Tag: Sex Racket

  • ಕಮರ್ಷಿಯಲ್ ಸೆಕ್ಸ್ ಸ್ಯಾಂಡಲ್‍ವುಡ್‍ನಲ್ಲಿದೆ: ನಟಿ ಹರ್ಷಿಕಾ

    ಕಮರ್ಷಿಯಲ್ ಸೆಕ್ಸ್ ಸ್ಯಾಂಡಲ್‍ವುಡ್‍ನಲ್ಲಿದೆ: ನಟಿ ಹರ್ಷಿಕಾ

    ಬೆಂಗಳೂರು: ಅಮೆರಿಕದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಚರ್ಮೋದ್ಯಮ ದಂಧೆಯನ್ನು ಫೆಡರಲ್ ಬ್ಯೂರೋ ಇನ್ವೆಸ್ಟಿಗೇಷನ್ ಆಫೀಸರ್ ಗಳು ಪತ್ತೆ ಹಚ್ಚಿದ್ದು, ದಂಪತಿಯನ್ನು ಬಂಧಿಸಿದ್ದರು. ಆದರೆ ಈಗ ಸ್ಯಾಂಡಲ್‍ವುಡ್ ಸೆಕ್ಸ್ ದಂಧೆ ನಡೆಯುತ್ತಿದೆ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

    ಅಮೆರಿಕದಲ್ಲಿ ಸೆಕ್ಸ್ ರಾಕೆಟ್‍ನಲ್ಲಿ ತೊಡಗಿದ್ದ ನಟಿಯರ ಹೆಸರು ಇಲ್ಲಿವರೆಗೂ ಕೂಡ ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೆ ಹರ್ಷಿಕಾ ಪೂಣಚ್ಚ ಸೆಕ್ಸ್ ರಾಕೆಟ್ ದಂಧೆ ಅಮೆರಿಕದಲ್ಲಿ ಮಾತ್ರವಲ್ಲ ಇಲ್ಲೂ ಇದೆ ಎಂದು ಹೇಳಿದ್ದಾರೆ.

    ಈ ಹಿಂದೆ ಹರ್ಷಿಕಾ ಪೂಣಚ್ಚ ಕಾಸ್ಟಿಂಗ್ ಕೌಚ್ ವಿರುದ್ದ ಧ್ವನಿಯೆತ್ತಿದ್ರು. ಕನ್ನಡ, ತೆಲುಗು, ಮಲೆಯಾಳಂ ಚಿತ್ರರಂಗದಲ್ಲಿ ನಾನು ಕೆಲಸ ಮಾಡಿದ್ದೇನೆ. ಯಾವತ್ತೂ ಕೂಡ ನನಗೆ ಸೆಕ್ಸ್ ಫಾರ್ ಚಾನ್ಸ್ ಅನುಭವ ಆಗಿಲ್ಲ ಎಂದು ಹೇಳಿಕೊಂಡಿದ್ರು. ಆದರೆ ಬಾಲಿವುಡ್ ಅಂಗಳದಲ್ಲಿ ನನಗೆ ಕಾಸ್ಟಿಂಗ್ ಅನುಭವ ಆಗಿದೆ. ಆ ಕಾರಣವೇ ನಾನು ಹಿಂದಿಯ ಎರಡು ಬಿಗ್ ಪ್ರಾಜೆಕ್ಟ್ ಗಳನ್ನ ತೊರೆದು ಫ್ಲೈಟ್ ಹತ್ತಿ ಬೆಂಗಳೂರಿಗೆ ಬಂದಿದ್ದೆ ಎಂದಿದ್ರು. ಆದರೆ ಈಗ `ಕಮರ್ಷಿಯಲ್ ಸೆಕ್ಸ್’ ಇಲ್ಲೇ ಇದೆ ಎಂದು ಹೇಳಿ ಗಾಂಧಿನಗರದ ಮಂದಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

    ಅಂದು ಓಪನ್ ಆಗಿ ನನಗೆ ಕಾಸ್ಟಿಂಗ್ ಕೌಚ್ ಅನುಭವವಾಗಿತ್ತು ಎಂದು ಹೇಳಿಕೊಂಡಿದ್ದ ಹರ್ಷಿಕಾ, ಇದೀಗ ಕಮರ್ಷಿಯಲ್ ಸೆಕ್ಸ್ ಇಲ್ಲೆ ಇದೆ. ಕಾಸ್ಟಿಂಗ್ ಕೌಚ್ ಇರಲಿ ಕಮರ್ಷಿಯಲ್ ಸೆಕ್ಸ್ ಇರಲಿ ಎರಡೂ ಕೈ ಸೇರಿದ್ರೇನೆ ಚಪ್ಪಾಳೆ. ಒಂದು ಕೈಯಲ್ಲಿ ಚಪ್ಪಾಳೆ ಹೊಡೆಯೋದಕ್ಕೆ ಹೇಗೆ ಸಾಧ್ಯ ನೀವೇ ಹೇಳಿ ಎಂದು ಹರ್ಷಿಕಾ ಪೂಣಚ್ಚ ತಿಳಿಸಿದ್ದಾರೆ.

  • ಅಮೆರಿಕದ ಸೆಕ್ಸ್ ಸ್ಕ್ಯಾಂಡಲ್‍ನಲ್ಲಿ ಸಿಕ್ಕಿ ಬಿದ್ದ ಟಾಲಿವುಡ್ ನಿರ್ಮಾಪಕ ದಂಪತಿ

    ಅಮೆರಿಕದ ಸೆಕ್ಸ್ ಸ್ಕ್ಯಾಂಡಲ್‍ನಲ್ಲಿ ಸಿಕ್ಕಿ ಬಿದ್ದ ಟಾಲಿವುಡ್ ನಿರ್ಮಾಪಕ ದಂಪತಿ

    ಹೈದರಾಬಾದ್: ನಟಿಯರನ್ನು ಬಳಸಿಕೊಂಡು ಹೈ-ಸೆಕ್ಸ್ ಸ್ಕ್ಯಾಂಡಲ್ ನಡೆಸುತ್ತಿದ್ದ ಆರೋಪದ ಮೇಲೆ ಚಲನಚಿತ್ರ ನಿರ್ಮಾಪಕ, ತೆಲುಗು ಉದ್ಯಮಿ ಮತ್ತು ಆತನ ಪತ್ನಿಯನ್ನು ಚಿಕಾಗೋದಲ್ಲಿನ ಪೊಲೀಸರು ಬಂಧಿಸಿದ್ದಾರೆ.

    ಕಿಶನ್ ಅಲಿಯಾಸ್ ಸಿರಾಜ್ ಚೌನಪಟ್ಟಿ (34) ಮತ್ತು ಆತನ ಪತ್ನಿ ಚಂದ್ರಾ (31) ವೇಶ್ಯಾವಾಟಿಕೆಯಲ್ಲಿ ಸಿಕ್ಕಿ ಬಿದ್ದ ದಂಪತಿ. ದಂಪತಿ ಟಾಲಿವುಡ್ ಸಹ ನಟಿಯರನ್ನು ಅಮೆರಿಕಗೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದರು. ಅಮೆರಿಕಾದಲ್ಲಿ ನಡೆಯುವ ಭಾರತೀಯ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಸ್ಥಳೀಯ ಜಾಹಿರಾತುಗಳಲ್ಲಿ ನಿಮ್ಮ ಕಲೆಯನ್ನು ಪ್ರದರ್ಶಿಸುತ್ತೇವೆ ಅಂತಾ ಹೇಳಿ ಅವರನ್ನು ಈ ದಂಧೆಗೆ ದೂಡುತ್ತಿದ್ದರು.

    ಚಿಕಾಗೋ ಜಿಲ್ಲೆಯ ನ್ಯಾಯಾಲಯಕ್ಕೆ ಆರೋಪಿ ದಂಪತಿ ವಿರುದ್ಧ 42 ಪುಟಗಳ ದೂರು ದಾಖಲಾಗಿದೆ. ದಂಪತಿ ಅಡ್ಡಕ್ಕೆ ಬರುವ ಒಬ್ಬ ವ್ಯಕ್ತಿಯಿಂದ 3 ಸಾವಿರ ಡಾಲರ್ (ಅಂದಾಜು 2 ಲಕ್ಷ ರೂ.) ಪಡೆಯುತ್ತಿದ್ರು. ತಾತ್ಕಾಲಿಕ ವೀಸಾ ಮುಖಾಂತರ ನಟಿಯರನ್ನು ಚಿಕಾಗೋ ಕರೆ ತಂದು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಡ ಹಾಕುತ್ತಿದ್ರು. ಬೆಲ್ಮಾಂಟ್ ಕ್ರಾಗಿನ್ ನಲ್ಲಿರುವ ಎರಡು ಅಂತಸ್ತಿನ ಅಪಾರ್ಟ್ ಮೆಂಟ್ ನಲ್ಲಿ ಉಳಿಯಲು ಅವರನ್ನು ಒತ್ತಾಯಿಸಿರುವುದಾಗಿ ಪೊಲೀಸರು ತನಿಖೆಯಲ್ಲಿ ತಿಳಿದು ಬಂದಿದೆ. ಡಲ್ಲಾಸ್, ನ್ಯೂಜೆರ್ಸಿ ಮತ್ತು ವಾಷಿಂಗ್ಟನ್ ನ ಸಮಾವೇಶಗಳಲ್ಲಿ ಗ್ರಾಹಕರಿಗೆ ನಟಿಯರನ್ನು ಭೇಟಿ ಮಾಡಿಸಲು ಕರೆದೊಯ್ಯಲಾಗುತ್ತಿತ್ತು ಎಂದು ವರದಿಯಾಗಿದೆ.

    ಕಿಶನ್ ಪ್ರಮುಖ ಆರೋಪಿಯಾಗಿದ್ದು, ಟಾಲಿವುಡ್ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ಮಾಪಕನಾಗಿ ಕೆಲಸ ಮಾಡಿದ್ದಾನೆ. ಆರೋಪಿಯ ಬಂಧನದ ನಂತರ ಆತನ ಇ-ಮೇಲ್ ಬಳಸಿ ನಟಿಯನ್ನು ಸಂಪರ್ಕಿಸಿದಾಗ, “ನನಗೆ ಪೋನ್ ಮಾಡಬೇಡಿ ಮತ್ತು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಬೇಡಿ” ಎಂದು ಪೊಲೀಸರು ತಿಳಿಸಿದ್ದಾರೆ

    ಬಂಧಿತ ದಂಪತಿಯನ್ನು ಜೈಲಿನಲ್ಲಿ ಇರಿಸಲಾಗಿದೆ. ದಂಪತಿಯ ಇಬ್ಬರು ಮಕ್ಕಳನ್ನು ವರ್ಜೀನಿಯಾದ ಮಕ್ಕಳ ಕಲ್ಯಾಣ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.

  • ಸೆಕ್ಸ್ ರ‍್ಯಾಕೆಟ್: ಇಬ್ಬರು ನಟಿಯರು ಸೇರಿ ಐವರ ಬಂಧನ-ಕಾಂಡೋಮ್, ಹಣ ಪತ್ತೆ

    ಸೆಕ್ಸ್ ರ‍್ಯಾಕೆಟ್: ಇಬ್ಬರು ನಟಿಯರು ಸೇರಿ ಐವರ ಬಂಧನ-ಕಾಂಡೋಮ್, ಹಣ ಪತ್ತೆ

    ಹೈದರಾಬಾದ್: ಎರಡು ದಿನಗಳ ಹಿಂದೆ ನಗರದಲ್ಲಿ ಪೊಲೀಸರು ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದು, ಇಬ್ಬರೂ ನಟಿಯರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

    ರಿಚಾ ಸೆಕ್ಸೆನಾ ಮತ್ತು ಶುಭ್ರಾ ಚಟರ್ಜಿ ಸೆಕ್ಸ್ ದಂಧೆಯಲ್ಲಿಯಲ್ಲಿ ಬಂಧಿತರಾದ ನಟಿಯರು. ಇಬ್ಬರೂ ತೆಲಗು ಮತ್ತು ಬಂಗಾಳಿ ಸಿನಿಮಾಗಳ ನಟಿಯರಾಗಿದ್ದು, ಹೈದರಾಬಾದ್ ನ ತಾಜ್ ಡೆಕ್ಕನ್ ಹೋಟೆಲ್ ನಲ್ಲಿ ರೂಮ್ ಬಾಡಿಗೆಗೆ ಪಡೆದುಕೊಂಡು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದರು. ಪಿಂಪ್ (ದಲ್ಲಾಳಿ) ಒಬ್ಬ ಆನ್‍ಲೈನ್ ಮೂಲಕ ಗಿರಾಕಿಗಳನ್ನು ಬುಕ್ ಮಾಡಿ ಇವರತ್ತ ಕಳುಹಿಸುತ್ತಿದ್ದನು. ಪೊಲೀಸರು ಐಪಿ ಅಡ್ರೆಸ್ ಮೂಲಕ ಪಿಂಪ್ ವಿಳಾಸವನ್ನು ಪತ್ತೆ ಹಚ್ಚಿ, ಸಿವಿಲ್ ಡ್ರೆಸ್ ನಲ್ಲಿ ಬಂದು ನಟಿಯರನ್ನು ಬಂಧಿಸಿದ್ದಾರೆ.

    ದಾಳಿ ವೇಳೆ ಪೊಲೀಸರಿಗೆ ಹೋಟೆಲ್ ನಲ್ಲಿ 50 ಸಾವಿರ ನಗದು, ಮೊಬೈಲ್ ಫೋನ್ ಮತ್ತು ಕೆಲವು ಕಾಂಡೋಮ್ ಗಳು ಸಿಕ್ಕಿವೆ. ಬಂಧಿತರಲ್ಲಿ ಇಬ್ಬರು ನಟಿಯರಾದ್ರೆ, ದಂಧೆಯ ಸಂಘಟಕ, ಮತ್ತೊಬ್ಬ ಬಾಲಿವುಡ್ ಸಿನಿಮಾ ನಿರ್ದೇಶಕ ಮೊನಿಶಾ ಕಾಡಕೈ, ಇನ್ನೊಬ್ಬ ಆಂಧ್ರ ಪ್ರದೇಶದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೆಂಕಟ್ ರಾವ್ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೋಟೆಲ್ ನ ಇಬ್ಬರೂ ಮ್ಯಾನೇಜರ್ ಗಳನ್ನು ಸಹ ಬಂಧಿಸಿದ್ದಾರೆ. ನಟಿಯರ ರೂಮಿಗೆ ಪುರುಷರನ್ನು ಕಳುಹಿಸುತ್ತಿದ್ದ ಪಿಂಪ್ ನಾಪತ್ತೆಯಾಗಿದ್ದಾನೆ.

    ಇಬ್ಬರೂ ನಟಿಯರು ಹೋಟೆಲ್ ನ ಎರಡು ಬೇರೆ ರೂಮಿನಲ್ಲಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಇಬ್ಬರೂ ನಟಿಯರನ್ನು ಪೊಲೀಸರು ಬಂಧಿಸಿದ್ದು, ಮೊಬೈಲ್ ಫೋನ್, ಹಣ, ಅಶ್ಲೀಲ ಫೋಟೋಗಳು, ನಟಿಯರ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಸೆಕ್ಸ್ ರ‍್ಯಾಕೆಟ್ ಪಿಂಪ್ ಗಳು ನಗರದ ಶ್ರೀಮಂತ ವ್ಯಕ್ತಿಗಳಿಗೆ ಬಲೆಯನ್ನು ಬೀಸುತ್ತಿದ್ದರು. ಒಂದು ರಾತ್ರಿಗೆ ಒಂದು ಲಕ್ಷ ರೂ. ರೇಟ್ ಫಿಕ್ಸ್ ಮಾಡಿದ್ದರು. ಆದರೆ ವೇಶ್ಯಾವಾಟಿಕೆಯ ಮುಖ್ಯಸ್ಥ ಮಾತ್ರ ಗಿರಾಕಿಗಳಿಂದ ಭಾರೀ ಮೊತ್ತದ ಹಣವನ್ನು ಪಡೆದುಕೊಂಡು, ನಟಿಯರಿಗೆ ಕಡಿಮೆ ಹಣವನ್ನು ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಪಿಂಪ್ ಗಳು ನಟಿಯರಿಗೆ ಸಿನಿಮಾದಲ್ಲಿ ಇದಕ್ಕೂ ಹೆಚ್ಚಿನ ಹಣವನ್ನು ಗಳಿಸಬಹುದು ಎಂದು ನಂಬಿಸಿದ್ದರು.