Tag: servant

  • ಕಳ್ಳನೆಂದು ಶಂಕಿಸಿ ಹತ್ಯೆ- ಇಬ್ಬರ ಬಂಧನ

    ಕಳ್ಳನೆಂದು ಶಂಕಿಸಿ ಹತ್ಯೆ- ಇಬ್ಬರ ಬಂಧನ

    ಚಂಡೀಗಢ: ಕಳ್ಳನೆಂದು ಶಂಕಿಸಿ ಥಳಿಸಿ ವ್ಯಕ್ತಿಯೊಬ್ಬನ ಹತ್ಯೆಗೆ ಕಾರಣರಾದ ತೋಟದ ಮಾಲೀಕ (Owner)  ಹಾಗೂ ಆತನ ಸಹಾಯಕನನ್ನು (Servant) ಗುರುಗ್ರಾಮ್ (Gurugram) ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಘಾಟಾ ಗ್ರಾಮದ ಅಂಕಿತ್ ಹಾಗೂ ಆತನ ಸಹಾಯಕ ಮಧ್ಯಪ್ರದೇಶದ (Madhya Pradesh) ಸಾಗರ್ ಮೂಲದವನು ಎಂದು ತಿಳಿದು ಬಂದಿದೆ. ಆರೋಪಿಗಳ ವಿಚಾರಣೆ ವೇಳೆ, ತೋಟದಲ್ಲಿ ಆಗಾಗ ಕಳ್ಳತನವಾಗುತ್ತಿತ್ತು. ಹಾಗಾಗಿ ನಾನು ಮತ್ತು ನನ್ನ ಸಹಾಯಕ ಕಾವಲು ಆರಂಭಿಸಿದ್ದೆವು ಎಂದು ಅಂಕಿತ್ ಹೇಳಿದ್ದಾನೆ.ಇದನ್ನೂ ಓದಿ: ಮತದಾರರಿಗೆ ನಕಲಿ ಬಾಂಡ್ ಆಮಿಷ ಪ್ರಕರಣ – ಜೆಡಿಎಸ್ ಶಾಸಕ ಗೌರಿಶಂಕರಗೆ ಅನರ್ಹತೆಯ ಭೀತಿ

    ಮಂಗಳವಾರ ತಡರಾತ್ರಿ ತೋಟದ ಬಳಿಗೆ ಬಂದಿದ್ದ ಇಬ್ಬರನ್ನು ಕಳ್ಳರೆಂದು ಶಂಕಿಸಿ ಮನೆಯಲ್ಲಿ ಕೂಡಿ ಹಾಕಿ ಆರೋಪಿಗಳು ಥಳಿಸಿದ್ದರು. ಥಳಿತಕ್ಕೊಳಗಾದ ಒಬ್ಬ ಬುಧವಾರ ಬೆಳಗ್ಗೆ ಮೃತಪಟ್ಟಿದ್ದ. ಮೃತಪಟ್ಟ ವ್ಯಕ್ತಿಯನ್ನು ಬಂಗಾಳ ಮೂಲದ ರಫಿಗುಲ್ ಹಾಗೂ ಗಾಯಗೊಂಡಿರುವ ಮತ್ತೊಬ್ಬನನ್ನು ಇಸ್ರುದ್ದೀನ್ ಎಂದು ಗುರುತಿಸಲಾಗಿದೆ.

    ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಲಸಿಗರ ಘರ್ ವಾಪಸಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‍ಗೆ ಆತಂಕ- ಟಿಕೆಟ್ ಫೈನಲ್ ಮಾಡಲು ಪರದಾಟ

  • ಫ್ಯಾಷನ್ ಡಿಸೈನರ್, ಸಹಾಯಕನ ಕೊಲೆ- ಮೂವರು ಅರೆಸ್ಟ್

    ಫ್ಯಾಷನ್ ಡಿಸೈನರ್, ಸಹಾಯಕನ ಕೊಲೆ- ಮೂವರು ಅರೆಸ್ಟ್

    ನವದೆಹಲಿ: ಫ್ಯಾಷನ್ ಡಿಸೈನರ್ ಹಾಗೂ ಸಹಾಯಕನನ್ನು ಬರ್ಬರವಾಗಿ ಕೊಲೆಗೈದ ಘಟನೆ ದೆಹಲಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ.

    ಫ್ಯಾಷನ್ ಡಿಸೈನರ್ ಮಾಲಾ ಲಖನಿ (53) ಹಾಗೂ ಆಕೆಯ ಸೇವಕ ಬಹದ್ದೂರ್ (50) ಹತ್ಯೆಯಾದವರು. ಫ್ಯಾಷನ್ ಡಿಸೈನರ್ ಟೈಲರ್ ರಾಹುಲ್ ಅನ್ವರ್ ಸೇರಿದಂತೆ ಮೂವರು ಹತ್ಯೆ ಮಾಡಿದ ಆರೋಪಿಗಳು.

    ವಸಂತ್ ಕುಂಜಾ ಪ್ರದೇಶದ ಮಾಲಾ ಅವರ ಹಳೆಯ ನಿವಾಸದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಚಾಕುನಿಂದ ಇರಿದು ಕೊಲೆ ಮಾಡಿದ್ದಾರೆ. ಪ್ರಕರಣದ ಕುರಿತು ಇಂದು ಬೆಳಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮಾಲಾ ಲಖನಿ ಹಾಗೂ ಬಹದ್ದೂರ್ ಮೃತದೇವು ರಕ್ತದ ಮಡವಿನಲ್ಲಿ ಬಿದ್ದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ರಾಹುಲ್ ಅನ್ವರ್ ಫ್ಯಾಷನ್ ಡಿಸೈನರ್ ವರ್ಕ್‍ಶಾಪ್ ನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದು, ತನ್ನ ಇಬ್ಬರು ಸಂಬಂಧಿಕರ ಜೊತೆ ಸೇರಿ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅಜಯ್ ಚೌಧರಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews