Tag: sexual abuse

  • ರೋಗಿ ಜೊತೆ ಸೆಕ್ಸ್ – ಕೆನಡಾದಲ್ಲಿ ಭಾರತ ಮೂಲದ ವೈದ್ಯೆಯ ಮೆಡಿಕಲ್ ಲೈಸೆನ್ಸ್ ಅಮಾನತು

    ರೋಗಿ ಜೊತೆ ಸೆಕ್ಸ್ – ಕೆನಡಾದಲ್ಲಿ ಭಾರತ ಮೂಲದ ವೈದ್ಯೆಯ ಮೆಡಿಕಲ್ ಲೈಸೆನ್ಸ್ ಅಮಾನತು

    ಒಟ್ಟೋವಾ: ಕೆನಡಾದಲ್ಲಿ (Canada) ರೋಗಿ ಜೊತೆ ಸೆಕ್ಸ್‌ ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ವೈದ್ಯೆಯ ಮೆಡಿಕಲ್‌ ಲೈಸೆನ್ಸ್‌ ಅಮಾನತುಗೊಳಿಸಲಾಗಿದೆ.

    ವೈದ್ಯೆ ಸುಮನ್ ಖುಲ್ಬೆ, ಪುರುಷ ರೋಗಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಅಲ್ಲದೇ, ಇನ್ನಿಬ್ಬರೊಂದಿಗೆ ವೃತ್ತಿಪರವಲ್ಲದ ರೀತಿ ವರ್ತಿಸಿದ್ದಾರೆ. ಹೀಗಾಗಿ, ವೈದ್ಯೆ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ನೇಪಾಳ ದಂಗೆ | Gen-Z ನಲ್ಲಿ ಬಿರುಕು – ಮಧ್ಯಂತರ ಪ್ರಧಾನಿ ಹುದ್ದೆಗೆ ಸುಶೀಲಾ ಕರ್ಕಿ Vs ಕುಲ್ಮನ್ ನಡ್ವೆ ಫೈಟ್‌

    ವೈದ್ಯೆಯ ನಡವಳಿಕೆಯನ್ನು ತನಿಖಾ ಸಮಿತಿ ಪರಿಶೀಲಿಸಿದೆ. ಖುಲ್ಬೆ ತನ್ನ ರೋಗಿಗಳನ್ನು ರೋಗಿಗಳಂತೆ ಕಾಣಲಿಲ್ಲ. ತನ್ನ ಸ್ನೇಹಿತರು, ಪಾರ್ಟ್ನರ್‌ ರೀತಿ ನಡೆಸಿಕೊಂಡಿದ್ದಾರೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

    ಒಂಟಾರಿಯೊದ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರ ಕಾಲೇಜು, ವೈದ್ಯರು ಮತ್ತು ರೋಗಿಯ ನಡುವಿನ ಲೈಂಗಿಕ ಸಂಪರ್ಕವನ್ನು ಅಪರಾಧ ಎಂದೇ ಪರಿಗಣಿಸುತ್ತದೆ. ತಪ್ಪಿತಸ್ಥರ ಮೇಲೆ ಯಾವುದೇ ಸಹಿಷ್ಣುತೆ ಇರುವುದಿಲ್ಲ. ಇದನ್ನೂ ಓದಿ: ʻತುಂಬಾ ಅಪಾಯಕಾರಿʼ ದೂರವಿರಿ – ರಷ್ಯಾ ಸೇನೆ ಸೇರುತ್ತಿರುವ ಭಾರತೀಯರಿಗೆ MEA ವಾರ್ನಿಂಗ್‌

  • ನಕಲಿ ಎನ್‌ಸಿಸಿ ಶಿಬಿರದಲ್ಲಿ ಲೈಂಗಿಕ ದೌರ್ಜನ್ಯ ಕೇಸ್ – ಪ್ರಮುಖ ಆರೋಪಿಯ ತಂದೆ ಸಾವು

    ನಕಲಿ ಎನ್‌ಸಿಸಿ ಶಿಬಿರದಲ್ಲಿ ಲೈಂಗಿಕ ದೌರ್ಜನ್ಯ ಕೇಸ್ – ಪ್ರಮುಖ ಆರೋಪಿಯ ತಂದೆ ಸಾವು

    ಚೆನ್ನೈ: ತಮಿಳುನಾಡಿನಲ್ಲಿ (Tamilnadu) ನಡೆದ ನಕಲಿ ಎಸಿಸಿ ಶಿಬಿರದಲ್ಲಿ ಶಾಲಾ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹಲವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯ ತಂದೆ ಸಾವನ್ನಪ್ಪಿದ್ದಾರೆ.

    ಗುರುವಾರ ರಾತ್ರಿ ದ್ವಿಚಕ್ರ ವಾಹನದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಅಶೋಕ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: Maharashtra | ಪುಣೆಯಲ್ಲಿ ಖಾಸಗಿ ಹೆಲಿಕಾಪ್ಟರ್‌ ಪತನ – ನಾಲ್ವರ ಪೈಕಿ ಮೂವರ ಸ್ಥಿತಿ ಗಂಭೀರ

    8ನೇ ತರಗತಿಯ ಬಾಲಕಿ ಸೇರಿದಂತೆ 12 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿದ್ದ ಮೃತ ಆರೋಪಿ ಶಿವರಾಮನ್ ಕೌಟುಂಬಿಕ ಸಮಸ್ಯೆಗಳಿಂದಾಗಿ ಬಂಧನಕ್ಕೂ ಮುನ್ನ ಇಲಿ ಪಾಷಾಣ ಸೇವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕೃಷ್ಣಗಿರಿಯಿಂದ ಸೇಲಂಗೆ ಸ್ಥಳಾಂತರಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗಿದೇ ಸೇಲಂನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಈಗಾಗಲೇ ಘಟನೆಯಲ್ಲಿ ಭಾಗಿಯಾಗಿದ್ದ ಖಾಸಗಿ ಶಾಲೆಯ ಇಬ್ಬರು ಶಿಕ್ಷಕರು, ಪ್ರಾಂಶುಪಾಲರು ಮತ್ತು ಅತಿಥಿಶಿಕ್ಷಕ ಸೇರಿದಂತೆ 11 ಜನರನ್ನು ಪೋಕ್ಸೊ (POCSO) ಕಾಯ್ದೆಯಡಿ ಬಂಧಿಸಲಾಗಿದೆ.

    ಶಾಲೆಯ ಆವರಣದಲ್ಲಿ ನಡೆದ ನಕಲಿ ಎನ್‌ಸಿಸಿ ಶಿಬಿರವು ಶಾಲೆಗೆ ಎನ್‌ಸಿಸಿ ಘಟಕದ ಅರ್ಹತೆ ನೀಡುತ್ತದೆ ಎಂದು ಹೇಳಿಕೊಂಡಿತ್ತು. ಆದ್ರೆ ಈ ಗುಂಪಿನ ಬಗ್ಗೆ ಶಾಲೆಯು ಪರಿಶೀಲನೆ ನಡೆಸಿರಲಿಲ್ಲ ಹಾಗೂ ಶಿಬಿರದ ಮೇಲ್ವಿಚಾರಣೆಗೆ ಯಾವುದೇ ಶಿಕ್ಷಕರನ್ನು ನೇಮಿಸಿರಲಿಲ್ಲ. ಜೊತೆಗೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಶಾಲೆಗೆ ತಿಳಿಸಿದ ಮೇಲೆಯೂ, ಆಡಳಿತ ಮಂಡಳಿಯವರು ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ ಮತ್ತು ನಡೆದಿರುವ ದೌರ್ಜನ್ಯದ ಬಗ್ಗೆ ಯಾರೂ ಗಂಭೀರವಾಗಿ ಪರಿಗಣಿಸಬೇಡಿ ಎಂದು ಶಾಲೆಯು ವಿದ್ಯಾರ್ಥಿಗಳಲ್ಲಿ ಕೇಳಿಕೊಂಡಿರುವುದಾಗಿ ಆರೋಪಿಸಲಾಗಿದೆ.ಇದನ್ನೂ ಓದಿ: ಮೈಸೂರಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಶಂಕೆ – ಬಾಳೆ ತೋಟದಲ್ಲಿ ಶವ ಪತ್ತೆ

    ಸದ್ಯ ನಕಲಿ ಎನ್‌ಸಿಸಿ ತರಬೇತುದಾರರು ಇತರ ಶಾಲೆಗಳಲ್ಲಿಯೂ ಶಿಬಿರ ಆಯೋಜನೆ ಮೂಲಕ ಲೈಂಗಿಕ ಅಪರಾಧಗಳನ್ನು ಎಸಗಿದ್ದಾರೆಯೇ ಅನ್ನೋ ಬಗ್ಗೆ ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಇದನ್ನು ಹೊರತುಪಡಿಸಿ ಮತ್ತೊಂದು ತಂಡವು ಲೈಂಗಿಕ ಅಪರಾಧಗಳಿಗೆ ಕಾರಣವನ್ನು ಹುಡುಕುವಲ್ಲಿ ನಿರತವಾಗಿದೆ.

    ಈ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ತನಿಖೆ ಚುರುಕುಗೊಳಿಸುವಂತೆ ಮತ್ತು 60 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇದೇ ರೀತಿ ಆರೋಪಿಗಳು ಬೇರೆ ಶಾಲೆಗಳಲ್ಲೂ ನಕಲಿ ಶಿಬಿರ ನಡೆಸಿದ್ದಾರಾ? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

  • ತಂದೆಯ ಲೈಂಗಿಕ ಕಿರುಕುಳದಿಂದ ರಕ್ಷಿಸುವುದಾಗಿ ನಂಬಿಸಿ ಅಪ್ರಾಪ್ತೆಯ ಮೇಲೆ ಗ್ಯಾಂಗ್‌ರೇಪ್

    ತಂದೆಯ ಲೈಂಗಿಕ ಕಿರುಕುಳದಿಂದ ರಕ್ಷಿಸುವುದಾಗಿ ನಂಬಿಸಿ ಅಪ್ರಾಪ್ತೆಯ ಮೇಲೆ ಗ್ಯಾಂಗ್‌ರೇಪ್

    ಜೈಪುರ: ತಂದೆ ನೀಡುತ್ತಿದ್ದ ಲೈಂಗಿಕ ಕಿರುಕುಳದಿಂದ (Sexual Harassment) ರಕ್ಷಿಸುವುದಾಗಿ ನಂಬಿಸಿ ಇಬ್ಬರು ವ್ಯಕ್ತಿಗಳು ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ (Gang Rape) ಘಟನೆ ರಾಜಸ್ಥಾನದ (Rajasthan) ಕೋಟಾದಲ್ಲಿ (Kota) ನಡೆದಿದೆ.

    ತಂದೆ ತನ್ನ 13 ವರ್ಷ ವಯಸ್ಸಿನ ಮಗಳಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದು, ಇದರಿಂದ ರಕ್ಷಿಸುವುದಾಗಿ ಹೇಳಿದ ವ್ಯಕ್ತಿಯೋರ್ವ ಅಪ್ರಾಪ್ತ ಬಾಲಕಿಯನ್ನು ತನ್ನ ಜೊತೆಯಲ್ಲಿ ಕರೆದೊಯ್ದಿದ್ದಲ್ಲದೇ ತನ್ನ ಸ್ನೇಹಿತನ ಜೊತೆಗೂಡಿ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಜೂನ್ 26ರಂದು ಆರೋಪಿ ತಂದೆ ತನ್ನ 13 ವರ್ಷದ ಮಗಳು ಜೂನ್ 22ರಿಂದ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಬಾಲಕಿಯನ್ನು ಪತ್ತೆಹಚ್ಚಿ ದುಷ್ಟರಿಂದ ರಕ್ಷಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ 17ರ ಹುಡುಗನನ್ನು ಇರಿದು ಕೊಂದ 15ರ ಬಾಲಕ!

    ಘಟನೆಯ ಕುರಿತು ಬಾಲಕಿಯನ್ನು ವಿಚಾರಿಸಿದಾಗ ಆಕೆ, ತನ್ನ ತಾಯಿ ತೀರಿಕೊಂಡು 5 ವರ್ಷಗಳಾಗಿವೆ. ತಾಯಿಯ ನಿಧನದ ಬಳಿಕ ತಾನು ತಂದೆಯೊಂದಿಗೆ ವಾಸಮಾಡುತ್ತಿದ್ದು, ಸುಮಾರು ಒಂದೂವರೆ ವರ್ಷದಿಂದ ತಂದೆ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಈ ಕುರಿತು ಯಾರ ಬಳಿಯಾದರೂ ಮಾತನಾಡಿದರೆ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿದ್ದರು ಎಂದು ನಿಜಾಂಶ ಹೇಳಿದ್ದಾಳೆ. ಇದನ್ನೂ ಓದಿ: ಕಾಲೇಜು ಹಾಸ್ಟೆಲ್‌ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

    ಇಷ್ಟು ಮಾತ್ರವಲ್ಲದೇ 29 ವರ್ಷದ ವ್ಯಕ್ತಿಯೋರ್ವ ಬಾಲಕಿಗೆ ಪರಿಚಯವಾಗಿದ್ದು, ಜೂನ್ 22ರಂದು ತಂದೆಯಿಂದ ರಕ್ಷಿಸುವುದಾಗಿ ಹೇಳಿ ಅಪ್ರಾಪ್ತೆಯನ್ನು ಆತನ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ತನ್ನ ಸ್ನೇಹಿತನ ಜೊತೆ ಸೇರಿಕೊಂಡು ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಅತ್ಯಾಚಾರವೆಸಗಿರುವುದು ಸಾಬೀತಾದ ಬಳಿಕ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Maharashtra Accident: ಮತ್ತೊಂದು ಭೀಕರ ಅಪಘಾತದಲ್ಲಿ 10 ಮಂದಿ ಸಾವು

    ಬಾಲಕಿಯ ಮಾಹಿತಿಯ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಶೀಘ್ರವೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ತೆಗೆದುಕೊಂಡ ಪೊಲೀಸರು ಆರೋಪಿ ತಂದೆಯ ವಿರುದ್ಧ ಐಪಿಸಿ ಮತ್ತು ಪೋಕ್ಸೋ (POCSO) ಕಾಯ್ದೆಯ ಅಡಿಯಲ್ಲಿ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದಾರೆ. ಅಲ್ಲದೇ ಇನ್ನಿಬ್ಬರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ಲವರ್ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ಳು – ಪತ್ನಿ ಸೇರಿ ಐವರು ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ

    ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ

    ಗುವಾಹಟಿ: ಅಸ್ಸಾಂನ ಹೈಲಕಂಡಿ ಜಿಲ್ಲೆಯ ನ್ಯಾಯಾಲಯವೊಂದು 11 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

    ಹೈಲಕಂಡಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ವಿಶೇಷ ನ್ಯಾಯಾಧೀಶ) ಸಂಜೋಯ್ ಹಜಾರಿಕಾ ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅನೈಸರ್ಗಿಕ ಅತ್ಯಾಚಾರ) ಅಡಿಯಲ್ಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20,000 ರೂ. ದಂಡವನ್ನು ವಿಧಿಸಿದ್ದಾರೆ. ಇದನ್ನೂ ಓದಿ: ಉಡದ ಮೇಲೆ ಅತ್ಯಾಚಾರಗೈದ ನಾಲ್ವರು ಅರೆಸ್ಟ್

    BRIBE

    ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ ಅಪರಾಧಿ ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ. ಇದನ್ನೂ ಓದಿ: ಐಎನ್‌ಎಸ್ ದೇಣಿಗೆ ವಂಚನೆ: ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ, ಪುತ್ರನ ವಿರುದ್ಧ ಪ್ರಕರಣ ದಾಖಲು

    2018ರ ಜೂನ್ 5ರಂದು ಲಾಲಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅಪರಾಧಿ ಆಗ 21 ವರ್ಷ ವಯಸ್ಸಿನವನಾಗಿದ್ದನು. ಅವನು ಇಬ್ಬರು ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಒಬ್ಬ ಬಾಲಕನನ್ನು ಲಾಲಾ ರೂರಲ್ ಕಾಲೇಜು ಆವರಣದಲ್ಲಿರುವ ಶೌಚಾಲಯಕ್ಕೆ ಬಲವಂತವಾಗಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದನು.

    ನಂತರ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪೊಲೀಸರು ಕಳೆದ ವರ್ಷ ಚಾರ್ಜ್ ಶೀಟ್ ಸಲ್ಲಿಸಿದ್ದರು.

  • ಯುದ್ಧದ ವೇಳೆ 36 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ – ಮಾಜಿ ಯೋಧರಿಗೆ 30 ವರ್ಷ ಜೈಲು ಶಿಕ್ಷೆ

    ಯುದ್ಧದ ವೇಳೆ 36 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ – ಮಾಜಿ ಯೋಧರಿಗೆ 30 ವರ್ಷ ಜೈಲು ಶಿಕ್ಷೆ

    ಗ್ವಾಟೆಮಾಲಾ ನಗರ: ದೇಶದ ಅಂತರ್ಯುದ್ಧದ ಸಂದರ್ಭದಲ್ಲಿ 36 ಸ್ಥಳೀಯ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಐವರು ಮಾಜಿ ಸೈನಿಕರಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

    ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ಸಂತ್ರಸ್ತೆಯರು ನೀಡಿರುವ ಸಾಕ್ಷ್ಯಗಳನ್ನು ನಾವು ದೃಢವಾಗಿ ನಂಬುತ್ತೇವೆ ಎಂದು ನ್ಯಾಯಾಧೀಶ ಗೆರ್ವಿ ಸಿಕಲ್‌ ತಿಳಿಸಿದ್ದಾರೆ. ಇದನ್ನೂ ಓದಿ: ಆಫ್ರಿಕಾ ಕ್ರೀಡಾಂಗಣದಲ್ಲಿ ಫುಟ್‌ಬಾಲ್‌ ವೀಕ್ಷಣೆಗಾಗಿ ನೂಕಾಟ, ಕಾಲ್ತುಳಿತ – 8 ಬಲಿ

    1981 ಮತ್ತು 1985ರ ಅವಧಿಯಲ್ಲಿ ಈ ಘಟನೆ ನಡೆದಿತ್ತು. ಅಪರಾಧಿಗಳಾದ ಬೆನ್ವೆನುಟೊ, ಬರ್ನಾರ್ಡೊ ರೂಯಿಜ್‌, ಡಾಮಿಯನ್‌, ಗೇಬ್ರಿಯಲ್‌ ಮತ್ತು ಫ್ರಾನ್ಸಿಸ್ಕೊ ಕುಕ್ಸಮ್‌ ಶಿಕ್ಷೆಗೆ ಗುರಿಯಾದ ಮಾಜಿ ಸೈನಿಕರು. ರಾಜಧಾನಿಯ ಜೈಲಿನಲ್ಲಿರುವ ಇವರು ವೀಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ತೀರ್ಪನ್ನು ಆಲಿಸಿದ್ದಾರೆ.

    ಯುದ್ಧದಿಂದಾಗಿ ರಬಿನಾಲ್‌ ಜನರಿಗೆ ಅಪಾರ ನಷ್ಟವುಂಟಾಗಿದೆ. ರಬಿನಾಲ್‌ ಪ್ರದೇಶದಲ್ಲಿ ಸುಮಾರು 3,000ಕ್ಕೂ ಹೆಚ್ಚು ನಾಗರಿಕರು ಹತ್ಯೆಯಾಗಿದ್ದಾರೆ. ಆಗ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಪರಾಧಿಗಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಸಂತ್ರಸ್ತೆಯರು ದೂರು ನೀಡಿದ್ದರು. ದಶಕಗಳ ನಂತರ (ಜ.5) ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತ – 42 ಮಂದಿ ಸಾವು

    ನಾನು 19 ವಯಸ್ಸಿನ ಹುಡುಗಿಯಾಗಿದ್ದಾಗ ಸೇನೆಯಲ್ಲಿದ್ದ ಯೋಧರು ನನ್ನನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ್ದರು. ನಮ್ಮ ಗ್ರಾಮವನ್ನು ಕಾಯುತ್ತಿದ್ದ ಸೈನಿಕರೇ ಈ ಕೃತ್ಯ ಎಸಗಿದ್ದರು ಎಂದು ಈಗ 59ರ ವೃದ್ಧೆಯಾಗಿರುವ ಸಂತ್ರಸ್ತೆ ಮಾರ್ಗರಿಟಾ ಸಿಯಾನಾ ದೂರಿನಲ್ಲಿ ತಿಳಿಸಿದ್ದಾರೆ.

    3 ತಿಂಗಳು ಅವರಿಂದ ಚಿತ್ರಹಿಂಸೆ ಅನುಭವಿಸಿದ್ದೇವೆ. ಆ ಘಟನೆ ಈಗಲೂ ನಮ್ಮನ್ನು ಕಂಗೆಡಿಸಿದೆ. ನಾವು ಸುಳ್ಳು ಹೇಳುತ್ತಿಲ್ಲ ಎಂದು ಮತ್ತೊಬ್ಬ ಸಂತ್ರಸ್ತೆ ಹೇಳಿದ್ದಾರೆ. ಇದನ್ನೂ ಓದಿ: ವರ್ಕೌಟ್ ವೇಳೆ ವೃದ್ಧ ದಂಪತಿ ಕಿಸ್ಸಿಂಗ್ ವೀಡಿಯೋ ವೈರಲ್

    ಆದರೆ ಅಪರಾಧಿಗಳಾದ ಮಾಜಿ ಸೈನಿಕರ ಸಂಬಂಧಿಕರು ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಸಂತ್ರಸ್ತೆಯರ ವಿರುದ್ಧ ನ್ಯಾಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

  • ಸೇನಾ ನೆಲೆಯಲ್ಲೇ ಮಕ್ಕಳನ್ನು ಕೆಟ್ಟದಾಗಿ ನಿಂದಿಸಿದ್ದಕ್ಕೆ ವ್ಯಕ್ತಿಗೆ 50 ವರ್ಷ ಜೈಲು ಶಿಕ್ಷೆ!

    ಸೇನಾ ನೆಲೆಯಲ್ಲೇ ಮಕ್ಕಳನ್ನು ಕೆಟ್ಟದಾಗಿ ನಿಂದಿಸಿದ್ದಕ್ಕೆ ವ್ಯಕ್ತಿಗೆ 50 ವರ್ಷ ಜೈಲು ಶಿಕ್ಷೆ!

    ವಾಷಿಂಗ್ಟನ್: ಅಪ್ರಾಪ್ತ ಮಕ್ಕಳಿಗೆ ಲೈಂಗಿಕವಾಗಿ ನಿಂದಿಸಿದ್ದಕ್ಕೆ ಅಪರಾಧಿಗೆ ಬರೋಬ್ಬರಿ 50 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಪ್ರಕರಣ ಟೆಕ್ಸಾಸ್‌ನ ಎಲ್ ಪಾಸೋದಲ್ಲಿರುವ ಯುಎಸ್ ಆರ್ಮಿ ಬೇಸ್ ಪ್ರದೇಶದಲ್ಲಿ ನಡೆದಿದೆ.

    ಅಪರಾಧಿ ಕಾರ್ಲ್ ಮನ್ರೋ ಗಾರ್ಡ್ (50) ಟೆಕ್ಸಾಸ್ ದೇಶದ ಸೇನಾ ನೆಲೆಯಲ್ಲಿ ವಾಸವಿದ್ದ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಲೈಂಗಿಕವಾಗಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿತ್ತು.

    ಗಾರ್ಡನ್ 2018ರ ಕ್ರಿಸ್‌ಮಸ್ ಸಮಯದಲ್ಲಿ ಹಾಗೂ 2019ರ ಜುಲೈನಲ್ಲಿ ಇಬ್ಬರು ಮಕ್ಕಳಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆತ ಅದೇ ಇಬ್ಬರು ಮಕ್ಕಳ ಮಲತಂದೆಯೂ ಆಗಿದ್ದು, ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಡ್ರ್ಯಾಗನ್ ಫ್ರೂಟ್‍ನಲ್ಲಿ ಕೊರೊನಾ!

    ಮಕ್ಕಳನ್ನು ಪೋಷಿಸಬೇಕಾದವರೇ ಕಾನೂನನ್ನು ಉಲ್ಲಂಘಿಸಿ ಅವರಿಗೆ ಕಿರುಕುಳ ನೀಡುವಂತಹ ಪ್ರಕರಣಗಳು ಅತೀ ಹೆಚ್ಚಾಗಿವೆ. ಅಪರಾಧಿ ಇನ್ನೊಬ್ಬರಿಗೆ ಇಂತಹ ಕಿರುಕುಳ ನೀಡಬಾರದು ಎಂಬ ಕಾರಣಕ್ಕೆ ಮಕ್ಕಳು ತನ್ನ ಮಲತಂದೆಯ ಮೇಲೆಯೇ ಆರೋಪ ಹೊರಿಸಿರುವುದು ನಿಜವಾಗಿಯೂ ಅವರ ವೀರತನವನ್ನು ಎತ್ತಿ ತೋರಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಜೈಲು ಅಧಿಕಾರಿಗಳ ಕಣ್ತಪ್ಪಿಸಲು ಮೊಬೈಲ್ ನುಂಗಿದ ಕೈದಿ!

    ಕಾರ್ಲ್ ಮನ್ರೋ ಗಾರ್ಡ್ ಇಂತಹ ಹಲವು ಪ್ರಕರಣಗಳಲ್ಲಿ ತಪ್ಪಿತಸ್ಥನಾಗಿದ್ದಾನೆ ಎಂದು ಫೆಡರಲ್ ತೀರ್ಪುಗಾರರು ತಿಳಿಸಿದ್ದು, ಅಪರಾಧಿಗೆ 50 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

  • ತಪ್ಪು ಮಾಡಿದಳೆಂದು ಬಾಲಕಿಯ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿದ್ರು..!

    ತಪ್ಪು ಮಾಡಿದಳೆಂದು ಬಾಲಕಿಯ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿದ್ರು..!

    ನವದೆಹಲಿ: ಸರ್ಕಾರೇತರ ಸಂಸ್ಥೆಯೊಂದು(ಎನ್‍ಜಿಓ) ನಡೆಸುವ ಬಾಲಕಿಯರ ಆಶ್ರಯ ನಿವಾಸದಲ್ಲಿ ಸಿಬ್ಬಂದಿ ತಪ್ಪು ಮಾಡಿದಳು ಅಂತ ಬಾಲಕಿಯೊಬ್ಬಳ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಶಿಕ್ಷೆ ಕೊಟ್ಟ ಅಮಾನವಿಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಶುಕ್ರವಾರದಂದು ದೆಹಲಿಯ ಮಹಿಳಾ ಆಯೋಗದ(ಡಿಡಬ್ಲ್ಯೂಸಿ) ಅಧಿಕಾರಿಗಳು ನೈಋತ್ಯ ದೆಹಲಿಯ ದ್ವಾರಕಾದಲ್ಲಿರುವ ಎನ್‍ಜಿಓವೊಂದು ನೋಡಿಕೊಳ್ಳುವ ಬಾಲಕಿಯರ ಆಶ್ರಯ ನಿವಾಸಕ್ಕೆ ದಿಢೀರ್ ಪರಿಶೀಲನೆ ನಡೆಸಲು ತೆರೆಳಿದ್ದರು. ಈ ವೇಳೆ ಆಶ್ರಯ ನಿವಾಸದಲ್ಲಿ ಇರುವ ಬಾಲಕಿಯರಿಗೆ ಅಲ್ಲಿನ ಸಿಬ್ಬಂದಿ ಕಿರುಕುಳ ಕೊಡುತ್ತಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

    ಈ ಆಶ್ರಯ ನಿವಾಸದಲ್ಲಿ 6 ವರ್ಷದಿಂದ 15 ವರ್ಷ ವಯಸ್ಸಿನ ಒಟ್ಟು 22 ಬಾಲಕಿಯರು ಇರುತ್ತಾರೆ. ಇಲ್ಲಿ ಇರುವ ಬಾಲಕಿಯರ ಕೈಯಲ್ಲಿ ಸಿಬ್ಬಂದಿ ಮನೆಯ ಎಲ್ಲಾ ಕೆಲಸ ಮಾಡಿಸುತ್ತಾರೆ. ಅಲ್ಲದೆ ಕೋಣೆಗಳನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದರೆ ನಮಗೆ ಶಿಕ್ಷೆ ನೀಡುತ್ತಾರೆ. ಸ್ಕೇಲ್‍ನಿಂದ ಹೊಡೆಯುತ್ತಾರೆ, ರಜಾ ದಿನಗಳಲ್ಲಿ ಪೋಷಕರ ಬಳಿ ಹೋಗಲು ಬಿಡುವುದಿಲ್ಲ. ಹಾಗೆಯೆ ಇಲ್ಲಿ ಸಿಬ್ಬಂದಿ ಕಡಿಮೆ ಇರುವುದರಿಂದ ಮಕ್ಕಳ ಕೈಯಲ್ಲೇ ಅಡುಗೆ ಮಾಡಸ್ತಾರೆ. ಶೌಚಾಲಯ ಹಾಗೂ ಮನೆಯನ್ನು ಸ್ವಚ್ಛ ಮಾಡಿಸ್ತಾರೆ. ಸರಿಯಾದ ಗುಣಮಟ್ಟದ ಊಟ ಕೂಡ ನೀಡಲ್ಲ ಅಂತ ಬಾಲಕಿಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಅಷ್ಟೆ ಅಲ್ಲದೆ ಕೆಲವು ದಿನಗಳ ಹಿಂದೆ ಬಾಲಕಿಯೊಬ್ಬಳು ಹೇಳಿದ ಮಾತನ್ನು ಕೇಳಿಲ್ಲ ಅಂತ ಸಿಬ್ಬಂದಿ ಅವಳ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಕಿರುಕುಳ ಕೊಟ್ಟಿದ್ದಾರೆ. ಈ ವಿಷಯ ತಿಳಿಯುತ್ತಿದಂತೆ ಡಿಡಬ್ಲ್ಯೂಸಿ ಅಧಿಕಾರಿಗಳು ಆರೋಪಿಗಳ ಮೇಲೆ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸದ್ಯ ಮಕ್ಕಳ ರಕ್ಷಣೆ ಹಾಗೂ ಲೈಂಗಿಕ ಅಪರಾಧ ಕಾಯ್ದೆ ಹಾಗೂ ಜುವೆನೈಲ್ ನ್ಯಾಯಾಂಗ ಕಾಯ್ದೆ (Juvenile Justice Act) ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಗ್ರೇನ್ ಚಿಕಿತ್ಸೆಗೆ ಬಂದಾಗ ಬೆಳಕಿಗೆ ಬಂತು ಅಪ್ಪನೇ ಮಾಡ್ತಿದ್ದ ಅತ್ಯಾಚಾರ..!

    ಮೈಗ್ರೇನ್ ಚಿಕಿತ್ಸೆಗೆ ಬಂದಾಗ ಬೆಳಕಿಗೆ ಬಂತು ಅಪ್ಪನೇ ಮಾಡ್ತಿದ್ದ ಅತ್ಯಾಚಾರ..!

    ನವದೆಹಲಿ: ಆಕೆಗಿನ್ನೂ 17 ವರ್ಷ ಪ್ರಾಯ. ಕಳೆದ ಕೆಲ ದಿನಗಳಿಂದ ಆಕೆಗೆ ವಿಪರೀತ ತಲೆ ನೋವು ಕಾಡಲು ಶುರುವಾಗಿತ್ತು. ಹೀಗಾಗಿ ಆಕೆ ದೂರದ ಬಿಹಾರದಿಂದ ಮೈಗ್ರೇನ್ ಚಿಕಿತ್ಸೆಗೆಂದು ದೆಹಲಿಗೆ ಆಗಮಿಸಿದ್ದಳು. ಈಕೆಯ ಮೈಗ್ರೇನ್ ತಲೆನೋವಿಗೆ ಚಿಕಿತ್ಸೆ ಆರಂಭಿಸಿದ ವೈದ್ಯರು ಈಕೆಯ ಮಾತು ಕೇಳಿ ಬೆಚ್ಚಿ ಬಿದ್ದಿದ್ದಾರೆ. ಕಾರಣ ಆಕೆಯ ಮೈಗ್ರೇನ್ ತಲೆನೋವಿನ ಹಿಂದಿತ್ತು ವಿಚಿತ್ರ ಕಥೆ. ಅಷ್ಟು ದಿನ ಮೌನವಾಗಿಯೇ ಪ್ರತಿಭಟಿಸುತ್ತಿದ್ದ ಆಕೆ ವೈದ್ಯರ ಮುಂದೆ ತಾನು ಅನುಭವಿಸುತ್ತಿದ್ದ ವೇದನಾಜನಕ ಕತೆಯನ್ನು ಹೇಳಿದ್ದಳು. ಈ ಎಲ್ಲಾ ವಿಚಿತ್ರ ಕಥೆಗಳಿಗೆ ಮೂಕಪ್ರೇಕ್ಷಕರಾಗಿದ್ದು ಮಾತ್ರ ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆ ವೈದ್ಯರು.

    ಆಕೆಯ ಊರು ಬಿಹಾರ ರಾಜ್ಯದ ಶೇಖ್‍ಪುರ್ ಜಿಲ್ಲೆಯ ಒಂದು ಗ್ರಾಮ. ತಂದೆ, ತಾಯಿ, ಸೋದರಿ ಜೊತೆ ವಾಸಿಸುತ್ತಿದ್ದಳು. ತಂದೆ ಕೃಷಿಕ. ಆದರೆ ಆತನೊಳಗೊಬ್ಬ ವಿಕೃತ ಕಾಮಿಯಿದ್ದ. ಆಕೆ ತನ್ನ ಸ್ವಂತ ಮಗಳು ಎಂಬುದನ್ನೂ ಮರೆತು ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಇಷ್ಟೇ ಅಲ್ಲ ತನ್ನ ಪುತ್ರಿಯನ್ನು ಬೆತ್ತಲೆಗೊಳಿಸಿ ಆತ ಮೊಬೈಲ್‍ನಲ್ಲಿ ಆಕೆಯ ಫೋಟೋ ತೆಗೆದಿಟ್ಟುಕೊಂಡಿದ್ದ. ಈ ಫೋಟೋಗಳನ್ನೇ ಪದೇ ಪದೇ ತೋರಿಸಿಕೊಂಡು ಆತ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ.

    ತಲೆನೋವಿಗೆ ಕಾರಣವಾಗಿದ್ದೇ ಈ ಮೊಬೈಲ್!: ಹೀಗೆ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಎಸಗಿದ ಸಾಕ್ಷ್ಯಾಧಾರಗಳಿರುವ ಮೊಬೈಲ್ ಆಕೆಯ ತಂದೆ ದೆಹಲಿಗೆ ಬರುವ ರೈಲಿನಲ್ಲಿ ಕಳೆದುಹೋಗುತ್ತದೆ. ಇದಾದ ನಂತರ ಈಕೆಗೆ ಮೈಗ್ರೇನ್ ಕಾಣಿಸಿಕೊಂಡಿದೆ. ತಲೆ ನೋವು ತಡೆದುಕೊಳ್ಳಲು ಸಾಧ್ಯವೇ ಇಲ್ಲ ಅನ್ನಿಸಿದಾಗ ಆಕೆಯನ್ನು ಪೋಷಕರು ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಯಲ್ಲಿ ಆರಂಭದಲ್ಲಿ ಆಕೆ ವೈದ್ಯರ ಬಳಿ ಏನನ್ನೂ ಹೇಳಿರುವುದಿಲ್ಲ. ಆದರೆ ಚಿಕಿತ್ಸೆ ಮುಂದುವರಿದ ಭಾಗವಾಗಿ ವೈದ್ಯರು ತಲೆನೋವಿಗೆ ಕಾರಣವಾದ ಘಟನೆಗಳನ್ನು ಕೇಳಿದಾಗ ಆಕೆ ತನ್ನ ಜೀವನದಲ್ಲಿ ಆದ ಘಟನೆಗಳನ್ನು ಬಾಯಿ ಬಿಟ್ಟಿದ್ದಾಳೆ.

    ‘ನನ್ನ ತಂದೆ ರಾತ್ರಿ ಮಲಗಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಕಳೆದ ಕೆಲವರ್ಷಗಳಿಂದ ನನ್ನ ಮೇಲೆ ನಿರಂತರ ದೌರ್ಜನ್ಯ, ಅತ್ಯಾಚಾರ ನಡೆಸುತ್ತಿದ್ದ. ನಾನು ಇದಕ್ಕೆ ಪ್ರತಿಭಟಿಸಿದರೆ ನನಗೆ ಹೊಡೆಯುತ್ತಿದ್ದ. ಅಲ್ಲದೆ ನನ್ನನ್ನು ಬೆದರಿಸುತ್ತಿದ್ದ. ಹೀಗಾಗಿ ನಾನು ಯಾರ ಜೊತೆಗೆ ಏನೂ ಹೇಳಿಕೊಂಡಿರಲಿಲ್ಲ. ಆದರೆ ತಂದೆಯ ಮೊಬೈಲ್‍ನಲ್ಲಿ ನನ್ನ ಹಲವಾರು ನಗ್ನ ಫೋಟೋಗಳಿದ್ದವು. ಈ ಮೊಬೈಲ್ ಕಳೆದುಹೋದ ಮೇಲೆ ನನಗೆ ತಲೆ ನೋವು ಶುರುವಾಯಿತು’ ಎಂದು ಬಾಯಿಬಿಟ್ಟಿದ್ದಾಳೆ. ಈ ವಿಚಾರ ತಿಳಿದ ವೈದ್ಯರು ತನ್ನ ಸೀನಿಯರ್ ಡಾಕ್ಟರ್ ಗೆ ಈ ವಿಚಾರ ತಿಳಿಸಿದ್ದಾರೆ. ನಂತರ ಆಕೆಯ ತಂದೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿದ ಬೆನ್ನಲ್ಲೇ ಪೊಲೀಸರು ಆಕೆಯ ತಂದೆಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರಿದಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಮನೋಶಾಸ್ತ್ರಜ್ಞರ ಪ್ರಕಾರ, ಮಕ್ಕಳ ಮೇಲೆ ಆಗುವ ಈ ರೀತಿಯ ಲೈಂಗಿಕ ದೌರ್ಜನ್ಯಗಳಿಂದ ಅವರು ಖಿನ್ನತೆಗೆ ಜಾರುವ ಸಾಧ್ಯತೆಗಳಿವೆ ಎಂದಿದ್ದಾರೆ.

  • ವಿದ್ಯಾರ್ಥಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ ಮದರಸಾ ಶಿಕ್ಷಕ ಅರೆಸ್ಟ್!

    ವಿದ್ಯಾರ್ಥಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ ಮದರಸಾ ಶಿಕ್ಷಕ ಅರೆಸ್ಟ್!

    ಬೆಂಗಳೂರು: ತಲಘಟ್ಟಪುರ ಪೊಲೀಸರು ಸಲಿಂಗಕಾಮಿ ಶಿಕ್ಷಕನನ್ನು ಬಂಧಿಸಿದ್ದಾರೆ.

    ಅಬ್ದುಲ್ ಜುಬೇರ್ ಅಲಿ ಬಂಧಿತ ಆರೋಪಿ. ಈತ ಮದರಸದಲ್ಲಿ ಶಿಕ್ಷಕನಾಗಿದ್ದು, ವಿದ್ಯಾರ್ಥಿಯೊಬ್ಬನನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ. ನಂತರ ವಿದ್ಯಾರ್ಥಿ ಪೋಷಕರ ಬಳಿ ಶಿಕ್ಷಕ ತನ್ನ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದ್ದನು.

    ನಂತರ ಪೋಷಕರು ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇದೀಗ ತಲಘಟ್ಟಪುರ ಪೊಲೀಸರು ಆರೋಪಿ ಅಬ್ದುಲ್ ಜುಬೇರ್ ಅಲಿನನ್ನು ಬಂಧಿಸಿದ್ದಾರೆ.

  • ಶಾಲೆಯ ನಿರ್ದೇಶಕನಿಂದ 6 ನೇ ತರಗತಿ ಬಾಲಕನ ಮೇಲೆ ಲೈಂಗಿಕ ಶೋಷಣೆ

    ಶಾಲೆಯ ನಿರ್ದೇಶಕನಿಂದ 6 ನೇ ತರಗತಿ ಬಾಲಕನ ಮೇಲೆ ಲೈಂಗಿಕ ಶೋಷಣೆ

    ಪಟ್ನಾ: ಶಾಲೆಯ ನಿರ್ದೇಶಕನೊಬ್ಬ 6ನೇ ತರಗತಿಯ ಬಾಲಕನ ಮೇಲೆ ನಿರಂತರವಾಗಿ ಮೂರು ವರ್ಷಗಳ ಕಾಲ ಲೈಂಗಿಕ ಶೋಷಣೆ ಎಸಗಿರುವ ಅಘಾತಕಾರಿ ಘಟನೆ ಬಿಹಾರದ ಸಿತಮಾರಿ ಜಿಲ್ಲೆಯಲ್ಲಿ ನಡೆದಿದೆ.

    ಘಟನೆ ಬೆಳಕಿಗೆ ಬಂದ ನಂತರ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ನಾಪತ್ತೆಯಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಬಾಲಕ ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆರೋಪಿ ಮೂರು ವರ್ಷಗಳಿಂದ ನಿರಂತವಾಗಿ ಲೈಂಗಿಕ ಶೋಷಣೆ ಎಸಗಿದ್ದಾನೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

    ಆರೋಪಿ ತನ್ನ ಕೃತ್ಯದ ಬಗ್ಗೆ ಪೋಷಕರಿಗೆ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಹೀಗಾಗಿ ಬಾಲಕ ತನ್ನ ಮೇಲೆ ನಡೆಯುತ್ತಿರುವ ಶೋಷಣೆ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ. ಆದರೆ ಕಳೆದ ಶುಕ್ರವಾರ ತೀವ್ರವಾಗಿ ನೊಂದ ಬಾಲಕ ಪೋಷಕರ ಬಳಿ ಘಟನೆ ಕುರಿತು ವಿವರವಾಗಿ ತಿಳಿಸಿದ್ದಾನೆ. ತನ್ನ ಮಗನ ಮೇಲೆ ನಡೆದಿರುವ ಕೃತ್ಯದ ಬಗ್ಗೆ ಕೇಳಿದ ಪೋಷಕರು ಅಘಾತಕ್ಕೊಳಗಾಗಿದ್ದಾರೆ.

    ಆರೋಪಿ ಬಾಲಕನ ಮೇಲೆ ಲೈಂಗಿಕ ಶೋಷಣೆ ನಡೆಸುವ ವೇಳೆ ಕೆಲವು ರಾಸಾಯನಿಕ ವಸ್ತುಗಳನ್ನು ದೇಹಕ್ಕೆ ಎರಚುತ್ತಿದ್ದ. ಒಂದು ವೇಳೆ ಆತನ ಕೃತ್ಯಕ್ಕೆ ನಿರಾಕರಿಸಿದರೆ ನನ್ನ ಕುಟುಂಬವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಬಾಲಕ ತಿಳಿಸಿದ್ದಾನೆ.

    ಆರೋಪಿಯ ಕುರಿತು ಶಾಲಾ ಆಡಳಿತ ಮಂಡಳಿಗೆ ದೂರು ನೀಡಲು ತೆರಳಿದ ಸಂದರ್ಭದಲ್ಲಿ ಬಾಲಕನ ಪೋಷಕರ ವಿರುದ್ಧವೇ ಹಲ್ಲೆ ನಡೆಸಿದ್ದು, ಈ ವೇಳೆಯು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದಾನೆ ಎಂದು ಬಾಲಕನ ಪೋಷಕರು ತಿಳಿದ್ದಾರೆ.