ನವದೆಹಲಿ: ತೀವ್ರ ವಿರೋಧದ ನಡುವೆಯೂ ದೆಹಲಿ ವಿಶ್ವ ವಿದ್ಯಾಲಯದಲ್ಲಿ ಬಿಬಿಸಿ ಸಿದ್ಧಪಡಿಸಿದ `ಮೋದಿ ಎ ಕ್ವಶನ್’ ಸಾಕ್ಷ್ಯಚಿತ್ರವನ್ನು (BBC Documentary) ವೀಕ್ಷಿಸಲಾಗಿದೆ. ವಿದ್ಯಾರ್ಥಿಗಳು ಲ್ಯಾಪ್‌ಟ್ಯಾಪ್, ಮೂಬೈಲ್‌ಗಳಲ್ಲಿ ಚಿತ್ರ ವೀಕ್ಷಿಸಿ ಆಜಾದಿ ಘೋಷಣೆ ಕೂಗಿದ್ದಾರೆ.
ಜೆಎನ್‌ಯು (JNU) ಮತ್ತು ಜಾಮಿಯಾ ಮೀಲಿಯ ಇಸ್ಲಾಮಿಯಾ ವಿವಿ ಬಳಿಕ ದೆಹಲಿ ವಿಶ್ವ ವಿದ್ಯಾಲಯದಲ್ಲಿರುವ (Delhi University) ಎಡಪಂಥೀಯ ಚಿಂತನೆಯ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಾಗಿ ಘೋಷಣೆ ಮಾಡಿದ್ದರು. ಇದಕ್ಕೆ ವಿವಿ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಇದನ್ನೂ ಓದಿ: BBC Modi V/s The Kashmir Filesː ಎಸ್‌ಎಫ್‌ಐ, ಎಬಿವಿಪಿ ವಿದ್ಯಾರ್ಥಿಗಳ ನಡುವೆ ತಾರಕಕ್ಕೇರಿದ ಸಂಘರ್ಷ
ವಿದ್ಯುತ್ ಕಡಿತಗೊಳಿಸಿದ ಬಳಿಕವೂ ಎಸ್‌ಎಫ್‌ಐ (SFI) ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ಬದಲಿ ಮಾರ್ಗಗಳನ್ನು ಬಳಸಿ ಮೊಬೈಲ್, ಲ್ಯಾಪ್‌ಟಾಪ್‌ಗಳ ಮೂಲಕ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಿದರು. ಚಿತ್ರ ವೀಕ್ಷಣೆ ಪಟ್ಟು ಹೆಚ್ಚುತ್ತಿದ್ದಂತೆ ದೆಹಲಿ ಪೊಲೀಸರು ಕ್ಯಾಂಪಸ್‌ಗೆ ಬಿಗಿ ಭದ್ರತೆ ಒದಗಿಸಿದರು. ಗುರುತಿನ ಚೀಟಿ ಇಲ್ಲದವರನ್ನ ಕ್ಯಾಂಪಸ್‌ನೊಳಗೆಯೇ ನಿರ್ಬಂಧಿಸಲಾಯಿತು.
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರ ( BBC Documentary) ಈಗಾಗಲೇ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಭಾರೀ ಸಂಘರ್ಷವನ್ನುಂಟುಮಾಡಿದೆ. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ (Hyderabad University) ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಸಿನಿಮಾ ಮಾದರಿಯಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ.
ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) `ಪಿಎಂ ಮೋದಿ’ ಅವರ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನ ಆಯೋಜಿಸಿತ್ತು. ಇದಕ್ಕೆ ತಿರುಗೇಟು ನೀಡುವಂತೆ ಆರ್‌ಎಸ್‌ಎಸ್ (RSS) ಸಂಯೋಜಿತ ಎಬಿವಿಪಿ (ABVP) ಸಂಘಟನೆಯು ಅದೇ ಕ್ಯಾಂಪಸ್‌ನಲ್ಲಿ `ದಿ ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರ ಪ್ರದರ್ಶನ ಏರ್ಪಡಿಸಿತ್ತು.
ಗಣರಾಜ್ಯೋತ್ಸವ ದಿನದಂದೇ ವಿವಿಯಲ್ಲಿ ಸಾಕ್ಷ್ಯಚಿತ್ರ ಸ್ಕ್ರೀನಿಂಗ್ ಮಾಡಲಾಗಿದ್ದು, 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ ಎಂದು ಎಸ್‌ಎಫ್‌ಐ ಹೇಳಿಕೊಂಡಿದೆ.
ಪೂರ್ವಾನುಮತಿಯಿಲ್ಲದೇ ಕ್ಯಾಂಪಸ್‌ನಲ್ಲಿ ಚಿತ್ರಪ್ರದರ್ಶಿಸಿದ ಬಗ್ಗೆ ವರದಿ ನೀಡುವಂತೆ ವಿವಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದು, ಈ ಬೆನ್ನಲ್ಲೇ ಎಬಿವಿಪಿ, ಎಸ್‌ಎಫ್‌ಐ ವಿರುದ್ಧ ದೂರು ಸಲ್ಲಿಸಿದೆ. ಆದರೆ ಎಸ್‌ಎಫ್‌ಐ ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದೆ.
ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ `ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ಪ್ರದರ್ಶನ ನಿಲ್ಲಿಸಲು ಪ್ರಯತ್ನಿಸಿತು. ಎಬಿವಿಪಿ ಕಾರ್ಯಕರ್ತರು ಮುಖ್ಯದ್ವಾರದಿಂದ ಪ್ರೊಜೆಕ್ಟರ್ ತರುತ್ತಿದ್ದಾಗ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಸಹ ನಡೆಸಿದರು ಎಂದು ಎಬಿವಿಪಿ ಜಾಲತಾಣದಲ್ಲಿ ಹಂಚಿಕೊಂಡಿದೆ.
Live Tv
[brid partner=56869869 player=32851 video=960834 autoplay=true]
ತಿರುವನಂತರಪುರಂ: ವಿದ್ಯಾರ್ಥಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ತ್ರಿಶೂರ್ ಕಾಲೇಜಿನ (College) ಪ್ರಾಂಶುಪಾಲರಿಗೆ (Principal) ಸಿಪಿಐ(ಎಂ)ನ ವಿದ್ಯಾರ್ಥಿ ಘಟಕ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (SFI) ಕಾರ್ಯಕರ್ತರು ಬೆದರಿಕೆ ಹಾಕಿದ ಘಟನೆ ಕೇರಳದಲ್ಲಿ (Kerala) ನಡೆದಿದೆ.
ಕೇರಳದ ತ್ರಿಶೂರ್‌ನಲ್ಲಿರುವ ಮಹಾರಾಜಸ್ ಟೆಕ್ನಾಲಜಿಕಲ್ ಇನ್‍ಸ್ಟಿಟ್ಯೂಟ್‍ನಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಯೊಬ್ಬ (Student) ಮಿದುಳಿನ ಅನಾರೋಗ್ಯದಿಂದ ಬಳಲುತ್ತಿದ್ದ. ಈ ಹಿನ್ನೆಲೆಯಲ್ಲಿ ಧೂಳು ಹಾಗೂ ಸೂರ್ಯನ ಕಿರಣಗಳು ಬಿಳಬಾರದು ಎಂದು ವೈದ್ಯರು ಹೇಳಿದ್ದರು. ಇದರಿಂದಾಗಿ ಆ ವಿದ್ಯಾರ್ಥಿ ತಲೆಗೆ ಕ್ಯಾಪ್ ಧರಿಸಿದ್ದ. ಆದರೆ ಪ್ರಾಂಶುಪಾಲರು ಬಲವಂತವಾಗಿ ಕ್ಯಾಪ್‍ನ್ನು ತೆಗೆಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಎಸ್‍ಎಫ್‍ಐ ಕಾರ್ಯಕರ್ತರು ಪ್ರಾಂಶುಪಾಲರ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲಾ ಕಾರ್ಯದರ್ಶಿ ಹಸನ್ ಮುಬಾರಕ್ ಹಾಗೂ ಅಲ್ಲಿ ಇದ್ದ ಎಸ್‍ಎಫ್‍ಐ ಕಾರ್ಯಕರ್ತರು ಮಾತನಾಡಿ, ಪ್ರಾಶುಪಾಲರಿಗೆ ಹೊರಗೆ ಬರದಿದ್ದರೇ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿದರು. ಇದನ್ನೂ ಓದಿ: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್‌ಗೆ ಇಡಿ ಸಂಕಷ್ಟ- ವಿಚಾರಣೆಗೆ ಹಾಜರಾಗುವಂತೆ ಸಮನ್ಸ್
ಘಟನೆಗೆ ಸಂಬಂಧಿಸಿ ಪ್ರಾಂಶುಪಾಲ ಪಿ.ದಿಲೀಪ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಯೆಲ್ಲವೂ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಎಸ್‍ಎಫ್‍ಐನ ತ್ರಿಶೂರ್ ಜಿಲ್ಲಾ ಕಾರ್ಯದರ್ಶಿ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಎಸ್‍ಎಫ್‍ಐ ತ್ರಿಶೂರ್ ಜಿಲ್ಲಾ ಕಾರ್ಯದರ್ಶಿ ಫೇಸ್‍ಬುಕ್ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ʼನಮ್ಮ ಮೆಟ್ರೊʼದಿಂದ ಆನ್‌ಲೈನ್ ಟಿಕೆಟ್ ಲೋಕಾರ್ಪಣೆ – ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್
Live Tv
[brid partner=56869869 player=32851 video=960834 autoplay=true]
ರಾಹುಲ್ ಗಾಂಧಿ ಅವರ ವಯನಾಡಿನಲ್ಲಿರುವ ಕಚೇರಿ ಮೇಲೆ ನಡೆದ ದಾಳಿಯ ದೃಶ್ಯಗಳನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ಅನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಸಿಪಿಐ(M) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರರಿಗೂ ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪೇಪರ್ ಬಿಕ್ಕಟ್ಟು – ವಿದ್ಯಾರ್ಥಿಗಳಿಗೆ ಸಿಗ್ತಿಲ್ಲ ಪಠ್ಯ, ನೋಟ್ ಪುಸ್ತಕ
ಸಿಪಿಐ(M) ಕಾರ್ಯಕರ್ತರೇ ಹಲ್ಲೆ ನಡೆಸಿದ್ದಾರೆ ಎಂದು ಸಂಸದ ಶಶಿ ತರೂರ್ ಆರೋಪಿಸಿದ್ದಾರೆ.
ಮಂಗಳೂರು: ಮಂಗಳೂರು ವಿವಿ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ಎಸ್‌ಎಫ್‌ಐ ವಿರೋಧ ವ್ಯಕ್ತಪಡಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ 2021-22ರ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಆಹ್ವಾನಿಸಲಾಗಿದೆ. ಬುಧವಾರ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ಕೋಮು ದ್ವೇಷಕ್ಕೆ ಕುಖ್ಯಾತರಾಗಿರುವ ಪ್ರಭಾಕರ್ ಭಟ್‌ರಂತವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಸಿಎಫ್‌ಐ ಹೇಳಿದೆ.
ಕೋಮು ಮತಾಂಧತೆಗೆ ವಿದ್ಯಾರ್ಥಿಗಳು ಬಲಿಯಾಗದಂತೆ ಎಚ್ಚರವಹಿಸುವ ಜವಾಬ್ದಾರಿ ಜಿಲ್ಲಾಡಳಿತಕ್ಕೆ ಇದೆ. ಧರ್ಮಾಧಾರಿತ ತಾರತಮ್ಯ, ಜನಾಂಗ ದ್ವೇಷಕ್ಕೆ ಕುಖ್ಯಾತರಾಗಿರುವ ಪ್ರಭಾಕರ್ ಭಟ್‌ರಂತವರನ್ನು ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ಒತ್ತಾಯಿಸಿದೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಬ್ರಿಟನ್ ಸಂಸತ್ ಆಹ್ವಾನ
ಎಸ್‌ಎಫ್‌ಐ ಹೇಳಿಕೆಯಲ್ಲಿ ಏನಿದೆ?
ಕರಾವಳಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಕೋಮುವಾದಿ ಸಂಘಟನೆಗಳು ತಮ್ಮ ಮತೀಯ ದ್ರುವೀಕರಣದ ಅಜೆಂಡಾಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಸರ್ಕಾರಿ ಶಾಲಾ ವಠಾರಗಳನ್ನು ದುರ್ಬಳಕೆ ಮಾಡುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಈಗಾಗಲೇ ಉಡುಪಿಯ ಕಾಲೇಜಿನಲ್ಲಿ ಹಿಜಬ್‌ನಿಂದ ಪ್ರಾರಂಭಗೊಂಡ ವಿಷಯಗಳು ಮತೀಯ ರೂಪ ಪಡೆದು ಕೇಸರಿ ಶಾಲು ಸೇರಿದಂತೆ ವಿದ್ಯಾರ್ಥಿಗಳ ನಡುವೆ ಪರಸ್ಪರ ಅಪನಂಬಿಕೆಗಳಿಗೆ, ಗುಂಪು ಘರ್ಷಣೆಗಳಿಗೆ ಎಡೆಮಾಡಿ ಕೊಟ್ಟಿರುವ ಘಟನೆಗಳು ನಮ್ಮ ಕಣ್ಣ ಮುಂದಿವೆ.
ಇಂತಹ ವಿವಿಧ ಕಾರಣಕ್ಕೆ ಬಹಳಷ್ಟು ಶಾಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿ ಪರಿತಪಿಸುತ್ತಿದ್ದಾರೆ. ಇನ್ನೊಂದೆಡೆ ಶಿಕ್ಷಣವನ್ನು ಪಡೆಯಲು ಬರುವ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತವರ ಪೋಷಕರು ಇಂತಹ ಘಟನೆಗಳಿಂದ ಭೀತಿಗೊಳಗಾಗಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸಬೇಕಾಗಿದ್ದ ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರ ತನ್ನ ಆಡಳಿತ ವೈಫಲ್ಯ ಮರೆಮಾಚಲು ಇಂತಹ ಘಟನೆಗಳಿಗೆ ಕುಮ್ಮಕ್ಕನ್ನು ನೀಡುತ್ತಿದೆ.
ಈ ಕಾರಣಕ್ಕಾಗಿಯೇ ಸಂಘಪರಿವಾರ ಅಲ್ಪ ಸಂಖ್ಯಾತರನ್ನು ಗುರಿಯನ್ನಾಗಿಸಿ ಕೋಮು ಧ್ರುವೀಕರಣ ರಾಜಕಾರಣ ನಡೆಸಲು ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಿ ಇದೀಗ ಕಾಲೇಜು ಕ್ಯಾಂಪಸ್‌ಗಳನ್ನು ಮುಂದಿನ ಗುರಿಯನ್ನಾಗಿಸಿವೆ. ಇಂತಹ ಉದ್ದೇಶದಿಂದಲೇ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಕಾರ್ಯಕ್ರಮವೊಂದಕ್ಕೆ ಉದ್ಘಾಟಕರಾಗಿ ಆಹ್ವಾನಿಸಲಾಗಿದೆ. ಇದು ಮಂಗಳೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳ ನಡುವೆ ಪರಸ್ಪರ ಅಪನಂಭಿಕೆಗಳನ್ನು, ಕಂದಕಗಳನ್ನು ಸೃಷ್ಟಿ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಎಂಟು ಬಾರಿ ಬಿಜೆಪಿ ಶಾಸಕ ಸತೀಶ್ ಮಹಾನಾ ಈಗ ಯುಪಿ ಸ್ಪೀಕರ್
ಈ ರೀತಿ ಕಾಲೇಜು ಕ್ಯಾಂಪಸ್‌ಗಳಿಗೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವರ್ತಿಸುವ, ಕೋಮು ಪ್ರಚೋದಿತ ದ್ವೇಷಗಳನ್ನು ಹರಡುವ ಮತ್ತು ಅವೈಜ್ಞಾನಿಕ ಮನೋಭಾನೆಗಳನ್ನು ಬಿತ್ತುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ರನ್ನು ವಿಶ್ವವಿದ್ಯಾನಿಲಯದ ಕಾರ್ಯಕ್ರಮದ ಉದ್ಘಾಟನೆಗೆ ಆಹ್ವಾನಿಸುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್‌ಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವಿರೋಧಿಸುತ್ತದೆ. ಇಂತಹ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವಕಾಶ ಮಾಡಿಕೊಟ್ಟ ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ. ಪಿ. ಸುಬ್ರಮಣ್ಯ ಯಡಪಡಿತ್ತಾಯ ಅವರ ನಡೆಯನ್ನು ಖಂಡಿಸುತ್ತದೆ. ಹಾಗೂ ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ರಕ್ಷಣೆಗಾಗಿ, ಕಾಲೇಜು ಕ್ಯಾಂಪಸ್‌ಗಳಲ್ಲಿ ಶಾಂತಿ ಕದಡದಂತೆ ಮುಂಜಾಗ್ರತೆಯ ಭಾಗವಾಗಿ ಈ ಕಾರ್ಯಕ್ರಮದಲ್ಲಿ ಯಾವುದೇ ಕಾರಣಕ್ಕೂ ಕಲ್ಲಡ್ಕ ಪ್ರಭಾಕರ ಭಟ್ ಭಾಗವಹಿಸಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ಜಿಲ್ಲಾ ಮುಖಂಡ ವಿನಿತ್ ದೇವಾಡಿಗ, ವಿನುಶ ರಮಣ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ನವದೆಹಲಿ: ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ(ಎಸ್‍ಎಫ್‍ಐ) ಭಯೋತ್ಪಾದಕ ಸಂಘಟನೆ ಇದ್ದಂತೆ, ಇದನ್ನು ನಿಷೇಧಿಸಬೇಕು ಎಂದು ಕಾಂಗ್ರೆಸ್ ಸಂಸದ ಹೈಬಿ ಈಡನ್ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ತಿರುವನಂತಪುರಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕೆಎಸ್‍ಯುನ ಮಹಿಳಾ ನಾಯಕಿಯೊಬ್ಬರಿಗೆ ಎಸ್‍ಎಫ್‍ಐ ಕಾರ್ಯಕರ್ತರು ಥಳಿಸಿದ ಘಟನೆಯ ವೀಡಿಯೋದಲ್ಲಿ ವೈರಲ್ ಆಗುತ್ತಿದೆ. ಇದರಿಂದಾಗಿ ಎಸ್‍ಎಫ್‍ಐನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಘಟನೆ ಹಿನ್ನೆಲೆ: ಮಾರ್ಚ್ 15 ರಂದು ತಿರುವನಂತಪುರಂನಲ್ಲಿರುವ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕೆಎಸ್‍ಯು ಮತ್ತು ಎಸ್‍ಎಫ್‍ಐ ನಡುವೆ ಘರ್ಷಣೆ ಸಂಭವಿಸಿತ್ತು. ಕೆಎಸ್‍ಯು ಅಧ್ಯಕ್ಷೆ ಸಫ್ನಾ ಯಾಕೂಬ್ ಅವರನ್ನು ಎಸ್‍ಎಫ್‍ಐ ಸದಸ್ಯರು ಥಳಿಸಿದ್ದರು. ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‍ಎಫ್‍ಐ) ಕಾರ್ಯಕರ್ತರು ಆಕೆಯನ್ನು ಕ್ರೂರವಾಗಿ ಥಳಿಸಿ ರಸ್ತೆಯಲ್ಲಿ ಎಳೆದೊಯ್ದಿದ್ದರು.
Ban the SFI in Kerala and declare it as a terrorist organization. @cpimspeak encourages its student leaders to behave like goondas inside colleges and commit heinous crimes against fellow students.
Urging intervention from the Central Govt in this matter.@IYC@INCIndia@nsuipic.twitter.com/lZWg9fRkmG
ಕಾಲೇಜು ಚುನಾವಣೆಯಲ್ಲಿ ಕೇರಳ ವಿದ್ಯಾರ್ಥಿ ಸಂಘ (ಕೆಎಸ್‍ಯು) ಗೆಲುವು ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್‍ಯು ಸದಸ್ಯರು ಸಂಭ್ರಮಾಚರಣೆ ಮಾಡುತ್ತಿದ್ದಾಗ ಘರ್ಷಣೆ ನಡೆದಿದೆ. ವರದಿಗಳ ಪ್ರಕಾರ, ಚುನಾವಣಾ ವಿಜಯೋತ್ಸವದ ನಂತರ ದಾಳಿ ನಡೆದಿದ್ದು, ಎಸ್‍ಎಫ್‍ಐ ಸದಸ್ಯರು ಸಂಭ್ರಮಾಚರಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕೆಎಸ್‍ಯು ಸದಸ್ಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಜೇಮ್ಸ್ ಚಿತ್ರದ ತೆರಿಗೆ ವಿನಾಯಿತಿ ಬಗ್ಗೆ ಸಿಎಂ ಬಳಿ ಚರ್ಚೆ ಮಾಡ್ತೇನೆ: ಆರ್.ಅಶೋಕ್
ಇದೇ ವೇಳೆ ಕೆಎಸ್‍ಯು ಕಾರ್ಯಕರ್ತನೊಬ್ಬ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಜಗಳಕ್ಕೆ ಕಾರಣವಾಯಿತು ಎಂದು ಎಸ್‍ಎಫ್‍ಐ ಆರೋಪಿಸಿದೆ. ಈ ವರ್ಷ ನಡೆದ ಯೂನಿಯನ್ ಚುನಾವಣೆಯಲ್ಲಿ ಎಸ್‍ಎಫ್‍ಐ ಜಯಗಳಿಸಿದ್ದರೂ, ಕೆಎಸ್‍ಯು ಒಕ್ಕೂಟದ ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದೆ. ಇದು ಹಿಂಸಾಚಾರಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ: ಸಿದ್ದರಾಮಯ್ಯ
ಮಂಗಳೂರು: ಕೊರೊನಾ ಎರಡನೇ ಅಲೆಯು ದೇಶದಲ್ಲಿ ಅಪಾರ ಸಾವು ನೋವುಗಳಿಗೆ ಕಾರಣವಾಗಿದೆ. ಕೊರೊನ ನಿಯಂತ್ರಿಸಿ ಲಸಿಕೆ ಹಂಚಿ ಜನರಿಗೆ ಧೈರ್ಯ ನೀಡಬೇಕಾಗಿದ್ದ ಪ್ರಧಾನ ಮಂತ್ರಿಗಳು ಮೊಸಳೆ ಕಣ್ಣೀರು ಸುರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿವೈಎಫ್‍ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಟೀಕಿಸಿದರು.
ಡಿವೈಎಫ್‍ಐ, ಎಸ್‍ಎಫ್‍ಐ, ಜನವಾದಿ ಮಹಿಳಾ ಸಂಘಟನೆಗಳ ಕೇಂದ್ರ ಸಮಿತಿಗಳ ಕರೆಯನ್ವಯ ಕೊರೊನಾ ಲಸಿಕೆ ನೀಡಲು ವಿಫಲ ಆಗಿರುವ ಕೇಂದ್ರ ಸರ್ಕಾರದ ರಾಷ್ಟ್ರವ್ಯಾಪಿ ಮನೆ ಮನೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ, ರಾಜ್ಯ ಸರ್ಕಾರಗಳು ಕೋವಿಡ್ ನಿಯಂತ್ರಿಸುವಲ್ಲಿ ಹಳಿ ತಪ್ಪಿವೆ. ಸರ್ಕಾರದ ಸಾಲು ಸಾಲು ವೈಫಲ್ಯಗಳು ಘೋರವಾದ ಇತಿಹಾಸ ನಿರ್ಮಿಸುತ್ತಿದೆ. ಜನರು ಆಕ್ಸಿಜನ್, ಲಸಿಕೆ ಸಿಗದೆ ಸಾಯುತ್ತಿದ್ದಾರೆ. ಸ್ಮಶಾನಗಳು ತುಂಬಿ ತುಳುಕುತ್ತಿವೆ ಜನರ ನೆರವಿಗೆ ಬರಬೇಕಿದ್ದ ಸರ್ಕಾರ ಮಕಾಡೆ ಮಲಗಿದೆ ಎಂದು ಸಂತೋಷ್ ಬಜಾಲ್ ಆರೋಪಿಸಿದರು.
ಡಿವೈಎಫ್‍ಐ, ಎಸ್‍ಎಫ್‍ಐ, ಜನವಾದಿ ಮಹಿಳಾ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಗಳ ಅಧೀನದಲ್ಲಿರುವ ಎಲ್ಲಾ ಘಟಕಗಳ ಕಾರ್ಯಕರ್ತರು ತಮ್ಮ ತಮ್ಮ ಮನೆಗಳಿಂದಲೇ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳಿರುವ ಭಿತ್ತಿಪತ್ರ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಮಂಗಳೂರು: ಮೋದಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಿದರೆ ಪೊಲೀಸ್ ಕೇಸ್ ಹಾಕಿ ಹೆದರಿಸುವ ಪರಿಪಾಠ ಹೆಚ್ಚುತ್ತಿದ್ದು, ಇಂತಹ ಕೇಸ್ ಗಳಿಗೆ ಹೆದರಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.
ರೈತ ಹೋರಾಟ ಬೆಂಬಲಿಸಿ ಸಿದ್ಧಪಡಿಸಿದ್ದ ಟೂಲ್ ಕಿಟ್ ಎಡಿಟ್ ಮಾಡಿದ್ದಾಳೆ ಎಂದು ಆರೋಪಿಸಿ ದೆಹಲಿ ಪೊಲೀಸರು ಬಂಧಿಸಿದ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನವನ್ನು ಖಂಡಿಸಿ ಡಿವೈಎಫ್‍ಐ ಹಾಗೂ ಎಸ್.ಎಫ್.ಐ ಸಂಘಟನೆಗಳು ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸರ್ವಾಧಿಕಾರಿ ನೀತಿಯನ್ನು ಅನುಸರಿಸುತ್ತಿದೆ. ಕನ್ಹಯ್ಯ ಕುಮಾರ್ ನಿಂದ ಹಿಡಿದು ದಿಶಾ ರವಿವರೆಗೆ ಈ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಿ ಅನೇಕ ಬುದ್ಧಿಜೀವಿಗಳು, ವಿದ್ಯಾರ್ಥಿಗಳು, ವಿದ್ವಾಂಸರನ್ನು ಜೈಲಿಗಟ್ಟಿದೆ. ಸರ್ಕಾರದ ಈ ಸರ್ವಾಧಿಕಾರಿ ಧೋರಣೆಯ ವಿರುದ್ಧ ಎಡಪಂಥೀಯ ಸಂಘಟನೆಗಳ ಕಾರ್ಯಕರ್ತರಾದ ನಾವುಗಳು ಬೀದಿಗಿಳಿದು ಹೋರಾಡಿ ದೇಶದ ಸಂವಿಧಾವನ್ನು ರಕ್ಷಿಸಲಿದ್ದೇವೆ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‍ಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್, ರಾಜ್ಯ ಗೃಹ ಇಲಾಖೆಯ ಅಥವಾ ಸ್ಥಳೀಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರದೇ ಒಕ್ಕೂಟ ವ್ಯವಸ್ಥೆಯ ಎಲ್ಲಾ ಪದ್ಧತಿಗಳಿಗೆ ತಿಲಾಂಜಲಿ ನೀಡಿ ಪರಿಸರ ಹೋರಾಗಾರ್ತಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಇದೊಂದು ರಾಜ್ಯದ ಪೊಲೀಸ್ ಇಲಾಖೆಗೆ ಅವಮಾನವಾಗಿದ್ದು ಇದರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಿದ್ದ ಗೃಹ ಸಚಿವರು ಸರ್ವಾಧಿಕಾರಿ ಮೋದಿಯ ಮುಂದೆ ಮೂಗನಂತಾಗಿದ್ದಾರೆ. ಸರ್ಕಾರ ಕೂಡಲೇ ದಿಶಾ ರವಿಯನ್ನು ಬಿಡುಗಡೆ ಮಾಡಬೇಕು ಮತ್ತು ದೇಶ ವಿರೋಧಿ ಕೃಷಿ ಕಾಯ್ದೆಯನ್ನು ವಾಪಸ್ ಪಡೆದು ದೇಶದ ರೈತರ ಹಿತಕಾಯಲು ಮುಂದಾಗಬೇಕೆಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್‍ಐ ಮಂಗಳೂರು ನಗರ ಅಧ್ಯಕ್ಷ ನವೀನ್ ಕೊಂಚಾಡಿ, ಜಿಲ್ಲಾ ನಾಯಕ ನೌಷಾದ್ ಬೆಂಗ್ರೆ, ಸುನಿಲ್ ತೇವುಲ, ವರಪ್ರಸಾದ್ ಬಜಾಲ್, ಮಹಿಳಾ ಹೋರಾಟಗಾರ್ತಿ ಪ್ರಮೀಳಾ ದೇವಾಡಿಗ, ಅಸುಂತಾ ಡಿಸೋಜಾ, ಎಸ್.ಎಫ್.ಐ ನ ವಿನೀತ್ ದೇವಾಡಿಗ, ಸಿನಾನ್ ಬೆಂಗ್ರೆ, ತಿಲಕ್ ಕುತ್ತಾರ್ , ಸಾಮಾಜಿಕ ಕಾರ್ಯಕರ್ತ ಆಲ್ವಿನ್ ಮೊದಲಾದವರು ಭಾಗವಹಿಸಿದ್ದರು.