ಬೆಂಗಳೂರು: ನಟ ಚೇತನ್ ಅವರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ.
ತನ್ನ ಪತಿಯನ್ನು ಪೊಲೀಸ್ ನವರು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ನಟ ಚೇತನ್ ಪತ್ನಿ ಮೇಘಾ ಆರೋಪಿಸಿದ ಬೆನ್ನಲ್ಲೇ, ಇದೀಗ ಚೇತನ್ ಅವರನ್ನು ಶೇಷಾದ್ರಿಪುರಂ ಪೊಲೀಸರು ಬಂಧನಗೊಂಡ ವಿಚಾರ ಲಭ್ಯವಾಗಿದೆ.
ಪೊಲೀಸರು ತಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಮೇಘಾ ಫೇಸ್ ಬುಕ್ ಲೈವ್ ನಲ್ಲಿ ಆತಂಕ ಹಂಚಿಕೊಂಡಿದ್ದರು. ಚೇತನ್ ಅಭಿಮಾನಿಗಳು ಕೂಡ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು. ಇದೆಲ್ಲ ಹೈಡ್ರಾಮಾ ಆದ ಕೆಲವೇ ನಿಮಿಷಗಳಲ್ಲೇ ವಿಚಾರಣೆಗಾಗಿ ಚೇತನ್ ಅವರನ್ನು ಕರೆತರಲಾಗಿದೆ ಎಂದು ಸೆಂಟ್ರಲ್ ವಿಭಾಗದ ಡಿಸಿಪಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು

ಚೇತನ್ ಅವರನ್ನು ವಿಚಾರಣೆಗೆ ಕರೆತರಲು ಕಾರಣ ಹಿಜಬ್ ಕುರಿತಾದ ಹೇಳಿಕೆ. ಹಿಜಬ್ ವಿವಾದ ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾ.ಕೃಷ್ಣ ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯುತ್ತಿದೆ.
https://twitter.com/ChetanAhimsa/status/1493931380459204612
ಚೇತನ್ ಫೆ.16ರಂದು ಈ ಕುರಿತು ಟ್ವೀಟ್ ಮಾಡಿ ನ್ಯಾ.ಕೃಷ್ಣ ದೀಕ್ಷಿತ್ ಅವರನ್ನು ನಿಂದಿಸಿದ್ದರು. ಹಳೆಯ ಟ್ವೀಟ್ ಅನ್ನು ರೀಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದರು. ವಿಚಾರಣೆ ನಡೆಯುವ ಸಂದರ್ಭದಲ್ಲಿ ಜಡ್ಜ್ ಅವರನ್ನು ನಿಂದಿಸುವುದು ಅಪರಾಧ. ಈ ಕಾರಣಕ್ಕೆ ಪೊಲೀಸರು ಚೇತನ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡಿದ್ದಾರೆ.
