Tag: serial

  • ಆರ್ಯವರ್ಧನ್ ಪಾತ್ರವನ್ನು ಮತ್ತೆ ಅನಿರುದ್ಧ ಮಾಡ್ತಾರಾ? ಕುತೂಹಲ ಮೂಡಿಸಿದೆ ‘ಜೊತೆ ಜೊತೆಯಲಿ’ ಟೀಮ್ ನಡೆ

    ಆರ್ಯವರ್ಧನ್ ಪಾತ್ರವನ್ನು ಮತ್ತೆ ಅನಿರುದ್ಧ ಮಾಡ್ತಾರಾ? ಕುತೂಹಲ ಮೂಡಿಸಿದೆ ‘ಜೊತೆ ಜೊತೆಯಲಿ’ ಟೀಮ್ ನಡೆ

    ಜೊತೆ ಜೊತೆಯಲಿ ಟೀಮ್ ನಿಂದ ಹೊಸ ಹೊಸ ಸುದ್ದಿಗಳು ಬರುತ್ತಿವೆ. ಅನಿರುದ್ಧ ಅವರನ್ನು ಧಾರಾವಾಹಿಯಿಂದ ಕೈ ಬಿಟ್ಟಿದ್ದರಿಂದ, ಇವರು ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಬೇರೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಯಿತು. ನಿರ್ದೇಶಕ ಅನೂಪ್ ಭಂಡಾರಿ, ನಟರಾದ ಸುನೀಲ್ ಪುರಾಣಿಕ್ ಮತ್ತು ಹರೀಶ್ ರಾಜ್ ಅವರನ್ನು ಪಾತ್ರ ನಿರ್ವಹಿಸಲು ಕೇಳಲಾಯಿತು. ಕೊನೆಗೆ ಹರೀಶ್ ರಾಜ್ ಪಕ್ಕಾ ಆಯ್ಕೆ ಎನ್ನುವ ಸುದ್ದಿಯೂ ಬಂತು. ಆದರೆ, ಇವೆಲ್ಲವೂ ಮತ್ತೆ ಉಲ್ಟಾ ಹೊಡೆಯುತ್ತಿವೆ.

    ಧಾರಾವಾಹಿ ಲೋಕದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಸದ್ಯಕ್ಕೆ ಆರ್ಯವರ್ಧನ್ ಪಾತ್ರಕ್ಕೆ ಯಾರನ್ನೂ ಆಯ್ಕೆ ಮಾಡಿಕೊಳ್ಳುವದಿಲ್ಲವಂತೆ. ಹರೀಶ್ ರಾಜ್ ಅವರು ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಟಿಸುತ್ತಿದ್ದರೂ, ಅವರ ಪಾತ್ರ ಬೇರೆಯದ್ದೇ ಆಗಿರಲಿದೆಯಂತೆ. ಆರ್ಯವರ್ಧನ್ ಪಾತ್ರ ಮನೆಬಿಟ್ಟು ಹೋಗಲಿದೆ ಎಂದು ಹೇಳಲಾಗುತ್ತಿದೆ. ಆರ್ಯವರ್ಧನ್ ಪಾತ್ರಕ್ಕೆ ಯಾರನ್ನೂ ಆಯ್ಕೆ ಮಾಡಿಕೊಂಡಿಲ್ಲ ಅಂತಾರೆ, ಮನೆ ಬಿಟ್ಟು ಹೋದ ಆರ್ಯವರ್ಧನ್ ಮುಂದಿನ ದಿನಗಳಲ್ಲಿ ಮತ್ತೆ ವಾಪಸ್ಸು ಮನೆಗೆ ಬಂದರೆ, ಆ ಪಾತ್ರವನ್ನು ಅನಿರುದ್ಧ ಅವರೇ ಮಾಡಲಿದ್ದಾರೆ ಎನ್ನುವ ಅನುಮಾನ ಎಲ್ಲರದ್ದು.

    ಆದರೆ, ಇಷ್ಟೊಂದು ರಾದ್ಧಾಂತ ಮಾಡಿಕೊಂಡು, ಒಬ್ಬರಿಗೊಬ್ಬರ ಮೇಲೆ ಕೆಸರಾಟವಾಡಿ ಮತ್ತೆ  ಅನಿರುದ್ಧ ಮತ್ತು ನಿರ್ಮಾಪಕ ಆರೂರು ಜಗದೀಶ್ ಒಟ್ಟಿಗೆ ಕೆಲಸ ಮಾಡುತ್ತಾರಾ ಎನ್ನುವ ಪ್ರಶ್ನೆ ಎಲ್ಲರದ್ದು. ಮಾಧ್ಯಮಗಳ ಮುಂದೆ ಆರೋಪ ಪ್ರತ್ಯಾರೋಪ ಮಾಡಿದ ನಂತರ, ವಾಹಿನಿಯ ಪ್ರತಿನಿಧಿಯೇ ಅನಿರುದ್ಧ ಅವರು ಧಾರಾವಾಹಿಯಲ್ಲಿ ಇರುವುದಿಲ್ಲ ಎಂದು ಘೋಷಿದ ಮೇಲೆ ಮತ್ತೆ ಒಂದಾಗಿ ಕೆಲಸ ಮಾಡುವುದು ಅನುಮಾನ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

    ಏನೇ  ಇರಲಿ, ಮತ್ತೆ ಅನಿರುದ್ಧ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ. ಹಾಗಾಗಿ ವಾಹಿನಿಯ ಮುಖ್ಯಸ್ಥರನ್ನೂ ಸೇರಿಸಿ, ಧಾರಾವಾಹಿಯ ತಂಡಕ್ಕೆ ಒತ್ತಡ ಹಾಕುವಂತಹ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಇಬ್ಬರೂ ರಾಜಿಯಾಗಿ ಮತ್ತೆ ಅನಿರುದ್ಧ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿ ಎನ್ನುವುದು ಹಲವು ಜನರ ಆಸೆ. ಮುಂದಿನ ದಿನಗಳಲ್ಲಿ ಏನಾಗತ್ತೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • Exclusive-‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಹರೀಶ್ ರಾಜ್ ನಟಿಸೋದು ಪಕ್ಕಾ- ಆದ್ರೆ ಆರ್ಯವರ್ಧನ್ ಪಾತ್ರದಲ್ಲಿ ಅಲ್ಲ?

    Exclusive-‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಹರೀಶ್ ರಾಜ್ ನಟಿಸೋದು ಪಕ್ಕಾ- ಆದ್ರೆ ಆರ್ಯವರ್ಧನ್ ಪಾತ್ರದಲ್ಲಿ ಅಲ್ಲ?

    ಸ್ಯಾಂಡಲ್ ವುಡ್ ನಟ ಹರೀಶ್ ರಾಜ್ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸುವುದು ಪಕ್ಕಾ ಆಗಿದೆ. ಈ ಧಾರಾವಾಹಿ ಟೀಮ್ ಕಡೆಯಿಂದ ತಮಗೆ ಕರೆ ಬಂದಿರುವ ವಿಚಾರವನ್ನೂ ಅವರು ಹಂಚಿಕೊಂಡಿದ್ದರು. ತಾವು ಕೂಡ ಸೀರಿಯಲ್ ತಂಡಕ್ಕೆ ಕೆಲವು ಷರತ್ತುಗಳನ್ನು ವಿಧಿಸಿರುವುದಾಗಿ, ಅದಕ್ಕೆ ಅವರು ಒಪ್ಪಿಕೊಂಡರೆ ಧಾರಾವಾಹಿಯಲ್ಲಿ ನಟಿಸುವುದಾಗಿ ತಿಳಿಸಿದ್ದರು. ಹರೀಶ್ ರಾಜ್ ಷರತ್ತುಗಳನ್ನು ವಾಹಿನಿ ಮತ್ತು ಧಾರಾವಾಹಿ ತಂಡ ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ.

    ಹರೀಶ್ ರಾಜ್ ಸಿನಿಮಾ ರಂಗದಲ್ಲೂ ಸಕ್ರೀರಾಗಿರುವ ಕಾರಣದಿಂದ ಹದಿನೈದು ದಿನ ಸೀರಿಯಲ್, ಹದಿನೈದು ದಿನ ಸಿನಿಮಾದಲ್ಲಿ ನಟಿಸುವುದಾಗಿ ಅವರು ವಾಹಿನಿಗೆ ತಿಳಿಸಿದ್ದರಂತೆ. ಈ ಮಾತಿಗೆ ವಾಹಿನಿ ಮತ್ತು ಧಾರಾವಾಹಿ ತಂಡ ಕೂಡ ಒಪ್ಪಿಗೆ ಸೂಚಿಸಿದೆ ಎನ್ನಲಾಗುತ್ತಿದ್ದು, ಅತೀ ಶೀಘ್ರದಲ್ಲೇ ಅವರು ಜೊತೆ ಜೊತೆಯಲಿ ಟೀಮ್ ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಆ ಒಂದು ಹೆಸರಿನ ಟ್ಯಾಟೋನಿಂದ ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಹಾಕಿದ ಮೇಘನಾ ರಾಜ್

    ಈವರೆಗೂ ಅನಿರುದ್ಧ ಅವರು ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಅವರು ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಆರ್ಯವರ್ಧನ್ ಪಾತ್ರವನ್ನು ಹರೀಶ್ ರಾಜ್ ಮುಂದುವರೆಸಿಕೊಂಡು ಹೋಗಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಹರೀಶ್ ರಾಜ್ ಬೇರೆ ಪಾತ್ರವನ್ನು ಮಾಡಲಿದ್ದಾರಂತೆ. ಆ ಪಾತ್ರ ಯಾವುದು? ಆರ್ಯವರ್ಧನ್ ಪಾತ್ರಕ್ಕೂ ಈ ಪಾತ್ರಕ್ಕೂ ಲಿಂಕ್ ಇದೆಯಾ? ಕಥೆಯಲ್ಲಿ ತಿರುವು ಎಂಥದ್ದು ಎನ್ನುವ ಕುತೂಹಲ ಇದೀಗ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • Exclusive-‘ಜೊತೆ ಜೊತೆಯಲಿ’ ಸೀರಿಯಲ್ ನಲ್ಲಿ ಅನಿರುದ್ದ ಅಷ್ಟೇ ಅಲ್ಲ, ಆರ್ಯವರ್ಧನ್ ಪಾತ್ರವೇ ಇರಲ್ಲ?

    Exclusive-‘ಜೊತೆ ಜೊತೆಯಲಿ’ ಸೀರಿಯಲ್ ನಲ್ಲಿ ಅನಿರುದ್ದ ಅಷ್ಟೇ ಅಲ್ಲ, ಆರ್ಯವರ್ಧನ್ ಪಾತ್ರವೇ ಇರಲ್ಲ?

    ಧಾರಾವಾಹಿ ಅಂದರೆ ಹಾಗೆನೇ. ತಿರುವುಗಳೇ ಧಾರಾವಾಹಿಯನ್ನು ನೋಡಿಸಿಕೊಂಡು ಹೋಗುತ್ತವೆ. ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಹೊರಗೆ ಕಳುಹಿಸಿದಾಗ, ಅನಿರುದ್ಧ ಇಲ್ಲದೇ ಆರ್ಯವರ್ಧನ್ ಪಾತ್ರ ಹೇಗೆ ಎಂಬ ಚರ್ಚೆ ಶುರುವಾಗಿತ್ತು. ಆರ್ಯವರ್ಧನ್ ಪಾತ್ರಕ್ಕೆ ಯಾರೆಲ್ಲ ನಟರು ಬರಬಹುದು ಎಂದು ಅಂದಾಜಿಸಲಾಗಿತ್ತು. ಈ ಅಂದಾಜೇ ಬುಡಮೇಲು ಆಗುವಂತಹ ಟ್ವಿಸ್ಟ್ ಅನ್ನು ಧಾರಾವಾಹಿ ತಂಡ ನೀಡಿದೆ.

    ಆರ್ಯವರ್ಧನ್ ಪಾತ್ರಕ್ಕಾಗಿ ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಕೇಳಲಾಯಿತು. ಸಿನಿಮಾ ಕಾರಣದಿಂದಾಗಿ ಅವರು ಒಪ್ಪಿಕೊಳ್ಳಲಿಲ್ಲ. ಆನಂತರ ಸುನೀಲ್ ಪುರಾಣಿಕ್, ಹರೀಶ್ ರಾಜ್ ರೀತಿಯ ಹೆಸರುಗಳು ಹರಿದಾಡಿದವು. ಹರೀಶ್ ರಾಜ್ ಆ ಪಾತ್ರಕ್ಕೆ ನಿಕ್ಕಿ ಆಗಿದ್ದಾರೆ ಎಂದು ಹೇಳಲಾಗಿತ್ತು. ಇದೆಲ್ಲ ಸುದ್ದಿಯೂ ಸುಳ್ಳಾಗಿದೆ. ಕಥೆಯಲ್ಲಿ ಸಖತ್ ಟ್ವಿಸ್ಟ್ ನೀಡುವ ಮೂಲಕ ಕಥೆಯನ್ನು ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋಗಿದೆ ಧಾರಾವಾಹಿ ತಂಡ. ಈ ಟ್ವಿಸ್ಟ್ ನೋಡುಗರಿಗೆ ಮತ್ತಷ್ಟು ಥ್ರಿಲ್ ನೀಡಲಿದೆ. ಇದನ್ನೂ ಓದಿ:ಜಯಶ್ರೀಗೆ ಎರಡು ಮದುವೆ ಆಗ್ತವೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

    ಈಗಾಗಲೇ ಕಥೆಯಲ್ಲಿ ಆರ್ಯವರ್ಧನ್ ಮನೆಬಿಟ್ಟು ಹೋಗಿದ್ದ. ಆನಂತರ ಅನು ಆತನನ್ನು ಹುಡುಕಾಡಿ ಕೊನೆಗೂ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಮನೆಗೆ ಬಂದ ಆರ್ಯವರ್ಧನ್ ಏನು ಮಾಡುತ್ತಾನೆ ಎನ್ನುವ ಕುತೂಹಲ ಎಲ್ಲರದ್ದು. ಮನೆಗೆ ಬಂದವನು ಏನಾದರೂ ಮಾಡಲಿ. ಆದರೆ, ಆರ್ಯವರ್ಧನ್ ಪಾತ್ರವೇ ಕಥೆಯಲ್ಲಿ ಇರುವುದಿಲ್ಲ ಎನ್ನುವ ಮಾಹಿತಿ ಹರಿದಾಡುತ್ತಿದೆ. ಆ ಪಾತ್ರವನ್ನು ಕೈ ಬಿಟ್ಟು, ಹೊಸ ಪಾತ್ರಕ್ಕೆ ಎಂಟ್ರಿ ಕೊಡುವ ಮೂಲಕ ಕಥೆಗೆ ಮಹಾಟ್ವಿಸ್ಟ್ ನೀಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು.

    ಈ ರೀತಿಯ ಕಥೆಯನ್ನು ಮಾಡಲು ಏಳುಗುಂಡಿಗೆ ಬೇಕು. ಯಾಕೆಂದರೆ, ಕಥಾನಾಯಕನನ್ನೇ ಸ್ಕ್ರೀನ್ ಮೇಲೆ ತೋರಿಸದೇ ಕಥೆ ಹೇಳುವ ಕಲೆ ಅಷ್ಟು ಸುಲಭದ್ದಲ್ಲ. ಅಂತಹ ರಿಸ್ಕ್ ತಗೆದುಕೊಂಡು ಜೊತೆ ಜೊತೆಯಲಿ ಧಾರಾವಾಹಿ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಸಂಚಿಕೆಗಳು ಹೇಗೆ ಇರುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.

     

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಪಕ್ಕಾ ಎನ್ನುತ್ತಿವೆ ಮೂಲಗಳು

    ‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಪಕ್ಕಾ ಎನ್ನುತ್ತಿವೆ ಮೂಲಗಳು

    ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಇದೀಗ ಮತ್ತೊಬ್ಬ ಕಲಾವಿದನನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಅನಿರುದ್ಧ ಅವರಿಂದ ತೆರುವಾದ ಆರ್ಯವರ್ಧನ್ ಪಾತ್ರವನ್ನು ಕನ್ನಡದ ಪ್ರತಿಭಾವಂತ ನಟ ಹರೀಶ್ ರಾಜ್ ಮಾಡಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ವಾಹಿನಿಯಾಗಲಿ, ಧಾರಾವಾಹಿಯ ನಿರ್ಮಾಪಕರಾಗಿ ಈ ಸುದ್ದಿಯನ್ನು ಖಚಿತ ಪಡಿಸದೇ ಇದ್ದರೂ, ಹರೀಶ್ ರಾಜ್ ಅವರೇ ಈ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ.

    ಈ ಮೊದಲ ಆರ್ಯವರ್ಧನ್ ಪಾತ್ರವನ್ನು ಅನೂಪ್ ಭಂಡಾರಿ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಾರಣದಿಂದಾಗಿ ಒಪ್ಪಿಕೊಳ್ಳಲಿಲ್ಲ. ಆನಂತರ ಸುನೀಲ್ ಪುರಾಣಿಕ್ ಹೆಸರು ಓಡಾಡಿತು. ಕೆಲವರು ತಮಾಷೆಗೆ ಎನ್ನುವಂತೆ ಮಾಜಿ ಸಚಿವ ಸಿ. ಟಿ . ರವಿಯನ್ನು ಆಯ್ಕೆ ಮಾಡಿ ಎಂದು ಕಾಮೆಂಟ್ ಮಾಡಿದ್ದರು. ಆದರೆ, ವಾಹಿನಿಯು ಹಲವರಿಗೆ ಗಾಳಹಾಕಿತ್ತು. ಅದರಲ್ಲಿ ಹರೀಶ್ ರಾಜ್ ಹೆಸರು ಕೂಡ ಇತ್ತು. ಇದನ್ನೂ ಓದಿ:ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಯಜುವೇಂದ್ರ ಚಾಹಲ್ ದಂಪತಿ

    ಸುನೀಲ್ ಪುರಾಣಿಕ್ ಮತ್ತು ಹರೀಶ್ ರಾಜ್ ಹೆಸರು ಸದ್ಯ ವಾಹಿನಿಯ ಮುಂದೆ ಇದೆ. ಬಹುತೇಕ ಸುನೀಲ್ ಪುರಾಣಿಕ್ ಅವರೇ ಈ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಹರೀಶ್ ರಾಜ್ ಹೆಸರೂ ಕೇಳಿ ಬರುತ್ತಿದೆ. ನಿನ್ನೆಗೆ ಅನಿರುದ್ಧ ಮಾಡಿದ ದೃಶ್ಯಗಳು ಮುಗಿದಿರುವ ಕಾರಣದಿಂದಾಗಿ ಜರೂರಾಗಿ ಪಾತ್ರಧಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಪಕರ ಮುಂದಿದೆ. ಇವತ್ತು ಅಥವಾ ನಾಳೆ ಪಾತ್ರಧಾರಿಯ ಹೆಸರು ಪಕ್ಕಾ ಆಗಲಿದೆ.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಅನಿರುದ್ಧ ಗಲಾಟೆ ಧಾರವಾಡಕ್ಕೆ ಶಿಫ್ಟ್: ಪ್ರಕರಣ ತಿಳಿಗೊಳಿಸಲು ಸ್ನೇಹಿತರ ಮನವಿ

    ‘ಜೊತೆ ಜೊತೆಯಲಿ’ ಅನಿರುದ್ಧ ಗಲಾಟೆ ಧಾರವಾಡಕ್ಕೆ ಶಿಫ್ಟ್: ಪ್ರಕರಣ ತಿಳಿಗೊಳಿಸಲು ಸ್ನೇಹಿತರ ಮನವಿ

    ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ ಅವರೇ ಮುಂದುವರೆಯಬೇಕು ಎನ್ನುವ ಒತ್ತಡ ಈವರೆಗೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ವ್ಯಕ್ತವಾಗಿತ್ತು. ಇದೀಗ ಅನಿರುದ್ದ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಮಾಧ್ಯಮ ಗೋಷ್ಠಿ ಮಾಡುವ ಮೂಲಕ ವಾಹಿನಿಗೆ ಮತ್ತು ನಿರ್ಮಾಪಕರ ಮೇಲೆ ಒತ್ತಡ ತರುತ್ತಿದ್ದಾರೆ.

    ನಿನ್ನೆಯಷ್ಟೇ ಬೆಂಗಳೂರಿನ ಪ್ರಸ್ ಕ್ಲಬ್ ನಲ್ಲಿ ಅನಿರುದ್ಧ ಅವರ ಮಹಿಳಾ ಅಭಿಮಾನಿಗಳು ಮಾಧ್ಯಮಗೋಷ್ಠಿ ಮಾಡಿ, ಅನಿರುದ್ದ ಅವರಿಗೆ ಬೆಂಬಲ ಸೂಚಿಸಿದ್ದರು. ಏಕಾಏಕಿ ಹೀಗೆ ಬ್ಯಾನ್ ಮಾಡುವುದನ್ನು ಸಹಿಸಲ್ಲ ಎಂದು ಹೇಳಿಕೊಂಡಿದ್ದರು. ಅವರ ಜನಪ್ರಿಯತೆಯನ್ನು ಬಳಸಿಕೊಂಡು, ಸೀರಿಯಲ್ ನಿರ್ಮಾಪಕರು ಅನಿರುದ್ಧ ಅವರನ್ನು ದೂರ ಮಾಡಿದ್ದಾರೆ ಎಂದೂ ಆರೋಪಿಸಿದ್ದರು. ಇದೀಗ ಧಾರವಾಡದ ಗೆಳೆಯರು ಕೂಡ ಇಂಥದ್ದೊಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?

    ಅನಿರುದ್ಧ ಮೂಲತಃ ಧಾರವಾಡದವರು. ಅಲ್ಲಿಯೇ ಎಜ್ಯುಕೇಷನ್ ಕೂಡ ಮುಗಿಸಿದ್ದು. ಧಾರವಾಡದ ರಂಗಭೂಮಿಯಿಂದ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟವರು. ಹಾಗಾಗಿ ಧಾರವಾಡದ ಗೆಳೆಯರು ಇಂದು ಒಟ್ಟಾಗಿ ಅನಿರುದ್ಧ ಪರ ಬ್ಯಾಟ್ ಬೀಸಿದ್ದಾರೆ. ನಲವತ್ತು ವರ್ಷಗಳಿಂದ ಸ್ನೇಹಿತರಾಗಿದ್ದವರು, ಯಾವತ್ತೂ ಅವರು ದುರಹಂಕಾರ ತೋರಿಸಿಲ್ಲ. ಹಾಗಾಗಿ ಅನಿರುದ್ಧ ಅವರನ್ನು ವಾಪಸ್ಸು ಧಾರಾವಾಹಿಗೆ ಸೇರಿಸಿಕೊಳ್ಳಿ ಎಂದು ಹೇಳಿದ್ದಾರೆ.

    ಅನಿರುದ್ಧ ಅವರನ್ನು ಸೀರಿಯಲ್ ನಿಂದ ಕೈಬಿಟ್ಟ ವಿಚಾರ ಮತ್ತು ಬ್ಯಾನ್ ಮಾಡಿರುವ ವಿಷಯ ನಮ್ಮ ಎಲ್ಲ ಗೆಳೆಯರಿಗೆ ಬೇಸರವಾಗಿದೆ. ದೊಡ್ಡವರು ಯಾರಾದ್ರು ಈ‌ ವಿಷಯವನ್ನು ಅಲ್ಲೇ‌ ಮುಗಿಸಬೇಕಿತ್ತು. ಅನಿರುದ್ಧ ಅಷ್ಟು ದೊಡ್ಡ ಮಟ್ಟದಲ್ಲಿ ಬೆಳೆದ್ರು ಸಿಂಪಲ್‌ ಆಗಿಯೇ ಇದ್ದಾರೆ. ಹುಬ್ಬಳ್ಳಿ ಧಾರವಾಡ ಪಾಲಿಕೆಯ ರಾಯಭಾರಿ ಆಗಿಯೂ ಅವರು ಧಾರವಾಡಕ್ಕೆ ಬಂದಿದ್ದರು. ಅಂತಹ ವ್ಯಕ್ತಿಗೆ ಅವಮಾನ ಮಾಡಬೇಡಿ ಎಂದು ಗೆಳೆಯರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅನಿರುದ್ಧ ಅವರನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ: ಗರಂ ಆದ ಮಹಿಳಾ ಅಭಿಮಾನಿಗಳು

    ಅನಿರುದ್ಧ ಅವರನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ: ಗರಂ ಆದ ಮಹಿಳಾ ಅಭಿಮಾನಿಗಳು

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಕೈ ಬಿಟ್ಟಿದ್ದನ್ನು ಅನಿರುದ್ಧ ಮಹಿಳಾ ಅಭಿಮಾನಿಗಳ ಸಂಘ ಖಂಡಿಸಿದೆ. ಮಂಗಳವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗೋಷ್ಠಿ ಆಯೋಜನೆ ಮಾಡಿದ್ದ ತಂಡದ ಸದಸ್ಯರು. ಬೇಕು ಅಂತಾನೇ ಅನಿರುದ್ಧ ಅವರನ್ನು ಧಾರಾವಾಹಿ ತಂಡ ಕೈ ಬಿಟ್ಟಿದೆ ಎಂದು ಆರೋಪಿಸಿದರು. ಅನಿರುದ್ಧ ಅವರ ಜನಪ್ರಿಯತೆಯನ್ನು ಸಹಿಸಿಕೊಳ್ಳುವುದಕ್ಕೆ ಆಗದೇ ಈ ರೀತಿ ಮಾಡಲಾಗುತ್ತಿದೆ ಎನ್ನುವ ಮಾತುಗಳನ್ನೂ ಆಡಿದರು.

    ಅನಿರುದ್ಧ ಮತ್ತು ಜೊತೆ ಜೊತೆಯಲಿ ನಿರ್ಮಾಪಕ ಆರೂರು ಜಗದೀಶ್ ಅವರ ಮಧ್ಯೆ ಮುಸುಕಿನ ಗುದ್ದಾಟ ಇರುವುದಂತೂ ನಿಜ. ಆರೂರು ಜಗದೀಶ್ ಅವರೇ ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡಂತೆ, ಹಲವಾರು ರೀತಿಯ ತೊಂದರೆಗಳನ್ನು ಅನಿರುದ್ಧ ಕೊಟ್ಟಿದ್ದಾರಂತೆ. ಆರೂರು ಜಗದೀಶ್ ಅವರ ಆರೋಪಕ್ಕೂ ಅನಿರುದ್ಧ ಉತ್ತರ ನೀಡಿದ್ದಾರೆ. ನಿರ್ಮಾಪಕರಿಗೆ ತೊಂದರೆ ಕೊಡುವಂತಹ ಯಾವುದೇ ಕೆಲಸ ಮಾಡಿಲ್ಲ. ಹಾಗಾಗಿ ಮಕ್ಕಳ ಮೇಲೆ ಆಣೆ ಪ್ರಮಾಣ ಮಾಡಿ ಎಂದು ಹೇಳಿದ್ದರು. ಇದನ್ನೂ ಓದಿ:ಬಿಗ್‌ ಬಾಸ್: ನಂದು ವಿರುದ್ಧ ಜಯಶ್ರೀ ಆರಾಧ್ಯ ಫುಲ್ ಗರಂ

    ಮಾಧ್ಯಮಗೋಷ್ಠಿ ನಂತರ ಅನಿರುದ್ಧ ಮತ್ತು ಆರೂರು ಜಗದೀಶ್ ಸುಮ್ಮನಾಗಿದ್ದರೂ, ಮಹಿಳಾ ಅಭಿಮಾನಿಗಳು ಮಾತ್ರ ಸುಮ್ಮನಾಗಿಲ್ಲ. ಮತ್ತೆ ಅನಿರುದ್ಧ ಅವರನ್ನೇ ಧಾರಾವಾಹಿಯಲ್ಲಿ ಮುಂದುವರೆಸಿ ಎಂದು ವಾಹಿನಿಗೆ ಕೇಳಿಕೊಂಡಿದ್ದಾರೆ. ಅನಿರುದ್ಧ ಅವರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ವಾಹಿನಿಯು ಗಮನಿಸಬೇಕು ಎಂದು ಮಹಿಳಾ ಅಭಿಮಾನಿಗಳು ಮಧ್ಯಮ ಗೋಷ್ಠಿಯಲ್ಲಿ ಮನವಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರವನ್ನು ಮಾಜಿ ಸಚಿವ ಸಿ.ಟಿ. ರವಿಗೆ ಕೊಡಿ: ನೆಟ್ಟಿಗರ ಆಗ್ರಹ

    ‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರವನ್ನು ಮಾಜಿ ಸಚಿವ ಸಿ.ಟಿ. ರವಿಗೆ ಕೊಡಿ: ನೆಟ್ಟಿಗರ ಆಗ್ರಹ

    ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿಯ ಆರ್ಯವರ್ಧನ್ ಪಾತ್ರಕ್ಕೆ ದಿನಕ್ಕೊಂದು ಹೆಸರು ಕೇಳಿ ಬರುತ್ತಿದೆ. ಸೀರಿಯಲ್ ನಿಂದ ಅನಿರುದ್ಧ ಹೊರಬಿದ್ದ ನಂತರ, ಆ ಪಾತ್ರವನ್ನು ಯಾರಿಂದ ಮಾಡಿಸಬೇಕು ಎನ್ನುವ ತಲೆಬಿಸಿ ನಿರ್ಮಾಪಕರಿಗೆ ಶುರುವಾಗಿದೆ. ಅನೂಪ್ ಭಂಡಾರಿ, ಸುನೀಲ್ ಪುರಾಣಿಕ್, ಹರೀಶ್ ರಾಜ್ ಹೀಗೆ ಅನೇಕ ಕಲಾವಿದರ ಹೆಸರು ಕೇಳಿ ಬರುತ್ತಿವೆ. ಈ ನಡುವೆ ಆರ್ಯವರ್ಧನ್ ಪಾತ್ರವನ್ನು ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ಯಾಕೆ ಕೊಡಬಾರದು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

    ಸಿ.ಟಿ. ರವಿ ಅವರು ಈವರೆಗೂ ಯಾವುದೇ ಧಾರಾವಾಹಿ, ಸಿನಿಮಾದಲ್ಲಿ ನಟಿಸದೇ ಇದ್ದರೂ, ಅವರ ಲುಕ್ ಆರ್ಯವರ್ಧನ್ ಪಾತ್ರಧಾರಿಯನ್ನು ಹೋಲುತ್ತದೆ. ಹಾಗಾಗಿ ಸಿ.ಟಿ. ರವಿ ಅವರಿಗೆ ಅವಕಾಶ ಕೊಡಿ ಎಂದು ಅನೇಕರು ಆಗ್ರಹಿಸಿದ್ದಾರೆ. ಇದೊಂದು ರೀತಿಯಲ್ಲಿ ತಮಾಷೆ ಅನಿಸಿದರೂ, ಆರ್ಯವರ್ಧನ್ ಪಾತ್ರವನ್ನು ಅನೇಕರು ಸಿ.ಟಿ ರವಿ ಅವರಲ್ಲಿ ಕಾಣುತ್ತಿದ್ದಾರೆ. ಅಲ್ಲದೇ, ಅನಿರುದ್ಧ ಅವರಂತೆ ಗೆಟಪ್ ಹೊಂದಿರುವ ರವಿ ಅವರ ಫೋಟೋವನ್ನು ಹಲವರು ಹಾಕಿದ್ದಾರೆ.  ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ನಿರ್ಮಾಪಕರಿಗೂ ಮತ್ತು ಅನಿರುದ್ಧ ಅವರಿಗೆ ವೈಮನಸ್ಸಿನ ಹಿನ್ನೆಲೆಯಲ್ಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಕೈ ಬಿಡಲಾಗಿದೆ. ಈ ನಡೆಯ ಬಗ್ಗೆಯೂ ಅನೇಕರು ಕಾಮೆಂಟ್ ಮಾಡಿದ್ದಾರೆ. ಪಾತ್ರಕ್ಕೆ ಜೀವ ತುಂಬಿರುವ ಅನಿರುದ್ಧ ಅವರಿಗೆ ಮತ್ತೆ ಯಾಕೆ ಅವಕಾಶ ನೀಡಬಾರದು ಎಂದು ಹಲವರು ಕೇಳಿದ್ದಾರೆ. ಎಲ್ಲ ವೈಮನಸ್ಸು ಮರೆತು ಮತ್ತೆ ಒಂದಾಗಲಿ ಎಂದೂ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಅನಿರುದ್ಧ ಪಾತ್ರಕ್ಕೆ ಹೆಸರಾಂತ ನಟ ಸುನೀಲ್ ಪುರಾಣಿಕ್ ಹೆಸರು

    ‘ಜೊತೆ ಜೊತೆಯಲಿ’ ಅನಿರುದ್ಧ ಪಾತ್ರಕ್ಕೆ ಹೆಸರಾಂತ ನಟ ಸುನೀಲ್ ಪುರಾಣಿಕ್ ಹೆಸರು

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಹೊರಗೆ ಕಳುಹಿಸಿದ ನಂತರ, ಅವರು ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಹಲವು ಬಗೆಯ ನಟರ ಹೆಸರು ಕೇಳಿ ಬರುತ್ತಿವೆ. ಈ ಹಿಂದೆ ನಿರ್ದೇಶಕ ಅನೂಪ್ ಭಂಡಾರಿ ಈ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಧಾರಾವಾಹಿ ತಂಡ ಅವರನ್ನು ಸಂಪರ್ಕಿಸಿತ್ತು. ಆದರೆ, ನಟಿಸಲು ಅನೂಪ್ ನಿರಾಕರಿಸಿದ್ದಾರೆ. ಈ ಕುರಿತು ಅನೂಪ್ ವಿವರಣೆಯನ್ನೂ ನೀಡಿದ್ದಾರೆ.

    ವಿಕ್ರಾಂತ್ ರೋಣ ಸಿನಿಮಾದ ನಂತರ ಮತ್ತೊಂದು ಚಿತ್ರವನ್ನು ಅನೂಪ್ ಕೈಗೆತ್ತಿಕೊಂಡಿದ್ದು, ಹಾಗಾಗಿ ಧಾರಾವಾಹಿಯಲ್ಲಿ ನಟಿಸಲಾರೆ ಎಂದು ಹೇಳಿದ್ದಾರೆ. ಇವರು ನಟಿಸಲು ನಿರಾಕರಿಸುತ್ತಿದ್ದಂತೆಯೇ ಧಾರಾವಾಹಿ ತಂಡ ಸುನೀಲ್ ಪುರಾಣಿಕ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಧಾರಾವಾಹಿ ಮುಂದುವರೆದ ಕಥೆ ಮತ್ತು ಸುನೀಲ್ ಪುರಾಣಿಕ್ ಹೆಸರನ್ನು ವಾಹಿನಿಗೆ ಸೂಚಿಸಿದ್ದು, ವಾಹಿನಿಯು ಅಂತಿಮ ನಿರ್ಧಾರ ತಗೆದುಕೊಳ್ಳಬೇಕಿದೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಸುನೀಲ್ ಪುರಾಣಿಕ್ ಒಳ್ಳೆಯ ನಟ. ಅದಲ್ಲೇ ಈ ಪಾತ್ರವನ್ನು ಅವರು ಸಮರ್ಥವಾಗಿ ನಿಭಾಯಿಸಬಲ್ಲರು. ಲುಕ್ ಕೂಡ ಅನಿರುದ್ಧ ರೀತಿಯಲ್ಲೇ ಕಾಣುತ್ತದೆ. ಈ ಕಾರಣದಿಂದಾಗಿ ಧಾರಾವಾಹಿಯ ನಿರ್ಮಾಪಕರು ಸುನೀಲ್ ಪುರಾಣಿಕ್ ಅವರ ಹೆಸರನ್ನೂ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ನಟರು ಫಿಕ್ಸ್ ಆಗಲಿದ್ದಾರೆ ಎನ್ನುತ್ತಿದೆ ಧಾರಾವಾಹಿ ತಂಡ.

    Live Tv
    [brid partner=56869869 player=32851 video=960834 autoplay=true]

  • ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರ ನಾನು ಮಾಡಲ್ಲ, ಆಫರ್ ಬಂದಿದ್ದು ನಿಜ: ಅನೂಪ್ ಭಂಡಾರಿ

    ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರ ನಾನು ಮಾಡಲ್ಲ, ಆಫರ್ ಬಂದಿದ್ದು ನಿಜ: ಅನೂಪ್ ಭಂಡಾರಿ

    ಜೊತೆ ಜೊತೆಯಲಿ ಧಾರಾವಾಹಿಗೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ಸುದ್ದಿಗಳು ಬರುತ್ತಿವೆ. ಈ ಧಾರಾವಾಹಿಯಿಂದ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ ಅವರನ್ನು ಕೈ ಬಿಡುತ್ತಿದ್ದಂತೆಯೇ ಆ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿತ್ತು. ಸಡನ್ನಾಗಿ ಕನ್ನಡದ ಹೆಸರಾಂತ ನಿರ್ದೇಶಕ ಅನೂಪ್ ಭಂಡಾರಿ ಅವರ ಹೆಸರು ಕೇಳಿ ಬಂದಿತ್ತು. ಎಂದೂ ನಟನೆಯನ್ನೇ ಮಾಡದ ಅನೂಪ್ ಗೆ ಇಂಥದ್ದೊಂದು ಆಫರ್ ಹೋಗಿದ್ದು ನಿಜವಾ ಎನ್ನುವ ಅನುಮಾನ ಕೂಡ ಮೂಡಿತ್ತು.

    ವಿಕ್ರಾಂತ್ ರೋಣ ಸಿನಿಮಾ ಸಕ್ಸಸ್ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ತಯಾರಿ ನಡೆಸಿದಿರುವ ಅನೂಪ್, ಈ ಪಾತ್ರವನ್ನು ಒಪ್ಪಿಕೊಂಡು ಮಾಡುತ್ತಾರೆ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಅನೂಪ್ ಮುಖ, ಗಡ್ಡ, ಅವರ ಲುಕ್ ಥೇಟ್ ಅನಿರುದ್ಧ ರೀತಿಯಲ್ಲೇ ಕಾಣುವುದರಿಂದ ಧಾರಾವಾಹಿ ತಂಡವು ಅನೂಪ್ ಅವರನ್ನು ಸಂಪರ್ಕಿಸಬಹುದು ಎಂದೂ ಹೇಳಲಾಗಿತ್ತು. ಈಗ ಅದೆಲ್ಲವೂ ನಿಜವಾಗಿದೆ. ಧಾರಾವಾಹಿ ತಂಡ ತಮ್ಮನ್ನು ಸಂಪರ್ಕಿಸುವ ವಿಚಾರವನ್ನು ಅನೂಪ್ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಜೊತೆ ಜೊತೆಯಲಿ ಧಾರಾವಾಹಿ ತಂಡ ನನ್ನನ್ನು ಸಂಪರ್ಕಿಸಿದ್ದು ನಿಜ. ಆದರೆ, ನಾನು ಆ ಆಫರ್ ಅನ್ನು ನಿರಾಕರಿಸಿದೆ. ಈಗಾಗಲೇ ಹೊಸ ಸಿನಿಮಾ ಮಾಡುವ ತಯಾರಿ ನಡೆಸಿದ್ದೇನೆ. ಇಂತಹ ವೇಳೆಯಲ್ಲಿ ನಾನು ಧಾರಾವಾಹಿ ಒಪ್ಪಿಕೊಂಡರೆ, ನನ್ನ ಚಿತ್ರಕ್ಕೆ ಹಿನ್ನೆಡೆ ಆಗುತ್ತದೆ. ಹಾಗಾಗಿ ನಾನು ಈ ಧಾರಾವಾಹಿಯಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೇನೆ ಎನ್ನುತ್ತಾರೆ ಅನೂಪ್ ಭಂಡಾರಿ.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ ಪಡೆದುಕೊಳ್ಳುತ್ತಿದ್ದ ಸಂಭಾವನೆ ಬಹಿರಂಗ

    ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ ಪಡೆದುಕೊಳ್ಳುತ್ತಿದ್ದ ಸಂಭಾವನೆ ಬಹಿರಂಗ

    ಟ ಅನಿರುದ್ಧ ಅವರು ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸಲು ಪಡೆಯುತ್ತಿದ್ದ ಸಂಭಾವನೆ ಬಹಿರಂಗವಾಗಿದೆ. ಜೀ ವಾಹಿನಿಯಲ್ಲೇ ಇವರು ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಕಲಾವಿದ ಎನ್ನುವ ಸುದ್ದಿಯೂ ಹೊರ ಬಿದ್ದಿದೆ. ಜೊತೆ ಜೊತೆಯಲಿ ಧಾರಾವಾಹಿ ಶುರುವಾದಾಗ ಒಂದು ಸಂಭಾವನೆ ಪಡೆಯುತ್ತಿದ್ದ ಅನಿರುದ್ಧ, ಕೋವಿಡ್ ವೇಳೆಯಲ್ಲಿ ಆ ಸಂಭಾವನೆಯನ್ನು ಹೆಚ್ಚಿಸಿಕೊಂಡರು ಎನ್ನುತ್ತವೆ ಆಪ್ತ ಮೂಲಗಳು.

    ಜೊತೆ ಜೊತೆಯಲಿ ಧಾರಾವಾಹಿ ಶುರುವಾಗುವಾಗ ನಿರ್ಮಾಪಕರ ಜೊತೆ ಒಪ್ಪಂದ ಮಾಡಿಕೊಂಡಿದ್ದು ದಿನಕ್ಕೆ 25 ಸಾವಿರ ರೂಪಾಯಿ ಸಂಭಾವನೆಯಂತೆ. ಕೋವಿಡ್ ವೇಳೆಯಲ್ಲಿ 38 ಸಾವಿರ ರೂಪಾಯಿ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಪ್ರಮಾಣದ ಸಂಭಾವನೆಯನ್ನು ಪಡೆಯುತ್ತಿದ್ದ ಬೆರಳೆಣಿಕೆಯ ಕಲಾವಿದರಲ್ಲಿ ಇವರೂ ಒಬ್ಬರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಬಾಲಿವುಡ್ ರಾಧೆ ಆಲಿಯಾ ಭಟ್ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ!

    ಅನಿರುದ್ಧ ಅವರ ಸಂಭಾವನೆ ವಿಚಾರದಲ್ಲಿ ನಿರ್ಮಾಣ ಸಂಸ್ಥೆಯಾಗಲಿ ಅಥವಾ ಅನಿರುದ್ಧ ಆಗಲಿ ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೂ, ನಂಬಲರ್ಹ ಮೂಲಗಳ ಪ್ರಕಾರ ಸದ್ಯ 38 ಸಾವಿರ ರೂಪಾಯಿ ಸಂಭಾವನೆಯನ್ನು ಅವರು ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಸಂಭಾವನೆಯ ವಿಚಾರದಲ್ಲೂ ನಿರ್ಮಾಪಕರಿಗೆ ಮತ್ತು ಅನಿರುದ್ಧ ಅವರಿಗೆ ಮನಸ್ತಾಪ ಆಗಿತ್ತು ಎನ್ನುವುದನ್ನು ಸ್ವತಃ ನಿರ್ಮಾಪಕರೇ ಒಪ್ಪಿಕೊಂಡಿದ್ದಾರೆ.

    `Live Tv
    [brid partner=56869869 player=32851 video=960834 autoplay=true]