Tag: Shahapur

  • ಬೊಲೆರೋ, ಬಸ್ ನಡುವೆ ಭೀಕರ ಅಪಘಾತ – ನಾಲ್ವರು ದುರ್ಮರಣ

    ಬೊಲೆರೋ, ಬಸ್ ನಡುವೆ ಭೀಕರ ಅಪಘಾತ – ನಾಲ್ವರು ದುರ್ಮರಣ

    ಯಾದಗಿರಿ: ಬೊಲೆರೋ ಹಾಗೂ ಸಾರಿಗೆ ಬಸ್ (Bus) ನಡುವೆ ನಡೆದ ಭೀಕರ ಅಪಘಾತದಲ್ಲಿ (Accident) ಒಂದೇ ಕುಟುಂಬದ ನಾಲ್ವರು ಸಾವಿಗೀಡಾದ ಘಟನೆ ಶಹಾಪುರ (Shahapur) ತಾಲೂಕಿನ ಮದ್ದರಕಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಮೃತರನ್ನು ಯಾದಗಿರಿಯ ವರ್ಕನಹಳ್ಳಿ ಗ್ರಾಮದ ಬೊಲೆರೋ ಚಾಲಕ ಶರಣಪ್ಪ (30), ಸುನೀತಾ (19), ಸೋಮವ್ವ (50) ಮತ್ತು ತಂಗಮ್ಮ (55) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ದಾವಣಗೆರೆ| ಪತ್ನಿ ಸಾವಿನ ನೋವು; ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ

    ಬೊಲೆರೋ ವಾಹನದಲ್ಲಿ ಕುಟುಂಬಸ್ಥರು ಕಲಬುರಗಿಯ ಘತ್ತರಗಿ ಭಾಗ್ಯವಂತಿ ದೇವರ ಕಾರ್ಯಕ್ಕೆ ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಬೊಲೆರೋ ವಾಹನದಲ್ಲಿ ಇನ್ನೂ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಹೈಟೆಕ್‌ ವಿಮಾನ, ಬುಕಾರೆಸ್ಟ್‌ನಿಂದ 11 ಗಂಟೆ ಪ್ರಯಾಣ – ಉಗ್ರ ರಾಣಾನನ್ನ ಅಮೆರಿಕದಿಂದ ಭಾರತಕ್ಕೆ ಕರೆತಂದಿದ್ದು ಹೇಗೆ?

  • ವೈದ್ಯರ ನಡುವಿನ ಕಿರಿಕ್‍ನಿಂದ ರಜೆ ಹಾಕಿ ಹೋದ ಪ್ರಸೂತಿ ತಜ್ಞೆ – ಗರ್ಭಿಣಿಯರ ಪರದಾಟ

    ವೈದ್ಯರ ನಡುವಿನ ಕಿರಿಕ್‍ನಿಂದ ರಜೆ ಹಾಕಿ ಹೋದ ಪ್ರಸೂತಿ ತಜ್ಞೆ – ಗರ್ಭಿಣಿಯರ ಪರದಾಟ

    ಯಾದಗಿರಿ: ವೈದ್ಯರ (Doctor) ನಡುವೆ ಜಗಳ ನಡೆದು ಕಳೆದ ಒಂದು ವಾರದಿಂದ ಪ್ರಸೂತಿ ತಜ್ಞೆ ರಜೆ ಹಾಕಿ ಹೋಗಿದ್ದು, ಗರ್ಭಿಣಿಯರು ಸಮಸ್ಯೆ ಎದುರಿಸುತ್ತಿರುವ ಘಟನೆ ಶಹಾಪುರ (Shahapur) ತಾಲೂಕು ಆಸ್ಪತ್ರೆಯಲ್ಲಿ (Hospital) ನಡೆದಿದೆ.

    ಹತ್ತಾರು ಹಳ್ಳಿಗಳ ಜನರ ಪಾಲಿಗೆ ಈ ಆಸ್ಪತ್ರೆಯೇ ಸಂಜೀವಿನಿಯಾಗಿದ್ದು, ವೈದ್ಯರ ಕೊರತೆಯಿಂದ ರೋಗಿಗಳು ನಿತ್ಯವೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯರು ಇಲ್ಲದ ಕಾರಣ ರೋಗಿಗಳು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಹೋಗುತ್ತಿದ್ದಾರೆ. ಇತ್ತೀಚೆಗೆ ವೈದ್ಯರ ನಡುವೆ ಗಲಾಟೆ ಆಗಿದ್ದು, ಇದೇ ವಿಚಾರಕ್ಕೆ ಪ್ರಸೂತಿ ತಜ್ಞ ವೈದ್ಯೆ ಕಳೆದ ಒಂದು ವಾರದಿಂದ ರಜೆ ಹಾಕಿಕೊಂಡು ಹೋಗಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ. ಇದನ್ನೂ ಓದಿ: ಇಲ್ಲಿಯವರೆಗೆ ಸಿಕ್ಕಿರಲಿಲ್ಲ, ಮೋದಿಗೆ ಖರ್ಗೆ ಮ್ಯಾಚ್‌ ಆಗಬಲ್ಲ ನಾಯಕ – ಸತೀಶ್‌ ಜಾರಕಿಹೊಳಿ

    ಪ್ರಸೂತಿ ತಜ್ಞೆ ಡಾ.ಸರೋಜಾ ಪಾಟೀಲ್ ಮತ್ತು ಇಲ್ಲಿನ ಕೆಲವು ವೈದ್ಯರ ನಡುವೆ ಹೊಂದಾಣಿಕೆಯ ಕೊರತೆಯಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ವೈದ್ಯೆ ರಜೆಯ ಮೇಲೆ ತೆರಳಿದ್ದಾರೆ. ಇದರಿಂದ ಹೆರಿಗೆ ಕೆಲಸವನ್ನ ನರ್ಸ್‍ಗಳಿಗೆ ನೀಡಲಾಗಿದ್ದು, ಸಾಮಾನ್ಯ ಹೆರಿಗೆಗಳನ್ನು ನರ್ಸ್‍ಗಳೆ ಮಾಡುತ್ತಾರೆ. ಸಿಜೇರಿಯನ್ ಕೇಸ್‍ಗಳು ಬಂದಾಗ ನರ್ಸ್‍ಗಳ ಕೈಯಿಂದ ಆಗುವುದಿಲ್ಲ. ಇದರಿಂದ ಯಾದಗಿರಿ ಜಿಲ್ಲಾಸ್ಪತ್ರೆಗೆ ವೈದ್ಯರು ಗರ್ಭಿಣಿಯರನ್ನು ಕಳಿಸುತ್ತಿದ್ದಾರೆ.

    ಆಸ್ಪತ್ರೆಗೆ ಕಳೆದ ಒಂದು ವಾರದಲ್ಲೇ ಸುಮಾರು 90 ಕ್ಕೂ ಅಧಿಕ ಗರ್ಭಿಣಿಯರು ಹೆರಿಗೆಗಾಗಿ ಬಂದಿದ್ದಾರೆ. ಇದರಲ್ಲಿ 60 ಜನರಿಗೆ ನಾರ್ಮಲ್ ಹೆರಿಗೆಯಾಗಿದ್ದು, 13 ಮಹಿಳೆಯರಿಗೆ ಸಿಜೇರಿಯನ್‍ಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಅವರ ಸ್ವಕ್ಷೇತ್ರದಲ್ಲೇ ಈ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿನ ಜನ ಹೆಚ್ಚಿನ ವೈದ್ಯರನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಭೇಟಿಯಾದ ಸಿಎಂ – ಬರ ಪರಿಹಾರ ಬಿಡುಗಡೆಗೆ ಆಗ್ರಹ

  • ಪಡಿತರ ಅಕ್ಕಿ ಕಳ್ಳತನ ಪ್ರಕರಣ – ದೂರು ಕೊಟ್ಟ ಅಧಿಕಾರಿಯೇ ಈಗ ಆರೋಪಿ

    ಪಡಿತರ ಅಕ್ಕಿ ಕಳ್ಳತನ ಪ್ರಕರಣ – ದೂರು ಕೊಟ್ಟ ಅಧಿಕಾರಿಯೇ ಈಗ ಆರೋಪಿ

    ಯಾದಗಿರಿ: ಜಿಲ್ಲೆಯ ಶಹಾಪುರದಲ್ಲಿ (Shahapur) 6,077 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಪ್ರಕರಣಕ್ಕೆ (Ration Rice Theft Case) ದೊಡ್ಡ ಟ್ವಿಸ್ಟ್ ಸಿಕ್ಕಿದೆ. ದೂರುದಾರ ಅಧಿಕಾರಿಯೇ ಇದೀಗ ಆರೋಪಿಯಾಗಿದ್ದು, ಪೊಲೀಸರ ತನಿಖೆಯಲ್ಲಿ ಭಯಾನಕ ಸತ್ಯ ಬಟಾಬಯಲಾಗಿದೆ.

    ನವೆಂಬರ್ 22 ರಂದು ಯಾದಗಿರಿ (Yadagiri) ಜಿಲ್ಲೆಯ ಶಹಾಪುರದ ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 2 ಕೋಟಿ 66 ಲಕ್ಷ ರೂ. ಮೌಲ್ಯದ ಬರೋಬ್ಬರಿ 6,077 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನವಾಗಿತ್ತು. ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯ ಆಹಾರ ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಭೀಮರಾಯ ಮಸಾಲಿ ದೂರನ್ನೂ ನೀಡಿದ್ದ. ಆದರೆ ಇದೀಗ ಇಡೀ ಘಟನೆಯ ಅಸಲಿಯತ್ತು ಬಯಲಾಗಿದ್ದು, ದೂರು ನೀಡಿದ್ದ ಉಪನಿರ್ದೇಶಕ ಭೀಮರಾಯ ಮಸಾಲಿಯೂ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

    ಶಹಾಪುರ ಪೊಲೀಸರು ಬಂಧಿತ ಆರೋಪಿಗಳ ಬೆಂಡೆತ್ತಿದಾಗ ಅಸಲಿ ಸತ್ಯ ಕಕ್ಕಿದ್ದಾರೆ. ಕಳ್ಳತನ ಆಗುತ್ತಿದ್ದ ಅಕ್ಕಿ ಮಾರಾಟದಿಂದ ಬರುವ ಆದಾಯದಲ್ಲಿ ಬಂಧಿತ ಆರೋಪಿಗಳು ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕನಿಗೂ ಭರ್ಜರಿ ಪಾಲು ಕೊಡುತ್ತಿದ್ದರು. ಹಾಲಿ ಇರುವ ಭೀಮರಾಯ ಮಸಾಲಿ ಹಾಗೂ ಈ ಹಿಂದಿನ ಡಿಡಿ ಪ್ರಭು ದೊರೆಗೆ ಪ್ರತಿ ತಿಂಗಳು 50 ಸಾವಿರ ರೂ. ಮಾಮೂಲಿ ತಲುಪುತ್ತಿತ್ತು. ಡಿಡಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಮಲ್ಲೇಶ ಮೂಲಕ ಹಣ ಕೊಡಲಾಗುತ್ತಿತ್ತು ಅನ್ನೋ ಕಟು ಸತ್ಯ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಯಾದಗಿರಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು – ಪಾಕಿಸ್ತಾನಕ್ಕೆ ಕಾಲ್!

    ಸ್ವತಃ ಇಲಾಖೆಯ ಅಧಿಕಾರಿಗಳ ಕಣ್ಗಾವಲಿನಲ್ಲೇ ಅಕ್ರಮ ದಂಧೆ ನಡೆಯುತ್ತಿತ್ತು ಅನ್ನೋದನ್ನು ಮೊದಲ ದಿನವೇ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಅದರಂತೆ ಇದೀಗ ಸತ್ಯ ಹೊರ ಬಿದ್ದಿದ್ದು, ಅಧಿಕಾರಿಗಳಿಗೆ ಪ್ರತಿ ತಿಂಗಳು ಕಪ್ಪ ಕೊಟ್ಟು ದಂಧೆಕೋರರು ದಂಧೆ ನಡೆಸುತ್ತಿದ್ದರು. ಇಲ್ಲಿ ಕೇವಲ ಆಹಾರ ನಾಗರಿಕ ಸರಬರಾಜು ಇಲಾಖೆ ಡಿಡಿ ಮಾತ್ರವಲ್ಲದೇ ಫುಡ್ ಇನ್ಸ್‌ಪೆಕ್ಟರ್‌ಗಳು ಹಾಗೂ ಶಿರಸ್ತೇದಾರರೂ ಇದರಲ್ಲಿ ಪಾಲುದಾರರೇ ಆಗಿದ್ದಾರೆ. ದಂಧೆಗೆ ಸಹಕಾರ ನೀಡಿದ್ದಕ್ಕೆ ಫುಡ್ ಇನ್ಸ್‌ಪೆಕ್ಟರ್‌ಗಳಿಗೆ ಪ್ರತಿ ತಿಂಗಳು 20 ಸಾವಿರ ರೂ. ಕೊಟ್ಟರೆ ಇತ್ತ ಶಿರಸ್ತೆದಾರರಿಗೆ ಪ್ರತಿ ತಿಂಗಳು 10 ಸಾವಿರ ರೂ.ಯನ್ನು ಫೋನ್ ಪೇ ಮೂಲಕ ನೀಡಲಾಗುತ್ತಿತ್ತು. ಪ್ರಕರಣದಲ್ಲಿ ಬಂಧಿತನಾಗಿರೋ ಎ1 ಆರೋಪಿ ಶಿವಯ್ಯನಿಂದಲೇ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಈ ಫಿಡ್ ಇನ್ಸ್‌ಪೆಕ್ಟರ್‌ಗಳು ಹಾಗೂ ಶಿರಸ್ತೆದಾರರಿಗೆ ಹೋಗಬೇಕಿದ್ದ ಹಣ ಗುರುಪಾದಯ್ಯ ಹಿರೇಮಠ ಅನ್ನೋರ ಅಕೌಂಟ್‌ಗೆ ವರ್ಗಾವಣೆ ಮಾಡಲಾಗುತ್ತಿತ್ತು. 2 ವರ್ಷಗಳಲ್ಲಿ ಬರೋಬ್ಬರಿ 12 ಲಕ್ಷ 12 ಸಾವಿರ ರೂ. ಹಣ ವರ್ಗಾವಣೆ ಆಗಿರುವ ಸತ್ಯ ಹೊರಬಿದ್ದಿದೆ.

    ಈಗಾಗಲೇ 6 ಆರೋಪಿಗಳು ಬಂಧನ ಆಗಿರೋ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಬೇಲಿನೇ ಎದ್ದು ಹೊಲ ಮೇಯ್ದಂತಾಗಿದೆ. ಬಡ ಜನರಿಗೆ ಅನ್ನಭಾಗ್ಯ ಅಕ್ಕಿ ಕೊಡುವಲ್ಲಿ ಲೋಪ ಆದರೆ ಕ್ರಮ ಕೈಗೊಳ್ಳಬೇಕಿದ್ದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೇ ಭಾಗಿಯಾಗಿರೋದು ನೋಡಿದರೆ ವ್ಯವಸ್ಥೆ ಬಗ್ಗೆಯೇ ಅಸಹ್ಯ ಹುಟ್ಟುವಂತೆ ಮಾಡಿದೆ. ಹೀಗಾಗಿ ಕೂಡಲೇ ಪೊಲೀಸರು ತಪ್ಪಿತಸ್ಥ ಆರೋಪಿಗಳನ್ನು ಹೆಡೆಮುರಿ ಕಟ್ಟೋ ಕೆಲಸ ಮಾಡಬೇಕಿದೆ. ಇದನ್ನೂ ಓದಿ: ವಿಶಿಷ್ಟ ರೀತಿಯಲ್ಲಿ ಹಸೆಮಣೆ ಏರಿದ ಯೋಧ – ಹುತಾತ್ಮ ಸೈನಿಕರ ಪತ್ನಿಯರು, ನಿವೃತ್ತ ಯೋಧರಿಗೆ ಮಂಟಪದಲ್ಲೇ ಸನ್ಮಾನ

  • ಅಕ್ರಮ ಮರಳು ದಂಧೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ – ನದಿಗೆ ಎಸೆಯಲು ಪ್ಲಾನ್

    ಅಕ್ರಮ ಮರಳು ದಂಧೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ – ನದಿಗೆ ಎಸೆಯಲು ಪ್ಲಾನ್

    ಯಾದಗಿರಿ: ಅಕ್ರಮ ಮರಳು ದಂಧೆಯನ್ನು (Illegal Sand Trade) ಪ್ರಶ್ನಿಸಿದ ಇಬ್ಬರು ವ್ಯಕ್ತಿಗಳನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಶಹಾಪುರದ (Shahapur) ವಿಭೂತಳ್ಳಿ ಬಳಿ ನಡೆದಿದೆ.

    ರಾಜು ನಡಿಹಾಳ್ ಹಾಗೂ ಶರಣಗೌಡ ಹಯ್ಯಾಳ ಹಲ್ಲೆಗೊಳಗಾದವರು. ರೌಡಿ ಶೀಟರ್ ವಿಜಯ ರಾಠೋಡ್ ಹಾಗೂ ಇತರರಿಂದ ಅಪಹರಣ ನಡೆದಿದೆ ಎಂದು ಆರೋಪಿಸಲಾಗಿದೆ. ವಿಜಯ ರಾಠೋಡ್ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದು, ಸಚಿವ ಶರಣಬಸಪ್ಪ ದರ್ಶನಾಪೂರ ಬೆಂಬಲಿಗ ಎಂಬ ಮಾತುಗಳು ಕೇಳಿ ಬಂದಿವೆ. ಇದನ್ನೂ ಓದಿ: ಜಿಂಕೆ ತಪ್ಪಿಸಲು ಹೋಗಿ ಕಾರು ಅಪಘಾತ: ಮೂವರು ಗಂಭೀರ

    ಆರೋಪಿಗಳು ಇಬ್ಬರನ್ನೂ ಕಾರಿನಲ್ಲಿ ಅಪಹರಿಸಿ ಡಿಕ್ಕಿಯೊಳಗೆ ಹಾಕಿ, ರಾಡ್‍ನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಇಬ್ಬರನ್ನೂ ಜೀವಂತವಾಗಿ ನದಿಗೆ ಎಸೆಯಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಸ್ಥಳೀಯರು ಗಮನಿಸಿದ್ದರಿಂದ ಇಬ್ಬರನ್ನೂ ಬಿಟ್ಟು ಹೋಗಿದ್ದಾರೆ. ಹಲ್ಲೆಗೊಳಗಾದ ಇಬ್ಬರನ್ನೂ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪ್ರಕರಣದ ಎ1 ಆರೋಪಿ ಬಸುರೆಡ್ಡಿ ಮಲ್ಲಾಬಾದ್ ಎಂಬಾತ ಕೃಷ್ಣಾ ನದಿಯಲ್ಲಿ ಅಕ್ರಮ ಮರಳು ದಂಧೆ ಮಾಡುತ್ತಿದ್ದ. ಇದನ್ನು ರಾಜು ಹಾಗೂ ಶರಣಗೌಡ ಪ್ರಶ್ನಿಸಿದ್ದರು. ಇದೇ ಕಾರಣಕ್ಕೆ ಬಸುರೆಡ್ಡಿಯ ಸ್ನೇಹಿತನಾದ ವಿಜಯ ರಾಠೋಡ್ ಹಾಗೂ ಆತನ ಸಹಚರರು ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

    ಇದರಲ್ಲಿ ಶರಣಗೌಡ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ರಾಜುವಿನ ಎರಡೂ ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಘಟನೆ ನಡೆದು ನಾಲ್ಕು ದಿನಗಳ ನಂತರ ರಾಜುವಿನ ತಂದೆ ಬಸಯ್ಯ ಗುತ್ತೇದಾರ ನೀಡಿರುವ ದೂರಿನ ಮೇಲೆ ಶಹಾಪುರ ಪೊಲೀಸ್ ಠಾಣೆಯಲ್ಲಿ ವಿಜಯ ರಾಠೋಡ್, ಬಸುರೆಡ್ಡಿ, ಮಲ್ಲಿಕಾರ್ಜುನ, ಸೇರಿದಂತೆ ಏಳು ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಮಾಸ್ ಉಗ್ರರ ಕಾರ್ಯತಂತ್ರವನ್ನೇ ಅನುಸರಿಸಿದ ಇಸ್ರೇಲ್ – ಇಂದು ಇಬ್ಬರು ಒತ್ತೆಯಾಳುಗಳ ರಿಲೀಸ್‌ಗೆ ಸಿದ್ಧತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ರಾಪ್ತ ಮಕ್ಕಳ ಮದುವೆಗೆ ಮುಂದಾಗಿದ್ದ ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ

    ಅಪ್ರಾಪ್ತ ಮಕ್ಕಳ ಮದುವೆಗೆ ಮುಂದಾಗಿದ್ದ ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ

    ಯಾದಗಿರಿ: ಅಪ್ರಾಪ್ತ ಮಕ್ಕಳ ಮದುವೆಗೆ ಮುಂದಾಗಿದ್ದ ಪತ್ನಿಯ ಕೊಲೆಗೈದು (Murder) ಪತಿ ಪೊಲೀಸರಿಗೆ ಶರಣಾದ ಘಟನೆ ಶಹಾಪುರ (Shahapur) ತಾಲೂಕಿನ ದೋರನಹಳ್ಳಿ (Doranahalli) ಗ್ರಾಮದಲ್ಲಿ ನಡೆದಿದೆ.

    ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿದ್ದರು. ಆರೋಪಿ ನಿಂಗಪ್ಪ ಮದುವೆ ನೆಪವಾಗಿ ಮನೆಗೆ ಬಂದಿದ್ದಾನೆ. ಅಲ್ಲದೆ ಮದುವೆ ವಿಚಾರವಾಗಿ ಗಲಾಟೆ ಮಾಡಿದ್ದಾನೆ. ರಾತ್ರಿ ಮಲಗಿದ್ದಾಗ ಪತ್ನಿ ಲಕ್ಷ್ಮಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ನೇರವಾಗಿ ಶಹಾಪುರ ಪೊಲೀಸ್ ಠಾಣೆಗೆ ತೆರಳಿ ತಾನೇ ಮಾಡಿದ ಕೃತ್ಯ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಆರ್‌ಎಸ್‌ಎಸ್ ಮುಖಂಡನ ಹತ್ಯೆ ಪ್ರಕರಣ – ಪಿಎಫ್‍ಐ ಸದಸ್ಯ ಅರೆಸ್ಟ್

    ದಂಪತಿಗೆ 13 ವರ್ಷದ ಮತ್ತು 11 ವರ್ಷದ ಹೆಣ್ಣು ಮಕ್ಕಳಿದ್ದರು. ಲಕ್ಷ್ಮಿ ಇಬ್ಬರಿಗೂ ಮದುವೆ ಮಾಡಲು ಮುಂದಾಗಿದ್ದಳು. ದಿನಾಂಕವು ಸಹ ನಿಗದಿಯಾಗಿತ್ತು ಎಂದು ಹೇಳಲಾಗಿದೆ. ಇದಕ್ಕೆ ತೀವ್ರ ಕೋಪಗೊಂಡಿದ್ದ ಪತಿ ನಿಂಗಪ್ಪ ಆಕೆಯನ್ನು ಕೊಲೆಗೈದಿದ್ದಾನೆ.

    ಈ ಬಗ್ಗೆ ಮೃತ ಲಕ್ಷ್ಮಿ ಸಹೋದರ ಶಹಾಪುರ ಠಾಣೆಯಲ್ಲಿ ದೂರು ನೀಡಿದ್ದು, ಸ್ಥಳಕ್ಕೆ ಶಹಾಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರೇಯಸಿ ಮೇಲೆ ಅತ್ಯಾಚಾರ, ಖಾಸಗಿ ಅಂಗಕ್ಕೆ ಕಾರದಪುಡಿ ಹಾಕಿ ವಿಕೃತಿ – ಆರೋಪಿ ಅರೆಸ್ಟ್

  • ಲಾಕ್‍ಡೌನ್ ಸಂಕಷ್ಟ – ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ

    ಲಾಕ್‍ಡೌನ್ ಸಂಕಷ್ಟ – ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ

    ಯಾದಗಿರಿ: ಕೊರೊನಾ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿ, ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಆರು ಸದಸ್ಯರು, ಕೃಷಿ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ಇಂದು ನಡೆದಿದೆ.

    ಗ್ರಾಮದ ಭೀಮರಾಯ್ ಎಂಬಾತ ತನ್ನ ಹೆಂಡತಿ ಶಾಂತಮ್ಮ ಜೊತೆಗೆ ತನ್ನ ನಾಲ್ವರು ಮಕ್ಕಳಾದ ಸುಮಿತ್ರಾ, ಶ್ರೀದೇವಿ, ಲಕ್ಷ್ಮೀ, ಶಿವರಾಜ್ ಜೊತೆ ತನ್ನದೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮೃತ ಭೀಮರಾಯ್ ಕೃಷಿ ಮತ್ತು ವೈಯಕ್ತಿಕ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಇಂದು ತನ್ನ ಕುಟುಂಬದ ಜೊತೆಗೆ ಜಮೀನಿಗೆ ತೆರಳಿದ್ದ ಭೀಮರಾಯ್, ಮೊದಲಿಗೆ ಮಕ್ಕಳ ಕಾಲಿಗೆ ಕಲ್ಲು ಕಟ್ಟಿ ಹೊಂಡಕ್ಕೆ ಹಾಕಿದ್ದಾನೆ. ಬಳಿಕ ತನ್ನ ಹೆಂಡತಿ ಜೊತೆಗೆ ತಾನು ಸಹ ಹಾರಿದ್ದಾನೆ.

    ಶಹಾಪುರ ಪೋಲಿಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸದ್ಯ ನಾಲ್ವರ ಶವಗಳನ್ನ ಹೊರತೆಗೆದಿದ್ದು, ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ವೇದಮೂರ್ತಿ, ಎಸಿ ಪ್ರಶಾಂತ್ ಹನಗಂಡಿ, ತಹಶೀಲ್ದಾರ ಜಗನ್ನಾಥ್ ರೆಡ್ಡಿ, ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ನರ್ಸ್ ಮೇಲೆ ಹಲ್ಲೆಗೆ ಯತ್ನಿಸಿ, ಅಸಭ್ಯವಾಗಿ ವರ್ತಿಸಿದ ಪುಂಡ

    ನರ್ಸ್ ಮೇಲೆ ಹಲ್ಲೆಗೆ ಯತ್ನಿಸಿ, ಅಸಭ್ಯವಾಗಿ ವರ್ತಿಸಿದ ಪುಂಡ

    ಯಾದಗಿರಿ: ಕೊರೊನಾ ಸೋಂಕಿತನ ದ್ವಿತೀಯ ಸಂಪರ್ಕದಲ್ಲಿದ್ದ ಯುವಕನ ಮಾಹಿತಿ ಪಡೆಯಲು ಮನೆಗೆ ಹೋದ ಮಹಿಳಾ ಸಿಬ್ಬಂದಿ ಮೇಲೆ ಪುಂಡ ಯುವಕನೋರ್ವ ಮೃಗಿಯ ವರ್ತನೆ ತೋರಿ ಹಾಡಹಗಲೇ ಅಸಭ್ಯ ನಡೆದುಕೊಂಡಿದ್ದಾನೆ. ಯಾದಗಿರಿ ಜಿಲ್ಲೆಯ ಶಹಪುರ ಪಟ್ಟಣದ ಆನೆಗುಂದಿ ಓಣಿಯಲ್ಲಿ ನಡೆದಿದೆ.

    ಆನೆಗುಂದಿ ಓಣಿಯಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಧೃಡವಾಗಿತ್ತು. ಹೀಗಾಗಿ ಈತನ ಅಕ್ಕಪಕ್ಕದ ಮನೆಗಳಲ್ಲಿ ನರ್ಸ್ ನಾಗೇಶ್ವರಿ ಮಾಹಿತಿಯನ್ನು ಪಡೆಯುತ್ತಿದ್ದರು. ಸೋಂಕಿತನ ದ್ವಿತೀಯ ಸಂಪರ್ಕದಲ್ಲಿದ್ದ ಯುವಕ ತನ್ನ ಮಾಹಿತಿ ನೀಡದೇ ಕೊರೊನಾ ವಾರಿಯರ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಪುಂಡ ಯುವಕ ಸೋಂಕಿತನ ದ್ವಿತೀಯ ಸಂಪರ್ಕದಲ್ಲಿದ್ದು ಗೊತ್ತಾಗಿದೆ. ಹೀಗಾಗಿ ನರ್ಸ್ ಆತನ ಬಳಿ ಮಾಹಿತಿ ಕೇಳಲು ಮುಂದಾಗಿದ್ದರು.

    ನರ್ಸ್ ಮಾಹಿತಿ ಕೇಳುತ್ತಿರುವಾಗ ಪುಂಡ ಯುವಕ ಅಸಭ್ಯ ವರ್ತನೆ ತೋರಲು ಮುಂದಾಗಿದ್ದಾನೆ. ಯುವಕನ ವರ್ತನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಲು ನರ್ಸ್ ಮುಂದಾಗಿದ್ದಾರೆ. ಈ ವೇಳೆ ಮಹಿಳೆಯ ಮೇಲೆ ದಾಳಿ ಮಾಡಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ನರ್ಸ್ ಹತ್ತಿರ ಅಸಭ್ಯವಾಗಿ ನಡೆದುಕೊಂಡಿದ್ದಾನೆ.

    ಮಾಹಿತಿ ಪಡೆದುಕೊಳ್ಳಲು ಮನೆ- ಮನೆಗೆ ತೆರಳುವ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಗೆ ರಾಜ್ಯದಲ್ಲಿ ನಿಜಕ್ಕೂ ರಕ್ಷಣೆ ಇದೆಯಾ ಅಂತ ಅನುಮಾನ ಮೂಡುತ್ತಿದೆ. ಈ ಘಟನೆಯಿಂದ ಸರ್ಕಾರ ಕೊರೊನಾ ವಾರಿಯರ್ಸ್ ರಕ್ಷಣೆಗೆ ಎಷ್ಟೇ ಕಠಿಣ ಕಾನೂನು ತಂದರೂ ಪ್ರಯೋಜನವಾಗಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

  • ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಶಾಸಕರಿಗೆ ಬಿಜೆಪಿ ಟಿಕೆಟ್-ಟ್ವಿಟ್ಟರ್ ನಲ್ಲಿ ಅಸಮಾಧಾನ

    ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಶಾಸಕರಿಗೆ ಬಿಜೆಪಿ ಟಿಕೆಟ್-ಟ್ವಿಟ್ಟರ್ ನಲ್ಲಿ ಅಸಮಾಧಾನ

    ಯಾದಗಿರಿ: ಅಲ್ಪಸಂಖ್ಯಾತರ ಮತಗಳ ಓಲೈಕೆಗಾಗಿ ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಿ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಶಹಾಪುರ ಶಾಸಕ ಗುರುಪಾಟೀಲ್‍ರಿಗೆ ಬಿಜೆಪಿ ಟಿಕೆಟ್ ನೀಡಿದೆ.

    ರಾಜ್ಯಾದ್ಯಂತ ಬಿಜೆಪಿ ಟಿಪ್ಪು ಜಯಂತಿಗೆ ಭಾರೀ ವಿರೋಧವನ್ನು ವ್ಯಕ್ತಪಡಿಸಿತ್ತು. ಆದ್ರೂ ಶಹಾಪುರ ಬಿಜೆಪಿ ಶಾಸಕ ಗುರುಪಾಟೀಲ್ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದರು. ಆದ್ರೆ ಇದೀಗ ಬಿಜೆಪಿ ಮತ್ತೊಮ್ಮೆ ಗುರುಪಾಟೀಲ್ ಅವರಿಗೆ ಟಿಕೆಟ್ ನೀಡಿದ್ದು, ಸ್ಥಳೀಯ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ಬಿಜೆಪಿಯ ಟಿಪ್ಪು ಜಯಂತಿ ವಿರೋಧದ ಪ್ರತಿಭಟನೆ ಕೇವಲ ರಾಜಕೀಯ ಬೂಟಾಟಿಕೆ ಆಯಿತಾ? ಇದು ಚೀಪ್ ಪೊಲಿಟಿಕ್ಸ್. ಪಕ್ಷದ ವಿರೋಧದ ನಡುವೆಯೂ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಗುರುಪಾಟೀಲ್ ಗೆ ಬಿಜೆಪಿ ಟಿಕೆಟ್ ನೀಡಿರುವುದು ಎಷ್ಟು ಸರಿ ಅಂತಾ ನಮೋ ಬ್ರಿಗೇಡ್‍ನ ಮಾಜಿ ಸದಸ್ಯ ನೀರಜ್ ಕಾಮತ್ ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಈ ಹಿಂದೆ ಹೊಸಪೇಟೆಯ ಶಾಸಕ ಆನಂದ್ ಸಿಂಗ್ ಬಿಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದಕ್ಕೆ, ರಾಜ್ಯ ನಾಯಕರೆಲ್ಲಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಂತೆಯೇ ಜಯಂತಿಯಲ್ಲಿ ಭಾಗವಹಿಸಿದ್ದಕ್ಕೆ ಉತ್ತರ ನೀಡಬೇಕೆಂದು ಬಿಜೆಪಿ ಆನಂದ್ ಸಿಂಗ್ ಅವರಿಗೆ ಶೋಕಾಸ್ ನೋಟಿಸ್ ಸಹ ಜಾರಿ ಮಾಡಿತ್ತು. ಇದನ್ನೂ ಓದಿ: ಶಾಸಕ ಆನಂದ್ ಸಿಂಗ್‍ಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್

  • ಲಾರಿ-ಕಾರು ಡಿಕ್ಕಿ: ಕಾರು ಚಾಲಕ ಸ್ಥಳದಲ್ಲಿಯೇ ಸಾವು

    ಲಾರಿ-ಕಾರು ಡಿಕ್ಕಿ: ಕಾರು ಚಾಲಕ ಸ್ಥಳದಲ್ಲಿಯೇ ಸಾವು

    ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದ ಬಳಿ ಲಾರಿ-ಕಾರು ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸುರಪುರ ನಗರದ ರಂಗಂಪೇಟೆಯ ನಿವಾಸಿ ಸಿದ್ದಾರ್ಥ ಎತ್ತಿನಮನಿ (28) ಮೃತಪಟ್ಟ ಚಾಲಕ. ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದ್ದು ಸಿದ್ದಾರ್ಥ ಸಾವನ್ನಪ್ಪಿದ್ದಾರೆ. ಘಟನೆ ನಂತರ ಲಾರಿ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.

    ಈ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.