Tag: Shahabad

  • ಮದ್ವೆಯಾದ್ರೂ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ- ಸಿಕ್ಕಿ ಬಿದ್ದಾಗ ಕೊಂದೇ ಬಿಟ್ರು!

    ಮದ್ವೆಯಾದ್ರೂ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ- ಸಿಕ್ಕಿ ಬಿದ್ದಾಗ ಕೊಂದೇ ಬಿಟ್ರು!

    – ಜಾಲಿ ರೈಡ್ ತಂದ ಸಾವು

    ಕಲಬುರಗಿ: ವಿವಾಹಿತ ಮಹಿಳೆಯ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ನಲ್ಲಿ ನಡೆದಿದೆ.

    32 ವರ್ಷದ ಜಗದೀಶ್ ಕೊಲೆಯಾದ ವ್ಯಕ್ತಿ. ಮದುವೆಯಾಗಿದ್ದರೂ ಜಗದೀಶ್ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಎನ್ನಲಾಗಿದೆ. ಶುಕ್ರವಾರ ರಾತ್ರಿ ಮಹಿಳೆಯೊಂದಿಗೆ ಬೈಕಿನಲ್ಲಿ ಹೋಗುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾರೆ. ಈ ವೇಳೆ ಮಹಿಳೆಯ ಸಂಬಂಧಿಕರು ಜಗದೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕೂಡಲೇ ಜಗದೀಶ್ ನನ್ನು ಆಸ್ಪತ್ರೆಗೂ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

    ಈ ಸಂಬಂಧ ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿಯ ಒಪ್ಪಿಗೆ ಮೇರೆಗೆ ಮಹಿಳೆಯನ್ನು ಬೈಕ್ ಮೇಲೆ ಕೂರಿಸಿಕೊಂಡು ಔಷಧಿ ತರಲು ಜಗದೀಶ್ ಹೋಗಿದ್ದರು. ಶಹಬಾದ್ ಪಟ್ಟಣದಲ್ಲಿ ಬೈಕ್ ತಡೆದ ಮತಾಂಧ ಗುಂಪು ಯುವಕನನ್ನು ಹತ್ಯೆ ಮಾಡಿದೆ. ಈ ಸಂಬಂಧ ಕೂಡಲೇ ಸರ್ಕಾರ ಕಠಿಣ ಕ್ರಮ ಜರುಗಿಸಬೇಕೆಂದು ಸ್ಥಳೀಯ ಶ್ರೀರಾಮ ಸೇನೆಯ ಮುಖಂಡರು ಆಗ್ರಹಿಸಿದ್ದಾರೆ.

     

  • ಸಾಲ ಮಾಡಿಕೊಳ್ಳಬೇಡಿ ಎಂದ ಪತ್ನಿಯನ್ನೇ ಕೊಡಲಿಯಿಂದ ಹೊಡೆದು ಕೊಲೆಗೈದ ಪತಿ

    ಸಾಲ ಮಾಡಿಕೊಳ್ಳಬೇಡಿ ಎಂದ ಪತ್ನಿಯನ್ನೇ ಕೊಡಲಿಯಿಂದ ಹೊಡೆದು ಕೊಲೆಗೈದ ಪತಿ

    ಕಲಬುರಗಿ: ಹೆಚ್ಚಿನ ಸಾಲ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಲೆಗೈದಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದಲ್ಲಿ ನಡೆದಿದೆ.

    30 ವರ್ಷದ ಶಿವಮ್ಮ ಪತಿಯಿಂದಲೇ ಕೊಲೆಯಾದ ಪತ್ನಿ. ಪತಿ ನಾಗಪ್ಪನಿಗೆ ಹೆಚ್ಚಾಗಿ ಸಾಲ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಇದರಿಂದ ನನಗೆ ಪ್ರಶ್ನೆ ಮಾಡುತ್ತೀಯಾ ಎಂದು ನಾಗಪ್ಪ ಮನೆಯಲ್ಲಿದ್ದ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಪರಿಣಾಮ ಶಿವಮ್ಮರ ತಲೆಗೆ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇತ್ತ ಪತ್ನಿಯನ್ನು ಕೊಲೆಗೈದ ಬಳಿಕ ಗಂಡ ನಾಗಪ್ಪ ತಲೆ ಮರೆಸಿಕೊಂಡಿದ್ದಾನೆ. ಈ ಸಂಬಂಧ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ವಿಶೇಷ ಜಾಲ ಬೀಸಿದ್ದಾರೆ.

    ಇದನ್ನೂ ಓದಿ:  ಪತಿಯನ್ನು ಬಿಟ್ಟುಬರಲು ನಿರಾಕರಿಸಿದ್ದಕ್ಕೆ ಲೈಂಗಿಕ ದೌರ್ಜನ್ಯ- ಗುಪ್ತಾಂಗಕ್ಕೆ ಕಬ್ಬಿಣದ ರಾಡ್‍ನಿಂದ ಹಲ್ಲೆ, ಮಹಿಳೆ ಸಾವು