Tag: shadakshari

  • ವೇತನ ಹೆಚ್ಚಳ- ಮುಷ್ಕರ ವಾಪಸ್ ಪಡೆದ ಸರ್ಕಾರಿ ನೌಕರರು

    ವೇತನ ಹೆಚ್ಚಳ- ಮುಷ್ಕರ ವಾಪಸ್ ಪಡೆದ ಸರ್ಕಾರಿ ನೌಕರರು

    ಬೆಂಗಳೂರು: ಸರ್ಕಾರದ ಅಧಿಕೃತ ಆದೇಶದ ಬೆನ್ನಲ್ಲೇ ಅನಿರ್ದಿಷ್ಟ ಮುಷ್ಕರವನ್ನು ವಾಪಸ್ ತೆಗೆದುಕೊಂಡಿದ್ದೇವೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ (Shadakshari) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 1ರಿಂದ ಶೇ.17ರಷ್ಟು ವೇತನ ಹೆಚ್ಚಿಸಿ ಎಂದು ಸರ್ಕಾರ ಆದೇಶ ನೀಡಿದೆ. ಈ ಸರ್ಕಾರದ ಆದೇಶವನ್ನು ಸಾಮೂಹಿಕವಾಗಿ ಒಪ್ಪಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭರವಸೆಗಳು ಸಿಗುತ್ತವೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಅವಧಿಯ ಮುಷ್ಕರವನ್ನು ವಾಪಸ್ ಪಡೆದಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪ್ರಧಾನಿ ಮೋದಿಯವರ ಆರೋಗ್ಯ ಚೆನ್ನಾಗಿರಲಿ: ಸಿದ್ದರಾಮಯ್ಯ

    ಸರ್ಕಾರಿ ನೌಕರರಿಗೆ 17 ಪರ್ಸೆಂಟ್ ವೇತನ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದ್ದರು. ಸರ್ಕಾರಿ ನೌಕರರ (Government Employees) ಮುಷ್ಕರ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ನೌಕರರ ಜೊತೆ ಚರ್ಚೆ ಆದ ಬಳಿಕ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಮಾತಾಡಿದೆ, ಈ ವೇಳೆ ಒಂದು ಒಪ್ಪಂದಕ್ಕೆ ಬಂದಿದ್ದೇವೆ. 17% ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಇದು ಮಧ್ಯಂತರ ಪರಿಹಾರ ರೂಪದಲ್ಲಿ ಇರಲಿದೆ. ಆಯೋಗದ ವರದಿ ಬಳಿಕ ಶೇಕಡವಾರು ಪ್ರಮಾಣದಲ್ಲಿ ಬದಲಾವಣೆ ಆಗಬಹುದು. ಸರ್ಕಾರಿ ನೌಕಕರು ಮುಷ್ಕರ ಕೈಬಿಡ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ರಾಜೀನಾಮೆ – ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ಮಂತ್ರಿ ಸ್ಥಾನ?

  • ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿಗೆ ಬಿಗ್ ಶಾಕ್

    ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿಗೆ ಬಿಗ್ ಶಾಕ್

    ತುಮಕೂರು: ತಿಪಟೂರು ಕ್ಷೇತ್ರದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆ ನಡೆಯಲು ವೇದಿಕೆ ಸಜ್ಜಾಗ್ತಿದೆ. ಮೂರನೇ ಬಾರಿ ಆಯ್ಕೆ ಬಯಸಿ ಕಣಕ್ಕಿಳಿಯಲಿರುವ ಕಾಂಗ್ರೆಸ್ ಶಾಸಕ ಷಡಕ್ಷರಿ ಅವರಿಗೆ ಶಾಕ್ ಕೊಡಲೆಂದು ಅವರ ಎರಡನೇ ಪತ್ನಿ ಎನ್ನಲಾದ ಮಹಿಳೆಯೋರ್ವರು ಸನ್ನದ್ಧರಾಗಿದ್ದಾರೆ.

    ಮಧುಕುಮಾರಿ ಕೆ ಎಂಬವರು ಶಾಸಕ ಷಡಕ್ಷರಿ ವಿರುದ್ಧ ಈ ಬಾರಿ ಬಿಜೆಪಿ, ಜೆಡಿಎಸ್ ಗಿಂತ ಪ್ರಬಲ ಸ್ಪರ್ಧೆ ನೀಡಲು ಸಿದ್ಧರಾಗಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಮಧುಕುಮಾರಿಯನ್ನು ರಹಸ್ಯವಾಗಿ ಷಡಕ್ಷರಿ ಮದುವೆಯಾಗಿ ಈಗ ನನಗೂ ಅವಳಿಗೂ ಸಂಬಂಧ ಇಲ್ಲ ಅನ್ನುತಿದ್ದಾರೆ. ಆದ್ರೆ ಇತ್ತ ಷಡಕ್ಷರಿ ಅವರಿಂದ ತನಗೂ ತನ್ನ ಮಗನಿಗೂ ಆಗಿರುವ ಭಾರೀ ದೊಡ್ಡ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲೆಂದೇ ಪತ್ನಿ ಮಧು ಸನ್ನದ್ಧವಾಗಿದ್ದಾರೆ. ಇದಕ್ಕಾಗಿ ಅವರು ಇನ್ನೇನು ಕೆಲ ದಿನಗಳಲ್ಲೇ ತಿಪಟೂರಿಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.

    ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧರಾಗಿರೋ ಮಧು ಅವರ ಸ್ಪರ್ಧೆಯಿಂದಾಗಿ ಷಡಕ್ಷರಿಗೆ ತೀವ್ರ ತಲೆನೋವು ಸೃಷ್ಟಿಯಾಗಿದೆ. ಇದರ ಲಾಭ ಸಹಜವಾಗೇ ಷಡಕ್ಷರಿ ಅವರ ರಾಜಕೀಯ ವಿರೋಧಿಗಳಿಗೆ ಆಗಲಿದೆ ಎಂಬುದಾಗಿ ರಾಜಕೀಯವಲಯದಲ್ಲಿ ಚರ್ಚೆಯಾಗುತ್ತಿದೆ.

  • ನದಿ ತುಂಬಿದ್ರೂ ಮತ ಹಾಕದ ಗ್ರಾಮಗಳ ಕೆರೆಗಳಿಗಿಲ್ಲ ನೀರು- ತಿಪಟೂರು ಶಾಸಕ ಷಡಕ್ಷರಿಯಿಂದ ಸೇಡಿನ ರಾಜಕೀಯ

    ನದಿ ತುಂಬಿದ್ರೂ ಮತ ಹಾಕದ ಗ್ರಾಮಗಳ ಕೆರೆಗಳಿಗಿಲ್ಲ ನೀರು- ತಿಪಟೂರು ಶಾಸಕ ಷಡಕ್ಷರಿಯಿಂದ ಸೇಡಿನ ರಾಜಕೀಯ

    ತುಮಕೂರು: ಉತ್ತಮ ಮಳೆಯಿಂದ ಹೇಮಾವತಿ ತುಂಬಿ ಹರಿಯುತ್ತಿದ್ದು, ತುಮಕೂರು ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿ ಜನರ ಮೊಗದಲ್ಲಿ ಸಂತಸ ಮೂಡಿದೆ. ಆದ್ರೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಸುಮಾರು 20ಕ್ಕೂ ಹೆಚ್ಚು ಗ್ರಾಮದ ಜನರು ಮಾತ್ರ ಶಾಸಕ ಷಡಕ್ಷರಿ ಸೇಡಿನ ರಾಜಕಾರಣಕ್ಕೆ ಬಲಿಯಾಗಿ ಬರದ ಪರಿಸ್ಥಿತಿ ಎದುರಿಸಬೇಕಾಗಿದೆ.

    ಕಳೆದ ಚುನಾವಣೆಯಲ್ಲಿ ಕೆಲವು ಗ್ರಾಮಗಳಿಂದ ಶಾಸಕ ಷಡಕ್ಷರಿ ಅವರಿಗೆ ಕಡಿಮೆ ಪ್ರಮಾಣದಲ್ಲಿ ಮತಗಳು ಬಂದಿದ್ದವು. ಇದೇ ಕಾರಣಕ್ಕೆ ಸನ್ಮಾನ್ಯ ಶಾಸಕರು ಅಧಿಕಾರಕ್ಕೆ ಬಂದ ಬಳಿಕ ಸಾರ್ತುವಳ್ಳಿ, ಹುರುಳೇಹಳ್ಳಿ, ಚೌಲಿಹಳ್ಳಿ, ಆಲೂರು, ಹಾಲ್ಕುರಿಕೆ, ಬೊಮ್ಮಾಲಾಪುರ, ಭೈರನಾಯಕನಹಳ್ಳಿ ಸೇರಿದಂತೆ 18 ಕೆರೆಗಳಿಗೆ ಹೇಮಾವತಿ ನೀರು ಹರಿಸದಂತೆ ತಡೆದಿದ್ದಾರೆ.

    ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ಗ್ರಾಮಗಳ ಕೆರೆಗಳಿಗೆ ನೀರು ಹರಿಸುವ ಯೋಜನೆ ಪ್ರಾರಂಭಿಸಲಾಗಿತ್ತು. ಅಲ್ಲದೆ 83 ಕೋಟಿ ರೂಪಾಯಿ ವೆಚ್ಚದಲ್ಲಿ ಪೈಪ್‍ಲೈನ್ ಕೂಡಾ ಅಳವಡಿಸಲಾಗಿತ್ತು. ಆದ್ರೆ ಪೈಪ್‍ಲೈನ್ ಅಳವಡಿಸಿದ ಬಳಿಕ ಕೇವಲ 2 ವರ್ಷ ಕೆರೆಗಳಿಗೆ ನೀರು ಹರಿದಿದ್ದು, ಷಡಕ್ಷರಿ ಶಾಸಕರಾದ ಬಳಿಕ ನೀರು ಹರಿಸುವುದನ್ನು ಬಂದ್ ಮಾಡಲಾಗಿದೆ.