Tag: Sessions Court

  • ಎ1 ಆರೋಪಿ ಪವಿತ್ರಾ ಗೌಡಗೆ ಮತ್ತೆ ಶಾಕ್ – ಜಾಮೀನು ಅರ್ಜಿ ವಜಾ

    ಎ1 ಆರೋಪಿ ಪವಿತ್ರಾ ಗೌಡಗೆ ಮತ್ತೆ ಶಾಕ್ – ಜಾಮೀನು ಅರ್ಜಿ ವಜಾ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಮತ್ತೆ ಜೈಲುಪಾಲಾಗಿರುವ ಎ1 ಆರೋಪಿ ಪವಿತ್ರಾ ಗೌಡ (Pavitra Gowda) ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.

    ಪವಿತ್ರಾ ಗೌಡ ಪರ ವಕೀಲರು ತಾಂತ್ರಿಕ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಕುರಿತು ಆ.30ರಂದು ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿತ್ತು. ಈ ವೇಳೆ ಪವಿತ್ರಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿ, ಪವಿತ್ರಗೌಡ ವಿರುದ್ಧ ಆರೋಪಪಟ್ಟಿಯನ್ನು ಬಿಎನ್‌ಎಸ್ (BNS) ಬದಲು ಸಿಆರ್‌ಪಿಸಿ (CRPC) ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿರುವುದರಿಂದ ಕಡ್ಡಾಯ ಜಾಮೀನಿಗೆ ನಮ್ಮ ಕಕ್ಷಿದಾರರು ಅರ್ಹರು, ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಕೋರಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಾಲಯ ಸೆ.2ಕ್ಕೆ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.ಇದನ್ನೂ ಓದಿ: ಗಂಗೆ, ತುಂಗೆಯ ಜೊತೆ ಧರ್ಮಸ್ಥಳ ಯಾತ್ರೆ ಹೊರಟ ಈಶ್ವರಪ್ಪ

    ಇನ್ನೂ ನಟ ದರ್ಶನ್ ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ, ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡುವಂತೆ ಹಾಗೂ ಪವಿತ್ರಾ ಗೌಡ ಮತ್ತು ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವಂತೆ ಸಲ್ಲಿಸಿರುವ ಅರ್ಜಿ ಹಾಗೂ ನಟ ದರ್ಶನ್‌ಗೆ ದಿಂಬು, ಬೆಡ್‌ಶೀಟ್ ಕೋರಿರುವ ಅರ್ಜಿಯ ಆದೇಶ ಇಂದು (ಸೆ.2) ಹೊರಬೀಳಲಿದೆ.

    ಆ.14ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ (Karnataka Highcourt) ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ (Supreme Court)  ವಜಾಗೊಳಿಸಿತ್ತು.ಇದನ್ನೂ ಓದಿ: ಭೋವಿ ನಿಗಮದ ಅಕ್ರಮ; ಕಾಂಗ್ರೆಸ್ ಸರ್ಕಾರದ 60% ಕಮಿಷನ್‌ಗೆ ಸಾಕ್ಷಿ – ಜೆಡಿಎಸ್ ಕಿಡಿ

  • ಕೊಲೆ ಕೇಸ್‌ನಲ್ಲಿ 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

    ಕೊಲೆ ಕೇಸ್‌ನಲ್ಲಿ 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

    ಮಂಡ್ಯ: ಫ್ಲೆಕ್ಸ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಅಧಿಕ ಜಿಲ್ಲಾ ಮತ್ತು ಸೆಷನ್‌ ನ್ಯಾಯಾಲಯ ಆರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

    ಗುತ್ತಲು ನಿವಾಸಿಗಳಾದ ಚಂದನ್ (27), ಅಜಯ್ ಕುಮಾರ್ ಆರ್. (21), ಹರ್ಷಿತ್‌ಗೌಡ (20), ಕಿರಣ್ (19), ಪ್ರಮೋದ್ (21), ಮಾರುತಿ ನಗರದ ನಾಗರಾಜು (23) ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳು. ಇದನ್ನೂ ಓದಿ: ಹೈದರಾಬಾದ್‌ಗೆ ಸನ್‌ಸ್ಟ್ರೋಕ್‌, 120ಕ್ಕೆ ಆಲೌಟ್‌ – ಕೆಕೆಆರ್‌ಗೆ 80 ರನ್‌ಗಳ ಭರ್ಜರಿ ಗೆಲುವು

    ಮಂಡ್ಯದ ಗುತ್ತಲು ಅರಕೇಶ್ವರ ನಗರ ವಿಜಯಲಕ್ಷ್ಮಿ ಟಾಕೀಸ್ ಮುಂಭಾಗದ 4ನೇ ಕ್ರಾಸ್‌ನಲ್ಲಿರುವ ಕಾಳಮ್ಮ ದೇವಸ್ಥಾನದ ಮುಂದೆ ನಂದನ್ ಎಸ್.ರಾಜು ಅವನನ್ನು 2019 ಏಪ್ರಿಲ್ 5 ರಂದು ಪ್ಲೆಕ್ಸ್ ಹಾಕಿರುವ ವಿಚಾರವಾಗಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಈ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಭಾರತಕ್ಕೆ ಅಮೆರಿಕ ಶಾಕ್ – ಔಷಧ, ತಾಮ್ರ, ಸೆಮಿಕಂಡಕ್ಟರ್‌ಗಳಿಗೆ ವಿನಾಯ್ತಿ, ಆಟೋಮೊಬೈಲ್, ಸ್ಟೀಲ್, ಚಿನ್ನಾಭರಣಗಳಿಗೆ ಬರೆ

    ಅಂದಿನ ವೃತ್ತ ನಿರೀಕ್ಷಕರಾದ ತನಿಖಾಧಿಕಾರಿ ಮಂಡ್ಯ ನಗರ ವೃತ್ತದ ಸಿಪಿಐ ಮನೋಜ್ ಕುಮಾರ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ದಸ್ತಗಿರಿ ಮಾಡಿ, ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿ ನ್ಯಾಯಾಧೀಶರಾದ ನಿರ್ಮಲ ಕೆ. ಅವರು ತೀರ್ಪು ನೀಡಿದ್ದಾರೆ. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಮೋದಿಗೆ ಭವ್ಯ ಸ್ವಾಗತ – ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಭಾಗಿ

  • ಧರ್ಮಗುರು ಹೆಂಡತಿಯನ್ನು ಹೇಗೆ ಕೊಂದ? – ಗೂಗಲ್ ಸರ್ಚ್‍ನಿಂದ ಸಿಕ್ಕಿಬಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

    ಧರ್ಮಗುರು ಹೆಂಡತಿಯನ್ನು ಹೇಗೆ ಕೊಂದ? – ಗೂಗಲ್ ಸರ್ಚ್‍ನಿಂದ ಸಿಕ್ಕಿಬಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

    ತಿರುವನಂತನಪುರಂ: ಆ ಧರ್ಮ ಗುರು (Spiritual Guru) ತನ್ನ ಹೆಂಡತಿಯನ್ನು ಹೇಗೆ ಕೊಂದ? ಎಂದು ಗೂಗಲ್‍ನಲ್ಲಿ (Google) ಸರ್ಚ್ ಮಾಡಿ ಸಂಚು ರೂಪಿಸಿ ಪ್ರೇಯಸಿಯನ್ನು ಕೊಲೆಗೈದ‌ (Murder) ದುಷ್ಕರ್ಮಿಗೆ ಜೀವಾವಧಿ ಶಿಕ್ಷೆ ಹಾಗೂ 2.5 ಲಕ್ಷ ರೂ. ದಂಡ ವಿಧಿಸಿ ಕೊಲ್ಲಂನ (Kollam) ಹೆಚ್ಚುವರಿ ಸೆಷನ್ಸ್ ಕೋರ್ಟ್ (Sessions Court) ತೀರ್ಪು ನೀಡಿದೆ.

    ಅಪರಾಧಿ ಪ್ರಶಾಂತ್ ನಂಬಿಯಾರ್, 2020ರ ಮಾ. 20ರಂದು ಇಂಟರ್‌ನೆಟ್ ಕೊಲೆಯ ಪ್ರಕರಣವೊಂದನ್ನು ಸರ್ಚ್ ಮಾಡಿ, ಅದರಂತೆ ಪ್ರೇಯಸಿ ಸುಚಿತ್ರಾ ಪಿಳ್ಳೈಯನ್ನು (42) ಹತ್ಯೆ ಮಾಡಿದ್ದ. ಅಲ್ಲದೆ ಕೊಲೆಗೈದ ನಂತರ ಚಲನಚಿತ್ರವೊಂದನ್ನು ನೋಡಿ, ಅದರಲ್ಲಿ ದೇಹವನ್ನು ಕತ್ತರಿಸಿದ್ದ ರೀತಿಯಲ್ಲೇ ತುಂಡು ತುಂಡಾಗಿ ಕತ್ತರಿಸಿದ್ದ. ಬಳಿಕ ಮನೆಯ ಹಿಂದಿನ ಹೊಂಡದಲ್ಲಿ ಎಸೆದಿದ್ದ. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಆತನ ಗೂಗಲ್ ಸರ್ಚ್ ಹಿಸ್ಟರಿಯಿಂದ ಕೊಲೆ ರಹಸ್ಯ ಬಯಲಿಗೆಳೆದಿದ್ದರು. ಇದನ್ನೂ ಓದಿ:ಹಿಂಡನ್‍ಬರ್ಗ್ ಪ್ರಕರಣ – ಮೂರು ತಿಂಗಳಲ್ಲಿ ತನಿಖೆಯ ಪ್ರಗತಿ ತೋರಿಸಲು ಸೆಬಿಗೆ ಸುಪ್ರೀಂ ಸೂಚನೆ

    ಖಾಸಗಿ ಶಾಲೆಯಲ್ಲಿ ಸಂಗೀತ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಪರಾಧಿ, ತನ್ನ ಹೆಂಡತಿಯ ಸಂಬಂಧಿ ಸುಚಿತ್ರಾಳನ್ನು ಕುಟುಂಬದ ಕಾರ್ಯಕ್ರಮದಲ್ಲಿ ಪರಿಚಯ ಮಾಡಿಕೊಂಡಿದ್ದ. ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿತ್ತು.

    ಎರಡು ಬಾರಿ ವಿಚ್ಛೇದನ ಪಡೆದಿದ್ದ ಸುಚಿತ್ರಾ, ಅಪರಾಧಿಯನ್ನು ಮದುವೆಯಾಗಲು ತಯಾರಿ ನಡೆಸಿದ್ದಳು. ಆತನಿಂದ ಮಗುವನ್ನು ಹೊಂದಿದ್ದಳು. ಆದರೆ ಈಗಾಗಲೇ ಮದುವೆಯಾಗಿ ಪತ್ನಿಯೊಂದಿಗೆ ವಾಸವಾಗಿದ್ದ ಪ್ರಶಾಂತ್ ಮದುವೆಗೆ ನಿರಾಕರಿಸಿದ್ದ. ಆದರೆ ಮದುವೆಯಾಗುವಂತೆ ಪಟ್ಟು ಹಿಡಿದಿದ್ದ ಆಕೆಯನ್ನು ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆಗೆ ಕಿರುಕುಳ – ಬಿವಿ ಶ್ರೀನಿವಾಸ್‍ಗೆ ಸುಪ್ರೀಂ ಜಾಮೀನು

  • 1 ತಿಂಗಳೊಳಗೆ ಹಣ ಮರಳಿಸಿ – ದ್ವಾರಕೀಶ್‍ಗೆ ಕೋರ್ಟ್ ಸೂಚನೆ

    1 ತಿಂಗಳೊಳಗೆ ಹಣ ಮರಳಿಸಿ – ದ್ವಾರಕೀಶ್‍ಗೆ ಕೋರ್ಟ್ ಸೂಚನೆ

    ಬೆಂಗಳೂರು: ಒಂದು ತಿಂಗಳ ಒಳಗೆ ಪಡೆದಿದ್ದ ಸಾಲವನ್ನು ತೀರಿಸುವಂತೆ ಸೆಷನ್ಸ್ ಕೋರ್ಟ್ ಸ್ಯಾಂಡಲ್‍ವುಡ್ ಹಿರಿಯ ನಟ ದ್ವಾರಕೀಶ್ ಅವರಿಗೆ ಸೂಚನೆ ನೀಡಿದೆ.

    2013ರಲ್ಲಿ ಚಾರುಲತಾ ಸಿನಿಮಾಕ್ಕಾಗಿ ದ್ವಾರಕೀಶ್ ಅವರು ಕೆಸಿಎನ್ ಚಂದ್ರಶೇಖರ್‌ರಿಂದ ಸಾಲ ಪಡೆದಿದ್ದರು. ದ್ವಾರಕೀಶ್ ಸಂಬಂಧಿ ಸಂಜೀವ್ ಮಧ್ಯಸ್ಥಿಕೆ ವಹಿಸಿ ಕೆಸಿಎನ್ ಚಂದ್ರಶೇಖರ್‌ರಿಂದ ಹಣ ಕೊಡಿಸಿದ್ದರು. ಆದರೆ ಸಾಲದ ಹಣ ವಾಪಸ್ ನೀಡದೇ ಸತಾಯಿಸಿದ್ದ ದ್ವಾರಕೀಶ್ ಸಾಲಕೊಟ್ಟವರ ವಿರುದ್ಧವೇ ಕೊಲೆ ಯತ್ನ ಕೇಸ್ ಹಾಕಿದ್ದರು. ಇದನ್ನೂ ಓದಿ: ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್ 

    50 ಲಕ್ಷ ರೂಪಾಯಿ ಸಾಲ ಪಡೆಯುವ ವೇಳೆಯಲ್ಲಿ ಚೆಕ್ ನೀಡಿದ್ದ ದ್ವಾರಕೀಶ್, ನಂತರ ತಾನು ಯಾವುದೇ ಚೆಕ್ ನೀಡಿಲ್ಲ, ಸಹಿ ನನ್ನದಲ್ಲ ಎಂದು ಕೋರ್ಟ್‍ನಲ್ಲಿ ವಾದಿಸಿದ್ದರು. ಆದರೆ ಫೋರೆನ್ಸಿಕ್ ಲ್ಯಾಬ್ ನಲ್ಲಿ ಸಹಿ ದ್ವಾರಕೀಶ್ ಅವರದ್ದೇ ಎಂದು ಸಾಬೀತಾಗಿತ್ತು. ಬಳಿಕ 2019ರಲ್ಲಿ ಸ್ಮಾಲ್ ಕಾಸಸ್ ಕೋರ್ಟ್ 52 ಲಕ್ಷ ಹಣ ಹಿಂದಿರುಗಿಸುವಂತೆ ದ್ವಾರಕೀಶ್‍ಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ದ್ವಾರಕೀಶ್ ಸೆಷನ್ಸ್ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಐಟಂ ಸಾಂಗ್ ಕ್ಲಿಕ್ -‘ಪುಷ್ಪ’ದಲ್ಲಿ ಸಮಂತಾ ಫುಲ್ ಮಿಂಚಿಂಗ್

    ಇದೀಗ ಕೆಳ ನ್ಯಾಯಾಲಯದ ಆದೇಶವನ್ನ ಸೆಷನ್ಸ್ ಕೋರ್ಟ್ ಎತ್ತಿಹಿಡಿದಿದ್ದು ದ್ವಾರಕೀಶ್‍ಗೆ ಹಿನ್ನೆಡೆ ಆಗಿದ್ದು ಒಂದು ತಿಂಗಳಲ್ಲಿ 52 ಲಕ್ಷ ರೂಪಾಯಿ ಹಣ ಹಿಂದಿರುಗಿಸುವಂತೆ ಕೋರ್ಟ್ ಆದೇಶ ನೀಡಿದೆ.