Tag: Shabarimale

  • ಹಳೆಯ ಸಂಪ್ರದಾಯಕ್ಕೆ ಯಾರೂ ಹಸ್ತಕ್ಷೇಪ ಮಾಡ್ಬಾರ್ದು: ರಜನಿಕಾಂತ್ ಮನವಿ

    ಹಳೆಯ ಸಂಪ್ರದಾಯಕ್ಕೆ ಯಾರೂ ಹಸ್ತಕ್ಷೇಪ ಮಾಡ್ಬಾರ್ದು: ರಜನಿಕಾಂತ್ ಮನವಿ

    ಚೆನ್ನೈ: ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ ಇರುವ ವಯಸ್ಸಿನ ಮಿತಿಯ ಹಳೆಯ ಸಂಪ್ರದಾಯದಲ್ಲಿ ಯಾರೋಬ್ಬರೂ ಹಸ್ತಕ್ಷೇಪ ಮಾಡಬಾರದೆಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.

    ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿಕೊಟ್ಟಿದ್ದರ ಬಗ್ಗೆ ಇದೇ ಮೊದಲ ಬಾರಿಗೆ ನಟ ರಜನಿಕಾಂತ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಅನಾದಿಕಾಲದಿಂದಲೂ ನಮ್ಮ ಸಮಾಜದಲ್ಲಿ ಆಚರಣೆಗಳನ್ನು ನಾವು ಕಟ್ಟುನಿಟ್ಟಾಗಿ ನಡೆಸಿಕೊಂಡು ಬಂದಿದ್ದೇವೆ. ಹೀಗಾಗಿ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದರು.

    ನಮ್ಮ ದೇಶದಲ್ಲಿರುವ ಪ್ರತಿಯೊಂದು ದೇವಾಲಗಳು ಸಹ, ತನ್ನದೇ ಆದ ರೂಢಿ-ಸಂಪ್ರದಾಯಗಳನ್ನು ಬೆಳೆಸಿಕೊಂಡು ಬಂದಿರುತ್ತವೆ. ವಿಶೇಷವಾಗಿ ಸ್ವಾಮಿ ಶಬರಿಮಲೆ ಅಯ್ಯಪ್ಪ ದೇಗುಲ ವಿಚಾರದಲ್ಲಿಯೂ ಸಹ ಅನೇಕ ಸಂಪ್ರದಾಯಗಳು ರೂಢಿಯಲ್ಲಿವೆ. ಹೀಗಾಗಿ ಶಬರಿಮಲ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಯಸ್ಸಿನ ವಿಚಾರಕ್ಕೆ ವಿಧಿಸಿರುವ ಹಳೆಯ ಸಂಪ್ರದಾಯದಲ್ಲಿ ಯಾರೋಬ್ಬರು ಸಹ ಹಸ್ತಕ್ಷೇಪ ಮಾಡಬಾರದೆಂಬುದು ನನ್ನ ಮನವಿ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

    ಶಬರಿಮಲೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ತಲೆ ಬಾಗುತ್ತೇನೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸುತ್ತೇನೆ. ಆದರೆ ಇದು ಧರ್ಮ ಹಾಗೂ ಅದಕ್ಕೆ ಸಂಬಂಧಪಟ್ಟ ಆಚರಣೆಗಳ ವಿಷಯಕ್ಕೆ ಬಂದಾಗ ಎಲ್ಲರೂ ಎಚ್ಚರ ವಹಹಿಸಬೇಕಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ರು.

    ಸುಪ್ರೀಂ ಕೋರ್ಟ್ ತೀರ್ಪು ಬೆನ್ನಲ್ಲೇ ಮಹಿಳೆಯರು ಕಳೆದ ಬುಧವಾರ ಶಬರಿಮಲೆಯ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ಮಹಿಳೆಯರಿಗೆ ಮಾತ್ರ ಯಾವುದೇ ಕಾರಣಕ್ಕೂ ಮಣಿಕಂಠನ ದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದು ಪ್ರಭಾವಿ ನಾಯರ್ ಸಮಾಜ, ಹಿಂದೂಪರ ಸಂಘಟನೆಗಳು, ಬಿಜೆಪಿ ಹಾಗೂ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಹಿಂಸಾರೂಪವನ್ನೂ ಪಡೆದುಕೊಂಡಿತ್ತು. ಶಬರಿಗಿರಿ ತಲುಪುವ ಮುಖ್ಯ ದ್ವಾರವಾದ ನಿಳಕ್ಕಲ್‍ನಲ್ಲಿ ಬುಧವಾರ ಬೆಳಗ್ಗೆಯಿಂದಲೂ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಯ್ಯಪ್ಪನ ದೇಗುಲದ ದ್ವಾರ ತೆರೆಯುತ್ತಿದ್ದಂತೆ ಉದ್ರಿಕ್ತರು ಪ್ರತಿಭಟನೆಯನ್ನು ಹಿಂಸಾರೂಪಕ್ಕೆ ಬದಲಾಯಿಸಿದ್ದರು. ಪರಿಣಾಮ ಅಯ್ಯಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದ ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ಮಾರ್ಗಮಧ್ಯದಲ್ಲೇ ಹಿಂದೆಸರಿದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಬರಿಮಲೆಗೆ ಮಹಿಳೆಯರ ಪ್ರವೇಶ ಅನಾಹುತಕ್ಕೆ ದಾರಿ- ವಿದ್ವಾನ್ ಅನಂತ್ ಶರ್ಮಾ

    ಶಬರಿಮಲೆಗೆ ಮಹಿಳೆಯರ ಪ್ರವೇಶ ಅನಾಹುತಕ್ಕೆ ದಾರಿ- ವಿದ್ವಾನ್ ಅನಂತ್ ಶರ್ಮಾ

    ಬೆಂಗಳೂರು: ಮಹಿಳೆಯರು ದೇವಸ್ಥಾನವನ್ನು ಪ್ರವೇಶ ಮಾಡಬಾರದು ಎಂಬುದು ಹಿಂದೂ ಸಂಪ್ರದಾಯದಲ್ಲಿ ಎಲ್ಲೂ ಇಲ್ಲ. ಆದ್ರೆ ಅಯ್ಯಪ್ಪನ ಮಂದಿರಕ್ಕೆ ಯಾಕೆ ಮಹಿಳೆಯರಿಗೆ ನಿಷೇಧ ಯಾಕೆ ಎನ್ನುವುದು ಇದೀಗ ಪ್ರಶ್ನೆಯಾಗಿದೆ. ಅಯ್ಯಪ್ಪ ಸ್ವಾಮಿ ಬ್ರಹ್ಮಚರಿಯಾಗಿ ಇರುವ ಕಾರಣ ಮಹಿಳೆಯರು ಹೋದರೆ ಅಯ್ಯಪ್ಪ ಸ್ವಾಮಿಗೆ ತೊಂದರೆಯಾಗಬಹುದು. ಒಬ್ಬ ಬ್ರಹ್ಮಚರಿಯಾದವನಿಗೆ ಹೀಗೆಯೇ ನಡೆದುಕೊಳ್ಳಬೇಕು ಎನ್ನುವ ನಿಯಮಗಳಿರುತ್ತವೆ. ಒಟ್ಟಿನಲ್ಲಿ ಸಂಪ್ರದಾಯಕ್ಕೆ ಭಂಗ ಮಾಡುವುದರಿಂದ ದೇವಸ್ಥಾನಕ್ಕೆ ತೊಂದರೆಯಾಗಬಹುದು ಎಂದು ವಿದ್ವಾನ್ ಅನಂತ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದವನ್ನು ಪ್ರಭುಸಂಹಿತೆ ಅಂತ ಹೇಳುತ್ತೇವೆ. ಹಾಗೆಯೇ ಕೆಲವೊಂದು ಶಾಸ್ತ್ರಗಳಿವೆ. ಅವುಗಳನ್ನು ಮಿತ್ರ ಸಂಹಿತ, ಕಾವ್ಯಗಳನ್ನು ಕಾಂತಾ ಸಂಹಿತಾ ಅಂತ ಕರೆಯುತ್ತೇವೆ. ಈ ಮೂರನ್ನು ಇಟ್ಟುಕೊಂಡು ನಾವು ಜೀವನ ಮಾಡಬೇಕಿದೆ. ಇದನ್ನೂ ಓದಿ: ಅಯ್ಯಪ್ಪನ ಬಾಗಿಲು ಮಹಿಳೆಯರಿಗೆ ಮುಕ್ತ: ಸುಪ್ರೀಂ ಕೋರ್ಟ್

    ಎರಡು ದೇವತೆಗಳ ಶಕ್ತಿಯ ಮಿಶ್ರಣದಿಂದ ಉದ್ಭವಾಗಿರುವ ಈ ದೇವರು ಬ್ರಹ್ಮಚಾರಿ ಎನ್ನುವ ಸ್ವರೂಪವಿದೆ. ಹಾಗಿರುವ ಕಾರಣದಿಂದ ಹಿಂದಿನ ಸಂಪ್ರದಾಯದಿಂದ ಬಂದಂತಹ ಕ್ರಮದಲ್ಲಿ ಋತುಮತಿಯಾದ ಸ್ತ್ರೀಯರು ದೇವರನ್ನು ನೋಡಬಾರದೆಂಬ ಪ್ರತೀತಿ ಇದೆ. ಇದನ್ನೂ ಓದಿ: ನಾನು ಮಹಿಳೆಯಾಗಿ ಹುಟ್ಟಿದ್ದಕ್ಕೆ ಇಂದು ಸಾರ್ಥಕವಾಯಿತು- ಶಬರಿಮಲೆ ತೀರ್ಪಿಗೆ ಜಯಮಾಲಾ ಪ್ರತಿಕ್ರಿಯೆ

    ಅದೇ ರೀತಿಯಾಗಿ ಸ್ತ್ರೀಯರಿಗೆ ದೇವಾಲಯ ಪ್ರವೇಶ ನಿರ್ಬಂಧ ಎನ್ನುವುದು ಶಾಸ್ತ್ರದಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ. ಆದ್ರೆ ಸಂಪ್ರದಾಯದಲ್ಲಿ ಉಲ್ಲೇಖವಿದೆ. ಈ ಮಿತ್ರ ಸಂಹಿತೆ ಎನ್ನುವುದು ಶಾಸ್ತ್ರ ಆಗಿರೋದ್ರಿಂದ, ಇದರಲ್ಲಿ ಸಂಪ್ರದಾಯ ಹಾಗೂ ಶಾಸ್ತ್ರ ಎರಡನ್ನೂ ಸೇರಿಸಿಕೊಂಡು ನಾವು ಮಂದೆ ಹೋಗಬೇಕಾಗಿದೆ.

    ಈ ಆಚರಣೆ ಹಿಂದಿನಿಂದ ಬಂದಿರುವಂತಹ ಒಂದು ಸಮಂಜಸವಾದ ಕ್ರಮ. ಅದರ ಬಗ್ಗೆ ನಾವು ಮಾತನಾಡಲು ಸಾಧ್ಯವಿಲ್ಲ. ಯಾಕಂದ್ರೆ ಶಾಸ್ತ್ರದ ದೃಷ್ಟಿಯಿಂದ ಕುಲ ಮತ್ತು ದೇಶ ಆಚಾರ ಧರ್ಮವನ್ನು ಉಲ್ಲಂಘನೆ ಮಾಡಬಾರದು ಅಂತ ಪುರಾಣದಲ್ಲಿದೆ. ಶಾಸ್ತ್ರದಲ್ಲಿ ಹೇಳಿರುವುದರಿಂದ ಆ ಸಂಪ್ರದಾಯವನ್ನೇ ಪಾಲಿಸಿಕೊಂಡು ಮುಂದುವರಿಯಬೇಕಾಗಿದೆ ಅಂತ ಹೇಳಿದರು.

    ಇದೀಗ ಒಂದು ತೀರ್ಪು ಬಂದಿದೆ. ಯಾಕಂದ್ರೆ ಅದನ್ನು ಕಾನೂನು ತಜ್ಞರೇ ನೋಡಿಕೊಳ್ಳಬೇಕು. ಇಲ್ಲಿ ಮಹಿಳೆಯರಿಗೆ ಎನಾದ್ರೂ ಆಗುತ್ತೆ ಅಂತ ಅಲ್ಲ, ದೇವರಿಗೆ ತೊಂದರೆ ಆಗಲ್ಲ, ಆದ್ರೆ ದೇವರಿಗೆ ಇದು ಸಮಂಜಸವಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ನಾನು ಮಹಿಳೆಯಾಗಿ ಹುಟ್ಟಿದ್ದಕ್ಕೆ ಇಂದು ಸಾರ್ಥಕವಾಯಿತು- ಶಬರಿಮಲೆ ತೀರ್ಪಿಗೆ ಜಯಮಾಲಾ ಪ್ರತಿಕ್ರಿಯೆ

    ನಾನು ಮಹಿಳೆಯಾಗಿ ಹುಟ್ಟಿದ್ದಕ್ಕೆ ಇಂದು ಸಾರ್ಥಕವಾಯಿತು- ಶಬರಿಮಲೆ ತೀರ್ಪಿಗೆ ಜಯಮಾಲಾ ಪ್ರತಿಕ್ರಿಯೆ

    ಬೆಂಗಳೂರು: ಕೇರಳದ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನವನ್ನು ಎಲ್ಲ ವಯೋಮಿತಿಯ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್‍ನ ಪಂಚಪೀಠ ನಾಲ್ಕು ಒಂದರಲ್ಲಿ ಇಂದು ಮಹತ್ವದ ತೀರ್ಪನ್ನು ನೀಡಿದೆ. ಸದ್ಯ ಕೋರ್ಟ್ ನ ಈ ತೀರ್ಪಿಗೆ ಹಿರಿಯ ನಟಿ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖಾ ಸಚಿವೆ ಜಯಮಾಲಾ ಪ್ರತಿಕ್ರಿಯಿಸಿದ್ದಾರೆ.

    ನಾನು ಮಹಿಳೆಯಾಗಿ ಹುಟ್ಟಿದ್ದಕ್ಕೆ ಇಂದು ಸಾರ್ಥಕವಾಯಿತು. ಸಂವಿಧಾನ ಬರೆದವರಿಗೆ ನಾನು ಕೋಟಿ ನಮಸ್ಕಾರ ತಿಳಿಸುತ್ತೇನೆ. ಅಲ್ಲದೇ ಕಾನೂನನ್ನು ಎತ್ತಿ ಹಿಡಿದ ನ್ಯಾಯಧೀಶರಿಗೆ ಕೋಟಿ ನಮಸ್ಕಾರ ತಿಳಿಸುತ್ತೇನೆ. ಇದು ನಿಜಕ್ಕೂ ಐತಿಹಾಸಿಕ ದಿನ. ನಮ್ಮಲ್ಲಿ ತಾರತಮ್ಯ ನೋಡಿ ಎಲ್ಲ ಮಹಿಳೆಯರು ನೊಂದುಕೊಂಡಿದ್ದರು. ನಮ್ಮ ದೇವರನ್ನು ನೋಡಲು ಮಹಿಳೆಯರನ್ನು ಅವಕಾಶ ನೀಡಲಿಲ್ಲ. ದೇವರು ಎಂದಿಗೂ ನಮಗೆ ತಾರತಮ್ಯ ಮಾಡಲಿಲ್ಲ ಎಂದು ಸಚಿವೆ ಜಯಮಾಲಾ ಹೇಳಿದ್ದಾರೆ.

    ಮಹಿಳೆಯರನ್ನು ಸಮಾನವಾಗಿ ನಡೆಸಿಕೊಳ್ಳಬೇಕಿದೆ. ಮಹಿಳೆಯರು ಅಬಲೆಯರಲ್ಲ. ನಮ್ಮ ದೇಶದಲ್ಲಿ ಮಹಿಳೆಯರು ದೇವರು ಅಂತಾ ಪೂಜಿಸಲಾಗುತ್ತಿದೆ ಎಂದು ಸಿಜೆಐ ದೀಪಕ್ ಮಿಶ್ರಾ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜಯಮಾಲಾ, ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.

    1987ರಲ್ಲಿ ದೇವಸ್ಥಾನ ಪ್ರವೇಶಿಸಿದ್ದ ಜಯಮಾಲಾ:
    ಹೆಸರಾಂತ ಜ್ಯೋತಿಷಿ ಪಿ. ಉಣ್ಣಿಕೃಷ್ಣನ್ ಪಣಿಕ್ಕರ್ ತಂಡವು ಶಬರಿಮಲೆ ದೇವಸ್ಥಾನದಲ್ಲಿ 2006ರ ಜೂನ್‍ನಲ್ಲಿ ನಾಲ್ಕು ದಿನಗಳ ವರೆಗೆ `ದೇವಪ್ರಶ್ನೆ’ ಕೇಳಿ, ದೇವಸ್ಥಾನದ ಗರ್ಭಗುಡಿಯೊಳಗೆ ಮಹಿಳೆಯೊಬ್ಬರು ಪ್ರವೇಶಿಸಿದ್ದರು ಎಂದು ಹೇಳಿತ್ತು. `ದೇವಪ್ರಶ್ನೆ’ ಬಳಿಕ ನಟಿ ಜಯಮಾಲಾ 1987ರಲ್ಲಿ ತಾವು ಈ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಿಸಿದ್ದಾಗಿ ಹೇಳಿಕೊಂಡಿದ್ದರು. ಪಣಿಕ್ಕರ್ ಅವರಿಗೆ ಪ್ರಚಾರಗೊಳಿಸುವುದಕ್ಕಾಗಿ ಜಯಮಾಲಾ ದೇವಸ್ಥಾನ ಪ್ರವೇಶಿಸಿದ್ದಾರೆ ಎಂಬ ಆರೋಪಗಳು ಅಂದು ಕೇಳಿ ಬಂದಿದ್ದವು.

    ಜಯಮಾಲಾ ದೇವಸ್ಥಾನ ಪ್ರವೇಸಿಸುವ ಮೂಲಕ ರಾಜ್ಯದ ಜನರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ ಆರೋಪದ ಮೇಲೆ ಪೊಲೀಸರು ಪಣಿಕ್ಕರ್, ಅವರ ಸಹಾಯಕ ರಘುಪತಿ ಹಾಗೂ ನಟಿ ಜಯಮಾಲಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ವಜಾಗೊಳಿಸುವಂತೆ ಈ ಮೂವರು ಕೇರಳ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇದು ಮುಗಿದ ಅಧ್ಯಾಯವಾಗಿದ್ದು, ಆರೋಪಿಗಳ ವಿರುದ್ಧ ಹೊರಿಸಲಾಗಿರುವ ಆರೋಪ ಕಾನೂನು ಬದ್ಧ ಎಲ್ಲ ಅರ್ಜಿಯನ್ನು ವಜಾಗೊಳಿಸಿತ್ತು.

    ಏನಿದು ಪ್ರಕರಣ?:
    ಕೇರಳದ ಶಬರಿಮಲೆ ದೇವಾಲಯದಲ್ಲಿ 800 ವರ್ಷಗಳಿಂದ ನಡೆದು ಬಂದಿರುವ ಮಹಿಳೆಯರ ಪ್ರವೇಶ ನಿಷೇಧ ಆಚರಣೆಯನ್ನು ವಿರೋಧಿಸಿ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ 10 ರಿಂದ 50 ವರ್ಷಗಳ ಒಳಗಿನ ಮಹಿಳೆಯರಿಗೆ ಅನುಮತಿ ನೀಡುವಂತೆ ಕೇರಳ ರಾಜ್ಯ ಸರ್ಕಾರ, ದೇವಾಲಯ ಆಡಳಿತ ಮಂಡಳಿ, ಪತ್ತನಂತಿಟ್ಟ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿತ್ತು.

    ಅರ್ಜಿದಾರರ ಪರ ಸಲಹೆಗಾರ ಪ್ರಕಾಶ್ ಗುಪ್ತಾ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಮಹಿಳೆಯರ ದೇವಾಲಯದ ಪ್ರವೇಶದ ಬಗ್ಗೆ ತಾರತಮ್ಯ ತೋರುವುದು ಹಿಂದೂ ಧರ್ಮದ ಭಾಗವಲ್ಲ. ಯಾವುದೇ ಮಹಿಳೆಯ ನೋಟದಿಂದ ಯಾರ ಬ್ರಹ್ಮಚರ್ಯದ ಮೇಲೂ ಪರಿಣಾಮ ಬೀರುವುದಿಲ್ಲ. ಅದ್ದರಿಂದ ಅಂತಹ ಆಚರಣೆಗಳಿಗೆ ಅರ್ಥವಿಲ್ಲ ಎಂಬ ವಾದ ಮಂಡಿಸಿದ್ದರು.

    ಸಂವಿಧಾನದ 14ನೇ ವಿಧಿ ಸಮಾನತೆಯ ಹಕ್ಕು. 15ನೇ ವಿಧಿ ಧರ್ಮ, ಜಾತಿ, ಲಿಂಗ ಅಥವಾ ಸ್ಥಳದ ಆಧಾರ ಮೇಲೆ ಅಸಮಾನತೆ ತೋರುವಂತಿಲ್ಲ. 17ನೇ ವಿಧಿ ಅಸ್ಪೃಶ್ಯತೆಯನ್ನು ಆಚರಣೆ ಮಾಡುವುದನ್ನು ನಿಷೇಧಿಸಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ನಿರಂತರ 5 ವರ್ಷದಿಂದ ಮುಸ್ಲಿಂ ವ್ಯಕ್ತಿಯಿಂದ ಅಯ್ಯಪ್ಪ ಸ್ವಾಮಿ ಮಾಲೆ ಧಾರಣೆ

    ನಿರಂತರ 5 ವರ್ಷದಿಂದ ಮುಸ್ಲಿಂ ವ್ಯಕ್ತಿಯಿಂದ ಅಯ್ಯಪ್ಪ ಸ್ವಾಮಿ ಮಾಲೆ ಧಾರಣೆ

    ವಿಜಯಪುರ: ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಅಯ್ಯಪ್ಪ ಸ್ವಾಮಿ ಮಾಲೆ ಹಾಕುವವರನ್ನು ನೋಡಿರುತ್ತೇವೆ. ಆದರೆ ವಿಜಯಪುರದಲ್ಲಿ ಒರ್ವ ಮುಸ್ಲಿಂ ವ್ಯಕ್ತಿ ಅಯ್ಯಪ್ಪ ಸ್ವಾಮಿಗೆ ಮಾಲೆ ಧರಿಸಿದ್ದಾರೆ. ವಿಜಯಪುರದ ಅಲಿಯಾಬಾದ್ ನಿವಾಸಿಯಾದ ಅನ್ವರ್ ಎಂಬವರು ಸೋಮವಾರ ಅಯ್ಯಪ್ಪ ಸ್ವಾಮಿಯ ಮಾಲೆ ಧಾರಣೆ ಮಾಡಿದ್ದಾರೆ.

    ನಿರಂತರ 5 ವರ್ಷಗಳಿಂದ ಅನ್ವರ್ ಮಾಲೆ ಧಾರಣೆ ಮಾಡುತ್ತ ಬರುತ್ತಿದ್ದು, ಇದರಿಂದ ನಾನು ಮತ್ತು ನನ್ನ ಕುಟುಂಬ ಖುಷಿಯಾಗಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ಅನೇಕ ಕಷ್ಟಗಳು ಮಾಲೆ ಧಾರಣೆಯ ನಂತರ ಪರಿಹಾರ ಆಗಿವೆ ಎಂದು ಅನ್ವರ್ ತಿಳಿಸಿದ್ದಾರೆ.

     

    ಇನ್ನು ಇದಕ್ಕೆ ಅವರ ಮನೆಯವರು ಸಾಥ್ ನೀಡಿದ್ದು, ಅನ್ವರ್ ಮೂರು ದಿನಗಳ ಕಾಲ ಮಾಲ ಧಾರಣೆ ಮಾಡಿ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಹಿಂದಿರುಗುತ್ತಾರೆ.

  • ಮಂಡ್ಯದ ಅಯ್ಯಪ್ಪ ಭಕ್ತರ ವಾಹನಗಳ ಮೇಲೆ ಕಾಸರಗೋಡಿನಲ್ಲಿ ಕಲ್ಲೆಸೆತ

    ಮಂಡ್ಯದ ಅಯ್ಯಪ್ಪ ಭಕ್ತರ ವಾಹನಗಳ ಮೇಲೆ ಕಾಸರಗೋಡಿನಲ್ಲಿ ಕಲ್ಲೆಸೆತ

    ಮಂಗಳೂರು: ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸವಾಗಿ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೇರಳದ ಕಾಸರಗೋಡಿನಲ್ಲಿ ಕರಾಳ ದಿನ ಆಚರಣೆ ಮಾಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ, ಕರ್ನಾಟಕದಿಂದ ಕೇರಳ ಹಾಗೂ ಕೇರಳದಿಂದ ಕರ್ನಾಟಕದತ್ತ ಬರುತ್ತಿದ್ದ ಬಸ್‍ಗಳ ಮೇಲೆ ಬೈಕ್‍ನಲ್ಲಿ ಬಂದವರು ಕಲ್ಲು ತೂರಾಟ ಮಾಡಿ ಬಂದಷ್ಟೇ ವೇಗದಲ್ಲಿ ಪರಾರಿಯಾಗಿದ್ದಾರೆ. ಈ ವೇಳೆ ಮಂಗಳೂರು, ಮಡಿಕೇರಿಗೆ ತೆರಳುತ್ತಿದ್ದ ಬಸ್ ಹಾಗೂ ಮಂಡ್ಯದಿಂದ ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರ ವಾಹನಗಳ ಮೇಲೆ ಕೂಡ ಕಲ್ಲು ತೂರಾಟ ನಡೆದಿದ್ದು, ಬಸ್‍ಗಳ ಗಾಜು ಜಖಂಗೊಂಡಿವೆ.

    ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೂ ಕಲ್ಲು ತೂರಾಟ ನಡೆಸಿದ್ದಾರೆ. ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ ಮುಸ್ಲಿಮ್ ಸಂಘಟನೆಯೊಂದರ ಕಾರ್ಯಕರ್ತರು ಈ ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.

    ಕುಂಬಳೆ, ಮೊಗ್ರಾಲ್ ಪುತ್ತೂರು, ಮಂಜೇಶ್ವರದಲ್ಲಿ ಘಟನೆ ನಡೆದಿದ್ದು, ಹೆದ್ದಾರಿ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

    ಸದ್ಯ ಮಂಡ್ಯದ ಅಯ್ಯಪ್ಪ ಭಕ್ತರಿಗೆ ಕಾಸರಗೋಡಿನ ಅಯ್ಯಪ್ಪ ಸೇವಾ ಸಂಘದಲ್ಲಿ ಆಶ್ರಯ ನೀಡಲಾಗಿದೆ.