Tag: Server Problem

  • ಕೊಡಗಿನಲ್ಲಿ ಗಣತಿದಾರರ ಪರದಾಟ – ಮುಂದುವರಿದ ಸರ್ವರ್​ ಸಮಸ್ಯೆ, 4 ದಿನಗಳಲ್ಲಿ ಕೇವಲ 1,133 ಮಂದಿ ದತ್ತಾಂಶ ಸಂಗ್ರಹ

    ಕೊಡಗಿನಲ್ಲಿ ಗಣತಿದಾರರ ಪರದಾಟ – ಮುಂದುವರಿದ ಸರ್ವರ್​ ಸಮಸ್ಯೆ, 4 ದಿನಗಳಲ್ಲಿ ಕೇವಲ 1,133 ಮಂದಿ ದತ್ತಾಂಶ ಸಂಗ್ರಹ

    – ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್‌ ವೇಳೆ ಸಮೀಕ್ಷಕರ ಸಮಸ್ಯೆ ಅನಾವರಣ

    ಮಡಿಕೇರಿ: ರಾಜ್ಯಾದ್ಯಂತ ಆರಂಭಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ 4ನೇ ದಿನವೂ ಸರ್ವರ್‌ ಸಮಸ್ಯೆಯ ತಲೆನೋವಾಗಿದೆ. ಸಮೀಕ್ಷೆ ಶುರುವಾಗಿ 4ನೇ ದಿನಕ್ಕೆ ಕಾಲಿಟ್ಟರೂ ಸರ್ವರ್ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ. ಹೀಗಾಗಿ ಶಾಲಾ ಶಿಕ್ಷಕರು ಪ್ರತಿ ಮನೆಮನೆಗೆ ತೆರಳಿ ಗಂಟೆಗಟ್ಟಲೇ ಓಟಿಪಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ʻಪಬ್ಲಿಕ್‌ ಟಿವಿʼ ರಿಯಾಲಿಟಿ ಚೆಕ್‌ ನಡೆಸಿದಾಗ ಸಮೀಕ್ಷಕರ ಪರದಾಟಗಳು ಅನಾವರಣಗೊಂಡಿದೆ.

    15 ದಿನಗಳಲ್ಲಿ ಜಾತಿ ಜನಗಣತಿ ಕಾರ್ಯ ಮುಗಿಸಬೇಕೆಂದು ಈಗಾಗಲೇ ಶಿಕ್ಷಕರಿಗೆ ಸೂಚನೆ ಕೊಟ್ಟಿದೆ. ದಸರಾ ರಜೆ ಕೂಡ ಇರೋದ್ರಿಂದ ಶಿಕ್ಷಕರು ನಿತ್ಯ ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದಾರೆ. ಆದ್ರೆ ಕೊಡಗಿನಲ್ಲಿ ಸರ್ವರ್‌ ಸಮಸ್ಯೆ ಇರೋದ್ರಿಂದ ಸಮೀಕ್ಷಾ ಮಾಹಿತಿಯನ್ನ ಮೊಬೈಲ್‌ ಆ್ಯಪ್‌ನಲ್ಲಿ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ನಾಳೆಯಿಂದ ಜಾತಿ ಜನಗಣತಿ, ಒಬ್ಬ ಸಮೀಕ್ಷಕರಿಗೆ ಕನಿಷ್ಠ 150 ಮನೆ ಹಂಚಿಕೆ: ಮಧುಸೂದನ್ ನಾಯ್ಕ್

    2-3 ಗಂಟೆ ಒಂದೇ ಮನೆಯಲ್ಲಿ ಠಿಕಾಣಿ
    ಹೇಗೋ ಹರಸಾಹಸ ಮಾಡಿ ಎಲ್ಲಾ ಮಾಹಿತಿಯನ್ನ ಆ್ಯಪ್‌ನಲ್ಲಿ ದಾಖಲಿಸಿದ್ರೆ ಓಟಿಪಿ ಹಾಕುವ ಸಂದರ್ಭದಲ್ಲೇ ಕೈಕೊಡುತ್ತಿದೆ. ಹೀಗಾಗಿ ಶಾಲಾ ಶಿಕ್ಷಕರು ಓಟಿಪಿಗಾಗಿ ಗಂಟೆಗಟ್ಟಲೆ ಕಾದು ಹೈರಾಣಾಗುತ್ತಿದ್ದಾರೆ. ಸರ್ವೇ ನಡೆಸಲು ಎರಡು ಮೂರು ಗಂಟೆಗಳ ಕಾಲ ಶಿಕ್ಷಕರು ಒಂದೇ ಮನೆ ಬಳಿ ಕುಳಿತಿರುತ್ತಾರೆ. ಇದರಿಂದ ಮಾಹಿತಿ ನೀಡುತ್ತಿರುವ ಜನಸಾಮಾನ್ಯರಿಗೂ ಕಿರಿಕಿರಿ ಉಂಟಾಗುತ್ತಿದೆ. ಇದನ್ನೂ ಓದಿ: ಜಾತಿ ಜನಗಣತಿ ವಿರೋಧಿಸಿ ಅರ್ಜಿ – ಕೇಂದ್ರ , ರಾಜ್ಯ, ಸೆನ್ಸಸ್ ಮಂಡಳಿ, ಹಿಂದುಳಿದ ಆಯೋಗಕ್ಕೆ ನೋಟಿಸ್ ಜಾರಿ

    ಸಂಜೆಯಾದ್ರೆ ಆನೆಕಾಟ, ಬೆಳಗ್ಗೆ ನೆಟ್‌ವರ್ಕ್‌ ಸಮಸ್ಯೆ
    ಇನ್ನೂ ಕೊಡಗು ಗುಡ್ಡಗಾಡು ಪ್ರದೇಶ ಆಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಗಣತಿದಾರರು ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ಮನೆಯ ಪೂರ್ಣ ವಿವರ ದಾಖಲಿಸಿ ಅಪ್‌ಲೋಡ್‌ ಮಾಡಿದ ನಂತರ ಮತ್ತೊಂದು ಮನೆ ಗಣತಿ ನಡೆಸಬೇಕು. ಆದ್ರೆ ಇಲ್ಲಿನ ಜನರ ಬಳಿ ಬಹುತೇಕ 4ಜಿ ಮೊಬೈಲ್‌ಗಳಿವೆ ನೆಟ್‌ವರ್ಕ್‌ ಸಮಸ್ಯೆ ಕೂಡ ಕಾಡುತ್ತಿರೋದ್ರಿಂದ, ಆ್ಯಪ್‌ ಡೌನ್‌ಲೋಡ್‌ ಮಾಡೋದು ಕೂಡ ಸಮಸ್ಯೆಯಾಗ್ತಿದೆ. ಸಾರ್ವಜನಿಕರ ಮನೆಗಳ ಲೊಕೆಷನ್ ಮಾಹಿತಿಯೂ ನೆಟ್‌ವರ್ಕ್ ಸಮಸ್ಯೆಯಿಂದ ಸರಿಯಾಗಿ ನಮೂದಾಗುತ್ತಿಲ್ಲ. ಇನ್ನೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಸಂಜೆ 5 ಗಂಟೆ ನಂತರವೇ ಮನೆಗೆ ಬರ್ತಾರೆ. ಆದ್ರೆ ಸಂಜೆಯಾಗ್ತಿದ್ದಂತೆ ಕಾಡಾನೆಗಳ ಕಾಡ ಶುರುವಾಗುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಒಟ್ಟು 1,38,112 ಸಮೀಕ್ಷೆ ಮಾಡಲು ಗುರಿ ನೀಡಲಾಗಿದೆ. ಆದ್ರೆ ಕಳೆದ 3-4 ದಿನಗಳಲ್ಲಿ ಕೇವಲ 1,133 ಮನೆಗಳು ಮಾತ್ರ ಗಣತಿಯಾಗಿದೆ. ಈ ಬಗ್ಗೆ ವಕ್ಫ್‌ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ರಾಜ್ಯದಲ್ಲಿ ಈ ರೀತಿಯ ಸಮಸ್ಯೆಯಾಗಿದೆ. ಪ್ರತಿನಿತ್ಯ ಇದರ ಬಗ್ಗೆ ಜಮೀರ್‌ ಅಹ್ಮದ್‌ ಅಹಮದ್‌ ಮಾಹಿತಿ ಪಡೆಯುತ್ತಿದ್ದಾರೆ. ಸರ್ವರ್ ಸಮಸ್ಯೆ ಬಗ್ಗೆ ಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

  • ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆ – ಕೈತಪ್ಪಿದ ಸಾವಿರಾರು ಕೋಟಿ ಆದಾಯ: ಅಶ್ವಥ್ ನಾರಾಯಣ್

    ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆ – ಕೈತಪ್ಪಿದ ಸಾವಿರಾರು ಕೋಟಿ ಆದಾಯ: ಅಶ್ವಥ್ ನಾರಾಯಣ್

    ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ 28 ದಿನಗಳಿಂದ ಯಾವ ಸಾಫ್ಟ್‌ವೇರ್‌ ಕೂಡ ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ (BJP) ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ್ (Ashwath Narayana) ಸರ್ಕಾರದ ವಿರುದ್ಧ ಕಿಡಿಕಾರಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇ-ಖಾತೆ ಇಲ್ಲದೆ ನೋಂದಣಿ ಇಲ್ಲ ಎಂಬ ಹೊಸ ಷರತ್ತನ್ನು ಜಾರಿ ಮಾಡಿದ್ದಾರೆ. ಪೂರ್ವಾಪರ ಯೋಚಿಸದೆ ಹೀಗೆ ಮಾಡಿದ್ದಾರೆ. ಬೆಂಗಳೂರಿನಲ್ಲಿ 1 ಲಕ್ಷ 70 ಸಾವಿರ ಬಿಡಿಎ ನಿವೇಶನಗಳಿವೆ. ಹೌಸಿಂಗ್ ಸೊಸೈಟಿಯ 60 ಸಾವಿರ ನಿವೇಶನಗಳಿವೆ. 30ರಿಂದ 35 ಸಾವಿರ ಬಿಡಿಎ ಅಪ್ರೂವ್ಡ್ ಸೈಟ್‌ಗಳಿವೆ. ಉಳಿದ 17 ಲಕ್ಷ ಆಸ್ತಿಗಳನ್ನು ಕಾನೂನುಬಾಹಿರ ಎಂದಿದ್ದಾರೆ. ಇದೆಲ್ಲರ ಪರಿಣಾಮ ಕಳೆದ 3 ತಿಂಗಳಿನಿಂದ ಸುಮಾರು ನಾಲ್ಕೈದು ಸಾವಿರ ಕೋಟಿ ಆದಾಯ ಸರ್ಕಾರದ ಕೈತಪ್ಪಿ ಹೋಗಿದೆ ಎಂದು ವಿವರಿಸಿದರು.ಇದನ್ನೂ ಓದಿ: ಕಾರವಾರ: ವಾಹನ ಡಿಕ್ಕಿ ಹೊಡೆದು ಕಟ್ಟಡ ಕಾರ್ಮಿಕ ಸಾವು

     

    ಸಚಿವ ಕೃಷ್ಣಬೈರೇಗೌಡರು ಇದರ ಕಡೆ ಗಮನ ಕೊಡುತ್ತಿಲ್ಲ. ಬಿಬಿಎಂಪಿಯ ತುಷಾರ್ ಗಿರಿನಾಥ್, ಮನೀಷ್ ಮುದ್ಗಲ್ ಅವರು ತಮ್ಮದೇ ಆದ ರೀತಿಯಲ್ಲಿ ಐಡಿಯ ಕೊಡುತ್ತಿದ್ದು, ಕೃಷ್ಣಬೈರೇಗೌಡರು ತುತ್ತೂರಿ ಊದುತ್ತಿದ್ದಾರೆ. ಹೀಗಾಗಿ ಕೆಲಸ ಆಗುತ್ತಿಲ್ಲ. ಮಂಜೂರಾದ ವೈದ್ಯಕೀಯ ಸೀಟಿಗೆ ಹಣ ಕಟ್ಟಲು ಆಸ್ತಿ ಮಾರಾಟ ಮಾಡಲು ಆಗುತ್ತಿಲ್ಲ ಎಂದು ದೂರಿದರು.

    ಎನ್‌ಕಂಬರೆನ್ಸ್ ಸರ್ಟಿಫೈಡ್ ಕಾಪಿ ಸಿಗುತ್ತಿಲ್ಲ. ಎನ್‌ಕಂಬರೆನ್ಸ್ ಕೇಳಿದರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಡೌನ್ ಎನ್ನುತ್ತಾರೆ ಎಂದು ಟೀಕಿಸಿದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಟಿಪಿ ಬಾರದೆ ನೋಂದಣಿ ಕಾರ್ಯ ನಡೆಯುತ್ತಿಲ್ಲ;. ಕಾವೇರಿ 2 ಆ್ಯಪ್ ಬಂದ ಬಳಿಕ ಒಂದು ದಿನದ ಮೊದಲು ಹಣ ಕಟ್ಟಬೇಕಾಗಿದೆ. ನಿಗದಿತ ಅವಧಿಯಲ್ಲಿ ಹೋದರೆ ಸಾಫ್ಟ್ವೇರ್ ಕೆಲಸ ಮಾಡದೆ ಸರ್ವರ್ ಡೌನ್ ಎಂಬ ಉತ್ತರ ಸಿಗುತ್ತದೆ. ನೋಂದಣಿ ನಡೆಯದೆ ಗೊಂದಲ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

    ರಾಜ್ಯದಲ್ಲಿ ಕಳೆದ ಎರಡು ತಿಂಗಳುಗಳಿಂದ ಇ-ಖಾತಾ ಹೆಸರಿನಲ್ಲಿ ಉಪನೋಂದಣಿ ಕಚೇರಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಕೆಲಸ ಸ್ಥಗಿತವಾಗಿದ್ದು, ಸಾಮಾನ್ಯ ಜನರು, ಬಡವರು ಕಷ್ಟಕಾಲದಲ್ಲಿ ಆಸ್ತಿ ಮಾರಾಟ ಮಾಡಲು ಅಥವಾ ಕೊಳ್ಳಲಾಗದ, ಬ್ಯಾಂಕಿನಲ್ಲಿ ಅಡಮಾನ ಮಾಡಿ ಸಾಲ ಪಡೆಯಲು, ಕೈಸಾಲಕ್ಕೆ ತೊಂದರೆ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ರಾಜ್ಯದ ಕಂದಾಯ ಸಚಿವ ಕೃಷ್ಣಬೈರೇಗೌಡರು ಇಲಾಖೆ ಕೆಲಸ ಬಿಟ್ಟು ಬೇರೆ ಇಲಾಖೆಗಳ ಕೆಲಸಕ್ಕೆ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ 2 ಸಾಫ್ಟ್‌ವೇರ್‌ ಹೆಸರಿನಲ್ಲಿ ಒಂದೊಂದು ಕೆಲಸಕ್ಕೆ ಒಂದೊಂದು ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದಾರೆ. ನೋಂದಣಿ ಕಾರ್ಯಕ್ಕೆ ಒಂದು ಸಾಫ್ಟ್‌ವೇರ್‌, ಎನ್‌ಕಂಬರೆನ್ಸ್‌ಗೆ ಒಂದು ಸಾಫ್ಟ್ವೇರ್, ದೃಢೀಕೃತ ಕಾಪಿ ಪಡೆಯಲು ಒಂದು ಸಾಫ್ಟ್‌ವೇರ್‌, ನಾಗರಿಕರು ಮನೆಯಿಂದ ಕಡತಗಳನ್ನು ಅಪ್‌ಲೋಡ್ ಮಾಡಲು ಮತ್ತೊಂದು ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದಾರೆ ಎಂದರು.ಇದನ್ನೂ ಓದಿ: ತರಬೇತಿ‌ ವೇಳೆ IAFನ ಮಿರಾಜ್-2000 ಯುದ್ಧ ವಿಮಾನ ಪತನ – ಇಬ್ಬರು ಪೈಲಟ್‌ ಸೇಫ್‌

     

  • DCSನಲ್ಲಿ ಸರ್ವರ್‌ ಸಮಸ್ಯೆ, KSRTC ಬಸ್‌ಗಳಿಗೆ ತಟ್ಟಿದ ಬಿಸಿ – ಮಡಿಕೇರಿಯಲ್ಲಿ ಪ್ರಯಾಣಿಕರು ಹೈರಾಣು

    DCSನಲ್ಲಿ ಸರ್ವರ್‌ ಸಮಸ್ಯೆ, KSRTC ಬಸ್‌ಗಳಿಗೆ ತಟ್ಟಿದ ಬಿಸಿ – ಮಡಿಕೇರಿಯಲ್ಲಿ ಪ್ರಯಾಣಿಕರು ಹೈರಾಣು

    ಮಡಿಕೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್‌ಗಳಿಗೆ ಸೋಮವಾರ ಬೆಳಗ್ಗೆಯಿಂದ DCS (ಘಟಕದ ಗಣಕಯಂತ್ರದ ತಂತ್ರಾಂಶ) ಸಾಫ್ಟ್‌ವೇರ್‌ ಸರ್ವರ್ ಸಮಸ್ಯೆಯಿಂದಾಗಿ ಪ್ರಯಾಣಿಕರು ಹೈರಾಣಾಗಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.

    ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ಮಾಡುವ DCS (ಘಟಕದ ಗಣಕಯಂತ್ರದ ತಂತ್ರಾಂಶ) ಸಾಫ್ಟ್‌ವೇರ್‌ ಸರ್ವರ್ ಸಮಸ್ಯೆಯಿಂದ ವಿವಿಧ ಜಿಲ್ಲೆಗಳಿಗೆ ಸಂಚಾರ ಮಾಡಬೇಕಿರುವ ಬಸ್‌ಗಳು ಮಡಿಕೇರಿ ಡಿಪೋದಲ್ಲೇ ಸರತಿ ಸಾಲಿನಲ್ಲಿ ನಿಂತಿವೆ. ಹೀಗಾಗಿ ಬಸ್‌ಗಳಿಗಾಗಿ ಕಾದು ಕಾದು ನೂರಾರು ಪ್ರಯಾಣಿಕರು ಹೈರಾಣಾಗಿದ್ದಾರೆ.

    ಅಲ್ಲದೇ ಸುಮಾರು 15 ಮಾರ್ಗಗಳಲ್ಲಿ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕುಶಾಲನಗರ, ಸೋಮವಾರಪೇಟೆ, ಮೈಸೂರು ಸೇರಿದಂತೆ ಹಲವೆಡೆಗಳಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇದನ್ನೂ ಓದಿ: `ಏಕ್ ಹೈ ತೊ ಸೇಫ್ ಹೈ’ ಪ್ರಧಾನಿ ಘೋಷಣೆಗೆ ಟೀಕೆ – ಮೋದಿ, ಅದಾನಿ ಫೋಟೋ ತೋರಿಸಿ ರಾಗಾ ವ್ಯಂಗ್ಯ

    ಇನ್ನೂ ಈ ಬಗ್ಗೆ ʻಪಬ್ಲಿಕ್ ಟಿವಿʼ, ಡಿಪೋ ಮ್ಯಾನೇಜರ್ ಮೆಹಬೂಬ್ ಅಲಿ ಅವರನ್ನ ಕೇಳಿದ್ರೆ, ಬೆಳಗ್ಗೆಯಿಂದಲ್ಲೂ ಇಂಟರ್ನೆಟ್‌ ಸಮಸ್ಯೆಯಿಂದ ಘಟಕದ ಗಣಕಯಂತ್ರದ ತಂತ್ರಾಂಶದಲ್ಲಿ ಸಮಸ್ಯೆಯಾಗಿತ್ತು. ಹೀಗಾಗಿ ಮೈಸೂರು ಸೋಮವಾರಪೇಟೆ ಸೇರಿದಂತೆ ಸುಮಾರು ಹದಿನೈದು ಕಡೆಗಳಲ್ಲಿ ರೂಟ್‌ ಅಪರೇಟ್ ಅಗಿಲ್ಲ. ಸದ್ಯದಲ್ಲೇ ತಾಂತ್ರಿಕದೋಷ ಸರಿಪಡಿಸಿ ಬಸ್‌ ಸಂಚಾರಕ್ಕೆ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 40% ಕಮಿಷನ್‌ ಆರೋಪದಂತೆ ಕೋವಿಡ್‌ನಲ್ಲೂ ಕ್ಲೀನ್ ಚಿಟ್ ಸಿಗಲಿದೆ: ಸೋಮಣ್ಣ ವಿಶ್ವಾಸ