Tag: sex worker

  • ‌ಸೆಕ್ಸ್ ವರ್ಕರ್ ವಸ್ತುವಲ್ಲ‌, ಸೇವೆ‌ ಪಡೆಯುವವನು ಗ್ರಾಹಕನೂ ಅಲ್ಲ: ಕೇರಳ ಹೈಕೋರ್ಟ್

    ‌ಸೆಕ್ಸ್ ವರ್ಕರ್ ವಸ್ತುವಲ್ಲ‌, ಸೇವೆ‌ ಪಡೆಯುವವನು ಗ್ರಾಹಕನೂ ಅಲ್ಲ: ಕೇರಳ ಹೈಕೋರ್ಟ್

    ತಿರುವನಂತಪುರಂ: ಸೆಕ್ಸ್‌ ವರ್ಕರ್ಸ್‌ಗಳಿಂದ (Sex Worker) ಸೇವೆ ಪಡೆಯುವ ವ್ಯಕ್ತಿಯನ್ನು ‘ಗ್ರಾಹಕ’ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಲೈಂಗಿಕ ಕಾರ್ಯಕರ್ತೆ ‘ಉತ್ಪನ್ನ’ (ವಸ್ತು) ಅಲ್ಲ ಎಂದು ಕೇರಳ ಹೈಕೋರ್ಟ್‌ (Kerala High Court) ಹೇಳಿದೆ.

    ಲೈಂಗಿಕ ಕಾರ್ಯಕರ್ತೆಯರ ಸೇವೆಗಳನ್ನು ಪಡೆಯುವ ವ್ಯಕ್ತಿಯ ವಿರುದ್ಧ ಅನೈತಿಕ ಕಳ್ಳಸಾಗಣೆ (ತಡೆಗಟ್ಟುವಿಕೆ) ಕಾಯ್ದೆ 1956ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬಹುದು. ಏಕೆಂದರೆ ಲೈಂಗಿಕ ಕಾರ್ಯಕರ್ತೆಗೆ ಹಣ ಪಾವತಿಸುವ ಮೂಲಕ ವೇಶ್ಯಾವಾಟಿಕೆಗೆ ಪ್ರೇರೇಪಿಸುವಂತಾಗುತ್ತದೆ ಎಂದು ನ್ಯಾಯಮೂರ್ತಿ ವಿ.ಜಿ. ಅರುಣ್ (Justice V.G. Arun) ಅವರಿದ್ದ ಏಕಸದಸ್ಯ ಪೀಠ ಹೇಳಿದೆ. ಇದನ್ನೂ ಓದಿ: ಮತ್ತೆ ಅನುಚಿತ ವರ್ತನೆ ತೋರಿದ್ರೆ ದರ್ಶನ್‌ ಬಳ್ಳಾರಿಗೆ ಶಿಫ್ಟ್‌ – ಐಜಿಪಿಗೆ ಅಧಿಕಾರ‌ ಕೊಟ್ಟ ಕೋರ್ಟ್

    ಏನಿದು ಪ್ರಕರಣ?
    1956ರ ಅನೈತಿಕ ಕಳ್ಳಸಾಗಣೆ (ತಡೆಗಟ್ಟುವಿಕೆ) (Immoral Traffic) ಕಾಯ್ದೆಯ ಸೆಕ್ಷನ್ 3 (ವೇಶ್ಯಾಗೃಹವನ್ನು ನಡೆಸಿದ್ದಕ್ಕಾಗಿ ಶಿಕ್ಷೆ), 4 (ಇನ್ನೊಬ್ಬ ವ್ಯಕ್ತಿಯ ವೇಶ್ಯಾವಾಟಿಕೆಯ ಗಳಿಕೆಗೆ ಅವಲಂಬನೆಗೆ ಶಿಕ್ಷೆ), 5(1)(d) (ವೇಶ್ಯಾವಾಟಿಕೆ ಪ್ರೇರಣೆ), ಮತ್ತು 7 (ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾವಾಟಿಕೆಗೆ ಶಿಕ್ಷೆ) ಅಡಿಯಲ್ಲಿ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು. ಈ ವೇಳೆ, ಸೇವೆ ಪಡೆಯುವ ವ್ಯಕ್ತಿಯನ್ನು ‘ಗ್ರಾಹಕ’ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಲೈಂಗಿಕ ಕಾರ್ಯಕರ್ತೆ ‘ಉತ್ಪನ್ನ’ ಅಲ್ಲ ಎಂದು ಅಭಿಪ್ರಾಯಪಟ್ಟಿದೆ.

    ಮಾರ್ಚ್ 2021 ರಲ್ಲಿ ಪೆರೂರ್ಕಡ ಪೊಲೀಸ್ ಠಾಣೆ ವ್ಯಾಪ್ತಿಯ ಕುಡಪ್ಪನಕುನ್ನುವಿನ ಮನೆಯೊಂದರಲ್ಲಿ ಅರ್ಜಿದಾರ ಮತ್ತು ಮಹಿಳೆಯೊಬ್ಬರು ಬೆತ್ತಲೆಯಾಗಿ ಪತ್ತೆಯಾಗಿದ್ದರು. ಈ ಪ್ರಕರಣದ ಇತರ ಇಬ್ಬರು ಆರೋಪಿಗಳು ಮೂವರು ಮಹಿಳೆಯರನ್ನು ಹಣಕೊಟ್ಟು ಖರೀದಿಸಿ ವೇಶ್ಯಾವಾಟಿಕೆ ಉದ್ದೇಶಕ್ಕಾಗಿ ಬಳಸುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿತ್ತು.

    ಈ ಪ್ರಕರಣದಲ್ಲಿ ಪತ್ತೆಯಾಗಿದ್ದ ವ್ಯಕ್ತಿ ಗ್ರಾಹಕ ಮಾತ್ರ. ಆತನ ವಿರುದ್ಧ ವೇಶ್ಯಾವಾಟಿಕೆಗೆ ಪ್ರೇರೇಪಿಸಿದ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

    ಪೀಠ ಹೇಳಿದ್ದೇನು?
    ಲೈಂಗಿಕ ಕಾರ್ಯಕರ್ತೆಯನ್ನು ಉತ್ಪನ್ನವೆಂದು ಅವಮಾನಿಸಲಾಗುವುದಿಲ್ಲ. ಆ ಲೈಂಗಿಕ ಕಾರ್ಯಕರ್ತೆಗೆ ಹಣ ಪಾವತಿಸುವ ಮೂಲಕ ವೇಶ್ಯಾವಾಟಿಕೆ ನಡೆಸಲು ಪ್ರೇರೇಪಿಸಿದಂತಾಗುತ್ತದೆ. ಆದ್ದರಿಂದ 1956 ರ ಅನೈತಿಕ ಕಳ್ಳಸಾಗಾಣಿಕೆ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 5(1)(d) ಅಡಿಯಲ್ಲಿ ಅಪರಾಧಕ್ಕಾಗಿ ಕಾನೂನು ಕ್ರಮ ಜರುಗಿಸಲು ಹೊಣೆಗಾರನಾಗಿದ್ದಾನೆ. ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಅಪರಾಧಗಳಿಗಾಗಿ ಅರ್ಜಿದಾರರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲಾಗಿದ್ದು, ಸೆಕ್ಷನ್ 5(1)(d) ಮತ್ತು 7 ರ ಅಡಿಯಲ್ಲಿ ವಿಚಾರಣೆಯನ್ನು ಮುಂದುವರಿಸಲು ಅನುಮತಿ ನೀಡಿ ಕೋರ್ಟ್‌ ಆದೇಶಿಸಿದೆ. ಇದನ್ನೂ ಓದಿ: ಪುತ್ರನಿಗೆ ಶಸ್ತ್ರಚಿಕಿತ್ಸೆ – ಶಾಸಕ ವಿನಯ್‌ಗೆ 2 ದಿನಗಳ ಮಧ್ಯಂತರ ಜಾಮೀನು ಮಂಜೂರು

  • ಸೆಕ್ಸ್ ಕೂಡ ಒಂದು ಕೆಲಸ – ಕಾನೂನುಬದ್ಧಗೊಳಿಸಲು ಹೊಸ ಮಸೂದೆ ಮಂಡನೆ

    ಸೆಕ್ಸ್ ಕೂಡ ಒಂದು ಕೆಲಸ – ಕಾನೂನುಬದ್ಧಗೊಳಿಸಲು ಹೊಸ ಮಸೂದೆ ಮಂಡನೆ

    ವಾಟಿಂಗ್ಟನ್: ಅಮೆರಿಕದ (USA) ಕಾಪ್ ಹೇಟಿಂಗ್ ಕ್ವೀನ್ಸ್ ಕೌನ್ಸಿಲ್‌ನ (Queens CouncilWoman) ಟಿಫಾನಿ ಕ್ಯಾಬನ್ ಅವರು ಲೈಂಗಿಕ ಕಾರ್ಯಕರ್ತೆಯರ ಉದ್ಯಮವನ್ನ ಕಾನೂನುಬದ್ಧಗೊಳಿಸುವ ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ (Sex Worker) ಸಹಾಯ ನೀಡುವ ಸಂಬಂಧ ಹೊಸ ಮಸೂದೆಯೊಂದನ್ನ ಮಂಡಿಸಿದ್ದಾರೆ.

    ನ್ಯೂಯಾರ್ಕ್‌ನಲ್ಲಿ ನಡೆದ ಕ್ವೀನ್ಸ್ ಕೌನ್ಸಿಲ್ ಸಭೆಯಲ್ಲಿ ಮಸೂದೆ ಮಂಡನೆಯಾಗಿದ್ದು, ಸೆಕ್ಸ್ ವೃತ್ತಿ ಅನ್ನೋದು ಅಪರಾಧವಲ್ಲ. ಹಿಂದಿನ ಮತ್ತು ಪ್ರಸ್ತುತ ಲೈಂಗಿಕ ಕಾರ್ಯಕರ್ತೆಯರು ತೆರಿಗೆದಾರರ ನಿಧಿಯ ಸಹಾಯವನ್ನು ಪಡೆಯಬಹುದಾಗಿದೆ. ಅಲ್ಲದೇ ಈ ಮಸೂದೆಯೂ ಕಾನೂನುಬದ್ಧವಾಗಿರಲಿದ್ದು, ಜೀವನೋಪಾಯಕ್ಕಾಗಿ ದೇಹವನ್ನು ಪ್ರದರ್ಶಿಸುವ ಎಲ್ಲರಿಗೂ ಅನ್ವಯಿಸುತ್ತದೆ. ಅವರು ಸಹಾಯ ಪಡೆದುಕೊಳ್ಳಬಹುದು ಎಂದಿದ್ದಾರೆ. ಇದನ್ನೂ ಓದಿ: ಟ್ರಂಪ್‌ ಮನೆಯ ಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ರಹಸ್ಯ ದಾಖಲೆಗಳು

    ನ್ಯೂಯಾರ್ಕ್ ನಗರವು ತನ್ನ ಜನರ ಆರೋಗ್ಯ, ಸುರಕ್ಷತೆ ಮತ್ತು ಆರ್ಥಿಕ ಯೋಗಕ್ಷೇಮವನ್ನು ರಕ್ಷಿಸುವ ಜವಾಬ್ದಾರಿ ಹೊಂದಿದೆ. ಹಾಗಾಗಿ ಜೀವನಕ್ಕಾಗಿ ಏನು ಮಾಡಿದರೂ ಲೆಕ್ಕಿಸುವುದಿಲ್ಲ ಎಂದರಲ್ಲದೇ, ಲೈಂಗಿಕ ಕೆಲಸವೂ ಕೆಲಸವೇ ಆಗಿದೆ ಎಂದು ಕ್ಯಾಬನ್ (Tiffany Caban) ಹೇಳಿದ್ದಾರೆ.

    ಅಲ್ಲದೇ ಈ ಮಸೂದೆ ಮಂಡಿಸುವುದರಿಂದ ಚಲನಶೀಲತೆ, ಆರೋಗ್ಯ, ವಸತಿ ಮತ್ತು ಸಾಮಾಜಿಕ ಒಳಿಗಾಗಿ ಆರ್ಥಿಕ ಬೆಂಬಲ ಒದಗಿಸಬಹುದು. ಜೊತೆಗೆ ಲೈಂಗಿಕ ಕಾರ್ಯಕರ್ತರೊಂದಿಗೆ ನೇರವಾಗಿ ಕೆಲಸ ಮಾಡುವ ಗುಂಪುಗಳಿಗೆ ಸರ್ಕಾರದಿಂದ ಅನುದಾನ ಒದಗಿಸಬಹುದು. ಉದ್ಯೋಗದ ಆಧಾರದ ಮೇಲೆ ತಾರತಮ್ಯ ನಿಷೇಧಿಸಬಹುದು. ಜೊತೆಗೆ ಲೈಂಗಿಕ ಕಾರ್ಯಕರ್ತೆಯರ ಸ್ಥಾನಮಾನವನ್ನು ರಕ್ಷಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಗತ್ತಿನ ಅತ್ಯಂತ ಬಡರಾಷ್ಟ್ರ ಸೊಮಾಲಿಯಾದಲ್ಲಿ ಬಾಂಬ್ ಸ್ಫೋಟವಾಗಿ 25 ಮಕ್ಕಳು ಸಾವು

  • ಲೈಂಗಿಕ ಕಾರ್ಯಕರ್ತೆ ಮೇಲೆ ಹಲ್ಲೆ – ನಾಲ್ವರ ವಿರುದ್ಧ ದೂರು ದಾಖಲು

    ಲೈಂಗಿಕ ಕಾರ್ಯಕರ್ತೆ ಮೇಲೆ ಹಲ್ಲೆ – ನಾಲ್ವರ ವಿರುದ್ಧ ದೂರು ದಾಖಲು

    ಮುಂಬೈ: ಹಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ಲೈಂಗಿಕ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಥಾಣೆ ಜಿಲ್ಲೆಯ ಭಿವಂಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 23 ವರ್ಷದ ಲೈಂಗಿಕ ಕಾರ್ಯಕರ್ತೆ ನೀಡಿದ ದೂರಿನ ಆಧಾರದ ಮೇಲೆ ದಂಪತಿ ಮತ್ತು ಇತರ ಇಬ್ಬರ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಭಿವಂಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:  ಪ್ರಾರ್ಥನೆ ಸಲ್ಲಿಸುವ ಮೊದಲು ದೇವಸ್ಥಾನದ ನೆಲ ಗುಡಿಸಿದ ದ್ರೌಪದಿ ಮುರ್ಮು

    ಸಂತ್ರಸ್ತೆ ದೂರಿನಲ್ಲಿ, ನಾನು ಮನೆಯಲ್ಲಿ ಇರುವಾಗ ಆರೋಪಿಗಳು ನನ್ನ ತಲೆಕೂದಲು ಹಿಡಿದು ಎಳೆದಾಡಿದ್ದಾರೆ. ಅಲ್ಲದೇ ಮನೆಯಿಂದ ಹೊರಗೆ ಎಳೆದು ಥಳಿಸಿದ್ದಾರೆ. ಈ ವೇಳೆ ನನ್ನನ್ನು ರಕ್ಷಿಸಲು ಬಂದ ಇನ್ನೊಬ್ಬ ಲೈಂಗಿಕ ಕಾರ್ಯಕರ್ತೆಯ ಮೇಲೂ ಅವರು ಹಲ್ಲೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

    CRIME 2

    ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಆರೋಪಿಯನ್ನು ಬಂಧಿಸಿಲ್ಲ.

    Live Tv

  • ಮದ್ವೆಯಾಗಲು ಒಪ್ಪದ ಸೆಕ್ಸ್ ವರ್ಕರ್- ಕೊಂದು 5 ತುಂಡು ಮಾಡಿದವ ಆರೆಸ್ಟ್

    ಮದ್ವೆಯಾಗಲು ಒಪ್ಪದ ಸೆಕ್ಸ್ ವರ್ಕರ್- ಕೊಂದು 5 ತುಂಡು ಮಾಡಿದವ ಆರೆಸ್ಟ್

    ನವದೆಹಲಿ: ಮದುವೆಯಾಗಲು ಒಪ್ಪದ ಮಹಿಳೆಯನ್ನು ಕೊಲೆ ಮಾಡಿ ಐದು ತುಂಡು ಮಾಡಿ ಬೀಸಾಡಿದ್ದ ವ್ಯಕ್ತಿಯನ್ನು ದೆಹಲಿ ವಿಶೇಷ ಪೊಲೀಸರು ಬಂಧಿಸಿದ್ದಾರೆ.

    ಕೊಲೆ ಮಾಡಿದ ವ್ಯಕ್ತಿಯನ್ನು 32 ವರ್ಷದ ಮೊಹಮ್ಮದ್ ಅಯೂಬ್ ಎಂದು ಗುರುತಿಸಲಾಗಿದೆ. ಮದುವೆಯಾಗಿ 3 ಮಕ್ಕಳ ತಂದೆಯಾದರೂ ಲೈಂಗಿಕ ಕಾರ್ಯಕರ್ತೆಯಾಗಿದ್ದ ಲತಾ ಅಲಿಯಾಸ್ ಸಲ್ಮಾಳನ್ನು ಪ್ರೀತಿ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.

    2008ರಲ್ಲಿ ಮದುವೆಯಾಗಿದ್ದ ಅಯೂಬ್ ವೇಶ್ಯಾಗೃಹವೊಂದರಲ್ಲಿ ಲತಾಳನ್ನು ಭೇಟಿ ಮಾಡಿದ್ದಾನೆ. ಅವಳ ಜೊತೆ ವಿವಾಹೇತರ ಸಂಬಂಧ ಇಟ್ಟಿಕೊಂಡು ಈ ಕೆಲಸ ಬಿಟ್ಟು ತನ್ನನ್ನು ಮದುವೆಯಾಗು ಎಂದು ಹೇಳಿದ್ದಾನೆ. ಆದರೆ ವೃತ್ತಿಯಲ್ಲಿ ವೇಶ್ಯೆಯಾಗಿದ್ದ ಲತಾ ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ.

    ಇದರಿಂದ ಕೋಪಗೊಂಡ ಅಯೂಬ್ ಆಗಸ್ಟ್ 20ರ ಸಂಜೆ ಲತಾಳನ್ನು ಸುತ್ತಾಡಿಕೊಂಡು ಬರೋಣ ಬಾ ಎಂದು ಬವಾನಾ ಕಾಲುವೆಯ ಬಳಿ ಕರೆದುಕೊಂಡು ಹೋಗಿದ್ದಾನೆ. ನಂತರ ಚಾಕುವಿನಿಂದ ಆಕೆಯ ಗಂಟಲನ್ನು ಸೀಳಿ ಕೊಲೆ ಮಾಡಿ ಶವವನ್ನು ಗುರುತಿಸಲು ಆಗದ ರೀತಿಯಲ್ಲಿ ಐದು ತುಂಡುಗಳಾಗಿ ಕತ್ತರಿಸಿ ಎಸೆದು ಬಂದಿದ್ದಾನೆ.

    ಮಹಿಳೆಯ ಶವವನ್ನು ವಶಕ್ಕೆ ಪಡೆದ ಕೈಲಾಶನಾಥ್ ಪೊಲೀಸರು ತನಿಖೆ ಮಾಡಿ ಶುಕ್ರವಾರ ಆರೋಪಿ ಮಹಮ್ಮದ್ ಅಯೂಬ್‍ನನ್ನು ತುರ್ಕಮಾನ್ ಗೇಟ್ ಬಳಿ ಬಂಧಿಸಿದ್ದಾರೆ. ಕೊಲೆಗೆ ಬಳಸಿದ ಕಾರು ಮತ್ತು ಚಾಕುವನ್ನು ವಶಕ್ಕೆ ಪಡೆದಿದ್ದಾರೆ.

  • ಸೆಕ್ಸ್ ವರ್ಕರ್ ಮೇಲೆ ಲವ್, ವೇಶ್ಯಾಗೃಹದಿಂದ ಆಕೆಯನ್ನ ರಕ್ಷಿಸಿದ ಪ್ರೇಮಿ- ಮುಂದೆ ಮದುವೆ

    ಸೆಕ್ಸ್ ವರ್ಕರ್ ಮೇಲೆ ಲವ್, ವೇಶ್ಯಾಗೃಹದಿಂದ ಆಕೆಯನ್ನ ರಕ್ಷಿಸಿದ ಪ್ರೇಮಿ- ಮುಂದೆ ಮದುವೆ

    ನವದೆಹಲಿ: ವ್ಯಕ್ತಿಯೊಬ್ಬರು ತಾನು ಪ್ರೀತಿಸಿದ ಯುವತಿಯನ್ನ ವೇಶ್ಯಾಗೃಹದಿಂದ ಪಾರು ಮಾಡಿ ಈಗ ಮದುವೆಗೆ ಅಣಿಯಾಗುತ್ತಿರೋ ಅಪರೂಪದ ಲವ್ ಸ್ಟೋರಿ ಇದು.

    ಗುರುವಾರದಂದು ದೆಹಲಿ ಮಹಿಳಾ ಆಯೋಗ 27 ವರ್ಷ ವಯಸ್ಸಿನ ನೇಪಾಳ ಮೂಲದ ಯುವತಿಯನ್ನ ಇಲ್ಲಿನ ಜಿಬಿ ರೋಡ್‍ನ ವೇಶ್ಯಾಗೃಹದಿಂದ ರಕ್ಷಿಸಿದೆ. ಯುವತಿ ಸದರ್ ಬಜಾರ್‍ನ ತನ್ನ ಪ್ರೇಮಿಯನ್ನ ಮದುವೆಯಾಗಲಿದ್ದಾರೆ.

    ಎರಡು ವರ್ಷಗಳ ಹಿಂದೆ ಶುಭಿ ಮತ್ತು ಸಾಗರ್‍ಗೆ (ಹೆಸರು ಬದಲಾಯಿಸಲಾಗಿದೆ) ದೆಹಲಿಯ ಸ್ಥಳೀಯ ಮಾರುಕಟ್ಟೆಯೊಂದರಲ್ಲಿ ಪರಿಚಯವಾಗಿತ್ತು. ಮೊದಲ ನೋಟದಲ್ಲೇ ಒಬ್ಬರನ್ನೊಬ್ಬರು ಇಷ್ಟಪಡೋಕೆ ಶುರು ಮಾಡಿದ್ರು. ನಂತರ ಸಾಗರ್ ಶುಭಿಯನ್ನು ಭೇಟಿಯಾಗಲು ಗ್ರಾಹಕನಂತೆ ವೇಶ್ಯಾಗೃಹಕ್ಕೆ ಆಗಾಗ ಹೋಗ್ತಿದ್ದರು. ಈ ವೇಳೆ ಇಬ್ಬರಿಗೂ ಪ್ರೇಮವಾಗಿ ಮದುವೆಯಾಗಿ ಹೊಸ ಜೀವನ ಶುರು ಮಾಡಬೇಕು ಅಂತ ನಿರ್ಧರಿಸಿದ್ರು.

    ಶುಭಿ ವೇಶ್ಯಾಗೃಹದಲ್ಲಿದ್ದ ಇತರೆ ಕೆಲವು ಮಹಿಳೆಯರೊಂದಿಗೆ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು. ಅಲ್ಲಿಂದ ಹೇಗಾದ್ರೂ ಮಾಡಿ ಪರಾರಿಯಾಗಬೇಕು ಎಂದು ಸಾಕಷ್ಟು ಬಾರಿ ಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ನಂತರ ಸಾಗರ್ ಮಹಿಳಾ ಆಯೋಗದ ಸಹಾಯವಾಣಿಗೆ ಕರೆ ಮಾಡಿ ತನ್ನ ಕಥೆಯನ್ನ ಹೇಳಿಕೊಂಡ್ರು. ಈ ಬಗ್ಗೆ ಮಾಹಿತಿ ಪಡೆದ ಮಹಿಳಾ ಆಯೋಗ, ಪೊಲೀಸರ ಜೊತೆಗೂಡಿ ವೇಶ್ಯಾಗೃಹದ ಮೇಲೆ ದಾಳಿ ಮಾಡಿ ಯುವತಿಯನ್ನು ರಕ್ಷಿಸಿದ್ದಾರೆ.

    ಮದುವೆಗೆ ಸಿದ್ಧತೆ: ಸಾಗರ್ ಈಗಾಗಲೇ ಮನೆಯವರನ್ನ ಒಪ್ಪಿಸಿದ್ದು, ತಾನು ಪ್ರೀತಿಸಿದ ಶುಭಿಯನ್ನು ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶುಭಿ ಹೊಸ ಜೀವನ ಪ್ರಾರಂಭಿಸಬೇಕೆಂದಿದ್ದು, ಆಕೆಯ ಹಿಂದಿನ ಜೀವನದಿಂದಾಗ ಯಾರೂ ಆಕೆಗೆ ತೊಂದರೆ ಕೊಡದಂತೆ, ಆಕೆಯ ಮರ್ಯಾದೆಗೆ ಹಾನಿ ಮಾಡದಂತೆ ಸ್ಥಳೀಯ ಪೊಲೀಸರು ರಕ್ಷಣೆ ನೀಡಲಿದ್ದಾರೆ ಎಂದು ಮಹಿಳಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ನಮಗೆ ವ್ಯಕ್ತಿಯೊಬ್ಬರಿಂದ ಕರೆ ಬಂತು. ಜಿಬಿ ರೋಡ್‍ನಲ್ಲಿನ ಯುವತಿಯೊಬ್ಬರನ್ನ ಪ್ರೀತಿಸುತ್ತಿರುವ ಬಗ್ಗೆ ಹೇಳಿದ್ರು. ಇಲ್ಲಿನ ವೇಶ್ಯಾಗೃಹದಲ್ಲಿ ಯುವತಿ ಇದ್ದು, ಈ ವೃತ್ತಿಯನ್ನ ತ್ಯಜಿಸಿ ತನ್ನೊಂದಿಗೆ ಬರಬೇಕೆಂದಿದ್ದಾರೆ ಎಂದು ಹೇಳಿದ್ರು ಅಂತ ಮಹಿಳಾ ಆಯೋಗದ ಹಿರಿಯ ಅಧಿಕರಿಯೊಬ್ಬರು ಹೇಳಿದ್ದಾರೆ.

    2015ರಲ್ಲಿ ನೇಪಾಳದಲ್ಲಿ ಭೂಕಂಪವಾದಾಗ ಈ ಯುವತಿ ಭಾರತಕ್ಕೆ ಬಂದ್ರು. ಆಕೆ ತೀರಾ ಬಡ ಕುಟುಂಬದವರಾಗಿದ್ದು, ಎಲ್ಲವನ್ನೂ ಕಳೆದುಕೊಂಡಿದ್ರು. ತಿನ್ನಲು ಅನ್ನವಿಲ್ಲದೆ, ಜೀವನಾಧಾರವಿಲ್ಲದೆ ದೆಹಲಿಗೆ ಬಂದಿದ್ರು. ನಂತರ ಆಕೆಯನ್ನು ಯಾರೋ ಜಿಬಿ ರೋಡ್‍ನ ವೇಶ್ಯಾಗೃಹಕ್ಕೆ ಮಾರಿದ್ರು ಎಂದು ಅಧಿಕಾರಿ ಹೇಳಿದ್ದಾರೆ.

    ಜಿಬಿ ರೋಡ್: (ಗಾಸ್ರ್ಟಿನ್ ಬ್ಯಾಸ್ಟಿಯನ್ ರೋಡ್) ರಾಷ್ಟ್ರರಾಜಧಾನಿಯ ದೊಡ್ಡ ರೆಡ್ ಲೈಟ್ ಏರಿಯಾ. ಇಲ್ಲಿ ಸುಮಾರು 93 ವೇಶ್ಯಾಗೃಹಗಳಿದ್ದು, 3500 ಸೆಕ್ಸ್ ವರ್ಕರ್ಸ್ ಇದ್ದಾರೆ. ಸೆಕ್ಸ್ ವರ್ಕರ್ ಗಳ ಸುಮಾರು 8 ಸಾವಿರ ಮಕ್ಕಳು ಇಲ್ಲಿ ವಾಸವಿದ್ದು, ಎನ್‍ಜಿಓಗಳು ಇವರ ವಿದ್ಯಾಭ್ಯಾಸಕ್ಕೆ ಸಹಾಯ ಮಡುತ್ತಿವೆ. ಸಿಕ್ಕಿಂ, ನೇಪಾಳ, ಒಡಿಶಾ, ಅಸ್ಸಾಂ, ಜರ್ಖಂಡ್ ಮತ್ತು ಪಶ್ಚಿಮ ಬಂಗಾಳದಿಂದ ಬಂದ ಹುಡುಗಿಯರೇ ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಾರೆ. ಹುಡುಗಿಯರು ಸಂಕಷ್ಟದಲ್ಲಿದ್ರೆ ಅದನ್ನೇ ಬಂಡವಾಳ ಮಾಡಿಕೊಂಡು ಜಿಬಿ ರೋಡ್‍ನಂತಹ ನರಕಕ್ಕೆ ತಳ್ತಾರೆ. ಇದು ತುಂಬಾ ಗಂಭೀರವಾದ ವಿಷಯವಾಗಿದ್ದು, ಜಿಬಿ ರೋಡ್ ಬೇಗನೆ ಬಂದ್ ಮಾಡಬೇಕು ಎಂದು ಮಹಿಳಾ ಆಯೋಗದ ಅಧಿಕಾರಿ ಸ್ವಾತಿ ಮಲಿವಾಲ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

  • ತನ್ನ ದೇಶಕ್ಕೆ ಹಿಂದಿರುಗಲು 10,000 ರೂ. ಹಳೇನೋಟುಗಳನ್ನ ಬದಲಿಸಿಕೊಡಲು ಮೋದಿಗೆ ಟ್ವೀಟ್ ಮಾಡಿದ ಸೆಕ್ಸ್ ವರ್ಕರ್

    ತನ್ನ ದೇಶಕ್ಕೆ ಹಿಂದಿರುಗಲು 10,000 ರೂ. ಹಳೇನೋಟುಗಳನ್ನ ಬದಲಿಸಿಕೊಡಲು ಮೋದಿಗೆ ಟ್ವೀಟ್ ಮಾಡಿದ ಸೆಕ್ಸ್ ವರ್ಕರ್

    ಮುಂಬೈ: ದುಷ್ಟನೊಬ್ಬನ ವಂಚನೆಗೊಳಗಾಗಿ ವೇಶ್ಯಾವಾಟಿಕೆಗೆ ದೂಡಲ್ಪಟ್ಟ ಬಾಂಗ್ಲಾದೇಶ ಮೂಲದ ಮಹಿಳೆಯೊಬ್ಬರು ತನ್ನ ದೇಶಕ್ಕೆ ಹಿಂದಿರುಗಲು ತಾನು ಕೂಡಿಟ್ಟ 10 ಸಾವಿರ ರೂ. ಹಳೇ ನೋಟುಗಳನ್ನ ಬದಲಿಸಿಕೊಡುವಂತೆ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದಾರೆ.

    2015ರ ಡಿಸೆಂಬರ್‍ನಲ್ಲಿ ಪುಣೆಯ ಬುಧವಾರಪೇಟೆಯ ವೇಶ್ಯಾಗೃಹವೊಂದರಿಂದ ರಕ್ಷಿಸಲಾದ ಈ ಮಹಿಳೆ ಈಗ ಬಾಂಗ್ಲಾದೇಶಕ್ಕೆ ಹಿಂದಿರುಗಲು ಬಯಸಿದ್ದಾರೆ. ಬಾಂಗ್ಲಾದೇಶ ಕೂಡ ಆಕೆಯನ್ನ ತನ್ನ ದೇಶಕ್ಕೆ ವಾಪಸ್ ಕರೆಸಿಕೊಳ್ಳಲು ಒಪ್ಪಿಗೆ ನೀಡಿದ್ದು, ಇದೀಗ ತನ್ನ ಬಳಿಯಿರುವ 10 ಸಾವಿರ ರೂ. ಹಳೇ ನೋಟ್‍ಗಳನ್ನ ಬದಲಾಯಿಸಿಕೊಡುವಂತೆ ಕೋರಿ ಈ ಮಹಿಳೆ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ತನ್ನ ಕೈಯ್ಯಾರೆ ಪತ್ರ ಬರೆದು ಟ್ವೀಟ್ ಮಾಡಿದ್ದಾರೆ. ಗ್ರಾಹಕರು ತನಗೆ ಹಳೇನೋಟ್‍ಗಳಲ್ಲಿ ನೀಡಿದ ಟಿಪ್ಸ್ ಒಟ್ಟುಗೂಡಿಸಿ 10 ಸಾವಿರ ರೂ. ಕೂಡಿಟ್ಟಿದ್ದು, ನೋಟ್‍ಬ್ಯಾನ್ ಆದ ಸಂದರ್ಭದಲ್ಲಿ ಈ ಹಣ ವೇಶ್ಯಾಗೃಹದ ಮಾಲಿಕರ ವಶದಲ್ಲಿತ್ತು ಎಂದು ಮಹಿಳೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಭಾರತಕ್ಕೆ ಬಂದಿದ್ದು ಹೇಗೆ?: ಭಾರತಕ್ಕೆ ಬರುವ ಮುಂಚೆ ಮೂರು ವರ್ಷಗಳ ತನ್ನ ವೈವಾಹಿಕ ಜೀವನ ಚೆನ್ನಾಗಿರಲಿಲ್ಲ. ಪತಿಗೆ ವಿಚ್ಛೇದನ ನೀಡಿದ ಬಳಿಕ ಬಾಂಗ್ಲಾದೇಶದ ಗಾರ್ಮೆಂಟ್ ಫ್ಯಾಕ್ಟರಿಯೊಂದರಲ್ಲಿ 9 ಸಾವಿರ ರೂ. ಸಂಬಳದ ಕೆಲಸಕ್ಕೆ ಸೇರಿ ಪೋಷಕರನ್ನ ನೋಡಿಕೊಳ್ತಿದ್ದೆ. ಫ್ಯಾಕ್ಟರಿಯಲ್ಲಿ ಸಹೋದ್ಯೋಗಿಯೊಬ್ಬ ಭಾರತದಲ್ಲಿ ತನಗಿರುವ ಸಂಪರ್ಕಗಳ ಬಗ್ಗೆ ತಿಳಿಸಿ 15 ಸಾವಿರ ರೂ.ಗಳಷ್ಟು ಹಣ ಸಂಪಾದಿಸಬಹುದು ಎಂದು ಹೇಳಿದ. ನನ್ನ ಹಣಕಾಸಿನ ಸ್ಥಿತಿ ಚೆನ್ನಾಗಿರಲಿಲ್ಲವಾದ್ದರಿಂದ ನಾನು ಅದಕ್ಕೆ ಒಪ್ಪಿಕೊಂಡೆ. ಅವನು ನನ್ನನ್ನು ಮಹಾರಾಷ್ಟ್ರದ ವಶಿಗೆ ಕರೆತಂದ. ಆಗ ನನಗೆ ಆಘಾತವೇ ಕಾದಿತ್ತು. ನೇಪಾಳಿ ಮಹಿಳೆಯೊಬ್ಬರಿಗೆ ನನ್ನನ್ನು 50 ಸಾವಿರ ರೂ.ಗೆ ಮಾರಾಟ ಮಾಡಿದ ಎಂದು ಮಹಿಳೆ ಹೇಳಿದ್ದಾರೆ.

    ಬಳಿಕ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮತ್ತೊಬ್ಬ ಮಹಿಳೆಯ ವಶಕ್ಕೊಪ್ಪಿಸಿದ್ರು. ಆಕೆ ನನ್ನನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದಳು. ನಂತರ ನನ್ನನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳಿಸುವುದಾಗಿ ಹೇಳಿ ಪುಣೆಗೆ ಕರೆತಂದ್ರು ಎಂದು ಮಹಿಳೆ ಹೇಳಿದ್ದಾರೆ.

    ಒಂದೂವರೆ ವರ್ಷಗಳ ಈ ಕಿರುಕುಳದ ಬಳಿಕ 2015ರ ಡಿಸೆಂಬರ್‍ನಲ್ಲಿ ರಕ್ಷಣಾ ಸಂಸ್ಥೆಯೊಂದರ ಸಹಾಯದಿಂದ ಮಹಿಳೆಯನ್ನ ರಕ್ಷಣೆ ಮಾಡಲಾಗಿತ್ತು. ಆದ್ರೆ ಆಕೆಗೆ ಸೇರಿದ ಹಣ ಹಾಗೂ ಇನ್ನಿತರ ವಸ್ತುಗಳು ವೇಶ್ಯಾಗೃಹದಲ್ಲಿ ಉಳಿದುಕೊಂಡಿದ್ದವು ಎಂದು ವರದಿಯಾಗಿದೆ.