Tag: Serial Actress

  • ಪುಟ್ಟ ಗಣೇಶನ ಹಿಡಿದು ಸಿಹಿ ಸುದ್ದಿ ಹಂಚಿಕೊಂಡ ಐಶ್ವರ್ಯ-ವಿನಯ್ ದಂಪತಿ

    ಪುಟ್ಟ ಗಣೇಶನ ಹಿಡಿದು ಸಿಹಿ ಸುದ್ದಿ ಹಂಚಿಕೊಂಡ ಐಶ್ವರ್ಯ-ವಿನಯ್ ದಂಪತಿ

    ರಾಜಾ-ರಾಣಿ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ ಐಶ್ವರ್ಯ- ವಿನಯ್ ದಂಪತಿ (Aishwarya Vinay) ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

    ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ ಗಣೇಶ ಹಬ್ಬದಂದು ಪುಟ್ಟ ವಿಗ್ರಹ ಹಿಡಿದುಕೊಂಡು ಚತುರ್ಥಿ ಹಬ್ಬ ಆಚರಿಸಿದ್ದಾರೆ.

    ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ವಿಶೇಷ ದಿನದಂದು ನಿಮಗೆ ಪುಟ್ಟ ರಹಸ್ಯವೊಂದನ್ನು ಹೇಳುತ್ತಿದ್ದೇವೆ. ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ದೇವರು ನಾವು ಕೇಳಿದ್ದಕ್ಕಿಂತ ಹೆಚ್ಚಿನದನ್ನು ನೀಡಿದ್ದಾನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಜೊತೆ ಇರಲಿ. ದೃಷ್ಟಿ ಹಾಕಬೇಡಿ ಎಂದು ಬರೆದುಕೊಂಡಿದ್ದಾರೆ.

    ಮೂಲತಃ ಉತ್ತರ ಕರ್ನಾಟಕದವರಾದ ಇವರು ಹಲವುಗಳ ವರ್ಷಗಳ ಕಾಲ ಪ್ರೀತಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಐಶ್ವರ್ಯ ಅಗ್ನಿಸಾಕ್ಷಿ, ರಾಮಾಚಾರಿ ಸೇರಿದಂತೆ ತೆಲುಗು, ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನೂ ವಿನಯ್ ಕೂಡ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ಇಬ್ಬರು ಒಟ್ಟಿಗೆ ರಾಜಾ-ರಾಣಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.

    ಇತ್ತೀಚಿಗೆ ರಾಮಾಚಾರಿ ಧಾರಾವಹಿಯಲ್ಲಿ ನಟಿಸುತ್ತಿದ್ದ ಐಶ್ವರ್ಯ ಅವರು ಕೆಲ ದಿನಗಳಿಂದ ಕಾಣಿಸುತ್ತಿರಲಿಲ್ಲ. ಸದ್ಯ ದಂಪತಿ ಗಣೇಶ ಹಬ್ಬದಂದು ಮೊದಲ ಮಗುವಿನ ಬಗ್ಗೆ ಸಿಹಿ ಹಂಚಿಕೊಂಡಿದ್ದಾರೆ.

  • ಹಳದಿ ಲುಕ್‌ನಲ್ಲಿ ಬಿಂದಾಸ್ ಸ್ಟೆಪ್‌ ಹಾಕಿದ ವೈಷ್ಣವಿ ಗೌಡ!

    ಹಳದಿ ಲುಕ್‌ನಲ್ಲಿ ಬಿಂದಾಸ್ ಸ್ಟೆಪ್‌ ಹಾಕಿದ ವೈಷ್ಣವಿ ಗೌಡ!

    ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಟಿ ವೈಷ್ಣವಿ ಗೌಡ (Vaishnavi Gowda) ಇದೀಗ ಬಿಂದಾಸ್ ರೀಲ್ಸ್‌ವೊಂದನ್ನು ಶೇರ್ ಮಾಡಿದ್ದಾರೆ.

    ಟ್ರೆಡಿಷನಲ್ ವಿತ್ ಮಾಡರ್ನ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ ವೈಷ್ಣವಿ ಗೌಡ. ವಧುವಿನಂತೆ ಕಂಗೊಳಿಸುತ್ತಿದ್ದಾರೆ. ಅಸಲಿಯಾಗಿ ಇದು ವಧುವಿದ್ದಾಗ ಮಾಡಿರುವ ರೀಲ್ಸ್. ಅದನ್ನ ತಡವಾಗಿ ಪೋಸ್ಟ್ ಮಾಡಿದ್ದಾರೆ ವೈಷ್ಣವಿ. ಹಳದಿ ಲುಕ್ ಎಂದು ಅವರೇ ಹೇಳಿಕೊಂಡಿದ್ದಾರೆ.ಇದನ್ನೂ ಓದಿ: `ಸುದೀಪ್ ಸರ್ ನನ್ನ ದೇವರು’..ಅವ್ರೇನ್ ಮಾಡ್ತಾರೆ – ನಂದಕಿಶೋರ್ ವಿರುದ್ಧ ದೂರು ಕೊಟ್ಟ ಶಬರೀಶ್ ಮಾತು

    ಕೈತುಂಬಾ ಮೆಹಂದಿ ಹಚ್ಚಿಕೊಂಡು ಫ್ಲೋರಲ್ ಜ್ಯುವೆಲರಿ ಧರಿಸಿ ಅರಿಶಿಣ ಶಾಸ್ತ್ರಕ್ಕೆ ಸಿದ್ಧವಾಗೋಕೂ ಮುನ್ನ ತಮ್ಮ ಲುಕ್‌ನ್ನ ರೀಲ್ಸ್ ಮೂಲಕ ರಿವೀಲ್ ಮಾಡಿದ್ದಾರೆ ವೈಷ್ಣವಿ. ತಮಿಳಿನ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜೂನ್ 4 ರಂದು ವೈಷ್ಣವಿ ಗೌಡ ಅನುಕೂಲ್ ಮಿಶ್ರಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಸೋಶಿಯಲ್ ಮೀಡಿಯಾದಲ್ಲಿ ಭಾರೀ ಫಾಲೋವರ್ಸ್ ಹೊಂದಿರುವ ವೈಷ್ಣವಿ ರೀಲ್ಸ್ ಮೂಲಕ ಫಾಲೋವರ್ಸ್‌ಗಳ ಸಂಪರ್ಕದಲ್ಲೇ ಇರುತ್ತಾರೆ. ಮದುವೆ ಬಳಿಕ ವೈಷ್ಣವಿ ಒಂದೊಂದಾಗೇ ಲುಕ್ ರಿವೀಲ್ ಮಾಡುತ್ತಿದ್ದಾರೆ. ಇದು ವೈಷ್ಣವಿಯ ಹಳದಿ ಲುಕ್ ಆಗಿದೆ.ಇದನ್ನೂ ಓದಿ: ಮಾದಕ ವಸ್ತು ಸೇವನೆ ಆರೋಪ – ಹೆಸರಾಂತ ತಮಿಳು ನಟ ಶ್ರೀಕಾಂತ್ ಅರೆಸ್ಟ್

  • ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

    ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

    – ಮಿಲಿಟರಿ ಹುಡುಗ ಬೇಕು ಅಂತಾ ನಮ್ಮ ತಂದೆ ಆಸೆ: ಭಾನು ರವಿಕುಮಾರ್
    – ಮಗಳ ಬಗ್ಗೆ ಸುಮ್ನೆ ಟ್ರೋಲ್ ಮಾಡ್ಬೇಡಿ ವೈಷ್ಣವಿ ತಂದೆ ಮನವಿ

    ಬೆಂಗಳೂರು: ನನ್ನ ಮಗಳ ಜೀವನ ಸರಿ ಆಗಲಿ ಎಂದು ಇಬ್ರು ಹುಡುಗಿಯರು ಮುಂದೆ ಬಂದು ನಿಜ ಸ್ಥಿತಿ ಅರಿವು ಮಾಡಿಕೊಟ್ಟರು. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ವೈಷ್ಣವಿ ಗೌಡ (Vaishnavi Gowda) ಅವರ ತಾಯಿ ಭಾನು ರವಿಕುಮಾರ್ ಹೇಳಿದರು.

    ಈ ಹಿಂದೆ ಮಗಳ ನಿಶ್ಚಯವಾಗಿ ಮುರಿದು ಬಿದ್ದ ಕುರಿತು ಮಾತನಾಡಿದ ಅವರು, ವೈಷ್ಣವಿ ತನ್ನದಲ್ಲದ ತಪ್ಪಿಗೆ ಏನೇನೋ ಅನುಭವಿಸಬೇಕಾಯ್ತು. ಆ ಹುಡುಗನ ಬಗ್ಗೆ ಆ ಸಮಯದಲ್ಲಿ ಮಾತನಾಡಿ, ನಮಗೆ ಉಪಕಾರ ಮಾಡಿರುವ ಇಬ್ಬರು ಹುಡುಗಿಯರಿಗೆ ಧನ್ಯವಾದ ಹೇಳುತ್ತೇನೆ. ಏನೂ ಅನ್ನೋದನ್ನ ಗೊತ್ತು ಮಾಡಿದ್ದೀರಿ. ಆ ಹುಡುಗಿಯರು ಯಾರೂ ಅಂತ ಗೊತ್ತಿಲ್ಲ. ವೈಷ್ಣವಿ ಕಷ್ಟದ ಸಮಯದಲ್ಲಿ ನೀವೆಲ್ಲಾ ಅವಳ ಜೊತೆ ಇದ್ರಿ. ನಿಮಗೂ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ನಮ್ದು ಅರೇಂಜ್ ಮ್ಯಾರೇಜ್ – ನಾವು ಬೆಂಗಳೂರಿನಲ್ಲೇ ಇರ‍್ತೀವಿ: ವೈಷ್ಣವಿ ಗೌಡ

    ಈಗ ನಿಶ್ಚಯವಾಗಿರುವ ಮಗಳ ಮದುವೆ ಬಗ್ಗೆ ಪ್ರತಿಕ್ರಿಯಿಸಿ, ಉತ್ತರದಿಂದ ದಕ್ಷಿಣದ ಸಂಬಂಧ ಇದು. ದೇವರು ಎಲ್ಲಾ ನಿಶ್ಚಯ ಮಾಡಿರುತ್ತಾನೆ. ವೈಷ್ಣವಿಗೆ ಈ ಗಂಡು ನಾವು ನೋಡಿರೋದು. ಮ್ಯಾಟ್ರಿಮೋನಿಯಲ್ಲಿ (Matrimony) ನೋಡಿ ನಿಶ್ಚಯ ಮಾಡಿರುವುದು. ಅವರಿಬ್ಬರಿಗೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಕೊಟ್ಟದ್ದೆವು ಎಂದು ತಿಳಿಸಿದರು.

    ಮಿಲಿಟರಿ ಹುಡುಗ ಬೇಕು:
    ಮಿಲಿಟರಿಯಲ್ಲಿ ಕೆಲಸ ಮಾಡೋ ಹುಡುಗ ಬೇಕು ಎಂದು ನಮ್ಮ ತಂದೆಗೆ ಆಸೆ ಇತ್ತು. ನಮ್ಮ ಫ್ಯಾಮಿಲಿಯಲ್ಲಿ ಹಿಂದೆ ಯಾರೂ ಇರಲಿಲ್ಲ. ಈಗ ದೇಶಸೇವೆ ಮಾಡೋವ್ರು ಬಂದ್ರು ಅನ್ನೋದು ಖುಷಿ ಇದೆ. ಕೆಲವರು ಮಗಳ ಬಗ್ಗೆ ಏನೇನೋ ಮಾತಾಡ್ತಾರೆ. ಟ್ರೋಲ್ ಮಾಡುತ್ತಾರೆ. ನಿಜಾಂಶ ಏನೂ ಎಂದು ಸರಿಯಾಗಿ ತಿಳಿದುಕೊಂಡಿರಬೇಕಾಗುತ್ತದೆ ಎಂದರು. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ

    ನಾವು 2017ರಲ್ಲಿ ಎಲ್‌ಎಲ್‌ಬಿ ಓದಿ ವಕೀಲೆ ಆಗಿದ್ದೀನಿ. ಜೊತೆಗೆ ಸೈಕಾಲಜಿಯಲ್ಲಿ ಎಂಎಸ್‌ಸಿ ಓದಿದ್ದೇನೆ. ನನ್ನಂತೆ ನನ್ನ ಮಗಳಿಗೂ ಮದುವೆ ಬಳಿಕ ಪ್ರೋತ್ಸಾಹ ಕೊಡುವ ಗಂಡ ಸಿಕ್ಕಿದ್ದಾರೆ ಎಂದು ಖುಷಿ ಇದೆ. ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋದಕ್ಕೆ ಇದುವೇ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.

    ಮಗಳು ಬಯಸಿದಂತೆ ಸಂಬಂಧ ಸಿಕ್ಕಿದೆ
    ವೈಷ್ಣವಿ ತಂದೆ ರವಿಕುಮಾರ್ ಅವರು ಮಗಳ ಮದುವೆ (Marriage) ಬಗ್ಗೆ ಪ್ರತಿಕ್ರಿಯಿಸಿ, ನಮಗೆ ಒಳ್ಳೆಯ ಅಳಿಯ ಸಿಕ್ಕಿದ್ದಾರೆ. ವೈಷ್ಣವಿ ನಿಮ್ಮೆಲ್ಲರ ಮನೆ ಮಗಳು ಎಲ್ಲರಿಗೂ ತಿಳಿಸಿಯೇ ಮದುವೆ ಮಾಡುತ್ತೇವೆ. ಅವಳು ಬಯಸಿದಂತೆ ಸಂಬMಧ ಸಿಕ್ಕಿದೆ. ದೇಶ ಸೇವೆ ಮಾಡುವ ಅಳಿಯ ಸಿಕ್ಕಿದ್ದಾರೆ ಎಂದರು.

    ಮಗಳ ಬಗ್ಗೆ ಸುಮ್ನೆ ಟ್ರೋಲ್ ಮಾಡ್ಬೇಡಿ
    ಇಬ್ಬರಿಗೂ ಇಕ್ವೇಲ್ ಆಗಿಯೇ, ಗಂಡು ಹೆಣ್ಣಿಗೆ ಏನು ವಯಸ್ಸಿರಬೇಕೋ ಅದು ಇದೆ. ಮಿಲಿಟರಿ ಅಂದ್ಮೇಲೆ, ಹೈಟ್, ವೆಯಿಟ್, ಕಲರ್ ಎಲ್ಲಾ ಸರಿ ಇದೆ. ಮ್ಯಾಚ್ ಆಗಿದೆ. ಅದೇ ಥರ ಜೋಡಿ ಸರಿಯಾಗಿದೆ. ಸುಮ್ನೆ ಏನೇನೋ ಟ್ರೋಲ್ ಮಾಡಬೇಡಿ ಎಂದು ಟ್ರೋರ‍್ಸ್ಗಳಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

    ಮೊದಲು ನನ್ನ ಮಗಳು ದೇವಿ ಸೀರಿಯಲ್‌ಗೆ ಸೆಲೆಕ್ಟ್ ಆಗಿ, ಇಲ್ಲಿವರೆಗೂ ಅಭಿನಯಿಸಿಕೊಂಡು ಬಂದಿದ್ದಾಳೆ. ನನ್ನ ಮಗಳು ನಾನ್ ವೆಜ್ (Non-Veg) ತಿನ್ನಲ್ಲ. ಅವರೂ ವೆಜಿಟೇರಿಯನ್ ಕುಟುಂಬ. ಅಲ್ಲಿಗೆ ಸರಿ ಹೋಯ್ತು ನೋಡಿ. ದೇವರೇ ಒಬ್ಬರಿಗೊಬ್ಬರನ್ನ ಜೋಡಿ ಮಾಡಿರುತ್ತಾನೆ. ವೈಷ್ಣವಿ ನಿಮ್ಮ ಮನೆ ಮಗಳು ಎಲ್ಲರನ್ನೂ ಕರೆದು ಮುಚ್ಚುಮರೆ ಏನೂ ಇಲ್ಲದೇ, ಮದುವೆ ಮಾಡುತ್ತೇವೆ ಎಂದರು.

  • ಸೀರಿಯಲ್‌ ಚಿತ್ರೀಕರಣದ ವೇಳೆ ಮಾಡಿದ ತಪ್ಪು – ʻಸೀತಾರಾಮʼ ನಟಿ ವೈಷ್ಣವಿ ಗೌಡಗೆ ಟ್ರಾಫಿಕ್‌ ಫೈನ್‌!

    ಸೀರಿಯಲ್‌ ಚಿತ್ರೀಕರಣದ ವೇಳೆ ಮಾಡಿದ ತಪ್ಪು – ʻಸೀತಾರಾಮʼ ನಟಿ ವೈಷ್ಣವಿ ಗೌಡಗೆ ಟ್ರಾಫಿಕ್‌ ಫೈನ್‌!

    ಬೆಂಗಳೂರು: ಸೀರಿಯಲ್‌ ದೃಶ್ಯವೊಂದರಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹೆಲ್ಮೆಟ್‌ ಧರಿಸದೇ ಇರುವ ಕಾರಣಕ್ಕೆ ʻಸೀತಾರಾಮʼ ಸೀರಿಯಲ್‌ ನಟಿ ವೈಷ್ಣವಿ ಗೌಡ (Vaishnavi Gowda) ಅವರಿಗೆ ಬೆಂಗಳೂರು ಪೊಲೀಸರು ದಂಡ ವಿಧಿಸಿದ್ದಾರೆ.

    ಸೀರಿಯಲ್‌ ಚಿತ್ರೀಕರಣದ ವೇಳೆ ನಟಿ ಹೆಲ್ಮೆಟ್‌ ಧರಿಸದೇ ನಿಯಮ ಉಲ್ಲಂಘಿಸಿದ್ದರು. ಈ ದೃಶ್ಯವನ್ನೂ ಫೋಟೋದಲ್ಲಿ ಸೆರೆ ಹಿಡಿದಿದ್ದ ಸಾಮಾಜಿಕ ಹೋರಾಟಗಾರ ಜಯಪ್ರಕಾಶ್ ಹೆಕ್ಕೂರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಫೋಟೋವನ್ನೂ ಸಹ ದೂರಿನಲ್ಲಿ ಲಗತ್ತಿಸಿದ್ದರು. ಇದನ್ನೂ ಓದಿ: ಸಮರ್ಜಿತ್ ಲಂಕೇಶ್ ಅಭಿನಯದ ಚೊಚ್ಚಲ ಚಿತ್ರದ ಸಾಂಗ್ ರಿಲೀಸ್

    ದೂರು ಸ್ವೀಕರಿಸಿದ ಪೊಲೀಸರು ಬೆಂಗಳೂರು ರಾಜಾಜಿನಗರ ಪೊಲೀಸರಿಗೆ (Bengaluru Traffic Police) ವರ್ಗಾವಣೆ ಮಾಡಿದ್ದರು. ಸಾಮಾಜಿಕ ಹೋರಾಟಗಾರ ನೀಡಿದ ದೂರಿನ ಅನ್ವಯ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ವೈಷ್ಣವಿ ಗೌಡ ಅವರಿಗೆ ರಾಜಾಜಿನಗರ ಸಂಚಾರ ಪೊಲೀಸರು 500 ರೂ. ದಂಡ (Traffic Police Fines) ವಿಧಿಸಿದ್ದಾರೆ. ಇದನ್ನೂ ಓದಿ: ಆಲ್ಬಂ ಜೊತೆ ಸವಾರಿ ಹೊರಟ ಬೃಂದಾ ಆಚಾರ್ಯ

    ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯ:
    ಇತ್ತೀಚೆಗೆ ಸಿನಿಮಾ, ಸೀರಿಯಲ್‌, ವೆಬ್‌ಸಿರೀಸ್‌ಗಳಲ್ಲಿ ನಟಿಸುವ ಕೆಲ ಕಲಾವಿದರು ಬೈಕ್‌ ಅಥವಾ ಸ್ಕೂಟರ್‌ ರೈಡ್‌ ಮಾಡುವಾಗ ʻತಮ್ಮ ಮುಖ ಕಾಣಲಿʼ ಎಂಬ ಉದ್ದೇಶದಿಂದ ಹೆಲ್ಮೆಟ್‌ ಧರಿಸಿರುವುದಿಲ್ಲ. ಇದೇ ರೀತಿ ಕಾರಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಸೀಟ್‌ ಬೆಲ್ಟ್‌ ಸಹ ಧರಿಸುವುದಿಲ್ಲ. ಕೆಲವು ನಟಿಯರು ಮೇಕಪ್‌ ಹಾಳಾಗುತ್ತದೆ ಎಂದು ಹೆಲ್ಮೆಟ್‌ ಧರಿಸುವುದಿಲ್ಲ. ಈ ರೀತಿಯ ಕಂಟೆಂಟ್‌ಗಳನ್ನು ಸಾಕಷ್ಟು ಜನರು ವೀಕ್ಷಿಸುವುದರಿಂದ ವೀಕ್ಷಕರಿಗೆ ತಪ್ಪು ಸಂದೇಶ ರವಾನಿಸಿದಂತೆ ಆಗುತ್ತದೆ. ಅಲ್ಲದೇ ಇದು ಪ್ರಾಣಾಪಾಯಕ್ಕೂ ಕಾರಣವಾಗಬಹದು. ಆದ್ದರಿಂದ ಸಂಚಾರ ಪೊಲೀಸರು ಕಲಾವಿರದರಿಗೂ ಎಚ್ಚರಿಕೆಯ ಸಂದೇಶ ನೀಡಬೇಕು. ಇಲ್ಲವೇ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂಬ ಒತ್ತಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

  • ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆಗೆ ಬೀಗ, ವೈದ್ಯರಿಗೆ ನೋಟಿಸ್

    ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆಗೆ ಬೀಗ, ವೈದ್ಯರಿಗೆ ನೋಟಿಸ್

    ಬೆಂಗಳೂರು: ಕಿರುತೆರೆ ನಟಿ ಚೇತನಾ ರಾಜ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಟ್ ಸರ್ಜರಿ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಗೆ ಬೀಗ ಜಡಿಯಲಾಗಿದ್ದು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.

    ಸಾವಿನ ಘಟನೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಆರೋಗ್ಯ ಇಲಾಖೆಯು ಡಾ.ಶೆಟ್ಟಿಗೆ ನೋಟಿಸ್ ಕೊಟ್ಟು ಆಸ್ಪತ್ರೆಯನ್ನ ಬಂದ್ ಮಾಡಿಸಲಾಗಿದೆ. ದೂರಿನ ಅನ್ವಯ ಸಾವಿನ ರಾಹಸ್ಯ ಭೇದಿಸಲು ಮುಂದಾಗಿದ್ದ ಸುಬ್ರಹ್ಮಣ್ಯ ನಗರ ಪೊಲೀಸರು, ಆಸ್ಪತ್ರೆಯ ಸಾಹೇಬ್ ಗೌಡ ಶೆಟ್ಟಿ ಸೇರಿದಂತೆ ನಾಲ್ವರ ವಿರುದ್ಧ ನೋಟಿಸ್ ಜಾರಿಗೊಳಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಚೇತನಾ ರಾಜ್ ಸಾವು: ಬಾಡಿ ಶೇಮಿಂಗ್‌ ವಿರುದ್ಧ ದನಿಯೆತ್ತಿದ ಅಶ್ವಿತಿ ಶೆಟ್ಟಿ

    ಏನಿದು ಪ್ರಕರಣ?: ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಕಿರುತೆರೆ ಯುವ ನಟಿ ಚೇತನಾ ರಾಜ್ ಈಚೆಗಷ್ಟೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ವಾಸವಿರುವ ನಟಿಯ ಪೋಷಕರು, ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ನಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ನಾಳೆ ಬೆಂಗಳೂರಿಗೆ ಸನ್ನಿ ಲಿಯೋನ್ : ಮಂಡ್ಯಗೆ ಹೋಗಿ ರಕ್ತದಾನ ಮಾಡ್ತಾರಾ ಶೇಷಮ್ಮ?

    ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರು ಇಂದು ವಿಚಾರಣೆಗೆ ಹಾಜರಾಗುವಂತೆ ವೈದ್ಯರಿಗೆ ನೋಟಿಸ್ ನೀಡಿದ್ದಾರೆ.

  • ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಬೆಂಗಳೂರು: ಫ್ಯಾಟ್‌ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಕಿರುತೆರೆ ಯುವ ನಟಿ ಚೇತನಾ ರಾಜ್‌ ಮೃತಪಟ್ಟಿದ್ದಾರೆ.

    ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಟಿ ದುರಂತ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ನಟಿ ಕುಟುಂಬ ವಾಸವಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ನಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಮಂಡ್ಯ ಹುಡುಗರ ಪ್ರೀತಿಗೆ ಸನ್ನಿ ಲಿಯೋನ್ ಫಿದಾ

    ಫ್ಯಾಟ್ ಚಿಕಿತ್ಸೆಗೆಂದು ನಿನ್ನೆ ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ಆಡ್ಮಿಟ್ ಆಗಿದ್ದರು. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಸಿರಿಯಸ್‌ ಆಗಿ ಶಂಕರಮಠದ ಕಾಡೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಕಲರ್ಸ್ ಕನ್ನಡದಲ್ಲಿ ಬರುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ದಾರಾವಾಹಿಗಳಲ್ಲಿ ಚೇತನಾ ರಾಜ್‌ ನಟಿಸುತ್ತಿದ್ದರು. ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ನಟಿಸಿದ್ದಾರೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅವರಿಗೆ ಕಲರ್ಸ್ ಕನ್ನಡದ ʻಒಲವಿನ ನಿಲ್ದಾಣʼ ಅನ್ನೋ ಹೊಸ ಧಾರವಾಹಿಯಲ್ಲಿ ಮುಖ್ಯ ಪಾತ್ರ ಸಿಕ್ಕಿತ್ತು. ಇದನ್ನೂ ಓದಿ: ಕಿಚ್ಚನ `ವಿಕ್ರಾಂತ್ ರೋಣ’ ಚಿತ್ರದ ಜವಾಬ್ದಾರಿ ಹೊತ್ತ ಸಲ್ಮಾನ್ ಖಾನ್

    ಪೋಷಕರಿಗೆ ಮಾಹಿತಿ ನೀಡದೇ ಚೇತನಾ ರಾಜ್ ಫ್ಯಾಟ್‌ ಸರ್ಜರಿ ಮಾಡಿಸಿಕೊಂಡಿದ್ದರು. ಸೋಮವಾರ ಬೆಳಗ್ಗೆ 9:30 ಕ್ಕೆ ಆಸ್ಪತ್ರೆಗೆ ದಾಖಲಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ನಂತರ ವಿಚಾರ ಗೊತ್ತಾಗಿ ಪೋಷಕರು ಆಸ್ಪತ್ರೆಗೆ ಹೋಗಿದ್ದರು. ಸರ್ಜರಿ ನಂತರ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ನಟಿ ಪರಿಸ್ಥಿತಿ ಗಂಭೀರವಾಗಿದೆ. ನಾಲ್ಕು ಗಂಟೆಗೆ ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಅಷ್ಟರಲ್ಲಾಗಲೇ ನಟಿ ಮೃತಪಟ್ಟಿದ್ದಾರೆ.

    ವೈದ್ಯರ ನಿರ್ಲಕ್ಷ್ಯದಿಂದ ಚೇತನಾ ರಾಜ್‌ ಮೃತಪಟ್ಟಿದ್ದಾಳೆ. ಯಾವುದೇ ಪೋಷಕರ ಅನುಮತಿ ಇಲ್ಲದೇ ಹೇಗೆ ಸರ್ಜರಿ ಮಾಡಿದರು. ಆಸ್ಪತ್ರೆಯವರೇ ಚೇತನಾ ರಾಜ್ ಸಾವಿಗೆ ಕಾರಣ. ಚೇತನಾ ರಾಜ್ ದೊಡ್ಡಪ್ಪ ರಾಜಣ್ಣ ಆರೋಪಿಸಿದ್ದಾರೆ.

  • ನಾನು, ಸೌಜನ್ಯ ಲಿವಿಂಗ್ ಟುಗೆದರ್‌ನಲ್ಲಿ ಇರಲಿಲ್ಲ: ವಿವೇಕ್

    ನಾನು, ಸೌಜನ್ಯ ಲಿವಿಂಗ್ ಟುಗೆದರ್‌ನಲ್ಲಿ ಇರಲಿಲ್ಲ: ವಿವೇಕ್

    ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸವಿ ಮಾದಪ್ಪ ತಂದೆ ನಟ ವಿವೇಕ್ ವಿರುದ್ಧ ದೂರು ದಾಖಲಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿವೇಕ್, ಸಾವಿಗೆ ಕಾರಣ ಏನು ಅನ್ನೋದು ಗೊತ್ತಿಲ್ಲ. ನಾನು ಪೊಸ್ಟ್ ಮಾರ್ಟಂ ರಿಪೋರ್ಟ್ ಗಾಗಿ ಕಾಯುತ್ತಿದ್ದೇನೆ. ತನಿಖೆ ಬಳಿಕ ಸಾವಿನ ಕಾರಣ ಗೊತ್ತಾಗುತ್ತೆ. ನಾನು ಅದಕ್ಕೆ ಕಾಯುತ್ತಿದ್ದೇನೆ. ಆಕೆಯ ಹೆತ್ತವರು ಮಾತನಾಡುತ್ತಿದ್ದಾರೆ ಮಾತಾಡಲಿ ಎಂದರು. ಇದನ್ನೂ ಓದಿ: ಚಪಾತಿ, ಪಲ್ಯ ಮಾಡಿದ್ದೆ, ತಿನ್ನೋಕೆ ಮಗಳೇ ಬರಲಿಲ್ಲ- ನಟಿ ಸೌಜನ್ಯ ತಾಯಿ ಕಣ್ಣೀರು

    ನಾನು ಏನು ಮಾತನಾಡುವುದಿಲ್ಲ. ಆಕೆ ಒಂದು ವರ್ಷದಿಂದ ಪರಿಚಯ. ಮ್ಯೂಚುವಲ್ ಫ್ರೆಂಡ್‍ನಿಂದ ಪರಿಚಯವಾಗಿದ್ದೇವೆ. ಆಕೆಗೆ ಬೇಜಾರಾದಾಗ ನನಗೆ ಆಗಾಗ ಸಿಗುತ್ತಿದ್ದಳು. ತುಂಬಾ ಇನೋಸೆಂಟ್, ಒಬಿಡಿಯಂಟ್ ಆಗಿದ್ದಳು. ಸಾವಿಗೆ ಕಾರಣ ಏನು ಅನ್ನೋದು ಗೊತ್ತಿಲ್ಲ. ವಿವೇಕ್ ಆಗಿರುವ ನಾನೇ ಹೇಳುತ್ತಿದ್ದೇನೆ. ನಡೆದಿರುವ ವಿಚಾರ ನನಗೆ ಗೊತ್ತಿಲ್ಲ. ಅಪ್ಸೆಟ್ ಆಗಿದ್ಲು ನಾನು ಕೇಳಿದ್ದೆ ಅಷ್ಟೇ. ಪೊಲೀಸರು ತನಿಖೆ ನಡೆಸಿದ ಬಳಿಕ ವಿಚಾರ ಗೊತ್ತಾಗುತ್ತೆ ಕಾಯಬೇಕು ಎಂದು ತಿಳಿಸಿದರು.

    ಸೌಜನ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ನಟ ವಿವೇಕ್ ಹಾಗೂ ಸವಿ ಮಾದಪ್ಪ ಪಿ.ಎ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು

    ಕನ್ನಡ ಕಿರುತೆರೆಗಳಲ್ಲಿ ನಟಿಸುತ್ತಿದ್ದ ನಟಿ ಸೌಜನ್ಯ(25) ಇಂದು ಬೆಂಗಳೂರಿನ ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್‍ಮೆಂಟ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸೌಜನ್ಯ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರದವರಾಗಿದ್ದು, ಕನ್ನಡದ ಚೌಕಟ್ಟು, ಫನ್ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  • ಕಿರುತೆರೆ ನಟಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಓರ್ವ ನಟ, ಸವಿ ಪಿಎ ವಿರುದ್ಧ ತಂದೆ ದೂರು

    ಕಿರುತೆರೆ ನಟಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಓರ್ವ ನಟ, ಸವಿ ಪಿಎ ವಿರುದ್ಧ ತಂದೆ ದೂರು

    ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಯಾನೆ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದ್ದು, ಓರ್ವ ಕಿರುತೆರೆ ನಟನ ವಿರುದ್ಧ ನಟಿಯ ತಂದೆ ದೂರು ನೀಡಿದ್ದಾರೆ.

    ಹೌದು. ಕಿರುತೆರೆಯ ಓರ್ವ ನಟ ಹಾಗೂ ಸವಿ ಪಿ.ಎ ಮಹೇಶ್ ವಿರುದ್ಧ ಸವಿ ತಂದೆ ಮಾದಪ್ಪ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕನ್ನಡ ಹಾಗೂ ತೆಲುಗು ಕಿರುತೆರೆ ನಟನೊಬ್ಬ ಮಗಳಿಗೆ ಪರಿಚಿತನಿದ್ದ. ಆತ ತನ್ನನ್ನು ಮದುವೆಯಾಗು ಎಂದು ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ. ಆತನೇ ಬೆಳಗ್ಗೆ ಮನೆ ಬಳಿ ಬಂದು ಕಿರುಕುಳ ನೀಡಿರುವ ಸಾಧ್ಯತೆ ಇದೆ. ಆದ್ದರಿಂದ ನನ್ನ ಮಗಳು ಸಾಯುವ ನಿರ್ಧಾರ ಮಾಡಿರಬಹುದು. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಸವಿ ತಂದೆ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ

    ಏನಿದು ಪ್ರಕರಣ…?
    ಕನ್ನಡ ಕಿರುತೆರೆಗಳಲ್ಲಿ ನಟಿಸುತ್ತಿದ್ದ ನಟಿ ಸೌಜನ್ಯ(25) ಇಂದು ಬೆಂಗಳೂರಿನ ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್‍ಮೆಂಟ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸೌಜನ್ಯ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರದವರಾಗಿದ್ದು, ಕನ್ನಡದ ಚೌಕಟ್ಟು, ಫನ್ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ- ಮಗಳ ಸಾವಿನ ಬಗ್ಗೆ ಅನುಮಾನ ಇದೆ ಎಂದ ತಂದೆ

    ಈ ಸಂಬಂಧ ದೂರವಾಣಿ ಮೂಲಕ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಸವಿ ತಂದೆ ಮಾದಪ್ಪ, ನನ್ನ ಮಗಳು ಹಾಗೂ ಮಗ ಬೆಂಗಳೂರಿನಲ್ಲಿ ವಾಸವಾಗಿದ್ದು, ಅವರಿಬ್ಬರೂ ಕೂಡ ಬೇರೆ, ಬೇರೆ ಕಡೆ ವಾಸ ಮಾಡುತ್ತಿದ್ದಾರೆ. ನಿನ್ನೆ ಸಂಜೆ ಕರೆ ಮಾಡಿ ಇಬ್ಬರು ಕೊಡಗಿಗೆ ಬರುವುದಾಗಿ ತಿಳಿಸಿದ್ದರು. ಇಂದು ಅವರು ಬರಬೇಕಿತ್ತು ಅದರೆ ಈ ರೀತಿಯಲ್ಲಿ ಅಗುತ್ತದೆ ಎಂದು ನಿರೀಕ್ಷೆ ಮಾಡಿರಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

    ನಿನ್ನೆ ಸಂಜೆ ಕರೆ ಮಾಡಿದಾಗ ತನ್ನ ಬಳಿ 6 ಲಕ್ಷ ರೂಪಾಯಿ ಹಣ ಇದೆ ಎಂದು ಸೌಜನ್ಯ ಹೇಳಿದ್ದಳು. ಅದರೆ ಇದೀಗ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಅಂದರೆ ಅನುಮಾನ ಮೂಡಿದೆ. ಅಲ್ಲಿಯ ಪೊಲೀಸರು ನಾವು ಹೋಗುವ ಮೊದಲೇ ಶವ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಇದು ನಮಗೆ ಇನ್ನಷ್ಟು ಅನುಮಾನ ಮೂಡುವಂತೆ ಮಾಡಿದೆ ಎಂದು ತಿಳಿಸಿದ್ದರು.

    soujanya

    ನಾಳೆ ಆರ್.ಆರ್.ಆಸ್ಪತ್ರೆಯಲ್ಲಿ ಮೃತಳ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತಿದೆ.

  • ಧಾರಾವಾಹಿ ನಟಿ ಚೈತ್ರಾ ರೈ ಸೀಮಂತ

    ಧಾರಾವಾಹಿ ನಟಿ ಚೈತ್ರಾ ರೈ ಸೀಮಂತ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ಕಲ್ಯಾಣ ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರೈ ಸೀಮಂತ ಫೋಟೋವನ್ನು ಇನ್‍ಸ್ಟಾಗ್ರಾಮನ್‍ನಲ್ಲಿ ಶೇರ್ ಮಾಡಿದ್ದಾರೆ.

    ನಟಿ ಚೈತ್ರಾ ರೈ ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಚೈತ್ರಾ ರೈ ಹಾಗೂ ಪ್ರಸನ್ನ ಶೆಟ್ಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಟಿಗೆ ಇತ್ತೀಚೆಗಷ್ಟೆ ಸೀಮಂತ ಮಾಡಲಾಗಿದೆ. ಕೋವಿಡ್‍ನಿಂದಾಗಿ ಚೈತ್ರಾ ರೈ ಅವರ ಸೀಮಂತಕ್ಕೆ ಕೆಲವೇ ಕೆಲವು ಆಪ್ತರನ್ನು ಆಹ್ವಾನಿಸಲಾಗಿತ್ತಂತೆ. ಕಡಿಮೆ ಜನರಿದ್ದರೂ ಅವರ ಸಂಪ್ರದಾಯದ ಪ್ರಕಾರವೇ ಸೀಮಂತ ಮಾಡಲಾಗಿದೆಯಂತೆ.  ಇದನ್ನೂ ಓದಿ:  1.31 ಲಕ್ಷ ಬೆಲೆ ವೈನ್- ಪ್ರಿಯಾಂಕಾಗೆ ಪತಿಯಿಂದ ವಿಶೇಷ ಗಿಫ್ಟ್

     

    View this post on Instagram

     

    A post shared by Chaithra Rai (@chaithrarai17)

    ಕುಟುಂಬ ಮೊದಲು ವೃತ್ತಿ ಬದುಕಿನ ಬಗ್ಗೆ ಚಿಂತಿಸುವುದಕ್ಕೆ ಬಹಳ ಸಮಯ ಇರುತ್ತದೆ. ನಾನು ಹಾಗೂ ಪ್ರಸನ್ನ ಶೆಟ್ಟಿ ಈ ವಿಷಯ ಹೇಳಲು ತುಂಬ ಖುಷಿಪಡುತ್ತೇವೆ. ನಮ್ಮ ಈ ಹೊಸ ಅಧ್ಯಾಯಕ್ಕೆ ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ, ಪ್ರೀತಿ ಇರಲಿ. ನನ್ನ ಜೀವನದ ಸುಂದರವಾದ ಹಂತವನ್ನು ಅನುಭವಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಈ ಹಿಂದೆ ಚೈತ್ರಾ ರೈ ತಮ್ಮ ಪ್ರೆಗ್ನೆನ್ಸಿಯ ವಿಷಯವನ್ನು ಬಹಿರಂಗ ಮಾಡಿದ್ದರು. ಇದೀಗ ಸೀಮಂತದ ಫೋಟೋವನ್ನು ಅಭಿಮಾನಿಗಳೋಂದಿಗೆ ಹಂಚಿಕೊಂಡು ಸಂತೋಷವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Chaithra Rai (@chaithrarai17)

    ಚೈತ್ರಾ ಅವರು ಪ್ರಸನ್ನ ಶೆಟ್ಟಿ ಜೊತೆ ಮದುವೆಯಾಗಿದ್ದಾರೆ. ಪ್ರಸನ್ನ ಕತಾರ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಬ್ಬರದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಮಂಗಳೂರಿನಲ್ಲಿಯೇ ಈ ಜೋಡಿ ಮದುವೆ ನಡೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು ಸಾಕಷ್ಟು ಫೋಟೋ, ಇನ್‍ಸ್ಟಾಗ್ರಾಮ್ ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಾಯಿ ಆಗುತ್ತಿರುವುನ್ನು ಹಂಚಿಕೊಂಡಿದ್ಧಾರೆ. ಚೈತ್ರಾ ರೈ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಶುಭಾಶಯ ತಿಳಿಸಿದ್ದಾರೆ. ನಟಿ ಚೈತ್ರಾ ರೈ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನದಲ್ಲಿ ಇಂದಿಗೂ ಹಸಿರಾಗಿ ಉಳಿದಿದ್ದಾರೆ.

     

    View this post on Instagram

     

    A post shared by Chaithra Rai (@chaithrarai17)

  • ಕುಟುಂಬದಲ್ಲಿ ಆದ ಗೊಂದಲ ಬಗೆಹರಿದಿದೆ: ಮೇಘಾ ಶೆಟ್ಟಿ

    ಕುಟುಂಬದಲ್ಲಿ ಆದ ಗೊಂದಲ ಬಗೆಹರಿದಿದೆ: ಮೇಘಾ ಶೆಟ್ಟಿ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕಿರುತೆರೆ ನಟಿ ಮೇಘಾ ಶೆಟ್ಟಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಮೇಘಾ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

    ನಾನು ಧಾರಾವಾಹಿಯಲ್ಲಿ ನಟಿಸುತ್ತಿಲ್ಲ ಎನ್ನುವ ಸುದ್ದಿ ನಾಲ್ಕೈದು ದಿನಗಳಿಂದ ಹರಿದಾಡಿತ್ತು. ಕುಟುಂಬ ಎಂದಾಗ ಗೊಂದಲ ಸಹಜವಾಗಿರುತ್ತದೆ. ಈಗ ಗೊಂದಲ ಬಗೆಹರಿದಿದೆ. ಜೊತೆ ಜೊತೆಯಲಿ ಧಾರಾವಾಹಿ ಮುಗಿಯುವ ತನಕ ಅನು ಸಿರಿಮನೆ ಪಾತ್ರವನ್ನು ನಾನೇ ಮಾಡುತ್ತೇನೆ. ಈ ಗೊಂದಲದಿಂದ ವೀಕ್ಷಕರಲ್ಲಿ ಆತಂಕ ಉಂಟಾಗಿತ್ತು. ಈ ಬಗ್ಗೆ ಎಲ್ಲ ವೀಕ್ಷಕರಲ್ಲೂ ಕ್ಷಮೆ ಕೇಳುತ್ತಿದ್ದೇನೆ. ಇನ್ನು ಮುಂದೆ ಈ ರೀತಿ ಆಗಲ್ಲ ಎಂದು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ:  ಮುಂಬೈನಲ್ಲಿ ಮನೆ ಕಟ್ಟಿಸಿದ ಸನ್ನಿ ಲಿಯೋನ್

     

    View this post on Instagram

     

    A post shared by Megha Shetty (@meghashetty_officiall)

    ಮುಂದೆ ಈ ರೀತಿ ಸುದ್ದಿ ಕೇಳಿ ಬಂದರೆ ಅದಕ್ಕೆ ಗಮನಕೊಡಬೇಡಿ. ಮುಂದೆಯೂ ಇದೇ ರೀತಿ ಬೆಂಬಲಕೊಡಿ. ಜೊತೆ ಜೊತೆಯಲಿ ಧಾರಾವಾಹಿಯಿಂದ ನಾನು ಸಾಕಷ್ಟು ಪಡೆದುಕೊಂಡಿದ್ದೇನೆ. ಅದಕ್ಕೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ವಿಶ್ವಾಸ ಹೀಗೆ ಇರಲಿ ಎಂದು ಅಭಿಮಾನಿಗಳಲ್ಲಿ ಕೋರಿದ್ದಾರೆ ಅವರು.

     

    View this post on Instagram

     

    A post shared by Megha Shetty (@meghashetty_officiall)

    ಅನಿರುದ್ಧ ಹಾಗೂ ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಕಥಾಹಂದರದ ಮೂಲಕ ಈ ಧಾರಾವಾಹಿ ವೀಕ್ಷಕರನ್ನು ಸೆಳೆದುಕೊಂಡಿದೆ. ಮೇಘಾ ಶೆಟ್ಟಿ ಧಾರಾವಾಹಿಯಿಂದಹೊರ ನಡೆದಿದ್ದಾರೆ ಹಾಗೂ ಅವರು ಈ ಧಾರಾವಾಹಿಯಲ್ಲಿ ಮುಂದುವರಿಯುವುದಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು.  ಈಗ ಮೇಘಾ ಸ್ಟಷ್ಟನೆ ನೀಡಿ ಈ ಮೂಲಕ ಧಾರಾವಾಹಿಯಲ್ಲಿ ಮುಂದುವರಿಯುತ್ತಿದ್ದೇನೆ ಎನ್ನುವ ಭರವಸೆಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ.