Tag: serious injury

  • ಕೊಡಗಿನಲ್ಲಿ ಕಾರ್ಮಿಕ ಮಹಿಳೆ ಮೇಲೆ ಒಂಟಿ ಸಲಗ ದಾಳಿ

    ಕೊಡಗಿನಲ್ಲಿ ಕಾರ್ಮಿಕ ಮಹಿಳೆ ಮೇಲೆ ಒಂಟಿ ಸಲಗ ದಾಳಿ

    ಕೊಡಗು: ಜಿಲ್ಲೆಯಲ್ಲಿ ಪುಂಡಾನೆ ಉಪಟಳ ಮುಂದುವರಿದಿದ್ದು, ಒಂಟಿ ಸಲಗ ದಾಳಿಗೆ ಕಾರ್ಮಿಕ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ವಾಲ್ನೂರಿನಲ್ಲಿ ನಡೆದಿದೆ.

    ಕಲಾವತಿ (55) ಕಾಡಾನೆ ದಾಳಿಗೊಳಗಾದ ಕೂಲಿ ಕಾರ್ಮಿಕ ಮಹಿಳೆ. ಕೂಲಿ ಕೆಲಸಕ್ಕೆ ತೆರಳುವಾಗ ಬೆಳಗ್ಗೆ 7:30ರ ಸುಮಾರಿಗೆ ವಾಲ್ನೂರು ಬಸವೇಶ್ವರ ದೇವಾಲಯ ಬಳಿ ಒಂಟಿ ಸಲಗ ಮಹಿಳೆಯ ಮೇಲೆ ದಾಳಿ ನಡೆಸಿದೆ.

    ಕಾಡಾನೆ ದಾಳಿಯಿಂದ ಮಹಿಳೆಯ ತಲೆ, ಕೈ ಕಾಲಿಗೆ ಗಂಭೀರ ಗಾಯವಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದ್ಯ ಕಾರ್ಮಿಕ ಮಹಿಳೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಅಥವಾ ಮಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

    ಕಾಡಾನೆ ಉಪಟಳ ತಡೆಗೆ ಗ್ರಾಮಸ್ಥರ ಆಗ್ರಹಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಸಹೋದರರಿಬ್ಬರಿಗೆ ಗಂಭೀರ ಗಾಯ

    ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಸಹೋದರರಿಬ್ಬರಿಗೆ ಗಂಭೀರ ಗಾಯ

    ಕಲಬುರಗಿ: ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಸಹೋದರರಿಬ್ಬರು ಗಂಭೀರವಾಗಿ ಗಾಯಗೊಂಡಿರವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೊನಗುಂಟ ಗ್ರಾಮದಲ್ಲಿ ನಡೆದಿದೆ.

    12 ವರ್ಷದ ನಾಗರಾಜ್ ಮತ್ತು 15 ವರ್ಷದ ಮಲ್ಲು ಗಾಯಗೊಂಡ ಸಹೋದರರು. ಘಟನೆಯಲ್ಲಿ ಮಲ್ಲುವಿನ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಅವನ ತಮ್ಮ ನಾಗರಾಜ್‍ಗೆ ಎದೆಯಲ್ಲಿ ಗಂಭೀರ ಗಾಯವಾಗಿದೆ. ಸದ್ಯಕ್ಕೆ ಇಬ್ಬರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಆಗಿದ್ದೇನು?
    ಶನಿವಾರ ಬೆಳಗ್ಗೆ ಇಬ್ಬರು ಸೇರಿಕೊಂಡು ಮನೆಯಲ್ಲಿನ ಕಾರ್ಬನ್ ಕೆ6 ಮೊಬೈಲ್ ಬ್ಯಾಟರಿಯನ್ನು ತೆಗೆದುಕೊಂಡು ಅದಕ್ಕೆ ಸಣ್ಣದಾದ ವಯರ್‍ನಿಂದ ಎಲ್‍ಇಡಿ ಬಲ್ಬ್‍ಗೆ ಕನೆಕ್ಷನ್ ಕೊಡಲು ಹೋಗಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಬ್ಯಾಟರಿಯಲ್ಲಿ ಸ್ಪಾರ್ಕ್ ಆಗಿ ಸ್ಫೋಟಗೊಂಡಿದೆ. ಇದರಿಂದ ಮಲ್ಲುವಿನ ಎದೆ ಮತ್ತು ಮುಖದ ಭಾಗದ ಮೇಲೆ ಕಿಡಿಗಳು ಬಿದ್ದಿವೆ. ಹೀಗಾಗಿ ಮಲ್ಲುವಿನ ದೇಹ ಮತ್ತು ಮುಖದ ಭಾಗ ಸುಟ್ಟ ಗಾಯಗಾಳಾಗಿವೆ. ಅಲ್ಲದೇ ನಾಗರಾಜ್ ಕಣ್ಣಿಗೆ ಬ್ಯಾಟರಿಯ ಬೆಂಕಿಯ ಕಿಡಿಗಳು ತಗುಲಿ ದೃಷ್ಟಿ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಮಕ್ಕಳ ತಂದೆ ಈಶಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

    ವೈದ್ಯ ಡಾ. ಶರಣಬಸಪ್ಪ ಹರವಾಳ ಪ್ರತಿಕ್ರಿಯಿಸಿ, ಇಬ್ಬರು ಹುಡುಗಾಟದಿಂದ ಗಾಯಗೊಂಡಿದ್ದಾರೆ. ಗಾಯಾಳು ನಾಗರಾಜ್ ನನ್ನ ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಮಲ್ಲುನಿಗೆ ಎದೆ ಮತ್ತು ಕೈಗೆ ಗಾಯವಾಗಿದ್ದು, ಅವನನ್ನು ಶಹಾಬಾದ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ನಾಗರಾಜ್‍ನ ಕಣ್ಣಿಗೆ ಗಾಯವಾಗಿದ್ದರಿಂದ ದೃಷ್ಟಿ ಮತ್ತೆ ಬರೋದು ಅನುಮಾನ ಅಂತ ಹೇಳಿದ್ದಾರೆ.

    ನಾವು ಈಗ ಪ್ರಥಮ ಚಿಕಿತ್ಸೆ ನೀಡಿದ್ದೇವೆ. ಆದರೆ ಕಣ್ಣಿಗೆ ಎಷ್ಟರ ಮಟ್ಟಿಗೆ ಡ್ಯಾಮೇಜ್ ಆಗಿದೆ ಅನ್ನೋದರ ಬಗ್ಗೆ ತಪಾಸಣೆ ಮಾಡಿ ನಂತರ ಶಸ್ತ್ರಚಿಕಿತ್ಸೆ ಮಾಡುತ್ತೇವೆ. ಆದರು ಕಣ್ಣಿನ ದೃಷ್ಟಿ ಬರೋದು ಕಷ್ಟ ಎಂದು ವೈದ್ಯರು ವಿವರಿಸಿದರು.

  • ವಿಡಿಯೋ: ಕಾರ್‍ಗೆ ಡಿಕ್ಕಿ ಹೊಡೆದು ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದ ಮೂವರು ಮಹಿಳೆಯರು!

    ವಿಡಿಯೋ: ಕಾರ್‍ಗೆ ಡಿಕ್ಕಿ ಹೊಡೆದು ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದ ಮೂವರು ಮಹಿಳೆಯರು!

    ಭೋಪಾಲ್: ದ್ವಿ ಚಕ್ರವಾಹನ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದ್ವಿ ಚಕ್ರವಾಹನದಲ್ಲಿದ್ದ ಮೂವರು ಮಹಿಳೆಯರು ಗಾಳಿಯಲ್ಲಿ ಹಾರಿ ನೆಲಕ್ಕೆ ಬಿದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಟಿಕಾಮ್ಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದ್ವಿ ಚಕ್ರವಾಹನ ಚಲಾಯಿಸುತ್ತಿದ್ದ ಮಹಿಳೆ ಎಸ್‍ಯುವಿ ಕಾರ್‍ವೊಂದನ್ನ ಓವರ್‍ಟೇಕ್ ಮಾಡುವ ವೇಳೆ ಅವಘಡ ಸಂಭವಿಸಿದೆ.

    ಎಸ್‍ಯುವಿ ಕಾರಿನ ಹಿಂದೆ ಬರುತ್ತಿದ್ದ ಮಹಿಳೆ ಕಾರನ್ನು ಹಿಂದಿಕ್ಕಲು ಮುಂದಾಗಿದ್ದಾಳೆ. ರಸ್ತೆ ಚಿಕ್ಕದಾದ ಕಾರಣ ಎದುರು ಬರುವ ಗಾಡಿಗಳು ಕಾಣಿಸಿರಲಿಲ್ಲ. ಓವರ್‍ಟೇಕ್ ಮಾಡುವ ವೇಳೆ ಮುಂದುಗಡೆ ಬರುತ್ತಿದ್ದ ಮಾರುತಿ ಎರ್ಟಿಗಾ ಕಾರಿಗೆ ಮಹಿಳೆಯ ವಾಹನ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಾಲಕಿ ಸೇರಿದಂತೆ ಮೂವರು ಮಹಿಳೆಯರೂ ಕೂಡ ಮೇಲೆ ಹಾರಿ ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ ದ್ವಿ ಚಕ್ರವಾಹನದಲ್ಲಿದ್ದ ಮೂವರು ಮಹಿಳೆಯರು ಹೆಲ್ಮೆಟ್ ಧರಿಸಿರಲಿಲ್ಲ. ಇಬ್ಬರು ಬಿದ್ದ ತಕ್ಷಣ ಮೇಲೆದ್ದಿದ್ದಾರೆ. ನಂತರ ಮೂರನೇ ಮಹಿಳೆಯ ನೆರವಿಗೆ ಧಾವಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಸ್ಥಳೀಯರು ಕೂಡ ಮಹಿಳೆಯರ ರಕ್ಷಣೆಗೆ ಮುಂದಾಗಿದ್ದಾರೆ.

    ಸುದ್ದಿ ಸಂಸ್ಥೆ ಈ ಅಪಘಾತದ ವಿಡಿಯೋ ಬಿಡುಗಡೆ ಮಾಡಿದ್ದು, ಎಲ್ಲಾ ಮೂವರು ಮಹಿಳೆಯರಿಗೆ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.