Tag: sexual arrassment

  • ಸೋಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ವಾರ್ಡ್ ಬಾಯ್ ಅರೆಸ್ಟ್

    ಸೋಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ವಾರ್ಡ್ ಬಾಯ್ ಅರೆಸ್ಟ್

    ಹುಬ್ಬಳ್ಳಿ: ಇಲ್ಲಿನ ಬಾಲಾಜಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೊಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶ್ವಸಿಯಾಗಿದ್ದಾರೆ.

    ಬಂಧಿತನನ್ನು ಅಶೋಕ್ ಹಲಗಿ ಎಂದು ಗುರುತಿಸಲಾಗಿದೆ. ಕಳೆದ 23ರಂದು ಹುಬ್ಬಳ್ಳಿಯ ಪ್ರತಿಷ್ಠಿತ ಬಾಲಾಜಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್ ಸೊಂಕಿತ ಮಹಿಳೆಯ ಮೇಲೆ ವಾರ್ಡಬಾಯ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಸೋಂಕಿತ ಮಹಿಳೆ ಪುತ್ರನಿಗೆ ಈ ಕುರಿತು ಮಾಹಿತಿ ನೀಡಿದ್ದಳು.

    ಘಟನೆ ಬೆಳಕಿಗೆ ಬಂದ ನಂತರ ಸೊಂಕಿತ ಮಹಿಳೆಯ ಪರವಾಗಿ ಪುತ್ರ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ನಂತರ ಕೃತ್ಯವನ್ನ ಆಸ್ಪತ್ರೆಯ ಆಡಳಿತ ಮಂಡಳಿ ಅಲ್ಲಗೆಳೆದಿದ್ದರು. ಅಲ್ಲದೇ ದೂರುದಾರನ ವಿರುದ್ಧ ಸುಳ್ಳು ಆರೋಪ ಮಾಡಿದ್ರು. ಈ ಘಟನೆಯ ಬಗ್ಗೆ ವಿಸ್ತೃತವಾಗಿ ತನಿಖೆ ನಡೆಸಿದ ವಿದ್ಯಾನಗರ ಪೋಲೀಸರು ಸೊಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಾರ್ಡ್ ಬಾಯ್ ಅಶೋಕ ಹಲಗಿಯನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಇದನ್ನೂ ಓದಿ: ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ ಬಯಲಿಗೆ

    ವಾರ್ಡಬಾಯ್ ಅಶೋಕ್ ಹಲಗಿ ಕೃತ್ಯ ಎಸಗಿದ ನಂತರ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಅಲ್ಲದೇ ಆಸ್ಪತ್ರೆಯಿಂದ ಪರಾರಿಯಾಗಿ ಅಪಘಾತದಲ್ಲಿ ಗಾಯಗೊಂಡಿದ್ದ. ಆರೋಪಿಯ ಚಲನವಲನ ಪತ್ತೆ ಮಾಡಿದ ಪೊಲೀಸರು ಆರೋಪಿಯನ್ನ ಬಂಧಿಸಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಮೃತರ ಮೊಬೈಲ್ ಕದ್ದ ಆರೋಪಿ ಬಂಧನ 

    ಘಟನೆಯ ಕುರಿತು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಸೋಂಕಿತನ ಜೇಬಿನಿಂದ ನಗದು ಕದ್ದು ಸಿಕ್ಕಿಬಿದ್ದ ಕೋವಿಡ್ ಆಸ್ಪತ್ರೆಯ ಮಹಿಳಾ ಸಿಬ್ಬಂದಿ

  • ಪಾರ್ಲರ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಬ್ಯೂಟಿಷಿಯನ್ ಬಂಧನ

    ಪಾರ್ಲರ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಬ್ಯೂಟಿಷಿಯನ್ ಬಂಧನ

    ಬೆಂಗಳೂರು: ಸೌದಿ ಅರೇಬಿಯಾ ವಿದ್ಯಾರ್ಥಿನಿಯ ಮೇಲೆ ಬ್ಯೂಟಿಷಿಯನೊಬ್ಬ ಲೈಂಗಿಕ ದೌರ್ಜನ್ಯವೆಸಗಿರೋ ಘಟನೆ ಇಂದು ಬೆಳಕಿಗೆ ಬಂದಿದೆ.

    ಜಾವಿದ್ ಹಬೀಬ್ ಬ್ಯೂಟಿ ಪಾರ್ಲರ್ ಬ್ಯೂಟಿಷಿಯನ್ ಲಕ್ಕಿಸಿಂಗ್ ಎಂಬಾತ ಎಂಎಸ್ ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಗೆ ಕಿರುಕುಳ ನೀಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಶನಿವಾರ ಕಾಲೇಜ್ ಫೆಸ್ಟ್ ಇದ್ದ ಕಾರಣ ಸೌದಿ ಮೂಲದ ವಿದ್ಯಾರ್ಥಿನಿ ಬ್ಯೂಟಿ ಪಾರ್ಲರ್ ಗೆ ತೆರಳಿದ್ದಳು. ಈ ವೇಳೆ ಅಲ್ಲಿನ ಬ್ಯೂಟಿಷಿಯನ್ ಲಕ್ಕಿಸಿಂಗ್ ವಿದ್ಯಾರ್ಥಿನಿ ಮೇಲೆ ತನ್ನ ವಿಕೃತಿ ಮೆರೆದಿದ್ದಾನೆ. ಘಟನೆಯ ಬಳಿಕ ವಿದ್ಯಾರ್ಥಿನಿ ತನ್ನ ಗೆಳತಿಯರ ಜೊತೆ ಈ ವಿಚಾರವನ್ನು ಹಂಚಿಕೊಂಡಿದ್ದಾಳೆ. ನಂತರ ಸ್ನೇಹಿತೆಯರ ಸಹಾಯದಿಂದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರು ದಾಖಲಿಸಿದ ಎರಡೇ ಗಂಟೆಯಲ್ಲಿ ಪೊಲೀಸರು ಆರೋಪಿ ಬ್ಯೂಟಿಷಿಯನ್ ನನ್ನು ಬಂಧಿಸಿದ್ದಾರೆ.

  • ತಲೆಗೆ ಹೇರ್ ಡೈ ಹಾಕ್ಕೊಂಡು ಬಾ, ಗೋವಾಗೆ ಹೋಗಿ ಮರಳಲ್ಲಿ ಉರುಳಾಡೋಣ ಎಂದು ಮಹಿಳಾ ಅಧಿಕಾರಿಗೆ ಕಿರುಕುಳ

    ತಲೆಗೆ ಹೇರ್ ಡೈ ಹಾಕ್ಕೊಂಡು ಬಾ, ಗೋವಾಗೆ ಹೋಗಿ ಮರಳಲ್ಲಿ ಉರುಳಾಡೋಣ ಎಂದು ಮಹಿಳಾ ಅಧಿಕಾರಿಗೆ ಕಿರುಕುಳ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರು ಜೀವನ ನಡೆಸಲು ಕಷ್ಟವಿದೆ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಇದೀಗ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಅಧಿಕಾರಿಗೆ ಅಲ್ಲಿನ ಅಧೀನ ಕಾರ್ಯದರ್ಶಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಆರೋಪವೊಂದು ಕೇಳಿಬಂದಿದೆ.

    ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರ ಮೇಲೆ ಈ ಆರೋಪ ಕೇಳಿಬಂದಿದ್ದು, ತನ್ನ ಮೇಲಿನ ಕಿರುಕುಳ ಬಗ್ಗೆ ಮಹಿಳಾ ಅಧಿಕಾರಿ ಇದೀಗ ಹಿರಿಯ ಅಧಿಕಾರಿ, ಸ್ಪೀಕರ್ ಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಏನಿದು ಕಿರುಕುಳ?: ನಾನು ಎಲ್ಲರಿಗಿಂತ ನಿನ್ನನ್ನೇ ಇಷ್ಟಪಡೋದು. ನಾವೆಲ್ಲ ಹೋಗಿ ಗೋವಾಕ್ಕೆ ಹೋಗಿ ಮರಳಿನಲ್ಲಿ ಉರುಳಾಡೋಣ. ನೀನು ತಲೆಗೆ ಹೇರ್ ಡೈ ಮಾಡಿಕೊಂಡು ಬಾ. ಸ್ಮಾರ್ಟ್ ಆಗಿ ಬಾ ನನಗೆ ಎನರ್ಜಿ ಬರಬೇಕು. ನಿನ್ನ ಮಗಳಿಗೆ ಮದುವೆ ಯಾಕೆ ಮಾಡುತ್ತೀಯಾ. ನಿನ್ನ ಬಾಳು ಹಾಳಾದ ಹಾಗೆ ಆಗುತ್ತೆ. ಅವಳಿಗೆ ಮದುವೆ ಮಾಡಬೇಡ. ನೀನು ಎರಡನೇ ಮದುವೆ ಯಾಕೆ ಮಾಡಿಕೊಂಡೆ. 10 ವರ್ಷದ ಹಿಂದೆ ನನಗೆ ಗೊತ್ತಿದ್ದರೆ ನಾನು ನಿನ್ನನ್ನು ಹಾರಿಸಿಕೊಂಡು ಹೋಗುತ್ತಿದ್ದೆ. ನೀನು ಚೆನ್ನಾಗಿದ್ದೀಯ ಅಂತ ನಿನಗೆ ಕೊಬ್ಬಾ. ನಾನು ಹತ್ತು ವರ್ಷ ಇರುತ್ತೀನಿ. ಈ ಹತ್ತು ವರ್ಷದಲ್ಲಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದೆಲ್ಲಾ ಕಾರ್ಯದರ್ಶಿ ಮೂರ್ತಿ ಕಿರುಕುಳ ನೀಡಿದ್ದಾನೆ ಅಂತ ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.

    ಈ ಕುರಿತು ಒಂದು ತಿಂಗಳ ಹಿಂದೆಯೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರಂತೆ. ಆ ಬಳಿಕ ಮಹಿಳಾ ಅಧಿಕಾರಿ ಕಾನೂನು ಸಚಿವ ಜಯಚಂದ್ರರಿಗೂ ಈ ಕುರಿತು ನೀಡಿದ್ದರಂತೆ. ಈ ವೇಳೆ ಸಚಿವರು ಕಾರ್ಯದರ್ಶಿಯನ್ನು ಕರೆದು ಎಚ್ಚರಿಕೆ ನೀಡಿದ್ದರು. ಆದ್ರೆ ಸಚಿವರ ಅವರ ಮಾತಿಗೆ ಕ್ಯಾರೆ ಎನ್ನದ ಆತ ತನ್ನ ಚಾಳಿ ಮುಂದುವರೆಸಿದ್ದಾನೆ. ಇದರಿಂದ ನೊಂದ ಮಹಿಳಾ ಅಧಿಕಾರಿ ನೇರವಾಗಿಯೇ ಜಯಚಂದ್ರಗೆ ಪತ್ರದ ಮುಖಾಂತರ ದೂರು ನೀಡಿದ್ದಾರೆ. ದೂರಿನಲ್ಲಿ ತಮ್ಮ ಮೇಲಿನ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಕಾರ್ಯದರ್ಶಿ ಮೂರ್ತಿಯ ಅಕ್ರಮದ ಬಗ್ಗೆ ಈ ಹಿಂದೆ ಪಬ್ಲಿಕ್ ಟಿವಿಯಲ್ಲಿ ವರದಿ ಬಿತ್ತರಿಸಲಾಗಿತ್ತು. ಈಗಾಗಲೇ ಈತನ ಮೇಲೆ ಲೋಕಾಯುಕ್ತದಲ್ಲಿ ದೂರು ನೀಡಲಾಗಿದ್ದು, ಎರಡು ಬಾರಿ ನೋಟಿಸ್ ನೀಡಿದ್ದರೂ ಗೈರು ಹಾಜರಾಗಿದ್ದನು. ಮೂರ್ತಿ ವಿರುದ್ಧ ಹಲವು ಮಹಿಳಾ ಅಧಿಕಾರಿಗಳು ಲೈಂಗಿಕ ಕಿರುಕುಳದ ಬಗ್ಗೆ ಸ್ಪೀಕರ್ ಗೆ ಮೌಖಿಕ ದೂರು ನೀಡಿದ್ದರೂ ಸ್ಪೀಕರ್ ಕ್ರಮ ಕೈಗೊಂಡಿಲ್ಲ ಅಂತ ಆರೋಪ ವ್ಯಕ್ತವಾಗಿದೆ.

    ಅಲ್ಲದೇ ಈ ಹಿಂದೆ ಈತನ ಆಡಳಿತಕ್ಕೆ ಬೇಸೆತ್ತು ಮಹಿಳಾ ಅಧಿಕಾರಿಗಳು ವಿಧಾನಸೌಧದಲ್ಲಿ ಪ್ರತಿಭಟನೆ ಕೂಡ ನಡೆಸಿದ್ರು. ಆ ಸಂದರ್ಭದಲ್ಲೂ ಕೂಡ ಎಚ್ಚೆತ್ತುಕೊಳ್ಳದ ಸ್ಪೀಕರ್ ಮೂರ್ತಿಯ ಮೇಲೆ ಅನುಕಂಪ ತೋರಿಸಿ ಮಹಿಳಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರು. ಈತನ ಬದಲಾವಣೆಗೆ ಮುಖ್ಯಮಂತ್ರಿ ಕೂಡ ಶಿಫಾರಸ್ಸು ಮಾಡಿದ್ರು. ಆದ್ರೆ ದಲಿತ ಸಂಘಟನೆಗಳನ್ನು ಮುಖ್ಯಮಂತ್ರಿಗಳ ಮನೆಗೆ ಕಳುಹಿಸಿ ಬದಲಾಯಿಸದಂತೆ ಒತ್ತಡ ಹಾಕಿಸಿದ್ದ ಎಂದು ತಿಳಿದುಬಂದಿದೆ.

  • ಗಗನಸಖಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ, ಹಲ್ಲೆ- ಎಂ.ಟೆಕ್ ವಿದ್ಯಾರ್ಥಿ ಬಂಧನ

    ಗಗನಸಖಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ, ಹಲ್ಲೆ- ಎಂ.ಟೆಕ್ ವಿದ್ಯಾರ್ಥಿ ಬಂಧನ

    ಬೆಂಗಳೂರು: ಗಗನಸಖಿಯೊಬ್ಬರಿಗೆ ಪ್ರಯಾಣಿಕನೋರ್ವ ವಿಮಾನದಲ್ಲೇ ಲೈಂಗಿಕ ಕಿರುಕುಳ ನೀಡಿದ್ದು, ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.

    ಕೊಲ್ಕತ್ತಾದ ಕ್ಷಿತಿಜ್ ಗುರುಂಗ್ ಎಂಬಾತ ಗಗನಸಖಿ ಫೌಜಿಯಾ ಎಂಬಾಕೆಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿ ಕ್ಷಿತಿಜ್ ನಗರದ ಖಾಸಗಿ ಕಾಲೇಜಿನಲ್ಲಿ ಎಂ.ಟೆಕ್ ವಿದ್ಯಾರ್ಥಿಯಾಗಿದ್ದಾನೆ.

    ಇಂಡಿಗೋ ವಿಮಾನದಲ್ಲಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಆರೋಪಿ ಗಗನಸಖಿ ಮೈ ಮೇಲೆ ಕೈ ಹಾಕಿದ್ದಾನೆ. ಇದನ್ನು ಮತ್ತೊರ್ವ ಗಗನಸಖಿ ಪ್ರಶ್ನಿಸಿದ್ದು, ಇದರಿಂದ ಸಿಟ್ಟುಗೊಂಡ ಕ್ಷಿತಿಜ್ ಗಗನಸಖಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ವಿಮಾನದ ಸಹಪ್ರಯಾಣಿಕರು ಗಲಾಟೆ ಬಿಡಿಸಿದ್ದಾರೆ.

    ಬಳಿಕ ಇಬ್ಬರು ಗಗನಸಖಿಯರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಗಗನಸಖಿಯರ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • 25 ವರ್ಷದ ಟೆಕ್ಕಿಯ ಮುಖ ಮಿರರಲ್ಲಿ ನೋಡುತ್ತಾ ಕಾರ್ ಡ್ರೈವ್ ಮಾಡ್ತಾ ಚಾಲಕನ ಹಸ್ತಮೈಥುನ!

    25 ವರ್ಷದ ಟೆಕ್ಕಿಯ ಮುಖ ಮಿರರಲ್ಲಿ ನೋಡುತ್ತಾ ಕಾರ್ ಡ್ರೈವ್ ಮಾಡ್ತಾ ಚಾಲಕನ ಹಸ್ತಮೈಥುನ!

    ಹೈದರಾಬಾದ್: ಟೆಕ್ಕಿಯೊಬ್ಬಳು ಉಬರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಸ್ತಮೈಥುನ ಮಾಡಿಕೊಂಡ ಚಾಲಕನನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. 26 ವರ್ಷ ದಾದಿ ಪ್ರೇಮ್ ಕುಮಾರ್ ಬಂಧಿತ ಚಾಲಕ.

    ಏನಾಗಿತ್ತು?: ದೆಹಲಿ ಮೂಲದ 25 ವರ್ಷದ ಟೆಕ್ಕಿಯೊಬ್ಬಳು ತನ್ನ ಕುಟುಂಬದವರ ಜೊತೆ ದೀಪಾವಳಿ ಆಚರಿಸಿಕೊಳ್ಳಲು ಹೊರಟಿದ್ದಳು. ಇದಕ್ಕಾಗಿ ಆಕೆ ಉಬರ್ ಟ್ಯಾಕ್ಸಿ ಬುಕ್ ಮಾಡಿದ್ದಳು. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಏರ್ ಪೋರ್ಟ್ ಗೆ ತೆರಳುತ್ತಿದ್ದ ಕಾರು ಹೊರ ವರ್ತುಲ ರಸ್ತೆಗೆ ಬರುತ್ತಿದ್ದಂತೆಯೇ ಚಾಲಕ ಪ್ರೇಮ್ ಕುಮಾರ್ ಕಾರಿನ ವೇಗಕ್ಕೆ ಕಡಿವಾಣ ಹಾಕಿದ್ದಾರೆ.

    ಕಾರಿನ ವೇಗವನ್ನು ಇಳಿಸಿದ ಚಾಲಕ ಕಾರಿನಲ್ಲಿದ್ದ ರಿಯರ್ ಮಿರರ್ ನಲ್ಲಿ ಯುವತಿಯನ್ನು ನೋಡುತ್ತಾ ಹಸ್ತಮೈಥುನ ಆರಂಭಿಸಿದ್ದಾನೆ. ಚಾಲಕನ ಅಸಭ್ಯ ವರ್ತನೆಯಿಂದ ಸಿಟ್ಟಿಗೆದ್ದ ಯುವತಿ ಕಾರು ನಿಲ್ಲಿಸುವಂತೆ ಕೂಗಾಡುತ್ತಾಳೆ. ಆದರೂ ಆತ ಕಾರನ್ನು ನಿಲ್ಲಿಸದೆ ಮುಂದಕ್ಕೆ ಹೋಗುತ್ತಾನೆ. ಈ ವೇಳೆ ಯುವತಿ ಮೊಬೈಲ್ ನಲ್ಲಿ ಚಾಲಕನ ಫೋಟೋ ತೆಗೆಯುತ್ತಾಳೆ. ಬಳಿಕ ಅದನ್ನು ಫೇಸ್ ಬುಕ್ ನಲ್ಲಿ ಹಾಕುತ್ತಾಳೆ.

    ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಯುವತಿ ದೂರು ನೀಡಲು ಮುಂದಾಗುತ್ತಾಳೆ. ಆದರೆ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದರಿಂದ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ತಕ್ಷಣ ಆಕೆ ಆನ್ ಲೈನ್ ಮೂಲಕ ದೂರು ದಾಖಲಿಸಿದ್ದಾಳೆ. ದೂರು ಸ್ವೀಕರಿಸುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರಿನ ಚಾಲಕ ಹಾಗೂ ಮಾಲೀಕನಾಗಿದ್ದ ಹಫೀಜ್ ಪೇಟೆಯ ದಾದಿ ಪ್ರೇಮ್ ಕುಮಾರ್ ನನ್ನು ಬಂಧಿಸಿದ್ದಾರೆ. ಕಾರಿನ ಚಾಲಕ ಅಂದು ರಜೆ ಹಾಕಿದ್ದರಿಂದ ಪ್ರೇಮ್ ಕುಮಾರನ್ನೇ ಅಂದು ಕಾರು ಚಾಲನೆ ಮಾಡಿದ್ದಾನೆ.

    ಪೊಲೀಸರ ತನಿಖೆ ವೇಳೆ ಈ ಕಾರು ಉಬರ್ ಸಂಸ್ಥೆಯ ಜೊತೆ ನೋಂದಣಿಯಾಗಿಲ್ಲ ಎಂದು ತಿಳಿದು ಬಂದಿದೆ. ಆದರೂ ಉಬರ್ ಈ ಕಾರಿಗೆ ಹೇಗೆ ಅವಕಾಶ ಕೊಟ್ಟಿತು ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಉಬರ್ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಮಧಪುರ ಡಿಸಿಪಿ ವಿಶ್ವಪ್ರಸಾದ್ ಹೇಳಿದ್ದಾರೆ.

  • ಹುಡುಗರೇ ಬೀ ಕೇರ್‍ಫುಲ್.. ಫೇಸ್‍ಬುಕ್‍ನಲ್ಲಿದೆ ಹೋಮೊ ಸೆಕ್ಸ್ ಪೇಜ್!

    ಹುಡುಗರೇ ಬೀ ಕೇರ್‍ಫುಲ್.. ಫೇಸ್‍ಬುಕ್‍ನಲ್ಲಿದೆ ಹೋಮೊ ಸೆಕ್ಸ್ ಪೇಜ್!

    – ಹುಡುಗನ ಮೇಲೆ ಹುಡುಗರಿಂದಲೇ ಅತ್ಯಾಚಾರ, ಕೊಲೆ

    ಬೆಂಗಳೂರು: ನಗರದಲ್ಲಿ ಹುಡ್ಗಿರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಯತ್ನ ಪ್ರಕರಣಗಳು ಹೆಚ್ಚಾಗ್ತಿದ್ದು, ಹೆಣ್ಮಕ್ಕಳು ಸೇಫ್ ಅಲ್ಲ ಅಂತಾರೆ. ಇಲ್ಲಿ ಹೆಣ್ಣು ಮಕ್ಳಿಗೆ ಮಾತ್ರ ಅಲ್ಲ ಗಂಡು ಮಕ್ಕಳೂ ಸೇಫ್ ಅಲ್ಲ. ಗಂಡು ಮಕ್ಕಳ ಜೊತೆ ಲೈಂಗಿಕ ಸಂಪರ್ಕ ಹೊಂದೋದಕ್ಕೆ ಕೆಲವರು ಹೊಂಚು ಹಾಕುತ್ತಿದ್ದಾರೆ.

    ಜನವರಿಯಲ್ಲಿ ಹೊಸ ವರ್ಷ ಸಂಭ್ರಮಾಚರಣೆಯಾದಾಗಿನಿಂದ ಹೆಣ್ಣು ಮಕ್ಕಳ ಮೇಲೆ ಒಂದಲ್ಲ ಒಂದು ಲೈಂಗಿಕ ದೌರ್ಜನ್ಯ ಪ್ರರಕಣಗಳು ಬೆಳಕಿಗೆ ಬರ್ತಾನೆ ಇವೆ. ಆದರೆ ಹೆಣ್ಣು ಮಕ್ಕಳು ಮಾತ್ರ ಅಲ್ಲ ಗಂಡು ಮಕ್ಕಳಿಗೂ ಸಹ ಭದ್ರತೆ ಇಲ್ಲ. ಒಂಟಿಯಾಗಿದ್ರೆ ಗಂಡು ಮಕ್ಕಳ ಮೇಲೂ ಬೆಂಗಳೂರಲ್ಲಿ ಅತ್ಯಾಚಾರ ಆಗ್ತಾ ಇದೆ. ಅದು ಕೂಡ ಗಂಡು ಮಕ್ಕಳಿಂದಲೇ. ಬೆಂಗಳೂರು ಕರಗದ ದಿನ ಹುಡುಗನೊಂದಿಗೆ ಹೋಮೋ ಸೆಕ್ಸ್ ಮಾಡಲು ಹೋಗಿ ಹುಡಗನನ್ನೇ ಕೊಲೆ ಮಾಡಿ ಹೋಗಿದ್ದಾರೆ.

    ಹುಡುಗನನ್ನು ಕೊಲೆ ಮಾಡಿದ ಹುಡುಗ್ರು ಫೇಸ್‍ಬುಕ್ ಪೇಜ್‍ನಲ್ಲಿ ಹೋಮೋ ಸೆಕ್ಸ್ ಇಂಟ್ರೆಸ್ಟ್ ಇರೋರ ಗುಂಪು ಮಾಡಿಕೊಂಡು ಹುಡುಗ್ರನ್ನ ತಮ್ಮತ್ತ ಸೆಳೆಯುತ್ತಾರೆ. ಇತ್ತ ಬೆಂಗಳೂರಿನ ಕಲಾಸಿಪಾಳ್ಯ ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಮುರಳಿ ಕೊಲೆ ಪ್ರಕರಣದಲ್ಲಿ ‘ಗೇ’ ಹುಡುಗರ ಪಾತ್ರ ಇರೋದು ಗೊತ್ತಾಗಿದೆ. ಕರಗದ ದಿನವೂ ಇದೇ ರೀತಿ ಮುರಳಿ ಎಂಬವರೊಂದಿಗೆ ಲೈಂಗಿಕ ಸಂಪರ್ಕ ನಡೆಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಆದ್ರೆ ಕೊಲೆಗಾರ ಮಾತ್ರ ಇನ್ನೂ ಸಿಕ್ಕಿಲ್ಲ.

    ಕೊಲೆಯಾದ ಯುವಕನ ಶವ ಪರೀಕ್ಷೆಯ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.