Tag: Shahid Kapoor

  • ಹುಚ್ಚರಂತೆ ಯಾಕೆ ಕೂಗುತ್ತಿದ್ದೀರಾ? ಪಾಪರಾಜಿಗಳಿಗೆ ಶಾಹಿದ್ ಕಪೂರ್ ಕ್ಲಾಸ್

    ಹುಚ್ಚರಂತೆ ಯಾಕೆ ಕೂಗುತ್ತಿದ್ದೀರಾ? ಪಾಪರಾಜಿಗಳಿಗೆ ಶಾಹಿದ್ ಕಪೂರ್ ಕ್ಲಾಸ್

    ಬಾಲಿವುಡ್ ನಟ ಶಾಹಿದ್ ಕಪೂರ್ (Shahid Kapoor) ಈಗ ಸಿನಿಮಾ ವಿಚಾರದ ಬದಲಾಗಿ ಕಿರಿಕ್ ಸುದ್ದಿ ಮೂಲಕ ಸದ್ದು ಮಾಡ್ತಿದ್ದಾರೆ. ಕಾರ್ಯಕ್ರಮವೊಂದಕ್ಕೆ ಪತ್ನಿ ಮೀರಾ (Meera) ಜೊತೆ ಶಾಹಿದ್ ಆಗಮಿಸುತ್ತಿದ್ದ ವೇಳೆ ಪಾಪರಾಜಿಗಳ ವರ್ತನೆಗೆ ನಟ ಸಿಡಿದೆದ್ದಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

    ಶಾಹಿದ್ ಕಪೂರ್ (Shahid Kapoor) ಸ್ಟಾರ್‌ಡಮ್ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಬಹಳಷ್ಟು ಪಾಪರಾಜಿಗಳು ಯಾವಾಗಲೂ ಅವರ ಹಿಂದೆ ಇರುತ್ತಾರೆ. ನಿನ್ನೆ (ಸೆ.2) ಕೂಡ ಶಾಹಿದ್ ಕಪೂರ್ ಅವರು ಪೋಸ್ ನೋಡುವಂತೆ ಅನೇಕ ಪಾಪರಾಜಿಗಳು ಹೆಸರಿಡಿದು ಕೂಗಿದ್ದಾರೆ. ಇದಕ್ಕೆ ಅಲ್ಲೇ ನಿಂತಿದ್ದ ನಟ ಕೋಪಗೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ಚಿನ್ನು-ಗೊಂಬೆ

     

    View this post on Instagram

     

    A post shared by Varinder Chawla (@varindertchawla)

    ತಮ್ಮ ಪತ್ನಿ ಮೀರಾ ರಜಪೂತ್ ಅವರೊಂದಿಗೆ ಸಮಾರಂಭವೊಂದರಲ್ಲಿ ಭಾಗವಹಿಸಲು ಶಾಹಿದ್ ಹೊರಗೆ ಹೋಗಿದ್ದರು. ಈ ವೇಳೆ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ನೀವು ಯಾಕೆ ಕೂಗುತ್ತಿದ್ದೀರಿ? ನಾನು ಇಲ್ಲಿಯೇ ಇದ್ದೇನೆ. ನೀವು ಹುಚ್ಚನಂತೆ ಏಕೆ ಕೂಗುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದರು. ನಾನು ನನ್ನ ಕಾರಿನಲ್ಲಿ ಇಲ್ಲಿಂದ ತೆರಳಿದ ನಂತರ ನೀವು ಕೂಗಬಹುದು. ಅದರಲ್ಲಿ ಅರ್ಥವಿದೆ. ನಾನು ಇಲ್ಲಿಯೇ ಇದ್ದರೂ ಯಾಕೆ ಹಿಂಗೆ ಕೂಗುತ್ತಿದ್ದಿರಿ? ಎಂದು ತುಂಬಾ ಕೋಪದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಅವರ ಜೊತೆಗೆ ಅವರ ತಾಯಿ ಮತ್ತು ಪತ್ನಿ ಇದ್ದರು.

    ಶಾಹಿದ್ ಕಪೂರ್ ‘ಡಬಲ್ ಟ್ರಬಲ್’ (Double Trouble) ಎಂಬ ಸಿನಿಮಾದಲ್ಲಿ ನಟಿಸಬೇಕಿತ್ತು. ಕಾರಣಾಂತರಗಳಿಂದ ಈ ಚಿತ್ರದಿಂದ ಅವರು ಹೊರಬಂದಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ(Rashmika Mandanna) ನಾಯಕಿಯಾಗಿದ್ದರು. ಸದ್ಯ ನಟ, ಕೋಯಿ ಶಕ್ ಎಂಬ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಕರೀನಾ ಕಪೂರ್ (Kareena Kapoor) ಜೊತೆಗಿನ ಹೊಸ ಸಿನಿಮಾಗೆ ಶಾಹಿದ್ ಓಕೆ ಎಂದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಿವುಡ್ ಸಿನಿಮಾ ಅವಕಾಶಕ್ಕಾಗಿ ಎಡವಟ್ಟು ಮಾಡಿಕೊಂಡ ರಶ್ಮಿಕಾ ಮಂದಣ್ಣ

    ಬಾಲಿವುಡ್ ಸಿನಿಮಾ ಅವಕಾಶಕ್ಕಾಗಿ ಎಡವಟ್ಟು ಮಾಡಿಕೊಂಡ ರಶ್ಮಿಕಾ ಮಂದಣ್ಣ

    ಶ್ಮಿಕಾಗೆ (Rashmika Mandanna) ಮರ್ಮಾಘಾತ. ನೋಡನೋಡುತ್ತಿದ್ದಂತೆಯೇ ಕಣ್ಣ ಮುಂದೆಯೇ ಸಿಕ್ಕ ಅವಕಾಶ ನೀರು ಪಾಲಾಗಿದೆ. ಟಾಲಿವುಡ್ ನಟನಿಗೆ ಕೈ ಕೊಟ್ಟು ಬಾಲಿವುಡ್ ನಟನ ಜೊತೆ ಕುಣಿತಕ್ಕೆ ಇಳಿಯಲು ಸಜ್ಜಾಗಿದ್ದ ಸಾನ್ವಿ ಆಕಾಶ ನೋಡುವಂತಾಗಿದೆ. ಏನಾಯಿತು ಶ್ರೀವಲ್ಲಿಗೆ? ಕೈ ಕೊಟ್ಟಿದ್ಯಾರು? ಯಾಕೆ? ಇಲ್ಲಿದೆ ಮಾಹಿತಿ.

    ರಶ್ಮಿಕಾ ಮುಖ ಮುಚ್ಚಿಕೊಂಡಿದ್ದಾರೆ. ಇನ್ನೊಂದು ಕಡೆ ಟಾಲಿವುಡ್ ಸ್ಟಾರ್ ನಿತಿನ್ (Nithin) ಗಹಗಹಿಸಿದ್ದಾರೆ. ಸೇಮ್ ಟೈಮ್ ಶ್ರೀಲೀಲಾ ಕೇಕೆ ಹಾಕಿದ್ದಾರೆ. ವಾಟ್ ಈಸ್ ದಿಸ್? ಇದೆಲ್ಲ ಯಾಕಾಯಿತು? ರಶ್ಮಿಕಾ ಮಾಡಿದ ತಪ್ಪೇನು? ಉತ್ತರ ಇಲ್ಲಿದೆ. ತೆಲುಗು ನಟ ನಿತಿನ್ ಜೊತೆ ರಶ್ಮಿಕಾ ಅಭಿನಯಿಸಬೇಕಿತ್ತು. ಕಾಲ್‌ಶೀಟ್ ಕೂಡ ಕೊಟ್ಟಿದ್ದರು. ಆದರೆ ಅದೇ ಹೊತ್ತಿಗೆ ಬಾಲಿವುಡ್ ಶಾಹೀದ್ ಕಪೂರ್(Shahid Kapoor) ಸಿನಿಮಾಕ್ಕೆ ಡೇಟ್ ಕೇಳಿತು. ಎರಡೂ ಕಾಲಿನಿಂದ ಕುಣಿಕುಣಿದು ಎಸ್ ಎಂದರು. ನಿತಿನ್ ಕೈಗೆ ಖಾಲಿ ಗ್ಲಾಸ್ ಇಟ್ಟರು. ಇದನ್ನೂ ಓದಿ:ಬಿಕಿನಿ ಫೋಟೋಶೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ಸೋನು ಗೌಡ

    ಈ ಸುದ್ದಿ ಹೊರಬಿದ್ದಾಗ ನಿತಿನ್ ಕೆಂಡಕೆಂಡ. ಭೀಷ್ಮ (Bheeshma) ಸಿನಿಮಾದಲ್ಲಿ ಜಂಟಿಯಾಗಿತ್ತು ಈ ಜೋಡಿ. ಆಗ ಅವಕಾಶ ಕಮ್ಮಿ ಇದ್ದವು. ರಶ್ಮಿಕಾ ಕೆಮ್ಮದೆ ಒಪ್ಪಿದ್ದರು. ಈಗ ಬೆರಳಿಗೊಂದು ಚಾನ್ಸ್. ಹೀಗಾಗಿ ಮುಖ ತಿರುವಿದರು. ಸಮಯ ತಿಪ್ಪರಲಾಗ ಹಾಕಿಸದೆ ಬಿಡುತ್ತಾ ? ಶಾಹೀದ್ ಚಿತ್ರ ಬಜೆಟ್ ಸಮಸ್ಯೆಯಿಂದ ಈ ಪ್ರಾಜೆಕ್ಟ್‌ನ ಕೈಚೆಲ್ಲಿದೆ ಚಿತ್ರತಂಡ. ರಶ್ಮಿಕಾ ಚೌಕಾಬಾರ ಆಡುವಂತಾಗಿದೆ. ನಿತಿನ್ ಪಕ್ಕ ಶ್ರೀಲೀಲಾ (Sreeleela) ಮೆರವಣಿಗೆ ಹೊರಟಿದ್ದಾರೆ. ಹತ್ತಿದ ಏಣಿ ಒದ್ದವರಿಗೆ ದೇವರು ನೀರಿಲ್ಲದ ಬಾವಿ ತೋರಿಸದಿರುತ್ತಾನಾ? ಶಾಹಿದ್‌ ಜೊತೆ ಡ್ಯುಯೇಟ್‌ ಹಾಡುವ ಕನಸು ಹೊತ್ತಿದ್ದ ರಶ್ಮಿಕಾಗೆ ಶಾಕ್‌ ಆಗಿದೆ.

    ಬಾಲಿವುಡ್ (Bollywood) ಸಿನಿಮಾಗಾಗಿ ಕೈಯಲ್ಲಿದ್ದ ತೆಲುಗು ಸಿನಿಮಾ ಕೈ ಬಿಟ್ಟು ಎಡವಟ್ಟು ಮಾಡಿಕೊಂಡರು ರಶ್ಮಿಕಾ. ಈಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬ ಪರಿಸ್ಥಿತಿ ಎದುರಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಳೆಯಲ್ಲೇ ರೊಮ್ಯಾಂಟಿಕ್ ಸಾಂಗ್‍ಗೆ ಸ್ಟೆಪ್ ಹಾಕಿದ ಜೋಡಿ

    ಮಳೆಯಲ್ಲೇ ರೊಮ್ಯಾಂಟಿಕ್ ಸಾಂಗ್‍ಗೆ ಸ್ಟೆಪ್ ಹಾಕಿದ ಜೋಡಿ

    ಜೋಡಿಯೊಂದು ಸುರಿವ ಮಳೆಯಲ್ಲೇ (Rain)`ತುಮ್ ಸೆ ಹಿ’ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ಆಗಿರುವ ವೀಡಿಯೋದಲ್ಲಿ ಜೋಡಿ, ವಾಹನಗಳು ಹಾದುಹೋಗುವಾಗ ರಸ್ತೆಯ ಪಕ್ಕದಲ್ಲಿ `ಜಬ್ ವಿ ಮೆಟ್’ ಚಿತ್ರದ ಹಾಡಿನ ದೃಶ್ಯವನ್ನು ಮರು ಸೃಷ್ಟಿಸಿದ್ದಾರೆ. ಡ್ಯಾನ್ಸ್ ಮಾಡುವಾಗ ಅವರ ಮುಖದಲ್ಲಿನ ನಗು ಸಾಮಾಜಿಕ ಜಾಲತಾಣದಲ್ಲಿ ಹಲವರನ್ನು ಸೆಳೆದಿದೆ. ಇದನ್ನೂ ಓದಿ: ಸಿನಿಮಾ ಸ್ಟೈಲಲ್ಲಿ ಪಿಸ್ತೂಲ್ ತೋರಿಸಿ ಉದ್ಯಮಿಗೆ ಬೆದರಿಕೆ – 50 ಲಕ್ಷ ರೂ. ದರೋಡೆ

    ಶಾಹಿದ್ ಕಪೂರ್ (Shahid Kapoor) ಮತ್ತು ಕರೀನಾ ಕಪೂರ್ (Kareena Kapoor) ಅಭಿನಯದ `ಜಬ್ ವಿ ಮೆಟ್’ ಚಿತ್ರ ಕಳೆದ ಎರಡು ದಶಕದಲ್ಲಿ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದ ನಾಯಕಿ ಕರೀನಾ ಕಪೂರ್ ಅವರ ಪಾತ್ರವು ಬಹಳ ಜನಪ್ರಿಯವಾಗಿದೆ. ಈ ಸಿನಿಮಾ ಯುವ ಪೀಳಿಗೆಯ ಮೇಲೆ ಭಾರಿ ಪ್ರಭಾವ ಬೀರಿತ್ತು. ಚಿತ್ರದಲ್ಲಿ ಶಾಹಿದ್ ಕಪೂರ್ ಅವರ ಅಭಿನಯವನ್ನು ಅನೇಕ ಜನರು ಇಷ್ಟಪಟ್ಟಿದ್ದಾರೆ.

    31 ಸೆಕೆಂಡುಗಳ ಈ ವೀಡಿಯೋವನ್ನು ಎರಡು ಲಕ್ಷ ಜನ ವೀಕ್ಷಿಸಿದ್ದಾರೆ. ಮೂರು ಸಾವಿರ ಲೈಕ್ ಪಡೆದಿದೆ. ಇದಕ್ಕೆ ಕಾಮೆಂಟ್ ಮಾಡಿರುವ ವ್ಯಕ್ತಿಯೊಬ್ಬ ಅವರಿಬ್ಬರೂ, ಶಾಶ್ವತವಾಗಿ ಹೀಗೆ ಇರಲಿ ಎಂದಿದ್ದಾರೆ. ಇನ್ನೊಬ್ಬ, ಸಾರ್ವಜನಿಕರಿಗೆ ತೊಂದರೆ ಕೊಡುವ ನಿಮ್ಮನ್ನು ಪೊಲೀಸರು ಬಂಧಿಸಿದರೆ ಎಲ್ಲಾ ಸರಿಯಾಗುತ್ತದೆ ಎಂದಿದ್ದಾರೆ.

    ಫುಟ್‍ಪಾತ್‍ಗಳು ಭಾರತದಲ್ಲಿ ಡ್ಯಾನ್ಸ್‌ ಸ್ಟೇಜ್‍ಗಳಾಗಿವೆ. ನಾನು ಈ ರೀತಿ ಮಳೆಯಲ್ಲಿ ಡ್ಯಾನ್ಸ್ ಮಾಡಿದರೆ ನನಗೆ ಜ್ವರವೇ ಬರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕ್ಯಾಮೆರಾಗಳಿಲ್ಲದೆ ಇದನ್ನೆಲ್ಲ ಮಾಡಿ ಎಂದು ಮತ್ತೊಬ್ಬ ವ್ಯಕ್ತಿ ಬರೆದಿದ್ದಾನೆ. ಇದನ್ನೂ ಓದಿ: ಜೈನಮುನಿ ಹತ್ಯೆಯ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಲಿ : ಮನಗೂಳಿಯ ಹಿರೇಮಠದ ಸಂಗನಬಸವ ಶ್ರೀ ಆಗ್ರಹ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮಿತಾಭ್ ನಂತರ ಶಾಹಿದ್ ಕಪೂರ್ ಜೊತೆ ತೆರೆಹಂಚಿಕೊಳ್ಳಲಿದ್ದಾರೆ ನ್ಯಾಷನಲ್ ಕ್ರಶ್

    ಅಮಿತಾಭ್ ನಂತರ ಶಾಹಿದ್ ಕಪೂರ್ ಜೊತೆ ತೆರೆಹಂಚಿಕೊಳ್ಳಲಿದ್ದಾರೆ ನ್ಯಾಷನಲ್ ಕ್ರಶ್

    ಬಾಲಿವುಡ್ (Bollywood) ಸಿನಿಮಾ ರಂಗದಲ್ಲಿ ಮತ್ತೆ ಮಿಂಚಲು ರೆಡಿಯಾಗಿದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna). ಈಗಾಗಲೇ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಜೊತೆ ಬಿ ಟೌನ್ ನಲ್ಲಿ ತೆರೆ ಹಂಚಿಕೊಂಡಿರುವ ರಶ್ಮಿಕಾ, ಇದೀಗ ಶಾಹಿದ್ ಕಪೂರ್ (Shahid Kapoor) ಮುಖ್ಯ ಭೂಮಿಕೆಯ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

    ಈಗಾಗಲೇ ಬಾಲಿವುಡ್ ನಲ್ಲಿ ರಶ್ಮಿಕಾ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ಜೊತೆ ಆನಿಮಲ್ ಚಿತ್ರದಲ್ಲಿ ನಟಿಸುತ್ತಿದ್ದು, ವಿಕ್ಕಿ ಕೌಶಲ್ ಜೊತೆಯೂ ಒಂದು ಸಿನಿಮಾ ಮಾಡುತ್ತಿದ್ದಾರೆ. ಅಲ್ಲದೇ, ಛತ್ರಪತಿ ಶಿವಾಜಿ ಕುರಿತಾದ ಸಿನಿಮಾಗೂ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದ. ಈ ನಡುವೆ ಶಾಹಿತ್ ಅವರ ಹೊಸ ಸಿನಿಮಾ ಕೂಡ ರಶ್ಮಿಕಾಗೆ ಒಲಿದು ಬಂದಿದೆ. ಇದನ್ನೂ ಓದಿ:ಬಂದೂಕಿನೊಂದಿಗೆ ಆಟವಾಡಿದ ‘ಬಿಗ್ ಬಾಸ್’ ಅಬ್ದು ರೋಜಿಕ್‌ ವಿರುದ್ಧ ಪ್ರಕರಣ ದಾಖಲು

    ದಿಲ್ ರಾಜು, ಏಕ್ತಾ ಕಪೂರ್  ಜಂಟಿಯಾಗಿ ನಿರ್ಮಾಣ ಮಾಡಲಿರುವ, ಅನೀಸ್ ಬಾಜ್ಮಿ ನಿರ್ದೇಶನದಲ್ಲಿ ತಯಾರಾಗುವ ಹೊಸ ಚಿತ್ರಕ್ಕೆ ರಶ್ಮಿಕಾ ನಾಯಕಿ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಶಾಹಿದ್ ಹೊಸ ಬಗೆಯ ಪಾತ್ರ ಮಾಡುತ್ತಿರುವುದರಿಂದ ರಶ್ಮಿಕಾ ನಾಯಕಿಯಾದರೆ ಬೆಸ್ಟ್ ಎನ್ನುವ ಮಾತು ಚಿತ್ರತಂಡದಿಂದ ಬಂದಿದೆಯಂತೆ. ಹಾಗಾಗಿ ಅನೀಸ್ ಈಗಾಗಲೇ ರಶ್ಮಿಕಾ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಹತ್ತು ಹಲವು ವಿಶೇಷಗಳನ್ನು ಈ ಸಿನಿಮಾ ಹೊಂದಿದ್ದು, ಶಾಹಿದ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಪಾತ್ರಕ್ಕಾಗಿ ಈಗಾಗಲೇ ಅವರು ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರಂತೆ. ಅಚ್ಚರಿಯ ತಾರಾಗಣವೇ ಸಿನಿಮಾದಲ್ಲಿ ಇರಲಿದ್ದು, ಭಾರೀ ಬಜೆಟ್ ನಲ್ಲಿ ತಯಾರಾಗುವ ಸಿನಿಮಾ ಇದಾಗಿದೆ.

  • ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಸಾಲು ಸಾಲು ಸಿನಿಮಾಗಳು ಸೋತಿದ್ದರೂ ಕೂಡ ಪೂಜಾಗೆ ಇರುವ ಬೇಡಿಕೆ ಕಮ್ಮಿಯಾಗಿಲ್ಲ. ಇತ್ತೀಚಿನ ಸಲ್ಮಾನ್ ಜೊತೆಗಿನ ‘ಕಿಸಿ ಕಾ ಜಾನ್ ಕಿಸಿ ಕಿ ಭಾಯ್’ (Kisi Ka Jaan Kisi Ki Jaan) ಚಿತ್ರ ಕಲೆಕ್ಷನ್‌ನಲ್ಲಿ ಫ್ಲಾಪ್ ಆಗಿದೆ. ಹೀಗಿದ್ದರೂ ಪೂಜಾಗೆ ಬಾಲಿವುಡ್‌ನಿಂದ ಮತ್ತೊಂದು ಬಿಗ್ ಪ್ರಾಜೆಕ್ಟ್ ಸಿಕ್ಕಿದೆ.

    ಪೂಜಾ ಹೆಗ್ಡೆ ಅವರು 2020ರ ನಂತರ ನಟಿಸಿದ ರಾಧೆ ಶ್ಯಾಮ್, ಬಿಸ್ಟ್, ಆಚಾರ್ಯ (Acharya) ಸಿನಿಮಾ ಸೇರಿದಂತೆ ಬರೋಬ್ಬರಿ ಆರು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಕರಾವಳಿ ಸುಂದರಿ ಪೂಜಾಗೆ ಅಂದ ಚೆಂದ, ಪ್ರತಿಭೆ ಇದ್ದರೂ ಲಕ್ ಕೈ ಕೊಟ್ಟಿದೆ. ಇದನ್ನೂ ಓದಿ:ನಾನೇನೂ ತಪ್ಪು ಮಾಡಿಲ್ಲ- ನಾಗ ಚೈತನ್ಯ ಜೊತೆಗಿನ ಡೇಟಿಂಗ್ ಸುದ್ದಿಗೆ ಶೋಭಿತಾ ರಿಯಾಕ್ಷನ್

    ಬಾಲಿವುಡ್‌ನ ಡ್ಯಾಶಿಂಗ್ ಹೀರೋ ಶಾಹಿದ್ ಕಪೂರ್ (Shahid Kapoor) ನಾಯಕಿಯಾಗಿ ಪೂಜಾ ಹೆಗ್ಡೆ ಸೆಲೆಕ್ಟ್ ಆಗಿದ್ದಾರೆ. ಥ್ರಿಲ್ಲರ್ ಸಿನಿಮಾವೊಂದರಲ್ಲಿ ಶಾಹಿದ್ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಾಹಿದ್ ಕಪೂರ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ.

    ಸಿನಿಮಾಗೆ ‘ಕೋಯಿ ಶಕ್’ ಎಂದು ಟೈಟಲ್ ಇಡಲಾಗಿದೆ. ಮೇ 8ರಿಂದ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ. ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿರುವ ಪೂಜಾ- ಶಾಹಿದ್ ಪೇರ್ ಮೇಲೆ ಫ್ಯಾನ್ಸ್ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾ ನೋಡಲು ಎದುರು ನೋಡ್ತಿದ್ದಾರೆ.

  • ಬಾಲಿವುಡ್ ನಲ್ಲೂ ಯಶ್ ನಂಬರ್-1 ನಟ ಎಂದು ಹೇಳಿ ಅಚ್ಚರಿ ಮೂಡಿಸಿದ ಶಾಹಿದ್ ಕಪೂರ್

    ಬಾಲಿವುಡ್ ನಲ್ಲೂ ಯಶ್ ನಂಬರ್-1 ನಟ ಎಂದು ಹೇಳಿ ಅಚ್ಚರಿ ಮೂಡಿಸಿದ ಶಾಹಿದ್ ಕಪೂರ್

    ಬಾಲಿವುಡ್ ನಲ್ಲಿ ಈವರೆಗೂ ಖಾನ್, ಕಪೂರ್ ಗಳೇ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದರು. ಇವರ ಹೊರತಾಗಿ ನಂಬರ್ ಗೇಮ್ ನಲ್ಲಿ ಯಾರೂ ಕಾಣಿಸಿಕೊಳ್ಳುತ್ತಿರಲಿಲ್ಲ. ಇಂಥದ್ದೊಂದು ಭದ್ರಕೋಟೆಯನ್ನು ಮೊದಲ ಬಾರಿಗೆ ಬೇಧಿಸಿದವರು ಕನ್ನಡದ ಹೆಮ್ಮೆಯ ನಟ ಯಶ್. ಕೆಜಿಎಫ್ 2 ಸಿನಿಮಾ 2022ರಲ್ಲಿ ಅತೀ ಹೆಚ್ಚು ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡಿದ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 425 ಕೋಟಿ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿದೆ.

    ಈವರೆಗೂ ಯಾವ ಹಿಂದಿ ಸಿನಿಮಾವೂ ಮಾಡದೇ ಇರುವ ದಾಖಲೆಯನ್ನು ಕೆಜಿಎಫ್ 2 ಸಿನಿಮಾ ಮಾಡಿದ್ದರಿಂದ, ಬಾಲಿವುಡ್ ನಲ್ಲಿ ನಂಬರ್ 1 ನಟ ಯಾರು ಅಂತ ಕೇಳಿದರೆ, ಥಟ್ಟನೆ ಯಶ್ ನೆನಪಾಗುತ್ತಿದ್ದಾರೆ. ಇದು ಕನ್ನಡಿಗರು ಹೇಳುತ್ತಿರುವ ಮಾತಲ್ಲ, ಸ್ವತಃ ಬಾಲಿವುಡ್ ನ ಹೆಸರಾಂತ ನಟ ಶಾಹಿದ್ ಕಪೂರ್ ಅವರೇ ಹೇಳಿರುವ ಮಾತು. ಹಿಂದಿಯಲ್ಲೂ ಯಶ್ ಅವರೇ ನಂ.1 ನಟ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ:ಅಕ್ಷತಾ‌ ಜೊತೆ ರಾಕೇಶ್ ಅಡಿಗ ರೊಮ್ಯಾನ್ಸ್: ಸೋನು ಫುಲ್ ಗರಂ

    ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಹಿದ್, ಬಾಲಿವುಡ್ ನಲ್ಲಿ ಈ ವರ್ಷ ನಂಬರ್ ಒನ್  ಪಟ್ಟ ಯಾರಿಗೆ ಸಲ್ಲುತ್ತದೆ ಎಂದು ಪ್ರಶ್ನೆ ಮಾಡಿದಾಗ, ಕ್ಷಣವೂ ಯೋಚಿಸದೇ ‘ರಾಕಿಭಾಯ್’ ಎಂದು ಉತ್ತರಿಸುತ್ತಾರೆ ಶಾಹಿದ್. ಸ್ವತಃ ಈ ಉತ್ತರವನ್ನು ಕರಣ್ ಕೂಡ ಅರಗಿಸಿಕೊಳ್ಳುವುದಿಲ್ಲ. ಮತ್ತೆ ಪ್ರಶ್ನೆ ಮಾಡುತ್ತಾರೆ. ಆಗಲೂ ರಾಕಿ ಭಾಯ್ ಎನ್ನುವ ಉತ್ತರವೇ ಬರುತ್ತದೆ. ಅಷ್ಟರ ಮಟ್ಟಿಗೆ ಯಶ್ ಬಾಲಿವುಡ್ ಅನ್ನು ಆವರಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಕೆಜಿಎಫ್ 2′ ಮುಂದೆ ನಡೆಯಲಿಲ್ಲ `ಜೆರ್ಸಿ’ ಅಬ್ಬರ: ಶಾಹಿದ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

    `ಕೆಜಿಎಫ್ 2′ ಮುಂದೆ ನಡೆಯಲಿಲ್ಲ `ಜೆರ್ಸಿ’ ಅಬ್ಬರ: ಶಾಹಿದ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

    ವಿಶ್ವಾದ್ಯಂತ `ಕೆಜಿಎಫ್ 2′ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ರಾಕಿಭಾಯ್ ಕ್ರೇಜ್ ಜಾಸ್ತಿಯಾಗ್ತಿದೆ. ಬಾಲಿವುಡ್‌ನಲ್ಲೂ ಯಶ್ ಸಿನಿಮಾಗೆ ಭಾರೀ ಬೇಡಿಕೆ ಸೃಷ್ಠಿಯಾಗಿದೆ. ಈಗ `ಕೆಜಿಎಫ್ 2′ ಚಿತ್ರದ ಮುಂದೆ ಶಾಹಿದ್ ಕಪೂರ್ ನಟನೆಯ `ಜೆರ್ಸಿ’ ರಿಲೀಸ್ ಆಗಿ ಅಭಿಮಾನಿಗಳಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಇದರಿಂದ ರಾಕಿಭಾಯ್ ಚಿತ್ರ ಮತ್ತಷ್ಟು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

    ಶಾಹಿದ್ ಕಪೂರ್ ನಟನೆಯ ಈ ಹಿಂದಿನ ಚಿತ್ರ `ಕಬೀರ್ ಸಿಂಗ್’ ಭರ್ಜರಿ ಸಕ್ಸಸ್ ಕಂಡಿತ್ತು. ಶಾಹಿದ್ ಕಪೂರ್ ಕೆರಿಯರ್‌ನಲ್ಲಿ ಬಿಗ್ ಬ್ರೇಕ್ ಕೊಟ್ಟಿತ್ತು ಈ ಚಿತ್ರ. ಈಗ ತೆಲುಗಿನ ರಿಮೇಕ್ ಜೆರ್ಸಿ ಚಿತ್ರದ ಮೂಲಕ ಮತ್ತೆ ಸೌಂಡ್ ಮಾಡಲು ಹೊರಟಿದ್ದಾರೆ. ಆದರೆ ಈ ಚಿತ್ರ ರಿಲೀಸ್ ಆಗಿ ಒಂದೇ ದಿನಕ್ಕೆ ಸಿನಿಮಾ ಸಾಧಾರಣವಾಗಿದೆ ಅಂತಾ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ:ಸಂಗೀತ ದಂತಕಥೆ ಎಂ.ಎಸ್.ಸುಬ್ಬಲಕ್ಷ್ಮೀ ಬಯೋಪಿಕ್ : ರಾಕ್‌ಲೈನ್ ವೆಂಕಟೇಶ್ ನಿರ್ಮಾಪಕ

    ನಾನಿ ನಟನೆಯ ತೆಲುಗಿನ `ಜೆರ್ಸಿ’ ಬಾಕ್ಸ್ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಹಿಂದಿ ʻಜೆರ್ಸಿʼ ಕೂಡ ಒಳ್ಳೆಯ ಕಲೆಕ್ಷನ್‌ ಮಾಡುತ್ತೆ ಎಂಬ ಲೆಕ್ಕಾಚಾರ ಸಿನಿಮಂದಿಗಿತ್ತು ಆದರೆ ಈಗ ಆ ಲೆಕ್ಕಾಚಾರ ತಲೆಕೆಳಗಾಗಿದೆ. ಶಾಹಿದ್ ನಟನೆಯ ʻಜೆರ್ಸಿʼಗೆ ಹಿನ್ನೆಡೆ ಆಗಿರೋದಕ್ಕೆ `ಕೆಜಿಎಫ್ 2′ ಚಿತ್ರಕ್ಕೆ ಬಲ ಬಂದಂತೆ ಆಗಿದೆ. ರಾಕಿಭಾಯ್ ಚಿತ್ರವನ್ನು ಮುಗಿಬಿದ್ದು ಅಭಿಮಾನಿಗಳು ನೋಡ್ತಿದ್ದಾರೆ.

  • ಪ್ಯಾಂಟ್ ಹಾಕದೇ ಟ್ರೋಲಿಗರಿಗೆ ಆಹಾರವಾದ ಶಾಹಿದ್ ಕಪೂರ್ ಪತ್ನಿ ಮೀರಾ

    ಪ್ಯಾಂಟ್ ಹಾಕದೇ ಟ್ರೋಲಿಗರಿಗೆ ಆಹಾರವಾದ ಶಾಹಿದ್ ಕಪೂರ್ ಪತ್ನಿ ಮೀರಾ

    ಮುಂಬೈ: ಬಾಲಿವುಡ್ ಮಂದಿ ಟ್ರೋಲಿಗರಿಗೆ ಆಹಾರವಾಗುತ್ತಿರುವುದು ಹೊಸದೇನು ಅಲ್ಲ. ನಟ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರು ಮಾಲ್ಡೀವ್ಸ್ ಪ್ರವಾಸ ಮುಗಿಸಿ ವಾಪಸ್ ಬರುವಾಗ ಮುಂಬೈ ಏರ್​ಪೋರ್ಟ್​ನಲ್ಲಿ ಮೀರಾ ಧರಿಸಿದ್ದ ಡ್ರೆಸ್ ಎಲ್ಲರ ಕಣ್ಣು ಕುಕ್ಕಿದೆ.

    ಪತ್ನಿ ಮೀರಾ ರಜಪೂತ್, ಮಕ್ಕಳಾದ ಮಿಶಾ ಮತ್ತು ಝೈನ್ ಜೊತೆಗೆ ಬಾಲಿವುಡ್ ನಟ ಶಾಹೀದ್ ಕಪೂರ್ ಮಾಲ್ದೀವ್ಸ್ ಪ್ರವಾಸಕ್ಕೆ ಹೋಗಿದ್ದರು. ಮಾಲ್ದೀವ್ಸ್‍ನಲ್ಲಿ ಕೆಲ ದಿನಗಳನ್ನು ಕಳೆದ ಶಾಹೀದ್ ಕಪೂರ್ ಮತ್ತು ಫ್ಯಾಮಿಲಿ ಮೊನ್ನೆಯಷ್ಟೇ ಮುಂಬೈಗೆ ವಾಪಸ್ ಆದರು. ಮುಂಬೈ ವಿಮಾನ ನಿಲ್ದಾಣಕ್ಕೆ ಶಾಹೀದ್ ಕಪೂರ್ ಅಂಡ್ ಫ್ಯಾಮಿಲಿ ಬಂದಿಳಿದಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

    ಮೀರಾ ರಜಪೂತ್ ಶಾರ್ಟ್ಸ್ ಧರಿಸಿದ್ದರು. ಶಾರ್ಟ್ಸ್ ತೀರಾ ಚಿಕ್ಕದಾಗಿದ್ರಿಂದ ಮೀರಾ ರಜಪೂತ್ ಟ್ರೋಲ್ ಆಗಿದ್ದಾರೆ. ಮೀರಾ ರಜಪೂತ್ ಪ್ಯಾಂಟ್ ಹಾಕಿದ್ರೆ ಚೆನ್ನಾಗಿರುತ್ತಿತ್ತು, ಪ್ಯಾಂಟ್ ಹಾಕೋದನ್ನ ಮೀರಾ ಮರೆತುಬಿಟ್ರಾ?, ಮೈ ಪೂರ್ತಿ ಬಟ್ಟೆ ಧರಿಸಿ. ನಿಮ್ಮ ಶಾರ್ಟ್ಸ್ ಎಷ್ಟು ಚಿಕ್ಕದಾಗಿದೆ ಏನೂ ಧರಿಸಿಲ್ಲವೆಂಬಂತೆಯೇ ಕಾಣುತ್ತಿದೆ, ಪುರುಷರ ಮೇಲಿನ ಗೌರವ ನನಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಯಾಕಂದ್ರೆ ಸಾರ್ವಜನಿಕ ಪ್ರದೇಶಗಳಲ್ಲಿ ಮೈತುಂಬಾ ಬಟ್ಟೆ ತೊಟ್ಟು ಪುರುಷರು ತಮ್ಮ ಗೌರವವನ್ನು ಕಾಪಾಡಿಕೊಳ್ಳುತ್ತಾರೆ. ಮಗು ಮೈತುಂಬಾ ಬಟ್ಟೆ ಧರಿಸಿದೆ. ಆದರೆ ತಾಯಿನೇ ಪ್ಯಾಂಟ್ ಹಾಕಿಲ್ಲ ಅಂತೆಲ್ಲಾ ಟ್ರೋಲಿಗರು ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಇಂಡೋನೇಷ್ಯಾ ಸಂಸ್ಥಾಪಕನ ಪುತ್ರಿ ಮತಾಂತರ

     

    View this post on Instagram

     

    A post shared by Bollywood Pap (@bollywoodpap)

    2015 ಜುಲೈ 7ರಂದು ಶಾಹೀದ್ ಕಪೂರ್, ಮೀರಾ ರಜಪೂತ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಶಾಹೀದ್ ಕಪೂರ್ ಮತ್ತು ಮೀರಾ ರಜಪೂತ್‍ರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಕಳೆದ ಜುಲೈ ತಿಂಗಳಿನಲ್ಲಿ ತಮ್ಮ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

  • ಈ 21 ದಿನ ಪತ್ನಿಯನ್ನು ಹೇಗೆ ಖುಷಿಯಾಗಿ ನೋಡಿಕೊಳ್ಳಬೇಕೆಂದು ತಿಳಿಸಿಕೊಟ್ಟ ಶಾಹಿದ್

    ಈ 21 ದಿನ ಪತ್ನಿಯನ್ನು ಹೇಗೆ ಖುಷಿಯಾಗಿ ನೋಡಿಕೊಳ್ಳಬೇಕೆಂದು ತಿಳಿಸಿಕೊಟ್ಟ ಶಾಹಿದ್

    ಮುಂಬೈ: ದೇಶ ಲಾಕ್‍ಡೌನ್ ಆದ ಈ 21 ದಿನಗಳಲ್ಲಿ ತಮ್ಮ ಹೆಂಡತಿಯನ್ನು ಹೇಗೆ ಖುಷಿಯಾಗಿ ಇಟ್ಟುಕೊಳ್ಳಬೇಕು ಎಂದು ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ತಿಳಿಸಿಕೊಟ್ಟಿದ್ದಾರೆ.

    ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಮಂಗಳವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ದೇಶವನ್ನು ಏಪ್ರಿಲ್ 14ರ ವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಈ ಮೂಲಕ 21 ದಿನಗಳ ಕಾಲ ಮನೆಯಿಂದ ಯಾರೂ ಹೊರಗೆ ಬಾರದಂತೆ ನಿರ್ಬಂಧ ಹೇರಿದ್ದಾರೆ. ಹೀಗಾಗಿ ಸೆಲಿಬ್ರೆಟಿಗಳು ಮನೆಯಲ್ಲೇ ಉಳಿದಿದ್ದಾರೆ.

    ಹೀಗೆ ಮನೆಯಲ್ಲೇ ಕಾಲ ಕಳೆಯುತ್ತಿರುವ ನಟ ಶಾಹಿದ್ ಕಪೂರ್ ಅವರು, ಮನೆಯಲ್ಲಿರಿ, ಸುರಕ್ಷಿತವಾಗಿರಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಿ. ಪ್ರೀತಿಯನ್ನು ಹಂಚಿರಿ. ನಂಬಿಕೆ ಇರಲಿ. ಆಗಾಗ ಪ್ರಾರ್ಥಿಸಿ. ಪ್ರತಿದಿನವೂ ತಮಗೆ ಮುಖ್ಯವಾದ ಎಲ್ಲರೊಂದಿಗೆ ಮಾತನಾಡಿ. ಧ್ಯಾನ ಮಾಡಿ, ಪುಸ್ತಕ ಓದಿ, ಪ್ರತಿದಿನ ಆಕಾಶದ ನೀಲಿ ಬಣ್ಣವನ್ನು ನೋಡಿ. 21 ದಿನಗಳು ಬೇಗ ಹೋಗುತ್ತೆ ಎಂದು ಟ್ವೀಟ್ ಮಾಡಿದ್ದಾರೆ.

    ಇದಾದ ನಂತರ ಶಾಹಿದ್ ಅವರು ನನಗೆ ಏನಾದರೂ ಪ್ರಶ್ನೆ ಕೇಳಲು ಬಯಸುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅವರ ಅಭಿಮಾನಿಯೋರ್ವ ಈ 21 ದಿನಗಳ ಲಾಕ್‍ಡೌನ್ ಸಮಯದಲ್ಲಿ ನಿಮ್ಮ ಹೆಂಡತಿಯನ್ನು ಹೇಗೆ ನೋಡಿಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರಿಸಿದ ಶಾಹಿದ್, ಮನಃಪೂರ್ವಕವಾಗಿ ಸೇವೆ ಮಾಡಿ ನಿಮ್ಮ ಬಾಸ್ ಯಾವಗಲೂ ಬಾಸ್ ಆಗಿ ಇರುತ್ತಾರೆ ಎಂದು ರೀಟ್ವೀಟ್ ಮಾಡಿದ್ದಾರೆ.

    ಜೊತೆಯಲ್ಲಿ ಕೆಲವರು ನೀವು 21 ದಿನಗಳ ಈ ಲಾಕ್‍ಡೌನ್ ಸಮಯದಲ್ಲಿ ಏನೂ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶಾಹಿದ್ ಈ 21 ದಿನ ನಾನು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತೇನೆ ಎಂದು ಉತ್ತರಿಸಿದ್ದಾರೆ. ಇನ್ನೂ ಕೆಲವರು ಈಗ ನೀವು ಐಸ್‍ಕ್ರೀಮ್ ತಿನ್ನುತ್ತೀರಾ ಎಂದು ಕೇಳಿದ್ದಾರೆ. ಆಗ ಶಾಹಿದ್ ಇಲ್ಲ ದಿನ 20 ನಿಮಿಷಕ್ಕೆ ಒಂದು ಬಾರಿ ಬೆಚ್ಚಗಿರುವ ನೀರನ್ನು ಕುಡಿಯುತ್ತೇನೆ ಎಂದು ಹೇಳಿದ್ದಾರೆ.

    ಟ್ವಿಟ್ಟರ್‍ನಲ್ಲಿ ಮೊತ್ತೊಬ್ಬ ಶಾಹಿದ್ ಅಭಿಮಾನಿ ನೀವು ಅಜಯ್ ದೇವ್‍ಗನ್ ಅವರ ತನ್ಹಾಜಿ ಸಿನಿಮಾ ಬಗ್ಗೆ ಏನು ಹೇಳುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ರೀಟ್ವೀಟ್ ಮಾಡಿರುವ ಶಾಹಿದ್ ತುಂಬಾ ಖುಷಿಕೊಡುವ ಸಿನಿಮಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಹಿದ್ ಕಪೂರ್ ಅವರು ಕೊನೆಯದಾಗಿ ಕಬೀರ್ ಸಿಂಗ್ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಸಿನಿಮಾ ಬಾಲಿವುಡ್‍ನಲ್ಲಿ ಬ್ಲಾಕ್ ಬಾಸ್ಟರ್ ಹಿಟ್ ಆಗಿತ್ತು.

  • ಶೂಟಿಂಗ್ ಸೆಟ್‍ನಲ್ಲಿ ಶಾಹಿದ್ ಕಪೂರ್‌ಗೆ ಗಂಭೀರ ಗಾಯ – ಮುಖಕ್ಕೆ 13 ಹೊಲಿಗೆ

    ಶೂಟಿಂಗ್ ಸೆಟ್‍ನಲ್ಲಿ ಶಾಹಿದ್ ಕಪೂರ್‌ಗೆ ಗಂಭೀರ ಗಾಯ – ಮುಖಕ್ಕೆ 13 ಹೊಲಿಗೆ

    ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ಶೂಟಿಂಗ್ ಸೆಟ್‍ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ಮುಖಕ್ಕೆ 13 ಹೊಲಿಗೆ ಹಾಕಲಾಗಿದೆ.

    ಶಾಹಿದ್ ತೆಲುಗಿನ ‘ಜೆರ್ಸಿ’ ಸಿನಿಮಾದ ಹಿಂದಿ ರಿಮೇಕ್‍ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾಗ ಶಾಹಿದ್ ಅವರ ಮುಖಕ್ಕೆ ಗಂಭೀರವಾಗಿ ಗಾಯವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವಿಷಯ ತಿಳಿದ ಶಾಹಿದ್ ಪತ್ನಿ ಮೀರಾ ರಜ್‍ಪುತ್ ಕೂಡಲೇ ಚಂಢೀಗಢ್‍ಗೆ ತೆರಳಿದ್ದಾರೆ.

    ಜೆರ್ಸಿ ಸಿನಿಮಾದಲ್ಲಿ ಶಾಹಿದ್ ಕ್ರಿಕೆಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಚಂಡೀಗಢ್‍ನಲ್ಲಿ ನಡೆಯುತ್ತಿದ್ದು, ಈ ಚಿತ್ರಕ್ಕಾಗಿ ಶಾಹಿದ್ ಹಗಲು-ರಾತ್ರಿ ಕಷ್ಟಪಡುತ್ತಿದ್ದಾರೆ. ಪ್ರತಿದಿನದಂದೇ ಶಾಹಿದ್ ಇಂದು ಕೂಡ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದರು. ಚಿತ್ರದ ಸೀನ್‍ವೊಂದರಲ್ಲಿ ಶಾಹಿದ್ ಕ್ರಿಕೆಟ್ ಆಡಬೇಕಿತ್ತು. ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಅವರ ಮುಖಕ್ಕೆ ತಾಗಿದೆ. ಪರಿಣಾಮ ಶಾಹಿದ್ ಅವರ ಲೋವರ್ ಲಿಪ್ ಕಟ್ ಆಗಿದ್ದು, ತುಂಬಾ ರಕ್ತ ಬಂದಿದೆ.

    ವರದಿಗಳ ಪ್ರಕಾರ ಶಾಹಿದ್ ಅವರ ಆರೋಗ್ಯದ ಸ್ಥಿತಿ ಈಗ ಸುಧಾರಿಸುತ್ತಿದೆ. ಚೆಂಡು ಬಿದ್ದು ಅವರ ಮುಖ ಊದಿಕೊಂಡಿದ್ದು, ಆ ಊತ ಕಡಿಮೆಯಾಗಲು ಸ್ವಲ್ಪ ದಿನ ಬೇಕಾಗುತ್ತದೆ. ಅಲ್ಲದೆ ಕೆಲವು ದಿನಗಳ ಕಾಲ ಶಾಹಿದ್ ಚಿತ್ರೀಕರಣಕ್ಕೆ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಐದು ದಿನಗಳ ನಂತರ ಶಾಹಿದ್ ಅವರ ಗಾಯ ಹೇಗಿದೆ ಎಂದು ತಿಳಿಯಲಿದೆ ಎಂದು ಹೇಳಲಾಗುತ್ತಿದೆ.