Tag: Shahid Kapoor

  • ಶಾಹಿದ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ನಟನೆ?

    ಶಾಹಿದ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ನಟನೆ?

    ಮುಂಬೈ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ಸ್ಟಾರ್ ನಟ ಶಾಹಿದ್ ಕಪೂರ್ ಅವರ ಜೊತೆ ನಟಿಸಲಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ.

    ಶಾಹಿದ್ ಕಪೂರ್ ತೆಲುಗಿನಲ್ಲಿ ನಟ ನಾನಿ ನಟಿಸಿದ ‘ಜೆರ್ಸಿ’ ಸಿನಿಮಾದ ಹಿಂದಿ ರಿಮೇಕ್‍ನಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ. ಈ ಚಿತ್ರಕ್ಕೆ ಶಾಹಿದ್‍ಗೆ ನಾಯಕಿ ಆಗಿ ನಟಿಸಲು ರಶ್ಮಿಕಾ ಅವರಿಗೆ ಆಫರ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

    ಚಿತ್ರತಂಡ ಈಗಾಗಲೇ ರಶ್ಮಿಕಾ ಮಂದಣ್ಣ ಅವರ ಬಳಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ರಶ್ಮಿಕಾ ಅವರು ಈ ಸಿನಿಮಾ ಮಾಡುವುದರ ಕಡೆ ಒಲವು ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ರಶ್ಮಿಕಾ ಮಂದಣ್ಣ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    ಶಾಹಿದ್ 2017ರಲ್ಲಿ ತೆಲುಗಿನಲ್ಲಿ ಬಿಡುಗಡೆಗೊಂಡಿದ್ದ `ಅರ್ಜುನ್ ರೆಡ್ಡಿ’ ಚಿತ್ರದ ಹಿಂದಿ ರಿಮೇಕ್ ‘ಕಬೀರ್ ಸಿಂಗ್’ ಸಿನಿಮಾದಲ್ಲಿ ನಟಿಸಿದ್ದರು. ಶಾಹಿದ್‍ಗೆ ನಾಯಕಿಯಾಗಿ ಕಿಯಾರ ಅದ್ವಾನಿ ನಟಿಸಿದ್ದರು. ಈ ಚಿತ್ರ 200 ಕೋಟಿ ರೂ. ಗಳಿಸಿ ಬಾಲಿವುಡ್‍ನಲ್ಲಿ ಹೊಸ ದಾಖಲೆಯನ್ನು ಬರೆದಿದೆ.

    ರಶ್ಮಿಕಾ ಮಂದಣ್ಣ ಕೊನೆಯದಾಗಿ ನಟ ವಿಜಯ್ ದೇವರಕೊಂಡ ಜೊತೆ `ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಭರತ್ ಕಮ್ಮಾ ಈ ಚಿತ್ರವನ್ನು ನಿರ್ದೇಶಿಸಿದ್ದರು.

  • ಮಗಳ ಸ್ಕರ್ಟ್ ಧರಿಸಿದ್ದೀರಾ?- ಶಾಹಿದ್ ಪತ್ನಿಯ ಕಾಲೆಳೆದ ನೆಟ್ಟಿಗರು

    ಮಗಳ ಸ್ಕರ್ಟ್ ಧರಿಸಿದ್ದೀರಾ?- ಶಾಹಿದ್ ಪತ್ನಿಯ ಕಾಲೆಳೆದ ನೆಟ್ಟಿಗರು

    ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜ್‍ಪುತ್ ಅವರ ಉಡುಪು ನೋಡಿ ಜನರು ಟ್ರೋಲ್ ಮಾಡುತ್ತಿದ್ದಾರೆ.

    ಇತ್ತೀಚೆಗೆ ಮೀರಾ ರಜ್‍ಪುತ್ ಅವರು ಅಡುಗೆ ಸಾಮಾಗ್ರಿಗಳನ್ನು ತರಲು ತಮ್ಮ ಮಗಳ ಜೊತೆ ಅಂಗಡಿಗೆ ಹೋಗಿದ್ದರು. ಈ ವೇಳೆ ಅವರು ಹಳದಿ ಬಣ್ಣದ ಸ್ಕರ್ಟ್ ಹಾಕಿ ಅದಕ್ಕೆ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಮೀರಾ ಈ ಉಡುಪು ಧರಿಸಿದ್ದಕ್ಕೆ ನೆಟ್ಟಿಗರ ಅವರ ಕಾಲೆಳೆಯಲು ಶುರು ಮಾಡಿದ್ದಾರೆ.

    ಮೀರಾ ಅವರ ಡ್ರೆಸ್ ನೋಡಿ ಕೆಲವರು, ನಿಮ್ಮ ಮಗಳು ಮಿಶಾಳ ಸ್ಕರ್ಟ್ ಧರಿಸಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ನಿಮಗಿಂತ ನಿಮ್ಮ ಮಗಳ ಉದ್ದ ಬಟ್ಟೆ ಧರಿಸಿದ್ದಾಳೆ ಎಂದು ಕಮೆಂಟ್ ಮಾಡಿದ್ದಾರೆ.

    ಅಲ್ಲದೆ ಕೆಲವರು, ಆಂಟಿ ಮಿಶಾಳ ಬಟ್ಟೆ ಧರಿಸಿದ್ದಾಳೆ ಎಂದು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು, ಉಡುಪುಗಳಿಗೆ ಸ್ವಲ್ಪ ಹಣವನ್ನು ಖರ್ಚು ಮಾಡಿ. ಚಿಕ್ಕ ಉಡುಪಿನ ವಿರುದ್ಧ ನಾನಿಲ್ಲ. ಆದರೆ ನೀವು ನಿಮ್ಮ ಮಗಳ ಉಡುಪು ಧರಿಸಿದ್ದೀರಾ ಅದಕ್ಕೆ ಹೇಳುತ್ತಿದ್ದೇನೆ ಎಂದು ಕಾಲೆಳೆದಿದ್ದಾರೆ.

    ಮೀರಾ ರಜ್‍ಪುತ್ ಅವರು ಲೈಮ್‍ಲೈಟ್‍ನಿಂದ ದೂರ ಇರುತ್ತಾರೆ. ಆದರೆ ಅವರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಮೀರಾ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸಕ್ರಿಯರಾಗಿದ್ದು, ತಮ್ಮ ಮಕ್ಕಳಾದ ಮಿಶಾ ಹಾಗೂ ಜೈನ್‍ನ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

     

    View this post on Instagram

     

    #mirakapoor with daughter #mishakapoor snapped at foodhall today #viralbayani @viralbhayani

    A post shared by Viral Bhayani (@viralbhayani) on

  • ನಟಿ ಜೊತೆ ಬಾಗಿಲು ಮುಚ್ಚಿಕೊಂಡ ಶಾಹಿದ್- ಪತ್ನಿ ಜೊತೆ ಜಗಳ ಆಗುತ್ತೆ ಎಂದು ಟ್ರೋಲ್

    ನಟಿ ಜೊತೆ ಬಾಗಿಲು ಮುಚ್ಚಿಕೊಂಡ ಶಾಹಿದ್- ಪತ್ನಿ ಜೊತೆ ಜಗಳ ಆಗುತ್ತೆ ಎಂದು ಟ್ರೋಲ್

    ಮುಂಬೈ: ಬಾಲಿವುಡ್ ಕಬೀರ್ ಸಿಂಗ್ ನಟ ಶಾಹಿದ್ ಕಪೂರ್ ಅವರು ನಟಿ ಕಿಯಾರಾ ಅಡ್ವಾನಿ ಅವರ ಹುಟ್ಟುಹಬ್ಬದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಾಹಿದ್ ಕಪೂರ್ ಅವರು ನಟಿ ಕಿಯಾರಾ ಜೊತೆ ಬಾಗಿಲು ಕ್ಲೋಸ್ ಮಾಡಿಕೊಂಡಿದ್ದಾರೆ.

    ಕಿಯಾರಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದು ಈಗ ಚರ್ಚೆ ಆಗುತ್ತಿದೆ. ವಿಡಿಯೋದಲ್ಲಿ ಶಾಹಿದ್ ಕಪೂರ್ ಹಾಗೂ ಕಿಯಾರಾ ಅಡ್ವಾನಿ ಮಾಧ್ಯಮಗಳ ಕ್ಯಾಮೆರಾಗೆ ಪೋಸ್ ನೀಡಿ ಬಳಿಕ ಡೋರ್ ಕ್ಲೋಸ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಬಾಲಿವುಡ್ ಫೋಟೋಗ್ರಾಫರ್ ವೈರಲ್ ಭಯಾನಿ ಅವರು ಪೋಸ್ಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಈಗ 2 ಲಕ್ಷಕ್ಕೂ ಹೆಚ್ಚು ವ್ಯೂ ಬಂದಿದ್ದು, ಜನರು ವಿವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ.

    ಈ ವಿಡಿಯೋ ನೋಡಿ ಕೆಲವರು, ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ. ಮೀರಾ (ಶಾಹಿದ್ ಪತ್ನಿ) ಇದನ್ನು ಗಮನಿಸಬೇಕು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅರೇ. ಏನಿದು? ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಮತ್ತೆ ಕೆಲವು ಮಂದಿ, ಈಗ ಶಾಹಿದ್ ಹಾಗೂ ಅವರ ಪತ್ನಿ ಮೀರಾ ನಡುವೆ ಜಗಳ ಆಗುತ್ತಿದೆ ಎಂದು ಹೇಳುವ ಮೂಲಕ ಶಾಹಿದ್ ಕಪೂರ್ ಅವರ ಕಾಲೆಳೆಯುತ್ತಿದ್ದಾರೆ.

    ಕಿಯಾರಾ ಜುಲೈ 31ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದಲ್ಲಿ ಅವರ ಪೋಷಕರು ಹಾಗೂ ತನ್ನ ಸಹೋದರ ಭಾಗಿಯಾಗಿದ್ದರು. ಶಾಹಿದ್ ಕಪೂರ್, ಕರಣ್ ಜೋಹರ್, ಅರ್ಮಾನ್ ಜೈನ್ ಸೇರಿದಂತೆ ಹಲವು ಬಾಲಿವುಡ್ ಕಲಾವಿದರು ಭಾಗಿಯಾಗಿದ್ದರು. ಕಿಯಾರಾ ಹುಟ್ಟುಹಬ್ಬದ ಪಾರ್ಟಿಗೆ ತನ್ನ ಪೋಷಕರ ಜೊತೆ ಬಂದಿದ್ದರು. ಬಳಿಕ ಪಾರ್ಟಿ ಮುಗಿಸಿಕೊಂಡು ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಹೋಗಿದ್ದಾರೆ. ಇದೀಗ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ.

     

    View this post on Instagram

     

    370 crores worldwide collection for #kabirsingh ???? #kiaraadvani #shahidkapoor have every reason to party like it is 1999 @viralbhayani

    A post shared by Viral Bhayani (@viralbhayani) on

  • 200 ಕೋಟಿ ಗಳಿಸಿ ಬಾಲಿವುಡ್‍ನಲ್ಲಿ ದಾಖಲೆ ಬರೆದ ಕಬೀರ್ ಸಿಂಗ್

    200 ಕೋಟಿ ಗಳಿಸಿ ಬಾಲಿವುಡ್‍ನಲ್ಲಿ ದಾಖಲೆ ಬರೆದ ಕಬೀರ್ ಸಿಂಗ್

    ಮುಂಬೈ: ಶಾಹಿದ್ ಕಪೂರ್ ಮತ್ತು ಕಿಯಾರ ಅದ್ವಾನಿ ನಟನೆಯ ಕಬೀರ್ ಸಿಂಗ್ ಸಿನಿಮಾ 200 ಕೋಟಿ ರೂ. ಗಳಿಗೆ ಬಾಲಿವುಡ್‍ನಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಎ ಸರ್ಟಿಫಿಕೇಟ್ ಪಡೆದ ಚಿತ್ರ ಮೊದಲ ಬಾರಿಗೆ 200 ಕೋಟಿ ಸಿನಿಮಾಗಳ ಕ್ಲಬ್ ಸೇರಿದೆ.

    ಚಿತ್ರ ಬಿಡುಗಡೆಗೊಂಡ ಎರಡನೇ ವಾರ ಸಹ ಕಬೀರ್ ಸಿಂಗ್ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆ ತರುವಲ್ಲಿ ಯಶಸ್ವಿಯಾಗಿದ್ದಾನೆ. ವಿಕ್ಕಿ ಕೌಶಲ್ ಅಭಿನಯದ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಮತ್ತು ಸಲ್ಮಾನ್ ಖಾನ್ ನಟನೆಯ ಭಾರತ್ ಸಿನಿಮಾವನ್ನು ಮೂರನೇ ವಾರದಲ್ಲಿ ಕಬೀರ್ ಸಿಂಗ್ ಹಿಂದಿಕ್ಕಿದೆ.

    ಸಂದೀಪ್ ವಂಗಾ ರೆಡ್ಡಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದ್ದು, ಶಾಹಿದ್ ಕಪೂರ್ ಮತ್ತು ಕಿಯಾರಾ ಕೆಮಿಸ್ಟ್ರಿ ವರ್ಕೌಟ್ ಆಗಿದೆ. ಚಿತ್ರದಲ್ಲಿ ಶಾಹಿದ್ ಮತ್ತು ಕಿಯಾರಾ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯುವ ಸಮುದಾಯದ ಕಥೆಯನ್ನು ಒಳಗೊಂಡಿದೆ. ಹೀಗಾಗಿ ಯುವ ಜನತೆಯನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಸಿನಿಮಾ ಸಕ್ಸಸ್ ಕಂಡಿದೆ.

    2017ರಲ್ಲಿ ತೆಲುಗಿನಲ್ಲಿ ಬಿಡುಗಡೆಗೊಂಡಿದ್ದ ‘ಅರ್ಜುನ್ ರೆಡ್ಡಿ’ ಸಿನಿಮಾದ ರಿಮೇಕ್ ಚಿತ್ರವೇ ಕಬೀರ್ ಸಿಂಗ್. ತೆಲುಗಿನಲ್ಲಿಯೂ ಆ್ಯಕ್ಷನ್ ಕಟ್ ಹೇಳಿದ್ದ ಸಂದೀಪ್ ವಂಗಾ ರೆಡ್ಡಿ ಇಲ್ಲಿಯೂ ನಿರ್ದೇಶನ ಮಾಡಿದ್ದಾರೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಮತ್ತು ಶಾಲಿನಿ ಪಾಂಡ್ಯ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಟ ವಿಜಯ್ ದೇವರಕೊಂಡಗೆ ಅರ್ಜುನ್ ರೆಡ್ಡಿ ಸಿನಿಮಾ ಟಾಲಿವುಡ್ ನಲ್ಲಿ ಭದ್ರ ಬುನಾದಿಯನ್ನೇ ಹಾಕಿದೆ.

  • ಕಿಸ್ಸಿಂಗ್ ಸೀನ್ ಬಗ್ಗೆ ನಟಿಯನ್ನು ಪ್ರಶ್ನಿಸಿದ್ದಕ್ಕೆ ಶಾಹಿದ್ ಗರಂ

    ಕಿಸ್ಸಿಂಗ್ ಸೀನ್ ಬಗ್ಗೆ ನಟಿಯನ್ನು ಪ್ರಶ್ನಿಸಿದ್ದಕ್ಕೆ ಶಾಹಿದ್ ಗರಂ

    ಮುಂಬೈ: ನಟ ಶಾಹಿದ್ ಕಪೂರ್ ನಟಿಸಿದ ‘ಕಬೀರ್ ಸಿಂಗ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ಗಳಿದ್ದು, ಮಾಧ್ಯಮದವರು ಈ ಬಗ್ಗೆ ನಟಿ ಕೈರಾ ಅಡ್ವಾನಿಯನ್ನು ಪ್ರಶ್ನಿಸಿದ್ದಕ್ಕೆ ಶಾಹಿದ್ ಕಪೂರ್ ಗರಂ ಆದರು.

    ಚಿತ್ರದ ಟ್ರೈಲರ್ ಲಾಂಚ್ ಸಂದರ್ಭದಲ್ಲಿ ಶಾಹಿದ್ ಕಪೂರ್, ಕೈರಾ ಅಡ್ವಾನಿ ಹಾಗೂ ಚಿತ್ರತಂಡ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದವರು ಚಿತ್ರದ ಬಗ್ಗೆ ಚಿತ್ರತಂಡದವರನ್ನು ಪ್ರಶ್ನಿಸಿದ್ದರು. ಮಾಧ್ಯಮಗಳ ಪ್ರಶ್ನೆಗೆ ಚಿತ್ರತಂಡ ನಗುತ್ತಾ ಹಾಸ್ಯಭರಿತ ಉತ್ತರವನ್ನೇ ನೀಡುತ್ತಿದ್ದರು.

    ಟ್ರೈಲರ್ ಲಾಂಚ್ ಸಂದರ್ಭದಲ್ಲಿ ವರದಿಗಾರರೊಬ್ಬರು, “ಈ ಚಿತ್ರದಲ್ಲಿ ನಿಮ್ಮ ಹಾಗೂ ಶಾಹಿದ್ ನಡುವೆ ಒಟ್ಟು ಎಷ್ಟು ಕಿಸ್ಸಿಂಗ್ ಸೀನ್ ಇದೆ” ಎಂದು ಕೈರಾರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕೈರಾ “ನಾನು ಎಷ್ಟು ಕಿಸ್ ಮಾಡಿದೆ ಎಂದು ಎಣಿಸಲಿಲ್ಲ” ಎಂದು ನಗುತ್ತಾ ಉತ್ತರಿಸಿದ್ದರು.

    ಇದಾದ ಬಳಿಕವೂ ಅವರು ಮತ್ತೆ ಕಿಸ್ ಬಗ್ಗೆ ಕೈರಾರನ್ನು ಪ್ರಶ್ನಿಸಿದ್ದರು. ಆಗ ಶಾಹಿದ್ ನಿಮಗೆ ದೀರ್ಘಕಾಲದ ಗೆಳತಿ ಇಲ್ಲವಾ? ನೀವು ಕಿಸ್ ಹೊರತಾಗಿ ಬೇರೆ ವಿಷಯದ ಬಗ್ಗೆ ಪ್ರಶ್ನಿಸಲು ಆಗಲ್ವಾ? ಈ ಚಿತ್ರದಲ್ಲಿ ನಾವು ಸಾಕಷ್ಟು ನಟನೆ ಕೂಡ ಮಾಡಿದ್ದೇವೆ ಎಂದು ವರದಿಗಾರನ ವಿರುದ್ಧ ಕೋಪಗೊಂಡಿದ್ದರು.

    ಮತ್ತೊಬ್ಬ ವರದಿಗಾರರು ಈ ಚಿತ್ರದ ಟ್ರೈಲರ್ ನಲ್ಲಿ ಕೇವಲ ಮದ್ಯ, ಸಿಗರೇಟ್, ಡ್ರಗ್ಸ್ ಗಳ ದೃಶ್ಯ ತುಂಬಿದೆ ಎಂದು ಈ ಬಗ್ಗೆ ಶಾಹಿದ್ ಅವರನ್ನು ಪ್ರಶ್ನಿಸಲಾಗಿತ್ತು. ಆಗ ಶಾಹಿದ್ ಮದ್ಯ ಹಾಗೂ ಸಿಗರೇಟ್ ಕೇವಲ ಸಿನಿಮಾದ ಪಾತ್ರಕ್ಕಾಗಿ ಉಪಯೋಗಿಸಲಾಗಿದೆ. ಪ್ರೇಕ್ಷಕರು ಈ ವಸ್ತುಗಳಿಂದ ಆಕರ್ಷಣೆಗೆ ಒಳಗಾಗಬಾರದು ಎಂದರು.

    ತೆಲುಗಿನ `ಅರ್ಜುನ್ ರೆಡ್ಡಿ’ ಸಿನಿಮಾವನ್ನು ಹಿಂದಿಯಲ್ಲಿ `ಕಬೀರ್ ಸಿಂಗ್’ ಆಗಿ ರಿಮೇಕ್ ಮಾಡಲಾಗಿದೆ. ತೆಲುಗಿನಲ್ಲಿ ನಟ ವಿಜಯ್ ದೇವರಕೊಂಡ `ಅರ್ಜುನ್ ರೆಡ್ಡಿ’ ಆಗಿ ನಟಿಸಿದ್ದರು. ಸದ್ಯ ಕಬೀರ್ ಸಿಂಗ್ ಚಿತ್ರ ಜೂನ್ 21ರಂದು ಬಿಡುಗಡೆ ಆಗಲಿದೆ.

  • ಕಾರಿನ ಡೋರ್ ಕ್ಲೋಸ್ ಮಾಡದ್ದಕ್ಕೆ ನಟ ಶಾಹಿದ್ ಟ್ರೋಲ್: ವಿಡಿಯೋ ನೋಡಿ

    ಕಾರಿನ ಡೋರ್ ಕ್ಲೋಸ್ ಮಾಡದ್ದಕ್ಕೆ ನಟ ಶಾಹಿದ್ ಟ್ರೋಲ್: ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಕಾರಿನ ಡೋರ್ ಕ್ಲೋಸ್ ಮಾಡದ್ದಕ್ಕೆ ಟ್ರೋಲ್ ಆಗುತ್ತಿದ್ದಾರೆ.

    ಇತ್ತೀಚೆಗೆ ಶಾಹಿದ್ ಕಪೂರ್ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಫೋಟೋಗ್ರಾಫರ್ ವಿರಲ್‍ಭಯಾನಿ, ನಟ ಶಾಹಿದ್ ಕಾರಿನಿಂದ ಇಳಿದು ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಈ ವಿಡಿಯೋದಲ್ಲಿ ಶಾಹಿದ್ ಕಪೂರ್ ಕಾರಿನಿಂದ ತಮ್ಮ ಬ್ಯಾಗ್ ತೆಗೆದುಕೊಂಡು ಡೋರ್ ಕ್ಲೋಸ್ ಮಾಡದೇ ಹಾಗೇ ವಿಮಾನ ನಿಲ್ದಾಣದ ಕಡೆ ಹೋಗುತ್ತಿದ್ದರು. ಈ ವಿಡಿಯೋ ನೋಡಿದ ಜನರು ಶಾಹಿದ್ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಈ ವಿಡಿಯೋ ನೋಡಿ ಒಬ್ಬರು, ಕಾರಿನ ಡೋರ್ ಕ್ಲೋಸ್ ಮಾಡುವುದು ಒಂದು ಚಿಕ್ಕ ಕೆಲಸ. ಅದು ನಿಮಗೆ ಮಾಡಲು ಸಾಧ್ಯವಿಲ್ಲವೇ ಎಂದು ಕಮೆಂಟ್ ಹಾಕಿದ್ದಾರೆ. ಮತ್ತೆ ಕೆಲವರು, ನಿಮ್ಮ ಸಿಬ್ಬಂದಿಯನ್ನು ಗೌರವಿಸಿ. ಇಲ್ಲದಿದ್ದರೆ ನಿಮ್ಮ ಸ್ಟಾರ್ ಗಿರಿ ನಿಮಿಷದಲ್ಲಿ ಕಡಿಮೆ ಆಗುತ್ತದೆ ನೆನಪಿರಲಿ ಎಂದು ಕಮೆಂಟ್ ಮಾಡಿದ್ದಾರೆ.

    ತೆಲುಗಿನ ‘ಅರ್ಜುನ್ ರೆಡ್ಡಿ’ ಸಿನಿಮಾವನ್ನು ಹಿಂದಿಯಲ್ಲಿ ‘ಕಬೀರ್ ಸಿಂಗ್’ ಆಗಿ ರಿಮೇಕ್ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಶಾಹಿದ್ ನಟನಾಗಿ ಅಭಿನಯಿಸುತ್ತಿದ್ದಾರೆ. ತೆಲುಗಿನಲ್ಲಿ ನಟ ವಿಜಯ್ ದೇವರಕೊಂಡ ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು.

     

    View this post on Instagram

     

    #shahidkapoor today at the airport

    A post shared by Viral Bhayani (@viralbhayani) on

  • ಶಾಹಿದ್ ಕಪೂರ್ ಆಟೋಗ್ರಾಫ್‍ಗಾಗಿ ಜಾಕೆಟ್ ಬಿಚ್ಚಿದ ಯುವತಿ..!

    ಶಾಹಿದ್ ಕಪೂರ್ ಆಟೋಗ್ರಾಫ್‍ಗಾಗಿ ಜಾಕೆಟ್ ಬಿಚ್ಚಿದ ಯುವತಿ..!

    ಡೆಹ್ರಾಡೂನ್: ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಅಭಿಮಾನಿಯೊಬ್ಬಳು ಎಲ್ಲರ ಮುಂದೆಯೇ ತನ್ನ ಜಾಕೆಟ್ ಬಿಚ್ಚಿ ಆಟೋಗ್ರಾಫ್ ಪಡೆದಿದ್ದನ್ನ ನೋಡಿ ಶೂಟಿಂಗ್‍ ಸ್ಥಳದಲ್ಲಿದ್ದವರು ದಂಗಾಗಿದ್ದಾರೆ.

    ಉತ್ತರಖಂಡ್‍ನ ಮಸ್ಸೂರಿಯಲ್ಲಿ ಶುಕ್ರವಾರದಂದು ಶಾಹಿದ್ ಕಪೂರ್ ತಮ್ಮ ಚಿತ್ರವೊಂದರ ಶೂಟಿಂಗ್‍ನಲ್ಲಿ ತೊಡಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಯುವತಿಯೊಬ್ಬಳು ಶಾಹಿದ್ ಬಳಿ ಆಟೋಗ್ರಾಫ್ ನೀಡುವಂತೆ ಕೇಳಿದ್ದಾಳೆ. ಬಳಿಕ ಎಲ್ಲರ ಮುಂದೆಯೇ ತನ್ನ ಜಾಕೆಟ್ ಬಿಚ್ಚಿ, ಶರ್ಟ್ ಮೇಲೆ ಆಟೋಗ್ರಾಫ್ ಹಾಕಿಸಿಕೊಂದಿದ್ದಾಳೆ. ಇದನ್ನು ನೋಡಿದ ಜನರು ಎಂಥಾ ವಿಚಿತ್ರ ಅಭಿಮಾನಿಯಪ್ಪ ಅಂತ ಅಚ್ಚರಿ ಪಟ್ಟಿದ್ದಾರೆ.

    ಸೂಪರ್ ಕೂಲ್ ಲೊಕೇಶನ್ನಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ, ಬ್ರೇಕ್ ಸಮಯದಲ್ಲಿ ಶಾಹಿದ್ ಕಪೂರ್ ಹಾಗೂ ನಟಿ ಕಿಯಾರ ಅವರು ಸುಂದರ ಪರ್ವತಗಳ ಸೌಂದರ್ಯವನ್ನು ಸವಿಯುತ್ತ ಫೋಟೋಗಳಿಗೆ ಫೋಸ್ ನೀಡಿ ಖುಷಿ ಪಟ್ಟಿದ್ದಾರೆ.

    ನಿರ್ದೇಶಕ ಕಬೀರ್ ಸಿಂಹ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿತ್ತಿದ್ದು, ಶೂಟಿಂಗ್ ಸ್ಥಳದಲ್ಲಿ ಹೆಚ್ಚು ಹಿಮಪಾತವಾದ ಕಾರಣಕ್ಕೆ ಆ ದಿನದ ಸಿನಿಮಾ ಚಿತ್ರೀಕರಣವನ್ನು ನಿಲ್ಲಿಸಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಹಿದ್ ಕಪೂರ್ ಶೂಟಿಂಗ್ ಸೆಟ್‍ನಲ್ಲಿ ವ್ಯಕ್ತಿ ಸಾವು

    ಶಾಹಿದ್ ಕಪೂರ್ ಶೂಟಿಂಗ್ ಸೆಟ್‍ನಲ್ಲಿ ವ್ಯಕ್ತಿ ಸಾವು

    ಡೆಹ್ರಾಡೂನ್: ಬಾಲಿವುಡ್ ನಟ ಶಾಹಿದ್ ಕಪೂರ್ ನಟಿಸುತ್ತಿರುವ ‘ಕಬೀರ್ ಸಿಂಗ್’ ಚಿತ್ರದ ಸೆಟ್‍ನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

    ರಾಮ್ ಕುಮಾರ್(35) ಮೃತಪಟ್ಟ ವ್ಯಕ್ತಿ. ರಾಮ್ ಕುಮಾರ್ ಡೆಹ್ರಾಡೂನಿನ ಮುಜಾಫರ್ ನಗರದ ಕಿನೋಯಿ ಗ್ರಾಮದ ನಿವಾಸಿಯಾಗಿದ್ದು, ಜನರೇಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಮಸ್ಸೂರಿಯ ಹೋಟೆಲಿನಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.

    ರಾಮ್ ಕುಮಾರ್ ಗುರುವಾರ ಹೋಟೆಲ್‍ನಲ್ಲಿ ಹಾಕಿದ ಸೆಟ್‍ನಲ್ಲಿ ಜನರೇಟರ್ ರಿಪೇರಿ ಮಾಡುತ್ತಿದ್ದರು. ರಿಪೇರಿ ಮಾಡುತ್ತಿದ್ದ ವೇಳೆ ಅವರ ಮಫ್ಲರ್ ಫ್ಯಾನಿಗೆ ಸಿಲುಕಿಕೊಂಡು ಅವರ ತಲೆ ಫ್ಯಾನಿಗೆ ಬಡಿದಿದೆ. ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ರಾಮ್ ಕುಮಾರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ.

    ರಾಮ್ ಕುಮಾರ್ ಮೃತಪಟ್ಟ ವಿಷಯವನ್ನು ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ರಾಮ್ ಕುಮಾರ್ ಮೃತದೇಹದ ಮರಣೋತ್ತರ ಪರೀಕ್ಷೆ ಶುಕ್ರವಾರ ಅಂದರೆ ಇಂದು ನಡೆಯಲಿದೆ ಎಂದು ಸಬ್ ಇನ್ಸ್ ಪೆಕ್ಟರ್ ನೀರಜ್ ಕತೈತ್ ತಿಳಿಸಿದ್ದಾರೆ.

    ಈ ಘಟನೆ ನಡೆಯುವಾಗ ನಟ ಶಾಹಿದ್ ಕಪೂರ್ ಶೂಟಿಂಗ್ ಸೆಟ್‍ನಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಅಲ್ಲದೇ ಈ ಘಟನೆ ನಡೆದ ನಂತರ ಚಿತ್ರದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ತೆಲುಗಿನ ‘ಅರ್ಜುನ್ ರೆಡ್ಡಿ’ ಸಿನಿಮಾವನ್ನು ಹಿಂದಿಯಲ್ಲಿ ಕಬೀರ್ ಸಿಂಗ್ ಆಗಿ ರಿಮೇಕ್ ಮಾಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಹಿದ್ ಕಪೂರ್ ಲಿಪ್‍ಲಾಕ್ ಫೋಟೋ ವೈರಲ್

    ಶಾಹಿದ್ ಕಪೂರ್ ಲಿಪ್‍ಲಾಕ್ ಫೋಟೋ ವೈರಲ್

    ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ತನ್ನ ಪತ್ನಿ ಮೀರಾ ರಜ್‍ಪುತ್ ಜೊತೆ ಲಿಪ್‍ಲಾಕ್ ಮಾಡಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಶಾಹಿದ್ ಪತ್ನಿ ಮೀರಾ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮೀರಾ ತನ್ನ ಪತಿ ಶಾಹಿದ್‍ಗೆ ಕಿಸ್ ಮಾಡುತ್ತಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ಕೇವಲ ಪ್ರೀತಿ, ದೀಪಾವಳಿಯ ಶುಭಾಶಯಗಳು” ಎಂದು ಪೋಸ್ಟ್ ಮಾಡಿದ್ದಾರೆ.

    ಇತ್ತೀಚೆಗೆ ಶಾಹಿದ್ ಹಾಗೂ ಮೀರಾ ಎರಡನೇ ಮಗುವಿಗೆ ತಂದೆ- ತಾಯಿಯಾದರು. ಮೀರಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಆತನಿಗೆ ಝೈನ್ ಎಂದು ಹೆಸರಿಟ್ಟಿದ್ದಾರೆ. ಶಾಹಿದ್ ಹಾಗೂ ಮೀರಾಗೆ 2 ವರ್ಷದ ಮಗಳು ಕೂಡ ಇದ್ದಾಳೆ.

    ಸದ್ಯ ಶಾಹಿದ್ ತೆಲುಗು ಸೂಪರ್ ಹಿಟ್ ‘ಅರ್ಜುನ್ ರೆಡ್ಡಿ’ ಚಿತ್ರವನ್ನು ಹಿಂದಿಯ ‘ಕಬೀರ್ ಸಿಂಗ್’ ರಿಮೇಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

     

    View this post on Instagram

     

    Only love ????Happy Diwali!

    A post shared by Mira Rajput Kapoor (@mira.kapoor) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಡು ಮಗುವಿಗೆ ತಂದೆಯಾದ ಶಾಹಿದ್ ಕಪೂರ್

    ಗಂಡು ಮಗುವಿಗೆ ತಂದೆಯಾದ ಶಾಹಿದ್ ಕಪೂರ್

    ಮುಂಬೈ: ಬಾಲಿವುಡ್ ಚಾಕಲೇಟ್ ಹೀರೋ ಶಾಹಿದ್ ಕಪೂರ್ ಬುಧವಾರ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಮೀರಾ ರಜಪೂತ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

    ಬುಧವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿದ್ದ ಮೀರಾ ರಜಪೂತ್ ಸಂಜೆ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆಸ್ಪತ್ರೆಯಲ್ಲಿ ಮೀರಾ ತಾಯಿ ಬೇಲಾ ರಜಪೂತ್, ಅತ್ತೆ ನೀಲಿಮಾ ಅಜಿಮ್, ಶಾಹಿದ್ ಸೋದರ ಇಶಾನ್ ಖಟ್ಟರ್ ಎರಡೂ ಕುಟುಂಬದ ಸದಸ್ಯರು ಗಂಡು ಮಗವನ್ನು ಸ್ವಾಗತಿಸಿದ್ದಾರೆ.

    ಶಾಹಿದ್ ಮತ್ತು ಮೀರಾ ಜುಲೈ 6, 2015ರಂದು ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದರು. ಶಾಹಿದ್ ಮತ್ತು ಮೀರಾ ಬಾಲಿವುಡ್ ಅಂಗಳದಲ್ಲಿ ಬಹು ಚರ್ಚೆಗೆ ಒಳಗಾದ ಜೋಡಿ ಅಂತಾನೇ ಕರೆಸಿಕೊಳ್ಳುವುದುಂಟು. ಮೀರಾ 2016ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದಂಪತಿ ತಮ್ಮ ಹೆಸರಿನ ಮೊದಲ ಅಕ್ಷರ ಸೇರಿದಿ ಮಗಳಿಗೆ ‘ಮಿಶಾ’ ಎಂದು ನಾಮಕರಣ ಮಾಡಿದ್ದರು. ಶಾಹಿದ್ ಸದ್ಯ ‘ಬತ್ತಿ ಗುಲ್ ಮೀಟರ್ ಚಾಲು’ ಸಿನಿಮಾದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv