Tag: sexual harrassment

  • ವಿಶೇಷ ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ಕಾಮ ಪಾಠದ ಜೊತೆ ಕಿಸ್ಸಿಂಗ್ ತರಬೇತಿ!

    ವಿಶೇಷ ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ಕಾಮ ಪಾಠದ ಜೊತೆ ಕಿಸ್ಸಿಂಗ್ ತರಬೇತಿ!

    ತುಮಕೂರು: ಶಿಕ್ಷಕನೊಬ್ಬ ವಿಶೇಷ ತರಗತಿ ನೆಪದಲ್ಲಿ ವಿದ್ಯಾರ್ಥಿನಿಯನ್ನು ಶಾಲೆಗೆ ಕರೆಸಿಕೊಂಡು ಕಾಮ ಪಾಠದ ಜೊತೆ ಕಿಸ್ಸಿಂಗ್ ತರಬೇತಿ ಕೊಡುತ್ತಿದ್ದ ಪ್ರಕರಣವೊಂದು ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಚಂದ್ರಶೇಖರ್ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಕನ್ನಡ ಶಿಕ್ಷಕ. ಜಿಲ್ಲೆಯ ಮಧುಗಿರಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ಸುವರ್ಣ ಮುಖಿ ಪ್ರೌಢಶಾಲೆಯ ಕನ್ನಡ ಶಿಕ್ಷಕನಾಗಿರುವ ಚಂದ್ರಶೇಖರನ ಕಾಮಚೇಷ್ಟೆ ಬೆಳಕಿಗೆ ಬಂದಿದೆ.

    ಚಂದ್ರಶೇಖರ್ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡಿ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ. ಅಲ್ಲದೇ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಮಾಟ ಮಂತ್ರ ಮಾಡಿ ನಿಮ್ಮ ತಂದೆ-ತಾಯಿಯರನ್ನು ಸಾಯಿಸುತ್ತೇನೆ ಎಂದು ಮಕ್ಕಳನ್ನು ಹೆದರಿಸಿದ್ದ.

    ವಿಶೇಷ ತರಗತಿಗೆಂದು ನಮ್ಮನ್ನು ಕರೆಸಿಕೊಂಡು ಕಿಸ್ ಕೊಡು ಎಂದು ಬಲವಂತ ಮಾಡುತ್ತಾರೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಚಂದ್ರಶೇಖರ್ ಕೆಲ ವಿದ್ಯಾರ್ಥಿನಿಯರನ್ನು ಡಾರ್ಲಿಂಗ್ ಅಂತಾನೂ ಕರಿಯುತ್ತಾನೆ ಎಂಬುದು ತಿಳಿದು ಬಂದಿದೆ.

    ಸದ್ಯ ಈ ವಿಷಯ ತಿಳಿದ ಗ್ರಾಮಸ್ಥರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡು ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನ ಕಾಮುಚೇಷ್ಟೆ ಬಟಾಬಯಲಾಗುತ್ತಿದ್ದಂತೆ ಕನ್ನಡ ಶಿಕ್ಷಕ ಪರಾರಿಯಾಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುವಕನ ಬಾಯಿಯನ್ನು ಬಟ್ಟೆಯಿಂದ ಕಟ್ಟಿ ಆಟೋ ಚಾಲಕನಿಂದ ಲೈಂಗಿಕ ದೌರ್ಜನ್ಯ!

    ಯುವಕನ ಬಾಯಿಯನ್ನು ಬಟ್ಟೆಯಿಂದ ಕಟ್ಟಿ ಆಟೋ ಚಾಲಕನಿಂದ ಲೈಂಗಿಕ ದೌರ್ಜನ್ಯ!

    ಬೆಂಗಳೂರು: ಆಟೋ ಚಾಲಕನೊಬ್ಬ ಯುವಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಇಟ್ಟಮಡುವಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಮೇ 23ರಂದು ನಡೆದಿದ್ದು, ಲಕ್ಷ್ಮಣ್(19) ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವಕ. ಲಕ್ಷ್ಮಣ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆಟೋ ಚಾಲಕ ರಾಜೇಶ್ ಹುಲಿ(30) ಲೈಂಗಿಕ ದೌರ್ಜನ್ಯ ನೀಡಿದ್ದಾನೆ.

    ಲಕ್ಷ್ಮಣ ವಾಸಿಸುವ ಏರಿಯಾದಲ್ಲೇ ಆಟೋ ಚಾಲಕ ರಾಜೇಶ್ ಕೂಡ ವಾಸವಾಗಿದ್ದನು. ಬ್ಯಾಂಕ್ ಗೆ ಹೋಗಬೇಕೆಂದು ಲಕ್ಷ್ಮಣ್, ರಾಜೇಶ್ ನ ಆಟೋ ಹತ್ತಿದ್ದನು. ಈ ವೇಳೆ ರಾಜೇಶ್ ತನ್ನ ಆಟೋದಲ್ಲಿ ತಮ್ಮ ಮನೆಯ ಬಳಿ ತೆರಳಿದ್ದನು. ನನ್ನ ಮನೆ ಇಲ್ಲೇ ಇದೆ ಬಟ್ಟೆ ಬದಲಿಸಿ ಬರುತ್ತೀನಿ ಎಂದು ಲಕ್ಷ್ಮಣ್ ಹತ್ತಿರ ರಾಜೇಶ್ ಕೇಳಿಕೊಂಡಿದ್ದನು.

    ನಂತರ ರಾಜೇಶ್, ಲಕ್ಷ್ಮಣ್ ನನ್ನೂ ತನ್ನ ಮನೆಯ ಒಳಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ರಾಜೇಶ್ ಬಟ್ಟೆಯಿಂದ ಲಕ್ಷ್ಮಣ್ ಬಾಯಿ ಕಟ್ಟಿ ಆತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈ ಕೃತ್ಯವೆಸಗುವಾಗ ರಾಜೇಶ್ ವಿಡಿಯೋ ಕೂಡ ಮಾಡಿದ್ದಾನೆ. ಅಲ್ಲದೇ ವಿಷಯ ಬಾಯಿ ಬಿಟ್ಟರೆ ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದನು.

    ಈ ಸಂಬಂಧ ಚೆನ್ನಮ್ಮನ್ನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಸಿ.ಕೆ ಅಚ್ಚುಕಟ್ಟು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

  • ನಡುರಸ್ತೆಯಲ್ಲೇ ಅಪ್ರಾಪ್ತೆಯ ಬಟ್ಟೆ ಬಿಚ್ಚಿ ಬಾಲಕರಿಂದ ಲೈಂಗಿಕ ಕಿರುಕುಳ – ವಿಡಿಯೋ ವೈರಲ್

    ನಡುರಸ್ತೆಯಲ್ಲೇ ಅಪ್ರಾಪ್ತೆಯ ಬಟ್ಟೆ ಬಿಚ್ಚಿ ಬಾಲಕರಿಂದ ಲೈಂಗಿಕ ಕಿರುಕುಳ – ವಿಡಿಯೋ ವೈರಲ್

    ಪಾಟ್ನಾ: 6ಕ್ಕೂ ಹೆಚ್ಚು ಅಪ್ರಾಪ್ತ ಬಾಲಕರು ಅಪ್ರಾಪ್ತೆಯ ಬಟ್ಟೆಯನ್ನು ಬಿಚ್ಚಿಸಿ ನಡು ರಸ್ತೆಯಲ್ಲೇ ಲೈಂಗಿಕ ಕಿರುಕುಳ ನೀಡಿದ ಘಟನೆ ಬಿಹಾರದ ಜಹಾನಬಾದ್‍ನಲ್ಲಿ ನಡೆದಿದೆ.

    ಅಪ್ರಾಪ್ತೆಯ ಕೈ ಹಿಡಿದು ಎಳೆದುಕೊಂಡು ಹೋಗುತ್ತಾ ಹುಡುಗರು ಆಕೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಬಾಲಕಿ ಆ ಹುಡುಗರಿಂದ ತಪ್ಪಿಸಿಕೊಳ್ಳಲು ಹರಸಹಾಸ ಪಡುತ್ತಿದ್ದಳು ಎಂದು ವರದಿಯಾಗಿದೆ.

    ಈ ವೇಳೆ ಬಾಲಕರು ಅಪ್ರಾಪ್ತೆಯ ಬಟ್ಟೆ ಬಿಚ್ಚಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬಾಲಕಿ ‘ಅಣ್ಣ ಕಾಪಾಡಿ, ಅಣ್ಣ ಕಾಪಾಡಿ’ ಎಂದು ಗೋಗರೆದಿದ್ದಾಳೆ. ಬೈಕಿನಲ್ಲಿ ಬೇರೊಬ್ಬನ ಜೊತೆ ಹೋಗುತ್ತಿದ್ದಾಗ ಈ ಘಟನೆ ನಡೆದಿದ್ದು, ಬೈಕನ್ನು ಬೀಳಿಸಿ ಅಪ್ರಾಪ್ತ ಬಾಲಕರು ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ.

     

    ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಶನಿವಾರ ವೈರಲ್ ಆಗಿದ್ದು, ಪೊಲೀಸರವರೆಗೂ ಈ ವಿಡಿಯೋ ತಲುಪಿದೆ. ಸದ್ಯ ಪೊಲೀಸರು ಈ ವಿಡಿಯೋ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

    ಸದ್ಯ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ಪೊಲೀಸರು ರಚಿಸಿದ್ದು, ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

  • ಲೈಂಗಿಕ ಕಿರುಕುಳ ನೀಡ್ತಿದ್ದ ಸಿಆರ್ ಪಿ ಅಧಿಕಾರಿ ವಿರುದ್ಧ ದೂರು ಸಲ್ಲಿಸಿದ ಶಿಕ್ಷಕಿಗೆ ಸಿಕ್ಕಿಲ್ಲ ನ್ಯಾಯ

    ಲೈಂಗಿಕ ಕಿರುಕುಳ ನೀಡ್ತಿದ್ದ ಸಿಆರ್ ಪಿ ಅಧಿಕಾರಿ ವಿರುದ್ಧ ದೂರು ಸಲ್ಲಿಸಿದ ಶಿಕ್ಷಕಿಗೆ ಸಿಕ್ಕಿಲ್ಲ ನ್ಯಾಯ

    ಯಾದಗಿರಿ: ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಒಂದು ವರ್ಷದ ಹಿಂದೆ ಸಿಆರ್ ಪಿ ಅಧಿಕಾರಿ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದರು. ಆದ್ರೆ ಇದೂವರೆಗೂ ಸಂತ್ರಸ್ತೆ ಶಿಕ್ಷಕಿಗೆ ನ್ಯಾಯ ಮಾತ್ರ ಸಿಕ್ಕಿಲ್ಲ.

    ಯಾದಗಿರಿ ತಾಲೂಕಿನ ಯರಗೋಳ ಶಿಕ್ಷಣ ಇಲಾಖೆಯ ಎಚ್. ಶರಣಪ್ಪ ಎಂಬ ಅಧಿಕಾರಿ ತನಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಅಂತಾ ಸಂತ್ರಸ್ತೆ ಮುಖ್ಯಮಂತ್ರಿ ಕಾರ್ಯದರ್ಶಿ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ ಜೂನ್ 10, 2017ರಂದು ಲಿಖಿತ ದೂರು ನೀಡಿದ್ದರು. ದೂರು ಸಲ್ಲಿಸಿ ಒಂದು ವರ್ಷವಾದ್ರೂ ಯಾವ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಯಾದಗಿರಿ ಜಿಲ್ಲಾ ಪಂಚಾಯಿತ ಸಿಇಓ ಅವಿನಾಶ್ ಮೆನನ್, ತಕ್ಷಣವೇ ಸಿಆರ್ ಪಿಓ ಮೇಲೆ ಕ್ರಮಕೈಗೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೊಂದ ಸಂತ್ರಸ್ತೆ ಸೇರಿದಂತೆ ಸಹ ಶಿಕ್ಷಕರನ್ನು ಈ ಪ್ರಕರಣದ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳಲು ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಡಿಡಿಪಿಐ ಕಚೇರಿ ಆದೇಶಿಸಿದ್ದಾರೆ. ಆದೇಶದ ಅನ್ವಯ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಅಂತಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಬೆಂಗ್ಳೂರು ಟೆಕ್ಕಿಗೆ ಟೀಂ ಲೀಡರ್  ನಿಂದ ಲೈಂಗಿಕ ಕಿರುಕುಳ

    ಬೆಂಗ್ಳೂರು ಟೆಕ್ಕಿಗೆ ಟೀಂ ಲೀಡರ್ ನಿಂದ ಲೈಂಗಿಕ ಕಿರುಕುಳ

    ಬೆಂಗಳೂರು: ಟೀಂ ಲೀಡರ್ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳಾ ಟೆಕ್ಕಿಯೊಬ್ಬರು ದೂರು ನೀಡಿದ್ದಾರೆ.

    ಎಕೋಸ್ಪೆಸ್ ನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ಟೀಂ ಲೀಡರ್ ಧೀರಜ್ ಶೆಟ್ಟಿ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಐಪಿಸಿ ಸೆಕ್ಷನ್ 354(ಲೈಂಗಿಕ ದೌರ್ಜನ್ಯ) ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?: ಯುವತಿ 2016ರಿಂದ ಎಕೋಸ್ಪೇಸ್ ನಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ನವೆಂಬರ್ 19ರಂದು ಕಂಪನಿ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಕಂಪನಿಯ ಎಲ್ಲಾ ಉದ್ಯೋಗಿಗಳು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಇರುವಾಗಲೇ ನಮ್ಮ ಟೀಂ ಲೀಡರ್ ಧೀರಜ್ ಶೆಟ್ಟಿ ನನ್ನ ಜೊತೆ ದುವರ್ತನೆ ತೋರಿ ನನ್ನ ಸೊಂಟ ಮತ್ತು ಹಿಂಬದಿ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದ.

    ತನಗಾದ ದೌರ್ಜನ್ಯದ ಬಗ್ಗೆ ತಕ್ಷಣ ಕಂಪೆನಿಯಲ್ಲಿ ದೂರು ದಾಖಲಿಸಿದೆ. ಕಂಪನಿಯಲ್ಲಿ ಆಂತರಿಕ ತನಿಖೆ ಕೈಗೊಂಡಿದ್ದು, ಇದ್ದರಿಂದ ತನಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ನನಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.