Tag: sexual harrassment

  • ಕಾರಿನ ಬಾನೆಟ್ ಮೇಲೆ ಹೋದವನೇ ಅರೆಸ್ಟ್- ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಬಂಧನ

    ಕಾರಿನ ಬಾನೆಟ್ ಮೇಲೆ ಹೋದವನೇ ಅರೆಸ್ಟ್- ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಬಂಧನ

    ಬೆಂಗಳೂರು: ಕಾರಿನ ಬಾನೆಟ್ (Car Bonnet) ಮೇಲೆ ಯುವಕನನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಲೈಂಗಿಕ ದೌರ್ಜನ್ಯ (Sexual Harassment) ಪ್ರಕರಣದ ಅಡಿಯಲ್ಲಿ ಆತನನ್ನೇ ಬಂಧಿಸಲಾಗಿದೆ.

    ದರ್ಶನ್ ಹಾಗೂ ಪ್ರಿಯಾಂಕಾ ಇಬ್ಬರೂ ಪ್ರತ್ಯೇಕವಾಗಿ ಕಾರು ಚಲಾಯಿಸುತ್ತಿದ್ದರು. ಮಾಧ್ಯಮದಲ್ಲಿ ಸುದ್ದಿ ಪ್ರಸಾರದ ಬಳಿಕ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕಾರಿನ ಚಾಲಕಿಯ ಮೇಲೆ ಎರಡೆರಡು ಪ್ರಕರಣ ದಾಖಲಾಗಿದೆ.

    ಜ್ಞಾನಭಾರತಿ ಪೊಲೀಸ್ ಠಾಣೆ (Jnanabharathi Police Station) ಯಲ್ಲಿ ಇಬ್ಬರ ಮೇಲೂ ದೂರು ಪ್ರತಿದೂರು ದಾಖಲಾಗಿದ್ದು, ಕಾರು ಚಾಲಕಿ ಮೇಲೆ ಕೊಲೆಯತ್ನ ಹಾಗೂ ನೆಗ್ಲಿಜೆನ್ಸಿ ಡ್ರೈವಿಂಗ್ ನಡಿ ಪ್ರಕರಣ ದಾಖಲಿಸಲಾಗಿದೆ. ದರ್ಶನ್ ಮೇಲೆ ಹಲ್ಲೆ ಮತ್ತು ಗಲಭೆ ಮಾಡಿ ಕಾರು ಧ್ವಂಸ ಕೇಸ್ ನಡಿ ಪ್ರಕರಣ ದಾಖಲಿಸಲಾಗಿದೆ.

    ಮೆಡಿಕಲ್ ಟೆಸ್ಟ್ ಮುಗಿಸಿಕೊಂಡು ಮನೆಗೆ ಪ್ರಿಯಾಂಕಾ ಹಾಗೂ ಪ್ರಮೋದ್ ಹಿಂದಿರುಗುತ್ತಿದ್ದರು. ಆ ಸಂದರ್ಭದಲ್ಲಿ ಗಾಡಿ ಮುಖಾಮುಖಿ ಡಿಕ್ಕಿಯಾಗಿದೆ. ಪ್ರಶ್ನೆ ಮಾಡಿದ್ದಕ್ಕೆ ಮಾತಿನ ಚಕಮಕಿ ನಡೆದು ದರ್ಶನ್‍ನನ್ನು ಮಹಿಳೆ ಎಳೆದುಕೊಂಡು ಹೋಗಿದ್ದಾಳೆ. ಕಾರಿನ ಬಾನೆಟ್ ಮೇಲೆ ಇದ್ದಾಗ ಪ್ರಿಯಾಂಕಾ ಕಾರು ಚಲಾಯಿಸಿದ್ದಾಳೆ.

    ಕಾರು ನಿಲ್ಲಿಸಿದ ಮೇಲೆ ಪ್ರಿಯಾಂಕ, ನಿತೀಶ್ ಮೇಲೆ ಹಲ್ಲೆ ಮಾಡಿದ್ದಕ್ಕೆ ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಬಂಧಿಸಲಾಗಿದೆ. ಪ್ರಕರಣ ಸಂಬಂಧ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬಾನೆಟ್ ಮೇಲೆ ಸವಾರನನ್ನು ಎಳೆದೊಯ್ದ ಕಾರು ಚಾಲಕಿ

    ಕಾರು ಚಾಲಕಿ ನೀಡಿದ ದೂರಿನಲ್ಲೇನಿದೆ..?: ಪೊಲೀಸರು ಠಾಣೆಗೆ ಬರಲು ಹೇಳಿದರೂ ಅಲ್ಲಿದ್ದ ವ್ಯಕ್ತಿಗಳು ಕಾರಿನ ಗ್ಲಾಸ್ ಒಡೆದರು. ಅಲ್ಲದೆ ಕಾರು ಚಲಾಯಿಸಲು ಮುಂದಾದಾಗ ಕಾರನ್ನು ಹಿಂಬಾಲಿಸಿಕೊಂಡ ಬಂದ ವ್ಯಕ್ತಿ ಅಡ್ಡಗಟ್ಟಿ ಜಖಂಗೊಳಿಸಲು ಪ್ರಯತ್ನಿಸಿದರು. ನಮ್ಮನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿ ಕಾರಿನ ಬಾನೆಟ್ ಮೇಲೆ ನೆಗೆದು ಕುಳಿತುಕೊಂಡನು.

    ನಮಗೆ ಭಯವಾಗಿ ಕಾರು ಚಲಾಯಿಸಿಕೊಂಡು ಹೋದೆವು. ಆದರೂ ಆತ ಕೆಳಗೆ ಇಳಿದಿಲ್ಲ. ಇದನ್ನು ನೋಡಿ ಕೆಲವರು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಸ್ವಲ್ಪ ದೂರ ಹೀಗಿ ನಿಲ್ಲಿಸಿದೆವು. ನಂತರ ಕಾರು ಮುಂದೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಹಿಂಬಾಲಿಸಿಕೊಂಡು ಬಂದು ಕಾರು ಜಖಂಗೊಳಿಸಿದರು. ಅಲ್ಲದೆ ಸ್ನೇಹಿತ ನಿತೀಶ್ ಮೇಲೂ ಹಲ್ಲೆ ನಡೆಸಿದ್ದು, ಸಾಯಿಸುವುದಾಗಿ ಬೆದರಿಕೆ ಹಾಕಿದರು. ನಂತರ ಪೊಲೀಸರು ಠಾಣೆಗೆ ಕರೆದೊಯ್ದರು ಎಂದು ಪ್ರಿಯಾಂಕಾ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಡ್ಜ್ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ತೆಯರು- ಶ್ರೀಗಳಿಗೆ ನೋಟಿಸ್ ಸಾಧ್ಯತೆ

    ಜಡ್ಜ್ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ತೆಯರು- ಶ್ರೀಗಳಿಗೆ ನೋಟಿಸ್ ಸಾಧ್ಯತೆ

    ಚಿತ್ರದುರ್ಗ: ಮುರುಘಾ ಶರಣರ ವಿರುದ್ಧ ಪೋಕ್ಸೋ ಕೇಸ್ ಸಂಬಂಧ ಮಂಗಳವಾರ ಸಂತ್ರಸ್ತೆಯರು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಇತ್ತ ಶ್ರೀಗಳ ವಿರುದ್ಧ ಕೇಸ್ ದಾಖಲಾದಾಗಿನಿಂದ ಪರ ಹಾಗೂ ವಿರೋಧದ ಚರ್ಚೆಗಳು ಶುರುವಾಗಿವೆ.

    ಮಂಗಳವಾರ ಸಂಜೆ ವೇಳೆ ಕೋರ್ಟ್ ನಲ್ಲಿ ಸಂತ್ರಸ್ತೆಯರು ಹೇಳಿಕೆ ದಾಖಲು ಮಾಡಿದ್ದಾರೆ. ಸಿಆರ್ ಪಿಸಿ164 ಅಡಿ ಜಡ್ಜ್ ಎದುರು ಹೇಳಿಕೆ ದಾಖಲಿಸಿದ್ದಾರೆ. ಹೇಳಿಕೆ ದಾಖಲಿಸಿದ ಸೀಲ್ಡ್ ಕವರ್ ನಾಳೆ ತನಿಖಾಧಿಕಾರಿ ಕೈಸೇರಲಿದೆ. ಈ ಮೂಲಕ ನಾಳೆ ಪೊಲೀಸರು ಮುರುಘಾ ಶ್ರೀಗೆ ನೋಟೀಸ್ ನೀಡುವ ಸಾಧ್ಯತೆಗಳಿವೆ. ನಾಳೆ ಮುರುಘಾಶ್ರೀ ವಶಕ್ಕೆ ಪಡೆದು ವಿಚಾರಣೆ ಹಾಗೂ ಮೆಡಿಕಲ್ ಟೆಸ್ಟ್ ನಡೆಯುವ ಸಾಧ್ಯತೆಗಳಿದೆ.

    ಇತ್ತ ಚಿತ್ರದುರ್ಗದ ಪ್ರಸಿದ್ಧ ಮುರುಘಾ ಮಠದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದು ರಾಜ್ಯಾದ್ಯಂತ ಪರ ಹಾಗೂ ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲದೆ ಫೋಕ್ಸೊ ಕೇಸ್‍ನಲ್ಲಿ ಸಿಲುಕಿರುವ ಮುರುಘಾ ಶರಣರು, ಆರೋಪದಿಂದ ಮುಕ್ತರಾಗುವವರೆಗೆ ಪೀಠ ತ್ಯಾಗ ಮಾಡುವಂತೆ ಮಾಜಿ ಸಚಿವ ಹಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ. ಈ ಸಂಬಂಧ ವಿವಿಧ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧ ಅಟ್ರಾಸಿಟಿ ಕೇಸ್‌ ದಾಖಲು

    ಈ ವಿಚಾರವನ್ನು ಕೇಳಿ ಆಕ್ರೋಶಗೊಂಡಿರುವ ಮುರುಘಾ ಮಠದ ಶಾಖಾಮಠಗಳ ಪೀಠಾಧಿಪತಿಗಳು ದಿಢೀರ್ ಸುದ್ದಿಗೋಷ್ಠಿ ನಡೆಸಿ ಮುರುಘಾ ಶರಣರ ಬೆನ್ನಿಗೆ ನಿಂತರು. ಶ್ರೀಗಳು ಪ್ರಕರಣದಿಂದ ಮುಕ್ತರಾಗಿ ಬರ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಎಂದರು. ಒಟ್ಟಿನಲ್ಲಿ ಆರೋಪ ಮುಕ್ತರಾಗಿ ಮುರುಘಾ ಶರಣರು ಬರ್ತಾರೆಂಬ ಭರವಸೆ ಒಂದೆಡೆಯಾದ್ರೆ, ಕಾನೂನು ಮುರುಘಾ ಶರಣರನ್ನು ಪೀಠಾಧ್ಯಕ್ಷರಾಗಿ ಮುಂದುವರಿಸುತ್ತಾ ಅಥವಾ ತ್ಯಾಗ ಮಾಡಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

    ಸದ್ಯ ಮಠದಲ್ಲಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೆ ಮುರುಘಾ ಶ್ರೀ ಮೇಲೆ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ. ಮುರುಘಾ ಮಠದ ನಾಲ್ಕು ಗೇಟ್ ಗಳಲ್ಲೂ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀ ಪೀಠ ತ್ಯಾಗ ಮಾಡಲಿ: ಎಚ್. ವಿಶ್ವನಾಥ್ ಆಗ್ರಹ

    Live Tv
    [brid partner=56869869 player=32851 video=960834 autoplay=true]

  • ಲೈಂಗಿಕ ಕಿರುಕುಳ ಪ್ರಕರಣ:ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯಗೆ ಜಾಮೀನು

    ಲೈಂಗಿಕ ಕಿರುಕುಳ ಪ್ರಕರಣ:ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯಗೆ ಜಾಮೀನು

    ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಕಳೆದ ಎರಡು ವರ್ಷದಿಂದ ಲೈಂಗಿಕ ಕಿರುಕುಳ ಆರೋಪ ಏದುರಿಸುತ್ತಿದ್ದಾರೆ. ಇದೀಗ ಗಣೇಶ್ ಆಚಾರ್ಯ ಅವರಿಗೆ ಜಾಮೀನು ಸಿಕ್ಕಿದೆ ಮುಂಬೈನ ಮೆಜೆಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಗಣೇಶ್ ಆಚಾರ್ಯ ವಿರುದ್ಧ 2020ರಲ್ಲಿ ಅವರ ಸಹ ನೃತ್ಯಗಾರ್ತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರಿಗೆ ಜಾಮೀನು ಸಿಕ್ಕಿದೆ ಮುಂಬೈನ ಮೆಜೆಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಗಣೇಶ್ ಆಚಾರ್ಯ ವಿರುದ್ಧ 2020ರಲ್ಲಿ ಅವರ ಸಹ ನೃತ್ಯಗಾರ್ತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಡಿಸೆಂಬರ್ ನಲ್ಲಿ ಮದುವೆ ಆಗಲಿದ್ದಾರೆ ತಿಥಿ ಸಿನಿಮಾ ಖ್ಯಾತಿಯ ಪೂಜಾ

    2019-2020ರಲ್ಲಿ ಗಣೇಶ್ ಆಚಾರ್ಯ ತನ್ನನ್ನು ಅವರ ಕಚೇರಿಯಲ್ಲಿ ಭೇಟಿಯಾಗುವಂತೆ ಹೇಳಿದ್ದರು. ಭೇಟಿಯಾಗಲು ಹೋದಾಗಲೆಲ್ಲ ಅಶ್ಲೀಲ ವಿಡಿಯೋಗಳನ್ನು ನೋಡುವಂತೆ ಒತ್ತಾಯಸುತ್ತಿದ್ದ ಎಂದು ದೂರುದಾರೆ ಗಂಭೀರ ಆರೋಪ ಮಾಡಿದ್ದರು. 2022 ಏಪ್ರಿಲ್ ನಲ್ಲಿ ಮುಂಬೈ ಪೊಲೀಸರ ಗಣೇಶ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

    ಆದರೆ ಈ ಪ್ರಕರಣದಲ್ಲಿ ಗಣೇಶ್ ಆಚಾರ್ಯ ಅವರನ್ನು ಇದುವರೆಗೂ ಬಂಧಿಸಿಲ್ಲ. ಗುರುವಾರ (ಜೂನ್ 23) ಗಣೇಶ್ ಆಚಾರ್ಯ ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜಾಮೀನು ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕೇಸ್ ಯಾವ ರೀತಿ ತಿರುವು ಪಡೆಯಲಿದೆ ಅಂತಾ ಕಾದುನೋಡಬೇಕಿದೆ.

    Live Tv

  • ಅಂಗಡಿಯೊಳಗೆ ಎಳೆದು ಬಾಲಕಿಯ ಕೆನ್ನೆ ಕಚ್ಚಿ ಲೈಂಗಿಕ ಕಿರುಕುಳ ನೀಡಿದ 55ರ ವ್ಯಕ್ತಿ

    ಅಂಗಡಿಯೊಳಗೆ ಎಳೆದು ಬಾಲಕಿಯ ಕೆನ್ನೆ ಕಚ್ಚಿ ಲೈಂಗಿಕ ಕಿರುಕುಳ ನೀಡಿದ 55ರ ವ್ಯಕ್ತಿ

    – ಚಾಕ್ಲೇಟ್ ಖರೀದಿಸಲು ಬಂದಿದ್ದ ಬಾಲಕಿ
    – ಆರೋಪಿ ವಿರುದ್ಧ ದೂರು ದಾಖಲು

    ಗಾಂಧಿನಗರ: 55 ವರ್ಷದ ವ್ಯಕ್ತಿಯೊಬ್ಬ 8 ವರ್ಷದ ಬಾಲಕಿಯ ಕೆನ್ನೆ ಕಚ್ಚಿ ಲೈಂಗಿಕ ಕಿರುಕುಳ ನೀಡಿದ ವಿಲಕ್ಷಣ ಘಟನೆ ಅಹಮ್ಮದಾಬಾದ್ ನಲ್ಲಿ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಆರೊಪಿ ವಿರುದ್ಧ ಅಹಮ್ಮದಾಬಾದ್ ಪೊಲೀಸ್ ಠಾಣೆಯಲದಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಬುಧವಾರ ಮಧ್ಯಾಹ್ನ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.

    ಬಾಲಕಿ ಬುಧವಾರ ಮಧ್ಯಾಹ್ನ ಕಿರಾಣಿ ಅಂಗಡಿಗೆ ತೆರಳಿದ್ದಳು. ಈ ವೇಳೆ ನೆರೆಮನೆಯವ ಎನ್ನಲಾದ ವ್ಯಕ್ತಿ ಆಕೆಯನ್ನು ಅಂಗಡಿಯೊಳಗೆ ತಳ್ಳಿ ಕೆನ್ನೆ ಕಚ್ಚಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

    ನನ್ನ ಮಗಳು ಕಿರಾಣಿ ಅಂಗಡಿಗೆ ಚಾಕ್ಲೇಟ್ ತೆಗೆದುಕೊಂಡು ಬರಲೆಂದು ಹೋಗಿದ್ದಳು. ಈ ವೇಳೆ ಮಾಲೀಕ ಆಕೆಯನ್ನು ಅಂಗಡಿಯೊಳಗೆ ಬಲವಂತವಾಗಿ ಎಳೆದು ಆಕೆಗೆ ಕಚ್ಚಿದ್ದಾನೆ. ಪರಿಣಾಮ ಮಗುವಿನ ಕೆನ್ನೆಗೆ ಗಾಯಗಳಾಗಿವೆ ಎಂದು ಮಾಧ್ಯಮವೊಂದಕ್ಕೆ ಬಾಲಕಿಯ ತಂದೆ ತಿಳಿಸಿದ್ದಾರೆ.

    ಘಟನೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಬಾಲಕಿಯ ತಂದೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354(ಎ) ಅಡಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲು ಮಾಡಿದ್ದಾರೆ. ಆರೋಪಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

  • ಲೈಂಗಿಕವಾಗಿ ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದಾರೆ – ನಾದಿನಿಗಾಗಿ ಬಾವನ ನೌಟಂಕಿ ಆಟ!

    ಲೈಂಗಿಕವಾಗಿ ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದಾರೆ – ನಾದಿನಿಗಾಗಿ ಬಾವನ ನೌಟಂಕಿ ಆಟ!

    ತುಮಕೂರು: ಅಪ್ರಾಪ್ತೆ ನಾದಿನಿಯನ್ನು ಮದುವೆ ಆಗಲು ಬಾವನೊಬ್ಬ ನೌಟಂಕಿ ಆಟ ಆಡಿರುವ ಘಟನೆ ತುಮಕೂರಿನ ಗುಬ್ಬಿ ತಾಲೂಕಿನ ಹಾಗಲವಾಡಿಯಲ್ಲಿ ನಡೆದಿದೆ.

    ರಾಜಶೇಖರ್ ನಾದಿನಿಗಾಗಿ ನಾಟಕ ಮಾಡಿದ ಬಾವ. ರಾಜಶೇಖರ್ ತನ್ನ ಅಪ್ರಾಪ್ತ ನಾದಿನಿಯನ್ನು ಮದುವೆಯಾಗಲು ಸುಳ್ಳು ಆರೋಪವನ್ನು ಮಾಡಿದ್ದನು. ನಾದಿನಿಯ ಪೋಷಕರು ಆಕೆಯನ್ನು 10 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಲೈಂಗಿಕವಾಗಿ ಬಳಸಿಕೊಳ್ಳಲು ಅನುಮತಿ ಕೊಟ್ಟು ಬಾಂಡ್ ಪೇಪರಲ್ಲಿ ಸಹಿ ಹಾಕಿದ್ದಾರೆ ಎಂದು ರಾಜಶೇಖರ್ ಕೆಲ ದಾಖಲೆ ಸಹಿತ ಆರೋಪ ಮಾಡಿದ್ದಾನೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕಿ ಹಾಗೂ ಆಕೆಯ ಪೋಷಕರು, ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಬಾಲಕಿಯನ್ನು ತಮ್ಮ ಅಳಿಯನೇ ಇನ್ನೊಂದು ಮದುವೆಯಾಗುವಂತೆ ಪೀಡಿಸುತ್ತಿದ್ದ. ಅಲ್ಲದೆ ಆಸ್ತಿ ಮೇಲೆ ಕಣ್ಣಿಟ್ಟಿದ್ದ. ಹಾಗಾಗಿ ಸುಳ್ಳು ದಾಖಲೆ ಸೃಷ್ಟಿಸಿ ಆರೋಪ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ.

    ತನ್ನ ಅಪ್ರಾಪ್ತೆ ನಾದಿನಿಯನ್ನು ಮಾವ ಹಾಗೂ ಅತ್ತೆ ಸೇರಿಕೊಂಡು ವಯಸ್ಸಾದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾರೆ. ಅಲ್ಲದೆ ಬೇರೆ ಯಾರು ಕೂಡ ಲೈಂಗಿಕವಾಗಿ ಬಳಸಿಕೊಳ್ಳಬಹುದು ಎಂದು ಅಗ್ರಿಮೆಂಟ್ ಗೆ ಸಹಿ ಹಾಕಿದ್ದಾರೆ. ಸಂಕಷ್ಟದಿಂದ ಬಾಲಕಿಯನ್ನು ಪಾರು ಮಾಡಬೇಕು ಎಂದು ರಾಜಶೇಖರ್, ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡುತ್ತಾರೆ. ಈ ದೂರಿನ ಜಾಡು ಹಿಡಿದು ಹೋದಾಗ ಸೀನ್ ಫುಲ್ ಉಲ್ಟಾ ಆಗಿದೆ.

    ತನಗೆ ಯಾರೂ ಮಾರಾಟ ಮಾಡಿಲ್ಲ. ನಾನು ಯಾರ ಜೊತೆನೂ ಹೋಗಿಲ್ಲ. ಬದಲಾಗಿ ನನ್ನ ಅಕ್ಕನ ಗಂಡ ರಾಜೇಶ್ ನನ್ನನ್ನು ಮದುವೆಯಾಗುವಂತೆ ಪೀಡಿಸ್ತಾ ಇದ್ದರು. ನಮ್ಮ ಅಪ್ಪ- ಅಮ್ಮಗೆ ಗಂಡು ಮಕ್ಕಳು ಇಲ್ಲದೆ ಇದ್ದುದರಿಂದ ಆಸ್ತಿ ಎಲ್ಲವೂ ತನ್ನೊಬ್ಬನಿಗೆ ಸಿಗುತ್ತದೆ ಎಂಬ ದುರಾಸೆಯಿಂದ ಸುಳ್ಳು ದಾಖಲೆ ಸೃಷ್ಟಿಸಿ ಸುಳ್ಳು ಆರೋಪ ಮಾಡಿದ್ದಾನೆ. ಅಲ್ಲದೆ ನಾನು 8ನೇ ತರಗತಿಯಿಂದ 10ನೇ ತರಗತಿವರೆಗೂ ಬಾವ ರಾಜೇಶೇಖರನ ಮನೆಯಲ್ಲೇ ಇದ್ದುಕೊಂಡು ಓದಿದ್ದು ಆ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ಕೊಟ್ಟಿದ್ದನು. ಮದುವೆಯಾಗುವಂತೆ ಪೀಡಿಸುತ್ತಿದ್ದನು. ಅದಕ್ಕಾಗಿ ಅವರ ಮನೆ ಬಿಟ್ಟು ಬಂದಿದ್ದೆ ಎಂದು ಬಾಲಕಿ ಪ್ರತ್ಯಾರೋಪ ಮಾಡಿದ್ದಾಳೆ.

    ಈ ಸುಳ್ಳು ಆರೋಪದ ಹಿನ್ನೆಲೆಯಲ್ಲಿ ರಾಜಶೇಖರನ ವಿರುದ್ಧ ಚೇಳೂರು ಪೊಲೀಸರಿಗೆ ದೂರು ನೀಡಿದ್ದಾಳೆ. ಯಾವುದು ಸತ್ಯ. ಯಾವುದು ಸುಳ್ಳು ಎನ್ನುವುದನ್ನು ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ವಿದ್ಯಾರ್ಥಿನಿ ಖಾಸಗಿ ಅಂಗ ಮುಟ್ಟಿ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

    ವಿದ್ಯಾರ್ಥಿನಿ ಖಾಸಗಿ ಅಂಗ ಮುಟ್ಟಿ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

    ಚಿಕ್ಕಬಳ್ಳಾಪುರ: ಸರ್ಕಾರಿ ಶಾಲಾ ಶಿಕ್ಷಕನೊರ್ವ 5ನೇ ತರಗತಿ ವಿದ್ಯಾರ್ಥಿನಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಿಕ್ಷಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಅಂಜನಮೂರ್ತಿ ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಶಿಕ್ಷಕ. ಅಂಜನಮೂರ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮವೊಂದರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

    ಬೇಸಿಗೆ ರಜಾ ದಿನಗಳಾದರೂ ಮಧ್ಯಾಹ್ನದ ಬಿಸಿಯೂಟ ಸವಿಯಲು ಶಾಲೆಗೆ ಬಂದಿದ್ದ ವಿದ್ಯಾರ್ಥಿನಿ ಜೊತೆ ಶಿಕ್ಷಕ ಅಂಜನಮೂರ್ತಿ ಅಸಭ್ಯವಾಗಿ ವರ್ತಿಸಿದ್ದಾನೆ. ಬಿಸಿಯೂಟ ಸವಿದು ಎಲ್ಲಾ ವಿದ್ಯಾರ್ಥಿಗಳು ಹೊರಟರೂ 5ನೇ ತರಗತಿಯ ವಿದ್ಯಾರ್ಥಿನಿಯನ್ನು ಮನೆಗೆ ಕಳುಹಿಸದೇ ಶಿಕ್ಷಕ ಶಾಲೆಯಲ್ಲೇ ಆಕೆಯನ್ನು ಮೈ ಮೇಲೆ ಕೂರಿಸಿಕೊಂಡು ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

    ಈ ಘಟನೆಯಿಂದ ಗಾಬರಿಗೊಂಡ ವಿದ್ಯಾರ್ಥಿನಿ ಶಾಲೆಯಿಂದ ಓಡಿ ಹೋಗಿ ಮನೆಯಲ್ಲಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ಶಾಲೆ ಬಳಿ ಬಂದ ಪೋಷಕರು ಹಾಗೂ ಗ್ರಾಮಸ್ಥರು ಶಾಲಾ ಶಿಕ್ಷಕ ಅಂಜನಮೂರ್ತಿಗೆ ಹಿಗ್ಗಾಮುಗ್ಗಾ ಥಳಿಸಿ ವಿಶ್ವನಾಥಪುರ ಪೊಲೀಸರಿಗೆ ಓಪ್ಪಿಸಿದ್ದಾರೆ.

    ಈ ಬಗ್ಗೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲೈಂಗಿಕ ಕಿರುಕುಳ ಆರೋಪ- ಮನನೊಂದ ಟೆಕ್ಕಿ ಆತ್ಮಹತ್ಯೆಗೆ ಶರಣು

    ಲೈಂಗಿಕ ಕಿರುಕುಳ ಆರೋಪ- ಮನನೊಂದ ಟೆಕ್ಕಿ ಆತ್ಮಹತ್ಯೆಗೆ ಶರಣು

    ಲಕ್ನೋ: ಕೆಲಸ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಆರೋಪವನ್ನು ಎದುರಿಸುತ್ತಿದ್ದ 35 ವರ್ಷದ ಟೆಕ್ಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    35 ವರ್ಷದ ಸ್ವರೂಪ್ ರಾಜ್ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಸ್ವರೂಪ್ ನೋಯ್ಡಾದ ಜೆನ್‍ಪ್ಯಾಕ್ಟ್ ಸಾಫ್ಟ್ ವೇರ್ ಕಂಪೆನಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಕಚೇರಿಯಲ್ಲಿ ಇಬ್ಬರು ಸಹೋದ್ಯೋಗಿಗಳು ಲೈಂಗಿಕ ಆರೋಪವನ್ನು ಸ್ವರೂಪ್ ಮೇಲೆ ಹೊರಿಸಿದ್ದರು. ಹೀಗಾಗಿ ಸ್ವರೂಪ್ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತೆಂದು ಪೊಲೀಸರು ಹೇಳಿದ್ದಾರೆ.

    ಲೈಂಗಿಕ ಆರೋಪದ ಆಪಾದನೆಯಿಂದ ತೀವ್ರವಾಗಿ ಮನನೊಂದಿದ್ದ ಸ್ವರೂಪ್, ಗುರುವಾರ ನೋಯ್ಡಾದ ಸೆಕ್ಟರ್ 137ರರಲ್ಲಿರುವ ತಮ್ಮ ನಿವಾಸದಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದೇವೆ. ಅಲ್ಲದೇ ಘಟನಾ ಸಂಬಂಧ ಸ್ವರೂಪ್ ಕುಟುಂಬದವರು ಯಾವುದೇ ದೂರನ್ನು ದಾಖಲಿಸಿಲ್ಲ. ಹೀಗಾಗಿ ಸ್ವಯಂ ದೂರನ್ನು ದಾಖಲಿಸಿಕೊಂಡಿದ್ದೇವೆಂದು ಗೌತಮ್ ಬುದ್ಧ ನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಲ್ ಶರ್ಮಾ ಅವರು ಹೇಳಿದ್ದಾರೆ.

    ಸ್ವರೂಪ್ ರಾಜ್ ಆತ್ಮಹತ್ಯೆಗೂ ಮುನ್ನ ತನ್ನ ಪತ್ನಿಗೆ ಪತ್ರ ಬರೆದಿದ್ದರು, ಪತ್ರದಲ್ಲಿ “ನಿನಗೆ ಗೊತ್ತು ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದು. ಆದರೆ ನನ್ನ ಕಚೇರಿಯಲ್ಲಿ ಇಬ್ಬರು ಸಹದ್ಯೋಗಿಗಳು ನನ್ನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದಾರೆ. ನನ್ನನ್ನು ನಂಬು ನಾನು ಆ ರೀತಿ ನಡೆದುಕೊಂಡಿಲ್ಲ. ನನಗೆ ಗೊತ್ತು ಈ ಜಗತ್ತು ಯಾವ ರೀತಿ ಅರ್ಥಮಾಡಿಕೊಳ್ಳುತ್ತದೆಂದು. ಆದರೂ ನೀನು ಹಾಗೂ ನಮ್ಮ ಕುಟುಂಬ ನನ್ನನ್ನು ನಂಬಿದರೇ ಸಾಕು” ಎಂದು ಬರೆದಿದ್ದಾರೆ.

    “ಆ ಒಂದು ಆಪಾದನೆ ಶೀಘ್ರವೇ ಜೆನ್‍ಪ್ಯಾಕ್ಟ್ ನಲ್ಲಿರುವವರಿಗೆ ತಿಳಿಯುತ್ತದೆ. ಆದರೆ ನಾನು ಎಲ್ಲರನ್ನೂ ಎದುರಿಸಲು ಸಾಧ್ಯವಿಲ್ಲ. ನಾನು ಧೈರ್ಯ ಹಾಗೂ ಗೌರವದಿಂದ ನಿನ್ನ ಜೊತೆ ಜೀವನ ಸಾಗಿಸಬೇಕೆಂದು ಅಂದುಕೊಂಡಿದ್ದೆ. ನಿನ್ನ ಗಂಡ ಏನೂ ಮಾಡಲಿಲ್ಲ. ನಾನು ಆರೋಪ ಮುಕ್ತನಾಗಿ ಬಂದರೂ, ಎಲ್ಲರೂ ನನ್ನನ್ನು ಕೆಟ್ಟ ರೀತಿಯಲ್ಲೇ ನೋಡುತ್ತಾರೆಂದು” ಬರೆದಿದ್ದಾರೆಂದು ಅಜಯ್ ಪಾಲ್ ಶರ್ಮಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ರಾಪ್ತ ಬಾಲಕಿಗೆ ಶೌಚಾಲಯದಲ್ಲಿ ಲೈಂಗಿಕ ಕಿರುಕುಳ – ಕಾಮುಕ ವಿದ್ಯಾರ್ಥಿ ಬಂಧನ

    ಅಪ್ರಾಪ್ತ ಬಾಲಕಿಗೆ ಶೌಚಾಲಯದಲ್ಲಿ ಲೈಂಗಿಕ ಕಿರುಕುಳ – ಕಾಮುಕ ವಿದ್ಯಾರ್ಥಿ ಬಂಧನ

    ಬೆಂಗಳೂರು: ಅಪ್ರಾಪ್ತ ಬಾಲಕಿ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ವಿದ್ಯಾರ್ಥಿಯೊಬ್ಬನನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರು ಪೂರ್ವ ತಾಲೂಕಿನ ಬೊಮ್ಮನಹಳ್ಳಿಯ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಲೈಂಗಿಕ ಕಿರುಕುಳ ನೀಡಿದ್ದಾನೆ.

    ವಿದ್ಯಾರ್ಥಿನಿ ಶೌಚಾಲಯದಲ್ಲಿ ಕಿರುಚಾಡಿದ್ದನ್ನು ಗಮನಿಸಿದವರು ವಿದ್ಯಾರ್ಥಿಯನ್ನು ಹಿಡಿದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಆವಲಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ಹೊಸಕೋಟೆ ತಾಲೂಕಿನ ಕುರುಬರಹಳ್ಳಿ ನಿವಾಸಿ ಎಂದು ತಿಳಿದು ಬಂದಿದೆ. ಸದ್ಯ ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೈಹಿಕ ಶಿಕ್ಷಣ ಶಿಕ್ಷಕನಿಂದ ಕಾಮ ಪಾಠ- ಅನಾಥ ವಿದ್ಯಾರ್ಥಿನಿಯರೇ ಈತನ ಟಾರ್ಗೆಟ್!

    ದೈಹಿಕ ಶಿಕ್ಷಣ ಶಿಕ್ಷಕನಿಂದ ಕಾಮ ಪಾಠ- ಅನಾಥ ವಿದ್ಯಾರ್ಥಿನಿಯರೇ ಈತನ ಟಾರ್ಗೆಟ್!

    ಕಲಬುರಗಿ: ವಿದ್ಯೆ ಕೊಟ್ಟು ಪಾಠ ಕಲಿಸುವ ಶಿಕ್ಷಕನೊಬ್ಬ ಅನಾಥ ವಿದ್ಯಾರ್ಥಿನಿಯರಿಗೆ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣವೊಂದು ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ.

    ಬಸವರಾಜ್ ಕಲಬುರಗಿಯ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ. ಅನಾಥ ಮಕ್ಕಳೇ ಈತನ ಟಾರ್ಗೆಟ್ ಆಗಿದ್ದು, ವಿದ್ಯಾರ್ಥಿನಿಯರನ್ನು ತನ್ನ ಕೊಠಡಿಗೆ ಕರೆಸಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಈತನ ಕಾಮದಾಟದಿಂದ ಬೇಸತ್ತ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

    ಅನಾಥ ಮಕ್ಕಳು ಅಂದರೆ ಅವರಿಗೆ ಹಿಂದೆ-ಮುಂದೆ ಯಾರೂ ಇರಲ್ಲ ಎಂದುಕೊಂಡು ಕಾಮಿ ಶಿಕ್ಷಕ, ಈ ಹಿಂದೆಯೂ ಕೂಡ ಸಾಕಷ್ಟು ಅನಾಥ ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ದೌರ್ಜನ್ಯವೆಸಗಿದ್ದಾನೆ. ಸದ್ಯ ಕಾಮುಕ ಶಿಕ್ಷಕ ಬಸವರಾಜ್ ಕಲಬುರಗಿ ಪೊಲೀಸರ ಅತಿಥಿಯಾಗಿದ್ದಾನೆ.

    ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿ, ತಿದ್ದಿ ತೀಡುವ ಗುರುವಿಗೆ ಅತ್ಯುನ್ನತ ಸ್ಥಾನ ಇದೆ. ಆದರೆ ಈ ಶಿಕ್ಷಕ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಬಿಟ್ಟು ಕಾಮದಾಟ ಆಡುತ್ತಾ ಸಮಾಜ ತಲೆ ತಗ್ಗಿಸುವ ಕೆಲಸ ಮಾಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಡಿಪಿಒ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಮಂಚಕ್ಕೆ ಆಹ್ವಾನ- ಹಣ ನೀಡಲು ಆಗದಿದ್ದಲ್ಲಿ ಸೆಕ್ಸ್ ಮಾಡುವಂತೆ ಒತ್ತಾಯ

    ಸಿಡಿಪಿಒ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಮಂಚಕ್ಕೆ ಆಹ್ವಾನ- ಹಣ ನೀಡಲು ಆಗದಿದ್ದಲ್ಲಿ ಸೆಕ್ಸ್ ಮಾಡುವಂತೆ ಒತ್ತಾಯ

    ಕಲಬುರಗಿ: ಮಹಿಳೆಯರನ್ನು ರಕ್ಷಣೆ ಮಾಡಬೇಕಾದ ಕಲಬುರಗಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ) ಮಹಿಳಾ ಸಿಬ್ಬಂದಿಗೆ ಮಂಚಕ್ಕೆ ಕರೆದಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

    ನಮ್ಮ ಸಮಾಜದಲ್ಲಿ ಮಹಿಳೆಯರು ಶೋಷಣೆಗೆ ಒಳಗಾದರೆ ರಕ್ಷಣೆ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸ್ಥಾಪಿಸಿದೆ. ಆದರೆ ಕಲಬುರಗಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಯಾವುದು ಸರಿಯಿಲ್ಲ. ಏಕೆಂದರೆ ಮಹಿಳೆಯರ ಹಿತ ಕಾಯಬೇಕಾದ ಇಲ್ಲಿನ ಸಿಡಿಪಿಒ ರಾಮನ್ ಇಲ್ಲಿನ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಮನಸಿಗೆ ಬಂದಷ್ಟು ಹಣವನ್ನು ಕೇಳಿ ಹಣ ಕೊಡಲು ಆಗದಿದ್ದಲ್ಲಿ ದೈಹಿಕ ಸಂಬಂಧವನ್ನು ಹೊಂದುವಂತೆ ಒತ್ತಾಯಿಸಿದ್ದಾನೆ.

    ಕಾಮುಕ ಅಧಿಕಾರಿ ವಿರುದ್ಧ ಜಿಲ್ಲಾ ಪಂಚಾಯತ್ ಸದಸ್ಯರು ಕ್ರಮಕ್ಕೆ ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ನೊಂದ ಮಹಿಳೆ ರಾಷ್ಟ್ರೀಯ ಮಾನವ ಹಕ್ಕುಗಳ ಮೊರೆ ಹೋಗಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಕಲಬುರಗಿ ಗ್ರಾಮೀಣದ ಶಿಶು ಅಭಿವೃದ್ಧಿ ಅಧಿಕಾರಿ ಸಿ.ವಿ.ರಾಮನ್ ಸುಖಾ ಸುಮ್ಮನೆ ದಬ್ಬಾಳಿಕೆಯನ್ನ ಮಾಡುತ್ತಿದ್ದಾರೆ. ಯಾವುದಾದರೂ ಕೆಲಸ ಮಾಡಿಕೊಡಲು ಹಣವನ್ನು ಕೇಳುತ್ತಾರೆ. ಹಣ ಕೊಡಲು ಆಗದೇ ಇದ್ದಲ್ಲಿ ಅವರು ತಮ್ಮ ಜೊತೆ ದೈಹಿಕ ಸಂಬಂಧವನ್ನು ಹೊಂದುವಂತೆ ಒತ್ತಾಯಿಸುತ್ತಾರೆ. ಆದರೆ ಇವರು ಹೆಣ್ಣು ಮತ್ತು ಹಣವನ್ನು ಕೊಟ್ಟರೆ ಯಾವ ಕೆಲಸ ಬೇಕಾದರೂ ಸಲಿಸಾಗಿ ಮಾಡಿಕೊಡುತ್ತಿದ್ದಾರೆ. ಹೀಗೆ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವುದರ ಜೊತೆ ಮಹಿಳಾ ಸಿಬ್ಬಂದಿ ಜೀವನದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಹೀಗಾಗಿ ರಾಮನ್ ಮೇಲೆ ಕೂಡಲೇ ಸೂಕ್ತ ಕ್ರಮ ಜರುಗಿಸಿ ಅಮಾಯಕ ಮಹಿಳಾ ಸಿಬ್ಬಂದಿ ಮೇಲೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಸಿ.ವಿ.ರಾಮನ್ ಮೇಲೆ ಬಂದಿರುವ ಲೈಂಗಿಕ ಆರೋಪ ಕುರಿತು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದ್ದು, ಕೂಡಲೇ ರಾಮನ್ ನನ್ನು ಆ ಸ್ಥಾನದಿಂದ ಅಮಾನತು ಮಾಡಲು ನಿರ್ಧಾರ ಕೈಗೊಂಡರೂ ಪ್ರಯೋಜನವಾಗಿಲ್ಲ. ಹೀಗಾದರೆ ಮಹಿಳಾ ಸಿಬ್ಬಂದಿಯನ್ನು ಯಾರು ರಕ್ಷಣೆ ಮಾಡಬೇಕು ಎಂಬುದು ಜಿಲ್ಲಾ ಪಂಚಾಯತ್ ಸದಸ್ಯರ ಪ್ರಶ್ನೆಯಾಗಿದೆ.

    ಸಿ.ವಿ.ರಾಮನ್ ವಿರುದ್ಧ ಇನ್ನಿತರ ಮಹಿಳಾ ಸಿಬ್ಬಂದಿಗಳು ಸಹ ಲೈಂಗಿಕ ಆರೋಪದ ಕುರಿತು ದೂರು ನೀಡಿದ್ದು, ಆ ಒಂದು ತನಿಖೆಯನ್ನು ಕಮರ್ಷಿಯಲ್ ಟ್ಯಾಕ್ಸ್ ನ ಹಿರಿಯ ಮಹಿಳಾ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ. ಇಷ್ಟೆಲ್ಲ ಆದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಈಗಲಾದರೂ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv