Tag: sex scandal

  • ಮಾಜಿ ರಾಜ್ಯಪಾಲರು, ಮಾಜಿ ಸಿಎಂ, ಅಧಿಕಾರಿಗಳ ಸ್ಕ್ಯಾಂಡಲ್ – 40 ಕಾಲ್ ಗರ್ಲ್ಸ್‌ಗಳಿಂದ ಹನಿಟ್ರ್ಯಾಪ್

    ಮಾಜಿ ರಾಜ್ಯಪಾಲರು, ಮಾಜಿ ಸಿಎಂ, ಅಧಿಕಾರಿಗಳ ಸ್ಕ್ಯಾಂಡಲ್ – 40 ಕಾಲ್ ಗರ್ಲ್ಸ್‌ಗಳಿಂದ ಹನಿಟ್ರ್ಯಾಪ್

    – ಕೃತ್ಯದಲ್ಲಿ ಬಿ ಗ್ರೇಡ್ ಬಾಲಿವುಡ್ ನಟಿಯರೂ ಭಾಗಿ
    – ಸಹಕರಿಸಿದ್ದಕ್ಕೆ ಎನ್‍ಜಿಒಗಳಿಗೆ ಸರ್ಕಾರದ ಗುತ್ತಿಗೆ

    ಭೋಪಾಲ್: ಮಧ್ಯಪ್ರದೇಶದ ಮಾಜಿ ರಾಜ್ಯಪಾಲರು, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳು, ಗಣ್ಯ ವ್ಯಕ್ತಿಗಳನ್ನು ಬಾಲಿವುಡ್‍ನ ಕೆಲವು ಬಿ-ಗ್ರೇಡ್ ನಟಿಯರು ಸೇರಿದಂತೆ 40ಕ್ಕೂ ಅಧಿಕ ಕಾಲ್ ಗರ್ಲ್ಸ್‌ ಸೇರಿ ಹನಿಟ್ರ್ಯಾಪ್ ಎಸಗಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

    ಈ ಕೃತ್ಯಕ್ಕೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ರಾಜ್ಯ ರಾಜ್ಯಪಾಲರು ಸೇರಿದಂತೆ ಹಲವು ಅಧಿಕಾರಿಗಳು ಗಣ್ಯ ವ್ಯಕ್ತಿಗಳು ಬಲಿಪಶುಗಳಾಗಿದ್ದಾರೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ರಾಜಿ ಮಾಡಿಕೊಳ್ಳುವ ವೇಳೆ ಹಾಗೂ ಸೆಕ್ಸ್ ನಡೆಸುವ ವೇಳೆ ಚಿತ್ರೀಕರಿಸಿರುವ 92 ಎಚ್‍ಡಿ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಈವರೆಗೆ ಎರಡು ಲ್ಯಾಪ್‍ಟಾಪ್‍ಗಳು ಮತ್ತು ಹಲವಾರು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬ್ಲ್ಯಾಕ್‍ಮೇಲ್ ಹಾಗೂ ಸುಲಿಗೆ ದಂಧೆ ಆರೋಪದ ಮೇಲೆ ಐವರು ಮಹಿಳೆಯರನ್ನು ಬಂಧಿಸಲಾಗಿದೆ.

    ಮಧ್ಯಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಸಂಜೀವ್ ಶಮಿ ನೇತೃತ್ವದ ಪೊಲೀಸರ ವಿಶೇಷ ತನಿಖಾ ತಂಡ(ಎಸ್‍ಐಟಿ)ವು ಕಾಲ್ ಗರ್ಲ್ಸ್‌ ಚಿತ್ರೀಕರಿಸಿದ ಸ್ಥಳದಲ್ಲಿ ವಿಡಿಯೋಗಳನ್ನು ಹೊಂದಿರುವ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಈ ಪ್ರಕರಣದ ತನಿಖೆ ನಡೆಸಲು ಡಿ.ಶ್ರೀನಿವಾಸ್ ಅವರ ಜಾಗಕ್ಕೆ ಸಂಜೀವ್ ಶಮಿಯವರನ್ನು ನೇಮಿಸಲಾಗಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‍ವರ್ಗಿಯಾ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರವು ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸುತ್ತಿದೆ. ಈ ಕುರಿತು ಸಿಬಿಐನಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.

    ಹನಿಟ್ರ್ಯಾಪ್ ಹೇಗೆ?
    ಈ ಹನಿಟ್ರ್ಯಾಪ್ ಕಿಂಗ್‍ಪಿನ್ ಶ್ವೇತಾ ಸ್ವಾಪ್ನಿಲ್ ಜೈನ್ ಆಗಿದ್ದು, ಈಕೆ ಉನ್ನತ ಅಧಿಕಾರಿಗಳು, ಮಂತ್ರಿಗಳು ಹಾಗೂ ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿ, ಆರಂಭದ ಸಂವಾದದ ನಂತರ ಅವರನ್ನು ಲೈಂಗಿಕತೆಗೆ ಆಹ್ವಾನಿಸುತ್ತಿದ್ದಳು. ಇದಕ್ಕಾಗಿ ಅಥಿತಿ ಗೃಹ ಅಥವಾ 5 ಸ್ಟಾರ್ ಹೋಟೆಲ್‍ಗಳಿಗೆ ಆಹ್ವಾನಿಸುತ್ತಾಳೆ. ವ್ಯಕ್ತಿಯು ಒಂದು ಬಾರಿ ಲೈಂಗಿಕತೆ ನಡೆಸಿದ ನಂತರ ಆ ವಿಡಿಯೋವನ್ನು ಮೊಬೈಲ್ ಅಥವಾ ಸೀಕ್ರೆಟ್ ಕ್ಯಾಮರಾ ಮೂಲಕ ಚಿತ್ರೀಕರಿಸಲಾಗುತ್ತದೆ. ಈ ಕುರಿತು ಶ್ವೇತಾಳ ಪತಿ ಸ್ವಾಪ್ನಿಲ್ ಜೈನ್ ನಿಂದ 6 ಹಾರ್ಡ್ ಡಿಸ್ಕ್ ಗಳನ್ನುವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅಲ್ಲದೆ, ಕೆಲವು ಬಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮುಂಬೈ ಅಥವಾ ದೆಹಲಿಗೆ ಅಧಿಕೃತ ಪ್ರವಾಸಕ್ಕೆಂದು ತೆರಳಿದಾಗ ಅವರನ್ನು ಟಾರ್ಗೆಟ್ ಮಾಡಿ ಅವರ ಬೇಡಿಕೆಗೆ ಅನುಗುಣವಾಗಿ ಕೆಲ ಮಾಡೆಲ್ ಹುಡುಗಿಯರು ಹಾಗೂ ಬಾಲಿವುಡ್ ನಟಿಯರನ್ನು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಎಸ್‍ಐಟಿ ಅಧಿಕಾರಿಗಳು ಇಂತಹ ವಿಡಿಯೋಗಳನ್ನು ವಶಪಡಿಸಿಕೊಂಡ ನಂತರ ಯಾವ ನಟಿ ಎಂದು ಬಹಿರಂಗವಾಗಲಿದೆ.

    ವಿಚಾರಣೆಯ ಸಮಯದಲ್ಲಿ ಶ್ವೇತಾ ಈ ಕುರಿತು ಮಾಹಿತಿ ನೀಡಿ, ಒಮ್ಮೆ ಮಂತ್ರಿ ಅಥವಾ ಕಾರ್ಯದರ್ಶಿ ಹನಿ ಟ್ರ್ಯಾಪ್‍ನಲ್ಲಿ ಸಿಕ್ಕಿಬಿದ್ದಾಗ ನಾನು ನಡೆಸುತ್ತಿರುವ ಎನ್‍ಜಿಓಗೆ ಸರ್ಕಾರದ ಕಾಂಟ್ರ್ಯಾಕ್ಟ್ ಕೊಡಿಸುವ ಪ್ರಯತ್ನ ನಡೆಸಿದ್ದೆ. ಪತಿ ನಡೆಸುತ್ತಿರುವ ಎನ್‍ಜಿಓಗೆ ಭೋಪಾಲ್ ಮುನ್ಸಿಪಲ್ ಕಾರ್ಪೋರೇಶನ್‍ನಿಂದ 8 ಕೋಟಿ ರೂ.ಗಳ ಗುತ್ತಿಗೆ ನೀಡಲಾಗಿದೆ ಎಂದು ಶ್ವೇತಾ ಒಪ್ಪಿಕೊಂಡಿದ್ದಾಳೆ. ಪಿಡಬ್ಲ್ಯೂಡಿ, ವಸತಿ, ಸಮಾಜ ಕಲ್ಯಾಣ ಸೇರಿದಂತೆ ಸರ್ಕಾರದ ಇತರೆ ಇಲಾಖೆಗಳ ಗುತ್ತಿಗೆಗಳನ್ನು ನೀಡಲಾಗಿದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿಯೊಬ್ಬರು ಪೋಶ್ ಭೋಪಾಲ್‍ನ ಮಿನಾಲ್ ರೆಸಿಡೆನ್ಸಿಯಲ್ಲಿ ಒಂದು ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾಳೆ.

    ಶ್ವೇತಾ ಜೈನ್ ಜೊತೆಗೆ ಎಸ್‍ಐಟಿ ಬಂಧಿಸಲ್ಪಟ್ಟ ಮತ್ತೊಬ್ಬ ಮಹಿಳೆ ಆರತಿ ದಯಾಳ್ ವಿಚಾರಣೆ ವೇಳೆ ಇನ್ನಷ್ಟು ಮಾಹಿತಿ ಬಹಿರಂಗಪಡಿಸಿದ್ದು, ನಾನೂ ಸಹ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಸಂಪರ್ಕದಲ್ಲಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಈ ಅಧಿಕಾರಿಗಳು ನನಗೆ ಒಂದು ಫ್ಲ್ಯಾಟ್‍ನ ವ್ಯವಸ್ಥೆ ಸಹ ಮಾಡಿದ್ದರು ಎಂದು ಸಹ ಒಪ್ಪಿಕೊಂಡಿದ್ದಾಳೆ. ಆರತಿ ಈ ಫ್ಲ್ಯಾಟ್ ಆಕ್ರಮಿಸಿಕೊಂಡ ನಂತರ ಅದನ್ನೇ ಅಕ್ರಮಗಳ ಅಡ್ಡ ಮಾಡಿಕೊಂಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸರ್ಕಾರದ ಉನ್ನತ ಎಂಜಿನಿಯರ್‍ಗಳು ರಾಜಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿನ ಫ್ಲ್ಯಾಟ್‍ನ ಕೋಣೆಗಳಲ್ಲಿ ಸಹ ರಹಸ್ಯ ಕ್ಯಾಮರಾಗಳನ್ನು ಅಳವಡಿಸುತ್ತಿದ್ದೆವು. ಸ್ಟಿಂಗ್ ಆಪರೇಷನ್ ನಡೆಸಲು ಕಾಲ್ ಗಲ್ರ್ಸ್ ನೇಮಿಸಿಕೊಳ್ಳುತ್ತಿದ್ದೆವು. ಮಂತ್ರಿಗಳನ್ನು ಸೆಳೆಯಲು ಕೆಲವು ಸಂದರ್ಭಗಳಲ್ಲಿ ಬಿ ಗ್ರೇಡ್ ಬಾಲಿವುಡ್ ನಾಯಕಿಯರು ಹಾಗೂ ಮಾಡೆಲ್‍ಗಳನ್ನು ತೊಡಗಿಸಿಕೊಳ್ಳುತ್ತಿದ್ದೆವು ಎಂದು ಮಾಹಿತಿ ಬಹಿರಂಗಪಡಿಸಿದ್ದಾರೆ.

    ದಂಧೆಯ ಮಾಸ್ಟರ್ ಮೈಂಡ್ ಶ್ವೇತಾಳಂತೆಯೇ ಆರತಿ ಸಹ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳಿಂದ ಹೆಚ್ಚು ಹಣ ಪಡೆಯಲು ಎನ್‍ಜಿಓವನ್ನು ಸ್ಥಾಪಿಸಿದ್ದಳು. ವಿರಳ ಸಂದರ್ಭಗಳಲ್ಲಿ ಮಾತ್ರ ಸ್ಪೈ ಕ್ಯಾಮರಾ ಬಳಸುತ್ತಿದ್ದೆವು, ಹೆಚ್ಚಿನ ಸಂದರ್ಭಗಳಲ್ಲಿ ಎನ್‍ಜಿಓ ಮೂಲಕ ಸರ್ಕಾರದ ಹಣವನ್ನು ಸುಲಭವಾಗಿ ವರ್ಗಾಯಿಸುವಾಗ ಕ್ಯಾಮರಾ ಬಳಸುತ್ತಿದ್ದೆವು ಎಂದು ಇಬ್ಬರು ತಿಳಿಸಿದ್ದಾರೆ.

    ಲ್ಯಾಬ್‍ಗಳಲ್ಲಿ ವಿಡಿಯೋಗಳನ್ನು ಪರೀಕ್ಷಿಸಿದ ನಂತರ, ಬ್ಲ್ಯಾಕ್‍ಮೇಲ್ ಮಾಡಿದ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಗಣ್ಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ. ಈ ಪ್ರಕರಣವೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಅಚ್ಚರಿಯ ಸಂಗತಿ ಎಂದರೆ ಈ ಹನಿ ಟ್ರ್ಯಾಪ್ ಪ್ರಕರಣದ ಸೂತ್ರಧಾರೆ ಶ್ವೇತಾ ಜೈನ್ 2013 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದಳು.

  • ಬಿಜೆಪಿ ಮುಖಂಡ ರಾಮ್ ಮಾಧವ್ ಸೆಕ್ಸ್ ಹಗರಣದ ಸುದ್ದಿ ನಿಜವೇ?

    ಬಿಜೆಪಿ ಮುಖಂಡ ರಾಮ್ ಮಾಧವ್ ಸೆಕ್ಸ್ ಹಗರಣದ ಸುದ್ದಿ ನಿಜವೇ?

    ಬೆಂಗಳೂರು: ಈಶಾನ್ಯ ರಾಜ್ಯಗಳ ಬಿಜೆಪಿ ಉಸ್ತುವಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮೇಲೆ ಸೆಕ್ಸ್ ಹಗರಣದ ಗಂಭೀರ ಆರೋಪ ಕೇಳಿ ಬಂದಿದೆ.

    The News Joint ವೆಬ್‍ಸೈಟ್ ಒಂದು ನಾಗಾಲ್ಯಾಂಡ್ ಕನ್ಯೆಯರ ಜೊತೆ ಹೊಟೇಲ್‍ನಲ್ಲಿ ರೆಡ್ ಹ್ಯಾಂಡ್ ಆಗಿ ರಾಮ್ ಮಾಧವ್ ಸಿಕ್ಕಿ ಬಿದ್ದಿದ್ದಾರೆ ಎಂದು ಸುದ್ದಿಯನ್ನು ಪ್ರಕಟಿಸಿತ್ತು.

    ರಾಮ್ ಮಾಧವ್ ಮೇಲೆ ಬಂದಿರುವ ಆರೋಪವನ್ನು ನಾಗಾಲ್ಯಾಂಡ್ ಬಿಜೆಪಿ ತಳ್ಳಿ ಹಾಕಿದೆ. ಇದೊಂದು ಸುಳ್ಳು ಆರೋಪವಾಗಿದ್ದು, ಪ್ರಕಟವಾಗಿದ್ದ ವೆಬ್‍ಸೈಟ್ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು ಸೈಬರ್ ಕ್ರೈಂ ನಲ್ಲಿ ದೂರು ನೀಡಿದೆ. ಕಾನೂನು ಕ್ರಮದ ಎಚ್ಚರಿಕೆ ಬೆನ್ನಲ್ಲೇ ರಾಮ್ ಮಾಧವ್ ಮೇಲೆ ಬಂದಿರುವ ಸುದ್ದಿ ಈಗ ವೆಬ್‍ಸೈಟ್ ನಿಂದ ಡಿಲೀಟ್ ಆಗಿದೆ. ಅಷ್ಟೇ ಅಲ್ಲದೇ ಡೊಮೈನ್ ಈಗ 63.46 ರೂ. ಮಾರಾಟಕ್ಕಿದೆ.

    ಸುದ್ದಿ ಡಿಲೀಟ್ ಆಗಿದ್ದರೂ ಈ ವೆಬ್‍ಸೈಟ್ ನಲ್ಲಿ ಪ್ರಕಟಗೊಂಡ ಸುದ್ದಿಯ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿದೆ. ಬಿಜೆಪಿ ವಿರೋಧಿಸುವ ಮಂದಿ ಈ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.

    ವಿಶೇಷ ಏನೆಂದರೆ ಈ ವೆಬ್‍ಸೈಟ್ ಆರಂಭಗೊಂಡು 9 ದಿನ ಆಗಿತ್ತು. ನಾಗಲ್ಯಾಂಡ್ ವಿಧಾನಸಭಾ ಚುನಾವಣೆ ಇದೇ 27 ರಂದು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈ ವೆಬ್‍ಸೈಟ್ ತೆರೆದು ರಾಮ್ ಮಾಧವ್ ಅವರ ತೇಜೋವಧೆ ಮಾಡಲು ಮುಂದಾಗಿದೆ ಎಂದು ಬಿಜೆಪಿ ಹೇಳಿದೆ.

    https://twitter.com/raghavwrong/status/963020140236259329

     

     

  • ಲೈಂಗಿಕ ಹಗರಣ ಹೊರಬಿದ್ದ ನಂತರ ಎಸ್ಕೇಪ್ ಆಗಿದ್ದ ಕಲ್ಮಠ ಸ್ವಾಮೀಜಿ ಮಠಕ್ಕೆ ವಾಪಸ್

    ಲೈಂಗಿಕ ಹಗರಣ ಹೊರಬಿದ್ದ ನಂತರ ಎಸ್ಕೇಪ್ ಆಗಿದ್ದ ಕಲ್ಮಠ ಸ್ವಾಮೀಜಿ ಮಠಕ್ಕೆ ವಾಪಸ್

    ಕೊಪ್ಪಳ: ಗಂಗಾವತಿಯ ಕಲ್ಮಠ ಸ್ವಾಮೀಜಿ ಲೈಂಗಿಕ ಹಗರಣ ಹೊರಬಿದ್ದ ಬಳಿಕ ಎಸ್ಕೇಪ್ ಆಗಿದ್ದ ಸ್ವಾಮೀಜಿ ಮತ್ತೆ ಬುಧವಾರ ಮಠಕ್ಕೆ ಎಂಟ್ರಿ ಕೊಟ್ಟಿದ್ದಾನೆ.

    ಶಾಸಕ ಇಕ್ಬಾಲ್ ಅನ್ಸಾರಿಯ ಬೆಂಬಲಿಗರೊಂದಿಗೆ ಮಠಕ್ಕೆ ಮತ್ತೆ ಬಂದಿದ್ದಾನೆ. ಈ ವಿಷಯವಾಗಿ ಎರಡು ಗುಂಪಿನ ನಡುವೆ ಸಭೆಯೊಂದರಲ್ಲಿ ಮಾತಿನ ಚಕಮಕಿ ನಡೆದಿದೆ.

    ಕೊಪ್ಪಳದ ಗಂಗಾವತಿಯ ಕೋಟ್ಟೋರುಶ್ವರ ದೇಗುಲದಲ್ಲಿ ವೀರಶೈವ ಸಮಾಜದ ಮುಖಂಡರು ಸಭೆ ಸೇರಿದ್ದರು. ಕೆಲವರು ಸ್ವಾಮೀಜಿ ವಿಚಾರವಾಗಿ ಮೃದು ಧೋರಣೆ ತಾಳಿದ್ದಾರೆ ಎಂದು ಮಹಾಬಳೇಶ ಹಾಸಿನಾಳ್ ಹೇಳಿದಾಗ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಎ ಹಾಲಸಮುದ್ರ ನಡುವೆ ಮಾತಿನ ಚಕಮಕಿ ನಡೆದು ವಿಕೋಪ ಹಂತಕ್ಕೆ ತಲುಪಿತ್ತು.

    ಸ್ವಾಮೀಜಿ ಮತ್ತೆ ಮಠ ಪ್ರವೇಶಿಸಿಲು ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರ ಕುಮ್ಮಕ್ಕು ಇದೆ ಎನ್ನುವ ಆರೋಪ ಕೇಳಿಬಂದಿದೆ. ಸಭೆ ಬಳಿಕ ಸ್ವಾಮೀಜಿ ಪೀಠದಿಂದ ಕೆಳಗಿಳಿಯಬೇಕೆಂದು ಮುಖಂಡರು ಆಗ್ರಹಿಸಿದ್ದಾರೆ. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಇದನ್ನೂ ಓದಿ: ಕಲ್ಮಠದ ಕೊಟ್ಟೂರು ಸ್ವಾಮಿಯ ಕಾಮಪುರಾಣ ಬಯಲು- ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿ

  • ರಾಜ್ಯದ ಪ್ರತಿಷ್ಠಿತ ಮಠದಲ್ಲಿ ಸ್ವಾಮೀಜಿಯ ರಾಸಲೀಲೆ -ಪೀಠಾಧಿಪತಿ ಪುತ್ರನ ಕಾಮಕಾಂಡ ಬಯಲು

    ರಾಜ್ಯದ ಪ್ರತಿಷ್ಠಿತ ಮಠದಲ್ಲಿ ಸ್ವಾಮೀಜಿಯ ರಾಸಲೀಲೆ -ಪೀಠಾಧಿಪತಿ ಪುತ್ರನ ಕಾಮಕಾಂಡ ಬಯಲು

    ಬೆಂಗಳೂರು: ಮೇಲ್ನೋಟಕ್ಕೆ ಖಾವಿ ತೊಟ್ಟು ಸಮಾಜವನ್ನ ಉದ್ಧಾರ ಮಾಡೋದಾಗಿ ಪೋಸ್ ಕೊಡುತ್ತಿದ್ದ ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಹುಣಸಮಾರನಹಳ್ಳಿಯ ಜಂಗಮ ಮಠದ ಪೀಠಾಧ್ಯಕ್ಷನಾಗಲು ಮುಂದಾಗಿದ್ದ ಸ್ವಾಮಿಜಿಯೊಬ್ಬ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೋಡಗಿರೋ ದೃಶ್ಯವಿಂದು ಜಗತ್ ಜಾಹಿರಾಗಿದೆ.

    ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಪುರಾತನ ಕಾಲದ ಮದ್ದೇವಣಾಪುರ ದೇವ ಸಿಂಹಾಸನ ಮಹಾ ಸಂಸ್ಥಾನ ಮಠದ 13ನೇ ಪೀಠಾಧ್ಯಕ್ಷರಾದ ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯ ಪುತ್ರ ದಯಾನಂದ್ ರಾಸಲೀಲೆಯಲ್ಲಿ ಸಿಕ್ಕಿಬಿದ್ದಿರೋ ಸ್ವಾಮೀಜಿ.

    ಖಾವಿ ತೊಟ್ಟು ಜನ ಸಾಮಾನ್ಯರನ್ನ ಉದ್ಧಾರ ಮಾಡಿ ಸಮಾಜಸೇವೆಗೆ ದುಡಿಯೋದಾಗಿ ರಂಭಾಪುರ ಸ್ವಾಮಿಜಿಗಳ ಜೊತೆಯಲ್ಲಿ ಓಡಾಡುತ್ತಿದ್ದ ಕಳ್ಳ ಸ್ವಾಮೀಜಿ ಬೆಡ್ ರೂಮ್ ಒಳಗೆ ಮಹಿಳೆಯ ಜೊತೆ ಕಾಮದಾಟವಾಡುತ್ತಿರೋ ಹಸಿಬಿಸಿ ದೃಶ್ಯ ಲಭ್ಯವಾಗಿದೆ.

    ಪರ್ವತರಾಜ ಶಿವಾಚಾರ್ಯ ಸ್ವಾಮೀಜಿ ತನ್ನ ಮಗನಾದ ದಯಾನಂದ್ ಗೆ 2011 ರಲ್ಲಿ ಮಠಕ್ಕೆ ನೂತನ ಪೀಠಾಧ್ಯಕ್ಷರಾಗಿ ಮಾಡಲು ಮುಂದಾಗಿದ್ದರು. ಈ ವೇಳೆ ದಯಾನಂದ್‍ಗೆ ಸ್ವಾಮಿಜಿಯಾಗಲು ಅರ್ಹತೆಯಿಲ್ಲ ಅಂತ ಜನ ಸತತ ಹೋರಾಟದ ಮುಖಾಂತರ ದಯಾನಂದ್ ಪೀಠಾಧ್ಯಕ್ಷನಾಗಲು ಅಡ್ಡಿಪಡಿಸಿದ್ರು.

    ಆದ್ರೂ ಸುಮ್ಮನಿರದ ದಯಾನಂದ್ ಹೇಗಾದ್ರು ಪೀಠಾಧ್ಯಕ್ಷನಾಗಿ ಅಂದು ಮೈಸೂರು ಮಹಾರಾಜರು ಮಠಕ್ಕೆ ನೀಡಿದ್ದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನ ಕಬಳಿಸೂ ಹುನ್ನಾರ ನಡೆಸುತ್ತಿದ್ದ ಎನ್ನಲಾಗಿದೆ. ಇದೀಗ ಈ ಕಳ್ಳ ಸ್ವಾಮಿಯ ರಾಸಲೀಲೆ ಬಹಿರಂಗವಾಗಿದೆ.

    ಯಾವುದೇ ಕಾರಣಕ್ಕೂ ಇಂತಹ ಕಳ್ಳ ಸ್ವಾಮಿಗಳಿಗೆ ಪೀಠಾಧ್ಯಕ್ಷರ ಸ್ಥಾನ ನೀಡಬಾರದು ಅಂತ ಟ್ರಸ್ಟ್ ನ ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • ಪ್ರೇಯಸಿಯ ಜೊತೆಗೆ ಸೆಕ್ಸ್: ವಿಡಿಯೋ ಶೇರ್ ಮಾಡಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

    ಪ್ರೇಯಸಿಯ ಜೊತೆಗೆ ಸೆಕ್ಸ್: ವಿಡಿಯೋ ಶೇರ್ ಮಾಡಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

    ಭುವನೇಶ್ವರ: ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯೊಂದಿಗಿನ ಸೆಕ್ಸ್ ವಿಡಿಯೋವನ್ನು ಶೇರ್ ಮಾಡಿ ಅರೆಸ್ಟ್ ಆಗಿದ್ದಾನೆ.

    ಹೌದು. ಒಡಿಶಾದ ಭುವನೇಶ್ವರ ಐಟಿಇಆರ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಅದೇ ಕಾಲೇಜಿನ ಗೆಳತಿಯನ್ನು ಪ್ರೀತಿಸುತ್ತಿದ್ದು, ಇಬ್ಬರೂ ತಮ್ಮ ಪ್ರೀತಿಯನ್ನು ಸುಮಾರು ಬಾರಿ ಹಂಚಿಕೊಂಡಿದ್ದಾರೆ. ಆ ಪ್ರೀತಿಯ ರೊಮ್ಯಾನ್ಸ್ ಕ್ಷಣಗಳನ್ನು ಆತ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ.

    ಸೆರೆಹಿಡಿದ ಬಳಿಕ ಆತ ಆ ಸೆಕ್ಸ್ ವಿಡಿಯೋವನ್ನು ವಾಟ್ಸಪ್ ಮೂಲಕ ಗೆಳೆಯರ ಜೊತೆ ಹಂಚಿಕೊಂಡಿದ್ದಾನೆ. 4 ನಿಮಿಷದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ವಿದ್ಯಾರ್ಥಿ ಹಾಗೂ ಆತನ ಪ್ರೇಯಸಿ ತುಂಬಾ ಆತಂಕಕ್ಕೊಳಗಾಗಿದ್ದಾರೆ. ಅಷ್ಟರಲ್ಲಿ ಆ ವಿಷಯ ಪೊಲೀಸರಿಗೆ ತಲುಪಿದ್ದು, ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

  • ರಾಸಲೀಲೆ ಪ್ರಕರಣ: ಮಾಜಿ ಸಚಿವ ಹೆಚ್‍ವೈ ಮೇಟಿಗೆ ಕ್ಲೀನ್ ಚಿಟ್?

    ರಾಸಲೀಲೆ ಪ್ರಕರಣ: ಮಾಜಿ ಸಚಿವ ಹೆಚ್‍ವೈ ಮೇಟಿಗೆ ಕ್ಲೀನ್ ಚಿಟ್?

    ಬೆಂಗಳೂರು: ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್‍ವೈ ಮೇಟಿ ಅವರಿಗೆ ಸಿಐಡಿ ಕ್ಲೀನ್ ಚಿಟ್ ನೀಡುವ ಸಾಧ್ಯತೆಯಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸಿಐಡಿಯಿಂದ ತನಿಖೆಗೆ ಆದೇಶಿಸಿತ್ತು. ತನಿಖೆ ಕೈಗೆತ್ತಿಕೊಂಡ ಸಿಐಡಿಗೆ ಯಾರಿಂದಲೂ ಮೇಟಿ ಅವರ ವಿರುದ್ಧ ದೂರು ಬಂದಿರಲಿಲ್ಲ. ರಾಸಲೀಲೆಯಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯೂ ಸಹ ದೂರು ನೀಡಿರಲಿಲ್ಲ. ಹೀಗಾಗಿ ಯಾವುದೇ ದೂರು ಇಲ್ಲದ ಹಿನ್ನಲೆಯಲ್ಲಿ ಮೇಟಿ ಅವರಿಗೆ ಕ್ಲೀನ್ ಚಿಟ್ ಸಿಗೋ ಸಾಧ್ಯತೆ ಇದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಸಿಐಡಿ ವರದಿ ಸಲ್ಲಿಸಲಿದೆ.

    ರಾಸಲೀಲೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಗುವ ಹಿನ್ನಲೆಯಲ್ಲಿ ಮತ್ತೆ ಸಚಿವ ಸ್ಥಾನ ಪಡೆಯಲು ಹೆಚ್‍ವೈ ಮೇಟಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಗೃಹ ಕಚೇರಿ ಕೃಷ್ಣದಲ್ಲಿ ಹೆಚ್‍ವೈ ಮೇಟಿ ಕಾಣಿಸಿಕೊಂಡಿದ್ದು, ಕ್ಲೀನ್ ಚಿಟ್ ವರದಿ ತೋರಿಸಿ ಮತ್ತೆ ಸಚಿವ ಸ್ಥಾನ ನೀಡುವಂತೆ ಸಿಎಂಗೆ ಕೇಳುವ ಸಾಧ್ಯತೆಯಿದೆ.

    ಏನಿದು ಪ್ರಕರಣ: ಅಬಕಾರಿ ಸಚಿವರಾಗಿದ್ದ ಹೆಚ್‍ವೈ ಮೇಟಿ ಸರ್ಕಾರಿ ಕಚೇರಿಯಲ್ಲಿ ಮಹಿಳೆಯೊಬ್ಬರೊಂದಿಗೆ ಲೈಂಗಿಕ ಸಂರ್ಪಕದಲ್ಲಿ ತೊಡಗಿದ್ದ ಸಿಡಿಯನ್ನ ಆರ್‍ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಕಳೆದ ಡಿಸೆಂಬರ್‍ನಲ್ಲಿ ಬಿಡುಗಡೆ ಮಾಡಿದ್ದರು. ಮಾಧ್ಯಮಗಳಲ್ಲಿ ವಿಡಿಯೋ ಬಿಡುಗಡೆಯಾದ ಬಳಿಕ ಹೆಚ್‍ವೈ ಮೇಟಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.