Tag: Shabana

  • ಶಬಾನಾ ಅಜ್ಮಿ ಜೊತೆ 87ರ ನಟ ಧರ್ಮೇಂದ್ರ ಲಿಪ್‌ಲಾಕ್

    ಶಬಾನಾ ಅಜ್ಮಿ ಜೊತೆ 87ರ ನಟ ಧರ್ಮೇಂದ್ರ ಲಿಪ್‌ಲಾಕ್

    ಬಾಲಿವುಡ್ (Bollywood) ಖ್ಯಾತ ನಟ ಧಮೇಂದ್ರ (Dharmendra) ಅವರು ತಮ್ಮ ಇಬ್ಬರೂ ಪತ್ನಿಯರನ್ನ ಬಿಟ್ಟು ನಟಿ ಶಬಾನಾ (Shabana) ಜೊತೆ ಲಿಪ್ ಲಾಕ್ ಮಾಡಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಏನಿದು ಹೊಸ ಕಥೆ, ಇಲ್ಲಿದೆ ಡಿಟೈಲ್ಸ್.

    ಮೊದಲ ಪತ್ನಿ ಜೊತೆ ಧಮೇಂದ್ರ ಅವರಿಗೆ ಡಿವೋರ್ಸ್ (Divorce) ಆಗಿದೆ. ಬಳಿಕ ಹೇಮಾ ಮಾಲಿನಿ (Hema Malini) ಜೊತೆ ನಟ ಜೀವನ ಸಾಗಿಸುತ್ತಿದ್ದರು. ಇದೀಗ ಹೇಮಾ ಮಾಲಿನಿ ಅವರ ದಾಂಪತ್ಯ ಸರಿ ಇಲ್ಲದೇ ಇರೋದು ಸಾಕಷ್ಟು ಸಮಯದಿಂದ ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಮತ್ತೊಬ್ಬ ನಟಿ ಶಬಾನಾ ಜೊತೆ ಧರ್ಮೇಂದ್ರ ಲಿಪ್ ಲಾಕ್ ಮಾಡುವ ಮೂಲಕ ಪಡ್ಡೆಹುಡುಗರು ಹುಬ್ಬೇರಿಸುವಂತೆ ಮಾಡಿದ್ದಾರೆ.

    ಅಷಕ್ಕೂ ಅವರು ಲಿಪ್‌ಲಾಕ್ ಮಾಡಿರೋದು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ (Rocky Aur Rani Ki Prem Kahani) ಸಿನಿಮಾದಲ್ಲಿ. 72 ವಯಸ್ಸಿನ ಶಬಾನಾ ಜೊತೆ ಲವ್ ರೊಮ್ಯಾನ್ಸ್ ಮಾಡಿದ್ದಾರೆ. ಈ ಬಗ್ಗೆ ನಟ ರಿಯಾಕ್ಟ್ ಕೂಡ ಮಾಡಿದ್ದಾರೆ. ಶಬಾನಾ ಮತ್ತು ನಾನು ಲಿಪ್ ಲಾಕ್ ದೃಶ್ಯದಿಂದ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದೇವೆ. ಪ್ರೇಕ್ಷಕರು ಈ ದೃಶ್ಯ ನೋಡಿ ಹೊಗಳಿದ್ದಾರೆ. ನಾನು ಜನರ ಬಗ್ಗೆ ಇಷ್ಟು ರೆಸ್ಪಾನ್ಸ್ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಅಮ್ಮನ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯ ಅಯ್ಯರ್

    ರಣ್‌ವೀರ್ ಸಿಂಗ್- ಆಲಿಯಾ (Alia Bhatt) ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಧಮೇಂದ್ರ ಅವರು ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾಗಾಗಿ ಲಿಪ್ ಲಾಕ್ ಮಾಡಿ ಗಮನ ಸೆಳೆದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳಕು ಇಂಪ್ಯಾಕ್ಟ್: ಸ್ವಾವಲಂಬಿ ಬದುಕು ಕಟ್ಟಿಕೊಂಡ ಅಂಗವಿಕಲ ದಂಪತಿ

    ಬೆಳಕು ಇಂಪ್ಯಾಕ್ಟ್: ಸ್ವಾವಲಂಬಿ ಬದುಕು ಕಟ್ಟಿಕೊಂಡ ಅಂಗವಿಕಲ ದಂಪತಿ

    ರಾಯಚೂರು: ಎಲ್ಲವೂ ಸರಿಯಿದ್ದರೂ ಬದುಕು ಕಟ್ಟಿಕೊಳ್ಳಲು ಎಷ್ಟೋ ಜನ ಪ್ರತಿನಿತ್ಯ ಪರದಾಡುತ್ತಲೇ ಇರುತ್ತಾರೆ. ಅಂತಹದರಲ್ಲಿ ಈ ದಂಪತಿ ಅಂಗವಿಕಲರು. ಇರಲು ಸ್ವಂತಃ ಸೂರಿಲ್ಲ, ಬದುಕಲು ಉದ್ಯೋಗವಿಲ್ಲ. ಆದರೂ ಮಗುವನ್ನ ಕಟ್ಟಿಕೊಂಡು ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಪುಟ್ಟ ಅಂಗಡಿ ನಡೆಸುತ್ತಿದ್ದ ದಂಪತಿ ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಬೆಳಕು ಕಾರ್ಯಕ್ರಮದಿಂದಾಗಿ ತಮ್ಮ ಸುಂದರ ಭವಿಷ್ಯದ ಕನಸು ಕಾಣುತ್ತಿದ್ದಾರೆ.

    ರಾಯಚೂರಿನ ತಾರನಾಥ ರಸ್ತೆ ಪ್ರದೇಶದಲ್ಲಿ ವಾಸವಿರುವ ಖಾಜಾ ಪಾಷಾ, ಶಬಾನಾ ಬೇಗಂ ದಂಪತಿ ಚಿಕ್ಕವಯಸ್ಸಿನಲ್ಲೇ ಪೋಲಿಯೋದಿಂದ ಕಾಲು ಕಳೆದುಕೊಂಡಿದ್ದಾರೆ. ಎರಡು ವರ್ಷದ ಹೆಣ್ಣು ಮಗು ಇರುವ ಅಂಗವಿಕಲ ದಂಪತಿಯ ಪುಟ್ಟ ಸಂಸಾರ 1,500 ರೂಪಾಯಿಯ ಬಾಡಿಗೆ ಮನೆಯಲ್ಲಿ ಸಾಗುತಿತ್ತು. ದಂಪತಿ ಮನೆ ಮುಂದೆ ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡು ಕಷ್ಟಕರವಾಗಿ ಜೀವನ ನಡೆಸುತ್ತಿದ್ದರು.

    ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಒಂದು ಅಂಗಡಿ ನೆರವಿಗಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು. ಈಗ ಬೆಳಕು ಟ್ರಸ್ಟ್ ದಂಪತಿಗೆ ವ್ಯಾಪಾರ ಮಾಡಲು ಸ್ವಂತ ಅಂಗಡಿಯ ವ್ಯವಸ್ಥೆ ಮಾಡಿಕೊಟ್ಟಿದೆ. ದಂಪತಿ ಅಂಗವಿಕಲರು ಆಗಿರುವುದರಿಂದ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಟಿನ್ ಶೆಡ್‍ನ್ನ ನಿರ್ಮಿಸಿಕೊಡಲಾಗಿದೆ. ರಾಯಚೂರು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಷಿರುದ್ದಿನ್ ಕಿರಾಣಿ ಅಂಗಡಿಗೆ ಬೇಕಾದ ದಿನಸಿ ಪದಾರ್ಥಗಳ ಸಹಾಯ ಮಾಡಿದ್ದಾರೆ.

    ಒಟ್ಟನಲ್ಲಿ ದುಡಿದು ತಿನ್ನಲು ಸಹಾಯಕ್ಕಾಗಿ ಹಂಬಲಿಸುತ್ತಿದ್ದ ಅಂಗವಿಕಲ ದಂಪತಿಗೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಸ್ವಂತಃ ಅಂಗಡಿಯನ್ನು ಪಡೆದುಕೊಂಡಿರುವ ದಂಪತಿ ಈಗ ಸ್ವಾಭಿಮಾನಿಗಳಾಗಿ ಬದುಕುವ ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=nzHgYXD2xno

  • ಅವಲಕ್ಕಿಯನ್ನ ಉಪ್ಪಿಟ್ಟು ಎಂದು ಕನ್‍ಫ್ಯೂಸ್ ಆಗಿ ಟ್ರೋಲ್ ಆದ ನಟಿ ಶಬಾನಾ ಅಜ್ಮಿ

    ಅವಲಕ್ಕಿಯನ್ನ ಉಪ್ಪಿಟ್ಟು ಎಂದು ಕನ್‍ಫ್ಯೂಸ್ ಆಗಿ ಟ್ರೋಲ್ ಆದ ನಟಿ ಶಬಾನಾ ಅಜ್ಮಿ

    ಮುಂಬೈ: ಹಿರಿಯ ನಟಿ ಶಬಾನಾ ಅಜ್ಮಿ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಫೋಟೋವನ್ನು ಪೋಸ್ಟ್ ಮಾಡಿ ಟ್ರೋಲ್‍ಗೆ ಒಳಗಾಗಿದ್ದಾರೆ. ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಹಾ (ಅವಲಕ್ಕಿ) ಬದಲು ಉಪ್ಮಾ(ಉಪ್ಪಿಟ್ಟು) ಎಂದು ಬರೆದಿದಕ್ಕೆ ಜನರು ಶಬಾನಾ ಅವರಿಗೆ ಕಾಲೆಳೆದಿದ್ದಾರೆ.

    ಇತ್ತೀಚೆಗೆ ಶಬಾನಾ ಫ್ಲಾರೇನ್ಸ್‍ನಲ್ಲಿ ಗುಜ್ಜು ಸಮುದಾಯದವರು ಮಾಡಿಕೊಟ್ಟ ಪೋಹಾ (ಅವಲಕ್ಕಿ)ವನ್ನು ತಿಂದು, ಆ ಫೋಟೋವನ್ನು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ “ಫ್ಲಾರೆನ್ಸ್‍ನಲ್ಲಿ ಕೇಟ್ಕಿ ತಿಂಡಿಗಾಗಿ ಉಪ್ಮಾ ಮಾಡಿಕೊಟ್ಟರು. ನನಗೆ ಇದು ತುಂಬಾ ಇಷ್ಟವಾಯ್ತು” ಎಂದು ಬರೆದು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದರು.

    ಅವಲಕ್ಕಿ ಮತ್ತು ಉಪ್ಪಿಟ್ಟಿನ ಬಗ್ಗೆ ಕನ್‍ಫ್ಯೂಸ್ ಆಗಿದ್ದ ಶಬಾನಾಗೆ ಟ್ವಿಟ್ಟರ್‍ನಲ್ಲಿ ಜನ ನಿಜವಾದ ರುಚಿ ತೋರಿಸಿದ್ರು. ಇಲ್ಲಿದೆ ಕೆಲವು ಟ್ವೀಟ್‍ಗಳು;

    https://twitter.com/azharkhantwitte/status/917323808926613504