Tag: shafik

  • ಪ್ರವೀಣ್ ಹತ್ಯೆ ಪ್ರಕರಣ- ಬಂಧಿತ ಕೆಲಸ ಮಾಡುತ್ತಿದ್ದ ಅಂಗಡಿಗೆ ಮುತ್ತಿಗೆ

    ಪ್ರವೀಣ್ ಹತ್ಯೆ ಪ್ರಕರಣ- ಬಂಧಿತ ಕೆಲಸ ಮಾಡುತ್ತಿದ್ದ ಅಂಗಡಿಗೆ ಮುತ್ತಿಗೆ

    ಮಂಗಳೂರು: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಂಧಿತ ಕೆಲಸ ಮಾಡುತ್ತಿದ್ದ ಅಂಗಡಿಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆದಿದೆ.

    ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಎಂಬಲ್ಲಿ ಆರೋಪಿ ಶಫೀಕ್ ಬೆಳ್ಳಾರೆ ಕೆಲಸ ಮಾಡುತ್ತಿದ್ದ. ಇದೀಗ ಈತನ ಬಂಧನವಾಗುತ್ತಿದ್ದಂತೆಯೇ ಸಾರ್ವಜನಿಕರು ಅಡಿಕೆ ಅಂಗಡಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕರು ಅಂಗಡಿಗೆ ಮುತ್ತಿಗೆ ಹಾಕುತ್ತಿದ್ದಂತೆಯೇ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಈ ವೇಳೆ ಮಾಲೀಕ ಅಂಗಡಿಗೆ ಬೀಗ ಹಾಕಿ ತೆರಳಿದರು. ಇದನ್ನೂ ಓದಿ: ನಿಜವಾದ ಆರೋಪಿಯನ್ನು ಬಂಧಿಸಿ ನನ್ನ ಪತಿಯನ್ನು ಬಿಟ್ಟುಬಿಡಿ: ಶಫೀಕ್ ಪತ್ನಿ ಅನ್ಶಿಫಾ

    ಪ್ರವೀಣ್ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಸವಣೂರು ಮೂಲದ ಝಾಕೀರ್ (29) ಮತ್ತು ಶಫೀಕ್ ಬೆಳ್ಳಾರೆ(27) ಬಂಧಿತ ಆರೋಪಿಗಳು. ಝಾಕೀರ್ ಸವಣೂರು ಎಸ್‍ಡಿಪಿಐ ಗ್ರಾಮ ಸಮಿತಿ ಮುಖಂಡನಾಗಿದ್ದು, ಶಫೀಕ್ ಎಸ್‍ಡಿಪಿಐ ಪಕ್ಷದ ಸಕ್ರೀಯ ಕಾರ್ಯಕರ್ತ. ಬೆಳ್ಳಾರೆ, ಸುಳ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದ. ಇದನ್ನೂ ಓದಿ: ಪ್ರವೀಣ್‌ ಹಂತಕರನ್ನು ಕೇರಳ ಗಡಿಯವರೆಗೆ ಕಳುಹಿಸಿ ಕೊಟ್ಟಿದ್ದೇವೆ: ಬಂಧಿತ ಆರೋಪಿಗಳು

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಿಜವಾದ ಆರೋಪಿಯನ್ನು ಬಂಧಿಸಿ ನನ್ನ ಪತಿಯನ್ನು ಬಿಟ್ಟುಬಿಡಿ: ಶಫೀಕ್ ಪತ್ನಿ ಅನ್ಶಿಫಾ

    ನಿಜವಾದ ಆರೋಪಿಯನ್ನು ಬಂಧಿಸಿ ನನ್ನ ಪತಿಯನ್ನು ಬಿಟ್ಟುಬಿಡಿ: ಶಫೀಕ್ ಪತ್ನಿ ಅನ್ಶಿಫಾ

    ಮಂಗಳೂರು: ಬಿಜೆಪಿ ಜಲ್ಲಾ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿಲಾಗಿದೆ. ಇದೀಗ ಓರ್ವ ಆರೋಪಿ ಶಫೀಕ್ ಪತ್ನಿ ಅನ್ಶಿಫಾ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ಶಫೀಕ್ ಅಮಾಯಕ. ಆತನನ್ನ ಅರೆಸ್ಟ್ ಮಾಡಲಾಗಿದೆ. ಆತ PFI, SDPIನಲ್ಲಿ ಸಕ್ರಿಯನಾಗಿದ್ದ ಹಾಗಂತ ಆತ ಆರೋಪಿಯಲ್ಲ. ನಿಜವಾದ ಆರೋಪಿಯನ್ನು ಬಂಧಿಸಿ ಶಫೀಕ್ ನನ್ನ ಬಿಟ್ಟು ಬಿಡಿ ಆತ ಅಪರಾಧಿಯಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಜನೋತ್ಸವದ ಬದಲು ಜನಾಕ್ರೋಶದ ದರ್ಶನವಾಗಿದೆ – ಕಾರ್ಯಕ್ರಮ ರದ್ದುಗೊಳಿಸಿದ್ದು ಮೃತನ ಮೇಲಿನ ಗೌರವದಿಂದಲ್ಲ: ಕಾಂಗ್ರೆಸ್

    ಮಂಗಳವಾರ ರಾತ್ರಿ ಪ್ರವೀಣ್ ಕುಮಾರ್ ನೆಟ್ಟಾರು ದುಷ್ಕರ್ಮಿಗಳ ಕೈಯಲ್ಲಿ ಭೀಕರವಾಗಿ ಹತ್ಯೆಯಾಗಿದ್ದರು. ಬಳಿಕ ಕರಾವಳಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಇಬ್ಬರು ಪ್ರಮುಖ ಆರೋಪಿಗಳಾದ ಸವಣೂರು ಮೂಲದ ಝಕೀರ್ ಮತ್ತು ಶಫೀಕ್ ಬೆಳ್ಳಾರೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಸವಣೂರು ಮೂಲದ ಝಕೀರ್ ಮತ್ತು ಶಫೀಕ್ ಬೆಳ್ಳಾರೆಯನ್ನು ಬಂಧಿಸಲಾಗಿದೆ. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸಬೇಕಾಗಿದೆ. ಆರೋಪಿಗಳನ್ನು ಹಿಂದೆ ನ್ಯಾಯಾಲಕ್ಕೆ ಹಾಜರು ಮಾಡುತ್ತೇವೆ ಎಂದು ದಕ್ಷಿಣಕನ್ನಡ ಎಸ್‍ಪಿ ಹೃಷಿಕೇಶ್ ಸೋನಾವಣೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಏನಿದು ಘಟನೆ:
    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು.

    Live Tv
    [brid partner=56869869 player=32851 video=960834 autoplay=true]