Tag: Shah Rukh Khan

  • ಶಾರುಖ್ ಪುತ್ರಿ ಸುಹಾನ ನಟನೆಯ ಚಿತ್ರದ ಟೀಸರ್

    ಶಾರುಖ್ ಪುತ್ರಿ ಸುಹಾನ ನಟನೆಯ ಚಿತ್ರದ ಟೀಸರ್

    ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರಿ ಸುಹಾನ ನಟನೆಯ ಮೊದಲ ಕಿರುಚಿತ್ರದ ಟೀಸರ್ ರಿಲೀಸ್ ಆಗಿದೆ.

    ನ್ಯೂಯಾರ್ಕ್ ಅಭ್ಯಾಸ ನಡೆಸುತ್ತಿರುವ ಶಾರುಖ್ ಪುತ್ರಿ ತಮ್ಮ ಹಾಟ್ ಫೋಟೋಗಳಿಂದಲೇ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಚೆಲುವೆ. ಯಾವುದೇ ಸಿನಿಮಾದಲ್ಲಿ ನಟಿಸದಿದ್ದರೂ ಸುಹಾನಾ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಹಿಂದೆ ಬಾಲಿವುಡ್ ಸಿನ್ಮಾದಲ್ಲಿ ಸುಹಾನ ನಟಿಸುತ್ತಿದ್ದಾರೆ ಎಂದು ಸುದ್ದಿಯೊಂದು ಹರಿದಾಡಿತ್ತು. ಈ ಬೆನ್ನಲ್ಲೇ ಸುಹಾನ ನಟನೆಯ ‘ದ ಗ್ರೇ ಪಾರ್ಟ್ ಆಫ್ ಬ್ಲ್ಯೂ’ ಕಿರುಚಿತ್ರದ ಟೀಸರ್ ನ್ನು ನಿರ್ದೇಶಕ ಥಿಯೋಡರ್ ಗಿಮೆನೋ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.

    ನನ್ನ ಮುಂದಿನ ‘ದ ಗ್ರೇ ಪಾರ್ಟ್ ಆಫ್ ಲೈಫ್’ ಕಿರುಚಿತ್ರದ ಕೆಲ ದೃಶ್ಯಗಳನ್ನು ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರದ ಬಹುತೇಕ ಕೆಲಸಗಳು ಅಂತಿಮಗೊಂಡಿದ್ದು, ಬಿಡುಗಡೆ ದಿನಾಂಕ ನಿಗದಿಯಾಗಿಲ್ಲ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಕಿರುಚಿತ್ರ ಬಿಡುಗಡೆ ಮುನ್ನ ಈ ಟೀಸರ್ ಬಿಡುಗಡೆ ಮಾಡಿದ್ದು, ಎಂಜಾಯ್ ಮಾಡಿ ಎಂದು ಗಿಮೆನೋ ಬರೆದುಕೊಂಡಿದ್ದಾರೆ.

    ಈ ಹಿಂದೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶಾರೂಕ್, ಮಕ್ಕಳಾದ ಆರ್ಯನ್ ಮತ್ತು ಸುಹಾನ ಸಿನಿ ಇಂಡಸ್ಟ್ರಿಗೆ ಬರಲಿದ್ದಾರೆ ಎಂದು ಹೇಳಿದ್ದರು. ಆರ್ಯನ್ ನಿರ್ಮಾಪಕ ಮತ್ತು ನಿರ್ದೇಶಕನಾಗಲು ಇಷ್ಟಪಡುತ್ತಾನೆ ಮತ್ತು ಸುಹಾನ ಕಲಾವಿದೆಯಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತಾಳೆ ಎಂದು ಶಾರುಖ್ ತಿಳಿಸಿದ್ದರು.

    https://www.instagram.com/p/B29oXhVjE9B/

  • ಶಾರುಖ್ ಖಾನ್ ವಿರುದ್ಧ ಪಾಕ್ ಆರ್ಮಿ ಮುಖ್ಯ ವಕ್ತಾರ ಗರಂ

    ಶಾರುಖ್ ಖಾನ್ ವಿರುದ್ಧ ಪಾಕ್ ಆರ್ಮಿ ಮುಖ್ಯ ವಕ್ತಾರ ಗರಂ

    ಮುಂಬೈ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಇತ್ತೀಚೆಗೆ ವೆಬ್ ಸಿರೀಸ್ ರಂಗದಲ್ಲಿ ಪ್ರವೇಶ ಮಾಡಿರುವ ಸಂಗತಿ ಎಲ್ಲಿರಗೂ ತಿಳಿದಿದೆ. ಸದ್ಯ ಶಾರುಖ್ ನಿರ್ಮಾಣ ಮಾಡುತ್ತಿರುವ ‘ಬಾರ್ಡ್ ಆಫ್ ಬ್ಲಡ್’ ಸಿರೀಸ್‍ನ ಟ್ರೈಲರ್ ಬಿಡುಗಡೆಯಾಗಿದ್ದು, ಇದರ ಬೆನ್ನಲ್ಲೇ ಶಾರುಖ್ ಖಾನ್ ವಿರುದ್ಧ ಕಿರಿಕಾರಿ ಪಾಕಿಸ್ತಾನ ಆರ್ಮಿ ಮುಖ್ಯ ವಕ್ತಾರ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದಾರೆ.

    ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಆಸೀಫ್ ಗಫೂರ್, ನೀವು ಇನ್ನು ಬಾಲಿವುಡ್ ಭ್ರಮೆಯಲ್ಲಿ ಜೀವಿಸುತ್ತಿದ್ದೀರಿ. ಆದರೆ ರಿಯಾಲಿಟಿ ನೋಡಬೇಕಾದರೆ ರಾ, ಗೂಢಾಚಾರಿ ಕುಲ ಭೂಷಣ್ ಜಾಧವ್, ವಿಂಗ್ ಕಮಾಂಡರ್ ಅಭಿನಂದನ್, 27 ಫೆ.2019 ಭಾರತ-ಪಾಕಿಸ್ತಾನ್ ಬಾರ್ಡರ್ ವಿಚಾರಗಳನ್ನು ಗಮನಿಸಿ. ನೀವು ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಶೋಷಣೆ ವಿರುದ್ಧ ಧ್ವನಿ ಎತ್ತಿ ಶಾಂತಿ ಕಾಪಾಡಿ ಎಂದು ಶಾರುಖ್ ಖಾನ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

    ಬೇಹುಗಾರಿಕಾ ಹಿನ್ನೆಲೆಯಲ್ಲಿ ಬರುತ್ತಿರುವ ‘ಬಾರ್ಡ್ ಆಫ್ ಬ್ಲಡ್’ ಸಿರೀಸ್‍ನಲ್ಲಿ ಇಮ್ರಾನ್ ಹಷ್ಮಿ, ವಿನಿತ್ ಕುಮಾರ್ ಸಿಂಗ್, ಶೋಭಿತಾ ಧುಲಿಪಾಲ ಸೇರಿದಂತೆ ಹಲವು ನಟರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೆಬ್ ಸಿರೀಸ್ ಬಿಲಾಲ್ ಸಿದ್ದಿಖಿ ಬರೆದಿರುವ ಪುಸ್ತಕದ ಆಧಾರವಾಗಿ ನಿರ್ಮಾಣ ಮಾಡಲಾಗಿದೆ. ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿದೆ.

    ವೆಬ್ ಸಿರೀಸ್‍ನ ಟ್ರೈಲರ್ ಬಿಡುಗಡೆ ಮಾಡಿ ಟ್ವೀಟ್ ಮಾಡಿದ್ದ ಶಾರುಖ್ ಖಾನ್, ಗೂಢಾಚಾರ್ಯೆ, ಪ್ರತಿಕಾರ, ಪ್ರೇಮ, ಕರ್ತವ್ಯ ನಿರ್ಮಾಣೆಯ ನಡುವೆ ಸಾಗುವ ಕಥೆಯಾಗಿದೆ ಎಂದು ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

    ಈ ಟ್ರೈಲರ್ ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನದ ಪ್ರದೇಶದಿಂದ ಆರಂಭವಾಗುತ್ತದೆ. ಭಾರತೀಯ ಬೇಹುಗಾರಿಕೆ ಸಂಸ್ಥೆ ‘ರಾ’ ಮಾಜಿ ಅಧಿಕಾರಿ ಕಬೀರ್ ಆನಂದ ಜೀವನ ಸುತ್ತ ನಡೆಯುವ ಕಥೆ ಇದಾಗಿದೆ. ಮುಂಬೈನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಸುತ್ತಿದ್ದ ಕಬೀರ್ ಆನಂದ್‍ಗೆ ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಗೂಢಾಚಾರಿ ಆಗುವ ಅವಕಾಶ ಲಭಿಸಿ ಪಾಕ್‍ಗೆ ತೆರಳುತ್ತಾರೆ. ಇವರೊಂದಿಗೆ ಮತ್ತಿಬ್ಬರು ಕೂಡ ಕಬೀರ್ ರೊಂದಿಗೆ ತೆರಳುತ್ತಾರೆ. ಈ ರೆಸ್ಕ್ಯೂ ಕಮ್ ಸೂಸೈಡ್ ಮಿಷನ್‍ನಲ್ಲಿ ಮೂವರು ಮಾಡಿರುವ ಸಹಾಸ ಪ್ರಯಾಣವೇ ‘ಬಾರ್ಡ್ ಆಫ್ ಬ್ಲಡ್’ ಸಿರೀಸ್ ಆಗಿದೆ.

  • ಮಗನನ್ನು ಮತಗಟ್ಟೆಗೆ ಕರೆದೊಯ್ದ ಸತ್ಯ ಬಿಚ್ಚಿಟ್ಟ ಶಾರೂಕ್ ಖಾನ್!

    ಮಗನನ್ನು ಮತಗಟ್ಟೆಗೆ ಕರೆದೊಯ್ದ ಸತ್ಯ ಬಿಚ್ಚಿಟ್ಟ ಶಾರೂಕ್ ಖಾನ್!

    ಮುಂಬೈ: ಮತದಾನದ ವೇಳೆ ಬಾಲಿವುಡ್ ಕಿಂಗ್ ಖಾನ್ ತಮ್ಮ ಮಗನನ್ನು ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿದ್ದರು. ಇದೀಗ ಸ್ವತಃ ಶಾರೂಕ್ ಅವರೇ ಮಗನನ್ನು ಕರೆದೊಯ್ದ ಸತ್ಯ ಬಿಚ್ಚಿಟ್ಟಿದ್ದಾರೆ.

    ಹೌದು. ಸೋಮವಾರ ಲೋಕಸಭಾ ಚುನಾವಣೆ 2019ರ ನಾಲ್ಕನೇ ಹಂತದ ಮತದಾನ ನಡೆದಿತ್ತು. ಈ ವೇಳೆ ಸೆಲೆಬ್ರಿಟಿಗಳೆಲ್ಲರೂ ಸದೃಢ ಭಾರತಕ್ಕಾಗಿ ತಮ್ಮ ಹಕ್ಕು ಚಲಾಯಿಸಿದ್ದರು. ಸಾಮಾನ್ಯವಾಗಿ ಮತಗಟ್ಟೆಯೊಳಗೆ ಮಕ್ಕಳನ್ನು ಬಿಡುವುದಿಲ್ಲ. ಆದರೆ ಶಾರೂಕ್ ತಮ್ಮ ಕಿರಿಯ ಮಗ ಅಬ್ರಾಂನನ್ನು ಬಾಂದ್ರಾ ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿದ್ದರು.

    ಪತ್ನಿ ಗೌರಿಯವರು ಕಿರಿಯ ಮಗ ಅಬ್ರಾಂನನ್ನು ಬಾಂದ್ರಾ ಮತದಾನ ಕೇಂದ್ರದೊಳಗೆ ಕರೆದುಕೊಂಡು ಹೋಗಿದ್ದಾರೆ. ಯಾಕಂದ್ರೆ ಅವನಿಗೆ `ಬೋಟಿಂಗ್’ ಹಾಗೂ `ವೋಟಿಂಗ್’ ಬಗ್ಗೆ ಭಾರೀ ಗೊಂದಲವಿತ್ತು. ಈ ಗೊಂದಲವನ್ನು ಕ್ಲೀಯರ್ ಮಾಡಲು ಆತನನ್ನು ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

    ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಶಾರೂಕ್, ಪುಟ್ಟ ಮಗನಿಗೆ ಬೋಟಿಂಗ್ ಮತ್ತು ವೋಟಿಂಗ್ ಮಧ್ಯೆ ಸಾಕಷ್ಟು ಕನ್‍ಫ್ಯೂಶನ್ ಇತ್ತು. ಈ ಗೊಂದಲವನ್ನು ನಿವಾರಿಸಲು ಆತನನ್ನು ಕೂಡ ಮತಗಟ್ಟೆಯೊಳಗೆ ಕರೆದುಕೊಂಡು ಹೋಗುವ ಮೂಲಕ ಮತದಾನದ ಬಗ್ಗೆ ಮತದಾನದ ಬಗ್ಗೆ ವಿವರಿಸಲಾಯಿತು ಎಂದು ಮೂವರ ಫೋಟೋ ಹಾಕಿ ಬರೆದುಕೊಂಡಿದ್ದಾರೆ.

    ಬಾಕ್ಸ್ ಆಫೀಸಿನಲ್ಲಿ ಝೀರೋ ಚಿತ್ರ ಪ್ಲಾಪ್ ಆಗಿದ್ದು, ಆ ಬಳಿಕ ಶಾರೂಕ್ ಅವರು ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ. ಅಲ್ಲದೆ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಶೀಘ್ರವೇ ತಿಳಿಸಲಿದ್ದಾರೆ.

    https://www.instagram.com/p/Bw1uXvgALLB/?utm_source=ig_embed

  • ಶಾರೂಖ್‍ರನ್ನ ಅಂಕಲ್ ಅಂದಿದ್ದಕ್ಕೆ ಸಾರಾ ವಿರುದ್ಧ ಅಭಿಮಾನಿಗಳು ಗರಂ

    ಶಾರೂಖ್‍ರನ್ನ ಅಂಕಲ್ ಅಂದಿದ್ದಕ್ಕೆ ಸಾರಾ ವಿರುದ್ಧ ಅಭಿಮಾನಿಗಳು ಗರಂ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಅವರನ್ನು ನಟಿ ಸಾರಾ ಅಲಿ ಖಾನ್ ವೇದಿಕೆ ಮೇಲೆ ‘ಅಂಕಲ್’ ಎಂದು ಕರೆದಿರುವುದಕ್ಕೆ ಎಸ್‍ಆರ್‍ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.

    ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ನಟ ಸೈಫ್ ಅಲಿ ಖಾನ್ ಹಾಗೂ ಶಾರೂಖ್ ಖಾನ್ ನಿರೂಪಕರಾಗಿ ಭಾಗಿಯಾಗಿದ್ದರು. ಈ ವೇಳೆ ನನ್ನ ತಂದೆ ಹಾಗೂ ಶಾರೂಖ್ ಅಂಕಲ್ ಜೊತೆಗೂಡಿ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ ಸಾರಾ ಶಾರೂಖ್‍ರನ್ನು ಅಂಕಲ್ ಎಂದು ಕರೆದಿರುವ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾರಾ ಈ ರೀತಿ ಶಾರೂಖ್‍ರನ್ನ ಕರೆದಿರುವುದಕ್ಕೆ ಎಸ್‍ಆರ್‍ಕೆ ಅಭಿಮಾನಿಗಳು ನಟಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

    ಇನ್‍ಸ್ಟಾಗ್ರಾಮ್, ಟ್ವಿಟ್ಟರ್ ಹೀಗೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಾರಾ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರಾ ಈ ರೀತಿ ಸ್ಟಾರ್ ನಟನಿಗೆ ಅಂಕಲ್ ಅಂದಿರುವುದು ಸರಿಯಲ್ಲ. ವೃತ್ತಿ ವಿಷಯಕ್ಕೆ ಬಂದಾಗ ತಮಗಿಂತ ಹಿರಿಯ ನಟರಿಗೆ ಗೌರವದಿಂದ ಸರ್, ಮೇಡಂ ಎಂದು ಕರೆಯಬೇಕು. ಆದ್ರೆ ಎಲ್ಲರ ಮುಂದೆ ಶಾರೂಖ್‍ಗೆ ಸಾರಾ ಅಂಕಲ್ ಅಂದಿದ್ದು ತಪ್ಪು ಎಂದು ಕಿಡಿಕಾರಿದ್ದಾರೆ. ಇದಕ್ಕೆ ಸಾರಾ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ಟೀಕಿಸುತ್ತಿರುವುದಕ್ಕೆ ರೊಚ್ಚಿಗೆದ್ದು ಶಾರೂಖ್ ಅಭಿಮಾನಿಗಳಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಶಾರೂಖ್ ಖಾನ್ ಮಕ್ಕಳು ಸೈಫ್ ಆಲಿ ಖಾನ್‍ರನ್ನು ಅಂಕಲ್ ಎಂದೇ ಕರೆಯುತ್ತಾರೆ. ಸಾರಾ ಆ ರೀತಿ ಕರೆದು ಗೌರವಿಸಿದ್ದಾರೆ ಅಷ್ಟೇ ಎಂದು ಸಾರಾ ಪರ ನಿಂತಿದ್ದಾರೆ.

    ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾರಾ ಹಾಗೂ ಶಾರೂಖ್ ಅಭಿಮಾನಿಗಳ ನಡುವೆ ಸ್ಟಾರ್ ವಾರ್ ಶುರುವಾಗಿದೆ. ಅಲ್ಲದೆ ಸಾರಾ ವಸರ್ಸ್ ಶಾರೂಖ್ ಟ್ರೋಲ್‍ಗಳು ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

  • ಬಾಲಿವುಡ್ ಬಾದ್‍ಶಾ ಪಾರ್ಟಿಗೆ ಟಿಫಿನ್ ಒಯ್ದ ಆಮೀರ್

    ಬಾಲಿವುಡ್ ಬಾದ್‍ಶಾ ಪಾರ್ಟಿಗೆ ಟಿಫಿನ್ ಒಯ್ದ ಆಮೀರ್

    ಮುಂಬೈ: ಬಿಟೌನ್ ಸ್ಟಾರ್ ಬಾಲಿವುಡ್ ಬಾದ್‍ಶಾ ಶಾರುಕ್ ಖಾನ್ ಆಯೋಜಿಸಿದ್ದ ಪಾರ್ಟಿಯೊಂದಕ್ಕೆ ನಟ ಆಮೀರ್ ಖಾನ್ ಟಿಫನ್ ಒಯ್ದಿದ್ದ ಕಥೆಯನ್ನು ಸ್ವತಃ ತಾವೇ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

    ಹೌದು, ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತಿ ಪಡೆದಿರುವ ಆಮೀರ್ ಖಾನ್ ಬರೀ ಸಿನಿಮಾರಂಗದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಎಷ್ಟು ಪರ್ಫೆಕ್ಟ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಬಾಲಿವುಡ್ ಅಂಗಳದಲ್ಲಿ ತನ್ನದೆಯಾದಂತಹ ಚಾಪು ಮೂಡಿಸಿದ್ದ ಆಮೀರ್ ಖಾನ್ ಪೋಷಕ ಪಾತ್ರದಲ್ಲಿ ನಟಿಸಿದ್ದ ಸಿನಿಮಾ `ದಂಗಲ್’, ಈ ಚಿತ್ರಕ್ಕಾಗಿ ಬರೋಬ್ಬರಿ 30 ಕೆ.ಜಿ ತೂಕವನ್ನು ಹೆಚ್ಚಿಸಿಕೊಂಡು, ತಮ್ಮ ದೇಹವನ್ನು ತಾವು ನಿರ್ವಹಿಸುತ್ತಿದ್ದ ಪಾತ್ರಕ್ಕೆ ಒಪ್ಪುವಂತೆ ಮಾಡಿಕೊಂಡಿದ್ದರು. ಬಳಿಕ ಈ ತೂಕವನ್ನು ಇಳಿಸಲು ಸಾಕಷ್ಟು ವ್ಯಾಯಾಮ, ಡಯೆಟ್ ಅಂತ ಶುರು ಮಾಡಿದ್ದರು.

    ಇದೇ ವೇಳೆ ಒಮ್ಮೆ ಶಾರುಕ್ ಖಾನ್ ಅವರು ತಮ್ಮ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಗೆ ಆಮೀರ್ ಹಾಗೂ ಇತರೇ ಬಿಟೌನ್ ಗಣ್ಯರನ್ನು ಆಮಂತ್ರಿಸಿದ್ದರು. ಆಗ ಪಾರ್ಟಿಗೆ ಆಮೀರ್ ಟಿಫಿನ್ ಬಾಕ್ಸ್ ಒಯ್ದಿದ್ದರಂತೆ. ಹೌದು, ಯಾವುದೇ ಕೆಲಸವಾಗಲಿ ಆಮೀರ್ ಸಂಪೂರ್ಣ ಪರಿಶ್ರಮ ಪಡುತ್ತಾರೆ. ತಾವು ಮಾಡುವ ಕೆಲಸಕ್ಕೆ ಯಾರು ಬೆರಳು ಮಾಡಬಾರದು ಅಂತ ಎಚ್ಚರಿಕೆಯಿಂದ ಮನಸ್ಸಿಟ್ಟು ಕೆಲಸ ಮಾಡುತ್ತಾರೆ. ಈ ಪಾರ್ಟಿ ವೇಳೆ ಡಯೆಟ್‍ನಲ್ಲಿದ್ದ ಅಮೀರ್ “ನಾನು ನನ್ನ ಡಯೆಟ್‍ಗೆ ಮೋಸ ಮಾಡಲ್ಲ. ಅದಕ್ಕೆ ಮನೆಯಿಂದ ಟಿಫನ್ ತಂದಿದ್ದೆ ಎಂದು ಪಾರ್ಟಿಯಲ್ಲಿ ಹೇಳಿದ್ದೆ” ಎಂದು ಟಿಫನ್ ಬಾಕ್ಸ್ ಕಥೆಯನ್ನ ಹಂಚಿಕೊಂಡಿದ್ದಾರೆ.

    ಸದ್ಯ ಈ ಟಿಫಿನ್ ಬಾಕ್ಸ್ ಕಥೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಆಮೀರ್ ಅವರ ಬದ್ಧತೆಯನ್ನು ಮೆಚ್ಚಿದ್ದಾರೆ.

    https://www.instagram.com/p/Bvhq-rshISS/?utm_source=ig_embed

  • ಎದುರಾಗುತ್ತಿರೋ ಝೀರೋ ಬಗ್ಗೆ ಯಶ್ ಹೇಳಿದ್ದು ಹೀಗೆ

    ಎದುರಾಗುತ್ತಿರೋ ಝೀರೋ ಬಗ್ಗೆ ಯಶ್ ಹೇಳಿದ್ದು ಹೀಗೆ

    ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಇದೇ ತಿಂಗಳು 21ರಂದು ರಿಲೀಸ್ ಆಗಲಿದೆ. ಇದೇ ದಿನ ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ ‘ಝೀರೋ’ ಬಿಡುಗಡೆಯಾಗುತ್ತಿದ್ದು, ಈ ಬಗ್ಗೆ ನಟ ಯಶ್ ಅವರು ಮಾತನಾಡಿದ್ದಾರೆ.

    ನಟ ಯಶ್ ಕೆಜಿಎಫ್ ಸಿನಿಮಾದ ಡ್ಯಾನ್ಸ್ ಶೂಟಿಂಗ್ ಗೆಂದು ಮುಂಬೈಗೆ ಹೋಗಿದ್ದರು. ಈ ವೇಳೆ ಸಂದರ್ಶನದಲ್ಲಿ ತಮ್ಮ ಸಿನಿಮಾಗೆ ಎದುರಾಗುತ್ತಿರುವ ನಟ ಶಾರೂಖ್ ಖಾನ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

    ಸಂದರ್ಶನದಲ್ಲಿ ಯಶ್ ಗೆ ನಿಮ್ಮ ಸಿನಿಮಾದ ದಿನವೇ ಬಾಲಿವುಡ್ ನ ‘ಝೀರೋ’ ಸಿನಿಮಾ ರಿಲೀಸ್ ಆಗಲಿದೆ. ಈ ಬಗ್ಗೆ ನೀವು ಏನು ಹೇಳುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಯಶ್ ಇದು ಸ್ಯಾಂಡಲ್‍ವುಡ್, ಬಾಲಿವುಡ್ ಸಿನಿಮಾ ಅಂತ ಅಲ್ಲ. ಎಲ್ಲವೂ ಭಾರತೀಯ ಸಿನಿಮಾವಾಗಿದೆ. ಪೈಪೋಟಿ ನೀಡಲು ಸಿನಿಮಾ ಬಿಡುಗಡೆ ಮಾಡುತ್ತಿಲ್ಲ. ಪ್ರೇಕ್ಷಕರು ಎರಡು ಸಿನಿಮಾವನ್ನು ವೀಕ್ಷಣೆ ಮಾಡಲಿ ಎಂದು ನಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ.

    ಒಂದು ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾದರೆ ಅದೇ ಖುಷಿಯಲ್ಲಿ ಇನ್ನೊಂದು ಸಿನಿಮಾವನ್ನು ನೋಡುತ್ತಾರೆ. ಒಂದು ವೇಳೆ ಒಂದು ಸಿನಿಮಾ ಇಷ್ಟವಾಗದೇ ಇದ್ದರೂ ಆಗಲೂ ಬೇರೆ ಸಿನಿಮಾ ನೋಡುತ್ತಾರೆ. ಒಟ್ಟಿನಲ್ಲಿ ಎರಡು ಭಾರತೀಯ ಸಿನಿಮಾಗಳಾಗಿದ್ದು, ಅಭಿಮಾನಿಗಳು ನೋಡುತ್ತಾರೆ. ಅಷ್ಟೇ ಅಲ್ಲದೇ ಶಾರೂಖ್ ಖಾನ್ ಅವರು ನನಗೆ ಸ್ಪೂರ್ತಿಯಾಗಿದ್ದಾರೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

    ಇದೇ ಡಿಸೆಂಬರ್ 21 ರಂದು ಕೆಜಿಎಫ್ ಪಂಚಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಸ್ಯಾಂಡಲ್‍ವುಡ್‍ನಲ್ಲಿ ರಾಕಿಂಗ್ ಸ್ಟಾರ್ ದಾಖಲೆ ಬರೆಯಲು ಸಿದ್ಧವಾಗುತ್ತಿದೆ. ಈಗಾಗಲೇ ಸಿನಿಮಾದ ಎರಡು ಟ್ರೇಲರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ಸದ್ದು ಮಾಡುತ್ತಿದ್ದು, ವ್ಯಾಪಕ ಮೆಚ್ಚುಗೆಯನ್ನು ಗಳಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಕೆಜಿಎಫ್ ಫ್ಲಾಪ್ ಆಗುತ್ತೆ’ ಅಂದವರಿಗೆ ಮಾತಿನಲ್ಲೇ ಚಾಟಿ ಬೀಸಿದ ಜಗ್ಗೇಶ್

    ‘ಕೆಜಿಎಫ್ ಫ್ಲಾಪ್ ಆಗುತ್ತೆ’ ಅಂದವರಿಗೆ ಮಾತಿನಲ್ಲೇ ಚಾಟಿ ಬೀಸಿದ ಜಗ್ಗೇಶ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರ ಫ್ಲಾಪ್ ಆಗುತ್ತೆ ಎಂದು ಹೇಳಿದ್ದವರಿಗೆ ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಮಾತಿನಲ್ಲೇ ಚಾಟಿ ಬೀಸಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರೀ ನಿರೀಕ್ಷೆಯನ್ನು ಮೂಡಿಸಿದ್ದು, ರಾಜ್ಯಾದ್ಯಂತ ಅವರ ಅಭಿಮಾನಿಗಳು ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಚಿತ್ರ ಡಿಸೆಂಬರ್21ಕ್ಕೆ ಬಿಡುಗಡೆಯಾಗಲಿದೆ. ಆದರೆ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ `ಝಿರೋ’ ಚಿತ್ರವು ಅಂದೇ ರಿಲೀಸ್ ಆಗಲಿದ್ದು, ಕೆಜಿಎಫ್ ಚಿತ್ರ ಝೀರೋ ಸಿನೆಮಾದ ಮುಂದೆ ಫ್ಲಾಪ್ ಆಗುತ್ತದೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಬಗ್ಗೆ ಅಭಿಮಾನಿಯೊಬ್ಬರು ನಟ ಜಗ್ಗೇಶ್‍ಗೆ ಟ್ಯಾಗ್ ಮಾಡಿದ್ದರು.

    ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿದ್ದರ ಬಗ್ಗೆ ನಟ ಜಗ್ಗೇಶ್ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿ, ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವವರೆಗೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ.

    ಜಗ್ಗೇಶ್ ತಮ್ಮ ಟ್ವಿಟ್ಟರ್ ನಲ್ಲಿ, ಕನ್ನಡದ ಬೆಳವಣಿಗೆಗೆ ಶ್ರಮಿಸುವ ಯಾರೇ ಆಗಲಿ, ಅವರ ಭುಜ ತಟ್ಟಿ ಹುರಿದುಂಬಿಸುವವನೇ ನಿಜವಾದ ಕನ್ನಡಿಗ. ಅಸೂಯೆ ಪಡುವವನು ಸಾಧಿಸಲಾಗದ ಸಾಧಿಸಿದವರನ್ನು ಸಹಿಸಲಾಗದ ನಿಷ್ಪ್ರಯೋಜಕ. ನಮ್ಮ ಕಲಾಬಂಧುಗಳಿಂದ ಕನ್ನಡ ಚಿತ್ರರಂಗ ಮುಂಚೂಣಿಗೆ ನುಗ್ಗುತ್ತಿದೆ. ಈ ಬಗ್ಗೆ ಹೆಮ್ಮೆ ಪಡಿ, ಪರಭಾಷಿಕರಿಗೆ ಕನ್ನಡ ಚಿತ್ರರಂಗ ಕುತೂಹಲ ಮೂಡಿಸುತ್ತಿದೆ. ಹೆಮ್ಮೆಯಿಂದ ಜೈ ಎನ್ನಿ ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಇದೂವರೆಗೂ ನೀವು ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಾರೂಖ್ ಖಾನ್

    ಇದೂವರೆಗೂ ನೀವು ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಾರೂಖ್ ಖಾನ್

    ಮುಂಬೈ: ಬಾಲಿವುಡ್ ಬಾದ್‍ಶಾ ತಮ್ಮ ಮುಂದಿನ ಚಿತ್ರದಲ್ಲಿ ಡ್ವಾರ್ಫ್(ಕುಳ್ಳ) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಆ ಚಿತ್ರಕ್ಕೆ ಬಾಟ್ಲಾ ಎಂದು ಹೆಸರಿಡಲಾಗಿದೆ.

    ಮೊದಲ ಬಾರಿಗೆ ಶಾರೂಖ್ ಡ್ವಾರ್ಫ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಿಟ್ಟು ಚಿತ್ರದ ಬೇರೆ ಯಾವ ಸುದ್ದಿಯು ಕೇಳಿ ಬರುತ್ತಿಲ್ಲ. ಈ ಚಿತ್ರಕ್ಕೆ ‘ಬಾಟ್ಲಾ’ ಎಂಬ ಹೆಸರಿಟ್ಟಿದ್ದಾರೆ. ಬಾಟ್ಲಾ ಎಂದರೆ ಲಿಲ್ಲಿಪುಟ್ ಗಾತ್ರದ ವ್ಯಕ್ತಿ.

    ಈ ಚಿತ್ರದಲ್ಲಿ ಶಾರೂಖ್ ಖಾನ್ ಡ್ವಾರ್ಫ್ ಪಾತ್ರದಲ್ಲಿ ನಟಿಸುತ್ತಿದ್ದು ಪಿಂಟ್ ಗಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನರು ಇದ್ದಕ್ಕೆ ಡ್ವಾರ್ಫ್ ಚಿತ್ರ ಎಂದು ಕರೆಯುತ್ತಿರುವುದು ಚಿತ್ರದ ನಿರ್ದೇಶಕ ಆನಂದ್ ಎಲ್ ರೈಗೆ ಇಷ್ಟವಾಗುತ್ತಿಲ್ಲ. ಚಿತ್ರದಲ್ಲಿ ಡ್ವಾರ್ಫ್ ಪಾತ್ರಕ್ಕಿಂತ ಸಿನಮಾದ ಕಥೆ ಅದ್ಬುತವಾಗಿದೆ. ಒಬ್ಬ ಕುಳ್ಳಕ್ಕಿರುವ ವ್ಯಕ್ತಿಯ ಕಥೆ ಎಂದು ಆನಂದ್ ಹೇಳಿದ್ದಾರೆ.

    ಬಾಟ್ಲಾ ಚಿತ್ರದಲ್ಲಿ ಶಾರೂಖ್ ಖಾನ್ ನಾರ್ಮಲ್ ಎತ್ತರದ ವ್ಯಕ್ತಿಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಮಾತುಕಥೆ ನಡೆದ ನಂತರ ಚಿತ್ರದ ನಿರ್ದೇಶಕ ಆನಂದ್ ಪೈ ಹಾಗೂ ಚಿತ್ರತಂಡ ಶಾರೂಖ್ ಅವರ ಜೊತೆ ಚರ್ಚಿಸಿ ಚಿತ್ರಕ್ಕೆ ಬಾಟ್ಲಾ ಎಂಬ ಹೆಸರನ್ನು ಇಡಲು ನಿರ್ಧರಿಸಿದ್ದರು. ಬಾಟ್ಲಾ ಎಂದರೆ ಲಿಲ್ಲಿಪುಟ್ ಗಾತ್ರದ ವ್ಯಕ್ತಿ. ಬಾಟ್ಲಾ ಸರಳವಾದ ಸಿನಿಮಾವಾಗಿದ್ದು ಎಲ್ಲರ ಹೃದಯಕ್ಕೂ ಹತ್ತಿರವಾಗುವ ಸಿನಿಮಾ. ಇದು ಒಂದು ಸಿರಿಯಸ್ ಸಿನಿಮಾ ಅಲ್ಲ ಎಂದು ಆನಂದ್ ತಿಳಿಸಿದ್ದಾರೆ.

    ಬಾಟ್ಲಾ ಚಿತ್ರದಲ್ಲಿ ಶಾರೂಖ್ ಜೊತೆ ಕತ್ರಿನಾ ಕೈಫ್, ಅನುಷ್ಕಾ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ಯಶ್ ಚೋಪ್ರಾ ನಿರ್ದೇಶಿಸಿದ್ದ ‘ಜಬ್ ತಕ್ ಹೇ ಜಾನ್’ ಚಿತ್ರದಲ್ಲಿ ಈ ಮೂವರು ಜೊತೆಯಾಗಿ ಕಾಣಿಸಿಕೊಂಡಿದ್ದರು.

  • ಧೂಮ್-4 ಚಿತ್ರದಲ್ಲಿ ಸಲ್ಮಾನ್ ಖಾನ್ ಬದಲು ಶಾರುಖ್ ಖಾನ್ ನಟನೆ?

    ಧೂಮ್-4 ಚಿತ್ರದಲ್ಲಿ ಸಲ್ಮಾನ್ ಖಾನ್ ಬದಲು ಶಾರುಖ್ ಖಾನ್ ನಟನೆ?

    ಮುಂಬೈ: ಜಾನ್ ಅಬ್ರಹಂ, ಹೃತಿಕ್ ರೋಶನ್ ಮತ್ತು ಅಮೀರ್ ಖಾನ್ ಸಾಲುಸಾಲಾಗಿ ಧೂಮ್ ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ಸಲ್ಮಾನ್ ಖಾನ್ ಧೂಮ್-4 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಿತ್ತು. ಆದ್ರೀಗ ಮತ್ತೊಬ್ಬ ನಾಯಕನ ಹೆಸರು ಕೇಳಿಬರ್ತಿದೆ.

    ಈಗ ಸಲ್ಮಾನ್ ಖಾನ್ ರೇಸ್-3 ಚಿತ್ರವನ್ನು ಒಪ್ಪಿಕೊಂಡ ನಂತರ ಧೂಮ್ 4ರಲ್ಲಿ ನಟಿಸುತ್ತಾರೆಂಬ ಸುದ್ದಿಗೆ ಬ್ರೇಕ್ ಬಿದ್ದಿದೆ. ಇತ್ತೀಚಿನ ಹೊಸ ಸುದ್ದಿ ಏನೆಂದರೆ ಸಲ್ಮಾನ್ ಖಾನ್ ಬದಲು ಯಶ್‍ರಾಜ್ ನ ನೆಚ್ಚಿನ ನಟ, ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಧೂಮ್-4 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ.

    ಶಾರೂಖ್ ನೆಗೆಟಿವ್ ರೋಲ್‍ನಲ್ಲಿ ಅತ್ಯುತ್ತಮವಾಗಿ ನಟಿಸುತ್ತಾರೆ ಹಾಗೂ ಧೂಮ್-4 ಚಿತ್ರದಲ್ಲಿ ಆ ತರಹದ ಪಾತ್ರ ಇರುತ್ತದೆ. ಹಾಗಾಗಿ ಶಾರೂಖ್ ಖಾನ್ ಅವರನ್ನ ಮತ್ತೊಮ್ಮೆ ಈ ಚಿತ್ರದಲ್ಲಿ ನೆಗಿಟೀವ್ ರೋಲ್‍ನಲ್ಲಿ ಮತ್ತೊಮ್ಮೆ ನೋಡಬಹುದಾಗಿದೆ.

    ಇದನ್ನೂ ಓದಿ: ಕಿಕ್-2 ನಲ್ಲಿ ಜೊತೆಯಾಗಲಿದ್ದಾರೆ ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ!

    ಮೂಲಗಳ ಪ್ರಕಾರ ಆದಿ ಧೂಮ್-4 ಚಿತ್ರವನ್ನ ವಿಭಿನ್ನವಾಗಿ ತೆರೆ ಮೇಲೆ ತರಲು ಇಚ್ಛಿಸಿದ್ದು, ಚಿತ್ರದ ಕಥೆಯನ್ನು ಬರೆಯಲು ಮನೀಶ್ ಶರ್ಮಾಗೆ ಹೇಳಿದ್ದಾರೆ. ಮನೀಶ್ ಸದ್ಯ ಚಿತ್ರಕಥೆಯನ್ನು ಮಾಡುತ್ತಿದ್ದಾರೆ. ಧೂಮ್-3 ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಕೃಷ್ಣ ಆಚಾರ್ಯ ಸದ್ಯ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಲ್ಲಿ ಬ್ಯುಸಿ ಆಗಿರೋದ್ರಿಂದ ಮನೀಶ್ ಶರ್ಮಾ ಅವರೇ ಧೂಮ್-4 ಚಿತ್ರದ ನಿರ್ದೇಶನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಶಾರೂಖ್ ಖಾನ್ ಹಾಗೂ ಮನೀಶ್ ಈ ಹಿಂದೆ ಫ್ಯಾನ್ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಅಷ್ಟೇನೂ ಸದ್ದು ಮಾಡ್ಲಿಲ್ಲ. ಆದ್ರೂ ಮನೀಶ್ ಜೊತೆ ಮತ್ತೊಮ್ಮೆ ಕೆಲಸ ಮಾಡಲು ಶಾರೂಖ್ ಖಾನ್ ನಿರ್ಧರಿಸಿದ್ದಾರೆ. ಸದ್ಯಕ್ಕೆ ಈ ವಿಷಯ ಇನ್ನೂ ಫೈನಲ್ ಆಗಿಲ್ಲ. ಆದ್ರೂ ಇದು ಯಶ್ ರಾಜ್ ಫಿಲ್ಮ್ ಆಗಿರೋದ್ರಿಂದ ಆದಿ ಅವರಿಂದ ಒಂದು ಕರೆ ಬಂದ್ರೆ ಶಾರೂಖ್ ಖಾನ್‍ಗೆ ಅಷ್ಟೇ ಸಾಕು ಅಂತ ಮೂಲಗಳು ಹೇಳಿವೆ.

    ಚಿತ್ರದ ನಾಯಕನ ಬಗ್ಗೆ ನಿರ್ದೇಶಕರಾಗಲೀ ಶಾರೂಖ್ ಖಾನ್ ಆಗಲಿ ಅಧಿಕೃತವಗಿ ಇನ್ನೂ ಏನೂ ಪ್ರಕಟಿಸಿಲ್ಲ.

  • ಕಪಿಲ್ ಶರ್ಮಾ ಶೋದಿಂದ ಹೊರ ಬಂದ ಅಜಯ್ ಹೇಳಿದ್ದೇನು?

    ಕಪಿಲ್ ಶರ್ಮಾ ಶೋದಿಂದ ಹೊರ ಬಂದ ಅಜಯ್ ಹೇಳಿದ್ದೇನು?

    ಮುಂಬೈ: ಇತ್ತೀಚಿಗೆ ಅಜಯ್ ದೇವ್‍ಗನ್ ತಮ್ಮ ಬಾದ್‍ಶಾವೋ ಚಿತ್ರದ ಪ್ರಮೋಷನ್‍ಗಾಗಿ ಕಪಿಲ್ ಶರ್ಮಾ ಶೋಗೆ ತೆರಳಿದ್ದರು. ಕಪಿಲ್ ಅನಾರೋಗ್ಯದ ಕಾರಣದಿಂದಾಗಿ ಶೂಟಿಂಗ್‍ನನ್ನು ರದ್ದುಗೊಳಿಸಿದ್ದರಿಂದ ಅಜಯ್ ದೇವ್‍ಗನ್ ಕೋಪಗೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈ ಸುದ್ದಿಗೆ ನಟ ಅಜಯ್ ದೇವ್‍ಗನ್ ಪ್ರತಿಕ್ರಿಯಿಸಿದ್ದಾರೆ.

    ಅಜಯ್ ದೇವ್‍ಗನ್ ತಮ್ಮ ಮುಂಬರುವ ‘ಬಾದ್‍ಶಾವೋ’ ಚಿತ್ರದ ಪ್ರಮೋಷನ್‍ಗಾಗಿ ಕಪಿಲ್ ಶರ್ಮಾ ಶೋಗೆ ಹೋಗಿದ್ದರು. ಕೊನೆಯ ನಿಮಿಷದಲ್ಲಿ ಕಪಿಲ್ ಶೋವನ್ನು ರದ್ದುಗೊಳಿಸಿದ ಕಾರಣ ಅಜಯ್ ಕೋಪದಿಂದ ಕಪಿಲ್ ಶರ್ಮಾ ಶೋನಿಂದ ಹೊರಟು ಹೋದರು ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

     

    ಅಲ್ಲಿ ಏನಾಯಿತು ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಪತ್ರಿಕೆಗಳಲ್ಲಿ ನಾವು ಕೋಪದಿಂದ ಹೊರಟು ಹೋದೆವು ಎಂದು ಹೇಳಲಾಗಿತ್ತು. ಇದು ನಿಜವಲ್ಲ ಕಪಿಲ್ ಶೋನ ಸೆಟ್‍ಗೆ ಇನ್ನೂ ಬಂದಿಲ್ಲದ ಕಾರಣ ನಾವು ಹೊರ ಬಂದಿದ್ದೇವೆ. ಕಪಿಲ್ ನನಗೆ ಒಳ್ಳೆಯ ಸ್ನೇಹಿತ. ಮುಂದಿನ ಬಾರಿ ಕಪಿಲ್‍ನನ್ನು ಭೇಟಿಯಾದಾಗ ಏನಾಯಿತು ಎಂದು ಕೇಳುತ್ತೇನೆ. ಕಪಿಲ್ ಯಾವುದೋ ತೊಂದರೆಯಲ್ಲಿ ಇದ್ದಾರೆ ಎಂದು ಅಜಯ್ ಸ್ಪಷ್ಟಪಡಿಸಿದ್ದಾರೆ.

    ಈ ಮೊದಲು ಶಾರೂಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಜಬ್ ಹ್ಯಾರಿ ಮೇಟ್ ಸೆಜಲ್ ಚಿತ್ರದ ಪ್ರಮೋಷನ್‍ಗಾಗಿ ಕಪಿಲ್ ಶರ್ಮಾ ಶೋಗೆ ತೆರಳಿದ್ದ ವೇಳೆಯೂ ಇದೇ ರೀತಿಯಾಗಿ ಶೋ ರದ್ದಾಗಿತ್ತು. ಆದರೆ ಈ ಬಗ್ಗೆ ಶಾರೂಖ್ ಖಾನ್ ಇದೂವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಕಪಿಲ್ ಮಾತ್ರ ತಮ್ಮ ಟ್ವಿಟರ್ ನಲ್ಲಿ ಅನಾರೋಗ್ಯದ ಕಾರಣ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಯಿತು ಎಂದು ತಿಳಿಸಿದ್ದರು.

    ಇದನ್ನೂ ಓದಿ: ಕಪಿಲ್ ಶರ್ಮಾ ಶೋನಿಂದ ಕೋಪಗೊಂಡು ಹೊರಬಂದ ಅಜಯ್ ದೇವ್‍ಗನ್