Tag: service charge

  • ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ನಿಷೇಧ – ಸಿಸಿಪಿಎ ಮಾರ್ಗಸೂಚಿ ಎತ್ತಿ ಹಿಡಿದ ದೆಹಲಿ ಹೈಕೋರ್ಟ್

    ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ನಿಷೇಧ – ಸಿಸಿಪಿಎ ಮಾರ್ಗಸೂಚಿ ಎತ್ತಿ ಹಿಡಿದ ದೆಹಲಿ ಹೈಕೋರ್ಟ್

    – ಗ್ರಾಹಕರೇ ಸ್ವಇಚ್ಛೆಯಿಂದ ನೀಡಿದರೆ ಮಾತ್ರ ತೆಗೆದುಕೊಳ್ಳಬಹುದು
    – ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೂಚನೆ

    ನವದೆಹಲಿ: ದೇಶದಾದ್ಯಂತ ಯಾವುದೇ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ ಎಂಬ ಮಹತ್ತರ ತೀರ್ಪನ್ನು ದೆಹಲಿ ಹೈಕೋರ್ಟ್ (Delhi High Court) ಶುಕ್ರವಾರ ನೀಡಿದೆ. ಈ ಮೂಲಕ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಎತ್ತಿ ಹಿಡಿದಿದೆ.

    ಹೋಟೆಲ್‌ಗಳಲ್ಲಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ವಿಧಿಸಲಾಗುತ್ತಿದ್ದ ಸೇವಾ ಶುಲ್ಕ ನಿಷೇಧಿಸಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ) 2019ರ ಕಾನೂನಿನ ಅನ್ವಯ ಈ ಹಿಂದೆ ಮಾರ್ಗಸೂಚಿ ಹೊರಡಿಸಿತ್ತು. ಆದರೆ, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ(ಎನ್‌ಆರ್‌ಆಐ) ಮತ್ತು ಫೆಡರೇಶನ್ ಆಫ್ ಹೋಟೆಲ್, ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಘಟನೆಗಳು ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದವು. ಇದನ್ನೂ ಓದಿ: 50 ಲಕ್ಷ ಹಾಕಿದ್ರೂ ಮತ್ತಷ್ಟು ಬೇಡಿಕೆ – ಸೈಬರ್‌ ವಂಚಕರ ಕಾಟ, ವೃದ್ಧ ದಂಪತಿ ಆತ್ಮಹತ್ಯೆ

    ಶುಕ್ರವಾರ ವಿಚಾರಣೆ ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಹೊರಡಿಸಿದ್ದ ಸೇವಾ ಶುಲ್ಕ ನಿಷೇಧ ಮಾರ್ಗಸೂಚಿ ಮತ್ತು ಹೋಟೆಲ್, ರೆಸ್ಟೋರೆಂಟ್ ಅಸೋಸಿಯೇಷನ್ ವಾದವನ್ನು ಆಲಿಸಿ ಅಂತಿಮವಾಗಿ ಸಿಸಿಪಿಎ (CCPA) ಹೊರಡಿಸಿದ ಮಾರ್ಗಸೂಚಿಯನ್ನು ಎತ್ತಿ ಹಿಡಿದು ತೀರ್ಪು ಪ್ರಕಟಿಸಿದೆ. ಅಲ್ಲದೇ, ಹೋಟೆಲ್, ರೆಸ್ಟೋರೆಂಟ್ ಅಸೋಸಿಯೇಷನ್‌ಗೆ ದಂಡ ಸಹ ವಿಧಿಸಿದೆ. ಇದನ್ನೂ ಓದಿ: ಅಂಬೇಡ್ಕರ್‌ ಜಯಂತಿ: ಏ.14 ರಂದು ಸಾರ್ವತ್ರಿಕ ರಜೆ ಘೋಷಿಸಿದ ಕೇಂದ್ರ ಸರ್ಕಾರ

    ಸ್ವಯಂ ಪ್ರೇರಣೆಯಿಂದ ಕೊಟ್ಟರಷ್ಟೇ ತೆಗೆದುಕೊಳ್ಳಿ:

    ಹೈಕೋರ್ಟ್ ತೀರ್ಪಿನ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು, ಹೈಕೋರ್ಟ್ ತೀರ್ಪಿನ ಅನ್ವಯ ಇನ್ನು ಮುಂದೆ ದೇಶದ ಯಾವುದೇ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಅಥವಾ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ. ಗ್ರಾಹಕರೇ ಸ್ವಯಂ ಪ್ರೇರಣೆಯಿಂದ ನೀಡಿದರೆ ಮಾತ್ರ ತೆಗೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ: ಸಿಬಿಐ ವರದಿ

    ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಗ್ರಾಹಕರ ಹಿತರಕ್ಷಣೆಗೆ ಬದ್ಧವಾಗಿದೆ. ಕೇಂದ್ರ ಗ್ರಾಹಕ ಸಚಿವಾಲಯ ಗ್ರಾಹಕರ ಹಿತರಕ್ಷಣೆಗಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರಂತೆ 2019ರ ಕಾನೂನಿನ ಅನ್ವಯ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯವಾಗಿ ಸೇವಾ ಶುಲ್ಕ ವಿಧಿಸುವುದನ್ನು ನಿಷೇಧಿಸಿ ಮಾರ್ಗಸೂಚಿ ಹೊರಡಿಸಿತ್ತು. ಹೋಟೆಲ್, ರೆಸ್ಟೋರೆಂಟ್ ಸಂಘಟನೆಗಳು ದೆಹಲಿ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿದ್ದರು. ಆದರೆ, ಹೈಕೋರ್ಟ್ ಗ್ರಾಹಕರ ಪರ ತೀರ್ಪು ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಜಯಲಕ್ಷ್ಮಿ ಅಕ್ಕ ಹೋರಾಟ ನೋಡಿ ಅವರೊಂದಿಗೆ ನಿಲ್ಲಬೇಕು ಅನ್ನಿಸಿತು: ದರ್ಶನ್‌ ಕೇಸ್‌ ಬಗ್ಗೆ ಧನ್ವೀರ್ ಮಾತು

    ದೆಹಲಿ ಹೈಕೋರ್ಟ್ ಆದೇಶದಂತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಇನ್ನು ಮುಂದೆ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು. ಗ್ರಾಹಕರಿಗೆ ಕಡ್ಡಾಯವಾಗಿ ಅಥವಾ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ. ಗ್ರಾಹಕರೇ ಸ್ವ ಇಚ್ಛೆಯಿಂದ ನೀಡಿದರೆ ಮಾತ್ರ ತೆಗೆದುಕೊಳ್ಳಬಹುದು ಎಂದು ಸೂಚಿಸಿದರು.

  • ಬೆಂಗಳೂರಿನಲ್ಲಿ ಇನ್ಮುಂದೆ ಕಸಕ್ಕೂ ಶುಲ್ಕ – ತಿಂಗಳಿಗೆ ವಸತಿ, ವಾಣಿಜ್ಯ ಕಟ್ಟಡಗಳಿಗೆ ಎಷ್ಟು?

    ಬೆಂಗಳೂರಿನಲ್ಲಿ ಇನ್ಮುಂದೆ ಕಸಕ್ಕೂ ಶುಲ್ಕ – ತಿಂಗಳಿಗೆ ವಸತಿ, ವಾಣಿಜ್ಯ ಕಟ್ಟಡಗಳಿಗೆ ಎಷ್ಟು?

    ಬೆಂಗಳೂರು: ದರ ಏರಿಕೆಯಿಂದ ತತ್ತರಿಸಿರುವ ಬೆಂಗಳೂರು ಮಂದಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಮನೆಮನೆಯಿಂದ ಸಂಗ್ರಹಿಸುವ ತ್ಯಾಜ್ಯಕ್ಕೆ (Garbage) ಏಪ್ರಿಲ್ 1ರಿಂದ ಸೇವಾ ಶುಲ್ಕ (Service Charge) ವಿಧಿಸಲು ಸರ್ಕಾರ ಮುಂದಾಗಿದೆ.

    ಕಳೆದ ಐದಾರು ವರ್ಷದಿಂದ ಬೆಂಗಳೂರಲ್ಲಿ ಘನತ್ಯಾಜ್ಯ ಸೇವಾ ಶುಲ್ಕ ವಿಧಿಸುವ ಸಂಬಂಧ ಚರ್ಚೆ ನಡೆಯುತ್ತಿತ್ತು. ಈಗ ಕಾರ್ಯರೂಪಕ್ಕೆ ತರಲು ಬಿಬಿಎಂಪಿ (BBMP) ಮುಂದಾಗಿದೆ.

    ಆರು ತಿಂಗಳಿಗೊಮ್ಮೆ ಆಸ್ತಿ ತೆರಿಗೆ ಜೊತೆ ಈ ಸೇವಾ ಶುಲ್ಕ ಸಂಗ್ರಹಿಸಲಾಗುತ್ತದೆ. ವಾರ್ಷಿಕ 800 ಕೋಟಿ ಸಂಗ್ರಹದ ಗುರಿಯನ್ನು ಸರ್ಕಾರ ಹೊಂದಿದೆ.

    ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಪ್ರತಿಕ್ರಿಯಿಸಿ, ಇದು ತೆರಿಗೆ (Tax) ಅಲ್ಲ. ಇದು ಸರ್ವಿಸ್ ಚಾರ್ಜ್ ಆಗಿದ್ದು, ಪ್ರಾಪಾರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು ಎಂದು ತಿಳಿಸಿದರು.

    ವಸತಿ ಕಟ್ಟಡಗಳಿಗೆ (ಮಾಸಿಕ)
    * 600 ಚದರಡಿವರೆಗೆ – 10 ರೂ.
    * 601-1000 ಚದರಡಿ – 50 ರೂ.
    * 1001-2000 ಚದರಡಿ – 100 ರೂ.
    * 2001-3000 ಚದರಡಿ – 150 ರೂ.
    * 3001-4000 ಚದರಡಿ – 200 ರೂ.
    * 4000 ಚದರಡಿ ಮೇಲ್ಪಟ್ಟು – 400 ರೂ.
    * ನಿವೇಶನ ಪ್ರತಿ ಚದರಡಿಗೆ – 20 ಪೈಸೆ

    ವಾಣಿಜ್ಯ ಕಟ್ಟಡಗಳಿಗೆ (ಮಾಸಿಕ)
    * ನಿತ್ಯ 5 ಕೆಜಿವರೆಗೆ – 500 ರೂ.
    * ನಿತ್ಯ 10 ಕೆಜಿವರೆಗೆ – 1400 ರೂ.
    * ನಿತ್ಯ 25 ಕೆಜಿವರೆಗೆ – 3500 ರೂ.
    * ನಿತ್ಯ 50 ಕೆಜಿವರೆಗೆ – 7000 ರೂ.
    * ನಿತ್ಯ 100 ಕೆಜಿವರೆಗೆ – 14000 ರೂ.

     

  • ಬೆಂಗಳೂರಿನಲ್ಲಿ ಇನ್ನು ಮುಂದೆ ಕಸಕ್ಕೂ ಸರ್ವಿಸ್‌ ಚಾರ್ಜ್‌ – ಏ.1 ರಿಂದ ಜಾರಿ

    ಬೆಂಗಳೂರಿನಲ್ಲಿ ಇನ್ನು ಮುಂದೆ ಕಸಕ್ಕೂ ಸರ್ವಿಸ್‌ ಚಾರ್ಜ್‌ – ಏ.1 ರಿಂದ ಜಾರಿ

    ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನಲ್ಲಿ (Bengaluru) ಕಸಕ್ಕೂ (Garbage) ಸೇವಾ ಶುಲ್ಕ ಪಾವತಿಸಬೇಕು. ಇದೇ ಏಪ್ರಿಲ್‌ 1 ರಿಂದ ಇದು ಜಾರಿಗೆ ಬರಲಿದೆ ಎಂದು ಬಿಬಿಎಂಪಿ (BBMP) ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದು ತೆರಿಗೆ (Tax) ಅಲ್ಲ.  ಇದು ಸರ್ವಿಸ್ ಚಾರ್ಜ್ ಆಗಿದ್ದು,  ಪ್ರಾಪಾರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು ಎಂದು ತಿಳಿಸಿದರು.

    ವಿದ್ಯುತ್‌ ಬಿಲ್‌ ರೀತಿ ಪ್ರತಿ ಮನೆ ಮನೆಗೆ ಹೋಗಿ ಸಂಗ್ರಹಿಸಲು ಸಾಧ್ಯವಿಲ್ಲ. ಹೀಗಾಗಿ ಸರ್ವಿಸ್‌ ಚಾರ್ಜ್‌ ಹಾಕಲಾಗುತ್ತದೆ ಎಂದು ವಿವರಿಸಿದರು.

    ನಗರದಲ್ಲಿ ಕಸ ವಿಲೇವಾರಿಯಾಗದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕಸ ವಿಲೇವಾರಿ ಒಂದು ದಿನ ಸ್ಥಗಿತವಾಗಿದೆ, ರಾತ್ರಿಯಿಡಿ ಅನ್ ಲೋಡ್ ಮಾಡಲಾಗುತ್ತಿದೆ. ಅವರನ್ನು ಮನವೊಲಿಸಲು ಯಶಸ್ವಿಯಾಗಿದ್ದು ರಾತ್ರಿ ವೇಳೆ ಕಸ ವಿಲೇವಾರಿ ಆಗಲಿದೆ ಎಂದು ತಿಳಿಸಿದರು.

  • ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ 20 ರೂ. ಚಹಾಗೆ 50 ರೂ. ಸೇವಾಶುಲ್ಕ – ಪ್ರಯಾಣಿಕ ಶಾಕ್

    ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ 20 ರೂ. ಚಹಾಗೆ 50 ರೂ. ಸೇವಾಶುಲ್ಕ – ಪ್ರಯಾಣಿಕ ಶಾಕ್

    ನವದೆಹಲಿ: ವಿಮಾನದಲ್ಲಿ ಆಹಾರ ದುಬಾರಿ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಸಿಗುವ ಆಹಾರ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಎಲ್ಲರ ನಂಬಿಕೆ. ಆದರೆ ವ್ಯಕ್ತಿಯೋರ್ವ ರೈಲಿನಲ್ಲಿ ಕೇವಲ ಒಂದು ಗ್ಲಾಸ್ ಚಹಾ ಕುಡಿಯಲು 70 ರೂ. ಖರ್ಚು ಮಾಡಿದ್ದಾನೆ. ಚಹಾ ಕೇವಲ 20ರೂ ಆಗಿದ್ದರೆ, ಅದರ ಸೇವಾಶುಲ್ಕವೇ 50ರೂ. ಆಗಿರುವುದು ಕಂಡು ಎಲ್ಲರಿಗೂ ಶಾಕ್ ಆಗಿದೆ.

    ಜೂನ್ 28 ರಂದು ದೆಹಲಿಯಿಂದ ಭೋಪಾಲ್‍ಗೆ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸದ್ಯ ತೆರಿಗೆ ಇನ್‍ವಾಯ್ಸ್‍ಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಕ್ಕಳ ಗುಪ್ತಾಂಗ ಮುಟ್ಟಿ ವಿಕೃತಿ – 40 ಮಹಿಳೆಯರೊಂದಿಗೆ ಶಿಕ್ಷಕ ರಾಸಲೀಲೆ

    ಪ್ರಯಾಣಿಕರು ರೈಲಿನ ಟಿಕೆಟ್ ಬುಕ್ ಮಾಡುವಾಗಲೇ ತಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡದೇ, ಪ್ರಯಾಣಿಸುವ ವೇಳೆ ಏನನ್ನಾದರೂ ಆರ್ಡರ್ ಮಾಡಿದರೆ, ಅವರು 50 ರೂ. ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಸುತ್ತೋಲೆಯನ್ನು 2018ರಲ್ಲಿಯೇ ಹೊರಡಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ದಕ್ಷಿಣ ಇರಾನ್‍ನಲ್ಲಿ ಭೂಕಂಪನ- ಮೂವರು ಸಾವು, 16 ಮಂದಿಗೆ ಗಂಭೀರ ಗಾಯ

    ಅದರಂತೆ ಶತಾಬ್ದಿ ಹಾಗೂ ರಾಜಧಾನಿ ಎಕ್ಸ್‌ಪ್ರೆಸ್‍ನಲ್ಲಿ ಪ್ರಯಾಣಿಸುವ ವೇಳೆ ಆಹಾರ, ಚಹಾ ಅಥವಾ ಕಾಫಿಯನ್ನು ಆರ್ಡರ್ ಮಾಡಿದರೆ ಹೆಚ್ಚುವರಿಯಾಗಿ 50 ರೂಪಾಯಿ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ. ಈ ಮುನ್ನ ಶತಾಬ್ದಿ ಹಾಗೂ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಹಾರ ಉಚಿತವಾಗಿತ್ತು. ಆದರೆ ಇದೀಗ ಆಹಾರದ ದರ ಕಡಿತಗೊಳಿಸಲಾಗಿದೆ. ಒಂದು ವೇಳೆ ಪ್ರಯಾಣದ ವೆಳೆ ಊಟ ಆರ್ಡರ್ ಮಾಡಿದರೆ ಹೆಚ್ಚು ಶುಲ್ಕವನ್ನು ವಿಧಿಸಲಾಗುತ್ತದೆ.

    Live Tv

  • ಪ್ರಯಾಣಿಕರ ಜೇಬಿಗೆ ಕತ್ತರಿ-ದುಬಾರಿಯಾದ ರೈಲ್ವೇ ಆನ್‍ಲೈನ್ ಟಿಕೆಟ್ ಬುಕ್ಕಿಂಗ್

    ಪ್ರಯಾಣಿಕರ ಜೇಬಿಗೆ ಕತ್ತರಿ-ದುಬಾರಿಯಾದ ರೈಲ್ವೇ ಆನ್‍ಲೈನ್ ಟಿಕೆಟ್ ಬುಕ್ಕಿಂಗ್

    ನವದೆಹಲಿ: ಐಆರ್ ಸಿಟಿಸಿ ನಲ್ಲಿ ರೈಲ್ವೇ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರ ಜೇಬಿಗೆ ಇನ್ನ್ಮುಂದೆ ಕತ್ತರಿ ಬೀಳಲಿದೆ.

    ಸೆಪ್ಟೆಂಬರ್ ನಿಂದ ರೈಲ್ವೇ ಟಿಕೆಟ್ ಮೇಲೆ ಸೇವಾ ಶುಲ್ಕ ಅನ್ವಯವಾಗಲಿದೆ. ಆಗಸ್ಟ್ 30ರಂದು ಭಾರತೀಯ ರೈಲ್ವೇ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಸೆಪ್ಟೆಂಬರ್ ನಿಂದಲೇ ಈ ಆದೇಶ ಅನ್ವಯವಾಗಲಿದೆ. ಎಸಿ ರಹಿತ ಇ-ಟಿಕೆಟ್ ಮೇಲೆ 15 ರೂ ಮತ್ತು ಎಸಿ ಸಹಿತ ಟಿಕೆಟ್ ಮೇಲೆ 30 ರೂ. ಸೇವಾ ಶುಲ್ಕವನ್ನು ಐಆರ್‍ಸಿಟಿಸಿ ವಿಧಿಸಲಿದೆ. ಲಗೇಜ್ ಗಳಿಗೆ ಪ್ರತ್ಯೇಕ ಟಿಕೆಟ್ ಪಡೆದುಕೊಳ್ಳಬೇಕು.

    ಮೂರು ವರ್ಷಗಳ ಹಿಂದೆ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಡಿಜಿಟಲ್ ಪೇಮೆಂಟ್ ಉತ್ತೇಜನಕ್ಕಾಗಿ ಸೇವಾ ಶುಲ್ಕವನ್ನು ರದ್ದುಗೊಳಿಸಿತ್ತು. ಈ ಮೊದಲು ಐಆರ್ ಸಿಟಿಸಿ ಎಸಿ ರಹಿತ ಶ್ರೇಣಿಯ ಪ್ರತಿ ಟಿಕೆಟ್ ಮೇಲೆ 20 ರೂ. ಮತ್ತು ಎಸಿ ಸಹಿತ ಶ್ರೇಣಿಯ ಪ್ರತಿ ಟಿಕೆಟ್ ಮೇಲೆ 40 ರೂ. ಸೇವಾ ಶುಲ್ಕವನ್ನು ಪಡೆಯುತ್ತಿತ್ತು.

    ಸೆಪ್ಟೆಂಬರ್ ಆರಂಭದಿಂದ ಐಆರ್ ಸಿಟಿಸಿ ಮೊದಲಿನಂತೆ ಸದ್ಯ ನಿಗದಿಯಾಗಿರುವ ಸೇವಾ ಶುಲ್ಕವನ್ನು ಪಡೆಯಬಹುದು ಎಂದು ರೈಲ್ವೇ ಬೋರ್ಡ್ ತಿಳಿಸಿದೆ. ಸೇವಾ ಶುಲ್ಕ ರದ್ದುಗೊಳಿಸಿದ ಪರಿಣಾಮ 2016-17ರ ಆರ್ಥಿಕ ವರ್ಷದಲ್ಲಿ ಶೇ.26ರಷ್ಟು ಆದಾಯ ಕುಸಿತಗೊಂಡಿತ್ತು.

  • ಎಸ್‍ಬಿಐ ಸೇವಾ ಶುಲ್ಕಗಳಲ್ಲಿ ಬದಲಾವಣೆ-ಇಲ್ಲಿದೆ ಹೊಸ ಸೇವಾ ಶುಲ್ಕಗಳ ವಿವರ

    ಎಸ್‍ಬಿಐ ಸೇವಾ ಶುಲ್ಕಗಳಲ್ಲಿ ಬದಲಾವಣೆ-ಇಲ್ಲಿದೆ ಹೊಸ ಸೇವಾ ಶುಲ್ಕಗಳ ವಿವರ

    ನವದೆಹಲಿ: ದೇಶದ ಅತಿ ದೊಡ್ಡ ರಾಷ್ಟ್ರೀಯ ಬ್ಯಾಂಕ್ ತನ್ನ ಎಲ್ಲಾ ಸೇವಾ ಶುಲ್ಕಗಳನ್ನು ಬದಲಾವಣೆ ಮಾಡಿದೆ. ಇಂದಿನಿಂದ ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಸೇವಾಶುಲ್ಕ ಸೇರಿದಂತೆ ತೆರಿಗೆಯೂ ಸಹ ಹೆಚ್ಚುವರಿಯಾಗಲಿದೆ.

    ಎಸ್‍ಬಿಐ ಗ್ರಾಹಕರಿಗೆ ಒದಗಿಸುವ ಎಲ್ಲಾ ಸೇವೆಗಳು ಅಂದರೆ ಎಟಿಎಂ ಬಳಕೆ, ಚೆಕ್ ಬುಕ್, ಹಣ ವಿನಿಮಯ ಮುಂತಾದ ಸೇವೆಗಳಿಗೆ ಹೊಸ ಶುಲ್ಕವನ್ನು ನಿಗದಿಪಡಿಸಿದ್ದು, ಜೂನ್ 1ರಿಂದ ಅಂದ್ರೆ ಇಂದಿನಿಂದ ಈ ಹೊಸ ಸೇವಾ ಶುಲ್ಕಗಳು ಗ್ರಾಹಕರಿಗೆ ಅನ್ವಯಿಸಲಿವೆ.

    ಉಳಿತಾಯ ಖಾತೆದಾರರಿಗೆ ತಗಲುವ ಶುಲ್ಕಗಳು:
    1. 10 ಹಾಳೆಗಳಿರುವ ಚೆಕ್ ಬುಕ್‍ಗೆ ಖಾತೆದಾರ 30 ರೂ. ಶುಲ್ಕ ಪ್ಲಸ್ ಸರ್ವಿಸ್ ಟ್ಯಾಕ್ಸ್ ನೀಡಬೇಕು.
    2. 25 ಚೆಕ್‍ಗಳಿರುವ ಚೆಕ್ ಬುಕ್‍ಗೆ 75 ರೂ. ಪ್ಲಸ್ ಸರ್ವಿಸ್ ಟ್ಯಾಕ್ಸ್
    3. 50 ಚೆಕ್‍ಗಳಿರುವ ಚೆಕ್‍ಬುಕ್‍ಗೆ 150 ರೂ. ಪ್ಲಸ್ ಸರ್ವಿಸ್ ಟ್ಯಾಕ್ಸ್

    ಎಟಿಎಂಗಳ ಶುಲ್ಕ ಪರಿಷ್ಕರಣೆ:
    1. ಎಟಿಎಂಗಳಲ್ಲಿ 4 ಬಾರಿ ಹಣ ಹಿಂಪಡೆಯುವುದಕ್ಕೆ ಯಾವುದೇ ಶುಲ್ಕವಿಲ್ಲ. ಅಂದ್ರೆ ಎಸ್‍ಬಿಐ ಸೇರಿದಂತೆ ಬೇರೆ ಬ್ಯಾಂಕ್‍ಗಳಲ್ಲಿ ಹಣವನ್ನು ಗರಿಷ್ಟ 4 ಬಾರಿ ಉಚಿತವಾಗಿ ಡ್ರಾ ಮಾಡಬಹುದು.
    2. ಎಸ್‍ಬಿಐ ಬ್ರಾಂಚ್‍ಗಳ ಎಟಿಎಂನಲ್ಲಿ ಹಣವನ್ನು 4ಕ್ಕಿಂತ ಹೆಚ್ಚು ಬಾರಿ ಡ್ರಾ ಮಾಡಿದ್ದಲ್ಲಿ ಪ್ರತಿ ವ್ಯವಹಾರಕ್ಕೆ 10 ರೂ. ಸೇರಿದಂತೆ ಸರ್ವಿಸ್ ಟ್ಯಾಕ್ಸ್ ಪಾವತಿಸಬೇಕು.
    3. ಗರಿಷ್ಟ ನಾಲ್ಕರ ಮಿತಿಯ ಬಳಿಕ ಇತರ ಬ್ಯಾಂಕ್‍ಗಳಲ್ಲಿ ಹಣವನ್ನು ಡ್ರಾ ಮಾಡಿದ್ದಲ್ಲಿ ಪ್ರತಿ ವ್ಯವಹಾರಕ್ಕೆ 20 ರೂ. ಪ್ಲಸ್ ಸರ್ವಿಸ್ ಟ್ಯಾಕ್ಸ್ ಪೇ ಮಾಡ್ಬೇಕು.

    ಹಣ ವರ್ಗಾವಣೆOnline transfer
    INB, MB, UPI, & USSD ಮೂಲಕ ತ್ವರಿತ ಹಣ ವರ್ಗಾವಣೆ ಮಾಡುವವರೂ ಶುಲ್ಕ ಪಾವತಿಸಬೇಕು.
    1. 1 ಲಕ್ಷದವರೆಗೆ ವರ್ಗಾವಣೆಗೆ ರೂ. 5 ರೂಪಾಯಿ ಶುಲ್ಕ ಹಾಗೂ ಸೇವಾ ತೆರಿಗೆ
    2. 1 ಲಕ್ಷದಿಂದ 2 ಲಕ್ಷ ರೂ. ವರ್ಗಾವಣೆಗೆ ರೂ. 15 ಮತ್ತು ಸೇವಾ ತೆರಿಗೆ
    3. 2 ಲಕ್ಷದಿಂದ 5 ಲಕ್ಷದವರೆಗಿನ ವರ್ಗಾವಣೆಗೆ ರೂ. 25 ಶುಲ್ಕ + ಸೇವಾ ತೆರಿಗೆ

    ನೋಟು ಬದಲಾವಣೆ:
    ನಿಮ್ಮಲ್ಲಿಯ ಹಳೆಯ ಅಥವಾ ಹರಿದ ನೋಟುಗಳ ಬದಲಾವಣೆಗೆ ಸಹ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
    1. 20 ನೋಟುಗಳ ಮತ್ತು 5 ಸಾವಿರ ರೂ.ವರೆಗಿನ ನೋಟುಗಳ ಬದಲಾವಣೆಗೆ ಯಾವುದೇ ಶುಲ್ಕ ಅನ್ವಯವಾಗವುವದಿಲ್ಲ.
    2. 20ಕ್ಕಿಂತ ಅಥವಾ 5,000 ಕ್ಕಿಂತ ಹೆಚ್ಚಿನ ಬೆಲೆಯ ನೋಟುಗಳಿದ್ದರೆ ಒಂದು ನೋಟಿಗೆ 2 ರೂಪಾಯಿ ಅಥವಾ 1,000 ರೂಪಾಯಿಗೆ 5 ರೂ. (ಇವುಗಳಲ್ಲಿ ಯಾವುದು ಗರಿಷ್ಟವೋ ಅದು) ಶುಲ್ಕ ನೀಡಬೇಕು.

    ಡೆಬಿಟ್ ಕಾರ್ಡ್:
    ಬ್ಯಾಂಕ್‍ನಿಂದ ಕೇವಲ ರುಪೇ ಕಾರ್ಡ್‍ನ್ನು ಮಾತ್ರ ಉಚಿತವಾಗಿ ನೀಡಲಾಗುವುದು.

    ಬ್ಯಾಂಕ್ ಬುಡ್ಡಿ (buddy) ಸೇವೆ:
    ಇನ್ನು ಸ್ಟೇಟ್ ಬ್ಯಾಂಕ್‍ನ ಆ್ಯಪ್ ಬಳಕೆದಾರರಿಗೂ ಹೊಸ ಶುಲ್ಕ ಅನ್ವಯವಾಗಲಿದೆ. ವ್ಯಾಲೆಟ್‍ನಿಂದ ಎಟಿಎಂಗಳ ಮುಖಾಂತರವನ್ನು ಹಣವನ್ನು ಡ್ರಾ ಮಾಡಿದರೆ ಪ್ರತಿ ಬಾರಿ 25 ರೂ. ಶುಲ್ಕ ನಿಗದಿಪಡಿಸಲಾಗಿದೆ.

    ಇದನ್ನೂ ಓದಿ:  ಗಮನಿಸಿ, ಎಸ್‍ಬಿಐ ಎಟಿಎಂನಿಂದ ಹಣ ಡ್ರಾ ಮಾಡಿದ್ರೆ 25 ರೂ. ಶುಲ್ಕ ಇಲ್ಲ