತಿ ತಮ್ಮ ಎರಡನೇ ಮಗುವಿನ ಆಗಮನವನ್ನು ಸ್ವಾಗತಿಸುವ ಸಂತಸದಲ್ಲಿದ್ದಾರೆ.
ಭಾನುವಾರದಂದು ಮೀರಾ ಅವರ ಎರಡನೇ ಸೀಮಂತ ಕಾರ್ಯಕ್ರಮ ನಡೆಯಿತು. ಶಾಹಿದ್ ಕಪೂರ್ ಮುದ್ದಿನ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಿಯ ಗೆಳೆಯರು ಹಾಗೂ ಕುಟುಂಬದವರೊಂದಿಗೆ ಸಂಭ್ರಮಿಸಿದರು. ಪಂಕಜ್ ಕಪೂರ್, ಜಾನ್ವಿ ಕಪೂರ್ ಹಾಗೂ ಇಶಾನ್ ಖಟ್ಟರ್ ಸೇರಿದಂತೆ ಹಲವರು ಸಂಭ್ರಮದಲ್ಲಿ ಭಾಗಿಯಾಗಿದ್ದರು
ಕಾರ್ಯಕ್ರಮದಲ್ಲಿ ಮೀರಾ ಆಫ್ ಶೋಲ್ಡರ್ ಪೋಲ್ಕಾ ಡಾಟ್ ಡ್ರೆಸ್ ಹಾಗೂ ಶಾಹಿದ್ ಕಪೂರ್ ಫ್ಲಾರಲ್ ಶರ್ಟ್ ಧರಿಸಿ ಕೂಲ್ ಆಗಿ ತಮ್ಮ ಖುಷಿಯನ್ನು ಸಂಭ್ರಮಿಸಿದರು.
ಶಾಹಿದ್ ಹಾಗೂ ಮೀರಾ ಅವರ ಪುತ್ರಿ ಮಿಶಾ ಕೈಯಲ್ಲಿ `ಹಿರಿಯ ಸಹೋದರಿ’ ಎಂದು ಬರೆದಿದ್ದ ಬಲೂನ್‍ನನ್ನು ಹಿಡಿದು ಪೋಸ್ ಕೊಟ್ಟಿರುವ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ದಂಪತಿ ಶೇರ್ ಮಾಡಿದ್ದಾರೆ. ಈ ಮೂಲಕ ದಂಪತಿಯು ತಮ್ಮ ಎರಡನೇ ಮಗುವಿನ ಆಗಮನದ ವಿಷಯವನ್ನು ಅಭಿಮಾನಿಗಳಿಗೆ ಹೊಸ ಬಗೆಯಲ್ಲಿ ತಿಳಿಸಿದ್ದಾರೆ.
ಶಾಹಿದ್ ಹಾಗೂ ಮೀರಾ 2015ರ ಜುಲೈ 7 ರಂದು ದೆಹಲಿಯಲ್ಲಿ ವಿವಾಹವಾಗಿದ್ದರು. 2016ರ ಆಗಸ್ಟ್ 26 ರಂದು ಅವರ ಮೊದಲ ಮಗವನ್ನು ದಂಪತಿ ಸ್ವಾಗತಿಸಿದ್ದರು. ಹಾಗೆಯೇ ಶಾಹಿದ್ ಹಾಗೂ ಮೀರಾ ಇಬ್ಬರ ಹೆಸರಿನ ಮೊದಲ ಅಕ್ಷರವನ್ನು ಜೋಡಿಸಿ ಅವರ ಮಗಳಿಗೆ ‘ಮಿಶಾ’ ಎಂದು ನಾಮಕರಣ ಮಾಡಿದ್ದರು.
ಮುಂಬೈ: ನನ್ನ ಪತಿ ಶಾಹಿದ್ ಕಪೂರ್ ರನ್ನು ಮನೆಯಿಂದ ಹೊರಹಾಕಿದ್ದೆ ಎಂದು ಪತ್ನಿ ಮೀರಾ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಇತ್ತೀಚಿಗೆ ನಟ ಶಾಹಿದ್ ಕಪೂರ್ ಹಾಗೂ ಪತ್ನಿ ಮೀರಾ, ನೇಹಾ ದುಪಿಯಾ ನಡೆಸಿಕೊಡುವ ಬಿಎಫ್‍ಎಫ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮೀರಾ ಈ ಹಿಂದೆ ಶಾಹಿದ್ ರನ್ನು ಮನೆಯಿಂದ ಹೊರಹಾಕಿದ್ದೆ ಎಂದು ತಿಳಿಸಿದರು.
ಶಾಹಿದ್ ಪದ್ಮಾವತ್ ಚಿತ್ರದ ಶೂಟಿಂಗ್ ಮುಗಿಸಿ ಬಂದಿದ್ದಾಗ ಅವರನ್ನು ಮನೆಯಿಂದ ಹೊರಹಾಕಿದ್ದೆ. ಅವರು ಬೆಳಗ್ಗೆ 8 ಗಂಟೆಗೆ ಶೂಟಿಂಗ್ ಮುಗಿಸಿಕೊಂಡು ಬಂದು ಮಧ್ಯಾಹ್ನ 2 ಗಂಟೆಗೆ ಏಳುತ್ತಿದ್ದರು. ಇಡೀ ರಾತ್ರಿ ಸಿನಿಮಾ ಶೂಟಿಂಗ್‍ನಲ್ಲಿ ತೊಡಗಿ ಮನೆಗೆ ಬಂದು ಮಲಗುವ ಸಮಯದಲ್ಲಿ ಅವರಿಗೆ ಯಾವುದೇ ರೀತಿ ತೊಂದರೆ ಆಗಬಾರದೆಂಬುದು ನನಗೆ ತಿಳಿದಿತ್ತು. ಆದರೆ ಅದೇ ಸಮಯದಲ್ಲಿ ನನ್ನ ಮಗಳು ಮಿಷಾ ಕೂಡ ಆಟವಾಡುತ್ತಿದ್ದಳು. ಮಿಷಾಳ ಗಲಾಟೆ ಕೇಳಿ ಶಾಹಿದ್ ಈ ಬಗ್ಗೆ ಎನ್ನನ್ನೂ ಮಾತನಾಡಲಿಲ್ಲ. ಆದರೆ ಅವರಿಗೆ ಡಿಸ್ಟರ್ಬ್ ಆಗುತ್ತಿತ್ತು ಎಂಬುದು ನನಗೆ ತಿಳಿಯಿತು. ಇದೇ ವೇಳೆ ನಾನು ಮಿಷಾಗೆ ಸುಮ್ಮನಿರಲು ಹೇಳಲು ಸಾಧ್ಯವಿಲ್ಲ. ಇದರಿಂದಾಗಿ ನಾನು ಶಾಹಿದ್‍ರನ್ನು ಮನೆಯಿಂದ ಹೊರಗೆ ಕಳುಹಿಸಿ ಹೊಟೇಲ್‍ನಲ್ಲಿ ತಂಗಲು ಹೇಳಿದ್ದೆ ಎಂದು ಮೀರಾ ಹೇಳಿದರು.
ಆಗ ಶಾಹಿದ್ ಕಪೂರ್ ತನ್ನ ಜುಹು ಮನೆಯನ್ನು ಬಿಟ್ಟು, ಸಿನಿಮಾ ಸೆಟ್‍ಗೆ ಹತ್ತಿರವಿದ್ದ ಗುರ್ ಗಾಂವ್‍ನ ಸ್ಟಾರ್ ಹೊಟೇಲಿನಲ್ಲಿ ತಂಗಿದ್ದರು ಎಂದು ಮೀರಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಸದ್ಯ ಶಾಹಿದ್ ಕಪೂರ್ ‘ಬತ್ತಿ ಗುಲ್ ಮೀಟರ್ ಚಾಲೂ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್ ಹಾಗೂ ಯಾಮಿ ಗೌತಮ್ ನಾಯಕಿಯರಾಗಿ ನಟಿಸುತ್ತಿದ್ದಾರೆ.
ಮುಂಬೈ: ಫೆಬ್ರವರಿ 1ರಂದು ನಗರದಲ್ಲಿ ಖಾಸಗಿ ಮಾಧ್ಯಮವೊಂದು ಮೋಸ್ಟ್ ಸ್ಟೈಲಿಶ್ ಅವಾರ್ಡ್-2018 ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಪ್ರಶಸ್ತಿ ಸಮಾರಂಭಕ್ಕೆ ಬಾಲಿವುಡ್‍ನ ಎಲ್ಲ ತಾರೆಯರು ಆಗಮಿಸಿ, ಕಲರ್ ಕಲರ್ ಡ್ರೆಸ್ ಗಳಲ್ಲಿ ಮಿಂಚಿದ್ದರು. ಬಾಲಿವುಡ್ ತಾರೆಯರು ತಮ್ಮ ಜೋಡಿಗಳೊಂದಿಗೆ ರೆಡ್ ಕಾರ್ಪೆಟ್ ನಲ್ಲಿ ನಡೆದು ಮಿಂಚು ಹರಿಸಿದ್ದರು.
ಇದೇ ಕಾರ್ಯಕ್ರಮಕ್ಕೆ ಬಾಲಿವುಡ್ ಕ್ಯೂಟ್ ಆ್ಯಂಡ್ ಯಂಗ್ ಕಪಲ್ ಶಾಹಿದ್ ಕಪೂರ್ ತಮ್ಮ ಪತ್ನಿ ಮೀರಾ ರಜಪೂತ್ ಜೊತೆ ಆಗಮಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಶಾಹಿದ್ ಕಪೂರ್ ಮತ್ತು ಮೀರಾ ಮಾಧ್ಯಮಗಳೊಂದಿಗೆ ‘ಪದ್ಮಾವತ್’ ಸಿನಿಮಾದ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಪಕ್ಕದಲ್ಲಿ ನಟಿ ವಾಣಿ ಕಪೂರ್ ಆಗಮಿಸುತ್ತಿದ್ದಂತೆ ಶಾಹಿದ್ ಮಾಧ್ಯಮಗೋಷ್ಠಿಯನ್ನು ಅರ್ಧಕ್ಕೆ ಬಿಟ್ಟು ಹೋಗಿ ಹಗ್ ಮಾಡಿಕೊಂಡು ಬರ ಮಾಡಿಕೊಂಡರು.
ಶಾಹಿದ್ ಪಕ್ಕದಲ್ಲಿ ನಿಂತಿದ್ದ ಪತ್ನಿ ಮೀರಾ ದೂರದಿಂದಲೇ ಮುಗಳ್ನಕ್ಕರು. ಆದ್ರೆ ಮೀರಾ ಮುಖದಲ್ಲಾದ ಆ ಕ್ಷಣದ ಭಾವನೆಗಳು ಮಾತ್ರ ಬೇಸರ ತೋರಿಸುವಂತಿತ್ತು. ವಾಣಿ ಕಪೂರ್ ತಾವಾಗಿಯೇ ಬಂದು ಮೀರಾರನ್ನು ಹಗ್ ಮಾಡಿಕೊಂಡು ಕ್ಷೇಮ ವಿಚಾರಿಸಿದ್ರು. ವಾಣಿ ಕಪೂರ್ ಕಪ್ಪು ಬಣ್ಣದ ಬ್ಯಾಕ್ ಲೆಸ್ ನೆಟ್ ಗೌನ್ ಧರಿಸಿ ಹಾಟ್ ಆಗಿ ಮಿಂಚುತ್ತಿದ್ದರು. ಇದನ್ನೂ ಓದಿ:ಶಾಹಿದ್ ಕಪೂರ್ ಹಾಟ್ ಫೋಟೋಗೆ ಪತ್ನಿ ಕಮೆಂಟ್ ಮಾಡಿದ್ದು ಹೀಗೆ
ಪತಿಗೆ ತಿರುಗೇಟು?: ನಟಿಯನ್ನು ಬರಮಾಡಿಕೊಂಡ ಶಾಹಿದ್ ಮಾಧ್ಯಮಗಳ ಜೊತೆ ಮಾತುಕತೆ ನಡೆಸಿದರು. ಮಾಧ್ಯಮಗಳ ಜೊತೆ ಮಾತನಾಡುವಾಗ ಮೀರಾ ಪತಿ ಪಕ್ಕವೇ ನಿಂತುಕೊಂಡು ಕ್ಯಾಮೆರಾಗಳಿಗೆ ಸ್ಮೈಲ್ ನೀಡುತ್ತಿದ್ರು. ವಾಣಿ ಕಪೂರ್ ಹಿಂದೆಯೇ ‘ಐಸ್’ ಚಿತ್ರದ ನಿರ್ದೇಶಕ ಇಮ್ತಿಯಾಜ್ ಅಲಿ ಬಂದರು. ಕೂಡಲೇ ಪತಿ ಪಕ್ಕದಲ್ಲಿ ನಿಂತಿದ್ದ ಮೀರಾ ಮುಂದೆ ಹೋಗಿ ಇಮ್ತಿಯಾಜ್ ಅಲಿಯನ್ನು ಹಗ್ ಮಾಡಿಕೊಂಡು ಸ್ವಾಗತ ಮಾಡಿಕೊಂಡರು.
ಈ ಬಾರಿ ಪತ್ನಿಯನ್ನು ನೋಡಿದ ಶಾಹಿದ್ ಸ್ವಲ್ಪ ಕಸಿವಿಸಿಗೊಂಡರು. ಈ ಎಲ್ಲ ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಂಬೈ: ವಿವಾದಗಳಿಂದ ಸುದ್ದಿಯಾಗಿದ್ದ ಬಾಲಿವುಡ್‍ನ ಪದ್ಮಾವತಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಸೆನ್ಸಾರ್ ಬೋರ್ಡ್ ನಲ್ಲಿ ಪದ್ಮಾವತಿ ಸಿನಿಮಾದ ಅರ್ಜಿ ತಿರಸ್ಕೃತವಾಗಿದ್ದು, ಚಿತ್ರತಂಡ ಅನಿವಾರ್ಯ ಕಾರಣಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದ್ದು, ಆದರೆ ಯಾವ ದಿನದಂದು ಸಿನಿಮಾ ತೆರೆಕಾಣಲಿದೆ ಎಂಬುದನ್ನು ಚಿತ್ರತಂಡ ಸ್ಪಷ್ಟಪಡಿಸಿಲ್ಲ.
ಕಳೆದ ಮೂರು ದಿನಗಳಿಂದ ಸಿನಿಮಾದ ರಿಲೀಸ್ ದಿನವನ್ನು ಮುಂದೂಡಲಾಗಿದೆ ಎಂದು ಹೇಳಲಾಗಿತ್ತಿತ್ತು. ಆದರೆ ಅಧಿಕೃತವಾಗಿ ದೃಢಪಟ್ಟಿರಲಿಲ್ಲ. ಇಂದು ಬಾಲಿವುಡ್ ಸಿನಿ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮೂಲಕ ವಿಷಯವನ್ನು ಖಚಿತಪಡಿಸಿದ್ದಾರೆ.
ಸೆನ್ಸಾರ್ ಬೋರ್ಡ್ ಹೇಳಿದ್ದೇನು?:
ಸೆನ್ಸಾರ್ ಬೋರ್ಡ್ ಸಿನಿಮಾಗೆ ಅನುಮತಿ ಕೋರಿ ಚಿತ್ರತಂಡ ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಚಿತ್ರತಂಡ ಅವಶ್ಯಕ ಮಾಹಿತಿಯನ್ನು ಅರ್ಜಿಯಲ್ಲಿ ದಾಖಲಿಸದೇ ಅಪೂರ್ಣವಾದ ಮಾಹಿತಿಯನ್ನು ಸಲ್ಲಿಸಿದೆ. ಇನ್ನೂ ಸಿನಿಮಾ ರಜಪೂತ ನಾಡಿದ ಧೀರ ಮಹಿಳೆ ರಾಣಿ ಪದ್ಮಾವತಿ ಐತಿಹಾಸಿಕ ಕಥೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಬಳಸಲಾಗಿರುವ ದೃಶ್ಯಗಳಿಗೆ ಸೂಕ್ತ ಸಾಕ್ಷ್ಯಗಳನ್ನು ನೀಡಿಲ್ಲ ಎಂದು ಸೆನ್ಸಾರ್ ಬೋರ್ಡ್ (ಸಿಬಿಎಫ್‍ಸಿ) ತಿಳಿಸಿ ಅರ್ಜಿಯನ್ನು ತಿರಸ್ಕರಿಸಿದೆ.
ಪದ್ಮಾವತಿ ಸಿನಿಮಾ ನಿರ್ಮಾಣ ಸಂಸ್ಥೆ ವೈಕಾಮ್ 18ಮೋಷನ್ ದಿನಾಂಕ ಮೂಂದೂಡಿರುವ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಹಾಗಾದರೆ ನಿರ್ಮಾಣ ಸಂಸ್ಥೆ ಮಾಧ್ಯಮಗಳಿಗೆ ತಿಳಿಸಿದ್ದು ಹೀಗೆ
“ಪದ್ಮಾವತಿ ಸಿನಿಮಾವನ್ನು ಡಿಸೆಂಬರ್ 1ರಂದು ತೆರೆಕಾಣಲು ಸಕಲ ತಯಾರಿಗಳನ್ನು ಮಾಡಿಕೊಂಡಿತ್ತು. ರಜಪೂತ ಸಂಸ್ಥಾನದ ಶೌರ್ಯ, ಘನತೆ ಮತ್ತು ಸಂಪ್ರದಾಯಿಕ ಎಲ್ಲ ವೈಭವವನ್ನು ಚಿತ್ರಕಥೆಯನ್ನು ಸಿನಿಮಾ ಒಳಗೊಂಡಿದೆ. ಚಿತ್ರಕಥೆ ನೋಡುಗರಿಗೆ ಹೆಮ್ಮೆಯನ್ನುಂಟು ಮಾಡಲಿದ್ದು, ಭಾರತೀಯರ ಸಾಹಸ ಪರಾಕ್ರಮವನ್ನು ಚಿತ್ರ ಒಳಗೊಂಡಿದೆ. ನಾವು ದೇಶದ ನಾಗರಿಕರಾಗಿದ್ದು, ದೇಶದ ಶಾಸನಬದ್ಧ ಕಾನೂನುಗಳನ್ನು ಪಾಲನೆ ಮಾಡುವುದರ ಜೊತೆಗೆ ಗೌರವ ನೀಡಬೇಕು. ಸೆನ್ಸಾರ್ ಬೋರ್ಡ್ ಸಿನಿಮಾಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಒದಗಿಸುವಂತೆ ತಿಳಿಸಿದೆ. ಹಾಗಾಗಿ ಬೋರ್ಡ್ ಕೇಳಿರುವ ದಾಖಲಾತಿಗಳನ್ನು ಒದಗಿಸಲು ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ಸಿನಿಮಾ ತೆರೆಕಾಣುವ ದಿನಾಂಕವನ್ನು ಮುಂದೂಡಲಾಗಿದೆ. ಆದಷ್ಟು ಬೇಗ ಸಿನಿಮಾ ರಿಲೀಸ್ ದಿನಾಂಕವನ್ನು ಅಭಿಮಾನಿಗಳಿಗೆ ತಿಳಿಸಲಾಗುತ್ತದೆ. ನಮ್ಮ ಬ್ಯಾನರ್ ಅಡಿಯಲ್ಲಿ `ಟಾಯ್ಲೆಟ್ ಏಕ್ ಪ್ರೇಮ್ ಕಥಾ’, ಭಾಗ್ ಮಿಲ್ಕಾ ಭಾಗ್, ಕ್ವೀನ್ ಸೇರಿದಂತೆ ಯಶಸ್ವಿ ಸಿನಿಮಾಗಳು ತೆರೆಕಂಡಿವೆ.” ಎಂದು ತಿಳಿಸಿದೆ.
ಏನಿದು ವಿವಾದ?: ಪದ್ಮಾವತಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ವಿವಾದವು ಹುಟ್ಟಿಕೊಂಡಿದೆ. ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮಾತ್ರ ಪದ್ಮಾವತಿ ನಡುವೆ ರೊಮ್ಯಾಂಟಿಕ್ ಸೀನ್ ಗಳಿವೆ. ಇನ್ನೂ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ರಾಣಿ ಪದ್ಮಾವತಿ ಕುರಿತಾಗಿ ಸಿನಿಮಾ ಮಾಡಲಿದ್ದೇನೆಂದು ಬನ್ಸಾಲಿ ಹೇಳಿಕೊಂಡಾಗ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಆರಂಭದಲ್ಲಿ ಚಿತ್ರೀಕರಣದ ವೇಳೆ ರಜಪೂತ್ ಕರ್ಣಿ ಸೇನಾದ ಸದಸ್ಯನೋರ್ವ ಬನ್ಸಾಲಿ ಅವರ ಕಪಾಳಕ್ಕೆ ಹೊಡೆದಿದ್ದನು. ಇನ್ನೂ ಮಹಾರಾಷ್ಟ್ರದ ಕೋಲಾಪುರದಲ್ಲಿ ಚಿತ್ರೀಕರಣದ ಸೆಟ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ವೇಳೆ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ.
ಬಿಜೆಪಿ, ಕಾಂಗ್ರೆಸ್ಸಿನಿಂದ ವಿರೋಧ: ಪದ್ಮಾವತಿ ಸಿನಿಮಾವನ್ನು ಗುಜರಾತಿನಲ್ಲಿ ಚುನಾವಣೆ ಬಳಿಕ ರಿಲೀಸ್ ಮಾಡಬೇಕು ಇಲ್ಲವೇ ಸಿನಿಮಾವನ್ನು ರಾಜ್ಯದಲ್ಲಿ ಬ್ಯಾನ್ ಮಾಡೋದು ಒಳ್ಳೆಯದು. ಸದ್ಯ ರಾಜ್ಯದಲ್ಲಿ ಚುನಾವಣೆಯ ಕಾವು ಹೆಚ್ಚಾಗಿರುವುದರಿಂದ ಸಿನಿಮಾದಿಂದಾಗಿ ಗಲಾಟೆಗಳು ಉಂಟಾಗಬಹುದು. ಒಂದು ವೇಳೆ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದ್ದರೆ ರಜಪೂತ ಮತ್ತು ಕ್ಷತ್ರೀಯ ಸಮುದಾಯದ ಜನತೆಯ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದು ಬಿಜೆಪಿ ವಕ್ತಾರ ಜಡೇಜಾ ತಿಳಿಸಿದ್ದಾರೆ. ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ. ಹೀಗಾಗಿ ಜನರ ಭಾವನೆಗೆ ಧಕ್ಕೆ ಬಂದಿರುವ ವಿಚಾರವನ್ನು ತೆಗೆದು ಹಾಕಬೇಕೆಂದು ರಾಜಸ್ಥಾನದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯ ಸರ್ಕಾರಗಳು ಈಗಾಗಲೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಅವರಿಗೆ ಸಿನಿಮಾ ಬಿಡುಗಡೆ ಕುರಿತು ಸ್ಪಷ್ಟಣೆ ಕೇಳಿ ಪತ್ರವನ್ನು ಬರೆದಿವೆ. ಸಿನಿಮಾ ಬಿಡುಗಡೆ ಆಗುವುದರಿಂದ ಯಾವುದೇ ಸಮುದಾಯದ ಜನರಿಗೆ ನೋವುಂಟು ಆಗಬಾರದು. ಈ ಹಿನ್ನೆಲೆಯಲ್ಲಿ ಪದ್ಮಾವತಿ ಸಿನಿಮಾ ಒಳಗೊಂಡಿರುವ ಕಥಾ ಹಂದರವನ್ನು ಪರಿಶೀಲಿಸಲು ಹಿರಿಯ ಇತಹಾಸ ತಜ್ಞರು, ಸಿನಿಮಾ ನಿರ್ಮಾಪಕರು ಒಳಗೊಂಡಿರುವ ಸಮಿತಿ ರಚಿಸಲಾಗುತ್ತಿದೆ ಎಂದು ಮಾಧ್ಯಮಗಳು ಪ್ರಕಟಿಸಿವೆ.
ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಯಾವುದೇ ರೊಮ್ಯಾಂಟಿಕ್ ಸೀನ್ ಗಳಿಲ್ಲ ಎಂದು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾದಲ್ಲಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಮತ್ತು ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದಾರೆ.
#BreakingNews: #Padmavati release postponed… Viacom18 Motion Pictures, the studio behind #Padmavati, has voluntarily deferred the release date of the film from 1 December 2017… We will announce the revised release date of the film in due course: Official statement.
Update: Viacom18 Motion Pictures, the studio behind @FilmPadmavati has voluntarily deferred the release date of the film from December 1st 2017. Producers to announce new release date soon. 🙏🏻 #WeSupportPadmavati@ShobhaIyerSantpic.twitter.com/Czxmnbaesi
— Ranveerians Worldwide ❤️ ✨08.09.24 🎀 (@RanveeriansFC) November 19, 2017
ಬೆಂಗಳೂರು: ಪದ್ಮಾವತಿ ಸಿನಿಮಾ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಬೆಂಗಳೂರಿಗೂ ವ್ಯಾಪಿಸಿದೆ. ಸಿನಿಮಾದಲ್ಲಿ ಇತಿಹಾಸವನ್ನು ತಿರುಚಿ ಅವಮಾನ ಮಾಡಲಾಗಿದೆ ಎಂದು ರಜಪೂತ ಸಮುದಾಯ ಆರೋಪಿಸಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಇತರೆ ರಾಜ್ಯಗಳಲ್ಲಿ ಪದ್ಮಾವತಿ ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡದಂತೆ ಬಿಜೆಪಿ ಪರಿಷತ್ ಸದಸ್ಯ ಲೆಹರ್ ಸಿಂಗ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.
ರಾಜಸ್ಥಾನದಲ್ಲಿರುವ ಕೋಟ್ಯಾಂತರ ಹಿಂದೂಗಳಿಗೆ ರಾಣಿ ಪದ್ಮಾವತಿ ಶೌರ್ಯ, ಧೈರ್ಯ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳಿಗೆ ಹೆಸರಾಗಿದ್ದಾರೆ. ಸಿನಿಮಾದಲ್ಲಿ ರಾಣಿ ಪದ್ಮಾವತಿಯನ್ನು ಅವಮಾನ ಮಾಡುವ ರೀತಿಯಲ್ಲಿ ತೋರಿಸಲಾಗುತ್ತದೆ. ಹಿಂದೂ ಸಮುದಾಯದ ರಾಜಾ- ರಾಣಿಯರನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸುವುದು ನಾವು ಒಪ್ಪುವುದಿಲ್ಲ ಮತ್ತು ಇದನ್ನು ಖಂಡಿಸುತ್ತೇವೆ ಎಂದು ಲೆಹರ್ ಸಿಂಗ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ರಾಷ್ಟ್ರೀಯ ರಜಪೂತ ಕರ್ಣಿಸೇನೆ ಬುಧವಾರ ಪ್ರತಿಭಟನೆಗೆ ಮುಂದಾಗಿದೆ. ಬುಧವಾರ ಬೆಳಗ್ಗೆ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್‍ವರೆಗೆ ಮೆರವಣಿಗೆ ನಡೆಸಲಿದ್ದಾರೆ.
ಪದ್ಮಾವತಿ ಸಿನಿಮಾ ಒಂದು ಐತಿಹಾಸಿಕ ಸಿನಿಮಾ. ಈ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯಾಗಿ ನಟಿಸಿದ್ದರೆ, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ರಣ್‍ವೀರ್ ಸಿಂಗ್ ಈ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಈ ಸಿನಿಮಾ ಇದೇ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದ್ದು, ಸಂಜಯ್ ಲೀಲಾ ಬನ್ಸಾಲಿ ಆಕ್ಷನ್ ಕಟ್ ಹೇಳಿದ್ದಾರೆ.
ಮುಂಬೈ: ಟ್ರೇಲರ್ ಮೂಲಕವೇ ಭಾರತೀಯ ಸಿನಿರಂಗದಲ್ಲಿ ಧೂಳೆಬ್ಬೆಸಿರೋ ಕನ್ನಡತಿ ದೀಪಿಕಾ ಪಡುಕೋಣೆ ನಟನೆಯ `ಪದ್ಮಾವತಿ’ ಚಿತ್ರದ ಮೊದಲ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಬಿಡುಗಡೆಗೊಂಡ ಒಂದೇ ದಿನದಲ್ಲಿ 85 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡು, ನಂಬರ್ 01 ಟ್ರೆಂಡಿಂಗ್ ನಲ್ಲಿದೆ.
ಘೂಮರ್ ಹಾಡಿನಲ್ಲಿ ದೀಪಿಕಾ ರಾಣಿ ಪದ್ಮಿನಿಯಾಗಿ ಮಿಂಚಿದರೆ, ಶಾಹಿದ ಕಪೂರ್ ರಜಪೂತ ರಾಜನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಘೂಮರ್ ಡಾನ್ಸ್ ನಲ್ಲಿ ಬನ್ಸಾಲಿ ತಮ್ಮ ಕೈಚಳಕವನ್ನು ತೋರಿಸಿದ್ದು, ಹಾಡು ಅಪ್ಪಟ ರಾಜಸ್ಥಾನಿ ಶೈಲಿಯಲ್ಲಿ ಮೂಡಿಬಂದಿದೆ. ದೀಪಿಕಾ ಕೆಂಪು ಬಣ್ಣದ ಲೆಹಂಗಾದಲ್ಲಿ ಡಾನ್ಸ್ ಮಾಡುವುದನ್ನು ನೋಡುವುದೇ ಒಂದು ಖುಷಿ.
ಈ ಹಿಂದೆ ರಾಮ್ ಲೀಲಾ ಸಿನಿಮಾದಲ್ಲೂ ದೀಪಿಕಾ `ನಗಾಡ ಸಂಗ್ ಡೋಲ್ ಬಾಜೆ’ ಹಾಡಿನಲ್ಲಿ ಕೆಂಪು ಲಹೆಂಗಾ ಹಾಕಿ ಕುಣಿದಿದ್ದರು. ಅಂದಿನ ಹಾಡಿಗೂ ಈ ಘೂಮರ್ ಹಾಡಿಗೂ ತುಂಬಾ ವ್ಯತ್ಯಾಸಗಳನ್ನು ನೋಡಬಹುದಾಗಿದೆ. ರಾಜಸ್ಥಾನಿಯ ಸರಳ ಡ್ಯಾನ್ಸ್ ಮೂವ್‍ಮೆಂಟ್ ಗಳಲ್ಲಿ ದೀಪಿಕಾ ಘೂಮರ್ ನೃತ್ಯಕ್ಕೆ ಗೆ ಜೀವ ತುಂಬಿದ್ದಾರೆ. ಹಾಡಿನಲ್ಲಿ ದೀಪಿಕಾ ಭಾರೀ ತೂಕದ ಆಭರಣಗಳನ್ನು ಧರಿಸಿ 66 ಬಾರಿ ಸುತ್ತಗಳನ್ನು ಹಾಕಿದ್ದಾರೆ.
ಹಾಡಿನ ಸಾಹಿತ್ಯ ಎ.ಎಂ.ತುರಾಜ್ ಲೇಖನಿಯಲ್ಲಿ ಮೂಡಿಬಂದಿದ್ದು, ಶ್ರೇಯಾ ಘೋಷಾಲ್ ಮತ್ತು ಸ್ವರೂಪ್ ಖಾನ್ ಸಂಗಡಿಗರು ಹಿನ್ನಲೆ ಧ್ವನಿಯಾಗಿದ್ದಾರೆ. ಕೃತಿ ಮಹೇಶ್ ಮಿದ್ಯಾ, ಘೂಮರ್ ನೃತ್ಯದ ಕಲಾವಿದೆ ಜ್ಯೋತಿ ಡಿ. ತೊಮ್ಮರ್ ಅವರಿಂದ ದೀಪಿಕಾ ಈ ರಾಜಸ್ಥಾನಿ ಜನಪದ ಶೈಲಿಯ ನೃತ್ಯವನ್ನು ಕಲಿತಿದ್ದಾರೆ.
ಚಿತ್ರದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ಮಾಹಾರಾವಲ್ ರತನ್ ಸಿಂಗ್ ನಾಗಿ ಶಾಹಿದ್ ಕಪೂರ್ ಮತ್ತು ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣ್‍ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಇದೇ ಡಿಸೆಂಬರ್ 1ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ.
ಮುಂಬೈ: ಶಾಹಿದ್ ಕಪೂರ್ ನಟನೆಯ ಈ ವರ್ಷದ ಬಹು ನಿರೀಕ್ಷಿತ ಚಿತ್ರ ‘ಪದ್ಮಾವತಿ’ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಆದರೆ ಶಾಹಿದ್ ನಟನೆಯ ಮುಂದಿನ ಚಿತ್ರದ ಟೈಟಲ್ ಇಂದು ಘೋಷಣೆಯಾಗಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ.
ಟಾಯ್ಲೆಟ್- ಏಕ್ ಪ್ರೇಮ್ ಕಥಾ ಚಿತ್ರದ ನಿರ್ದೇಶಕ ಶ್ರೀ ನಾರಾಯಣ್ ಸಿಂಗ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ‘ಬತ್ತಿ ಗುಲ್ ಮೀಟರ್ ಚಾಲೂ’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಶಾಹಿದ್ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದು, ಜನಸಾಮಾನ್ಯರು ಹೆಚ್ಚು ಬಿಲ್ ಕಟ್ಟುವಂತೆ ಮಾಡುವ ವಿದ್ಯುತ್ ಸರಬರಾಜು ಕಂಪೆನಿಗಳ ವಿರುದ್ಧ ಹೋರಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ವಿಚಾರದ ಬಗ್ಗೆ ಬೆಳಕು ಚೆಲ್ಲುಲು ದೀಪಾವಳಿಯ ಸಂದರ್ಭ ಸೂಕ್ತವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿ ದಿನದಂದು ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ಒಳ್ಳೆಯ ಸಂದರ್ಭ. ಮನರಂಜನೆಯ ಜೊತೆಗೆ ಒಳ್ಳೆಯ ಸಂದೇಶ ಕೊಡುವಂತೆ ಚಿತ್ರವನ್ನ ತಯಾರಿಸಬೇಕೆಂದಿದ್ದೇವೆ ಅಂತ ಚಿತ್ರದ ನಿರ್ದೇಶಕ ಹೇಳಿದ್ದಾರೆ.
ಶಾಹಿದ್ ತನ್ನ ಇತ್ತೀಚಿನ ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಹೈದರ್ ಹಾಗೂ ಉಡ್ತಾ ಪಂಜಾಬ್ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದರು. ಈಗ ಪದ್ಮಾವತಿ ಸಿನಿಮಾದಲ್ಲೂ ರಜಪೂತ ರಾಜಾ ಮಹಾರಾವಲ್ ರತನ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ಪದ್ಮಾವತಿ ಚಿತ್ರದ ಬಿಡುಗಡೆಗೆ ಡಿಸೆಂಬರ್ 1ರಂದು ದಿನಾಂಕ ನಿಗದಿಯಾಗಿದೆ.
ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ಪದ್ಮಾವತಿ’ ಸಿನಿಮಾದ ಮೇನಿಯಾ ದೇಶಾದ್ಯಂತ ಶುರುವಾಗಿದೆ. ಸಿನಿಮಾದ ಮೂರು ಫಸ್ಟ್ ಲುಕ್ ಮತ್ತು ಟ್ರೇಲರ್ ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪದ್ಮಾವತಿಯ ಟ್ರೆಂಡ್ ಆರಂಭವಾಗಿದೆ.
ಸಿನಿಮಾದ ಟ್ರೇಲರ್ ಮಧ್ಯಾಹ್ನ 13.03 ಗಂಟೆಗೆ ಬಿಡುಗಡೆ ಮಾಡುವ ಮೂಲಕ ತಾವು ಬೇರೆಯವರಿಗಿಂತ ಭಿನ್ನ ಎಂಬುದನ್ನು ಸಂಜಯ್ ಲೀಲಾ ಬನ್ಸಾಲಿ ತೋರಿಸಿದ್ದಾರೆ. ಬನ್ಸಾಲಿ ಪ್ರತಿಬಾರಿಯೂ ವಿಭಿನ್ನ ಕಥಾ ಹಂದರವುಳ್ಳ ಸಿನಿಮಾವನ್ನು ತೆರೆಯ ಮೇಲೆ ತಮ್ಮದೇ ಶೈಲಿಯಲ್ಲಿ ತರುತ್ತಾರೆ.
1. ಬನ್ಸಾಲಿಯ ಕಥೆ ಹೇಳುವ ಶೈಲಿ:
ಯಾವುದೇ ಒಂದು ಕಥೆಯನ್ನು ನೋಡುಗರಿಗೆ ತಲುಪಿಸುವ ಸಾಮರ್ಥ್ಯವನ್ನು ಬನ್ಸಾಲಿ ಹೊಂದಿದ್ದಾರೆ. ಬನ್ಸಾಲಿ ಅವರು ಹಿಂದೆ ನಿರ್ದೇಶನ ಮಾಡಿದ್ದ ಹಮ್ ದಿಲ್ ದೇ ಚುಕೇ ಸನಮ್, ದೇವ್‍ದಾಸ್, ರಾಮ್‍ಲೀಲಾ ಮತ್ತು ಬಾಜೀರಾವ್ ಮಸ್ತಾನಿ ಸಿನಿಮಾಗಳು ಅವರ ಚಾಕಚಕ್ಯತೆಗೆ ಉದಾಹರಣೆಯಾಗಿವೆ. ಹೀಗಾಗಿ `ಪದ್ಮಾವತಿ’ ಸಿನಿಮಾ ಹೇಗೆ ಮೂಡಿ ಬಂದಿದೆ ಎಂಬ ಕುತೂಹಲ ಉಂಟಾಗಿದೆ.
2. ಚಾಲೆಂಜಿಂಗ್ ಪಾತ್ರದಲ್ಲಿ ಕಲಾವಿದರು:
ಇದೊಂದು ವಿಭಿನ್ನ ಮತ್ತು ಐತಿಹಾಸಿಕ ಕಥೆಯನ್ನು ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ನಟಿಸಿರುವ ಎಲ್ಲ ಕಲಾವಿದರಿಗೂ ಇದೊಂದು ಚಾಲೆಂಜಿಂಗ್ ಸಿನಿಮಾವಾಗಿದೆ. ದೀಪಿಕಾ, ರಣ್‍ವೀರ್ ಸಿಂಗ್ ಮತ್ತು ಶಾಹಿದ್ ಇದೂವರೆಗೂ ಈ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಹಿಂದೆ ದೀಪಿಕಾ ಮತ್ತು ರಣ್‍ವೀರ್ ಇಬ್ಬರೂ `ಬಾಜೀರಾವ್ ಮಸ್ತಾನಿ’ ಸಿನಿಮಾ ರಾಜಾ ಮತ್ತು ರಾಣಿ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಆದರೆ ಪದ್ಮಾವತಿ ಕಥೆ ಸಂಪೂರ್ಣ ಭಿನ್ನವಾಗಿದ್ದು ಕಲಾವಿದರ ಕೆರಿಯರ್ ಬದಲಾಯಿಸುವ ಸಾಧ್ಯತೆಗಳಿವೆ.
3. ಚಿತ್ರಕಥೆ ಮತ್ತು ಯುದ್ಧ:
ಭಾರತೀಯ ಸಿನಿಮಾದಲ್ಲಿ ಇದೂವರೆಗೂ ಯುದ್ಧ ಸನ್ನಿವೇಶಗಳನ್ನು ಹೊಂದಿರುವ ಚಿತ್ರಗಳು ಸಾಕಷ್ಟು ತೆರೆಕಂಡಿವೆ. ರಾಜಸ್ಥಾನ ರಾಜರ ಯುದ್ಧದ ವಿಧಾನ ತಂತ್ರಗಳು ಮತ್ತು ಅಲ್ಲಾವುದ್ದೀನ್ ಖಿಲ್ಜಿ ಯುದ್ಧದ ಪ್ರತಿತಂತ್ರಗಳನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ. ಕಲಾವಿದರೆಲ್ಲರೂ ತಮಗೆ ನೀಡಿರುವ ಪಾತ್ರಗಳಿಗೆ ಜೀವ ತುಂಬಿರುವುದನ್ನು ಟ್ರೇಲರ್ ನಲ್ಲಿ ನೋಡಬಹುದಾಗಿದೆ.
4. ಸಂಗೀತ:
ಬನ್ಸಾಲಿ ತಮ್ಮ ಸಿನಿಮಾದಲ್ಲಿ ಹಿತವಾದ ಸಂಗೀತಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಟ್ರೇಲರ್ ನಲ್ಲಿ ಇಂಪಾದ ಹಿನ್ನೆಲೆ ಸಂಗೀತವಿದ್ದು, ಇನ್ನೂ ಹಾಡುಗಳು ಹೇಗೆ ಮೂಡಿ ಬರಲಿವೆ ಎಂಬ ಕಾತುರ ಸಂಗೀತಾಭಿಮಾನಿಗಳಲ್ಲಿ ಹುಟ್ಟು ಹಾಕಿದೆ.
5. ಭಾರತೀಯ ಸಂಸ್ಕೃತಿ ಮತ್ತು ವೈಭವ:
ನಿದೇಶಕ ಬನ್ಸಾಲಿ ಕಳೆದ ರಾಜಾಡಳಿತವನ್ನು ತೆರೆಯ ಮೇಲೆ ತರಲು ನಿಸ್ಸೀಮರು. 1303ರಲ್ಲಿ ಅಲ್ಲಾವುದ್ದೀನ್ ಖಲ್ಜಿ ಭಾರತದ ಮೇಲೆ ದಂಡೆತ್ತಿ ಬಂದಿದ್ದು, ಅಂದಿನ ಭಾರತದ ಕಲ್ಪನೆ ಸಿನಿಮಾದಲ್ಲಿ ಮೂಡಿಬರಲಿದೆ. ಭಾರತೀಯ ಸಂಸ್ಕೃತಿ, ಕಲೆ, ವಾಸ್ತು ಶಿಲ್ಪ, ರಾಜಾಡಳಿತ ಮತ್ತು ವಸ್ತ್ರ ವಿನ್ಯಾಸವನ್ನು ಸಿನಿಮಾ ಒಳಗೊಂಡಿದೆ.
6. ಗ್ರಾಫಿಕ್ಸ್:
ಕಲಾವಿದರ ಜೊತೆ ಟ್ರೇಲರ್ ಸೂಪರ್ ಹಿಟ್ ಆಗಲು ಕಾರಣವಾಗಿದ್ದು, ಚಿತ್ರದಲ್ಲಿ ಬಳಸಿದ್ದ ಗ್ರಾಫಿಕ್ಸ್. ಬಾಹುಬಲಿ ನಿರ್ದೇಶಕ ರಾಜಮೌಳಿ ಗ್ರಾಫಿಕ್ಸ್ ವೈಭವವನ್ನು ಮೆಚ್ಚಿ ಟ್ವೀಟ್ ಮಾಡಿದ್ದು ಇದಕ್ಕೆ ಉದಾಹರಣೆ. ಹೀಗಾಗಿ ಚಿತ್ರದಲ್ಲಿ ಗ್ರಾಫಿಕ್ಸ್ ಬಳಕೆ ಹೇಗಿರಲಿದೆ ಎನ್ನುವ ಕುತೂಹಲಕ್ಕಾಗಿಯಾದರೆ ಚಿತ್ರ ವೀಕ್ಷಣೆ ಮಾಡಬೇಕಿದೆ.
ಹೀಗೆ ಹತ್ತು ಹಲವು ಕಾರಣಗಳಿಂದ ಪದ್ಮಾವತಿ ಎಲ್ಲರನ್ನು ಆಕರ್ಷಿಸಲು ಯಶಸ್ವಿಯಾಗಿದೆ. ಫಸ್ಟ್ ಲುಕ್ ಮತ್ತು ಟ್ರೇಲರ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ನಂಬರ್ 01 ಟ್ರೆಂಡಿಂಗ್ ಸ್ಥಾನವನ್ನು ಪಡೆದಿತ್ತು. ಸಿನಿಮಾ ಡಿಸೆಂಬರ್ 1 ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ.
ಮುಂಬೈ: 2017ರ ಬಹು ನಿರೀಕ್ಷಿತ ಪದ್ಮಾವತಿ ಚಿತ್ರದ ಟ್ರೇಲರ್ ಇಂದು ಮಧ್ಯಾಹ್ನ ಸರಿಯಾಗಿ 13:03ಕ್ಕೇ (1 ಗಂಟೆ 3 ನಿಮಿಷ) ಬಿಡುಗಡೆಯಾಗಿದೆ. 1303ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಚಿತ್ತೂರ್ ಕೋಟೆಯನ್ನು ವಶಕ್ಕೆ ಪಡೆದುಕೊಂಡಿದ್ದನು. ಹಾಗಾಗಿ ಚಿತ್ರದ ಟ್ರೇಲರ್ 13.03ಕ್ಕೆ ಬಿಡುಗಡೆಯಾಗಿದೆ.
ಚಿತ್ರದ ಟ್ರೇಲರ್‍ನಲ್ಲಿ ದೀಪಿಕಾ ಪಡುಕೋಣೆ ವಸ್ತ್ರಾಭರಣದಿಂದ ಕಂಗೊಳಿಸುತ್ತಿದ್ದಾರೆ. ಇನ್ನು ಕೆಲವು ದೃಶ್ಯಗಳಲ್ಲಿ ನಿರಾಭರಣ ಸುಂದರಿಯಾಗಿ ಸಾಕಷ್ಟು ಆರ್ಕಷಕರಾಗಿ ಕಾಣಿಸಿಕೊಂಡಿದ್ದಾರೆ. ರಾಣಾ ರತನ್ ಸಿಂಗ್ ಆಗಿ ಶಾಹಿದ್ ಕಪೂರ್ ರಜಪೂತ ರಾಜನಂತೆ ಶಾಂತ ಸ್ವಭಾವದ ರಾಜನಂತೆ ಕಾಣಿಸಿಕೊಂಡಿದ್ದಾರೆ.
ರಣ್‍ವೀರ್ ಸಿಂಗ್ ರಾಕ್ಷಸ ಸ್ವರೂಪಿಯಾಗಿದ್ದ ಅಲ್ಲಾವುದ್ದೀನ್ ಖಿಲ್ಜಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಧೃಡ ಕಾಯ ಹೊಂದಿರುವ ರಣ್‍ವೀರ್ ಸಾಹಸ ದೃಶ್ಯಗಳಲ್ಲಿ ಸಾಕಷ್ಟು ಪರಿಶ್ರಮ ಹಾಕಿರುವುದನ್ನು ಟ್ರೇಲರ್ ನಲ್ಲಿ ಕಾಣಬಹುದಾಗಿದೆ. ಟ್ರೇಲರ್ ನಲ್ಲಿ ಕೆಲವು ಸೆಕೆಂಡುಗಳ ಕಾಲ ಯುದ್ಧದ ಸನ್ನಿವೇಶಗಳನ್ನು ಸಹ ತೋರಿಸಲಾಗಿದೆ. ಇನ್ನೂ ಶಾಹೀದ್ ಶಾಂತ ಸ್ವಭಾವದ ರಜಪೂತ ದೊರೆಯಾಗಿ ಮಿಂಚುತ್ತಿದ್ದಾರೆ.
ಅಲ್ಲಾವುದ್ದೀನ್ ಖಿಲ್ಜಿ ಚಿತ್ತೂರು ರಾಣಿ ಪದ್ಮಿನಿ(ಪದ್ಮಾವತಿ)ಯನ್ನು ಇಷ್ಟ ಪಟ್ಟಿದ್ದ. ಹೀಗಾಗಿ ರಾಣಿಯನ್ನು ಒಲಿಸಿಕೊಳ್ಳಲು ಚಿತ್ತೂರು ಕೋಟೆಗೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದ. ಅದರಂತೆ 1303ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಚಿತ್ತೂರು ಕೋಟೆಗೆ ದಾಳಿ ನಡೆಸಿ ಗುಹಿಲಾ ರತ್ನಸಿಂಹ(ರಾಜಾ ರತನ್ ಸಿಂಗ್) ನನ್ನು ಬಂಧಿಸಿ 8 ತಿಂಗಳು ಸೆರೆಯಲ್ಲಿಟ್ಟಿದ್ದ. ಆದರೆ ಅಲ್ಲಾವುದ್ದೀನ್‍ನಿಂದ ತಪ್ಪಿಸಿಕೊಳ್ಳಲು ರಾಣಿ ಪದ್ಮೀನಿ (ಪದ್ಮಾವತಿ) ಜೋಹರ್(ಸತಿ ಸಹಗಮನನ ಪದ್ದತಿ) ಮೂಲಕ ತನ್ನ ಪ್ರಾಣವನ್ನು ಕಳೆದುಕೊಳ್ಳುವ ಕಥೆಯನ್ನು ಚಿತ್ರ ಹೊಂದಿದೆ.
ಪದ್ಮಾವತಿ ಚಿತ್ರದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ರಾಣಾ ರತನ್ ಸಿಂಗ್ ಆಗಿ ಶಾಹಿದ್ ಕಪೂರ್, ಅಲ್ಲಾವುದ್ದೀನ್ ಖಿಲ್ಜಿ ಆಗಿ ರಣ್‍ವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿದ್ದು, ಡಿಸೆಂಬರ್ 1 ರಂದು ಬಿಡುಗಡೆ ಆಗಲಿದೆ.+