Tag: September

  • ಸುದೀಪ್ ಹುಟ್ಟುಹಬ್ಬ: ಮನೆಗೆ ಬರಬೇಡಿ, ಅಭಿಮಾನಿಗಳ ಭೇಟಿಗೆ ಸ್ಥಳ ಫಿಕ್ಸ್

    ಸುದೀಪ್ ಹುಟ್ಟುಹಬ್ಬ: ಮನೆಗೆ ಬರಬೇಡಿ, ಅಭಿಮಾನಿಗಳ ಭೇಟಿಗೆ ಸ್ಥಳ ಫಿಕ್ಸ್

    ಕಿಚ್ಚ ಸುದೀಪ್ (Sudeep) ಅವರ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸುದೀಪ್ ಸದ್ಯ ಚೆನ್ನೈನಲ್ಲಿದ್ದಾರೆ. ಅವರ ಹೊಸ ಸಿನಿಮಾದ ಚಿತ್ರೀಕರಣ ಅಲ್ಲಿ ನಿರಂತರವಾಗಿ ನಡೆಯುತ್ತಿದೆ. ಶೂಟಿಂಗ್ ನಡುವೆಯೂ ಬ್ರೇಕ್ ತೆಗೆದುಕೊಂಡು ಅಭಿಮಾನಿಗಳ ಜೊತೆ ಅವರು ಒಂದು ದಿನ ಕಳೆಯಲಿದ್ದಾರೆ.

    ಈ ಕುರಿತು ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದು, ‘ಪ್ರತಿ ವರ್ಷ ಸುದೀಪ್ ಅವರ ಹುಟ್ಟು ಹಬ್ಬವನ್ನು ಜೆಪಿ ನಗರದಲ್ಲಿರುವ ಅವರ ನಿವಾಸದ ಮುಂದೆ ಆಚರಣೆ ಮಾಡಲಾಗುತ್ತಿತ್ತು. ಜನಸಂದಣಿಯಿಂದಾಗಿ ಅಭಿಮಾನಿಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಈ ಬಾರಿ ಒಂದು ದಿನ ಮೊದಲೇ ಸೆಪ್ಟೆಂಬರ್ 1ರಂದು  ಬೆಂಗಳೂರಿನ ನಂದಿ ಲಿಂಕ್ಸ್ ಮೈದಾನದಲ್ಲಿ ಹುಟ್ಟು ಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ’ ಎಂದು ಹೇಳಲಾಗಿದೆ.

    ಸೆಪ್ಟೆಂಬರ್ 1ರಂದು ಸಂಜೆ 7 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಸುದೀಪ್ ಅವರು ನಂದಿ ಲಿಂಕ್ಸ್ ಮೈದಾನದಲ್ಲಿ ಅಭಿಮಾನಿಗಳ ಜೊತೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಹಾಗಾಗಿ ಸೆಪ್ಟೆಂಬರ್ 2ಕ್ಕೆ ಯಾರೂ ಸುದೀಪ್ ಅವರ ಮನೆಯ ಮುಂದೆ ಬರಬಾರದು ಎಂದು ವಿನಂತಿಸಲಾಗಿದೆ.

     

    ಸುದೀಪ್ ಅವರ ಹುಟ್ಟು ಹಬ್ಬಕ್ಕೆ ಹಲವು ಅಚ್ಚರಿಗಳು ಕೂಡ ಇರಲಿವೆಯಂತೆ. ಹೊಸ ಸಿನಿಮಾದ ಟ್ರೈಲರ್  ಮತ್ತು ಹೊಸ ಸಿನಿಮಾಗಳ ಘೋಷಣೆ ಕೂಡ ಆಗಲಿವೆ ಎನ್ನುವ ಮಾಹಿತಿ ಇದೆ. ಸತತವಾಗಿ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಸುದೀಪ್, ಈ ಬಾರಿ ಅಭಿಮಾನಿಗಳ ಒತ್ತಡಕ್ಕೆ ಮಣಿದು, ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡು ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ವಿಶೇಷ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಓಟಿಟಿಗೆ ಬಂದ ಗುಮ್ಮ: ಕಿಚ್ಚನ ‘ವಿಕ್ರಾಂತ್ ರೋಣ’ ಇನ್ನೊಂದೇ ವಾರದಲ್ಲಿ ಪ್ರಸಾರ

    ಓಟಿಟಿಗೆ ಬಂದ ಗುಮ್ಮ: ಕಿಚ್ಚನ ‘ವಿಕ್ರಾಂತ್ ರೋಣ’ ಇನ್ನೊಂದೇ ವಾರದಲ್ಲಿ ಪ್ರಸಾರ

    ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನ ವಿಕ್ರಾಂತ್ ರೋಣ ಕೆಲವೇ ದಿನಗಳಲ್ಲಿ ಜೀ 5 ಓಟಿಟಿಯಲ್ಲಿ ಪ್ರಸಾರವಾಗಲಿದೆ. ಹಾಗಂತ ಜೀ 5 ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ. ಥಿಯೇಟರ್ ನಲ್ಲಿ ಈ ಸಿನಿಮಾವನ್ನು ನೋಡದೇ ಇರುವವರು ಓಟಿಟಿಯಲ್ಲಿ ಸಿನಿಮಾವನ್ನು ಆನಂದಿಸಬಹುದಾಗಿದೆ. ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿರುವ ಈ ಸಿನಿಮಾ ಇನ್ನೊಂದೇ ವಾರದಲ್ಲೇ ಓಟಿಟಿಗೆ ಎಂಟ್ರಿ ಕೊಡುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

    ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದರು. 3 ಡಿ ಹಾಗೂ 2 ಡಿಯಲ್ಲಿ ವಿಕ್ರಾಂತ್ ರೋಣ ಬಿಡುಗಡೆ ಆಗಿತ್ತು. ಒಳ್ಳೆಯ ಓಪನಿಂಗ್ ಕೂಡ ಪಡೆದಿತ್ತು. ನಂತರದ ದಿನಗಳಲ್ಲಿ ಸಿನಿಮಾ ಸೋಲಿಸಲೆಂದೇ ಹಲವರು ಮುಂದಾಗಿದ್ದರು. ಪೈರಸಿ ಮಾಡಲಾಯಿತು. ಆ ಲಿಂಕ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ಹಂಚಿಕೊಂಡು ಸಿನಿಮಾ ತಂಡಕ್ಕೆ ತೊಂದರೆಯನ್ನೂ ಕೊಟ್ಟರು. ಅಲ್ಲದೇ, ವಸತಿ ಶಾಲೆಯಲ್ಲಿ ಪೈರಸಿ ಸಿನಿಮಾವನ್ನೂ ತೋರಿಸಿದ ಘಟನೆ ನಡೆಯಿತು. ಇದನ್ನೂ ಓದಿ:ಎರಡನೇ ಮದುವೆ ವದಂತಿಯ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ

    ಹಾಗಂತ ನಿರ್ಮಾಪಕರಿಗೆ ಈ ಸಿನಿಮಾದಿಂದ ಲಾಸ್ ಆಗಿಲ್ಲ ಎಂದು ಹೇಳಲಾಗಿತ್ತು. ಸಿನಿಮಾ ರಿಲೀಸ್ ಗೂ ಮುನ್ನ ನಿರ್ಮಾಪಕರು ಸೇಫ್ ಎಂದು ಜಾಕ್ ಮಂಜು ಅವರು ಹೇಳಿಕೊಂಡಿದ್ದರು. ಹಾಗಾಗಿ ನಿಶ್ಚಿಂತೆಯಿಂದ ಆದಷ್ಟು ಬೇಗ ಓಟಿಟಿಯಲ್ಲಿ ಸಿನಿಮಾ ನೋಡುವಂತಹ ಅವಕಾಶವನ್ನು ನಿರ್ಮಾಪಕರು ನೋಡುಗರಿಗೆ ಒದಗಿಸಿಕೊಟ್ಟಿದ್ದಾರೆ. ಇದೇ ಸೆಪ್ಟಂಬರ್ 2 ರಂದು ಓಟಿಟಿಯಲ್ಲಿ ವಿಕ್ರಾಂತ್ ರೋಣ ಸಿನಿಮಾವನ್ನು ನೋಡಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆಗೆ ದಿನಗಣನೆ: ಸೆ.2ಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್

    ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆಗೆ ದಿನಗಣನೆ: ಸೆ.2ಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಕೆಜಿಎಫ್ 2 ನಂತರ ರಾಕಿಂಗ್ ಸ್ಟಾರ್ ಯಶ್ ಯಾವ ಮತ್ತು ಯಾರ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನುವುದು ಸಸ್ಪೆನ್ಸ್ ಆಗಿಯೇ ಉಳಿದಿದೆ. ನರ್ತನ್, ಶಂಕರ್ ಸೇರಿದಂತೆ ಹಲವು ನಿರ್ದೇಶಕರ ಚಿತ್ರಗಳ ಹೆಸರು ಕೇಳಿ ಬಂದರೂ, ಯಾವುದೂ ಅಂತಿಮವಾಗಿಲ್ಲ. ಅಲ್ಲದೇ, ಹಲವು ನಿರ್ಮಾಪಕರು ಕೂಡ ಯಶ್ ಸಿನಿಮಾ ಮಾಡಲು ಮುಂದೆ ಬಂದರೂ, ರಾಕಿಭಾಯ್ ಮಾತ್ರ ಮೌನಕ್ಕೆ ಜಾರಿದ್ದಾರೆ. ಹಾಗಾಗಿ ಮುಂದಿನ ಸಿನಿಮಾ ಯಾವುದು ಎನ್ನುವುದು ಯಕ್ಷಪ್ರಶ್ನೆಯಾಗಿದೆ.

    ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ನರ್ತನ್ ನಿರ್ದೇಶನದ ಸಿನಿಮಾ ಹೆಸರು ಘೋಷಣೆ ಆಗಬೇಕಿತ್ತು. ಕಳೆದ ಎರಡು ವರ್ಷಗಳಿಂದ ಯಶ್ ಗಾಗಿಯೇ ನರ್ತನ್ ಕಥೆ ಬರೆಯುತ್ತಿದ್ದಾರೆ. ಇದೇ ಸಿನಿಮಾ ಅಂತಿಮವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಆ ಸಿನಿಮಾವನ್ನೂ ಯಶ್ ಮುಂದೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಮುಂದಿನ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಮೂಡಿದೆ.   ಇದನ್ನೂ ಓದಿ:ಊಟದಲ್ಲಿನ ಗರಂ ಮಸಾಲಾ ಥರ ಸೋನು ಶ್ರೀನಿವಾಸ್ ಗೌಡ: ಹೀಗ್ಯಾಕೆ ಅಂದ್ರು ಬಿಗ್ ಬಾಸ್ ಮನೆಮಂದಿ

    ಸದ್ಯ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಓಡಾಡುತ್ತಿದ್ದು, ಸೆಪ್ಟಂಬರ್ 2 ರಂದು ಯಶ್ ತಮ್ಮ ಹೊಸ ಸಿನಿಮಾವನ್ನು ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಸುದ್ದಿಗಳು ಈಗಾಗಲೇ ಹಲವು ಬಾರಿ ಬಂದರೂ, ಈ ಬಾರಿ ಮಿಸ್ ಆಗುವುದಕ್ಕೆ ಚಾನ್ಸೇ ಇಲ್ಲ ಎಂದು ಹೇಳಲಾಗುತ್ತಿದೆ. ಸೆಪ್ಟಂಬರ್ 2 ರಂದು ರಾಕಿ ಭಾಯ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯನ್ನೇ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿಯಾದರೂ ಸುದ್ದಿ ನಿಜವಾಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 

    Live Tv
    [brid partner=56869869 player=32851 video=960834 autoplay=true]

  • ಸೆಪ್ಟೆಂಬರ್ 11ಕ್ಕೆ NEET ಪರೀಕ್ಷೆ

    ಸೆಪ್ಟೆಂಬರ್ 11ಕ್ಕೆ NEET ಪರೀಕ್ಷೆ

    ನವದೆಹಲಿ: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್ ಪಿಜಿ ಎಕ್ಸಾಂಗೆ ದಿನಾಂಕ ನಿಗದಿಯಾಗಿದೆ. 2021ರ ಸೆಪ್ಟೆಂಬರ್ 11ರಂದು ನೀಟ್ ಪರೀಕ್ಷೆ ನಡೆಯಲಿದೆ ಎಂದು ಕೇಂದ್ರ ಸಚಿವ ಮನ್ಸುಲ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

    ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದರಿಂದಾಗಿ ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯನ್ನು 4 ತಿಂಗಳುಗಳ ಕಾಲ ಮುಂದೂಡಿಕೆ ಮಾಡಿತ್ತು. ಇದೀಗ ಸೆಪ್ಟೆಂಬರ್ 11ಕ್ಕೆ ಪರೀಕ್ಷೆ ನಡೆಸಲು ತಿರ್ಮಾಣಿಸಿದೆ. ಇದನ್ನೂ ಓದಿ: ಅರುಣಾ ಕುಮಾರಿ ತುಂಬಾ ಫ್ರಾಡ್: ಉದ್ಯಮಿ ನಾಗವರ್ಧನ್

    ಈ ಮೊದಲು ಏಪ್ರಿಲ್ 18ರಂದು ನೀಟ್ ಪರೀಕ್ಷೆ ನಿಗದಿಯಾಗಿತ್ತು. ಆ ಬಳಿಕ ಕೊರೊನಾದಿಂದಾಗಿ ಕೇಂದ್ರ ಸರ್ಕಾರ 4 ತಿಂಗಳು ಮುಂದೂಡಿಕೆ ಮಾಡಿ, ಇದೀಗ ಸೆಪ್ಟೆಂಬರ್ ನಲ್ಲಿ ಪರೀಕ್ಷೆಗೆ ನಡೆಸಲು ನಿರ್ಧರಿಸಿದೆ.