Tag: Shah Rukh Khan

  • 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಶಾರೂಖ್‌ ಅತ್ಯುತ್ತಮ ನಟ, ಕನ್ನಡದಲ್ಲಿ ‘ಕಂದೀಲು’ ಅತ್ಯುತ್ತಮ ಚಿತ್ರ

    71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಶಾರೂಖ್‌ ಅತ್ಯುತ್ತಮ ನಟ, ಕನ್ನಡದಲ್ಲಿ ‘ಕಂದೀಲು’ ಅತ್ಯುತ್ತಮ ಚಿತ್ರ

    71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಘೋಷಿಸಲಾಗಿದ್ದು, ಬಾಲಿವುಡ್‌ ನಟ ಶಾರೂಖ್‌ ಖಾನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಕನ್ನಡದಲ್ಲಿ ‘ಕಂದೀಲು’ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಗಳಿಸಿದೆ.

    ಯಾರ‍್ಯಾರಿಗೆ ಪ್ರಶಸ್ತಿ?
    ಅತ್ಯುತ್ತಮ ನಟ: ಶಾರುಖ್ ಖಾನ್, ವಿಕ್ರಾಂತ್ ಮಾಸ್ಸೆ
    ಅತ್ಯುತ್ತಮ ನಟಿ: ರಾಣಿ ಮುಖರ್ಜಿ
    ‌ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ: ಜವಾನ್
    ಅತ್ಯುತ್ತಮ ಹಿನ್ನೆಲೆ ಗಾಯಕ: ಬೇಬಿ
    ಅತ್ಯುತ್ತಮ ಪೋಷಕ ನಟಿ: ಉಲ್ಲೊಜೊಕ್ಕು (ಊರ್ವಶಿ), ವಶ್ (ಜಾನಕಿ)
    ಅತ್ಯುತ್ತಮ ಪೋಷಕ ನಟ: ಪೂಕಲಂ (ವಿಜಯರಾಘವನ್),
    ಪಾರ್ಕಿಂಗ್ (ಮುತ್ತುಪೆಟ್ಟೈ)

    ರಾಷ್ಟ್ರೀಯ ಪ್ರಶಸ್ತಿ ಪಡೆದ ಸಿನಿಮಾಗಳಿವು
    ಅನಿಮಲ್ (ಮರು-ರೆಕಾರ್ಡಿಂಗ್ ಮಿಕ್ಸರ್) – ಎಂಆರ್ ರಾಧಾಕೃಷ್ಣನ್
    ತೆಲುಗು ಚಿತ್ರ: ಭಗವಂತ ಕೇಸರಿ
    ಅತ್ಯುತ್ತಮ ತಮಿಳು ಚಿತ್ರ: ಪಾರ್ಕಿಂಗ್
    ಅತ್ಯುತ್ತಮ ಪಂಜಾಬಿ ಚಿತ್ರ: ಗಾಡ್ಡೇ ಗಾಡ್ಡೇ ಚಾ
    ಅತ್ಯುತ್ತಮ ಒಡಿಯಾ ಚಿತ್ರ: ಪುಷ್ಕರ
    ಅತ್ಯುತ್ತಮ ಮರಾಠಿ ಚಿತ್ರ: ಶ್ಯಾಮ್ಚಿ ಆಯಿ
    ಮಲಯಾಳಂ ಚಿತ್ರ: ಉಲ್ಲೋಜೋಕ್ಕು
    ಕನ್ನಡ ಚಿತ್ರ: ಕಂದೀಲು: ಭರವಸೆಯ ಕಿರಣ
    ಅತ್ಯುತ್ತಮ ಹಿಂದಿ ಚಿತ್ರ: ಕಥಲ್: ಎ ಜಾಕ್‌ಫ್ರೂಟ್ ಆಫ್ ಮಿಸ್ಟರಿ, ಗುಜರಾತಿ ಚಿತ್ರ: ವಾಶ್
    ಅತ್ಯುತ್ತಮ ಬಂಗಾಳಿ ಚಿತ್ರ: ಡೀಪ್ ಫ್ರಿಡ್ಜ್
    ಅತ್ಯುತ್ತಮ ಅಸ್ಸಾಮಿ ಚಿತ್ರ: ರಂಗತಪು 1982
    ಅತ್ಯುತ್ತಮ ಸಾಹಸ ನಿರ್ದೇಶನ: ಹನು-ಮಾನ್ (ತೆಲುಗು)
    ಅತ್ಯುತ್ತಮ ನೃತ್ಯ ಸಂಯೋಜನೆ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
    ಅತ್ಯುತ್ತಮ ಸಾಹಿತ್ಯ: ಬಳಗಂ
    ಅತ್ಯುತ್ತಮ ಸಂಗೀತ ನಿರ್ದೇಶನ: ವಾತಿ (ತಮಿಳು)- ಹಾಡುಗಳು
    ಅತ್ಯುತ್ತಮ ಮೇಕಪ್, ಕಾಸ್ಟ್ಯೂಮ್ ಡಿಸೈನರ್: ಸ್ಯಾಮ್ ಬಹದ್ದೂರ್
    ಅತ್ಯುತ್ತಮ ನಿರ್ಮಾಣ ವಿನ್ಯಾಸಕಾರ: 2018- ಎವೆರಿವನ್‌ ಇಸ್‌ ಎ ಹೀರೋ (ಮಲಯಾಳಂ)
    ಅತ್ಯುತ್ತಮ ಸಂಕಲನ: ಪೂಕಲಂ (ಮಲಯಾಳಂ) ಅತ್ಯುತ್ತಮ ಧ್ವನಿ ವಿನ್ಯಾಸ: ಅನಿಮಲ್
    ಅತ್ಯುತ್ತಮ ಛಾಯಾಗ್ರಹಣ: ಕೇರಳ ಕಥೆ (ಹಿಂದಿ)

    ನಾನ್ ಫೀಚರ್ ಫಿಲ್ಮ್ ವಿಭಾಗ
    ನೇಕಲ್ – ಮಲಯಾಳಂ
    ದಿ ಸೀ ಆ್ಯಂಡ್‌ ಸೆವೆನ್‌ ವಿಲೇಜಸ್‌ – ಒಡಿಸ್ಸಿ
    ಸನ್‌ಫ್ಲವರ್‌ ವೇರ್ ದ ಫಸ್ಟ್ ಒನ್ಸ್ ಟು ನೊ – ಚಿದಾನಂದ ನಾಯ್ಕ್ (ಸ್ಕ್ರಿಪ್ಟ್ ರೈಟರ್)

  • ಶೂಟಿಂಗ್ ವೇಳೆ ನಟ ಶಾರುಖ್ ಖಾನ್‌ಗೆ ಗಾಯ

    ಶೂಟಿಂಗ್ ವೇಳೆ ನಟ ಶಾರುಖ್ ಖಾನ್‌ಗೆ ಗಾಯ

    ಕಿಂಗ್‌ (King) ಸಿನಿಮಾ ಶೂಟಿಂಗ್‌ ವೇಳೆ ಬಾಲಿವುಡ್‌ ನಟ ಶಾರುಖ್‌ ಖಾನ್‌ (Shah Rukh Khan) ಗಾಯಗೊಂಡಿದ್ದಾರೆ. ಕಿಂಗ್‌ ಖಾನ್‌ ಬೆನ್ನಿಗೆ ಪೆಟ್ಟಾಗಿದ್ದು, ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ.

    ಸಾಹಸ ಸನ್ನಿವೇಶ ಚಿತ್ರೀಕರಣ ಮಾಡುವಾಗ ಶಾರುಖ್‌ ಕಾನ್‌ ಗಾಯಗೊಂಡಿದ್ದಾರೆ. ಮುಂಬೈನ ಚಿತ್ರೀಕರಣದ ಸ್ಟುಡಿಯೋದಲ್ಲಿ ಘಟನೆ ನಡೆದಿದೆ. ಚಿತ್ರೀಕರಣದ ವೇಳೆ ಮಗಳು ಕೂಡ ಭಾಗಿಯಾಗಿದ್ದರು. ಇದನ್ನೂ ಓದಿ: ಕಿಡ್ನಿ ವೈಫಲ್ಯದಿಂದ ಖ್ಯಾತ ಖಳನಟ ಫಿಶ್ ವೆಂಕಟ್‌ ನಿಧನ

    ಗಾಯದ ಕಾರಣಕ್ಕೆ ಶಾರುಖ್ ಅಮೆರಿಕಕ್ಕೆ ಪ್ರಯಾಣ ಬೆಳೆಸಬಹುದು ಎನ್ನಲಾಗಿದೆ. ನಂತರ ಯುಕೆಗೆ ಪ್ರವಾಸ ಮಾಡಲಿದ್ದಾರೆ. ಅಲ್ಲಿ ಕುಟುಂಬದವರೊಟ್ಟಿಗೆ ಇದ್ದು ಚೇತರಿಸಿಕೊಳ್ಳಲಿದ್ದಾರೆ. ವಿಶ್ರಾಂತಿ ಕಾರಣಕ್ಕಾಗಿ ಶ್ರೀಲಂಕಾಗೆ ಯೋಜಿಸಿದ್ದ ಪ್ರವಾಸವನ್ನು ಮುಂದೂಡಲಾಗಿದೆ.

    ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ‘ಕಿಂಗ್’ ಚಿತ್ರ ಶೂಟಿಂಗ್‌ ನಡೆಯುತ್ತಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಜೈದೀಪ್ ಅಹ್ಲಾವತ್, ಅನಿಲ್ ಕಪೂರ್ ಮತ್ತು ಅಭಯ್ ವರ್ಮಾ ಕೂಡ ನಟಿಸಿದ್ದಾರೆ. ಇದನ್ನೂ ಓದಿ: ರಿಯಲ್ ಹೀರೋ ಅಕ್ಷಯ್‌ಕುಮಾರ್ ಮಾಡಿದ ಕಾರ್ಯ ಎಲ್ಲರಿಗೂ ಮಾದರಿ

    ಶಾರುಖ್‌ ಖಾನ್‌ಗೆ ಗಂಭೀರ ಪೆಟ್ಟಾಗಿಲ್ಲ. ಚೇತರಿಸಿಕೊಳ್ಳುತ್ತಿದ್ದಾರೆ. ಕಿಂಗ್‌ ಖಾನ್‌ ಗಾಯಗೊಂಡಿರುವುದರಿಂದ ಸಿನಿಮಾ ಚಿತ್ರೀಕರಣದಲ್ಲಿ ವಿಳಂಬವಾಗಲಿದೆ.

  • ರಜನಿಕಾಂತ್ ನಟನೆಯ ‘ಜೈಲರ್ 2’ ಚಿತ್ರದಲ್ಲಿ ಶಾರುಖ್ ಖಾನ್?

    ರಜನಿಕಾಂತ್ ನಟನೆಯ ‘ಜೈಲರ್ 2’ ಚಿತ್ರದಲ್ಲಿ ಶಾರುಖ್ ಖಾನ್?

    ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ರಜನಿಕಾಂತ್ (Rajinikanth) ನಟನೆಯೆ ‘ಜೈಲರ್ 2’ (Jailer 2) ಚಿತ್ರದಲ್ಲಿ ಬಾಲಿವುಡ್‌ ನಟ ಶಾರುಖ್ ಖಾನ್ (Shah Rukh Khan) ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ‘ಜೈಲರ್ 2’ನಲ್ಲಿ ಮೋಹನ್ ಲಾಲ್, ಶಿವರಾಜ್ ಕುಮಾರ್ ಮತ್ತು ಜಾಕಿ ಶ್ರಾಫ್ ನಟಿಸಲಿದ್ದಾರೆ. ಅಲ್ಲದೇ ಬಾಲಿವುಡ್‌ನ ಪ್ರಮುಖ ನಟರೊಬ್ಬರು ಕಾಣಿಸಿಕೊಳ್ಳಲಿದ್ದಾರೆ. ಈ ವದಂತಿ ಬೆನ್ನಲ್ಲೇ ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಯೇ? ಎಂಬ ಚರ್ಚೆ ಆರಂಭವಾಗಿದೆ. ಇನ್ನೂ, ಶಾರುಖ್ ಖಾನ್ ಈ ಚಿತ್ರದಲ್ಲಿಲ್ಲ. ಅವರು ಅತಿಥಿ ಪಾತ್ರದಲ್ಲಿ ನಟಿಸುವ ಸಾಧ್ಯತೆಯಿಲ್ಲ ಎಂದು ಸಹ ಹೇಳಲಾಗುತ್ತಿದೆ. ಇದನ್ನೂ ಓದಿ: ರಜನಿಕಾಂತ್‌ ನಟನೆಯ ‘ಜೈಲರ್ 2’ನಲ್ಲಿಯೂ ನಟಿಸಲಿದ್ದಾರೆ ಶಿವಣ್ಣ

    ‘ಜೈಲರ್ 2’ 2023ರ ಸೂಪರ್‌ಹಿಟ್ ಚಿತ್ರ ‘ಜೈಲರ್’ ನ ಮುಂದುವರಿದ ಭಾಗವಾಗಿದೆ. ಈ ಚಿತ್ರದಲ್ಲಿ ತೆಲುಗು ನಟ ನಂದಮೂರಿ ಬಾಲಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗಾರ್ಜುನ ಅಕ್ಕಿನೇನಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಈ ಚಿತ್ರದಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ನಟಿಸುತ್ತಿರುವುದಾಗಿ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಹೇಳಿಕೊಂಡಿದ್ದರು. ಈ ಬಗ್ಗೆ ನಿರ್ದೇಶಕ ನೆಲ್ಸನ್ ತಮ್ಮ ಬಳಿ ಚರ್ಚಿಸಿದ್ದಾರೆ. ಚಿತ್ರದಲ್ಲಿ ನನ್ನ ಪಾತ್ರದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ ಎಂದಿದ್ದರು. ಇದನ್ನೂ ಓದಿ: ‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ಡಾಲಿ, ಶಿವಣ್ಣ

  • ʻಕಿಂಗ್’ ಜೊತೆ ಮತ್ತೆ ಒಂದಾಗಲಿದ್ದಾರೆ ರಾಣಿ ಮುಖರ್ಜಿ!

    ʻಕಿಂಗ್’ ಜೊತೆ ಮತ್ತೆ ಒಂದಾಗಲಿದ್ದಾರೆ ರಾಣಿ ಮುಖರ್ಜಿ!

    – ಶಾರೂಖ್ ಪುತ್ರಿ ಸುಹಾನಾ ಅಮ್ಮನ ಪಾತ್ರದಲ್ಲಿ ‘ರಾಣಿʼ

    2000ರ ದಶಕದಲ್ಲಿ ಚಲ್ತೇ ಚಲ್ತೇ, ಕುಚ್ ಕುಚ್ ಹೋತಾ ಹೈ, ಕಭಿ ಅಲ್ವಿದಾ ನಾ ಕೆಹನಾ, ಕಭಿ ಖುಷಿ ಕಭಿ ಗಮ್ ಸೇರಿದಂತೆ ಸಾಲುಸಾಲು ಹಿಟ್‌ ಚಿತ್ರಗಳನ್ನು ಕೊಟ್ಟಿದ್ದ ರಾಣಿ ಮುಖರ್ಜಿ (Rani Mukerji) ಮತ್ತು ಶಾರೂಖ್ ಖಾನ್ (Shah Rukh Khan) ಜೋಡಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

    ಸದ್ಯ ಶಾರೂಖ್ ಖಾನ್, ಸಿದ್ಧಾರ್ಥ್ ಆನಂದ್ ನಿರ್ದೇಶನದ ʻಕಿಂಗ್‌ʼ (King) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಣಿ ಮುಖರ್ಜಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ, ಸುಹಾನಾ ಖಾನ್ (Suhana Khan) ಅವರ ತಾಯಿಯ ಪಾತ್ರಕ್ಕೆ ರಾಣಿ ಮುಖರ್ಜಿಯವರನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ ಕೇವಲ 5 ದಿನಗಳು ಮಾತ್ರ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡತಿ- ಅಮ್ಮನ ಸೀರೆ ಗೌನ್ ಮಾಡಿದ ದಿಶಾ ಮದನ್

    ʻಕಿಂಗ್‌ʼ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಜಾಕಿ ಶ್ರಾಫ್, ಜೈದೀಪ್ ಅಹ್ಲಾವತ್, ಅಭಯ್ ವರ್ಮಾ ಮತ್ತು ಅರ್ಷದ್ ವಾರ್ಸಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮೇ 20 ರಿಂದ ಮುಂಬೈನಲ್ಲಿ ಆರಂಭವಾಗಲಿದೆ. ನಂತರ ಯುರೋಪ್‌ನಲ್ಲಿ ಚಿತ್ರೀಕರಣ ನಡೆಯಲಿದೆ. 2026 ರ ಅಕ್ಟೋಬರ್ – ಡಿಸೆಂಬರ್ ನಡುವೆ ಈ ಚಿತ್ರ ರಿಲೀಸ್‌ ಆಗುವ ನಿರೀಕ್ಷೆಯಿದೆ.

    ರಾಣಿ ಮುಖರ್ಜಿ ಪ್ರಸ್ತುತ ಮರ್ದಾನಿ 3 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಶಾರೂಖ್‌ ಖಾನ್‌ 2023 ರಲ್ಲಿ ಪಠಾಣ್, ಜವಾನ್ ಮತ್ತು ಡುಂಕಿಯಂತಹ ಮೂರು ಬ್ಲಾಕ್‌ಬಸ್ಟರ್‌ ಚಿತ್ರಗಳನ್ನು ನೀಡಿದ್ದರು. ಇದನ್ನೂ ಓದಿ: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರದ ರಿಲೀಸ್ ಡೇಟ್ ಅನೌನ್ಸ್

  • Met Gala 2025 | ಬಾಲಿವುಡ್ ತಾರೆಯರು ಕಾಣಿಸಿಕೊಂಡಿದ್ದು ಹೇಗೆ ಗೊತ್ತಾ?

    Met Gala 2025 | ಬಾಲಿವುಡ್ ತಾರೆಯರು ಕಾಣಿಸಿಕೊಂಡಿದ್ದು ಹೇಗೆ ಗೊತ್ತಾ?

    ತ್ತೀಚೆಗಷ್ಟೆ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆದ ಅತಿ ದೊಡ್ಡ ಫ್ಯಾಷನ್ ನೈಟ್ ಮೆಟ್ ಗಾಲಾ 2025ರ(Met Gala 2025) `ಸೂಪರ್‌ಫೈನ್: ಟೈಲರಿಂಗ್ ಬ್ಲ್ಯಾಕ್ ಸ್ಟೈಲ್’ ಥೀಮ್‌ನಲ್ಲಿ ಹಾಲಿವುಡ್ ಹಾಗೂ ಬಾಲಿವುಡ್‌ನ ಸ್ಟಾರ್ಸ್ ಬ್ಲೂ ಕಾರ್ಪೆಟ್‌ನಲ್ಲಿ ಮಿಂಚಿದ್ದರು. ಇದೊಂದು ಕಾಸ್ಟ್ಯೂಮ್‌ ಇನ್‌ಸ್ಟಿಟ್ಯೂಟ್‌ಗಾಗಿ ನಿಧಿ ಸಂಗ್ರಹಿಸಲು ಆಯೋಜಿಸಲಾಗುವ ಫ್ಯಾಷನ್ ಕಾರ್ಯಕ್ರಮ.

    ಈ ಮೆಟ್ ಗಾಲಾ ಫ್ಯಾಷನ್ ನೈಟ್ ಮಾಡೆಲ್ಸ್, ಆಕ್ಟರ್ಸ್‌ಗಳು ತಮ್ಮ ಫ್ಯಾಷನ್ ಬಗೆಗಿನ ಆಸಕ್ತಿಯನ್ನು ತೋರಿಸುವ ಅತಿ ದೊಡ್ಡ ಕಾರ್ಯಕ್ರಮವಾಗಿದೆ. ಇದರಲ್ಲಿ ಖ್ಯಾತ ನಟ ನಟಿಯರು, ಸೆಲೆಬ್ರಿಟಿಗಳು ವಿಭಿನ್ನವಾದ ಉಡುಗೆ ತೊಟ್ಟು ಫ್ಯಾಷನ್ ನೈಟ್‌ನ ಮೆರುಗು ಹೆಚ್ಚಿಸುತ್ತಾರೆ.

    ಭಾರತದಲ್ಲಿ ತಯಾರಾದ ಬ್ಲೂ ಕಾರ್ಪೆಟ್
    ಈ ಬಾರಿಯ ಮೆಟ್ ಗಾಲಾದ ಇನ್ನೊಂದು ವಿಶೇಷವೇನೆಂದರೆ, ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಬದಲಾಗಿದೆ. ಬಿಳಿ ಹಾಗೂ ನೀಲಿ ಬಣ್ಣದ ಡ್ಯಾಫೋಡಿಲ್‌ಗಳಿಂದ ಅಲಂಕರಿಸಲ್ಲಟ್ಟ ಬ್ಲೂ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಇನ್ನೊಂದು ವಿಷಯವೇನೆಂದರೆ ಈ ಬ್ಲೂ ಕಾರ್ಪೆಟ್ ತಯಾರಾಗಿದ್ದು ಭಾರತದಲ್ಲೇ. ಹೌದು, ಈ ಕಾರ್ಪೆಟ್‌ನ ಬೇಸ್ ಅನ್ನು ನೆಯ್ಟ್ ಹೋಮ್ಸ್ ಸಂಸ್ಥಾಪಕರಾದ ಶಿವನ್ ಸಂತೋಷ್ ಮತ್ತು ನಿಮಿಷಾ ಆರೀನಿವಾಸ್ ಅವರು ಕೇರಳದ(Kerala) ಅಲಪ್ಪುಳದಲ್ಲಿ ತಯಾರಿಸಿದ್ದಾರೆ.

    ಬೇಬಿ ಬಂಪ್‌ನೊಂದಿಗೆ ಬ್ಲ್ಯಾಕ್ ಗೌನ್‌ನಲ್ಲಿ ಮಿಂಚಿದ ಕಿಯಾರಾ
    ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ(Kiara Advani) ಬೇಬಿ ಬಂಪ್‌ನೊಂದಿಗೆ ಗೋಲ್ಡ್ ವಿಥ್ ಬ್ಲ್ಯಾಕ್ ಕಲರ್‌ನ ಆಫ್-ಶೋಲ್ಡರ್ ಗೌನ್‌ನಲ್ಲಿ ಮೆಟ್ ಗಾಲಾದಲ್ಲಿ ಕಾಣಿಸಿಕೊಂಡರು. ಫ್ಯಾಷನ್ ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮದಲ್ಲಿ ಕಿಯಾರಾ ಭಾರತೀಯ ವಸ್ತ್ರ ವಿನ್ಯಾಸಕ ಗೌರವ್ ಗುಪ್ತಾ ವಿನ್ಯಾಸಗೊಳಿಸಿದ್ದ ಗೌನ್ ಧರಿಸಿದ್ದರು. ಈ ಫ್ಯಾಷನ್ ನೈಟ್‌ನಲ್ಲಿ ಕಿಯಾರ ಪ್ರೆಗ್ನೆನ್ಸಿ ಗ್ಲೋನಲ್ಲಿ ಕಂಗೊಳಿಸಿದ್ದು ವಿಶೇಷವಾಗಿತ್ತು.

    ಬಾಲಿವುಡ್ `ಕಿಂಗ್ ಖಾನ್’ ಐಕಾನಿಕ್ ಲುಕ್
    ಮೆಟ್ ಗಾಲಾದ ಬ್ಲೂ ಕಾರ್ಪೆಟ್‌ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಬಾಲಿವುಡ್‌ನ ಕಿಂಗ್ ಖಾನ್ ಎಂದೇ ಖ್ಯಾತಿ ಪಡೆದಿರುವ ನಟ ಶಾರುಖ್ ಖಾನ್(Shah Rukh Khan) ಪಾತ್ರರಾಗಿದ್ದಾರೆ. ಶಾರುಖ್ ಖಾನ್ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜ ವಿನ್ಯಾಸಗೊಳಿಸಿದ ಬ್ಲಾಕ್ ಸ್ಟೈಲೀಶ್ ಸೂಟ್‌ನಲ್ಲಿ ಮಿಂಚಿದ್ದರು. ಇನ್ನು ಡ್ರೆಸ್‌ಗೆ `K’ ಎಂಬ ಲಾಕೆಟ್ ಇರುವ ಚೈನ್ ಮ್ಯಾಚ್ ಮಾಡಿದ್ದರು.

    ಕ್ಲಾಸಿಕ್ ಹಾಲಿವುಡ್ ಸ್ಟೈಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ
    ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಅವರು ಪತಿ ನಿಕ್ ಜೋನಸ್‌ರೊಂದಿಗೆ(Nik Jonas) ಕ್ಲಾಸಿಕ್ ಹಾಲಿವುಡ್ ಸ್ಟೈಲ್‌ನ ಬಿಳಿ ಹಾಗೂ ಕಪ್ಪು ಚುಕ್ಕೆಯ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. 2017ರಲ್ಲಿ ಮೊದಲ ಬಾರಿಗೆ ಮೆಟ್ ಗಾಲಾದಲ್ಲಿ ಭಾಗವಹಿಸಿದ್ದರು. ಈ ಬಾರಿಯ ಮೆಟ್ ಗಾಲಾ ಅವರಿಗೆ 5ನೇ ಶೋ ಆಗಿದೆ. ಇನ್ನು ಪ್ರಿಯಾಂಕಾ ಅವರ ಪತಿ ನಿಕ್ ಜೋನಸ್ ಟೈಲರ್ಡ್ ಸೂಟ್‌ನಲ್ಲಿ ಪತ್ನಿಗೆ ಮ್ಯಾಚ್ ಮಾಡಿದ್ದರು.

    ಮೆಟ್ ಗಾಲಾದಲ್ಲಿ ಕಾಣಿಸಿಕೊಂಡ ಅಂಬಾನಿ ಪುತ್ರಿ
    ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ(Isha Ambani) ಸಹ ಮೆಟ್ ಗಾಲಾದಲ್ಲಿ ವಿಶಿಷ್ಟ ಉಡುಪು ಹಾಗೂ ಆಭರಣದಲ್ಲಿ ಎಲ್ಲರ ಗಮನ ಸೆಳೆದರು. ಇಶಾ ಅಂಬಾನಿ ಧರಿಸಿದ್ದ ಉಡುಪನ್ನು ಖ್ಯಾತ ಭಾರತೀಯ ವಸ್ತ್ರ ವಿನ್ಯಾಸಕಿ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ್ದರು. ಇಶಾ ಧರಿಸಿದ್ದ ಬಿಳಿ ಬಣ್ಣದ ಕಾರ್ಸೆಟ್, ಕಪ್ಪು ಬಣ್ಣದ ಟೇಲರ್ಡ್ ಪ್ಯಾಂಟ್ ಹಾಗೂ ಉದ್ದದ ಅಲಂಕೃತ ಕೇಪ್ ಉಡುಪಿನ ಪ್ರಮುಖ ಆಕರ್ಷಣೆಯಾಯಿತು. ಈ ಡ್ರೆಸ್‌ಗೆ ದುಬಾರಿ ಬೆಲೆಯ ಆಭರಣಗಳನ್ನು ಧರಿಸಿ ಕ್ಲಾಸಿಕ್ ಲುಕ್ ನೀಡಿದ್ದರು.

    ಪಂಜಾಬಿ ಸ್ಟೈಲ್‌ ಡ್ರೆಸ್‌ನಲ್ಲಿ ದಿಲ್ಜಿತ್ ದೋಸಾಂಜ್
    ಪಂಜಾಬ್‌ನ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್(Diljit Dosanjh) ಪೇಟ ಧರಿಸಿ ಥೇಟ್ ಪಂಜಾಬಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇವರು ತಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಮೆಟ್ ಗಾಲಾ ಫ್ಯಾಷನ್ ನೈಟ್‌ನಲ್ಲಿ ಪ್ರತಿನಿಧಿಸಿದ್ದರು. ಇವರ ಈ ವಸ್ತ್ರ ವಿನ್ಯಾಸವನ್ನು ಪ್ರಬಲ್ ಗುರುಂಗ್ ಅವರು ಮಾಡಿದ್ದಾರೆ. ಬಿಳಿ ಹಾಗೂ ಗೋಲ್ಡ್ ಬಣ್ಣದ ಶೆರ್ವಾಣಿ ವಿನ್ಯಾಸದ ಉಡುಪು ಧರಿಸಿದ್ದ ದಿಲ್ಜಿತ್, ಹಸಿರು ಬಣ್ಣದ ಹರಳುಗಳಿರುವ ಜ್ಯುವೆಲರಿಯನ್ನು ಮ್ಯಾಚ್ ಮಾಡಿದ್ದರು.

    ಗಾರಾ ಉಡುಪಿನಲ್ಲಿ ನತಾಶಾ ಪೂನಾವಾಲ್ಲಾ
    ನತಾಶಾ ಪೂನಾವಾಲ್ಲಾ(Natasha Poonawalla) ಅವರು ಮೆಟ್ ಗಾಲಾದಲ್ಲಿ ಪಾರ್ಸಿಯ ಗಾರಾ ಉಡುಪಿನಲ್ಲಿ ಮಿಂಚಿದರು. ಈ ಉಡುಪಿನ ಕೇಂದ್ರಬಿಂದುವೇನೆಂದರೆ ಫಿಶ್‌ಟೇಲ್ ಸ್ಕರ್ಟ್ ಹಾಗೂ 2 ವಿಂಟೇಜ್ ಗಾರಾ ಸೀರೆಯಲ್ಲಿ ಈ ವಸ್ತ್ರ ವಿನ್ಯಾಸವನ್ನು ಮಾಡಲಾಗಿತ್ತು. ಇದರ ಸ್ಕರ್ಟ್‌ನ ಸಂಪೂರ್ಣ ವಿನ್ಯಾಸವನ್ನು ಕೈ ಕಸೂತಿಯಿಂದಲೇ ಮಾಡಲಾಗಿದೆ. ಇದರಲ್ಲಿ ಇನ್ನೊಂದು ವಿಶೇಷವೆಂದರೆ ಕತ್ತಿನ ಭಾಗಕ್ಕೆ ಕಮಲದ ಆಕಾರವನ್ನು ಹೋಲುವ ಮಳೆಹನಿಯಂತೆ ನೇತಾಡುವ ಮುತ್ತುಗಳನ್ನು ಜೋಡಿಸಲಾಗಿತ್ತು. ನತಾಶಾ ಪೂನಾವಾಲ್ಲಾ ಅವರ ಮೆಟ್ ಗಾಲಾದ ವಸ್ತ್ರ ವಿನ್ಯಾಸವನ್ನು ಮನೀಶ್ ಮಲ್ಹೋತ್ರಾ ಮಾಡಿದ್ದಾರೆ.

    ಈ ಬಾರಿ ನ್ಯೂಯಾರ್ಕ್‌ನಲ್ಲಿ ನಡೆದ ಮೆಟ್ ಗಾಲಾ ಫ್ಯಾಷನ್ ನೈಟ್‌ನಲ್ಲಿ ಬಾಲಿವುಡ್ ತಾರೆಯರು ವಿಭಿನ್ನ ಹಾಗೂ ವಿಶಿಷ್ಟ ವಸ್ತ್ರ ವಿನ್ಯಾಸದಲ್ಲಿ ಕಂಗೊಳಿಸಿದರು. ಈ ಮೆಟ್ ಗಾಲಾದಲ್ಲಿ ದೇಶ-ವಿದೇಶದ ಫ್ಯಾಷನ್ ಮಾಡೆಲ್ಸ್, ಸೆಲೆಬ್ರಿಟಿಸ್ ಭಾಗಿಯಾಗಿದ್ದರು.

  • ಶಾರುಖ್ ಖಾನ್ ‘ಕಿಂಗ್’ ಸಿನಿಮಾದಲ್ಲಿ ಅನಿಲ್ ಕಪೂರ್

    ಶಾರುಖ್ ಖಾನ್ ‘ಕಿಂಗ್’ ಸಿನಿಮಾದಲ್ಲಿ ಅನಿಲ್ ಕಪೂರ್

    ಬಾಲಿವುಡ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರು ‘ಕಿಂಗ್’ (King) ಚಿತ್ರದ ಮೂಲಕ ಮಗಳು ಸುಹಾನಾ ಖಾನ್ ಅವರನ್ನು ಅದ್ಧೂರಿಯಾಗಿ ಲಾಂಚ್ ಮಾಡಲು ಮುಂದಾಗಿದ್ದಾರೆ. ದಿನದಿಂದ ದಿನಕ್ಕೆ ಕಲಾವಿದರ ಬಳಗ ಕೂಡ ಹಿರಿದಾಗುತ್ತಿದೆ. ದೀಪಿಕಾ ಪಡುಕೋಣೆ ಬಳಿಕ ಅನಿಲ್ ಕಪೂರ್ (Anil Kapoor) ಕೂಡ ‘ಕಿಂಗ್’ ಚಿತ್ರತಂಡಕ್ಕೆ ಸಾಥ್ ನೀಡಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಫ್ರೆಂಡ್ಸ್ ಜೊತೆ ಮೋಕ್ಷಿತಾ ಫಾರಿನ್ ಟ್ರಿಪ್

    ಸದಾ ಬಗೆ ಬಗೆಯ ಪಾತ್ರಗಳ ಮೂಲಕ ಕಮಾಲ್ ಮಾಡುವ ಅನಿಲ್ ಕಪೂರ್‌ಗೆ ಬಿಗ್ ಆಫರ್‌ವೊಂದು ಸಿಕ್ಕಿದೆ. ‘ಕಿಂಗ್’ ಸಿನಿಮಾದಲ್ಲಿ ನಟಿಸಲು ಅವರನ್ನು ಕೇಳಲಾಗಿದೆ. ಪವರ್‌ಫುಲ್ ಪಾತ್ರಕ್ಕೆ ಅವರು ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಅವರ ಪಾತ್ರ ತಿರುವು ನೀಡಲಿದೆಯಂತೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ತಿಳಿಸಬೇಕಿದೆ. ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ರಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ: ರಾಕೇಶ್ ನಿಧನಕ್ಕೆ ರಿಷಬ್ ಶೆಟ್ಟಿ ಸಂತಾಪ

    ಈ ಸಿನಿಮಾದ ಚಿತ್ರದ ಶೂಟಿಂಗ್ ಅನ್ನು ಮೇ 20ರಿಂದ ಶುರು ಮಾಡಲು ಪ್ಲ್ಯಾನ್ ಮಾಡಲಾಗಿದೆ. ಶಾರುಖ್, ಸುಹಾನಾ ಜೊತೆ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಅಭಯ್ ವರ್ಮಾ ಸೇರಿದಂತೆ ಅನೇಕರು ನಟಿಸಲಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

    ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ‘ಕಿಂಗ್’ ಚಿತ್ರಕ್ಕೆ ‘ಪಠಾಣ್’ ಖ್ಯಾತಿಯ ಡೈರೆಕ್ಟರ್ ಸಿದ್ಧಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

  • Met Gala 2025: ರೆಡ್ ಕಾರ್ಪೆಟ್‌ನಲ್ಲಿ ಶಾರುಖ್ ಖಾನ್ ಸ್ಟೈಲಿಶ್ ಲುಕ್

    Met Gala 2025: ರೆಡ್ ಕಾರ್ಪೆಟ್‌ನಲ್ಲಿ ಶಾರುಖ್ ಖಾನ್ ಸ್ಟೈಲಿಶ್ ಲುಕ್

    ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಮೊದಲ ಬಾರಿಗೆ ‘ಮೆಟ್ ಗಾಲಾ 2025’ರ (Met Gala 2025) ಫ್ಯಾಷನ್ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಸ್ಟೈಲೀಶ್ ಲುಕ್‌ನಲ್ಲಿ ಶಾರುಖ್ ಮಿಂಚಿದ್ದಾರೆ. ಕಿಂಗ್ ಖಾನ್ ಫ್ಯಾಷನ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.‌ ಇದನ್ನೂ ಓದಿ:ರಮೇಶ್ ಅರವಿಂದ್ ನಟನೆಯ ‘ದೈಜಿ’ ಚಿತ್ರದಲ್ಲಿ ದಿಗಂತ್

    ಪ್ರತಿ ವರ್ಷದಂತೆ ಈ ವರ್ಷವು ಕೂಡ ‘ಮೆಟ್ ಗಾಲಾ 2025’ ಫ್ಯಾಷನ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ದೇಶ- ವಿದೇಶಗಳಿಂದ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಈ ಸಾಲಿನಲ್ಲಿ ಶಾರುಖ್ ಖಾನ್ ಕೂಡ ಭಾಗಿಯಾಗಿದ್ದಾರೆ. ಮೊದಲ ಬಾರಿಗೆ ಈ ಫ್ಯಾಷನ್ ಹಬ್ಬದಲ್ಲಿ ಅವರು ಭಾಗಿಯಾಗಿದ್ದಾರೆ. ಇದನ್ನೂ ಓದಿ:ಅಭಿಮಾನಿ ಕಡೆ ಗನ್ ಇಟ್ಟ ದಳಪತಿ ವಿಜಯ್ ಬಾಡಿಗಾರ್ಡ್!

    ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ಕಪ್ಪು ಬಣ್ಣದ ಉಡುಗೆಯಲ್ಲಿ ಶಾರುಖ್ ಸ್ಟೈಲೀಶ್ ಆಗಿ ಪೋಸ್ ನೀಡಿದ್ದಾರೆ. ಕಣ್ಣಿಗೆ ಕೂಲಿಂಗ್ ಗ್ಲಾಸ್, ಕೊರಳಿನಲ್ಲಿ ಕೆ ಪದವಿರುವ ಸರ ಧರಿಸಿದ್ದಾರೆ. ಕೈಯಲ್ಲಿ ಚೆಂದದ ಸ್ಟಿಕ್ ಹಿಡಿದು ಅವರು ಫೋಟೋಗೆ ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. 59ರ ವಯಸ್ಸೂ ಫಿಟ್ ಆಗಿರೋ ಶಾರುಖ್ ಅವರನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    ಈ ಕಾರ್ಯಕ್ರಮಕ್ಕೆ ಬೇಬಿ ಬಂಪ್‌ನೊಂದಿಗೆ ಕಿಯಾರಾ ಅಡ್ವಾಣಿ, ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ ದಂಪತಿ, ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

    ಅಂದದಾಗೆ, ಶಾರುಖ್ ಖಾನ್ ಪ್ರಸ್ತುತ ‘ಕಿಂಗ್’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಮಗಳು ಸುಹಾನಾರನ್ನು ಈ ಚಿತ್ರದ ಮೂಲಕ ಲಾಂಚ್ ಮಾಡಲು ಮುಂದಾಗಿದ್ದಾರೆ.

    200 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತಿರುವ ಕಿಂಗ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಒಟ್ನಲ್ಲಿ ಮೊದಲ ಸಿನಿಮಾದಲ್ಲೇ ಮಗಳು ಗೆದ್ದು ಬೀಗಬೇಕು ಎಂದು ಅದ್ಧೂರಿಯಾಗಿ ಶಾರುಖ್ ನಿರ್ಮಾಣ ಮಾಡ್ತಿದ್ದಾರೆ.

  • ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ಸಜ್ಜಾದ ದೀಪಿಕಾ ಪಡುಕೋಣೆ

    ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ಸಜ್ಜಾದ ದೀಪಿಕಾ ಪಡುಕೋಣೆ

    ‘ಪಠಾಣ್’ ಬೆಡಗಿ ದೀಪಿಕಾ ಪಡುಕೋಣೆ‌ (Deepika Padukone) ಬಗ್ಗೆ ಫ್ಯಾನ್ಸ್‌ಗೆ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. ಮಗುವಿನ ಆರೈಯಲ್ಲಿ ಬ್ಯುಸಿಯಾಗಿದ್ದ ದೀಪಿಕಾ ಮತ್ತೆ ಕ್ಯಾಮೆರಾ ಮುಂದೆ ಬರಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಉಗ್ರರ ದಾಳಿ ಖಂಡಿಸಿದ ಶ್ರೀನಿಧಿ ಶೆಟ್ಟಿ

    ಕಳೆದ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದ್ದರು. ಈ ಹಿನ್ನೆಲೆ ನಟನೆಯಿಂದ ದೀಪಿಕಾ ಬ್ರೇಕ್ ಪಡೆದುಕೊಂಡಿದ್ದರು. ಇದೀಗ ಮತ್ತೆ ಶಾರುಖ್ ಖಾನ್ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎನ್ನಲಾಗಿದೆ. ಹೀಗೊಂದು ಸುದ್ದಿ ಇದೀಗ ಹರಿದಾಡುತ್ತಿದೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್

    ಶಾರುಖ್ ನಟನೆಯ ‘ಕಿಂಗ್’ (King) ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ನಟಿಸಲು ನಟಿಯ ಜೊತೆ ಚಿತ್ರತಂಡ ಚರ್ಚಿಸಲಾಗಿದೆಯಂತೆ. ಈ ಚಿತ್ರದಲ್ಲಿ ನಟಿಸಲು ಅವರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಮೇ 18ರಿಂದ ‘ಕಿಂಗ್’ ಚಿತ್ರದ ಶೂಟಿಂಗ್‌ಗೆ ಪ್ಲ್ಯಾನ್ ಮಾಡಲಾಗಿದೆ. ಅಕ್ಟೋಬರ್‌ನಲ್ಲಿ ದೀಪಿಕಾ ಪಾತ್ರದ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

    ಕಳೆದ ವರ್ಷ ಕಲ್ಕಿ 2898 ಎಡಿ, ಸಿಂಗಂ ಅಗೈನ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕಡೆಯದಾಗಿ ನಟಿಸಿದ್ದರು.

  • ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಬಾಲಿವುಡ್ ಸ್ಟಾರ್ಸ್‌

    ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಬಾಲಿವುಡ್ ಸ್ಟಾರ್ಸ್‌

    ಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದಿರುವ ವಿಶ್ವಾಸಘಾತುಕ ಕೃತ್ಯ ಮತ್ತು ಅಮಾನವೀಯ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳು ಸಾಲದು ಎಂದು ಶಾರುಖ್ ಖಾನ್ ಖಂಡಿಸಿದ್ದಾರೆ. ಉಗ್ರರ ಅಟ್ಟಹಾಸದ ಕುರಿತು ಶಾರುಖ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಹಲ್ಗಾಮ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳಿಲ್ಲ. ದುಃಖದಲ್ಲಿರುವ ಕುಟುಂಬಗಳಿಗೆ ದೇವರಲ್ಲಿ ಪ್ರಾರ್ಥಿಸೋಣ. ಈ ಹೇಯ ಕೃತ್ಯದ ವಿರುದ್ಧ ನಾವು ಒಗ್ಗಟ್ಟಾಗಿ, ಬಲವಾಗಿ ನಿಂತು ಈ ಕೃತ್ಯ ಮಾಡಿದವರಿಗೆ ತಕ್ಕ ಶಾಸ್ತಿಯಾಗಲಿ ಎಂದು ಹಾರೈಸೋಣ ಎಂದು ಶಾರುಖ್ ಖಾನ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

    ಭೂಮಿಯ ಮೇಲಿನ ಸ್ವರ್ಗವಾದ ಕಾಶ್ಮೀರ ನರಕವಾಗಿ ಬದಲಾಗುತ್ತಿದೆ. ಅಮಾಯಕ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ನನ್ನ ಹೃದಯ ಅವರ ಕುಟುಂಬಗಳಿಗಾಗಿ ಮಿಡಿಯುತ್ತದೆ. ಒಬ್ಬ ಅಮಾಯಕ ವ್ಯಕ್ತಿಯನ್ನು ಕೊಲ್ಲುವುದು ಇಡೀ ರಾಷ್ಟ್ರವನ್ನೇ ಕೊಂದಂತೆ ಎಂದು ಸಲ್ಮಾನ್‌ ಖಾನ್‌ (Salman Khan) ಬರೆದಿದ್ದಾರೆ.

    ಕಂಗನಾ ರಣಾವತ್ (Kangana Ranaut) ಹಂಚಿಕೊಂಡಿರುವ ಸ್ಟೋರಿಯಲ್ಲಿ, ಆ ದುರುಳರು ಅಮಾಯಕರ ಮೇಲೆ ದಾಳಿ ಮಾಡಿದ್ದಾರೆ. ಅಮಾಯಕರ ಮೇಲೆ ದಾಳಿ ಮಾಡಿ ನಪುಂಸಕತನ ಮೆರೆದಿದ್ದಾರೆ. ಇತಿಹಾಸದಲ್ಲಿ ಪ್ರತಿ ಯುದ್ಧವೂ ಸಹ ಯುದ್ಧಭೂಮಿಯಲ್ಲೇ ನಡೆದಿದೆ. ಆದರೆ ಈ ನಪುಂಸಕರು ಅಮಾಯಕರ ಮೇಲೆ ನಿರಸ್ತ್ರರಾಗಿರುವವರ ಮೇಲೆ ದಾಳಿ ಮಾಡಿದ್ದಾರೆ. ಯುದ್ಧಭೂಮಿಯ ಹೊರಗೆ ಕಾದಾಟ ಮಾಡುತ್ತಿರುವ ಈ ನಪುಂಸಕರ ಮೇಲೆ ಯುದ್ಧವಾದರೂ ಮಾಡುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಭಯೋತ್ಪಾದಕರಿಗೆ ಧರ್ಮ ಇದೆ, ಸಂತ್ರಸ್ತರಿಗೂ ಧರ್ಮ ಇದೆ ಎಂದಿದ್ದಾರೆ. ಭಯೋತ್ಪಾದಕರ ಧರ್ಮದ ಬಗ್ಗೆ ಬಹಿರಂಗವಾಗಿ ಹೇಳದೆ, ಮುಸ್ಲಿಂ ಭಯೋತ್ಪಾದಕರಿಂದ ಹಿಂದುಗಳು ದಶಕಗಳಿಂದಲೂ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

     

    View this post on Instagram

     

    A post shared by Priyanka (@priyankachopra)

    ಪ್ರಿಯಾಂಕಾ ಚೋಪ್ರಾ (Priyanka Chopra) ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಪಹಲ್ಗಾಮ್ ದಾಳಿಯ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಇದೊಂದು ಅತ್ಯಂತ ಹೇಯ ಕೃತ್ಯ ಎಂದು ಬರೆದುಕೊಂಡಿದ್ದಾರೆ. ಭಯೋತ್ಪಾದನೆಯ ಈ ಅಮಾನವೀಯ ಕೃತ್ಯವನ್ನು ಅವರು ಖಂಡಿಸಿದ್ದಾರೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬದೊಂದಿಗೆ ಇವೆ. ಗಾಯಗೊಂಡಿರುವ ದಂಪತಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by Anupam Kher (@anupampkher)

    ಈ ಬಗ್ಗೆ ಅನುಪಮ್ ಖೇರ್‌ (Anupam Kher) ಮಾತನಾಡಿ, ಇಂದು ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ. 27 ಹಿಂದೂಗಳನ್ನು ಹುಡುಕಿ ಹುಡುಕಿ ಕೊಲ್ಲಲಾಗಿದೆ. ದುಃಖದ ಜೊತೆ ಕ್ರೋಧ, ಸಿಟ್ಟು ಬರುತ್ತದೆ. ನಾನು ಇದನ್ನು ಜೀವನದಲ್ಲಿ ಬಹಳಷ್ಟು ನೋಡಿದ್ದೇನೆ. ಕಾಶ್ಮೀರದಲ್ಲಿ ಹಿಂದೂಗಳ ಜನರೊಂದಿಗೆ ಜೊತೆ ಹೀಗೆ ಆಗ್ತಾನೇ ಇದೆ. ‘ಕಾಶ್ಮೀರ್ ಫೈಲ್ಸ್’ ಅವರ ಕಥೆಯಾಗಿದ್ದು, ಇದನ್ನು ಸಿನಿಮಾ ಮಾಡಿದಾಗ ಪ್ರೊಪಗಾಂಡ ಎಂದು ಕರೆದ್ರಿ. ದೇಶದ ವಿವಿಧ ಭಾಗಗಳಿಂದ ಜನರು ತಮ್ಮ ರಜಾದಿನಗಳನ್ನು ಕಳೆಯಲು ಕುಟುಂಬದ ಜೊತೆ ಕಾಶ್ಮೀರಕ್ಕೆ ಬಂದರು. ಈ ವೇಳೆ, ಅವರ ಧರ್ಮವನ್ನು ತಿಳಿದು ಕೊಲ್ಲಲಾಗಿದೆ ಎಂದು ಕೃತ್ಯವನ್ನು ಖಂಡಿಸಿದ್ದಾರೆ.

    ಇದರ ಬಗ್ಗೆ ಮಾತನಾಡೋಕೆ ಶಬ್ದವೇ ಸಿಗೋದಿಲ್ಲ. ಪತಿಯ ಮೃತ ದೇಹದ ಜೊತೆಗಿದ್ದ ಮಹಿಳೆಯನ್ನು ನಾನು ಮರೆಯಲು ಸಾಧ್ಯವಿಲ್ಲ. ನಾನು ಪಲ್ಲವಿ ಜಿ ಅವರ ಸಂದರ್ಶನ ನೋಡಿದೆ. ಪತಿಯನ್ನ ಕಣ್ಣೆದುರೇ ಸಾಯಿಸಿದಾಗ ನನ್ನನ್ನು ನನ್ನ ಮಗನನ್ನು ಸಾಯಿಸಿ ಅಂದಾಗ, ನಿಮ್ಮನ್ನು ಸಾಯಿಸಲ್ಲ ಮೋದಿಗೆ ಹೋಗಿ ಹೇಳಿ ಅಂದ್ರಲ್ಲ. ಬಹುಶಃ ಅವನು ಒಂದು ಸಂದೇಶವನ್ನು ನೀಡಲು ಬಯಸಿದ್ದಿರಬಹುದು ಎಂದಿದ್ದಾರೆ. ಮೋದಿಯವರು ಹಾಗೂ ಅಮಿತ್ ಶಾ ಅವರ ಬಳಿ ನಾನು ಕೇಳಿಕೊಳ್ಳುವುದೇನಂದರೆ ಉಗ್ರರಿಗೆ ನಾವು ಎಂಥಹ ಪಾಠ ಕಲಿಸಬೇಕು ಅಂದರೆ ಇನ್ನೂ ಏಳು ಜನ್ಮ ಎತ್ತಿ ಬಂದ್ರೂ ಇಂಥಹ ದುಷ್ಟ ಕೆಲಸ ಮಾಡುವ ಯೋಚನೆನೇ ಅವರಿಗೆ ಬರಬಾರದು ಎಂದಿದ್ದಾರೆ.

  • Photo Gallery | IPL ಉದ್ಘಾಟನಾ ವೇದಿಕೆಯಲ್ಲಿ ಬೆಡಗು ಬಿನ್ನಾಣ; ಬಳ್ಳಿಯಂತೆ ಬಳುಕಿದ ದಿಶಾ!

    Photo Gallery | IPL ಉದ್ಘಾಟನಾ ವೇದಿಕೆಯಲ್ಲಿ ಬೆಡಗು ಬಿನ್ನಾಣ; ಬಳ್ಳಿಯಂತೆ ಬಳುಕಿದ ದಿಶಾ!

    ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಗೆ ವರ್ಣರಂಜಿತ ಚಾಲನೆ ಸಿಕ್ಕಿದೆ. ಮೆಲೊಡಿ ಕ್ವೀನ್‌ ಶ್ರೇಯಾ ಘೋಷಾಲ್‌ (Shreya Ghoshal) ಹಾಡು, ದಿಶಾ ಪಟಾನಿ (Disha Patani) ಡಾನ್ಸು, ಕಿಂಗ್‌ – ಖಾನ್‌ರ (Shah Rukh Khan And Virat) ಕುಣಿತ ಹೀಗೆ ಹಲವು ವಿಶೇಷತೆಗಳಿಂದ ಕೂಡಿದ್ದ ಕಾರ್ಯಕ್ರಮ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಈ ಅದ್ಭುತ ಕ್ಷಣಗಳ ಒಂದಿಷ್ಟು ಚಿತ್ರಗಳು ಇಲ್ಲಿವೆ…