Tag: Septic Tank

  • ಶೌಚ ಗುಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಒಂದೇ ಕುಟುಂಬದ ಮೂವರು ಸಾವು

    ಶೌಚ ಗುಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಒಂದೇ ಕುಟುಂಬದ ಮೂವರು ಸಾವು

    ಲಕ್ನೋ: ಶೌಚ ಗುಂಡಿ ಸ್ವಚ್ಛಗೊಳಿಸುವಾಗ ಒಂದೇ ಕುಟುಂಬದ ಮೂವರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಪ್ರಹ್ಲಾದ್ ಮಂಡಲ್ (60), ಅವರ ಮಗಳು ತನು ವಿಶ್ವಾಸ್ (32) ಮತ್ತು ಅವರ ಅಳಿಯ ಕಾರ್ತಿಕ್ ವಿಶ್ವಾಸ್ (38) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ – ಮಕ್ಕಳ ಸಾವು ನೆನೆದು ಕಣ್ಣೀರಿಟ್ಟ ಡಿಕೆಶಿ

    ಪ್ರಹ್ಲಾದ್ ಮಂಡಲ್ ಅವರು ಇತ್ತೀಚೆಗೆ 8 ಅಡಿ ಆಳದ ಹೊಸ ಶೌಚ ಗುಂಡಿ ನಿರ್ಮಿಸಿದ್ದರು. ಇದರ ಸ್ವಚ್ಛಗೊಳಿಸಲು ಮಗಳು, ಅಳಿಯನೊಂದಿಗೆ ಇಳಿದಿದ್ದರು. ಈ ವೇಳೆ ಪಕ್ಕದ ಹಳೆಯ ಶೌಚ ಗುಂಡಿಯಿಂದ ಅನಿಲ ಸೋರಿಕೆಯಾಗಿದೆ. ಇದರಿಂದ ಆಳದ ಶೌಚ ಗುಂಡಿಯಿಂದ ಹೊರಬರಲಾರದೇ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾಲ್ತುಳಿತ ಪ್ರಕರಣ – ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್

    ತನು ವಿಶ್ವಾಸ್ ಅವರು ಪತಿ ಕಾರ್ತಿಕ್ ಹಾಗೂ ಮಕ್ಕಳೊಂದಿಗೆ ತನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದರು. ತನು ಹಾಗೂ ಕಾರ್ತಿಕ್ ಅವರ ಸಾವಿನಿಂದ ಮಕ್ಕಳು ಅನಾಥರಾಗಿದ್ದಾರೆ. ಇದನ್ನೂ ಓದಿ: ಕಾಲ್ತುಳಿತದಲ್ಲಿ 11 ಮಂದಿ ಸಾವು – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

  • Chitradurga| ಮಲಗುಂಡಿಗಿಳಿದ ಕಾರ್ಮಿಕ ಉಸಿರುಗಟ್ಟಿ ಸಾವು

    Chitradurga| ಮಲಗುಂಡಿಗಿಳಿದ ಕಾರ್ಮಿಕ ಉಸಿರುಗಟ್ಟಿ ಸಾವು

    – ಕಲ್ಯಾಣ ಮಂಟಪದ ಮಾಲೀಕನ ವಿರುದ್ಧ ದೂರು

    ಚಿತ್ರದುರ್ಗ: ಮಲದ ಗುಂಡಿಗಿಳಿದ (Septic Tank) ಕಾರ್ಮಿಕನೋರ್ವ (Labor) ಉಸಿರುಗಟ್ಟಿ ಸಾವನ್ನಪ್ಪಿರುವ ಅಮಾನವೀಯ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ಪಟ್ಟಣದಲ್ಲಿ ನಡೆದಿದೆ.

    ಚಳ್ಳಕೆರೆ ಪಟ್ಟಣದಲ್ಲಿ ಡಿ.18ರಂದು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚಳ್ಳಕೆರೆಯ ಗಾಂಧಿನಗರ ಬಡಾವಣೆಯ ರಂಗಸ್ವಾಮಿ (48) ಮೃತ ಕಾರ್ಮಿಕನೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಬಳ್ಳಾರಿ| ಆಕಸ್ಮಿಕ ಬೆಂಕಿಗೆ ಮೂರು ಅಂಗಡಿಗಳು ಭಸ್ಮ

    ಈ ಸಂಬಂಧ ಡಿ.23ರ ರಾತ್ರಿ ಚಳ್ಳಕೆರೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ನೀರಿನ ತೊಟ್ಟಿಯಲ್ಲಿ ಮುಳುಗಿ ಕಾರ್ಮಿಕ ಸಾವೆಂದು ತಿಳಿಸಲಾಗಿತ್ತು. ಈ ವೇಳೆ ಸಫಾಯಿ ಕರ್ಮಚಾರಿಗಳ ಸೇವಾ ಸಮಿತಿಯಿಂದ ಡಿಸಿ ಕಚೇರಿಗೆ ದೂರು ಸಲ್ಲಿಸಿ, ತನಿಖೆಗೆ ಆಗ್ರಹಿಸಿದ ಪರಿಣಾಮ ನಗರಸಭೆ ಕಂದಾಯ ನಿರೀಕ್ಷಕ ಗುರುಪ್ರಸಾದ್ ಸ್ಥಳ ಪರಿಶೀಲನೆ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: Hand Luggage On Flights | ಇನ್ಮುಂದೆ 7 ಕೆಜಿ ಮೀರದ ಕೇವಲ 1 ಬ್ಯಾಗ್‌ಗೆ ಮಾತ್ರ ಅನುಮತಿ

    ಕಲ್ಯಾಣ ಮಂಟಪದ ಮಾಲೀಕ ಗುರುವೀರ ನಾಯಕ್ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಗೆ ನಗರಸಭೆ ಅಧಿಕಾರಿ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಪ್ರಕರಣ ಸಂಬಂಧ ತನಿಖೆ ಚುರುಕಾಗಿದೆ. ಇದನ್ನೂ ಓದಿ: ಕೋಲಾರದ ರಾಜಕೀಯ ವ್ಯಕ್ತಿಯಿಂದ ಥಾರ್‌ ಗಿಫ್ಟ್‌ – ʼಮೈಸೂರ್‌ಪಾಕ್‌ʼ ಖೆಡ್ಡಾಕ್ಕೆ ಕೆಡವಲು ಶ್ವೇತಾ ಪ್ಲ್ಯಾನ್‌!

  • ಚರಂಡಿ ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಗಟ್ಟಿ ಒಂದೇ ಕುಟುಂಬದ 5 ಕಾರ್ಮಿಕರು ಸಾವು

    ಚರಂಡಿ ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಗಟ್ಟಿ ಒಂದೇ ಕುಟುಂಬದ 5 ಕಾರ್ಮಿಕರು ಸಾವು

    ಮುಂಬೈ: ಚರಂಡಿ ಸ್ವಚ್ಛಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ ಒಂದೇ ಕುಟುಂಬದ ಐವರು ಕಾರ್ಮಿಕರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ಪರ್ಭಾನಿ (Parbhani) ಜಿಲ್ಲೆಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಗುರುವಾರ ಮಧ್ಯಾಹ್ನ 6 ಕಾರ್ಮಿಕರು ಭೌಚಾ ತಾಂಡಾ ಪ್ರದೇಶದ ಜಮೀನಿನಲ್ಲಿದ್ದ ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದರು. ಚರಂಡಿಗೆ ಇಳಿದವರು ಸ್ವಲ್ಪ ಹೊತ್ತಿನಲ್ಲಿ ಒಬ್ಬೊಬ್ಬರಂತೆ ಅಸ್ವಸ್ಥರಾಗಿದ್ದು ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಅಸ್ವಸ್ಥಗೊಂಡಿದ್ದ 6 ಜನರ ಪೈಕಿ ಐವರು ಸಾವನ್ನಪ್ಪಿದ್ದಾರೆ.

    ಮೃತರೆಲ್ಲರನ್ನೂ ಗುರುತಿಸಲಾಗಿದ್ದು, ಒಂದೇ ಕುಟುಂಬದ ಸದಸ್ಯರು ಎಂಬುದು ತಿಳಿದುಬಂದಿದೆ. ಎಲ್ಲರ ಶವಗಳನ್ನೂ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅವರ ಜೊತೆಗಿದ್ದ ಇನ್ನೊಬ್ಬ ಕಾರ್ಮಿಕನ ಸ್ಥಿತಿಯೂ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲಿಗೆ ಮೊಬೈಲ್‌ ಕಟ್ಟಿಕೊಂಡು, ಕೇಸರಿ ಶಾಲು ಹಾಕ್ಕೊಂಡು ಮತ ಎಣಿಕೆಗೆ ಬಂದಿದ್ದ ಏಜೆಂಟ್‌ ವಾಪಸ್‌

    ಚರಂಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಕಾರ್ಮಿಕರು ವಿಷಕಾರಿ ಗಾಳಿ ಸೇವಿಸಿ ಬಳಿಕ ಉಸಿರುಗಟ್ಟಿದ್ದರಿಂದ ಅಸ್ವಸ್ಥರಾಗಿ ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬಂದಿದೆ. ಕಾರ್ಮಿಕರ ಆಕಸ್ಮಿಕ ಸಾವಿನ ಕುರಿತಾಗಿ ಸೋನ್‌ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ತನಿಖೆಯನ್ನು ಮುಂದುವರಿಸಲಾಗಿದೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ – 114, ಬಿಜೆಪಿ – 83, ಜೆಡಿಎಸ್‌ – 24 ಮುನ್ನಡೆ LIVE Updates

  • ಒಳಚರಂಡಿಗೆ ಬಿದ್ದ ಬಾಲಕ – ರಕ್ಷಿಸಲು ಹೋದ ಅಪ್ಪ, ಚಿಕ್ಕಪ್ಪ ಕೂಡ ಬಾಲಕನೊಂದಿಗೆ ಸಾವು

    ಒಳಚರಂಡಿಗೆ ಬಿದ್ದ ಬಾಲಕ – ರಕ್ಷಿಸಲು ಹೋದ ಅಪ್ಪ, ಚಿಕ್ಕಪ್ಪ ಕೂಡ ಬಾಲಕನೊಂದಿಗೆ ಸಾವು

    ಚಂಡೀಗಢ: ಒಳಚರಂಡಿಯೊಳಗೆ ಬಿದ್ದು ಎಂಟು ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳವಾರ ಜಿಲ್ಲೆಯ ಬಿಚೋರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಬಾಲಕ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಒಳಚರಂಡಿಯೊಳಗೆ ಬಿದ್ದಿದ್ದಾನೆ. ನಂತರ ಬಾಲಕನನ್ನು ರಕ್ಷಿಸಲು ಆತನ ತಂದೆ ಮತ್ತು ಮತ್ತೋರ್ವ ವ್ಯಕ್ತಿ ಪ್ರಯತ್ನಿಸಿದ್ದು, ಮೂವರು ಕೂಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗ್ರಾಮದ ನಿವಾಸಿ ದಿನು ಅವರ ಮನೆಯ ಹೊರಗೆ 20 ಅಡಿ ಆಳದ ಒಳಚರಂಡಿಯನ್ನು ನಿರ್ಮಿಸಲಾಗಿತ್ತು. ಒಳಚರಂಡಿಯನ್ನು ಕಲ್ಲಿನ ಚಪ್ಪಡಿಯಿಂದ ಮುಚ್ಚಲಾಗಿತ್ತು. ಆದರೆ ದಿನು ಅವರ ಮೊಮ್ಮಗ ಆರಿಜ್ ಆಟವಾಡುತ್ತಿದ್ದ ವೇಳೆ ಒಳಚರಂಡಿ ಮೇಲೆ ಮುಚ್ಚಲಾಗಿದ್ದ ಕಲ್ಲು ಮುರಿದು ಹೋಗಿದ್ದರಿಂದ ಬಾಲಕ ಬಿದ್ದಿದ್ದಾನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ – 500ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್

    ಇದೇ ವೇಳೆ ಬಾಲಕನನ್ನು ರಕ್ಷಿಸಲು ಒಳಚರಂಡಿಗೆ ಇಳಿದ ಬಾಲಕನ ತಂದೆ ಸಿರಾಜು (30) ಮತ್ತು ಆತನ ಚಿಕ್ಕಪ್ಪ ಸಲಾಮು (35) ಕೂಡ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ನಂತರ ಒಳಗೆ ಹೋದವರು ಹೊರಗೆ ಬರದೇ ಇದ್ದದ್ದನ್ನು ಕಂಡು ಕುಟುಂಬಸ್ಥರು ಕೂಗಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನಿದಾಂಡು ಆಟದಿಂದ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

  • 27 ದಿನದ ಮಗುವನ್ನು ಕೊಂದು ಸಂಪಿನಲ್ಲಿ ಹಾಕಿದ ತಾಯಿ

    27 ದಿನದ ಮಗುವನ್ನು ಕೊಂದು ಸಂಪಿನಲ್ಲಿ ಹಾಕಿದ ತಾಯಿ

    – ಮನೆಗೆ ಬಂದ ಪತಿಗೆ ಆಘಾತ

    ದಿಸ್ಪುರ್: ತಾಯಿ ತನ್ನ 27 ದಿನದ ಕಂದಮ್ಮನನ್ನು ಕೊಲೆ ಮಾಡಿ, ಸಂಪ್‍ನಲ್ಲಿ ಎಸೆದಿರುವ ಅಮಾನವೀಯ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಅಸ್ಸಾಂನ ದಿಬ್ರುಗಡ ಜಿಲ್ಲೆಯ ಗಭರುಪಾಥರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತು ಮಗುವಿನ ತಂದೆ ಸಜಿದುಲ್ ಅಲಿ ಮಾತನಾಡಿ, ನಾನು ಮಧ್ಯಾಹ್ನ 1 ಗಂಟೆಗೆ ಕೆಲಸಕ್ಕೆ ಹೋಗುವ ವೇಳೆ ಮಗು ಹಾಗೂ ಪತ್ನಿ ಇಬ್ಬರು ಮಲಗಿದ್ದರು. ಆದರೆ ಬೆಳಗ್ಗೆ 5ಕ್ಕೆ ಬರುವ ಹೊತ್ತಿಗೆ ಮಗು ಕಾಣೆಯಾಗಿತ್ತು. ತಕ್ಷಣ ಎಚ್ಚೆತ್ತುಕೊಂಡು ಕುಟುಂಬಸ್ಥರಿಗೆ ತಿಳಿಸಿದೆ. ನಂತರ ಮಗುವನ್ನು ಹುಡುಕಲು ಪ್ರಾರಂಭಿಸಿದೆವು. ಆಗ ಮಗು ಮನೆಯ ಹಿಂಬದಿಯ ಸಂಪ್ ನಲ್ಲಿ ಬಿದ್ದಿರುವುದನ್ನು ಕಂಡೆವು ಎಂದು ತಿಳಿಸಿದರು.

    ಪ್ರಕರಣದ ಪ್ರಾಥಮಿಕ ಹಂತದ ತನಿಖೆ ವೇಳೆ ಪೊಲೀಸರು ಮಗುವಿನ ತಂದೆ, ಚಿಕ್ಕಪ್ಪ ಹಾಗೂ ಅಜ್ಜನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ನಂತರ ಮಗುವಿನ 19 ವರ್ಷದ ತಾಯಿ ಮಜಿದುನ್ ಮಜೀದುನ್ ನೇಸಾ ಅವರ ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ತಾನೇ ಕೊಂದಿರುವುದಾಗಿ ಹೇಳಿದ್ದಾಳೆ. ಆದರೆ ಯಾಕೆ ಕೊಲೆ ಮಾಡಿದಳು ಎಂಬುದರ ಕುರಿತು ನಿಖರ ಕಾರಣವನ್ನು ತಾಯಿ ತಿಳಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯು ಮಾನಸಿಕ ಅಸ್ವಸ್ಥೆಯಾಗಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಕುರಿತು ಪೊಲೀಸರು ಐಪಿಸಿ ಸೆಕ್ಷನ್ 302(ಕೊಲೆ), 209(ಸುಳ್ಳು ಮಾಹಿತಿ) ಅಡಿ ದಿಬ್ರುಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕಳೆದ ಕೆಲವು ದಿನಗಳಿಂದ ಅವಳು ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದಳು. ಕೆಲವೊಮ್ಮೆ ತನ್ನ ಮಗುವನ್ನು ಯಾರೋ ಕೊಲ್ಲುತ್ತಿದ್ದಾರೆ ಎಂದು ಕಿರುಚುತ್ತಿದ್ದಳು ಎಂದು ಮಹಿಳೆ ಸಂಬಂಧಿ ತಿಳಿಸಿದ್ದಾರೆ.

    ಮಗುವನ್ನು ಸಾಯಿಸಿದ ನಂತರ ಮನೆಗೆ ಬಂದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ನಂತರ ಅವರ ಪತಿ ಬಂದು ಸಮಾಧಾನ ಪಡಿಸಿದನು. ಮಗು ಕಾಣದ್ದನ್ನು ಮನಗಂಡು ಹುಡುಕಲು ಪ್ರಾರಂಭಿಸಿದರು. ಇದೀಗ ಮಹಿಳೆಯನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

  • ಸಂಪ್ ಸ್ವಚ್ಛಗೊಳಿಸಲು ಹೋದ ಏಳು ಜನ ಬಲಿ

    ಸಂಪ್ ಸ್ವಚ್ಛಗೊಳಿಸಲು ಹೋದ ಏಳು ಜನ ಬಲಿ

    ಗಾಂಧಿನಗರ: ಹೋಟೆಲ್ ಸಂಪ್ ಸ್ವಚ್ಛಗೊಳಿಸುವ ವೇಳೆ ವಿಷ ಅನಿಲ ಸೇವಿಸಿ ನಾಲ್ಕು ಜನ ಪೌರ ಕಾರ್ಮಿಕರು ಸೇರಿದಂತೆ ಒಟ್ಟು ಏಳು ಜನ ಸಾವನ್ನಪ್ಪಿರುವ ಘಟನೆ ವಡೋದರದಲ್ಲಿ ಶನಿವಾರ ನಡೆದಿದೆ.

    ಗುಜರಾತ್‍ನ ವಡೋದರಾ ಹತ್ತಿರದ ದಾಭೋಯಿ ತೆಹಸಿಲ್‍ನ ಫರ್ಟಿಕುಯಿ ಗ್ರಾಮದ ದರ್ಶನ್ ಹೋಟೆಲ್‍ನಲ್ಲಿ ಘಟನೆ ನಡೆದಿದ್ದು, ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಪೌರ ಕಾರ್ಮಿಕನೊಬ್ಬ ಹೋಟೆಲ್‍ನ ಸಂಪ್‍ಗೆ ಇಳಿದಿದ್ದು, ಈ ವೇಳೆ ಅವಘಡ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಮೃತ ನಾಲ್ಕು ಜನ ಪೌರ ಕಾರ್ಮಿಕರನ್ನು ಮಹೇಶ್ ಪಟಾನ್‍ವಾಡಿಯಾ, ಅಶೋಕ್ ಹರಿಜನ್, ಬ್ರಿಜೇಶ್ ಹರಿಜನ್, ಮಹೇಶ್ ಹರಿಜನ್ ಎಂದು ಗುರುತಿಸಲಾಗಿದೆ. ಕಾರ್ಮಿಕರನ್ನು ದಾಭೋಯಿನ ಥುವವಿಯಿಂದ ಕೆಲಸಕ್ಕಾಗಿ ಕರೆಸಿದ್ದರು ಎನ್ನಲಾಗಿದೆ. ಉಳಿದ ಮೂವರಾದ ಅಜಯ್ ವಾಸವ(24), ವಿಜಯ್ ಚೌಹಾಣ್(22) ಹಾಗೂ ಸಹದೇವ್ ವಾಸವ(22) ಅವರು ಹೋಟೆಲ್‍ನ ಕೆಲಸಗಾರರಾಗಿದ್ದಾರೆ.

    ಈ ಕುರಿತು ದಭೋಯ್ ವಿಭಾಗದ ಡಿಎಸ್‍ಪಿ ಕಲ್ಪೇಶ್ ಸೊಳಂಕಿ ಅವರು ಪ್ರತಿಕ್ರಿಯಿಸಿ, ಘಟನೆ ವಿವರ ಪಡೆಯಲಾಗಿದ್ದು, ಹೇಗೆ ನಡೆಯಿತು. ಘಟನೆಗೆ ನಿರ್ಧಿಷ್ಟ ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಮಹೇಶ್ ಪಟಾನ್‍ವಾಡಿಯಾ ಎಂಬ ಪೌರ ಕಾರ್ಮಿಕ ಮೊದಲು ಸಂಪ್‍ಗೆ ಇಳಿದು ಕೆಲಸ ಪ್ರಾರಂಭಿಸಿದ್ದಾನೆ, ಮಹೇಶ್ ಪ್ರತಿಕ್ರಿಯಿಸದ್ದನ್ನು ಕಂಡು ಕೆಲ ಹೊತ್ತಿನ ನಂತರ ಅಶೋಕ್ ಹರಿಜನ್, ಬ್ರಿಜೇಶ್ ಹರಿಜನ್ ಹಾಗೂ ಮಹೇಶ್ ಹರಿಜನ್ ಅವರು ಟ್ಯಾಂಕ್‍ಗೆ ಇಳಿದು ಹಿಂಬಾಲಿಸಿದ್ದಾರೆ. ನಾಲ್ಕೂ ಜನ ಪೌರ ಕಾರ್ಮಿಕರು ಹೊರಗೆ ಬಾರದಕ್ಕೆ ಮೂವರು ಹೋಟೆಲ್ ಕಾರ್ಮಿಕರು ಟ್ಯಾಂಕ್‍ಗೆ ಧುಮುಕಿದ್ದಾರೆ. ಟ್ಯಾಂಕ್‍ಗೆ ಇಳಿಯುತ್ತಿದ್ದಂತೆ ಪ್ರಜ್ಞಾಹೀನರಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ದಾಭೋಯ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿರ್ಲಕ್ಷ್ಯ ಹಾಗೂ ಕೊಲೆಗೆ ಕಾರಣೀಕರ್ತರಾಗಿದ್ದಾರೆ ಎಂದು ಆರೋಪಿಸಿ ಹೋಟೆಲ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

    ಒಳಚರಂಡಿ ಸ್ವಚ್ಛಗೊಳಿಸುವ ವೇಳೆ ಪ್ರತಿ ವರ್ಷ ಹಲವಾರು ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನ್ನುಪ್ಪುತ್ತಿದ್ದು, ಒಳಚರಂಡಿಗಳನ್ನು ಪೌರ ಕಾರ್ಮಿಕರಿಂದ ಸ್ವಚ್ಛಗೊಳಿಸದೆ, ಯಂತ್ರಗಳಿಂದ ಸ್ವಚ್ಛಗೊಳಿಸುವಂತೆ ಕಾನೂನು ರೂಪಿಸಲಾಗಿದ್ದರೂ, ಗಂಭೀರವಾಗಿ ಪರಿಗಣಿಸದೆ, ಕೆಲವರು ಪೌರ ಕಾರ್ಮಿಕರಿಂದ ಸ್ವಚ್ಛಗೊಳಿಸುತ್ತಾರೆ. ಇದರಿಂದ ಅನಾಹುತಗಳಿಗೆ ಕೊನೆಯೇ ಇಲ್ಲದಂತಾಗಿದೆ.

    ಸರ್ಕಾರದ ಮಾಹಿತಿಯನ್ವಯ ಸುಮಾರು 14 ಸಾವಿರದಿಂದ 31 ಸಾವಿರ ಜನ ಮಾತ್ರ ಕೈಯಿಂದ ಸ್ವಚ್ಛಗೊಳಿಸುವ ಕಾರ್ಮಿಕರಿದ್ದಾರೆ ಎಂದು ತಿಳಿಸಿದೆ. ಆದರೆ, ಸಫಾಯಿ ಕರ್ಮಚಾರಿ ಆಂದೋಲನದ ಪ್ರಕಾರ ಸುಮಾರು 7.7 ಲಕ್ಷ ಪೌರ ಕಾರ್ಮಿಕರಿದ್ದು, ಕಳೆದ ದಶಕದಲ್ಲಿ ಒಟ್ಟು 1,800 ಕಾರ್ಮಿಕರು ಮ್ಯಾನ್ ಹೋಲ್ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ. ಬಹುತೇಕ ಪೌರ ಕಾರ್ಮಿಕರು ತಲೆ ಮಾರಿನ ಹಿಂದೆಯೇ ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ಕೆಲಸವನ್ನು ಬಿಟ್ಟಿದ್ದಾರೆ. ಕೆಲವರು ಬೇರೆ ಕೆಲಸ ಸಿಗದಿದ್ದರಿಂದ ಹಾಗೂ ಜಾತಿಯ ಆಧಾರದಲ್ಲಿ ಈ ಕೆಲಸ ಮಾಡುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಪೌರ ಕಾರ್ಮಿಕರ ಜೀವನವನ್ನು ಸುಧಾರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಬಾರಿ ಮಾತನಾಡಿದ್ದು, ಇದರ ಸಂಕೇತವಾಗಿ ಇತ್ತೀಚೆಗೆ ಅಲಹಬಾದ್‍ನಲ್ಲಿ ನಡೆದ ಕುಂಭ ಮೇಳದಲ್ಲಿ ಪೌರ ಕಾರ್ಮಿಕರ ಪಾದ ತೊಳೆದು ಪೂಜೆ ಮಾಡುವ ಮೂಲಕ ಅವರಿಗೆ ಗೌರವ ಸೂಚಿಸಿದ್ದರು.