Tag: Shabarimale

  • ಹಾವೇರಿಯಿಂದ ಶಬರಿಮಲೆಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ – ಗುರುಸ್ವಾಮಿ ಸಾವು, 10ಕ್ಕೂ ಅಧಿಕ ಮಂದಿಗೆ ಗಾಯ

    ಹಾವೇರಿಯಿಂದ ಶಬರಿಮಲೆಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ – ಗುರುಸ್ವಾಮಿ ಸಾವು, 10ಕ್ಕೂ ಅಧಿಕ ಮಂದಿಗೆ ಗಾಯ

    ಹಾವೇರಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ತೆರಳುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ ಗುರುಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೇರಳದ (Kerala) ಎರಿಮಲೈನಲ್ಲಿ ನಡೆದಿದೆ.

    ಹಾವೇರಿಯ (Haveri) ಹಾನಗಲ್ (Hanagal) ಪಟ್ಟಣದ ನಿವಾಸಿ ಮಾರುತಿ ಎಂ ಹರಿಹರ(51) ಮೃತ ಗುರುಸ್ವಾಮಿ. ಇದನ್ನೂ ಓದಿ: ಮಲ್ಪೆಯ ಟಾಯ್ಲೆಟ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆ

    ಹಿರೇಕಣಗಿ ಸೇರಿ ಹಾನಗಲ್ ತಾಲೂಕಿನ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಿನಿ ಬಸ್ ಮಾಡಿಕೊಂಡು ತೆರಳಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಮಿನಿ ಬಸ್ ಪಲ್ಟಿಯಾಗಿದೆ. ಪರಿಣಾಮ ಓರ್ವ ಗುರುಸ್ವಾಮಿ ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 20 ಜನರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಯುವಕನೊಂದಿಗೆ ಆಂಟಿ ಲವ್ವಿಡವ್ವಿ – ರೀಲ್ಸ್‌ ಪ್ರಿಯನಿಗಾಗಿ ಗಂಡನಿಗೇ ಚಟ್ಟ ಕಟ್ಟಿದ ಪತ್ನಿ

    ರಾಜ್ಯ ಸರ್ಕಾರವು ಕೇರಳ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದೆ. ಅಲ್ಲದೇ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಅವರು ರಾಜ್ಯ ಸರ್ಕಾರದೊಂದಿಗೆ ಮಾತನಾಡಿ, ಮೃತದೇಹವನ್ನು ತರುವ ವ್ಯವಸ್ಥೆ ಮಾಡಿದ್ದಾರೆ.

  • ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆ‌ ಹೊರಟ ಬೀದಿನಾಯಿ

    ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆ‌ ಹೊರಟ ಬೀದಿನಾಯಿ

    ಕಾರವಾರ: ಲಕ್ಷಾಂತರ ಭಕ್ತರು ಮಾಲಾಧಾರಿಯಾಗಿ ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಾರೆ. ಆದರೆ ಬೀದಿ ಶ್ವಾನವೊಂದು (Dog) ಶಬರಿಮಲೆಯ (Sabarimala) ಅಯ್ಯಪ್ಪನ ದರ್ಶನಕ್ಕೆ 200 ಕಿ.ಮೀ ದೂರದಿಂದ ಗುರುಸ್ವಾಮಿಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಅಯ್ಯಪ್ಪನ (Ayyappa Swamy Temple) ದರ್ಶನಕ್ಕೆ ಹೊರಟಿದೆ.

    ಹೌದು.. ಧಾರವಾಡ (Dharwad) ಜಿಲ್ಲೆಯ ಮಂಗಳಗಟ್ಟಿ ಗ್ರಾಮದಲ್ಲಿ ಇದ್ದ ಈ ಶ್ವಾನ ಶಬರಿಮಲೆಗೆ ಪಾದಯಾತ್ರೆ ಮೂಲಕ ತೆರಳುತ್ತಿದೆ. ಆದರೆ ಅಚ್ಚರಿಯ ವಿಷಯವೆಂದರೆ ಈ ಶ್ವಾನವನ್ನು ಯಾರೂ ಸಾಕಿಲ್ಲ. ಬೀದಿಯಲ್ಲಿ ಬಿದ್ದ ಆಹಾರ ಸೇವಿಸಿಕೊಂಡು ಕಂಡಲ್ಲಿ ಇರುವ ಈ ನಾಯಿ ಇದೀಗ ಶಬರಿಮಲೆಗೆ ಹೊರಟು ನಿಂತಿದೆ.

    ಇದೇ ಗ್ರಾಮದ ಗುರುಸ್ವಾಮಿ, ನಾಗನಗೌಡ ಪಾಟೀಲ್, ಮಂಜುಸ್ವಾಮಿ ಎಂಬುವವರು ತಮ್ಮ ಮೂರು ಜನರ ತಂಡದೊಂದಿಗೆ ಮಾಲೆ ಧರಿಸಿ ಕೇರಳದ ಶಬರಿಮಲೆಗೆ ಪಾದಯಾತ್ರೆ ಮೂಲಕ ದರ್ಶನಕ್ಕೆ ಹೊರಟಿದ್ದರು. ಇವರೊಂದಿಗೆ ಈ ಬೀದಿ ನಾಯಿಯು ಸಹ ಹಿಂಬಾಲಿಸಿದೆ. ಒಂದಷ್ಟು ದೂರ ಬಂದು ಮರಳುತ್ತೆ ಎಂದು ಅಂದುಕೊಂಡಿದ್ದ ಗುರುಸ್ವಾಮಿಗಳು ತಮ್ಮಷ್ಟಕ್ಕೆ ಪಾದಯಾತ್ರೆ ಪ್ರಾರಂಭಿಸಿದರು. ಆದರೆ ಇವರನ್ನೇ ಹಿಂಬಾಲಿಸಿದ ಈ ಶ್ವಾನ ನೂರಾರು ಕಿ.ಮೀ ಕ್ರಮಿಸಿದರೂ ಇವರ ಸಂಘ ಬಿಡಲಿಲ್ಲ‌. ದೇವರ ಪೂಜೆ, ವಿಶ್ರಾಂತಿ ಹೀಗೆ ಎಲ್ಲೆಂದರಲ್ಲಿ ಸಾಥ್‌ ನೀಡಿದ ಈ ಶ್ವಾನ ಇವರಿಗೆ ತೊಂದರೆಯಾಗದಂತೆ ರಕ್ಷಣೆ ಮಾಡುತ್ತಾ ಇವರೊಂದಿಗೆ ಸಾಗಿದೆ. ಇದನ್ನೂ ಓದಿ: ರಾಯಚೂರು ನಗರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಮಾಯ

    ಇನ್ನು ಇವರೊಂದಿಗೆ ಹಿಂಬಾಲಿಸಿ ಇವರ ರಕ್ಷಣೆ ಮಾಡುತ್ತಾ ಬರುತ್ತಿದ್ದ ಈ ಶ್ವಾನದ ಬಗ್ಗೆ ಇವರಿಗೂ ಪ್ರೀತಿ ಹುಟ್ಟಿದೆ. ತಾವು ಪಡೆಯುವ ಪ್ರಸಾದವನ್ನು ಇದಕ್ಕೂ ನೀಡಿ ಅಯ್ಯಪ್ಪನ ಮಾಲೆ ಹಾಕಿ ಶಬರಿಮಲೆಗೆ ಈ ಶ್ವಾನದೊಂದಿಗೆ ಪ್ರಯಾಣ ಮುಂದುವರಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಾವರದ ಮೂಲಕ ಶಬರಿಮಲೆಗೆ ಹೊರಟಿದ್ದಾರೆ. ಈ ಶ್ವಾನ ತಮ್ಮೊಂದಿಗೆ ಪ್ರಯಾಣ ಬೆಳಸಿದಾಗಿನಿಂದ ನಮಗೆ ತೊಂದರೆಗಳು ಬರಲಿಲ್ಲ, ಎಲ್ಲವೂ ಒಳಿತಾಗಿದೆ. ಈ ಶ್ವಾನಕ್ಕೆ ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಮಾಡಿಸಿ ಅಲ್ಲಿಂದ ವಾಹನದ ಮೂಲಕ ಮರಳಿ ಧಾರವಾಡಕ್ಕೆ ಬಿಡುತ್ತೇವೆ ಎಂದು ಶ್ವಾನದ ಜೊತೆಯಾದ ಗುರುಸ್ವಾಮಿನಾಗನಗೌಡ ಹಾಗೂ ಮಂಜುಸ್ವಾಮಿ ತಿಳಿಸಿದರು. ಇದನ್ನೂ ಓದಿ: ಸಿದ್ದು ಆಪ್ತರಿಂದ ಸಿದ್ದರಾಮಯ್ಯ ಮುಂದಿನ ಸಿಎಂ ಜಪ

    Live Tv
    [brid partner=56869869 player=32851 video=960834 autoplay=true]

  • ಉಡುಪಿಯ ಅಯ್ಯಪ್ಪ ಶಿಬಿರದಲ್ಲಿ ಮಾಲಾಧಾರಿಗೆ ಆವೇಶ

    ಉಡುಪಿಯ ಅಯ್ಯಪ್ಪ ಶಿಬಿರದಲ್ಲಿ ಮಾಲಾಧಾರಿಗೆ ಆವೇಶ

    ಉಡುಪಿ: ಕಟ್ಟುನಿಟ್ಟಿನ ವ್ರತಾಚರಣೆಯನ್ನು ಮಾಡಿ ಶಬರಿಮಲೆಗೆ ಹೊರಟ ಅಯ್ಯಪ್ಪ ಮಾಲಾಧಾರಿಯೊಬ್ಬರಿಗೆ ಉಡುಪಿಯಲ್ಲಿ ಮಣಿಕಂಠನಿಗೆ ವಿಶೇಷ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಮೈಮೇಲೆ ಆವೇಶ ಬಂದಿರುವ ಘಟನೆ ನಡೆದಿದ್ದು, ಗುರುಸ್ವಾಮಿಗಳು ತೀರ್ಥ ಮತ್ತು ಭಸ್ಮ ಸಂಪ್ರೋಕ್ಷಣೆ ಮಾಡಿಸಿದ್ದಾರೆ.

    ಉಡುಪಿಯ ಕಸ್ತೂರಬಾ ನಗರದಲ್ಲಿ ಮಣಿಕಂಠನಿಗೆ ಪೂಜೆ ನಡೆಯುತ್ತಿತ್ತು. ಆ ವೇಳೆಗೆ ಅಯ್ಯಪ್ಪ ಸ್ವಾಮಿಯ ಭಜನೆ ಮಾಡುತ್ತಿದ್ದ ಮಾಲಾಧಾರಿಯೊಬ್ಬರು ಆವೇಶಭರಿತರಾಗಿದ್ದಾರೆ. ಭಕ್ತರ ಗುಂಪಿನಲ್ಲಿದ್ದ ಮಾಲಾಧಾರಿಗೆ ಕೆಲಕಾಲ ಮೈಮೇಲೆ ಆವೇಶ ಬಂದಿದ್ದು, ಗುರುಸ್ವಾಮಿಗಳು ತೀರ್ಥ ಪ್ರೋಕ್ಷಣೆ ಮಾಡಿಸಿದ ನಂತರ ಸಹಜ ಸ್ಥಿತಿಗೆ ಬಂದಿದ್ದಾರೆ.

    ಮುಂಬೈಯ ಶ್ರೀ ಧರ್ಮಸ್ಥಳ ಅಯ್ಯಪ್ಪ ಭಕ್ತವೃಂದ ಕೊರೊನಾ ಸಂಕಟದ ನಡುವೆ ಶಬರಿಮಲೆ ಯಾತ್ರೆ ಮಾಡುತ್ತಿದೆ. ಈ ಶಿಬಿರದಲ್ಲಿ 67 ಮಾಲಾಧಾರಿಗಳಿದ್ದು, ಕಳೆದ 40 ವರ್ಷದಿಂದ ಯಾತ್ರೆ ಮಾಡುತ್ತಿದ್ದಾರೆ. ತಂಡದಲ್ಲಿ ಕರ್ನಾಟಕದ ಕರಾವಳಿ ಪ್ರದೇಶದವರು ಮತ್ತು ಮಹಾರಾಷ್ಟ್ರದವರು ಇದ್ದಾರೆ.

    ಹೋಟೆಲ್, ಬ್ಯಾಂಕ್ ಸೇರಿದಂತೆ ಬೇರೆ ಬೇರೆ ಉದ್ಯಮ ಮಾಡುವ ಗೆಳೆಯರ ತಂಡ ಪ್ರತಿವರ್ಷ ಯಾತ್ರೆಯನ್ನು ಮಾಡುತ್ತಿದ್ದಾರೆ. ಮುಂಬೈನಿಂದ ರೈಲು ಮೂಲಕ ಬಂದ ಅಯ್ಯಪ್ಪ ಮಾಲಾಧಾರಿಗಳು, ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಮಾಡಿ ಉಡುಪಿಯ ಕಸ್ತೂರ್‌ಬಾ ನಗರದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಕೊರೊನಾ

    ಪೂಜೆಯ ಸಂದರ್ಭ ಸ್ಥಳೀಯರು ವೃತಾಚರಣೆಯನ್ನು ಕೈಗೊಂಡು ಮುಂಬೈನ ತಂಡದ ಜೊತೆ ಇರುಮುಡಿ ಕಟ್ಟಿ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಗುರುಸ್ವಾಮಿಗಳಿಂದ ವಿಶೇಷ ಪೂಜೆ ಹಾಗೂ ಆರತಿ ಸೇವೆ ನಡೆಯಿತು.

    ಕೊರೊನಾ ಮಾರ್ಗಸೂಚಿ ಇರುವುದರಿಂದ ಶಬರಿಮಲೆಯಲ್ಲಿ ಪ್ರತಿದಿನ ಸುಮಾರು 30 ಸಾವಿರ ಭಕ್ತರಿಗೆ ಮಾತ್ರ ದೇವರ ದರ್ಶನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೆ ಮಕರ ಸಂಕ್ರಾಂತಿ ಜ್ಯೋತಿಯ ಸಂದರ್ಭ ಸರ್ಕಾರ ಯಾವೆಲ್ಲ ನಿಯಮಗಳನ್ನು ರೂಪಿಸುತ್ತದೆ ಎಂಬ ಬಗ್ಗೆ ಅಯ್ಯಪ್ಪ ಭಕ್ತರಲ್ಲಿ ಕುತೂಹಲ ಇದೆ. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

  • 201 ಬಾರಿ ಶಬರಿಮಲೆ ಏರಿದ ಅಯ್ಯಪ್ಪನ ಪರಮಭಕ್ತ

    201 ಬಾರಿ ಶಬರಿಮಲೆ ಏರಿದ ಅಯ್ಯಪ್ಪನ ಪರಮಭಕ್ತ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಯ್ಯಪ್ಪ ಭಕ್ತರೊಬ್ಬರು ಬರೋಬ್ಬರಿ 201 ಬಾರಿ ಅಯ್ಯಪ್ಪನ ಶಬರಿಮಲೆಯೇರಿ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಅಯ್ಯಪ್ಪನ ಭಕ್ತಿಯ ಸಂಕೇತವಾಗಿ ತನ್ನೂರಿನಲ್ಲಿ ಅಯ್ಯಪ್ಪ ಮಂದಿರ ಕಟ್ಟಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಡ್ಡಂಗಾಯದ ಶಿವಪ್ರಸಾದ್ ಎಂಬವರು ಅಯ್ಯಪ್ಪ ಸ್ವಾಮಿಯ ಪರಮ ಭಕ್ತ. ವೃತ್ತಿಯಲ್ಲಿ ಪುತ್ತೂರು ತಾಲೂಕು ಪಂಚಾಯತ್‍ನ ಪ್ರಭಾರ ವ್ಯವಸ್ಥಾಪಕರಾಗಿರುವ 35 ವರ್ಷದ ಶಿವಪ್ರಸಾದ್ ಈ ಹಿಂದೆ ಅಯ್ಯಪ್ಪ ದರ್ಶನ ಮಾಡಿದ್ದರು. ಬಳಿಕ ಶಬರಿಮಲೆ ಯಾತ್ರೆ ಮಾಡುತ್ತಿದ್ದು, 2004ರಲ್ಲಿ ಯಾತ್ರೆ ಕೈಗೊಂಡಾಗ ಇನ್ನು 48 ಬಾರಿ ಮಾಲಾಧಾರಿಯಾಗಿ ಶಬರಿಮಲೆಗೆ ಬರುತ್ತೇನೆ ಎಂದು ಸಂಕಲ್ಪ ಮಾಡಿದ್ದರು.

    2008ರಲ್ಲಿ ಸಂಕಲ್ಪ ಪೂರೈಸಿದರೂ ನಂತರ ಅಯ್ಯಪ್ಪನನ್ನು ನೋಡದೆ ಇರಲು ಮನಸಾಗದೇ ಪ್ರತಿ ತಿಂಗಳು ಶಬರಿಮಲೆ ಯಾತ್ರೆ ಕೈಗೊಂಡು ಕಳೆದ ವಾರ ಒಟ್ಟು 201 ಬಾರಿ ಶಬರಿಮಲೆ ಯಾತ್ರೆ ಯಶಸ್ವಿಯಾಗಿ ಮುಗಿಸಿದ್ದಾರೆ. ಪ್ರತಿ ತಿಂಗಳು ಸಂಕ್ರಮಣ ಆಸುಪಾಸಿನ ಶನಿವಾರ ಯಾತ್ರೆಗೆ ತೆರಳುವ ಇವರು ಅದಕ್ಕೂ ಮುನ್ನ 12 ದಿನ ಮಾಲಾಧಾರಿಗಳಾಗಿ ಇರುತ್ತಾರೆ. ಅಲ್ಲದೇ ಗುರುಸ್ವಾಮಿಯಾಗಿರುವ ಇವರು ಇತರ ಸ್ವಾಮಿಗಳನ್ನು ಜೊತೆಗೆ ಕರೆದುಕೊಂಡು ಹೋಗಿ ಸೋಮವಾರ ಮತ್ತೆ ಕಛೇರಿಗೆ ಹಾಜರಾಗುತ್ತಾರೆ.

    ಅಲ್ಲದೆ ಊರವರ ಹಾಗೂ ಸಹ ಸ್ವಾಮಿಗಳ ಸಹಕಾರದಿಂದ 2018ರಲ್ಲಿ 26 ಲಕ್ಷ ವೆಚ್ಚದ ಅಯ್ಯಪ್ಪ ಮಂದಿರ ನಿರ್ಮಿಸಿದ್ದಾರೆ. ಅಯ್ಯಪ್ಪ ದೇಹದಲ್ಲಿ ಆರೋಗ್ಯ ಶಕ್ತಿ ಎಲ್ಲಿಯವರೆಗೆ ನೀಡುತ್ತಾನೋ ಅಲ್ಲಿಯವರೆಗೂ ಶಬರಿ ಮಲೆ ಯಾತ್ರೆ ಕೈಗೊಳ್ಳುತ್ತೇನೆ ಎಂದು ಶಿವಪ್ರಸಾದ್ ಹೇಳಿದ್ದಾರೆ.

    ಅಯ್ಯಪ್ಪನ ಯಾತ್ರೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ ಆದರೂ ಪ್ರತಿ ವರ್ಷ ಕೋಟ್ಯಂತರ ಮಾಲಾಧಾರಿಗಳು ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಆದರೆ ಶಿವಪ್ರಸಾದ್ ಅವರಂತೆ ಯಾರೂ ಇಷ್ಟೊಂದು ಬಾರಿ ಶಬರಿಮಲೆ ಯಾತ್ರೆ ಕೈಗೊಂಡಿರುವುದು ಅಸಾಧ್ಯವಾಗಿದ್ದು, ಇವರು ದಾಖಲೆ ನಿರ್ಮಿಸಿದ್ದಾರೆ.

  • ಅಯ್ಯಪ್ಪ ಭಕ್ತರಿಗಾಗಿ ಅನ್ನದಾನ ಏರ್ಪಡಿಸಿ ಊಟ ಬಡಿಸಿದ ಶಿವಣ್ಣ

    ಅಯ್ಯಪ್ಪ ಭಕ್ತರಿಗಾಗಿ ಅನ್ನದಾನ ಏರ್ಪಡಿಸಿ ಊಟ ಬಡಿಸಿದ ಶಿವಣ್ಣ

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಯ್ಯಪ್ಪ ಭಕ್ತರಿಗಾಗಿ ಅನ್ನದಾನ ಏರ್ಪಡಿಸಿ ಸ್ವತಃ ತಾವೇ ಊಟ ಬಡಿಸುವ ಮೂಲಕ ಅಯ್ಯಪ್ಪ ಸ್ವಾಮಿಯ ಭಕ್ತಿ ಮೆರೆದಿದ್ದಾರೆ.

    ಪ್ರತಿ ವರ್ಷ ಶಿವರಾಜ್‍ಕುಮಾರ್ ಅವರು ಅಯ್ಯಪ್ಪ ಮಾಲೆ ಧರಿಸಿ, ಶಬರಿಮಲೆಗೆ ಹೋಗುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ವೈಯಕ್ತಿಕ ಕಾರಣಗಳಿಂದ ಶಿವಣ್ಣ ಶಬರಿಮಲೆಗೆ ಹೋಗುತ್ತಿಲ್ಲ. ಶಬರಿಮಲೆಗೆ ಹೋಗದಿದ್ದರೂ ಶಿವಣ್ಣ ಪ್ರತಿ ವರ್ಷ ಅಪ್ಪಯ್ಯ ಭಕ್ತರ ಸೇವೆಯನ್ನು ಮಾಡುತ್ತಿದ್ದಾರೆ.

    ಶಿವಣ್ಣ ಪ್ರತಿ ವರ್ಷ ಅಯ್ಯಪ್ಪ ಮಾಲೆ ಧರಿಸಿದ ಭಕ್ತರಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದಾರೆ. ಹಾಗೆಯೇ ಬುಧವಾರ ಕೂಡ ಅಯ್ಯಪ್ಪ ಭಕ್ತರಿಗಾಗಿ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ವೇಳೆ ಅವರು ಸ್ವತಃ ತಾವೇ ಭಕ್ತರಿಗೆ ಊಟವನ್ನು ಬಡಿಸಿದ್ದಾರೆ. ಜೊತೆಗೆ ಭಕ್ತರಿಗೆ ದೇವರ ಅನುಗ್ರಹ ಸಿಗಲಿ ಎಂದು ಹಾರೈಸಿದ್ದಾರೆ.

    ಅಭಿಮಾನಿಗಳು ಶಿವಣ್ಣ ಊಟ ಬಡಿಸುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಶಿವಣ್ಣ ತಮ್ಮ ಪತ್ನಿ ಗೀತಾ ಅವರ ಜೊತೆ ತಿರುಮಲ ತಿರುಪತಿ ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬಂದಿದ್ದರು.

  • ಅಯ್ಯಪ್ಪನ ದರ್ಶನ ಪಡೆದು ವಾಪಸ್ಸಾಗುವಾಗ ಅಪಘಾತ – ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ

    ಅಯ್ಯಪ್ಪನ ದರ್ಶನ ಪಡೆದು ವಾಪಸ್ಸಾಗುವಾಗ ಅಪಘಾತ – ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ

    ಚಿಕ್ಕಬಳ್ಳಾಪುರ: ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ತೆರಳಿ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿದೆ.

    ಅಪಘಾತದಲ್ಲಿ ತಲೆಗೆ ಗಂಭೀರವಾದ ಗಾಯವಾಗಿದ್ದ ಪರಿಣಾಮ ರವೀಂದ್ರ(52) ಮೃತಪಟ್ಟಿದ್ದಾರೆ. ಸಂಜಯ್(38), ಪ್ರವೀಣ್ (30), ಮಹೇಂದ್ರ (30) ಹಾಗೂ ಅನಿಲ್ (28) ಗಾಯಗೊಂಡಿದ್ದು, ದೇವನಹಳ್ಳಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಆವತಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-7ರಲ್ಲಿ ಅಪಘಾತ ಸಂಭವಿಸಿದೆ. ಆವತಿ ಮೇಲ್ಸೆತುವೆ ಮೇಲಿಂದ ಕೆಳಗೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಬಿಟ್ಟು ರಸ್ತೆಯ ಎಡಬದಿಗೆ ನುಗ್ಗಿದೆ.

    ಈ ವೇಳೆ ಹೆದ್ದಾರಿಯಿಂದ 100 ಮೀಟರ್ ದೂರ ಸಾಗಿರುವ ಕಾರು ಮರಗಳಿಗೆ ಡಿಕ್ಕಿ ಹೊಡೆದು ಮುನ್ನುಗಿದ್ದ ಪರಿಣಾಮ ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದವರು ತೆಲಂಗಾಣದ ಹೈದರಾಬಾದ್ ಮೂಲದವರು ಎಂದು ತಿಳಿದುಬಂದಿದೆ.

    ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಯ್ಯಪ್ಪ ಮಾಲೆ ಧರಿಸಿದ ಮುಸ್ಲಿಂ ಯುವಕ

    ಅಯ್ಯಪ್ಪ ಮಾಲೆ ಧರಿಸಿದ ಮುಸ್ಲಿಂ ಯುವಕ

    ಯಾದಗಿರಿ: ಮುಸ್ಲಿಂ ಯುವಕನೊಬ್ಬ ಅಯ್ಯಪ್ಪ ಮಾಲೆ ಧರಿಸುವ ಮೂಲಕ ಭಾವೈಕ್ಯತೆಯನ್ನು ಎತ್ತಿ ತೋರಿಸಿದ್ದಾರೆ. ನಿಷ್ಠೆ ಮತ್ತು ಶ್ರದ್ಧೆಯಿಂದ ಅಯ್ಯಪ್ಪ ಮಾಲಾಧಾರಿಗಳು ಪಾಲಿಸುವ ನಿಯಮಗಳನ್ನು ಪಾಲಿಸುವುದರ ಮೂಲಕ ಇಡೀ ರಾಷ್ಟ್ರಕ್ಕೆ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರಿದ್ದಾರೆ.

    ಮಹಾರಾಷ್ಟ್ರ ಮೂಲದ ಯುವಕ ಬಾಬ್ಲು ಅಫಸರ್ ಡಾಂಗೆ ಅಯ್ಯಪ್ಪ ಮಾಲೆ ತೊಟ್ಟ ಮುಸ್ಲಿಂ ಯುವಕ. ಬಾಬ್ಲು ಸದ್ಯ ಯಾದಗಿರಿ ಜಿಲ್ಲೆಯ ಗುರುಮಠಕಲ್‍ನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಹಿಂದೂಗಳ ಜೊತೆ ಹೆಚ್ಚು ಒಡನಾಟ ಹೊಂದಿರುವ ಬಾಬ್ಲುಗೆ ಅಯ್ಯಪ್ಪ ಮಾಲೆ ಧರಿಸಲು ಅವರ ಕಾರು ಮಾಲೀಕ ಪ್ರೇರಣೆ.

    ತಮ್ಮ ಧರ್ಮದ ಅಲ್ಲಾನನ್ನು ಆರಾಧಿಸುವುದರ ಜೊತೆಗೆ ಬಾಬ್ಲು ಅಯ್ಯಪ್ಪನ ಪರಮ ಭಕ್ತ. ಅಲ್ಲಾನ ಜೊತೆ ಹಿಂದೂ ದೇವರ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ. ಬಾಬ್ಲು ಅಫಸರ್ ಇದೇ ಮೊದಲನೇ ಬಾರಿ ಅಯ್ಯಪ್ಪ ಮಾಲಾಧಾರಣೆ ಮಾಡಿದ್ದು, 41 ದಿನಗಳ ಕಾಲ ಮಣಿಕಂಠನ ವ್ರತ ಆಚರಣೆ ಮಾಡಬೇಕಾಗುತ್ತದೆ. ಹೀಗಾಗಿ ಗುರುಮಠಕಲ್ ಪಟ್ಟಣದಲ್ಲಿರುವ ಅಯ್ಯಪ್ಪನ ಮಂದಿರದಲ್ಲಿ ಎಲ್ಲಾ ಮಾಲಾಧಾರಿಗಳ ಜೊತೆಗೆ ಬೆಳಗ್ಗೆ ಮತ್ತು ಸಾಯಂಕಾಲ ವಿಶೇಷ ಪೂಜೆಯ ಮೂಲಕ ಅಯ್ಯಪ್ಪನ ಸ್ಮರಣೆ ಮಾಡುತ್ತಿದ್ದಾರೆ.

  • ಶಬರಿಮಲೆಗೆ ಹೋಗ್ತಿದ್ದ ಮಹಿಳೆ ಮೇಲೆ ಪೆಪ್ಪರ್ ಸ್ಪ್ರೇ

    ಶಬರಿಮಲೆಗೆ ಹೋಗ್ತಿದ್ದ ಮಹಿಳೆ ಮೇಲೆ ಪೆಪ್ಪರ್ ಸ್ಪ್ರೇ

    ತಿರುವನಂತಪುರಂ: ಶಬರಿಮಲೆಗೆ ಹೋಗುತ್ತಿದ್ದ ಮಹಿಳೆಯರ ಮೇಲೆ ವ್ಯಕ್ತಿಯೊಬ್ಬ ಪೆಪ್ಪರ್ ಸ್ಪ್ರೇ ಸಿಂಪಡಿಸಿದ ಘಟನೆ ಕೇರಳದ ಕೊಚ್ಚಿ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಡೆದಿದೆ. ಇದೀಗ ಮಹಿಳೆಯರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ ಹೋರಾಟಗಾರ್ತಿ ಬಿಂದು ಅಮ್ಮಿಣಿ ತಮ್ಮ ಮುಖವನ್ನು ಮುಚ್ಚಿಕೊಂಡು ಹಲ್ಲೆ ಮಾಡಿದ ವ್ಯಕ್ತಿಯಿಂದ ದೂರ ಓಡಿ ಹೋಗುತ್ತಿದ್ದಾರೆ. ಹಲ್ಲೆಯಿಂದ ಅಮ್ಮಿಣಿಗೆ ಗಾಯವಾಗುತ್ತಿದ್ದಂತೆ ವ್ಯಕ್ತಿ ಕಾಂಪೌಂಡ್ ಹಾರಿ ಅಲ್ಲಿಂದ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಅಮ್ಮಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಹೋರಾಟಗಾರ್ತಿ ತೃಪ್ತಿ ದೇಸಾಯಿ ಸೇರಿದಂತೆ ಐವರು ಮಹಿಳೆಯರು ಇಂದು ಶಬರಿಮಲೆಗೆ ಪ್ರವೇಶ ಮಾಡಲು ನಿರ್ಧರಿಸಿದ್ದರು.

    ಇಂದು ಬೆಳಗ್ಗೆ ತೃಪ್ತಿ ದೇಸಾಯಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಅವರು, “ಇಂದು ಸಂವಿಧಾನದ ದಿನವಾಗಿದ್ದು, ಇಂದೇ ನಾವು ಶಬರಿಮಲೆ ಪ್ರವೇಶಿಸುತ್ತೇವೆ. ನಾವು ದೇವಾಲಯ ಪ್ರವೇಶಿಸುವುದನ್ನು ರಾಜ್ಯ ಸರ್ಕಾರದಿಂದ ಅಥವಾ ಪೊಲೀಸರಿಂದ ತಡೆಯಲು ಸಾಧ್ಯವಿಲ್ಲ. ನಮಗೆ ಭದ್ರತೆ ಸಿಕ್ಕರೂ ಸಿಗದಿದ್ದರೂ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ ಬಳಿಕವೇ ನಾನು ಕೇರಳವನ್ನು ಬಿಟ್ಟು ಹೋಗುತ್ತೇನೆ” ಎಂದು ಪ್ರತಿಕ್ರಿಯಿಸಿದರು.

    ನನ್ನ ಚಲನವಲನದ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನನ್ನ ಮೇಲೆ ಹಲ್ಲೆ ನಡೆಸುವವರು ನನ್ನ ಕಾರಿನ ನಂಬರ್ ಗಮನಿಸಿದ್ದಾರೆ ಎಂದು ತೃಪ್ತಿ ಆರೋಪಿಸಿದ್ದಾರೆ. ಪುಣೆ ಮೂಲದ ಹೋರಾಟಗಾರ್ತಿ ತೃಪ್ತಿ ಕಳೆದ ವರ್ಷ ಕೂಡ ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದರು. ಆದರೆ ಆಗ ಹೋರಾಟಗಾರರು ಅವರನ್ನು ತಡೆದಿದ್ದರು.

  • ಅಯ್ಯಪ್ಪ ಹೆಣ್ಣುಮಕ್ಕಳಿಗೆ ಹುಟ್ಟಿಲ್ಲ, ಅವನು ಗಂಡಸರಿಗೆ ಹುಟ್ಯಾನ: ಮಹಿಳಾ ಹೋರಾಟಗಾರ್ತಿ

    ಅಯ್ಯಪ್ಪ ಹೆಣ್ಣುಮಕ್ಕಳಿಗೆ ಹುಟ್ಟಿಲ್ಲ, ಅವನು ಗಂಡಸರಿಗೆ ಹುಟ್ಯಾನ: ಮಹಿಳಾ ಹೋರಾಟಗಾರ್ತಿ

    ಧಾರವಾಡ: ಅಯ್ಯಪ್ಪ ಹೆಣ್ಣಮಕ್ಕಳಿಗೆ ಹುಟ್ಟಿಲ್ಲ, ಅವನು ಗಂಡಸರಿಗೆ ಹುಟ್ಟಿದ್ದಾನೆ. ಅದಕ್ಕಾಗಿ ಹೆಣ್ಣನ್ನು ಅಯ್ಯಪ್ಪ ದೇವಾಸ್ಥಾನಕ್ಕೆ ಪ್ರವೇಶಿಸಲು ಬಿಡೋದಿಲ್ಲವೇನು ಎಂದು ಮಹಿಳಾ ಹೋರಾಟಗಾರ್ತಿಯೊಬ್ಬರು ಪ್ರಶ್ನಿಸಿ ಅಯ್ಯಪ್ಪ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಕಲಬುರಗಿ ಮೂಲದ ಹೋರಾಟಗಾರ್ತಿ ಮೀನಾಕ್ಷಿ ಬಾಳಿ, ಅಯ್ಯಪ್ಪ ಸ್ವಾಮಿ ದೇವರು ಹೆಣ್ಣಿಗೆ ಹುಟ್ಟಿಲ್ಲ, ಗಂಡಸರಿಗೆ ಹುಟ್ಟಿದ್ದು. ಅದಕ್ಕೆ ನಮ್ಮನ್ನು ಅಯ್ಯಪ್ಪ ದೇವಸ್ಥಾನಕ್ಕೆ ಬಿಡೊಲ್ಲವೇನು? ಎಲ್ಲರಿಗೂ ಜನ್ಮ ನೀಡೋದು ತಾಯಿ. ಗಂಡಸರಿಗೆ ಮಗು ಹುಟ್ಟೊದಕ್ಕೆ ಸಾಧ್ಯವೇನು? ತೃತೀಯ ಲಿಂಗಿಗಳು, ಕಿನ್ನರಿಯರಿಗೆ ಕೇಳಿ ನೋಡಿ, ಅವರು ನೀವೇಷ್ಟು ಬೇಕೂಫ್ ಅಂತ ಹೇಳ್ತಾರೆ ಎಂದು ಪ್ರಶ್ನಿಸಿದ್ದಾರೆ.

    ನಾವು ಮಹಿಳೆಯರು ಒಂದಾಗಿದ್ದರೆ ನಿಮ್ಮ ವಿರುದ್ಧ ಕುಸ್ತಿ ಮಾಡಲು ನಿಂತಿಲ್ಲ. ನಿಮಗೆ ಬಡೆದು ಬುದ್ಧಿಹೇಳಲು ನಿಂತಿದ್ದೇವೆ. ನಾವು ನಿಮ್ಮ ಮನೆ ಒಳಗಿರುವ ದೇವರ ಕೋಣೆಗೆ ಬರ್ತೀವಿ ಅಂತ ಹೇಳಿಲ್ಲ. ಮಠದೊಳಗೆ ಬರ್ತೀವಿ ಅಂತ ಹೇಳಿಲ್ಲ. ಯಾವುದು ಸಾರ್ವಜನಿಕ ದೇವಸ್ಥಾನ ಇದೆ ಅಲ್ಲಿ ಬರ್ತೀವಿ ಅಂತ ಹೇಳಿದ್ದೇವೆ. ನಮ್ಮ ರೊಕ್ಕ ಮೈಲಿಗೆ ಆಗೋದಿಲ್ಲ. ಮಕ್ಕಳೇ ನಮಗೆ ಮೈಲಿಗೆ ಆಗುತ್ತಾ ಎಂದು ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧ ಅಂತ ಹೋರಾಡುವ ಪುರುಷರಿಗೆ ಪ್ರಶ್ನಿಸಿದ್ದಾರೆ.

    ಮಹಿಳಾ ದಿನಾಚರಣೆ ಅಂಗವಾಗಿ ಧಾರವಾಡದಲ್ಲಿ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ವೇಳೆ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಮೀನಾಕ್ಷಿ ಬಾಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ನಿಷೇಧ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮತ್ತೆ ಅಯ್ಯಪ್ಪನ ದರ್ಶನಕ್ಕೆ ಬಂದ್ರು ಇಬ್ಬರು ಮಹಿಳೆಯರು- ಬೆಳ್ಳಂಬೆಳಗ್ಗೆ ಪ್ರತಿಭಟನೆ ಶುರು

    ಮತ್ತೆ ಅಯ್ಯಪ್ಪನ ದರ್ಶನಕ್ಕೆ ಬಂದ್ರು ಇಬ್ಬರು ಮಹಿಳೆಯರು- ಬೆಳ್ಳಂಬೆಳಗ್ಗೆ ಪ್ರತಿಭಟನೆ ಶುರು

    ತಿರುವನಂತಪುರ: ಇಂದು ಬೆಳ್ಳಂಬೆಳಗ್ಗೆ ಮತ್ತೆ ಶಬರಿಮಲೆ ಪ್ರವೇಶಿಸಲು ಮುಂದಾದ ಇಬ್ಬರು ಮಹಿಳೆಯರನ್ನು ಭಕ್ತಾಧಿಗಳು ತಡೆದು ಶಬರಿಮಲೆ ದೇವಾಲಯದ ಬಳಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.

    ಬೆಳಗ್ಗೆ ಪಂಪಾ ಬೇಸ್ ಕ್ಯಾಂಪ್ ದಾಟಿಕೊಂಡು ಸಾಗುತ್ತಿದ್ದ ಮಹಿಳೆಯರನ್ನ ಪ್ರತಿಭಟನಾಕಾರರು ಸುತ್ತುವರೆದು, ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಿಸದಂತೆ ತಡೆದಿದ್ದಾರೆ. ಒಟ್ಟು 9 ಮಹಿಳೆಯರ ಗುಂಪು ಶಬರಿಮಲೆ ದೇವಾಲಯ ಪ್ರವೇಶಿಸಲು ಬಂದಿದ್ದರು. ಇವರಲ್ಲಿ 30 ವರ್ಷ ವಯಸ್ಸಿನ ಈ ಇಬ್ಬರು ಮಹಿಳೆಯರು ಕೂಡ ಗುಂಪಿನಲ್ಲಿದ್ದರು ಎಂದು ವರದಿಯಾಗಿದೆ.

    ಮೊದಲು ಈ ಇಬ್ಬರು ಮಹಿಳೆಯರನ್ನು 6-7 ಪ್ರತಿಭಟನಾಕಾರರು ಬೇಸ್ ಕ್ಯಾಂಪ್ ಬಳಿ ತಡೆದಿದ್ದಾರೆ. ಬಳಿಕ ಈ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಸುಮಾರು 2 ಸಾವಿರ ಪ್ರತಿಭಟನಾಕಾರರು ಶಬರಿಮಲೆ ಬೆಟ್ಟದ ಮೇಲೆ ಒಟ್ಟಾಗಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಅವರನ್ನು ತಡೆಯಲು ಬಂದ ಪೊಲೀಸರ ಬಳಿಯೂ ಪ್ರತಿಭಟನಾಕಾರರು ಜಗಳ ಮಾಡಿದ್ದಾರೆ. ಸದ್ಯ ಇಬ್ಬರು ಮಹಿಳೆಯರಿಗೆ ಪೊಲೀಸರು ಭದ್ರತೆ ಒದಗಿಸಿ ಪೊಲೀಸ್ ವಾಹನದಲ್ಲಿಯೇ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಈ ಕುರಿತು ಕೇರಳ ಮೂಲದ ಓರ್ವ ಮಹಿಳೆ ಮಾತನಾಡಿ, ನನಗೆ ಹಲವರು ಜೀವಬೆದರಿಕೆಗಳನ್ನು ಹಾಕಿದ್ದಾರೆ. ಅವರು ನನ್ನನ್ನು ಭಯಪಡಿಸಿದರು ನಾನು ಖಂಡಿತ ವಾಪಸ್ ಹೋಗುವುದಿಲ್ಲ. ಅಲ್ಲಿ ಅಯ್ಯಪ್ಪ ಸ್ವಾಮಿ ಇದ್ದಾನೆ. ಮಹಿಳೆಯರು ದೇವಾಲಯ ಪ್ರವೇಶಿಸಲು ಅಯ್ಯಪ್ಪನಿಗೇ ಆಕ್ಷೇಪವಿಲ್ಲ. ಆದ್ರೆ ಈ ಜನರು ಯಾಕೆ ಮಹಿಳೆಯರ ವಿರುದ್ಧ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ಅಷ್ಟೇ ಅಲ್ಲದೆ ಕಳೆದ ತಿಂಗಳು ಭಾರಿ ಸುದ್ದಿಯಾಗಿದ್ದ ಶಬರಿಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯರ ಪೈಕಿ ಒಬ್ಬರಾದ ಕನಕದುರ್ಗ ಎಂಬ ಮಹಿಳೆ ಎರಡು ವಾರದ ಬಳಿಕ ಮನೆಗೆ ವಾಪಾಸ್ ತೆರಳಿದ್ದರು. ಸೋಮವಾರದಂದು ಮನೆಗೆ ತೆರೆಳಿದ್ದ ಕನಕದುರ್ಗ ಅವರು ಶಬರಿಮಲೆ ಪ್ರವೇಶಿಸಿದಕ್ಕೆ ಅವರ ಗಂಡನ ಮನೆಯವರು ಆಕೆಯ ಮೇಲೆ ಹಲ್ಲೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv