Tag: sex workers

  • ಸೆಕ್ಸ್‌ ವರ್ಕರ್ಸ್‌ ಮೇಲೆ ಹಲ್ಲೆ ನಡೆಸಿ ದರೋಡೆ: ಸಿಂಗಾಪುರದಲ್ಲಿ ಇಬ್ಬರು ಭಾರತೀಯರಿಗೆ ಜೈಲು ಶಿಕ್ಷೆ

    ಸೆಕ್ಸ್‌ ವರ್ಕರ್ಸ್‌ ಮೇಲೆ ಹಲ್ಲೆ ನಡೆಸಿ ದರೋಡೆ: ಸಿಂಗಾಪುರದಲ್ಲಿ ಇಬ್ಬರು ಭಾರತೀಯರಿಗೆ ಜೈಲು ಶಿಕ್ಷೆ

    – 5 ವರ್ಷ ಜೈಲು, 12 ಬೆತ್ತದ ಏಟಿನ ಶಿಕ್ಷೆ ವಿಧಿಸಿದ ಕೋರ್ಟ್‌

    ಸಿಂಗಾಪುರ: ರಜೆ ಮೂಡ್‌ನಲ್ಲಿದ್ದ ಇಬ್ಬರು ಭಾರತೀಯರು, ಸೆಕ್ಸ್‌ ವರ್ಕರ್ಸ್‌ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

    ಇಬ್ಬರು ಲೈಂಗಿಕ ಕಾರ್ಯಕರ್ತೆಯರನ್ನು ಹೋಟೆಲ್‌ಗೆ ಕರೆಸಿ ದರೋಡೆ ಮಾಡಲಾಗಿದೆ. ಅವರ ಮೇಲೆ ಇಬ್ಬರು ಭಾರತೀಯ ಪುರುಷರು ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ಈ ಆರೋಪದಲ್ಲಿ ಭಾರತೀಯರಿಗೆ ತಲಾ 5 ವರ್ಷ, 1 ತಿಂಗಳು ಜೈಲು ಹಾಗೂ 12 ಬೆತ್ತದ ಏಟುಗಳ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಇಟಲಿಯಲ್ಲಿ ಭೀಕರ ರಸ್ತೆ ಅಪಘಾತ; ಭಾರತದ ಉದ್ಯಮಿ, ಪತ್ನಿ ಸ್ಥಳದಲ್ಲೇ ಸಾವು

    ಅರೋಕ್ಕಿಯಸಾಮಿ ಡೈಸನ್ (23) ಮತ್ತು ರಾಜೇಂದ್ರನ್ ಮಾಯಿಲರಸನ್ (27) ಬಂಧಿತ ಆರೋಪಿಗಳು. ಇವರಿಬ್ಬರೂ ರಜೆ ದಿನ ಕಳೆಯಲು ಭಾರತದಿಂದ ಸಿಂಗಾಪುರಕ್ಕೆ ಬಂದಿದ್ದರು. ಲಿಟಲ್ ಇಂಡಿಯಾ ಪ್ರದೇಶದಲ್ಲಿ ಇಬ್ಬರೂ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದು, ಲೈಂಗಿಕ ಸೇವೆಗಳಿಗಾಗಿ ವೇಶ್ಯೆಯರನ್ನು ನೇಮಿಸಿಕೊಳ್ಳಲು ಆಸಕ್ತಿ ಇದೆಯೇ ಎಂದು ಕೇಳುತ್ತಾರೆ. ಬಳಿಕ ಇಬ್ಬರು ಸೆಕ್ಸ್‌ ವರ್ಕರ್ಸ್‌ ನಂಬರ್‌ ಕೊಟ್ಟು ಹೋಗುತ್ತಾರೆ.

    ಆರೋಕ್ಕಿಯಾ ತನಗೆ ಹಣದ ಅವಶ್ಯಕತೆ ಇದೆ ಅಂತ ರಾಜೇಂದ್ರನ್ ಬಳಿ ಹೇಳಿಕೊಳ್ಳುತ್ತಾನೆ. ಈ ಮಹಿಳೆಯರನ್ನು ಸಂಪರ್ಕಿಸಿ ಹೋಟೆಲ್ ಕೋಣೆಯಲ್ಲಿ ದರೋಡೆ ಮಾಡಲು ಇಬ್ಬರು ಪ್ಲ್ಯಾನ್‌ ಮಾಡುತ್ತಾರೆ. ಆ ದಿನ ಸಂಜೆ 6 ಗಂಟೆ ಸುಮಾರಿಗೆ ಹೋಟೆಲ್ ಕೋಣೆಯಲ್ಲಿ ಒಬ್ಬ ಮಹಿಳೆಯನ್ನು ಭೇಟಿಯಾಗಲು ಇಬ್ಬರೂ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇದನ್ನೂ ಓದಿ: ಅಮೆರಿಕ ಧ್ವಜ ಸುಟ್ಟರೆ ತಕ್ಷಣ ಬಂಧನ, 1 ವರ್ಷ ಜೈಲು ಶಿಕ್ಷೆ: ಡೊನಾಲ್ಡ್‌ ಟ್ರಂಪ್‌ ಆದೇಶ

    ಸೆಕ್ಸ್‌ ವರ್ಕರ್‌ ರೂಮಿನೊಳಗೆ ಬರುತ್ತಿದ್ದಂತೆ ಆಕೆಯ ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿ ಆಭರಣ, 2,000 ಸಿಂಗಾಪುರ ಡಾಲರ್‌ ನಗದು, ಪಾಸ್‌ಪೋರ್ಟ್‌ ಮತ್ತು ಬ್ಯಾಂಕ್‌ ಕಾರ್ಡ್‌ಗಳನ್ನು ದೋಚುತ್ತಾರೆ. ಮತ್ತೆ 2ನೇ ಸೆಕ್ಸ್‌ ವರ್ಕರ್‌ ಸಂಪರ್ಕಿಸಿ ಹೋಟೆಲ್‌ಗೆ ಕರೆಸಿಕೊಳ್ಳುತ್ತಾರೆ. ಆಕೆ ಮೇಲೂ ಹಲ್ಲೆ ನಡೆಸಿ ಹಣ, ಮೊಬೈಲ್‌ ದರೋಡೆ ಮಾಡುತ್ತಾರೆ. ಕೊನೆಗೆ ಇಬ್ಬರನ್ನೂ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅವರಿಗೆ ಶಿಕ್ಷೆ ವಿಧಿಸಿದೆ.

  • ಲೈಂಗಿಕ ಕಾರ್ಯಕರ್ತರಿಗೂ ಆಧಾರ್ ನೀಡುವಂತೆ ಸುಪ್ರೀಂ ಸೂಚನೆ

    ಲೈಂಗಿಕ ಕಾರ್ಯಕರ್ತರಿಗೂ ಆಧಾರ್ ನೀಡುವಂತೆ ಸುಪ್ರೀಂ ಸೂಚನೆ

    ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿದ ಪ್ರಮಾಣಪತ್ರದ ಆಧಾರದ ಮೇಲೆ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಕಾರ್ಡ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

    ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರಿದ್ದ ಪೀಠವು, ಲೈಂಗಿಕ ಕಾರ್ಯಕರ್ತರ ಲಿಂಗದ ಗೌಪ್ಯತೆಯನ್ನು ಉಲ್ಲಂಘಿಸಬಾರದು. ಅವರ ಗುರುತನ್ನು ಬಹಿರಂಗಪಡಿಸಬಾರದು. ಪ್ರತಿಯೊಬ್ಬ ವ್ಯಕ್ತಿಯನ್ನೂ ಗೌರವದಿಂದ ಕಾಣಬೇಕಿರುವುದು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದೆ ಎಂದು ಹೇಳಿದೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ನಿಂತು ನಮಾಜ್- ವ್ಯಕ್ತಿಯ ಬಂಧನ

    SUPREME COURT

    ಯುಐಡಿಎಐ ಪ್ರಮಾಣಪತ್ರದ ಆಧಾರದ ಮೇಲೆ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಗೆಜೆಟೆಡ್ ಅನ್ನು ರಾಜ್ಯ ಏಡ್ಸ್‌ ನಿಯಂತ್ರಣದ ಯೋಜನಾ ನಿರ್ದೇಶಕರು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯಲ್ಲಿ (ನ್ಯಾಕೊ) ಸಲ್ಲಿಸಲಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಯಮುನೋತ್ರಿ ದೇವಸ್ಥಾನದ ಹೆದ್ದಾರಿಯಲ್ಲಿ ಗೋಡೆ ಕುಸಿತ – 10 ಸಾವಿರ ಮಂದಿ ಸಂಕಷ್ಟದಲ್ಲಿ

    ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ(ನ್ಯಾಕೊ) ಅಥವಾ ರಾಜ್ಯ ಏಡ್ಸ್ ನಿಯಂತ್ರಣ ಸಂಘದ ಯೋಜನೆ ನಿರ್ದೇಶಕರು ಸಲ್ಲಿಸಿದ ಆಧಾರದಲ್ಲಿ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ನೀಡಬಹುದು. ವ್ಯಕ್ತಿ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿ, ಆ ವ್ಯಕ್ತಿಗೆ ಗೌರವ ನೀಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ಪೀಠ ತಿಳಿಸಿದೆ.

  • ರಾಜ್ಯದ ಪ್ರಥಮ ಲೈಂಗಿಕ ವೃತ್ತಿ ಮಹಿಳೆಯರ ಸಂಘದ ಕಟ್ಟಡ ನಾಳೆ ಉದ್ಘಾಟನೆ

    ರಾಜ್ಯದ ಪ್ರಥಮ ಲೈಂಗಿಕ ವೃತ್ತಿ ಮಹಿಳೆಯರ ಸಂಘದ ಕಟ್ಟಡ ನಾಳೆ ಉದ್ಘಾಟನೆ

    ಬೆಂಗಳೂರು: ಗೋಕಾಕ್‌ನ ಲೈಂಗಿಕ ವೃತ್ತಿನಿರತರ ಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಘ ರಾಜ್ಯದಲ್ಲೇ ಪ್ರಥಮ ಬಾರಿಗೆ ಸ್ವಂತ ಕಟ್ಟಡವನ್ನು ಹೊಂದಲಿದ್ದು, ನಾಳೆ ಉದ್ಘಾಟನೆಯಾಗಲಿದೆ.

    ಮಾಜಿ ಸಂಸದ ಹಾಗೂ ಹಾಲಿ ವಿಧಾನಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌ ಅವರ ಕಾಳಜಿಯಿಂದ ನೆಲೆಯಿಲ್ಲದೆ ಹಾದಿ ಬೀದಿಗಳಲ್ಲಿ ಜನರ ಕಣ್ಣು ತಪ್ಪಿಸಿ ಸಭೆ-ಸಮಾರಂಭ ಮಾಡುವ ಅಸಹಾಯಕ ಸ್ಥಿತಿಯಲ್ಲಿದ್ದ ಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳೆಯರ ಸಂಸ್ಥೆಗೆ ಸೂರು ಸಿದ್ದವಾಗಿದೆ. ಈ ಕಟ್ಟಡವನ್ನು ಶುಕ್ರವಾರ ಶಾಸಕ ಸತೀಶ್‌ ಜಾರಕಿಹೊಳಿ ಅವರು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ

    ಸರ್ಕಾರಿ ಯೋಜನೆ ಏಡ್ಸ್‌ ನಿಯಂತ್ರಣ ಅಭಿಯಾನ ಈ ವೃತ್ತಿಯಲ್ಲಿರುವ ಮಹಿಳೆಯರು ಸಂಘಟಿತರಾಗಲು ದಾರಿ ಮಾಡಿ ಕೊಟ್ಟಿದೆ. ರಾಜ್ಯದಲ್ಲೂ ಈ ವೃತ್ತಿ ಸಾಂದ್ರತೆಯ ಪ್ರದೇಶಗಳಲ್ಲಿ ಅವರದ್ದೇ ಸಮುದಾಯದ ನಡುವೆ ಜಾಗೃತಿಯ ಭಾಗವಾಗಿ ಏಡ್ಸ್‌ ನಿಯಂತ್ರಣ ಸಂಘಗಳು ರೂಪುಗೊಂಡಿವೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಕೂಡ ಇಂತಹ ಲೈಂಗಿಕ ವೃತ್ತಿನಿರತರ ಆರೋಗ್ಯ ಜಾಗೃತಿ ಕೇಂದ್ರಗಳಲ್ಲಿ ಒಂದು. ಸಾವಿರಾರು ಮಹಿಳೆಯರು ತಾವು ಬಯಸದೇ ದೂಡಲ್ಪಟ್ಟ ಕ್ಷೇತ್ರದ ಬಗ್ಗೆ ಅರಿಯಲು, ಆರೋಗ್ಯ ಜಾಗೃತಿ ಹೊಂದಲು ಸಾಧ್ಯವಾಗುವಲ್ಲಿ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಪಾತ್ರ ಅತ್ಯಂತ ಹಿರಿದು.

    ಪೊಲೀಸ್, ರೌಡಿಗಳು, ಸಮಾಜಘಾತುಕರು ಹೀಗೆ ನಾನಾ ಪಟ್ಟಭದ್ರರ ಕೆಂಗಣ್ಣು, ಬೆದರಿಕೆಗಳ ನಡುವೆಯೂ ಈ ಮಹಿಳೆಯರು ಆರೋಗ್ಯವೆಂಬ ಕೊಡೆಯಲ್ಲಿ ಸಂಘಟಿತರಾಗಿದ್ದಾರೆ. ತಮ್ಮದೇ ಸಂಸ್ಥೆಯನ್ನು ಎಲ್ಲಾ ಮೂದಲಿಕೆ ಪ್ರತಿರೋಧದ ನಡುವೆ ಕಟ್ಟಿ ಬೆಳೆಸಿದರು. ಇವರಿಗೆ ಧೈರ್ಯ ತುಂಬಿ ಸಂಘಟನೆಗೆ ಬಲ ತುಂಬಿದವರು ಲಲಿತಾ ಹೊಸಮನಿ. ಅವರ ಸಂಘಟನಾ ಚಾತುರ್ಯದ ಫಲ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ. ನೋಂದಾಯಿತ ಸಂಸ್ಥೆ ಈಗ ತನ್ನ ಕಾರ್ಯಚಟುವಟಿಕೆಗಳಿಂದಲೇ ದೇಶದ ಗಮನ ಸೆಳೆದಿದೆ. ಸಾವಿರಾರು ನೊಂದು-ಬೆಂದ ಲೈಂಗಿಕ ವೃತ್ತಿ ಮಹಿಳೆಯರ ಆರೋಗ್ಯ ಹಾಗೂ ಸಮಗ್ರ ಅಭಿವೃದ್ಧಿಗೆ ಟೊಂಕಕಟ್ಟಿ ಸಂಘ ಕಾರ್ಯಪ್ರವೃತ್ತವಾಗಿದೆ. ಇದನ್ನೂ ಓದಿ: ಕೋವಿಡ್‌ ಲಸಿಕೆ ಹಾಕಿಸಲ್ಲವೆಂದು ಮಕ್ಕಳನ್ನೇ ಕಿಡ್ನ್ಯಾಪ್‌ ಮಾಡಿದ ತಾಯಿ – ಮಾಜಿ ಪತಿಯಿಂದ ದೂರು

    ಈ ಕ್ಷೇತ್ರದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಲೈಂಗಿಕ ವೃತ್ತಿನಿರತ ಮಹಿಳೆಯರ ಮಾನವ ಹಕ್ಕು, ಅವರ ಮಕ್ಕಳ ಪುನರ್ವಸತಿ ಮತ್ತು ಅವರ ಆರೋಗ್ಯ ಕ್ಷೇತ್ರದಲ್ಲಿ ಅಪಾರ ಕಾರ್ಯವೆಸಗಿ ಡಾಕ್ಟರೇಟ್‌ ಪದವಿ ಪಡೆದಿರುವ ಡಾ. ಲೀಲಾ ಸಂಪಿಗೆ ಅವರು ಈ ಮಹಿಳೆಯ ಸಾಂಘಿಕ ಒಗ್ಗೂಡುವಿಕೆಗೆ ಸ್ಪೂರ್ತಿ ಹಾಗೂ ಮಾರ್ಗದರ್ಶಕಿಯಾಗಿದ್ದಾರೆ. ಬೆಳಗಾಗಿ ಜಿಲ್ಲೆಯ ಗೋಕಾಕದ ಈ ಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಘದ ಸಾಧನೆ ಬೆಳವಣಿಗೆಗೂ ಇವರ ಮಾರ್ಗದರ್ಶನವೇ ಸ್ಪೂರ್ತಿಯಾಗಿದೆ.

    ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರು ಬೆಳಗಾವಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಲೀಲಾ ಸಂಪಿಗೆ ಅವರ ಸಹಾಯದಿಂದ ಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದರು. ಈ ವೃತ್ತಿನಿರತ ಹೆಣ್ಣುಮಕ್ಕಳ ಬರ್ಬರ ಬದುಕಿನ ಬಗ್ಗೆ ಕಾಳಜಿಯಿದ್ದ ಅವರು ತಮ್ಮ ಶಾಸಕ ನಿಧಿಯ ಅನುದಾನದಿಂದ ನೆರವಿನ ಭರವಸೆ ನೀಡಿ, ಕೂಡಲೇ ಜಾರಿಯಾಗುವಂತೆ ಮಾಡಿದರು. ಅದರ ಪ್ರತಿಫಲವೇ ಇದೀಗ ತಲೆಯೆತ್ತಿ ನಿಂತಿರುವ ಶಕ್ತಿ ತಡೆಗಟ್ಟುವ ಮಹಿಳೆಯರ ಸಂಘದ ಈ ಸ್ವಂತ ಕಟ್ಟಡ.

    ಕಾರ್ಯಕ್ರಮದ ವಿಶೇಷ: ಹೊಸ ವರ್ಷದ ಮೊದಲ ವಾರ ಬೆಳಗ್ಗೆ 10:30 ಕ್ಕೆ ಗೋಕಾಕ್‌ನ ಸತೀಶ್ ನಗರದ, 5ನೇ ಕ್ರಾಸ್‌ನಲ್ಲಿ ತಲೆಯೆತ್ತಿ ನಿಂತಿರುವ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಕಟ್ಟಡವನ್ನು ಶಾಸಕ ಸತೀಶ್ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ವೃತ್ತಿನಿರತ ಮಹಿಳೆಯರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿರುವ ಕಟ್ಟಡ ಈ ಮಾದರಿಯ ದೇಶದ ಪ್ರಯತ್ನಗಳಲ್ಲಿಯೇ ವಿಶಿಷ್ಟವಾದುದು.

  • ಲೈಂಗಿಕ ಕಾರ್ಯಕರ್ತೆಯರಿಗೂ ಪಡಿತರ, ವೋಟರ್‌ ಐಡಿ, ಆಧಾರ್‌ ನೀಡಿ: ಸುಪ್ರೀಂ ಕೋರ್ಟ್‌

    ಲೈಂಗಿಕ ಕಾರ್ಯಕರ್ತೆಯರಿಗೂ ಪಡಿತರ, ವೋಟರ್‌ ಐಡಿ, ಆಧಾರ್‌ ನೀಡಿ: ಸುಪ್ರೀಂ ಕೋರ್ಟ್‌

    ನವದೆಹಲಿ: ಮೂಲಭೂತ ಹಕ್ಕುಗಳನ್ನು ಪಡೆಯಲು ದೇಶದ ಪ್ರತಿಯೊಬ್ಬ ನಾಗರಿಕರು ಅರ್ಹರು. ಹೀಗಾಗಿ ಲೈಂಗಿಕ ಕಾರ್ಯಕರ್ತೆಯರಿಗೂ ಪಡಿತರ, ವೋಟರ್‌ ಐಡಿ, ಆಧಾರ್‌ ಕಾರ್ಡ್‌ ನೀಡುವ ಪ್ರಕ್ರಿಯೆಯನ್ನು ಆರಂಭಿಸುವಂತೆ ರಾಜ್ಯ, ಕೇಂದ್ರ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ.

    ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಲೈಂಗಿಕ ಕಾರ್ಯಕರ್ತೆಯರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ಪೀಠವು, ಯಾವುದೇ ಪುರಾವೆ ಇಲ್ಲದಿದ್ದರೂ ಲೈಂಗಿಕ ಕಾರ್ಯಕರ್ತೆಯರಿಗೆ ಪಡಿತರ ನೀಡುವಂತೆ ಕೇಂದ್ರ ಹಾಗೂ ಇತರೆ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಅಧಿಕಾರಕ್ಕೆ ಬಂದ್ರೆ ಪ್ರತಿ ತಿಂಗಳು ಮಹಿಳೆಯರ ಖಾತೆಗೆ 1,000 ರೂ. ಠೇವಣಿ: ಕೇಜ್ರಿವಾಲ್‌

    ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್‌, ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ಹೊರಡಿಸಿದೆ. ಈ ಬಗ್ಗೆ 2011ರಲ್ಲೇ ಸುಪ್ರೀಂ ಕೋರ್ಟ್‌ ಹಲವು ನಿರ್ದೇಶನಗಳನ್ನು ನೀಡಿತ್ತು.

    ದಶಕದ ಹಿಂದೆಯೇ ಲೈಂಗಿಕ ಕಾರ್ಯಕರ್ತೆಯರಿಗೆ ಪಡಿತರ ಹಾಗೂ ಗುರುತಿನ ಚೀಟಿಯನ್ನು ನೀಡುವಂತೆ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲಾಗಿದೆ. ಆದರೂ ಅದು ಯಾಕೆ ಅನುಷ್ಠಾನಕ್ಕೆ ಬಂದಿಲ್ಲ ಎಂದು ಪೀಠವು ಪ್ರಶ್ನಿಸಿದೆ. ಇದನ್ನೂ ಓದಿ: ಯುವತಿಯ ಒಂದು ದೂರಿಗೆ 1 ಸಾವಿರ ಪೊಲೀಸರು ತನಿಖೆ ಮಾಡಿದ್ರು!

    ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಘಟನೆಗಳು ಹಾಗೂ ರಾಜ್ಯ ಏಡ್ಸ್‌ ನಿಯಂತ್ರಣ ಸಂಘಟನೆಗಳ ಸಹಕಾರವನ್ನು ಸರ್ಕಾರಿ ಪ್ರಾಧಿಕಾರಿಗಳು ಪಡೆದುಕೊಳ್ಳಬೇಕು. ಸಮುದಾಯ ಕೇಂದ್ರಿತ ಸಂಘಟನೆಗಳ ನೆರವಿನೊಂದಿಗೆ ಲೈಂಗಿಕ ಕಾರ್ಯಕರ್ತೆಯರ ಪಟ್ಟಿಯನ್ನು ಮಾಡಿಕೊಳ್ಳಿ. ಅದನ್ನು ಪರಿಶೀಲಿಸಿ ಅಗತ್ಯ ಹಕ್ಕು, ಸೌಲಭ್ಯಗಳನ್ನು ಒದಗಿಸುವ ಪ್ರಕ್ರಿಯೆಯನ್ನು ಶೀಘ್ರವೇ ಆರಂಭಿಸಿ ಎಂದು ಕೋರ್ಟ್‌ ಸಲಹೆ ನೀಡಿದೆ.

  • ಕೊರೊನಾ ಎಫೆಕ್ಟ್- ವೇಶ್ಯಾವಾಟಿಕೆ ಬಿಟ್ಟು ಪೇಟಿಂಗ್, ಕರಕುಶಲ ಕೆಲಸ ಆರಂಭಿಸಿದ ಕಾರ್ಯಕರ್ತೆಯರು

    ಕೊರೊನಾ ಎಫೆಕ್ಟ್- ವೇಶ್ಯಾವಾಟಿಕೆ ಬಿಟ್ಟು ಪೇಟಿಂಗ್, ಕರಕುಶಲ ಕೆಲಸ ಆರಂಭಿಸಿದ ಕಾರ್ಯಕರ್ತೆಯರು

    ನವದೆಹಲಿ: ಕೊರೊನಾ ಹಿನ್ನೆಲೆ ವೇಶ್ಯಾವಾಟಿಕೆ ಸ್ಥಗಿತಗೊಂಡಿರುವುದರಿಂದ ಲೈಂಗಿಕ ಕಾರ್ಯಕರ್ತೆಯರು ಸಂಕಷ್ಟಕ್ಕೆ ಸಿಲುಕಿದ್ದು, ಬದುಕು ಕಟ್ಟಿಕೊಳ್ಳಲು ಇದೀಗ ಪರ್ಯಾಯವಾಗಿ ಜೀವನೋಪಾಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಪೇಟಿಂಗ್, ಕರಕುಶಲ ಕೆಲಸ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

    ಲೈಂಗಿಕ ಕಾರ್ಯಕರ್ತೆಯರ ಈ ಕಾರ್ಯಕ್ಕೆ ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರ(ಡಿಎಸ್‍ಎಲ್‍ಎ), ದೆಹಲಿ ಪೊಲೀಸ್ ಹಾಗೂ ಎನ್‍ಜಿಒ ನೈನಾ ಆ್ಯಕ್ಟಿವಿಟಿ ಎಜುಕೇಷನಲ್ ಸೊಸೈಟಿ ಜಂಟಿಯಾಗಿ ‘ಹುನಾರ್ ಜ್ಯೋತಿ’ ಮೂಲಕ ಸಹಾಯ ಮಾಡುತ್ತಿವೆ. ಈ ಕಾರ್ಯಕ್ರಮದ ಮೂಲಕ ಪೇಪರ್ ಬ್ಯಾಗ್, ಬಣ್ಣ ಬಣ್ಣದ ಮಣ್ಣಿನ ದೀಪ ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ಮಾಡುತ್ತಿದ್ದಾರೆ.

    ಲೈಂಗಿಕ ಕಾರ್ಯಕರ್ತೆಯಾಗಿದ್ದ 35 ವರ್ಷದ ಕುಸುಮಾ(ಹೆಸರು ಬದಲಿಸಲಾಗಿದೆ) ಈ ಕುರಿತು ಮಾಹಿತಿ ನೀಡಿದ್ದು, ನಾನು 12 ವರ್ಷಗಳಿಂದ ಈ ಕೆಲಸವನ್ನು ಬಿಡಬೇಕು ಎಂದುಕೊಂಡಿದ್ದೆ. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ವೇಶ್ಯಾವಾಟಿಕೆ ತ್ಯಜಿಸಿ ಈ ಕಾರ್ಯಕ್ರಮದ ಮೂಲಕ ವಿವಿಧ ಚಟುವಟಿಕೆಗಳನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಮೊದಲ ಮೂರು ದಿನ ಲೈಂಗಿಕ ಕಾರ್ಯಕರ್ತೆಯರಿಗೆ ಬಣ್ಣ ದೀಪ ಹಾಗೂ ಪೇಪರ್ ಪ್ಯಾಕೆಟ್ ಮಾಡುವುದು ಹೇಗೆ ಎಂಬುದನ್ನು ಕಲಿಸಲಾಗಿದೆ. ಮುಂದಿನ ಕೆಲವು ದಿನಗಳು ಹಾಗೂ ವಾರಗಳಲ್ಲಿ ಊದುಬತ್ತಿ, ಕೀ ರಿಂಗ್ ಹಾಗೂ ಬಟ್ಟೆ ಕೆಲಸ ಮಾಡುವುದರ ಕುರಿತು ಅವರಿಗೆ ಹೇಳಿಕೊಡಲಾಗುವುದು. ಕೊರೊನಾ ಪರಿಸ್ಥಿತಿಯನ್ನು ಅವಕಾಶವಾಗಿ ಬಳಸಿಕೊಂಡು ವೇಶ್ಯಾವಾಟಿಕೆಯಿಂದ ಹೊರ ಬರಲು ಅವರು ಯತ್ನಿಸುತ್ತಿದ್ದಾರೆ ಎಂದು ಡಿಸಿಪಿ ಸಂಜಯ್ ಭಟಿಯಾ ತಿಳಿಸಿದರು.

    ಕೊರೊನಾ ತಗುಲುತ್ತದೆ ಎಂಬ ಭಯದಿಂದ ಗ್ರಾಹಕರು ಬರುತ್ತಿಲ್ಲ. ಮೊದಲು ಕನಿಷ್ಠ 5-6 ಗ್ರಾಹಕರು ಬರುತ್ತಿದ್ದರು. ಈಗ ಕೇವಲ ಇಬ್ಬರು ಮಾತ್ರ ಬರುತ್ತಿದ್ದಾರೆ. ಈ ಇಬ್ಬರು ನೀಡುವ ಹಣದಿಂದ ಜೀವನ ಸಾಗಿವುಸು ಕಷ್ಟವಾಗಿತ್ತು. ಹೀಗಾಗಿ ಈ ಸಾಂಕ್ರಾಮಿಕ ರೋಗದ ನಡುವೆ ವೇಶ್ಯಾವಾಟಿಕೆ ಸಾಧ್ಯವಿಲ್ಲ ಎಂದು ಅರಿವಾಗಿ ಹಣ ಸಂಪಾದಿಸುವ ಕಲೆಯನ್ನು ಕಲಿಯಲು ನಿರ್ಧರಿಸಿದೆ ಎಂದು ಜಿಬಿ ರಸ್ತೆಯ ಲೈಂಗಿಕ ಕಾರ್ಯರ್ತೆ ತಿಳಿಸಿದ್ದಾರೆ.

    ಲೈಂಗಿಕ ಕಾರ್ಯಕರ್ತೆಯರ ಇಚ್ಛಾಶಕ್ತಿಯನ್ನು ಮನಗಂಡ ಪೊಲೀಸರು, ಈ ಮಹಿಳೆಯರಿಗೆ ತರಬೇತಿ ನೀಡುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಎನ್‍ಎಇಎಸ್ ಎಂಬ ಎನ್‍ಜಿಒ ಸಂಸ್ಥೆ ಪೇಪರ್ ಬ್ಯಾಗ್ ಹಾಗೂ ಮಣ್ಣಿನ ದೀಪಗಳನ್ನು ಮಾಡಲು ಮಹಿಳೆಯರಿಗೆ ಕಚ್ಚಾ ವಸ್ತುಗಳನ್ನು ಕೊಡುತ್ತದೆ. ಇದರ ಮಧ್ಯೆ ಡಿಎಸ್‍ಎಲ್‍ಎ ಮಹಿಳೆಯರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡಿದೆ.

    ಕೊರೊನಾ ಸಮಯದಲ್ಲಿ ಲೈಂಗಿಕ ಕಾರ್ಯಕರ್ತೆಯರ ದುಃಸ್ಥಿತಿ ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳು ಮಹಿಳೆಯರಿಂದ ಯಾವುದೇ ಗುರುತಿನ ಚೀಟಿ ಪಡೆಯದೆ ಪಡಿತರ ನೀಡುವಂತೆ ನಿರ್ದೇಶಿಸಿತ್ತು. ಇದೀಗ ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೆ ಸಹಾಯ ಮಾಡುತ್ತಿದ್ದಾರೆ.

  • 4 ದಿನಗಳಿಂದ ತುತ್ತು ಅನ್ನ ತಿಂದಿಲ್ಲ, ದಯವಿಟ್ಟು ಊಟ ಕೊಡಿ – ಕಣ್ಣೀರು ತರಿಸುತ್ತೆ ಬೆಳಗಾವಿ ಮಹಿಳೆಯರ ಕಥೆ

    4 ದಿನಗಳಿಂದ ತುತ್ತು ಅನ್ನ ತಿಂದಿಲ್ಲ, ದಯವಿಟ್ಟು ಊಟ ಕೊಡಿ – ಕಣ್ಣೀರು ತರಿಸುತ್ತೆ ಬೆಳಗಾವಿ ಮಹಿಳೆಯರ ಕಥೆ

    ಬೆಳಗಾವಿ: ಕೊರೊನಾ ಮಹಾಮಾರಿ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಜನ ಪರದಾಡುವಂತಾಗಿದೆ. ಹಲವರು ತುತ್ತು ಅನ್ನವೂ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಾಲಿಗೆ ಇದೀಗ ಲೈಂಗಿಕ ಕಾರ್ಯಕರ್ತೆಯರೂ ಸೇರಿಕೊಂಡಿದ್ದು, ನಾಲ್ಕು ದಿನಗಳಿಂದ ಊಟವಿಲ್ಲದೆ ಗೋಳಿಡುತ್ತಿದ್ದಾರೆ.

    ಕೊರೊನಾ ಲಾಕ್‍ಡೌನ್ ನಿಂದಾಗಿ ಲೈಂಗಿಕ ಕಾರ್ಯಕರ್ತೆಯರಿಗೂ ಸಂಕಷ್ಟ ಎದುರಾಗಿದ್ದು, ಕುಂದಾನಗರಿ ಬೆಳಗಾವಿಯಲ್ಲಿ ಒಂದು ಹೊತ್ತು ಊಟ ಸಿಗದೆ ಕಳೆದ ನಾಲ್ಕು ದಿನಗಳಿಂದ ಕೇವಲ ನೀರು ಕುಡಿದು ಬದುಕುತ್ತಿದ್ದಾರೆ. ತುತ್ತು ಅನ್ನಕ್ಕಾಗಿ ತುದಿಗಾಲಲ್ಲಿ ನಿಂತಿದ್ದು, ಮಹಿಳೆಯರ ಬಳಿ ನಾವು ಹೋದಾಗ ನಿಮಗೆ ಕೈ ಮುಗಿಯುತ್ತೇವೆ ಒಂದೊತ್ತು ಊಟ ಕೊಡಿಸಿ ಎಂದು ಗಳ ಗಳನೆ ಅತ್ತಿದ್ದಾರೆ. ಅವರ ಕಣ್ಣೀರಿನ ಕಥೆ ಕರಳು ಹಿಂಡುವಂತಿದ್ದು, ಈ ಕುರಿತು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಈ ಮೂಲಕ ಲೈಂಗಿಕ ಕಾರ್ಯಕರ್ತೆಯರು ತಮ್ಮ ಅಳಲು ತೋಡಿಕೊಂಡಿದ್ದು, ಊಟ ನೀಡುವಂತೆ ಅಂಗಲಾಚಿದ್ದಾರೆ. ರೇಷನ್ ಕಾರ್ಡ್ ಇಲ್ಲ, ನಾವಿಲ್ಲಿಗೆ ಬಂದು 10-15 ವರ್ಷಗಳಾಯಿತು. ಬಾಡಿಗೆ ಮನೆಯಲ್ಲಿದ್ದೆವು, ಬಾಡಿಗೆ ಕಟ್ಟದ್ದಕ್ಕೆ ಮನೆಯ ವಸ್ತುಗಳನ್ನು ಹೊರಗೆ ಹಾಕುತ್ತೇವೆ ಎಂದು ಮಾಲೀಕರು ಬೆದರಿಕೆ ಹಾಕುತ್ತಿದ್ದಾರೆ. ಬೇರೆಯವರ ಬಳಿ ನಮ್ಮ ಕಷ್ಟ ಹೇಳಿದರೆ ಆಡಿಕೊಂಡು ನಗುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

  • ಮೂವರು ಸೆಕ್ಸ್ ವರ್ಕರ್ ಮೇಲೆ ಒಂಬತ್ತು ಜನರಿಂದ ಗ್ಯಾಂಗ್‍ ರೇಪ್

    ಮೂವರು ಸೆಕ್ಸ್ ವರ್ಕರ್ ಮೇಲೆ ಒಂಬತ್ತು ಜನರಿಂದ ಗ್ಯಾಂಗ್‍ ರೇಪ್

    ನವದೆಹಲಿ: ಮೂವರು ಸೆಕ್ಸ್ ವರ್ಕರ್ ಮೇಲೆ ಒಂಬತ್ತು ಪುರುಷರು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

    ಓರ್ವ ಕ್ಯಾಬ್ ಡ್ರೈವರ್ ಸೇರಿದಂತೆ 8 ಜನ ಖಾಸಗಿ ಭದ್ರತಾ ಸಿಬ್ಬಂದಿ ಸೆಕ್ಸ್ ವರ್ಕರ್ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆ ಬೆಳಗ್ಗೆ 5 ಗಂಟೆಗೆ ಬೆಳಕಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಂಗಳವಾರ ರಾತ್ರಿ ನಾವು ದೆಹಲಿಯ ಲಜಪತ್ ನಗರ ಮೆಟ್ರೋ ನಿಲ್ದಾಣದ ಬಳಿ ಗ್ರಾಹಕರಿಗಾಗಿ ಕಾಯುತ್ತಾ ನಿಂತಿದ್ದೀವಿ. ಈ ವೇಳೆ ಸ್ವಿಫ್ಟ್ ಡಿಸೈರ್ ಓಲಾ ಕ್ಯಾಬ್ ನಲ್ಲಿ ಬಂದ ಚಾಲಕ ನಮ್ಮನ್ನು ಕರೆದ ಎಂದು ದೂರುದಾರೆ ಮತ್ತು ಉಳಿದಿಬ್ಬರು ತಿಳಿಸಿದ್ದಾರೆ.

    ಪ್ರತಿ ಪುರುಷರಿಗೆ 3,000 ಸಾವಿರದಂತೆ ಡೀಲ್ ಕುದರಿಸಿದ್ದು, ಡೀಲ್ ಕುದರಿದ ಮೇಲೆ ನೊಯ್ಡಾದ ಸೆಕ್ಟರ್ 18ರಲ್ಲಿ ಇನ್ನೂ ಇಬ್ಬರು ಸ್ನೇಹಿತರು ಕಾಯುತ್ತಿದ್ದು, ಅಲ್ಲಿಗೆ ಹೋಗೋಣ ಎಂದು ಕರೆದೊಯ್ದಿದ್ದಾರೆ. ಪುರುಷರು ಸಂತ್ರಸ್ತ ಮಹಿಳೆಯರಿಗೆ 3,600 ರೂ. ಮುಂಗಡ ಹಣವನ್ನೂ ಪಾವತಿಸಿದ್ದಾರೆ ಎಂದು ಹಿರಿಯ ಎಸ್‍ಪಿ ವೈಭವ್ ಕೃಷ್ಣ ಅವರು ಮಾಹಿತಿ ನೀಡಿದ್ದಾರೆ.

    ನೊಯ್ಡಾದ ಸೆಕ್ಟರ್ 135ರಲ್ಲಿರುವ ಫಾರ್ಮ್ ಹೌಸ್‍ಗೆ ಮಹಿಳೆಯರನ್ನು ಕರೆದೊಯ್ದಿದ್ದಾರೆ. ಇಬ್ಬರು ಪುರುಷರು ಕಾರ್‍ನಲ್ಲಿರುವವರ ಜೊತೆಗೆ ಇನ್ನೂ 7 ಜನ ಪುರುಷರು ಫಾರ್ಮ್ ಹೌಸ್‍ಗೆ ಬಂದಿದ್ದಾರೆ. ಆಗ ಮಹಿಳೆಯರು ಹಿಂಜರಿಕೆಯಿಂದ ಕ್ಯಾಬ್‍ನಲ್ಲಿದ್ದ ಇಬ್ಬರು ಪುರುಷರಿಗೆ ತಮ್ಮನ್ನು ಮರಳಿ ದೆಹಲಿಗೆ ಬಿಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೊಪ್ಪದ ಪುರುಷರು ತಮ್ಮನ್ನು ಹೊಡೆದಿದ್ದು, ಹಲ್ಲೆ ಮಾಡಿ ಮುಂಗಡವಾಗಿ ಪಾವತಿಸಿದ ಹಣವನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಘಟನೆ ಸಂಬಂಧ ಫಾರ್ಮ್ ಹೌಸ್‍ನ್ನು ಸೀಜ್ ಮಾಡಲಾಗಿದೆ. ಈಗಾಗಲೇ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನು ಇಬ್ಬರು ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ವೈಭವ್ ಕೃಷ್ಣ ಹೇಳಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕತ್ತಲೆಯಾಗುತ್ತಿದ್ದಂತೆ ತೆರೆದುಕೊಳ್ಳುತ್ತೆ ಬೆತ್ತಲೆ ಜಗತ್ತು..!

    ಕತ್ತಲೆಯಾಗುತ್ತಿದ್ದಂತೆ ತೆರೆದುಕೊಳ್ಳುತ್ತೆ ಬೆತ್ತಲೆ ಜಗತ್ತು..!

    -ರೋಡ್‍ನಲ್ಲೇ ನಡೆಯುತ್ತೆ ವೇಶ್ಯಾವಾಟಿಕೆ ವ್ಯವಹಾರ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ಈ ದಂಧೆಯಲ್ಲಿ ಭಾಗಿಯಾಗಿರುವ ಮಂದಿ ನಡುರಸ್ತೆಗಳಲ್ಲೇ ವ್ಯವಹಾರ ಮಾಡಿ, ಹೇಗೆ ಗ್ರಾಹಕರನ್ನು ಟ್ರಾಪ್ ಮಾಡುತ್ತಾರೆ ಎಂಬುವುದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆಯಲ್ಲಿ ಬಯಲಾಗಿದೆ.

    ಹೌದು, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ, ಮಾಜಿ ಮಂತ್ರಿಗಳ ನಿವಾಸಗಳಿರೋ ಹೈಟೆಕ್ ಏರಿಯದಲ್ಲಿ ಈ ವೇಶ್ಯಾವಾಟಿಕೆ ದಂಧೆ ರಾಜಾರೋಷವಾಗಿ, ಯಾರ ಭಯವಿಲ್ಲದೇ ನಡೆಯುತ್ತಿದೆ. ಈ ದಂಧೆಗೆ ಪೊಲೀಸರ ಶ್ರೀ ರಕ್ಷೆ ಕೂಡ ಇದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಗೊತ್ತಿದ್ದರು ಪೊಲೀಸರು ಮಾತ್ರ ಸುಮ್ಮನೆ ಕಂಡುಕಾಣದವರ ರೀತಿ ಇರುತ್ತಾರೆ.

    ರಾಜಧಾನಿಯಲ್ಲಿ ಹೈಟೆಕ್ ಏರಿಯಾ ಅಂತಾನೇ ಪೇಮಸ್ ಆಗಿರೋ ಡಾಲರ್ಸ್ ಕಾಲೋನಿಯಲ್ಲಿ, ನ್ಯೂ ಬಿಇಎಲ್ ರೋಡ್ ನಲ್ಲಿ ರಾಜರೋಷವಾಗೇ ಸೆಕ್ಸ್ ಧಂದೆ ನಡೆಯುತ್ತಿದೆ. ಆದ್ರೆ ಯಾರು ಅದನ್ನ ಪ್ರಶ್ನೆ ಮಾಡುತ್ತಿಲ್ಲ, ಪೊಲೀಸರು ರೋಲ್ ಕಾಲ್ ತೆಗೆದುಕೊಂಡು ಸುಮ್ಮನಾಗಿದ್ದಾರೆ ಅನ್ನೋ ವಿಚಾರ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆಗೆ ಮುಂದಾಗಿತ್ತು. ಈ ವೇಳೆ ಪಬ್ಲಿಕ್ ಟಿವಿ ನಡೆಸಿರೋ ಸ್ಟಿಂಗ್ ಅಪರೇಷನ್ ನಲ್ಲಿ ನ್ಯೂ ಬಿಇಎಲ್ ರೋಡ್ ನ ಸೆಕ್ಸ್ ಕರ್ಮಕಾಂಡ ಬಯಲಾಗಿದೆ.

    ಅಷ್ಟೇ ಅಲ್ಲದೆ ಯಾವ ಭಯವಿಲ್ಲದೆ ವ್ಯವಹಾರವನ್ನ ನಡುರಸ್ತೆಯಲ್ಲಿಯೇ ಈ ಮಂದಿ ಕುದುರಿಸುತ್ತಾರೆ. ರಸಹ್ಯ ಕಾರ್ಯಚರಣೆ ಮಾಡುವಾಗ ಸೆಕ್ಸ್ ವರ್ಕರ್ ಗೆ ಒಂದು ಕರೆ ಬಂದಿತ್ತು. ಪೋನ್ ಮೂಲಕವೂ ಇವರ ದಂಧೆ ಹೇಗೆ ನಡೆಯುತ್ತಿದೆ ಅನ್ನೋದಕ್ಕೆ ಆ ಸೆಕ್ಸ್ ವರ್ಕರ್‍ಗೆ ಬಂದ ಕರೆಯೇ ಸಾಕ್ಷಿ. ಇನ್ನೂ ಅವರ ಬಳಿ ಎಷ್ಟು ಜನ ಇದ್ದಾರೆ? ಅವರ ಜಾಗಗಳು ಯಾವುದು? ಯಾರಿಗೆಲ್ಲ ಇವರಿಂದ ಹಣ ಹೊಗ್ತಿದೆ ಅಂತ ಕೇಳಬೇಕು ಅನ್ನೋಷ್ಟರಲ್ಲಿ ಒಂದು ಹೊಯ್ಸಳ ವಾಹನ ಬಂದು ತಮ್ಮ ನಂಬರ್ ಕೊಟ್ಟು ಕಾಲ್ ಮಾಡು ಅಂತ ಹೇಳಿದ್ದಾರೆ. ಬಳಿಕ ಅಲ್ಲಿಂದ ಯಾವ ಭಯವಿಲ್ಲದೆ ಪೊಲೀಸರ ಮುಂದೆಯೇ ಆ ಸೆಕ್ಸ್ ವರ್ಕರ್ಸ್ ಗ್ಯಾಂಗ್ ಮುಂದೆ ಹೊಗಿದ್ದಾರೆ.

    ಡಾಲರ್ಸ್ ಕಾಲೋನಿಯ ನ್ಯೂ ಬಿಇಎಲ್ ರೋಡ್‍ನ ಹೈಟೆಕ ದಂಧೆ ಇದಾಗಿದ್ದು, ಬೆಂಗಳೂರಿನಲ್ಲಿ ಸೆಕ್ಸ್ ಧಂದೆ ಯಾವ ರೀತಿ ಬೇರೆ ಬೇರೆ ಮಾರ್ಗಗಳಲ್ಲಿ ಆಗ್ತಿದೆ ಅನ್ನೋ ರಿಯಾಲಿಟಿ ಚಕ್ ಮಾಡಲು ಪಬ್ಲಿಕ್ ಟಿವಿ ಮುಂದಾಗಿತ್ತು. ಇದು ಇನ್ನೂ ಭಯಂಕರವಾದ ಸೆಕ್ಸ್ ದಂಧೆ. ಇನ್ನೂ ಹಲವು ವೆಬ್ ಪೇಜ್ ಗಳಲ್ಲಿ ಸಾವಿರಾರು ಸೆಕ್ಸ್ ವರ್ಕರ್ಸ್ ಗಳ ನಂಬರ್ ಗಳು ಸಿಗುತ್ತಿದೆ. ಅವರಿಗೆ ಕರೆ ಮಾಡಿದರೇ ಸಿಗುತ್ತೆ ಸೆಕ್ಸ್ ಸರ್ವಿಸ್ ಅಂತಾರೇ, ಹೋದರೆ ಮಾತ್ರ ನಿಮ್ಮ ಹಣ ಫುಲ್ ಖಾಲಿ ಮಾಡಿ ಕಳುಹಿಸ್ತಾರೆ.

    ಸೆಕ್ಸ್ ಸರ್ವೀಸ್ ಅಂತಾ ಆನ್ ಲೈನ್‍ನಲ್ಲಿ ನಂಬರ್ ತಗೊಂಡು ಹೋದರೆ ನಿಮ್ಮ ಕತೆ ಮುಗಿತು. ಅವರು ಹೇಳೋ ಜಾಗಕ್ಕೆ ಹೋದರೆ ನಿಮ್ಮನ್ನ ಹೆದರಿಸಿ ಬೆದರಿಸಿ ಇರೋ ಬರೋ ಹಣವನ್ನ ವಸೂಲಿ ಮಾಡಿ ಕಳಿಸ್ತಾರೆ. ಬೆಂಗಳೂರಿನ ನಾನಾ ಭಾಗಗಳಲ್ಲಿ ಇತಂಹ ಆನ್ ಲೈನ್ ಸೆಕ್ಸ್ ಸರ್ವಿಸ್ ದಂಧೆ ನಡೆಯುತ್ತಿದೆ. ಅದರಲ್ಲೂ, ಕೆ.ಆರ್ ಪುರಂ ಬಳಿಯ ಟಿಸಿ ಪಾಳ್ಯ, ಸರ್ಜಪುರ ಮೈನ್ ರೋಡ್‍ನ ದೊಮ್ಮ ಸಂದ್ರ, ಬನ್ನೇರಘಟ್ಟದ ಕೋಳಿ ಫಾರಂ, ಕೆಂಗೇರಿ, ಕೋರಮಂಗಲ, ಇಂದ್ರನಗರ ಸೇರಿದಂದೆ ಹಲವು ಕಡೆ ಈ ದಂಧೆ ನಡೆಯುತ್ತಿದೆ.

    https://www.youtube.com/watch?v=Kspy5HhzR1c