Tag: Serum Institute of India

  • ಆರ್‌ಸಿಬಿ ಸೇಲ್‌ – ಪುಣೆಯ ಶತಕೋಟ್ಯಧಿಪತಿ ಪೂನಾವಾಲಾ ತೆಕ್ಕೆಗೆ ಹೋಗುತ್ತಾ ಬೆಂಗಳೂರು?

    ಆರ್‌ಸಿಬಿ ಸೇಲ್‌ – ಪುಣೆಯ ಶತಕೋಟ್ಯಧಿಪತಿ ಪೂನಾವಾಲಾ ತೆಕ್ಕೆಗೆ ಹೋಗುತ್ತಾ ಬೆಂಗಳೂರು?

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಮಾರಾಟವಾಗುತ್ತಾ? ಕೋವಿಡ್‌ ಲಸಿಕೆ (Covid Vaccine) ಕೋವಿಶೀಲ್ಡ್‌ ತಯಾರಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನವಾಲಾ (Adar Poonawalla) ಖರೀದಿಸುತ್ತಾರಾ ಈ ಪ್ರಶ್ನೆ ಈಗ ಎದ್ದಿದೆ.

    ಹೌದು. ಆರ್‌ಸಿಬಿ ಷೇರನ್ನು ಮಾರಾಟ ಮಾಡಲು ಡಿಯಾಜಿಯೊ ಮುಂದಾಗಿದೆ ಎಂದು ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಸಾಮಾಜಿಕ ಜಾಲತಾಣದಲ್ಲಿ ಬಾಂಬ್‌ ಸಿಡಿಸಿದ್ದಾರೆ. ಎಕ್ಸ್‌ನಲ್ಲಿ ಸ್ಫೋಟಕ ವಿಚಾರ ಬಹಿರಂಗ ಪಡಿಸಿದ ಬೆನ್ನಲ್ಲೇ ಅದಾರ್ ಪೂನವಾಲಾ ಆರ್‌ಸಿಬಿ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

    ಮೋದಿ ಹೇಳಿದ್ದೇನು?
    ಆರ್‌ಸಿಬಿ ಫ್ರಾಂಚೈಸಿ ಮಾರಾಟದ ಬಗ್ಗೆ ಇಲ್ಲಿ ಸಾಕಷ್ಟು ವದಂತಿಗಳಿತ್ತು. ನಂತರ ಈ ವದಂತಿಗಳನ್ನು ನಿರಾಕರಿಸಲಾಗಿತ್ತು. ಆದರೆ ಮಾಲೀಕರು ಅಂತಿಮವಾಗಿ ಮಾರಾಟ ಮಾಡಲು ಮುಂದಾಗಿದ್ದಾರೆ. ಕಳೆದ ಬಾರಿ ಚಾಂಪಿಯನ್‌ ಆಗಿರುವ ತಂಡಕ್ಕೆ ಅತಿ ಹೆಚ್ಚು ಅಭಿಮಾನಿಗಳಿದ್ದಾರೆ ಮತ್ತು ಅತ್ಯುತ್ತಮ ಮ್ಯಾನೆಜ್ಮೆಂಟ್‌ ತಂಡವಿದೆ. ಫ್ರಾಂಚೈಸಿಗಳ ಪೈಕಿ ಅತ್ಯುತ್ತಮ ತಂಡ ಆಗಿರುವ ಕಾರಣ ದೊಡ್ಡ ಜಾಗತಿಕ ಹೂಡಿಕೆದಾರರು ಭಾರತದ ಹೂಡಿಕೆ ತಂತ್ರವಾಗಿ ಹೂಡಿಕೆ ಮಾಡಲು ಮುಂದಾಗಿವೆ. ಇದಕ್ಕಿಂತ ಉತ್ತಮ ಹೂಡಿಕೆ ಅವಕಾಶ ಇನ್ನೊಂದಿಲ್ಲ ಎಂದು ನಾನು ಭಾವಿಸುತ್ತೇನೆ. ಮಾರಾಟದ ಮೊತ್ತ ದಾಖಲೆಯಾಗಲಿದೆ. ಇದು ಐಪಿಎಲ್ ವೇಗವಾಗಿ ಬೆಳೆಯುತ್ತಿರುವ ಗ್ಲೋಬಲ್ ಸ್ಪೋರ್ಟಿಂಗ್ ಲೀಗ್ ಮಾತ್ರವಲ್ಲದೆ ಅತ್ಯಂತ ಮೌಲ್ಯಯುತವಾಗಿದೆ ಎಂದು ತೋರಿಸುತ್ತದೆ. ಎಲ್ಲರಿಗೂ ಶುಭವಾಗಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಮತ್ತೆ ಹೊಸ ನಾಟಕ- ಕಪ್‌ ನೀಡಲು ಹೊಸ ಷರತ್ತು ಮುಂದಿಟ್ಟ ನಖ್ವಿ

     

     

    ಲಲಿತ್‌ ಮೋದಿ ಬಾಂಬ್‌ ಸಿಡಿಸಿದ ಬೆನ್ನಲ್ಲೇ ಆರ್‌ಸಿಬಿ ಖರೀದಿಸಲು ಅದರ್ ಪೂನವಾಲಾ ಮುಂದಾಗಿದ್ದು ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ. ಡಿಯಾಜಿಯೊ ಸದ್ಯ ಸಂಭಾವ್ಯ ಸಲಹೆಗಾರರೊಂದಿಗೆ ಚರ್ಚೆ ನಡೆಸಿದೆ ಮತ್ತು 2 ಬಿಲಿಯನ್ ಡಾಲರ್‌ ಮೌಲ್ಯಮಾಪನವನ್ನು ಬಯಸುತ್ತಿದೆ ಮತ್ತು ಹೂಡಿಕೆದಾರರಿಂದ ಒಂದು ಬಾರಿಯ ಪಾವತಿಯನ್ನು ಬಯಸುತ್ತಿದೆ ಎನ್ನಲಾಗುತ್ತಿದೆ.

    ಈ ಹಿಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿದ ಬಳಿಕ ಆರ್‌ಸಿಬಿ ಫ್ರಾಂಚೈಸಿಯಲ್ಲಿರುವ ತನ್ನ ಪಾಲನ್ನು ಮಾರಾಟ ಮಾಡಲು ಡಿಯಾಜಿಯೊ (Diageo) ಮುಂದಾಗಿದೆ ಎಂದು ವರದಿಯಾಗಿತ್ತು. ವರದಿ ಬೆನ್ನಲ್ಲೇ ಬಾಂಬೆ ಷೇರು ಮಾರುಕಟ್ಟೆಗೆ ಡಿಯಾಜಿಯೊದ ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್, ಆರ್‌ಸಿಬಿಯ ಸಂಭಾವ್ಯ ಪಾಲು ಮಾರಾಟಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳ ಊಹಾತ್ಮಕ ಸ್ವರೂಪದ್ದಾಗಿವೆ. ಅಂತಹ ಯಾವುದೇ ಚರ್ಚೆಗಳನ್ನು ನಡೆದಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇದನ್ನೂ ಓದಿ: 1 ಗಂಟೆ ಹೈಡ್ರಾಮಾ, ಟ್ರೋಫಿ ಜೊತೆ ಓಡಿದ ನಖ್ವಿ – ಮಧ್ಯರಾತ್ರಿ ಏನಾಯ್ತ? ಇಲ್ಲಿದೆ ಪೂರ್ಣ ವಿವರ

    ಡಿಯಾಜಿಯೊ ತೆಕ್ಕೆಗೆ ಆರ್‌ಸಿಬಿ ಹೋಗಿದ್ದು ಹೇಗೆ?
    2008 ರಲ್ಲಿ ವಿಜಯ್‌ ಮಲ್ಯ ಒಡೆತನದ ಯುನೈಟೆಡ್‌ ಸ್ಪೀರಿಟ್ಸ್‌ ಆರ್‌ಸಿಬಿ ತಂಡವನ್ನು 111.6 ಮಿಲಿಯನ್‌ ಡಾಲರ್‌(ಆಗಿನ 700-800 ಕೋಟಿ ರೂ.) ನೀಡಿ ಖರೀದಿಸಿತ್ತು. 2012ರಲ್ಲಿ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಕಾರ್ಯಾಚರಣೆ ನಿಲ್ಲಿಸಿತು. ಉದ್ಯಮದಲ್ಲಿ ನಷ್ಟವಾದ ಕಾರಣ ಮಲ್ಯ ಅವರ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯನ್ನು ಡಿಯಾಜಿಯೊ ಸ್ವಾಧೀನಪಡಿಸಿಕೊಂಡಿತು. ಆರ್‌ಸಿಬಿಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಷೇರುಗಳು ಇದ್ದ ಕಾರಣ ಅದರ ಮಾಲೀಕತ್ವ ಡಿಯಾಜಿಯೊಗೆ (Diageo) ಹೋಗಿತ್ತು.

  • ವೇಗವಾಗಿ ಹರಡುವ ಚೀನಾದ ಕೋವಿಡ್ ಹೊಸ ತಳಿ ಭಾರತದಲ್ಲಿ ಪತ್ತೆ – ರಾಜ್ಯಗಳಲ್ಲಿ ಹೈ ಅಲರ್ಟ್

    ವೇಗವಾಗಿ ಹರಡುವ ಚೀನಾದ ಕೋವಿಡ್ ಹೊಸ ತಳಿ ಭಾರತದಲ್ಲಿ ಪತ್ತೆ – ರಾಜ್ಯಗಳಲ್ಲಿ ಹೈ ಅಲರ್ಟ್

    ನವದೆಹಲಿ: ಚೀನಾದ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ (Corona Virus) ಓಮಿಕ್ರಾನ್‌ನ ಉಪತಳಿ ಬಿಎಫ್.7 (BF.7 Variant) ಸೋಂಕಿನ 4 ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ.

    ಭಾರತದಲ್ಲಿ ಒಟ್ಟು ನಾಲ್ಕು ಪ್ರಕರಣಗಳು ವರದಿಯಾಗಿದ್ದು, ಗುಜರಾತ್ (Gujarat) ಹಾಗೂ ಒಡಿಶಾ (Odisha) ರಾಜ್ಯಗಳಲ್ಲಿ ತಲಾ ಎರಡು ಪ್ರಕರಣಗಳು ವರದಿಯಾಗಿವೆ. ಬಿಎಫ್.7 ಸೋಂಕಿನ ಮೊದಲ ಪ್ರಕರಣ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ಪತ್ತೆಯಾಯಿತು. ಗುಜರಾತ್ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರವು (Serum Institute of India) ಈ ಪ್ರಕರಣವನ್ನು ಪತ್ತೆ ಮಾಡಿತು. 2ನೇ ಪ್ರಕರಣವೂ ಗುಜರಾತ್‌ನಲ್ಲಿ ಪತ್ತೆಯಾಗಿದ್ದರೆ, ಉಳಿದೆರಡು ಪ್ರಕರಣಗಳು ಒಡಿಶಾದಲ್ಲಿ ವರದಿಯಾಗಿವೆ.

    ಚೀನಾದಲ್ಲಿ ಸದ್ಯ ಅಧಿಕ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವುದಕ್ಕೆ ವೈರಸ್‌ನ ಈ ಬಿಎಫ್.7 ಉಪತಳಿಯೇ ಕಾರಣ ಎಂದು ಮೂಲಗಳು ತಿಳಿಸಿವೆ. ಯುಎಸ್, ಯುಕೆ, ಯುರೋಪಿಯನ್ ದೇಶಗಳಾದ ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಹಾಗೂ ಡೆನ್ಮಾರ್ಕ್ ದೇಶಗಳಲ್ಲೂ ಬಿಫ್.7 ಉಪತಳಿ ಪತ್ತೆಯಾಗಿದ್ದು, ಆತಂಕ ಹೆಚ್ಚಿಸಿದೆ. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್‌ ಸುನಾಮಿಗೆ ಕಾರಣ ಏನು?

    ಚೀನಾದಲ್ಲಿ (China) ಓಮಿಕ್ರಾನ್‌ನ ಉಪತಳಿ ಬಿಎಫ್.7 ಸೋಂಕು ವೇಗವಾಗಿ ಹರಡುತ್ತಿದೆ. ಚೀನಾ ಪ್ರಜೆಗಳ ದೇಹದಲ್ಲಿ ಈ ಮೊದಲು ಕಾಣಿಸಿಕೊಂಡ ಕೊರೊನಾ ಸೋಂಕಿನಿಂದಾಗಿ ವೃದ್ಧಿಸಿರುವ ರೋಗನಿರೋಧಕ ಶಕ್ತಿ ಕಡಿಮೆ ಮಟ್ಟದಲ್ಲಿ ಇರಬಹುದು. ಇಲ್ಲವೇ, ಅವರಿಗೆ ನೀಡಿರುವ ಲಸಿಕೆಯು ಪರಿಣಾಮಕಾರಿಯಾಗಿರದೇ ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕೊರೊನಾ ಆರ್ಭಟಕ್ಕೆ ಮತ್ತೆ ನಲುಗಿದ ಚೀನಾ – ಆಸ್ಪತ್ರೆಗಳೆಲ್ಲಾ ಫುಲ್

    ಭಾರತದಲ್ಲಿ ಈಗಾಗಲೇ ಎಲ್ಲ ರಾಜ್ಯಗಳೂ ಅಲರ್ಟ್ ಆಗಿದ್ದು, ಸಾರ್ವಜನಿಕರು ಜಾಗೃತವಾಗಿರುವಂತೆ ಸೂಚಿಸಿವೆ. ಜನರು ಗುಂಪಿನಲ್ಲಿದ್ದಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಉಪತಳಿಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ಜಿನೋಮ್ ಸಿಕ್ವೆನ್ಸಿಂಗ್ ಲ್ಯಾಬ್‌ಗೆ ಮಾದರಿ ಕಳುಹಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೇಳಿದೆ.

    ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 129 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3,408ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ ಒಂದು ಸಾವಿನ ಪ್ರಕರಣ ದಾಖಲಾಗಿದೆ.

    Live Tv

    [brid partner=56869869 player=32851 video=960834 autoplay=true]

  • ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಮಸ್ಕ್

    ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಮಸ್ಕ್

    ವಾಷಿಂಗ್ಟನ್: ಟ್ವಿಟ್ಟರ್ ಖರೀದಿಗೆ ಮುಂದಾಗಿದ್ದ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟರ್‌ನಲ್ಲಿನ ನಕಲಿ ಖಾತೆ (ಸ್ಪ್ಯಾಮ್ ಖಾತೆ) ಗಳಿಗೆ ಸಂಬಂಧಿಸಿದ ವಿವರಗಳು ಬಾಕಿ ಉಳಿದಿವೆ ಎಂಬ ಕಾರಣದಿಂದ ಸದ್ಯಕ್ಕೆ ಟ್ವಿಟ್ಟರ್ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಹೇಳಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಮಸ್ಕ್, ಷೇರುಪೇಟೆ ಸಾರ್ವಜನಿಕ ವಹಿವಾಟು ಆರಂಭಕ್ಕೂ ಮುನ್ನ (ಪ್ರೀ-ಮಾರ್ಕೆಟ್ ಟ್ರೇಡಿಂಗ್) ಟ್ವಿಟರ್‌ನ ಷೇರು ಬೆಲೆ ಶೇ.18ರಷ್ಟು ಕುಸಿದಿದೆ. ಇದರೊಂದಿಗೆ ಟೆಸ್ಲಾ ಶೇ.5 ರಷ್ಟು ಜಿಗಿದಿದೆ ಎಂದು ತಮ್ಮ ಟ್ವೀಟ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಬಗೆಗಿನ ನಂಬಿಕೆ ಬದಲಾಗಿಲ್ಲ: ಮಸ್ಕ್‌ಗೆ ಕೇಂದ್ರ ಪ್ರತಿಕ್ರಿಯೆ

    _Elon Musk

    ನಿತ್ಯದ ಟ್ವಿಟ್ಟರ್ ಬಳಕೆದಾರರ ಪೈಕಿ ಶೇ.5 ಕ್ಕಿಂತ ಕಡಿಮೆ ನಕಲಿ ಅಥವಾ ಸ್ಪ್ಯಾಮ್ ಖಾತೆಗಳಿರುವುದಾಗಿ ಟ್ವಿಟ್ಟರ್ ಈ ಹಿಂದೆ ಹೇಳಿತ್ತು. ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 22.9 ಕೋಟಿ ಬಳಕೆದಾರರಿಗೆ ಜಾಹೀರಾತು ಸೇವೆ ಒದಗಿಸಿತ್ತು. ಆದ್ರೆ, `ಸ್ಪ್ಯಾಮ್ ಬಾಟ್ಸ್’ (ನಕಲಿ ಖಾತೆಗಳ ಮೂಲಕ ಟ್ವೀಟ್‌ಗಳನ್ನು ಹಂಚುವ ತಾಂತ್ರಿಕ ವ್ಯವಸ್ಥೆ)ಯನ್ನು ಮೊದಲು ತೆರವುಗೊಳಿಸುವಂತೆ ಮಸ್ಕ್ ಹೇಳಿದ್ದರು. ಇದನ್ನೂ ಓದಿ: 3.36 ಲಕ್ಷ ಕೋಟಿಗೆ ಟ್ವಿಟ್ಟರ್‌ ಡೀಲ್‌ ಮಾಡಿದ ಎಲಾನ್‌ ಮಸ್ಕ್‌

    ಮಸ್ಕ್ ಅವರು ಸಾಮಾಜಿಕ ಮಾಧ್ಯಮ `ಟ್ವಿಟರ್’ ಕಂಪನಿಯನ್ನು 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂ.) ಮೊತ್ತಕ್ಕೆ ಖರೀದಿಸಲು ಮುಂದಾಗಿದ್ದಾರೆ. ಅದಕ್ಕೆ ಅಗತ್ಯವಿರುವ ಹಣ ಸಂಗ್ರಹಿಸಲು ಟೆಸ್ಲಾ ಕಂಪನಿಯ 52.3 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ.

    ಅಕಸ್ಮಾತ್ ಟ್ವಿಟರ್ ಖರೀದಿಯಿಂದ ಹಿಂದೆ ಸರಿದರೆ, ಭಾರತದಲ್ಲಿ ಟೆಸ್ಲಾ ಕಾರು ತಯಾರಿಕೆಗೆ ಹೂಡಿಕೆ ಮಾಡುವಂತೆ ಎಲಾನ್ ಮಸ್ಕ್ ಅವರಿಗೆ ಸೀರಂ ಇನ್‌ಸ್ಟಿಟ್ಯೂಟ್‌ನ (ಎಸ್‌ಐಐ) ಸಿಇಒ ಆದಾರ್ ಪೂನಾವಾಲಾ ಇತ್ತೀಚೆಗಷ್ಟೇ ತಿಳಿಸಿದ್ದರು. ಇದನ್ನೂ ಓದಿ: ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಕೊನೆಯ ಹಂತದಲ್ಲಿದೆ ಡೀಲ್‌ ಮಾತುಕತೆ

    ಹಿಂದಿನಿಂದಲೂ ಟ್ವಿಟರ್‌ಗೆ ಹಲವು ಬದಲಾವಣೆಗಳನ್ನು ಸೂಚಿಸುತ್ತಿರುವ ಮಸ್ಕ್, ವಾಣಿಜ್ಯ ಬಳಕೆ ಮತ್ತು ಸರ್ಕಾರದ ಖಾತೆಗಳಿಗೆ ಟ್ವಿಟರ್ ಶುಲ್ಕ ವಿಧಿಸುವುದಾಗಿ ಪ್ರಕಟಿಸಿದ್ದರು. ಸಾಮಾನ್ಯ ಬಳಕೆದಾರರಿಗೆ ಟ್ವಿಟರ್ ಉಚಿತವಾಗಿಯೇ ಇರಲಿದೆ ಎಂದಿರುವ ಅವರು, ವಾಣಿಜ್ಯ ಮತ್ತು ಸರ್ಕಾರದ ಖಾತೆಗಳಿಗೆ ಅಲ್ಪ ಮೊತ್ತದ ಶುಲ್ಕ ವಿಧಿಸಬಹುದು ಎಂದು ಹೇಳಿದ್ದರು. ಇದೀಗ ತಾತ್ಕಾಲಿಕ ತಡೆ ಘೋಷಿಸಿದ್ದಾರೆ.

  • ಭಾರತದ 2ನೇ ಲಸಿಕೆ ತುರ್ತು ಬಳಕೆಗೆ WHO ಅನುಮೋದನೆ

    ಭಾರತದ 2ನೇ ಲಸಿಕೆ ತುರ್ತು ಬಳಕೆಗೆ WHO ಅನುಮೋದನೆ

    ನವದೆಹಲಿ: ಭಾರತದ ಮತ್ತೊಂದು ಲಸಿಕೆ ಕೊವೊವ್ಯಾಕ್ಸ್‌ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ.

    ನೋವಾವ್ಯಾಕ್ಸ್‌ ಮೂಲಕ ನೀಡಲಾದ ಪರವಾನಗಿ ಅಡಿಯಲ್ಲಿ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಸಂಸ್ಥೆ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದ ಐವರು ವಿದ್ಯಾರ್ಥಿಗಳಿಗೆ ಓಮಿಕ್ರಾನ್‌

    ಕಡಿಮೆ ಆದಾಯದ ದೇಶಗಳಲ್ಲಿ ಲಸಿಕೆ ವಿತರಣೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೊವೊವ್ಯಾಕ್ಸ್‌ಗೆ ಡಬ್ಲ್ಯೂಎಚ್‌ಒ ಅನುಮೋದನೆ ನೀಡಿದೆ. ತುರ್ತು ಬಳಕೆಗೆ ಅನುಮೋದನೆ ಪಡೆದ 9ನೇ ಲಸಿಕೆ ಇದಾಗಿದೆ.

    ಕೊವೊವ್ಯಾಕ್ಸ್‌ ಅನ್ನು ಗುಣಮಟ್ಟ, ಸುರಕ್ಷತೆ, ಪರಿಣಾಮಕಾರಿ, ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ (ಡಿಸಿಜಿಐ) ನಡೆಸಿದ ತಪಾಸಣೆ ಆಧಾರದ ಮೇಲೆ ಬಳಕೆಗೆ ಪರಿಗಣಿಸಲಾಗಿದೆ. ಇದನ್ನೂ ಓದಿ: ಅಮಿತ್ ಶಾ ಹೆಸರಿನಲ್ಲಿ ನಕಲಿ ಲಸಿಕಾ ಪ್ರಮಾಣಪತ್ರ

    ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸಿದ ಎರಡನೇ ಲಸಿಕೆ ಕೊವೊವ್ಯಾಕ್ಸ್‌ ಆಗಿದೆ. ಅಮೆರಿಕದ ಆಸ್ಟ್ರಾಜೆನೆಕಾ ಸಂಸ್ಥೆ ಸಹಯೋಗದಿಂದ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸಂಸ್ಥೆ ಈ ಹಿಂದೆ ಕೊವಿಶೀಲ್ಡ್‌ ಲಸಿಕೆ ತಯಾರಿಸಿದೆ.

  • ಜನವರಿ ವೇಳೆಗೆ ಮಕ್ಕಳ ಲಸಿಕೆ ಲಭ್ಯವಾಗಬಹುದು: ಆದಾರ್ ಪೂನಾವಾಲಾ

    ಜನವರಿ ವೇಳೆಗೆ ಮಕ್ಕಳ ಲಸಿಕೆ ಲಭ್ಯವಾಗಬಹುದು: ಆದಾರ್ ಪೂನಾವಾಲಾ

    ನವದೆಹಲಿ: ಮಕ್ಕಳ ಮೇಲೆ ನಡೆಯುತ್ತಿರುವ ಕೊವೊವ್ಯಾಕ್ಸ್ ಲಸಿಕೆ ಪ್ರಯೋಗ ಸುಗಮವಾಗಿದ್ದು, ಅಂದುಕೊಂಡಂತೆ ಆದರೆ ಜನವರಿ ಅಥಾವ ಫೆಬ್ರವರಿಯಲ್ಲಿ ಬಳಕೆಗೆ ಮುಕ್ತವಾಗಬಹುದು ಎಂದು ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲಾ ತಿಳಿಸಿದ್ದಾರೆ.

    ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತದಲ್ಲಿ ವ್ಯಾಕ್ಸಿನ್ ಪ್ರಯೋಗ ಹಂತದಲ್ಲಿದ್ದು, ಬಹಳಷ್ಟು ಸ್ವಯಂ ಸೇವಕರಿಗೆ ನೀಡಲಾಗಿದೆ. ಅದನ್ನು ವಿಮರ್ಶೆ ಮಾಡಲಾಗುತ್ತಿದೆ. ಡಿಸೆಂಬರ್ ವೇಳೆಗೆ ವ್ಯಾಕ್ಸಿನ್ ಪರಿಣಾಮಗಳ ಬಗ್ಗೆ ನಡೆಯುತ್ತಿರುವ ಪರಾಮರ್ಶೆ ಅಂತ್ಯವಾಗಲಿದ್ದು, ಬಳಿಕ ಸಾರ್ವಜನಿಕ ಬಳಕೆಗೆ ಮುಕ್ತ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊಸ ಶಿಕ್ಷಣ ನೀತಿಯಲ್ಲಿ ಕಾಂಬಿನೇಶನ್‍ನಿಂದ ಕೋರ್ಸ್, ಸಬ್ಜೆಕ್ಟ್‌ಗೆ ಬದಲಾಯಿಸಲಾಗಿದೆ: ಅಶ್ವಥ್ ನಾರಾಯಣ್

    3-4 ತಿಂಗಳ ಅವಧಿಯಲ್ಲಿ ವ್ಯಾಕ್ಸಿನ್ ಪ್ರತಿಕ್ರಿಯೆಯನ್ನು ಅಧ್ಯಯನ ಮಾಡಲಾಗುತ್ತಿದೆ. ವ್ಯಾಕ್ಸಿನ್ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ನಡೆದಿದ್ದು, ಹಂತ ಹಂತವಾಗಿ ಈ ಬಗ್ಗೆ ವರದಿಗಳು ಬರಲಿದೆ ಎಂದು ಪೂನಾವಾಲಾ ಹೇಳಿದರು.

    ಅಮೇರಿಕದ ಲಸಿಕೆ ತಯಾರಕ ಸಂಸ್ಥೆ ನೊವೊವಾಕ್ಸ್ ಇಂಕ್ ಮಕ್ಕಳಿಗಾಗಿ ಓಗಿಘಿ-ಅoಗಿ2373 ಹೆಸರಿನ ಲಸಿಕೆ ಅಭಿವೃದ್ಧಿ ಪಡಿಸಿದೆ. ಇದು ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ, ಪ್ರಯೋಗಗಳನ್ನು ನಡೆಸಲಾಗುತ್ತಿದೆ. 2 ರಿಂದ 17 ವರ್ಷದ ಮಕ್ಕಳ ಮೇಲೆ ಪ್ರಯೋಗ ನಡೆಯುತ್ತಿದ್ದು, ದೇಶದ ಹತ್ತು ಪ್ರದೇಶಗಳಲ್ಲಿ 910 ಸ್ವಯಂ ಸೇವಕರು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.

  • ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ ಆದಾರ್ ಪೂನಾವಾಲಾ

    ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ ಆದಾರ್ ಪೂನಾವಾಲಾ

    ಮುಂಬೈ: ಇಂಗ್ಲೆಂಡ್‍ಗೆ ತೆರಳಿದ್ದ ಸೀರಂ ಸಂಸ್ಥೆಯ ಸಿಇಓ ಆದಾರ್ ಪೂನಾವಾಲಾ ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ್ದಾರೆ.

    ಭಾರತದಲ್ಲಿ ಕೊರೊನಾ ಎರಡನೇ ಅಲೆ ಸ್ಫೋಟಗೊಂಡ ವೇಳೆಯೇ ಆದಾರ್ ಪೂನಾವಾಲಾ ಇಂಗ್ಲೆಂಡ್‍ಗೆ ತೆರಳಿದ್ದರು. ಬೆದರಿಕೆ ಮತ್ತು ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪೂನಾವಾಲಾ ಲಂಡನ್ ಸೇರಿದ್ದರು. ಇಂದು ಬೆಳಗ್ಗೆ ಪೂನಾವಾಲಾ ಸಂಸ್ಥೆಯ ಖಾಸಗಿ ಜೆಟ್ ಪುಣೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಅಲ್ಲಿಂದ ಖಾಸಗಿ ಹೆಲಿಕಾಪ್ಟರ್ ಮೂಲಕ ನೇರವಾಗಿ ಆದಾರ್ ಪೂನಾವಾಲಾ ಸೀರಂ ಸಂಸ್ಥೆಗೆ ತೆರಳಿದ್ದಾರೆ.

    ಭಾರತದ ಕೊರೊನಾ ಲಸಿಕಾಕರಣ ಅಭಿಯಾನದಲ್ಲಿ ಸೀರಂ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ. ಕೊರೊನಾ ಸಂಜೀವಿನಿ ಕೋವಿಶೀಲ್ಡ್ ಲಸಿಕೆಯನ್ನ ಸೀರಂ ಉತ್ಪಾದನೆ ಮಾಡುತ್ತಿದೆ. ಮೇನಲ್ಲಿ ಕೊರೊನಾ ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದ ವೇಳೆ ದಿಢೀರ್ ಪೂನಾವಾಲಾ ಲಂಡನ್ ಗೆ ತೆರಳಿದ್ದು, ಹಲವು ಚರ್ಚೆಗಳಿಗೆ ಕಾರಣವಾಗಿತ್ತು.

    ಲಂಡನ್ ತಲುಪಿದ ಬಳಿಕ ಸ್ಪಷ್ಟನೆ ನೀಡಿದ್ದ ಪೂನಾವಾಲಾ, ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ತಮ್ಮ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದಿದ್ದರು. ಈ ಹೇಳಿಕೆ ದೇಶದಲ್ಲಿ ರಾಜಕೀಯ ತಿರುವು ಪಡೆದುಕೊಂಡು ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಬೆದರಿಕೆ ಬರುತ್ತಿದೆ ಇಂತಹ ಸ್ಥಿತಿಯಲ್ಲಿ ಇರಲಾರೆ: ಕೋವಿಶೀಲ್ಡ್ ಲಸಿಕೆ ತಯಾರಿಕಾ ಸಂಸ್ಥೆಯ ಸಿಇಓ

    ಸೀರಂ ಸಂಸ್ಥೆ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿದೆ. ಇಡೀ ವಿಶ್ವದಲ್ಲಿಯೇ ಲಸಿಕೆಯ ಉತ್ಪಾದನೆ ಸಂಸ್ಥೆಗಳಲ್ಲಿ ಸೀರಂ ಸಹ ಒಂದಾಗಿದೆ. ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಭಾರತ ಸರ್ಕಾರಕ್ಕೆ ಸೀರಂ ಸಂಸ್ಥೆ 50 ಕೋಟಿ ಕೊರೊನಾ ವ್ಯಾಕ್ಸಿನ್ ನೀಡಬೇಕಿದೆ.

  • ಕೊರೊನಾ ಲಸಿಕೆ ತಯಾರಿಕೆ ಕೇಂದ್ರಗಳಿಗೆ ಪ್ರಧಾನಿ ಮೋದಿ ಭೇಟಿ

    ಕೊರೊನಾ ಲಸಿಕೆ ತಯಾರಿಕೆ ಕೇಂದ್ರಗಳಿಗೆ ಪ್ರಧಾನಿ ಮೋದಿ ಭೇಟಿ

    ನವದೆಹಲಿ: ಇಡೀ ದೇಶವನ್ನೇ ಹೈರಾಣಾಗಿಸಿರೋ ‘ಚೀನಿ ವೈರಸ್’ ಕೊರೊನಾ ಸೋಂಕಿನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ‘ಪರಿಣಾಮಕಾರಿ ಲಸಿಕೆ’ಯ ಶಿಕಾರಿಯಲ್ಲಿದ್ದಾರೆ. ದೇಶದಲ್ಲಿ ಕೊರೆನಾ ಸಂಜೀವಿನಿ ತಯಾರಿಸ್ತಿರೋ ಮುಂಚೂಣಿ ವ್ಯಾಕ್ಸಿನ್ ತಯಾರಿಕಾ ಘಟಕಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಮೊದಲಿಗೆ ಗುಜರಾತ್‍ನ ಅಹಮದಾಬಾದ್‍ನಿಂದ 20 ಕಿ.ಮೀ. ದೂರದ ಝೈಡಸ್ ಬಯೋಟೆಕ್ ಪಾರ್ಕ್‍ಗೆ ಭೇಟಿ ನೀಡಿದರು. ಝೈಡಸ್ ಕ್ಯಾಡಿಲಾ ಕಂಪನಿಯು ‘ಝೈಕೋವಿಡ್-ಡಿ’ ಎಂಬ ಲಸಿಕೆ ಅಭಿವೃದ್ಧಿ ಪಡಿಸಿದ್ದು, ಅದು 2ನೇ ಹಂತ ಪೂರ್ಣಗೊಳಿಸಿದೆ ಎಂದು ತಿಳಿದುಬಂದಿದೆ. ‘ಝೈಕೋವಿಡ್-ಡಿ-ಡಿಎನ್‍ಎ ಆಧಾರಿತ ಲಸಿಕೆಯಾಗಿದೆ.

    ಅಲ್ಲಿಂದ ನೇರವಾಗಿ ಹೈದರಾಬಾದ್‍ಗೆ ಆಗಮಿಸಿದ ಪ್ರಧಾನಿಗಳು, ಅಲ್ಲಿಂದ 50 ಕಿ.ಮೀ ದೂರದ ಹಕೀಂಪೇಟ್‍ನ ಜಿನೋಮ್ ವ್ಯಾಲಿಯಲ್ಲಿರುವ ಭಾರತ್ ಬಯೋಟೆಕ್ ಘಟಕಕ್ಕೆ ಭೇಟಿ ನೀಡಿದರು. ಭಾರತ್ ಬಯೋಟೆಕ್ ದೇಶೀಯವಾಗಿ ತಯಾರಿಸುತ್ತಿರುವ ‘ಕೋವ್ಯಾಕ್ಸಿನ್’ ಲಸಿಕೆ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆದರು. ಬಳಿಕ ಟ್ವೀಟ್ ಮಾಡಿರೋ ಪ್ರಧಾನಿ, ಈವರೆಗಿನ ಸಂಶೋಧನೆಗೆ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಲಸಿಕೆಯ ತ್ವರಿತ ಪ್ರಗತಿಗೆ ಅನುಕೂಲವಾಗುಂತೆ ಇಲ್ಲಿನ ತಂಡ, ಐಸಿಎಂಆರ್ ಜೊತೆ ನಿಕಟ ಸಂಪರ್ಕದಲ್ಲಿದೆ ಎಂದರು.

    ಹೈದರಾಬಾದ್‍ನಿಂದ ಪುಣೆಯ ಸೀರಂ ಇನ್‍ಸ್ಟಿಟ್ಯೂಟ್‍ಗೆ ಭೇಟಿ ನೀಡಿದರು. ಸೀರಂ ಇನ್‍ಸ್ಟಿಟ್ಯೂಟ್ ವಿಶ್ವದ ಅತೀದೊಡ್ಡ ಲಸಿಕಾ ಉತ್ಪಾದನಾ ಕೇಂದ್ರವಾಗಿದೆ. ಬ್ರಿಟನ್‍ನ ಆಕ್ಸಫರ್ಡ್ ವಿವಿ ಮತ್ತು ಆಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಮತ್ತು ಪ್ರಯೋಗಕ್ಕೆ ಒಳಪಡಿಸುವ ಗುತ್ತಿಗೆಯನ್ನು ಸೀರಂ ಪಡೆದುಕೊಂಡಿದೆ. ಆ ಬಳಿಕ ಈ ಮೂರು ಕಡೆ ವ್ಯಾಕ್ಸಿನ್ ತಯಾರಿಕೆ, ಪ್ರಯೋಗ, ಹಂಚಿಕೆಗೆ ಸಿದ್ಧತೆ, ಎದುರಾದ ಸವಾಲುಗಳು, ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆದರು.