ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್‌ನಲ್ಲೇ ಸೆಟಲ್ ಆಗೋ ಲಕ್ಷಣ ಕಾಣ್ತಿದೆ. ‘ಸಿಕಂದರ್’ ಸಿನಿಮಾ ಮಕಾಡೆ ಮಲಗಿದ್ರೂ ಕೂಡ ಬಾಲಿವುಡ್‌ನ ಮತ್ತೊಂದು ಸಿನಿಮಾಗೆ ಅವರು ನಾಯಕಿಯಾಗಿದ್ದಾರೆ. 2012ರಲ್ಲಿ ತೆರೆಕಂಡ ‘ಕಾಕ್‌ಟೈಲ್’ ಚಿತ್ರದ ಸೀಕ್ವೆಲ್‌ನಲ್ಲಿ ಶಾಹಿದ್ ಕಪೂರ್‌ಗೆ (Shahid Kapoor) ಹೀರೋಯಿನ್ ಆಗಿದ್ದಾರೆ. ಇದನ್ನೂ ಓದಿ:ಬೇಬಿ ಬಂಪ್ ಫೋಟೋ ಹಂಚಿಕೊಂಡ ಸಂಜನಾ ಗಲ್ರಾನಿ
ಸಿಕಂದರ್ ಸಿನಿಮಾ ಫ್ಲಾಪ್ ಆದ್ರೂ ರಶ್ಮಿಕಾಗೆ ಇರುವ ಬೇಡಿಕೆ ಕಮ್ಮಿಯಾಗಿಲ್ಲ. ಟ್ರಯಾಂಗಲ್ ಲವ್ ಸ್ಟೋರಿ ‘ಕಾಕ್‌ಟೈಲ್ 2’ಗೆ ತಯಾರಿ ನಡೆಯುತ್ತಿದೆ. ಇದರಲ್ಲಿ ಶಾಹಿದ್‌ಗೆ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ (Kriti Sanon) ಇಬ್ಬರು ನಾಯಕಿಯರು ಜೊತೆಯಾಗಲಿದ್ದಾರೆ. ಇದರಲ್ಲಿ ರಶ್ಮಿಕಾ ಮಂದಣ್ಣಗೆ ಪವರ್‌ಫುಲ್ ರೋಲ್ ಸಿಕ್ಕಿದೆ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಹಿನ್ನೆಲೆ ಪ್ರಭಾಸ್ ಚಿತ್ರದಿಂದ ರಶ್ಮಿಕಾ ಮಂದಣ್ಣ ಔಟ್?
ದಿನೇಶ್ ವಿಜ್ಞಾನ್ ನಿರ್ಮಾಣದ ‘ಕಾಕ್‌ಟೈಲ್ 2’ಗೆ (Cocktail 2) ಲವ್ ರಂಜನ್ ಕಥೆ ಬರೆದಿದ್ದಾರೆ. ಹೋಮಿ ಅಡಜಾನಿಯಾ ನಿರ್ದೇಶನ ಮಾಡಲಿದ್ದಾರೆ. ಇದೇ ಆಗಸ್ಟ್‌ನಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಮುಂದಿನ ವರ್ಷ ಅಂತ್ಯದೊಳಗೆ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ. ಸದ್ಯ ರಶ್ಮಿಕಾ ಒಪ್ಪಿಕೊಂಡಿರೋ ಸಿನಿಮಾ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
2012ರಲ್ಲಿ ‘ಕಾಕ್‌ಟೈಲ್’ ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ಸೈಫ್ ಅಲಿ ಖಾನ್‌ಗೆ ದೀಪಿಕಾ ಪಡುಕೋಣೆ (Deepika Padukone) ಮತ್ತು ಡಯಾನಾ ಪೆಂಟಿ ಜೋಡಿಯಾಗಿ ನಟಿಸಿದ್ದರು.
ಬಾಲಿವುಡ್ ನಟ ಶಾಹಿದ್ ಕಪೂರ್ (Shahid Kapoor) ಹಾಗೂ ಮಾಜಿ ಪ್ರೇಯಸಿ ಕರೀನಾ ಕಪೂರ್ (Kareena Kapoor) ಒಂದೇ ವೇದಿಕೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮಾಜಿ ಲವ್ ಬರ್ಡ್ಸ್ ಒಟ್ಟಾಗಿ ಕಾಣಿಸಿಕೊಂಡು ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ಇದನ್ನೂ ಓದಿ:ಜಯಮಾಲಾ ಮಗಳ ಮದುವೆಯಲ್ಲಿ ಮಿಂಚಿದ್ದ ಆರೋಪಿ ರನ್ಯಾ ರಾವ್’
ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಶಾಹಿದ್ ಕಪೂರ್, ಕರಣ್ ಜೋಹರ್ ಮತ್ತು ಕರೀನಾ ಕಪೂರ್ ಖಾನ್ ಒಂದೇ ವೇದಿಕೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮಾಜಿ ಲವ್ ಬರ್ಡ್ಸ್ ಒಬ್ಬರನೊಬ್ಬರನ್ನು ನೋಡಿ ನಕ್ಕಿದ್ದಾರೆ. ಬ್ರೇಕಪ್ ಆದ್ಮೇಲೆ ಹಲವು ವರ್ಷಗಳ ಬಳಿಕ ಹಳೆಯ ಪ್ರೇಮಿಗಳು ಮೊದಲ ಬಾರಿಗೆ ಹೀಗೆ ಸಾರ್ವಜನಿಕವಾಗಿ ಬಹಳ ಆತ್ಮೀಯವಾಗಿದ್ದುದ್ದನ್ನು ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಅಂದಹಾಗೆ, 2004ರಲ್ಲಿ ಬಾಲಿವುಡ್ ‘ಫಿದಾ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ವೇಳೆ, ಇಬ್ಬರಿಗೂ ಪ್ರೇಮಾಂಕುರವಾಗಿತ್ತು. 2008ರಲ್ಲಿ ‘ಜಬ್ ವಿ ಮೆಟ್’ ವೇಳೆ ಇಬ್ಬರ ನಡುವೆ ಮನಸ್ತಾಪ ಉಂಟಾಯ್ತು. ಬಳಿಕ ಶಾಹಿದ್ ಅವರು ಮೀರಾ ಕಪೂರ್ ಅವರನ್ನು ಮದುವೆಯಾದರು. ಕರೀನಾ ಅವರು ಸೈಫ್ ಅಲಿ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
‘ಪುಷ್ಪ 2′ ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್‌ನಿಂದ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಇದೀಗ ಶಾಹಿದ್ ಕಪೂರ್ (Shahid Kapoor) ನಟನೆಯ ಹೊಸ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಪ್ರಭಾಸ್ ಸಿನಿಮಾದಲ್ಲಿ ನಯನತಾರಾ ಐಟಂ ಡ್ಯಾನ್ಸ್?
‘ಕಾಕ್‌ಟೈಲ್’ ಸಿನಿಮಾದ ಸೀಕ್ವೇಲ್‌ನಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಕಥೆಯ ಕುರಿತು ನಟಿಯ ಬಳಿ ಒಂದು ಹಂತದ ಚರ್ಚೆ ಕೂಡ ನಡೆದಿದೆ ಎನ್ನಲಾಗಿದೆ. ನಟಿ ಓಕೆ ಅಂದ್ರಾ? ಎಂಬುದು ಇದುವರೆಗೂ ಖಾತ್ರಿಯಾಗಿಲ್ಲ. ತಂಡದ ಕಡೆಯಿಂದ ಅನೌನ್ಸ್ ಆಗಲಿದೆಯಾ ಕಾಯಬೇಕಿದೆ.
ಈ ಹಿಂದೆ ‘ಕಾಕ್‌ಟೈಲ್’ ಮೊದಲ ಭಾಗದಲ್ಲಿ ಸೈಫ್ ಅಲಿ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆಯಾಗಿ ನಟಿಸಿದರು. ಈ ಚಿತ್ರ ಸಕ್ಸಸ್ ಕಂಡಿತ್ತು. ಇದೀಗ ಹಲವು ವರ್ಷಗಳ ಬಳಿಕ ಇದೇ ಸಿನಿಮಾದ ಸೀಕ್ವೆಲ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಹೊಸ ಜೋಡಿಯ ಕಥೆ ತೋರಿಸಲು ಹೊರಟಿದ್ದಾರೆ.
ಇನ್ನೂ ಈಗಾಗಲೇ ರಶ್ಮಿಕಾ ನಟಿಸಿರುವ ಬಾಲಿವುಡ್‌ನ ‘ಅನಿಮಲ್’ (Animal) ಸಿನಿಮಾ ಸಕ್ಸಸ್ ಕಂಡಿದೆ. ಜೊತೆಗೆ ‘ಪುಷ್ಪ 2’ (Pushpa 2) ಹಿಂದಿ ವರ್ಷನ್‌ನಲ್ಲೂ ಉತ್ತಮ ಗಳಿಕೆ ಮಾಡಿದೆ. ಈ ಸಿನಿಮಾ ಒಟ್ಟಾರೆ 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ.
ಬಾಲಿವುಡ್ (Bollywood) ನಟ ಶಾಹಿದ್ ಕಪೂರ್ (Shahid Kapoor) ಪಕ್ಕಾ ಫ್ಯಾಮಿಲಿ ಮ್ಯಾನ್. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಕುಟುಂಬಕ್ಕೆ ಸಮಯ ಮೀಸಲಿಡುತ್ತಾರೆ. ಇದೀಗ ಪತ್ನಿ ಮೀರಾ (Mira) ಜೊತೆ ಹೋಟೆಲ್‌ವೊಂದಕ್ಕೆ ನಟ ಭೇಟಿ ನೀಡಿದ್ದರು. ಈ ವೇಳೆ, ಪತ್ನಿ ಫೋಟೋ ತೆಗೆಯಲು ಬಂದವರಿಗೆ ಶಾಹಿದ್ ಕಿಡಿಕಾರಿದ್ದಾರೆ.
ಬಿಡುವಿನ ವೇಳೆ, ಮುಂಬೈನ ಖಾಸಗಿ ಹೋಟೆಲ್‌ವೊಂದರಲ್ಲಿ ಪತ್ನಿ ಜೊತೆ ಶಾಹಿದ್ ಊಟ ಸವಿದಿದ್ದಾರೆ. ಬಳಿಕ ಹೋಟೆಲ್‌ನಿಂದ ಹೊರಬರುವಾಗ ಪಾಪರಾಜಿಗಳು ಫೋಟೋಗಾಗಿ ಮುಗಿಬಿದ್ದಿದ್ದಾರೆ. ಇದು ನಟನಿಗೆ ಕಿರಿಕಿರಿ ಆಗಿದೆ. ಬಳಿಕ ಪತ್ನಿ ಫೋಟೋ ತೆಗೆಯಲು ಬಂದಿದ್ದು ನಟನಿಗೆ ಕೋಪ ತರಿಸಿದೆ. ನೀವು ಇದನ್ನು ನಿಲ್ಲಿಸುತ್ತೀರಾ ಎಂದು ನಟ ಕೂಗಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಹಾಕುತ್ತಿದ್ದಾರೆ. ನಟನಿಗೆ ಸಕ್ಸಸ್ ತಲೆಗೆ ಏರಿದೆ ಎಂದೆಲ್ಲಾ ನೆಟ್ಟಿಗರು ಕುಟುಕಿದ್ದಾರೆ.
ಅಂದಹಾಗೆ, ಕೃತಿ ಸನೋನ್ (Kriti Sanon) ಜೊತೆಗಿನ ‘ತೇರಿ ಬಾತೊನ್ ಮೇ ಐಸಾ ಉಲ್ಜಾ ಜಿಯಾ’ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶಾಹಿದ್ ನಟನೆ ಮತ್ತು ಚಿತ್ರಕಥೆಗೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಚಿತ್ರದ ಬಳಿಕ ಪೂಜಾ ಹೆಗ್ಡೆ ಜೊತೆ ‘ದೇವ’ ಸಿನಿಮಾ (Deva Film) ಮಾಡಿ ಮುಗಿಸಿದ್ದಾರೆ.
ಕನ್ನಡದ ‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕ ಸಚಿನ್ ಬಿ ರವಿ ಜೊತೆ ಸಿನಿಮಾ ಮಾಡಲು ಶಾಹಿದ್ ಕಪೂರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಕ್ಕಾಗಿ ತಯಾರಿ ಕೂಡ ಮಾಡುತ್ತಿದ್ದಾರೆ.
‘ಅವನೇ ಶ್ರೀಮನ್ನಾರಾಯಣ’ ಸೂತ್ರಧಾರ ಸಚಿನ್ ರವಿ (Sachin Ravi), ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್‌ಗೆ (Shahid Kapoor) ಆ್ಯಕ್ಷನ್ ಕಟ್ ಹೇಳುತ್ತಿರುವುದು ಗೊತ್ತೇ ಇದೆ. ಈ ಕ್ರೇಜಿ ಕಾಂಬಿನೇಷನ್ ಅಶ್ವತ್ಥಾಮನ ಕಥೆ ಹೇಳೋದಿಕ್ಕೆ ಬರುತ್ತಿದ್ದಾರೆ. ಮುಂಬೈನಲ್ಲಿ ಮಂಗಳವಾರ ನಡೆದ ಒಟಿಟಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಸಚಿನ್ ರವಿ ಹಾಗೂ ಶಾಹಿದ್ ಕಪೂರ್ ಸಿನಿಮಾಗೆ ‘ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್’ ಎಂಬ ಟೈಟಲ್ ಇಡಲಾಗಿದೆ. ಸಚಿನ್ ರವಿ ಚಿತ್ರದ ಅಶ್ವತ್ಥಾಮನ ಪಾತ್ರಕ್ಕೆ ಶಾಹಿದ್ ಕಪೂರ್ ಹೀರೋ ಆಗುತ್ತಿದ್ದಾರೆ. ಅಶ್ವತ್ಥಾಮನಾಗಿಯೇ ಶಾಹಿದ್ ಕಪೂರ್ ಇಲ್ಲಿ ಅಬ್ಬರಿಸಲಿದ್ದಾರೆ. ಅಶ್ವತ್ಥಾಮ ಒಬ್ಬ ಗ್ರೇಟ್ ವಾರಿಯರ್ ಅನ್ನೋದು ಗೊತ್ತೇ ಇದೆ. ಆದರೆ ಏಳು ಚಿರಂಜೀವಿಗಳಲ್ಲಿ ಒಬ್ಬ ಅನ್ನೋದು ಕೂಡ ನಂಬಿಕೆ. ಅಶ್ವತ್ಥಾಮನಿಗೆ ಸಾವೇ ಇಲ್ಲ ಅನ್ನೋದು ಚಿರಂಜೀವಿಯ ಅರ್ಥ ಅಂತೇ ಹೇಳಬಹುದು.
ಈ ಕಥೆಯಲ್ಲಿ ಅಶ್ವತ್ಥಾಮ ವರ್ತಮಾನದಲ್ಲಿರುವ ನಾಯಕ. ಅಮರತ್ವದ ಪರಿಕಲ್ಪನೆಯನ್ನು ಶೋಧಿಸುವ ಕೆಲಸ ಆತನದ್ದು. ಇಷ್ಟನ್ನಷ್ಟೇ ಹೇಳಬಲ್ಲೆ. ಆದರೆ ಈ ಚಿತ್ರ ಅದ್ಭುತ ಆ್ಯಕ್ಷನ್ ಇರುವ, ಮತ್ತು ಎಲ್ಲಾ ತಲೆಮಾರಿನ ವೀಕ್ಷಕರನ್ನೂ ಸೆಳೆಯಬಲ್ಲ ಚಿತ್ರವಾಗಲಿದೆ. ಅಶ್ವತ್ಥಾಮನಂತೆ ಅಮರತ್ವ ಹೊಂದಿರುವ ವ್ಯಕ್ತಿಗಳನ್ನು ಚಿತ್ರದಲ್ಲಿ ತರುವ ಪ್ರಯತ್ನವೂ ಇರಲಿದೆ. ಕಾಲ್ಪನಿಕ ಸನ್ನಿವೇಶನಗಳ ಅನ್ವೇಷಣೆ ಹಾಗೂ ಅದರ ಸಾಧ್ಯತೆ ಕುರಿತು ಕಥೆ ರಚಿಸಿ, ಸಾಧ್ಯವಾಗಿಸುವುದು ಚಿತ್ರ ನಿರ್ದೇಶನಕಾಗಿ ಸವಾಲಿನ ಕೆಲಸ. ನನ್ನ ಬಾಲ್ಯದಿಂದಲೂ ಅಶ್ವತ್ಥಾಮನ ಪಾತ್ರ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಈ ಪಾತ್ರದ ಬಗ್ಗೆಯೇ ಚಿತ್ರ ಮಾಡುವ ಯೋಜನೆ ಹೊಂದಿದ್ದೆ. ಕಡೆಗೂ ನನ್ನ ಕಲ್ಪನೆಯ ಚಿತ್ರ ಸೆಟ್ಟೇರುತ್ತಿದೆ ಎಂಬ ಸಂಭ್ರಮ ನನ್ನದು. ಈ ಚಿತ್ರದ ಹಲವು ಕುತೂಹಲಕರ ಅಂಶಗಳ ಕುರಿತು ಶಾಹೀದ್ ಕಪೂರ್ ಜತೆ ಬಹಳಷ್ಟು ಹೊತ್ತು ಕಳೆದಿದ್ದೇನೆ ಎಂದು ಚಿತ್ರದ ತಯಾರಿ ಕುರಿತು ತಮ್ಮ ಅನುಭವವನ್ನು ಸಚಿನ್ ರವಿ ಹಂಚಿಕೊಂಡರು.
ಅಶ್ವತ್ಥಾಮ ಚಿತ್ರವನ್ನು ಪೂಜಾ ಎಂಟರ್‌ಟೈನ್‌ಮೆಂಟ್ ಕಂಪನಿ ನಿರ್ಮಾಣ ಮಾಡುತ್ತಿದೆ. ವಿಷ್ಣು ಭಗ್ನಾನಿ, ಜಾಕಿ ಭಗ್ನಾನಿ ಹಾಗೂ ದೀಪ್ತಿಕಾ ದೇಶಮುಖ್ ನಿರ್ಮಾಣ ಮಾಡುತ್ತಿದ್ದಾರೆ.
ಹಲವು ವರ್ಷಗಳಿಂದ ರಕ್ಷಿತ್ ಶೆಟ್ಟಿ (Rakshit Shetty) ತಂಡದಲ್ಲಿ ಸಚಿನ್ ಬಿ ರವಿ ಗುರುತಿಸಿಕೊಂಡಿದ್ದಾರೆ. ಸಂಕಲನಕಾರಾಗಿ, ಗ್ರಾಫಿಕ್ಸ್ ಪರಿಣಿತರಾಗಿ ಕೆಲಸ ನಿಭಾಯಿಸಿದ್ದಾರೆ. ಅವನೇ ಶ್ರೀಮನ್ನಾರಾಯಣ ಚಿತ್ರಕ್ಕಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಇದೀಗ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ‘ಫ್ಯಾಂಟಸಿ ಅಡ್ವೆಂಚರಸ್’ ಡ್ರಾಮಾ ಅವನೇ ಶ್ರೀಮನ್ನಾರಾಯಣ ಸಿನಿಮಾ ನಿರ್ದೇಶಕರ ಪ್ರತಿಭೆಗೆ ಹಿಡಿದ ಕನ್ನಡಿ. ಈಗ ಸಚಿನ್ ಅಶ್ವತ್ಥಾಮನ ಮೂಲಕ ಪೌರಾಣಿಕ ಕಥೆ ಹರವಿಡಲಿದ್ದಾರೆ.
ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆಗೆ (Pooja Hegde) ಸದ್ಯದ ಮಟ್ಟಿಗೆ ಸಕ್ಸಸ್ ಸಿಗದೇ ಇದ್ದರೂ ಸಿನಿಮಾ ಅವಕಾಶಗಳು ಮಾತ್ರ ಕಮ್ಮಿಯಾಗಿಲ್ಲ. ಅಹಾನ್ ಶೆಟ್ಟಿ ಜೊತೆ ನಟಿಸಲಿರುವ ಪ್ರಾಜೆಕ್ಟ್‌ವೊಂದಿಗೆ ಶಾಹಿದ್ ಕಪೂರ್ (Shahid Kapoor) ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಐರೆನ್ ಲೆಗ್ ಎಂದು ಕೆಣಕಿ ಮಾತನಾಡುತ್ತಿದ್ದವರಿಗೆ ನಟಿ ಬ್ಯಾಕ್ ಟು ಬ್ಯಾಕ್ ಅವಕಾಶ ಪಡೆಯುತ್ತಿದ್ದಾರೆ.
ಇತ್ತೀಚೆಗಷ್ಟೇ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರ ಅಹಾನ್‌ಗೆ ಪೂಜಾ ನಾಯಕಿ ಎಂದು ಅನೌನ್ಸ್ ಮಾಡಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಚಿತ್ರದ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ದಿಲ್ಲದೇ ಶಾಹಿದ್ ಕಪೂರ್ ನಟನೆಯ ‘ದೇವಾ’ ಸಿನಿಮಾದ ಚಿತ್ರೀಕರಣದಲ್ಲಿ ಪೂಜಾ ಭಾಗಿಯಾಗಿದ್ದಾರೆ.
ಮೊದಲ ಬಾರಿಗೆ ಶಾಹಿದ್ ಕಪೂರ್ ಜೊತೆ ಪೂಜಾ ಜೋಡಿಯಾಗಿ ನಟಿಸುತ್ತಿದ್ದಾರೆ. ಪ್ರಾಮುಖ್ಯತೆ ಇರುವ ಭಿನ್ನ ಪಾತ್ರದಲ್ಲಿ ಪೂಜಾ ನಟಿಸುತ್ತಿದ್ದಾರೆ. ಹಾಗಾಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ದೇವಾ ಸಿನಿಮಾ ಕಳೆದ ಅಕ್ಟೋಬರ್‌ನಲ್ಲಿಯೇ ಶುರುವಾಗಿದೆ. ಆದರೆ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಎಲ್ಲೂ ಬಿಟ್ಟು ಕೊಡುತ್ತಿರಲಿಲ್ಲ. ಈಗ ಮುಂಬೈನಲ್ಲಿ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಭರದಿಂದ ನಡೆಯುತ್ತಿದೆ.
ಸಲ್ಮಾನ್ ಖಾನ್ ಜೊತೆಗಿನ ‘ಕಿಸಿ ಕಾ ಬಾಯ್ ಕಿಸಿ ಕೀ ಜಾನ್’ ಸಿನಿಮಾದಲ್ಲಿ ಪೂಜಾ ಹೆಗ್ಡೆ ಕಡೆಯದಾಗಿ ನಟಿಸಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಈಗ ಒಂದು ವರ್ಷ ನಂತರ ಮತ್ತೆ ಪೂಜಾ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ, ಶ್ರೀಲೀಲಾ, ನೇಹಾ ಶೆಟ್ಟಿ ಅವರಂತಹ ನಟಿಮಣಿಯರ ಮಧ್ಯೆ ಪೂಜಾ ಹೆಗ್ಡೆಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ. ಐರೆನ್ ಲೆಗ್ ನಟಿ ಎಂದು ಕಿಡಿಕಾರುವವರಿಗೆ ಸೈಲೆಂಟ್ ಆಗಿ ತಮ್ಮ ಸಿನಿಮಾದ ಅಪ್‌ಡೇಟ್ ಮೂಲಕ ನಟಿ ಉತ್ತರ ನೀಡುತ್ತಿದ್ದಾರೆ.
ಬಾಲಿವುಡ್ ಖ್ಯಾತ ನಟ ಶಾಹಿದ್ ಕಪೂರ್ (Shahid Kapoor) ತಮ್ಮ ಪಕ್ಕದಲ್ಲಿ ಸೋನಾಕ್ಷಿ ಸಿನ್ಹ (Sonakshi Sinha) ಕೂರಿಸಿಕೊಂಡು ಅಚ್ಚರಿ ಎನ್ನುವಂತೆ ಹೇಳಿಕೆ ನೀಡಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಅವರು ಖುಲ್ಲಂ ಖುಲ್ಲಾ ಮಾತನಾಡಿದ್ದು, ಕರಣ್ ಜೋಹಾರ್ (Karan Johar) ಕೇಳಿದ ಪ್ರಶ್ನೆಗೆ ಯಾವುದೇ ಮುಜುಗರ ಇಲ್ಲದಂತೆ ಉತ್ತರಿಸಿದ್ದಾರೆ. ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹರಿದಾಡುತ್ತಿದೆ.
ಕಾಫಿ ವಿತ್ ಕರಣ್ ಶೋನಲ್ಲಿ ಫಿಲ್ಟರ್ ಇಲ್ಲದ ಪ್ರಶ್ನೆಗಳನ್ನು ಕೇಳುತ್ತಾರೆ ಕರಣ್. ಲವ್, ಸೆಕ್ಸ್, ಬ್ರೇಕ್, ಗಾಸಿಪ್ ಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ ಕರಣ್. ಶಾಹಿದ್ ಕಪೂರ್ ಮತ್ತು ಸೋನಾಕ್ಷಿ ಸಿನ್ಹಾ ಅತಿಥಿಯಾಗಿ ಬಂದ ಎಪಿಸೋಡ್ ನಲ್ಲಿ ಕರಣ್, ಶಾಹಿತ್ ಅವರಿಗೆ ಎರಡು ಪ್ರಶ್ನೆಗಳನ್ನು ಇಡುತ್ತಾರೆ. ಆಕ್ಟಿಂಗ್ ಮತ್ತು ಸೆಕ್ಸ್ ಯಾವುದನ್ನು ಬಿಡ್ತೀರಿ ಎಂದು ಕೇಳ್ತಾರೆ.
ಯಾವುದೇ ಅಳುಕಿಲ್ಲದೇ ಆಕ್ಟಿಂಗ್ ಬಿಡ್ತೀನಿ ಎಂದು ಹೇಳುವ ಮೂಲಕ ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ಉತ್ತರದಿಂದ ಕ್ಷಣಕಾಲ ಸೋನಾಕ್ಷಿ ಕಕ್ಕಾಬಿಕ್ಕಿಯಾಗುತ್ತಾರೆ. ಅದರಲ್ಲಿ ತಪ್ಪೇನಿದೆ ಎನ್ನುವಂತೆ ನೋಡುತ್ತಾರೆ ಶಾಹಿದ್. ಈ ವಿಡಿಯೋ ವೈರಲ್ ಆಗುವುದರ ಜೊತೆಗೆ ಸಾಕಷ್ಟು ಕಾಮೆಂಟ್ ಗಳು ಬಂದಿವೆ.
ಬಾಲಿವುಡ್ ನಟ ಶಾಹಿದ್ ಕಪೂರ್, ಕೃತಿ ಸನೋನ್ (Kriti Sanon) ನಟನೆಯ ‘ತೇರಿ ಬಾತೋ ಮೇ ಐಸಾ ಉಲ್ಟಾ ಜಿಯಾ’ ಇದೇ ಫೆ.9ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಶಾಹಿದ್, ಕೃತಿ ಸಖತ್ ಬೋಲ್ಡ್ ಆಗಿ ನಟಿಸಿದ್ದು, ಸೆನ್ಸಾರ್ ಮಂಡಳಿ ಹಸಿಬಿಸಿ ದೃಶ್ಯಗಳಿಗೆ ಕತ್ತರಿ ಹಾಕಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಮತ್ತು ಶಾಹಿದ್ ಕಪೂರ್ (Shahid Kapoor) ರೊಮ್ಯಾಂಟಿಕ್ ಜೋಡಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ಕೂಡ ಭಾರೀ ಸದ್ದು ಮಾಡ್ತಿದೆ. ಚಿತ್ರದಲ್ಲಿ ಸಾಕಷ್ಟು ಹಸಿಬಿಸಿ ದೃಶ್ಯಗಳಿರುವ ಕಾರಣ, 25%ರಷ್ಟು ಸೀನ್ ಅನ್ನು ತೆಗೆದು ಹಾಕಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಇದನ್ನೂ ಓದಿ:ಇಶಾಗೆ ಡಿವೋರ್ಸ್ ಕೊಡಲು ಬೆಂಗಳೂರು ಹುಡುಗಿ ಜೊತೆಗಿನ ಭರತ್ ಅಫೇರ್ ಕಾರಣ?
ಪ್ರೇಮಿಗಳ ದಿನಾಚರಣೆ ಇರುವ ವಾರದಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಉತ್ತಮ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆ ಇದೆ. ಬೆಡ್ ರೂಮ್ ದೃಶ್ಯಕ್ಕೆ ಕತ್ತರಿ ಹಾಕಿದ್ದು ಮಾತ್ರವಲ್ಲದೇ, ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ಸಂದೇಶವನ್ನು ದೊಡ್ಡ ಅಕ್ಷರಗಳಲ್ಲಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ಡೈಲಾಗ್‌ನಲ್ಲಿ ಕೆಲವು ಪದಗಳನ್ನು ಬದಲಿಸಬೇಕು ಎಂದು ಆದೇಶಿಸಲಾಗಿದೆ. ಸೆನ್ಸಾರ್ ಮಂಡಳಿ ಸೂಚಿಸಿದ ಕಡೆಗಳಲ್ಲಿ ಕತ್ತರಿ ಹಾಕಿದ ಬಳಿಕ ಚಿತ್ರದ ಅವಧಿ 2 ಗಂಟೆ 23 ನಿಮಿಷ ಆಗಿದೆ.
‘ಮಿಮಿ’ (Mimi) ನಟಿ ಕೃತಿ ಸನೋನ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ‘ತೇರಿ ಬಾತೋ ಮೇ ಐಸಾ ಉಲ್ಟಾ ಜಿಯಾ’ ಸಿನಿಮಾದಲ್ಲಿ ರೋಬೋಟ್ ಪಾತ್ರಕ್ಕೆ ನಟಿ ಜೀವತುಂಬಿದ್ದಾರೆ. ಟ್ರೈಲರ್ ಝಲಕ್‌ನಲ್ಲಿ ರೋಬೋಟ್ ಕೃತಿ ಜೊತೆ ಶಾಹಿದ್ ರೊಮ್ಯಾನ್ಸ್ ದೃಶ್ಯಗಳನ್ನು ನೋಡಿ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಅಮಿತ್ ಜೋಶಿ ಮತ್ತು ಆರಾಧನಾ ಶಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಶಾಹಿದ್ ಕಪೂರ್- ಕೃತಿ ಸನೋನ್ ಜೋಡಿಯಾಗಿ ನಟಿಸಿದ್ದಾರೆ. ಧರ್ಮೇಂದ್ರ, ಡಿಂಪಲ್ ಕಪಾಡಿಯಾ, ರಾಕೇಶ್ ಬೇಡಿ, ರಾಜೇಶ್ ಕುಮಾರ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಮುಂಬೈ: ವಿಶ್ವದಾದ್ಯಂತ ತನ್ನದೇ ಅಭಿಮಾನಿ ಬಳಗ ಹೊಂದಿರುವ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಸದ್ಯ ವಿಶ್ವಕಪ್‌ನಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಸತತ 6 ಪಂದ್ಯಗಳನ್ನೂ ಗೆದ್ದಿರುವ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲು ಇನ್ನೊಂದೇ ಗೆಲುವು ಬಾಕಿಯಿದೆ.
Shahid Kapoor said, “I’m a huge fan of Virat Kohli and Rohit Sharma. It’ll be a privilege for me to play either of them in their biopic”. pic.twitter.com/pBZ5FL5TBi
ಕೊಹ್ಲಿ ಹಾಗೂ ರೋಹಿತ್ ಮೇಲಿನ ಅಭಿಮಾನಕ್ಕೆ ಸಿನಿ ತಾರೆಯರೂ ಹೊರತಾಗಿಲ್ಲ. ಕೆಲ ದಿನಗಳ ಹಿಂದೆ RRR ಸಿನಿಮಾ ಸಕ್ಸಸ್ ನಂತರ ತೆಲುಗು ಖ್ಯಾತ ನಟ ರಾಮ್ ಚರಣ್ ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುವಾಸೆ ವ್ಯಕ್ತಪಡಿಸಿದ್ದರು. ಇದೀಗ ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್ (Shahid Kapoor), ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರ ಬಯೋಪಿಕ್‌ನಲ್ಲಿಯೂ ನಟಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಿಸಿಬಿಗೆ ಪಾಕಿಸ್ತಾನ ವಿಶ್ವಕಪ್ ಗೆಲ್ಲುವುದು ಬೇಕಿಲ್ಲ: ಪಾಕ್ ಆಟಗಾರನ ಆರೋಪ
ಬಾಲಿವುಡ್ ನ ಖ್ಯಾತ ನಿರ್ಮಾಪಕ ದಿನೇಶ್ ವಿಜಾನ್ (Dinesh Vijan) ಸಿನಿಮಾ ರಂಗವೇ ಬೆಚ್ಚಿ ಬೀಳುವಂತಹ ಸುದ್ದಿಯನ್ನು ಕೊಟ್ಟಿದ್ದಾರೆ. ಇಂಥದ್ದೊಂದು ಸಾಹಸ ಮಾಡುವುದಕ್ಕೆ ಎಂಟು ಗುಂಡಿಗೆ ಬೇಕು ಎನ್ನುವುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಅಷ್ಟಕ್ಕೂ ಅವರು ಮಾಡಿದ ಸಾಹಸ ಕೆಲಸವೆಂದರೆ ಬ್ಯಾಕ್ ಟು ಬ್ಯಾಕ್ ಹತ್ತು ಸಿನಿಮಾಗಳನ್ನು ಘೋಷಿಸಿದ್ದಾರೆ ಮತ್ತು ಆ ಸಿನಿಮಾಗಳು ಯಾವತ್ತು ಬಿಡುಗಡೆ ಆಗಲಿವೆ ಎನ್ನುವುದನ್ನೂ ಈಗಲೇ ಹೇಳಿಕೊಂಡಿದ್ದಾರೆ.
ಬಾಲಿವುಡ್ ನಲ್ಲಿ ಬೇಡಿಯಾ, ಝರಾ ಹಟ್‌ಕೇ ಝರಾ ಬಚ್‌ಕೇ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದವರು ನಿರ್ಮಾಪಕ ದಿನೇಶ್ ವಿಜಾನ್. ಇದೀಗ ತಮ್ಮ ಮುಂಬರುವ ಸಿನಿಮಾಗಳ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿ ತಮ್ಮ ಸಾಲು ಸಾಲು 10 ಚಿತ್ರಗಳನ್ನು ಘೋಷಣೆ ಮಾಡಿದ್ದಾರೆ. ಇದೀಗ ಬಿಟೌನ್ ನಲ್ಲಿ ಈ ಕುರಿತು ಭಾರೀ ಚರ್ಚೆ ಆಗುತ್ತಿದೆ.
ದಿನೇಶ್ ವಿಜಾನ್ ನಿರ್ಮಾಣ ಸಂಸ್ಥೆಯ ಮೂಲಕ ರಿಲೀಸ್ ಆಗುತ್ತಿರೋ ಮೊದಲ ಸಿನಿಮಾ ಹ್ಯಾಪಿ ಟೀರ್ಸ್ ಡೇ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಿಮ್ರತ್ ಕೌರ್ (Nimrat Kaur), ರಾಧಿಕಾ ಮದನ್, ಭೈಗಶ್ರೀ ಮತ್ತು ಸುಬೋದ್ ಭಾವೆ ಇದ್ದಾರೆ. ಮಿಖಿಲ್ ಮುಸಲೆ ನಿರ್ದೇಶನ ಮಾಡಿದ್ದಾರೆ. ಇದೇ ಅಕ್ಟೋಬರ್ 27ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ.
ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಶಾಹಿದ್ ಕಪೂರ್ (Shahid Kapoor)- ಕೃತಿ ಸನೋನ್ ಜೋಡಿಯಾಗಿ ನಟಿಸುತ್ತಿದ್ದು, ಈ ಸಿನಿಮಾ ಫೆ.9 2024ಕ್ಕೆ ರಿಲೀಸ್ ಆಗಲಿದೆ. ಈ ಚಿತ್ರ ಕೂಡ ವಿಭಿನ್ನವಾಗಿ ಮೂಡಿ ಬರಲಿದ್ದು, ಜಿಯೋ ಸ್ಟುಡಿಯೋಸ್ ಜೊತೆ ಜಂಟಿಯಾಗಿ ದಿನೇಶ್ ವಿಜಾನ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ರೊಮ್ಯಾಂಟಿಕ್ ಡ್ರಾಮಾ ಚಿತ್ರಕ್ಕೆ ಅಮಿತ್ ಜೋಶಿ- ಆರಾಧಾನಾ ಸಾಹ್ ಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿತ್ರದಲ್ಲಿ ಡಿಂಪಲ್ ಕಪಡಿಯಾ ಕೂಡ ನಟಿಸಿದ್ದಾರೆ.
ನಂತರ ‘ಮುಂಜ್ಞಾ’ ಚಿತ್ರ ಅನೌನ್ಸ್ ಮಾಡಿದ್ದು, ಈ ಚಿತ್ರದಲ್ಲಿ ಅಭಯ್ ವರ್ಮಾ, ಶರ್ವರಿ ವಾಘ್, ಮೋನಾ ಸಿಂಗ್, ಎಸ್. ಸತ್ಯರಾಜ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಆದಿತ್ಯ ಸರ್ಪೋದಾರ್ ನಿರ್ದೇಶನ ಮಾಡಿದ್ದಾರೆ. ಮಾರ್ಚ್ 29, 2024ರಂದು ರಿಲೀಸ್ ಆಗಲಿದೆ. ಜಾನ್ ಅಬ್ರಹಾಂ ನಟನೆಯ ಆ್ಯಕ್ಷನ್ ಥ್ರಿಲರ್ ‘ಟೆಹ್ರಾನ್’ ಚಿತ್ರಕ್ಕೆ ಅರುಣ್ ಗೋಪಾಲನ್ ನಿರ್ದೇಶನ ಮಾಡಲಿದ್ದಾರೆ. ಚಿತ್ರದಲ್ಲಿ ಮಾನುಷಿ ಚಿಲ್ಲರ್, ನೀರು ಬಾಜ್ವಾ ಕೂಡ ನಟಿಸಲಿದ್ದಾರೆ. ಏ.26, 2024ರಂದು ಸಿನಿಮಾ ರಿಲೀಸ್ ಆಗಲಿದೆ.
‘ಸ್ತ್ರಿ’ ಚಿತ್ರದ ಸಕ್ಸಸ್ ನಂತರ ‘ಸ್ತ್ರಿ2’ ಸಿದ್ಧತೆ ಮಾಡಲಾಗಿದ್ದು, ರಾಜ್ ಕುಮಾರ್ ರಾವ್‌ಗೆ ನಾಯಕಿಯಾಗಿ ಮತ್ತೆ ಶ್ರದ್ಧಾ ಕಪೂರ್ ನಟಿಸಲಿದ್ದಾರೆ. ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ ಮತ್ತು ಅಪರಶಕ್ತಿ ಖುರಾನಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಮರ್ ಕೌಶಿಕ್ ಆ್ಯಕ್ಷನ್ ಕಟ್ ಮಾಡುತ್ತಿದ್ದು, ಆಗಸ್ಟ್ 30, 2024ಕ್ಕೆ ರಿಲೀಸ್ ಆಗಲಿದೆ. ಅಕ್ಷಯ್ ಕುಮಾರ್ ನಟನೆಯ ‘ಸ್ಕೈ ಪೋರ್ಸ್’ ಅಕ್ಟೋಬರ್ 2, 2024ಕ್ಕೆ ರಿಲೀಸ್ ಆಗಲಿದೆ. ಚಿತ್ರದಲ್ಲಿ 1965ರಲ್ಲಿ ನಡೆದ ಇಂಡಿಯಾ- ಪಾಕಿಸ್ತಾನದ ವಾಯುದಾಳಿಯ ಬಗ್ಗೆ ತೋರಿಸಲಿದ್ದಾರೆ.
ಚಾವ ಸಿನಿಮಾದಲ್ಲಿ ವಿಕ್ಕಿ ಕೌಶಲ್- ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಲಕ್ಷ್ಮಣ ಉಟೇಕರ್ ನಿರ್ದೇಶಿಸಲಿದ್ದಾರೆ. ಚಾವ ಚಿತ್ರ ಡಿಸೆಂಬರ್ 6, 2024ಕ್ಕೆ ರಿಲೀಸ್ ಆಗಲಿದೆ. ಎಕ್ಕಿಸ್ ಚಿತ್ರದಲ್ಲಿ ಧಮೇಂದ್ರ, ಅಗಸ್ತ್ಯ ನಂದಾ, ಜೈದೀಪ್ ಅಹ್ಲಾವತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನವರಿ 10, 2025ಕ್ಕೆ ರಿಲೀಸ್ ಆಗಲಿದೆ. ‘ವ್ಯಾಂಪೈರ್ಸ್ ಆಫ್ ವಿಜಯನಗರ’ ಚಿತ್ರ ಫೆ.14, 2025ಕ್ಕೆ ರಿಲೀಸ್ ಆಗಲಿದೆ. ಕುನಾಲ್ ದೇಶಮುಖ್ ನಿರ್ದೇಶನದ ‘ಡೈಲರ್’ ಏಪ್ರಿಲ್ 10, 2025ರಂದು ರಿಲೀಸ್ ಆಗಲಿದೆ.