Tag: Server

  • ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ – Zerodha, CDSL ಸರ್ವರ್‌ ಡೌನ್‌, ಹೂಡಿಕೆದಾರರ ಆಕ್ರೋಶ

    ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ – Zerodha, CDSL ಸರ್ವರ್‌ ಡೌನ್‌, ಹೂಡಿಕೆದಾರರ ಆಕ್ರೋಶ

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 350ಕ್ಕೂ ಹೆಚ್ಚು ಸ್ಥಾನ ಗಳಿಸಿ ಹ್ಯಾಟ್ರಿಕ್‌ ಸಾಧನೆ ಮಾಡಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಭಾರತದ ಬಾಂಬೆ ಷೇರು ಮಾರುಕಟ್ಟೆ ಸಂವೇದಿ (BSE) ಸೂಚಂಕ್ಯ  ಸೆನ್ಸೆಕ್ಸ್‌ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ.

    ಸೆನ್ಸೆಕ್ಸ್‌ ಒಂದೇ ದಿನ 2000 ಅಂಕ ದಾಟಿದ್ದರೆ ನಿಫ್ಟಿ ಒಂದೇ ದಿನ 600 ಅಂಕ ಏರಿಕೆ ಕಂಡಿದೆ. ಗಿಫ್ಟಿ ನಿಫ್ಟಿ 800 ಅಂಕ ಏರಿದೆ.


    ಸಂವೇದಿ ಸೂಚಕ್ಯ ಏರಿಕೆಯಾಗಿದ್ದರೆ ಹೂಡಿಕೆದಾರರಿಗೆ ಸಮಸ್ಯೆಯಾಗಿದೆ. ಹೆವಿ ಟ್ರಾಫಿಕ್‌ನಿಂದಾಗಿ ಬ್ರೋಕರೇಜ್‌ ಕಂಪನಿಗಳಾದ ಝೆರೋದಾ (Zerodha), ಗ್ರೋ (Groww) ಸೇರಿದಂತೆ ಹಲವರು ಕಂಪನಿಗಳ ಸರ್ವರ್‌ ಡೌನ್‌ (Server Down) ಆಗಿತ್ತು. CDSL ವೆಬ್‌ಸೈಟ್‌ ಡೌನ್‌ ಆಗಿದ್ದರಿಂದ ಹೂಡಿಕೆದಾರರಿಗೆ ಷೇರು ಮಾರಾಟ ಮಾಡಲು ಸಮಸ್ಯೆ ಆಗಿತ್ತು.ಇದನ್ನೂ ಓದಿ: ಪುಲ್ವಾಮಾದಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಸಿಕ್ಕಿಬಿದ್ದ ಲಷ್ಕರ್‌ ಟಾಪ್‌ ಕಮಾಂಡರ್ಸ್‌

    ಬಜೆಟ್‌ ಅಥವಾ ಬೇರೆ ಯಾವುದೇ ಮಹತ್ವದ ದಿನ ಬಂದಾಗ ಬ್ರೋಕರೇಜ್‌ ಕಂಪನಿಗಳ ಸರ್ವರ್‌ ಡೌನ್‌ ಆಗುವುದು ಭಾರತದಲ್ಲಿ ಸಾಮಾನ್ಯವಾಗಿದೆ. ಕಂಪನಿಗಳು ಸರ್ವರ್‌ ಸಾಮರ್ಥ್ಯವನ್ನು ಹೆಚ್ಚಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  • ಕೆಟ್ಟು ಹೋದ ಸರ್ವರ್‌ಗೆ ಪಿಂಡ ಇಟ್ಟ ಹೋರಾಟಗಾರ

    ಕೆಟ್ಟು ಹೋದ ಸರ್ವರ್‌ಗೆ ಪಿಂಡ ಇಟ್ಟ ಹೋರಾಟಗಾರ

    ಕೋಲಾರ: ಜಿಲ್ಲೆಯ ಬಹುತೇಕ ಸರ್ಕಾರಿ ಕಛೇರಿಗಳಲ್ಲಿ (Government Office) ಸರ್ವರ್ ಸಮಸ್ಯೆ (Server Down) ಎದುರಾಗಿ ಸಾರ್ವಜನಿಕರು ಇನ್ನಿಲ್ಲದ ಕಷ್ಟಪಡುತ್ತಿರುವುದನ್ನು ಗಮನಿಸಿದ ಹೋರಾಟಗಾರರೊಬ್ಬರು ಪಿಂಡ ಪ್ರದಾನ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

    ಇಂದು ಪಿತೃಪಕ್ಷವಾದ ಹಿನ್ನೆಲೆ ನೊಂದ ಹೋರಾಟಗಾರ ಸರ್ವರ್‌ಗಳಿಗೆ ಪಿಂಡ ಪ್ರದಾನ ಮಾಡಿ ಗಮನ ಸೆಳೆದಿದ್ದಾರೆ. ಪಿತೃಪಕ್ಷದ ಹಿನ್ನೆಲೆ ಸರ್ಕಾರಿ ಮಾಲೀಕತ್ವದ ಸರ್ವರ್‌ಗಳಿಗೆ ಪಿಂಡ ಪ್ರದಾನ ಮಾಡಿದ ಸಾಮಾಜಿಕ ಹೋರಾಟಗಾರನ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಕೋಲಾರದ (Kolar) ಬಂಗಾರಪೇಟೆ ತಾಲೂಕಿನ ಕರಪನಹಳ್ಳಿ ನಿವಾಸಿ ಪ್ರಸನ್ನ ಕುಮಾರ್ ಹೀಗೆ ಪಡಿತರ, ಆಧಾರ್, ಪಹಣಿ, ಮುಟೇಷನ್, ಬ್ಯಾಂಕ್ ಕಾರ್ಯಗಳಿಗೆ ಅಡ್ಡಿಯಾಗಿರುವ ಸರ್ವರ್‌ಗೆ ಪಿಂಡ ಬಿಟ್ಟು, ವಿನೂತನ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ. ಅಂತರ್ಜಾಲ ಮತ್ತು ಸರ್ವರ್‌ಗಳಿಗೆ ಎಡೆ ಇಟ್ಟು ಶ್ಲೋಕಗಳನ್ನು ಹೇಳಿ ಪಿತೃಪಕ್ಷ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಸರ್ವರ್‌ಗಳು ಸತ್ತು ಹೋಗಿವೆ, ಅದಕ್ಕಾಗಿ ಇಂದು ಪಿತೃಪಕ್ಷದ ಹಿನ್ನೆಲೆ, ಪಿಂಡ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹುಡುಗಿಯನ್ನು ದಪ್ಪ, ಪುಷ್ಠಿಯಾಗಿ ಕಾಣುವಂತೆ ಮಾಡಿ ಮದುವೆ ಫಿಕ್ಸ್ ಮಾಡು – ದೇವರಿಗೆ ಪತ್ರ ಬರೆದ ಭಕ್ತ

    ನನ್ನ ಬಳಿ ರೇಷನ್ ಕಾರ್ಡ್ ಇದೆ, ಆದ್ರೆ ಸರ್ವರ್ ಸತ್ತು ಹೋಗಿದೆ. ಮೊಬೈಲ್‌ಗೆ ಆಧಾರ್ ಲಿಂಕ್ ಮಾಡಬೇಕು, ಸರ್ವರ್ ಸತ್ತು ಹೋಗಿದೆ. ನಮ್ಮ ತಾತ ಮುತ್ತಾತ ತಂದೆಯವರ ಸಂಪಾದನೆಯ ಆಸ್ತಿ ಮ್ಯೂಟೇಷನ್ ತೆಗೋಬೇಕು, ಸರ್ವರ್ ಸತ್ತು ಹೋಗಿದೆ. ಹೀಗೆ ಯಾವುದೇ ದಾಖಲೆ ಪಡೆಯಲಾಗದೇ ಸಾರ್ವಜನಿಕರು ಪರದಾಡುವಂತಾಗಿದೆ. ಅದಕ್ಕಾಗಿ ಸತ್ತು ಹೋದ ಸರ್ವರ್‌ಗೆ ಪಿಂಡ ಪ್ರದಾನ ಮಾಡುತ್ತಿದ್ದೇನೆ ಎಂದು ಹೇಳಿ ವಿಭಿನ್ನವಾಗಿ ಸರ್ವರ್ ಸಮಸ್ಯೆ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ನಾನು Law ಓದಿದ್ದೀನಿ, ಬೊಮ್ಮಾಯಿ ಲಾ ಓದಿಲ್ಲ – ಕಾನೂನು ಕ್ರಮ ತಗೊಂಡ್ರೆ ನಾವ್ ಸುಮ್ನೆ ಇರ್ತೀವಾ?: ಸಿದ್ದರಾಮಯ್ಯ

    ಹಿಂದೆ ಕಿತ್ತುಹೋಗಿದ್ದ ಡಾಂಬರ್ ರಸ್ತೆಗೆ ಎಳ್ಳು ನೀರು ಬಿಟ್ಟು ಪ್ರತಿಭಟಿಸಿದ್ದ ಕನ್ನಡಪರ ಹೋರಾಟಗಾರರೂ ಆಗಿರುವ ಪ್ರಸನ್ನ ಕುಮಾರ್ ಅವರ ಹೋರಾಟ ಹಾಗೂ ಪಿಂಡ ಪ್ರದಾನ ಜಿಲ್ಲೆಯಲ್ಲಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್‌ ಸ್ವಾವಲಂಬನೆಯತ್ತ ಹೆಜ್ಜೆ

    ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್‌ ಸ್ವಾವಲಂಬನೆಯತ್ತ ಹೆಜ್ಜೆ

    ಮಾಸ್ಕೋ: ಉಕ್ರೇನ್‌ ವಿರುದ್ಧ ಯುದ್ಧ ನಡೆಸುತ್ತಿರುವ ಕಾರಣ ಅಮೆರಿಕ ಸೇರಿದಂತೆ ಐರೋಪ್ಯ ರಾಷ್ಟ್ರಗಳ ಒಕ್ಕೂಟದಿಂದ ಹಲವು ನಿರ್ಬಂಧಗಳ ಪರಿಣಾಮವನ್ನು ಎದುರಿಸುತ್ತಿರುವ ರಷ್ಯಾ ಈಗ ಇಂಟರ್‌ನೆಟ್‌ ವಲಯದಲ್ಲಿ ಸ್ವಾವಲಂಬಿಯಾಗುವತ್ತ ಹೆಜ್ಜೆ ಇಟ್ಟಿದೆ.

    ಯೂರೋಪ್‌ ರಾಷ್ಟ್ರಗಳ ವಿವಿಧ ಕಂಪನಿಗಳು ರಷ್ಯಾ ವಿರುದ್ಧ ಇಂಟರ್‌ನೆಟ್‌ ನಿರ್ಬಂಧ ಹೇರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಾ.11ರ ಹೊತ್ತಿಗೆ ಜಾಗತಿಕ ಇಂಟರ್‌ನೆಟ್‌ ಸಂಪರ್ಕದಿಂದ ದೂರ ಉಳಿಯಲು ರಷ್ಯಾ ಮುಂದಾಗಿದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ

    ಮಾ.11ರ ನಂತರ ಎಲ್ಲಾ ಸರ್ವರ್‌ ಮತ್ತು ಡೊಮೈನ್‌ಗಳನ್ನು ರಷ್ಯಾ ವಲಯಕ್ಕೆ ವರ್ಗಾಯಿಸಿಕೊಳ್ಳಲು ಕ್ರಮವಹಿಸಲಾಗಿದೆ. ಸೈಟ್‌ಗಳ ನೆಟ್‌ವರ್ಕ್‌ ಮೂಲಸೌಕರ್ಯದ ವಿವರವಾದ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ. ಅಗತ್ಯ ದತ್ತಾಂಶಗಳ ಸುರಕ್ಷತೆ ಹಾಗೂ ನಿರ್ವಹಣೆಗಾಗಿ ರಷ್ಯಾ ಕ್ರಮಕೈಗೊಂಡಿದೆ.

    ರಷ್ಯಾದ ಈ ಕ್ರಮದಿಂದ ಯೂರೋಪ್‌ ರಾಷ್ಟ್ರಗಳು ವಿಧಿಸಿರುವ ನಿರ್ಬಂಧದಿಂದ ಯಾವುದೇ ಗಂಭೀರ ಸಮಸ್ಯೆಯಾಗುವುದಿಲ್ಲ. ಸ್ವತಃ ರಷ್ಯಾ, ಸರ್ವರ್‌ ಮತ್ತು ಡೊಮೈನ್‌ಗಳನ್ನು ವರ್ಗಾಯಿಸಿಕೊಳ್ಳುತ್ತಿರುವುದು ಮುಂದೆ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವಾಗಲಿದೆ. ಇದನ್ನೂ ಓದಿ: ರಷ್ಯಾ- ಉಕ್ರೇನ್‌ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ

    ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ ವಿರೋಧಿಸಿ ಅಮೆರಿಕ ಅನೇಕ ನಿರ್ಬಂಧಗಳನ್ನು ವಿಧಿಸಿದೆ. ಆರ್ಥಿಕ ನಿರ್ಬಂಧವನ್ನೂ ಹೇರಲಾಗಿದೆ. ಇದಕ್ಕೆ ಅನೇಕ ರಾಷ್ಟ್ರಗಳು ಬೆಂಬಲ ಸೂಚಿಸಿವೆ. ಇದರಿಂದ ರಷ್ಯಾ ಸೇರಿದಂತೆ ಆ ದೇಶವನ್ನು ಅವಲಂಬಿಸಿರುವ ಅನೇಕ ರಾಷ್ಟ್ರಗಳು ತೊಂದರೆ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಷ್ಯಾ ಸ್ವಾವಲಂಬನೆಯತ್ತ ಹೆಜ್ಜೆ ಇರಿಸಿದೆ.

  • ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಸಮಸ್ಯೆಗಳು ಶೀಘ್ರ ಪರಿಹಾರ: ಆರ್. ಅಶೋಕ್

    ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಸಮಸ್ಯೆಗಳು ಶೀಘ್ರ ಪರಿಹಾರ: ಆರ್. ಅಶೋಕ್

    ಬೆಂಗಳೂರು: ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಶೀಘ್ರವಾಗಿ ಸರಿಪಡಿಸಬೇಕು, ಸರ್ವರ್ ಮತ್ತು ಒಟಿಪಿ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಈ ಕುರಿತಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸಾರ್ವಜನಿಕರಿಗೆ ಆಸ್ತಿ ನೋಂದಣಿಯ ಸಮಯದಲ್ಲಿ ಸರ್ವರ್ ಮತ್ತು ಒಟಿಪಿಯಿಂದ ಆಗುವ ಸಮಸ್ಯೆಗಳ ಬಗ್ಗೆ ಹಾಗೂ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿನ ಸಮಸ್ಯೆಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಲಾಗಿದೆ.

    ಶಿವರಾಮ್ ಕಾರಂತ್ ಬಡಾವಣೆಯಲ್ಲಿನ ಸರ್ಕಾರಿ ಜಮೀನನ್ನು ಬಿಡಿಎಗೆ ಹಸ್ತಾಂತರಿಸುವ ಕುರಿತಂತೆ ಚರ್ಚೆ:
    ಶಿವರಾಮ್ ಕಾರಂತ್ ಬಡಾವಣೆಯ ಮಧ್ಯೆ ಇರುವ ಸುಮಾರು 400 ಎಕರೆಗೂ ಹೆಚ್ಚು ಸರ್ಕಾರಿ ಜಮೀನುಗಳನ್ನು ಬಿಡಿಎಗೆ ಹಸ್ತಾಂತರಿಸುವ ಕುರಿತಂತೆ ಚರ್ಚೆ ನಡೆಸಿ, ಅದಕ್ಕೆ ಸರಿಯಾದ ರಸ್ತೆ ಸಂಪರ್ಕ ಕಲ್ಪಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಆದೇಶ ನೀಡಿದರು. ಸರಿಯಾದ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಿದರೆ ಮಾತ್ರ ಬಡಾವಣೆಯ ಅಭಿವೃದ್ಧಿ ಸಾಧ್ಯ, ಆ ಕಾರಣಕ್ಕೆ ಶೀಘ್ರವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

    ಈ ಸಭೆಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹಾಗೂ ಬಿಡಿಎ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಕಾಮನ್ ಸೆನ್ಸ್ ಇಲ್ಲವಾ? – ಬೆಂಬಲಿಗನ ತಲೆಗೆ ಡಿಕೆಶಿ ಏಟು

  • ಮೆಸೆಂಜರ್ ಬಳಿಕ ಫೇಸ್‍ಬುಕ್, ಇನ್‍ಸ್ಟಾಗ್ರಾಮ್ ಕೆಲಕಾಲ ಸ್ಥಗಿತ

    ಮೆಸೆಂಜರ್ ಬಳಿಕ ಫೇಸ್‍ಬುಕ್, ಇನ್‍ಸ್ಟಾಗ್ರಾಮ್ ಕೆಲಕಾಲ ಸ್ಥಗಿತ

    ನವದೆಹಲಿ: ಫೇಸ್‍ಬುಕ್ ಮೆಸೆಂಜರ್ ಸ್ಥಗಿತಗೊಂಡ ಒಂದು ದಿನದ ಬಳಿಕ ವಿಶ್ವದಲ್ಲಿ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಸೇರಿದಂತೆ ಇನ್‍ಸ್ಟಾಗ್ರಾಮ್ ಮಂಗಳವಾರ ಸಂಜೆ ಕೆಲ ಸಮಯ ಸ್ಥಗಿತಗೊಂಡಿದೆ.

    ಎರಡು ಖಾತೆಗಳು ಸ್ಥಗಿತಗೊಂಡ ಕಾರಣ ಬಳಕೆದಾರರು ಫೋಟೋ ಸೇರಿದಂತೆ ಇತರೇ ಮಾಹಿತಿಯನ್ನು ಲೋಡ್ ಮಾಡಲು ಸಮಸ್ಯೆ ಎದುರಿಸಿದರು. ಇದರೊಂದಿಗೆ 24 ಗಂಟೆಯ ಅವಧಿಯಲ್ಲಿ 2ನೇ ಬಾರಿ ಫೇಸ್‍ಬುಕ್ ಸರ್ವರ್ ಸಮಸ್ಯೆ ಎದುರಿಸುತ್ತಿದೆ.

    ಹಲವು ಬಳಕೆದಾರರಿಗೆ `ಸೇವೆ ಸ್ಥಗಿತಗೊಂಡಿದೆ’ ಎಂದು ಮಾತ್ರ ತೋರುತ್ತಿತ್ತು. ಈ ಕುರಿತು ಹಲವು ಮಂದಿ ತಮ್ಮ ಸಮಸ್ಯೆ ತಿಳಿಸಿ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಜಗತ್ತಿನ ಶೇ.48 ಮಂದಿ ಈ ಸಮಸ್ಯೆ ಎದುರಿಸಿದ್ದಾರೆ. ಶೇ.35 ಮಂದಿ ಲಾಗ್‍ಇನ್ ಹಾಗೂ ಶೇ.15 ಮಂದಿ ಫೋಟೋ ಲೋಡಿಂಗ್‍ನಲ್ಲಿ ಸಮಸ್ಯೆ ಎದುರಿಸಿದ್ದಾರೆ.

    ಆರಂಭದಲ್ಲಿ ಫೇಸ್‍ಬುಕ್ ಸಮಸ್ಯೆ ಕಾಣಿಸಿಕೊಂಡ ವೇಳೆ ಅಂರ್ತಜಾಲದ ಸಮಸ್ಯೆ ಎನ್ನಲಾಗಿತ್ತು. ಭಾರತ ಮತ್ತು ಅಮೆರಿಕ, ಐರ್ಲೆಂಡ್, ಇಂಗ್ಲೆಂಡ್, ಪೋಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳ ಬಳಕೆದಾರರು ಸಮಸ್ಯೆ ಎದುರಿಸಿದ್ದಾರೆ. ಆದರೆ ಈ ಕುರಿತು ಸಂಸ್ಥೆ ಅಧಿಕೃತ ಹೇಳಿಕೆ ನೀಡಿಲ್ಲ.

    https://twitter.com/TRIVIASAHYO/status/1064868555676704768?

    https://twitter.com/TRIVIASAHYO/status/1064867016186699777?

    https://twitter.com/kkijiyong/status/1064882270283096065

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews